Author: admin

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾಗವಹಿಸಲಿದ್ದಾರೆ. ನ್ಯಾಯಯಾತ್ರೆ ಆಗ್ರಾ ತಲುಪಿದಾಗ ಅಖಿಲೇಶ್ ಯಾದವ್ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಚುನಾವಣೆಯಲ್ಲಿ ಸೀಟುಗಳನ್ನು ಒಪ್ಪಿಕೊಂಡಿದ್ದರೆ ನಾನು ಯಾತ್ರೆಯಲ್ಲಿ ಭಾಗವಹಿಸುತ್ತಿದ್ದೆ ಎಂದು  ಹೇಳಿದ್ದರು. ಪ್ರಸ್ತುತ, ಎರಡೂ ಪಕ್ಷಗಳು ಯುಪಿಯಲ್ಲಿ ಕಾಂಗ್ರೆಸ್‌ಗೆ 17 ಮತ್ತು ಎಸ್‌ ಪಿಗೆ 63 ಸ್ಥಾನಗಳನ್ನು ನೀಡುವುದಾಗಿ ತಿಳುವಳಿಕೆಯನ್ನು ಪ್ರಕಟಿಸಿವೆ. ನಿನ್ನೆ, ಪ್ರಿಯಾಂಕಾ ಗಾಂಧಿ ಕೂಡ ಮೊದಲ ಬಾರಿಗೆ ರಾಹುಲ್ ಪ್ರಯಾಣದ ಭಾಗವಾಗಿದ್ದರು. ಆಗ್ರಾದ ನಂತರ ಭಾರತ್ ಜೋಡೋ ನಯಾ ಯಾತ್ರೆಯು ಸಂಜೆ ರಾಜಸ್ಥಾನದ ಗಡಿಯನ್ನು ದಾಟಲಿದೆ. ಯುಪಿಯಲ್ಲಿ ಎಸ್ಪಿ ಜೊತೆ ಸೀಟು ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದು ಪ್ರಿಯಾಂಕಾ ಗಾಂಧಿ. ಇದರ ಬೆನ್ನಲ್ಲೇ 17 ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಲು ಎಸ್‌ಪಿ ನಿರ್ಧರಿಸಿದೆ. 2020ರಲ್ಲಿ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಅವರನ್ನು ಪಕ್ಷ ನೇಮಿಸಿದರೂ 2022ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಸುಧಾರಿಸಲಿಲ್ಲ. ಸೋನಿಯಾ ಗಾಂಧಿ ರಾಜ್ಯಸಭೆಗೆ…

Read More

ಉತ್ತರ ಪ್ರದೇಶದ ಫತೇಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆನ್‌ಲೈನ್ ಗೇಮಿಂಗ್ ಮೂಲಕ ಮಾಡಿದ ಸಾಲವನ್ನು ತೀರಿಸಲು ಯುವಕ ತನ್ನ ಸ್ವಂತ ತಾಯಿಯನ್ನು ಕೊಂದಿರುವ ಘಟನೆ ನಡೆದಿದೆ. ಆರೋಪಿ ಹಿಮಾಂಶು ಆನ್‌ ಲೈನ್ ಗೇಮಿಂಗ್ ಚಟ ಹೊಂದಿದ್ದು, ಸ್ನೇಹಿತರಿಂದ ಸಾಲ ಪಡೆದು ಆಟ ಆಡುತ್ತಿದ್ದ. ಆಟ ಆಡಿ ಸುಮಾರು ನಾಲ್ಕು ಲಕ್ಷ ರೂಪಾಯಿ ಕಳೆದುಕೊಂಡಿದ್ದ. ಈ ನಡುವೆ ಸಾಲ ವಾಪಸ್ ನೀಡುವಂತೆ ಸಾಲ ನೀಡಿದವರು ಒತ್ತಡ ಹಾಕಲು ಆರಂಭಿಸಿದ್ದಾರೆ. ತಾಯಿಯನ್ನು ಕೊಂದರೆ, ವಿಮೆಯ ಹಣದಿಂದ ಸ್ನೇಹಿತರ ಸಾಲ ತುಂಬಬಹುದು ಎಂದು ಸಹೋದರನ ಚಿನ್ನಾಭರಣಗಳನ್ನು ಕದ್ದು ಅದನ್ನು ಮಾರಿ ಆ ಹಣದಲ್ಲಿ ತನ್ನ ತಂದೆ ತಾಯಿಯ ಹೆಸರಿನಲ್ಲಿ 50 ಲಕ್ಷ ರೂ.ಗಳ ಜೀವ ವಿಮಾ ಪಾಲಿಸಿ ಮಾಡಿಸಿಕೊಂಡಿದ್ದಾನೆ. ನಂತರ ಯಾರು ಇಲ್ಲದ ವೇಳೆ   ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಶವವನ್ನು ಸೆಣಬಿನ ಚೀಲದಲ್ಲಿ ಹಾಕಿ ಯಮುನಾ ನದಿಯಲ್ಲಿ ಎಸೆದಿದ್ದ ಎಂದು ಹೇಳಲಾಗಿದೆ. ಈ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ…

Read More

ಚಿಕ್ಕಮಗಳೂರು– ಉಡುಪಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೇನೆಂಬ ಮಾಹಿತಿ ನನಗೂ ಇದೆ. ನಾನು ಇದುವರೆಯೂ ಯಾವ ಗುತ್ತಿಗೆದಾರನಿಂದಲೂ ಒಂದು ರೂ.ಪಡೆದಿಲ್ಲ, ನನ್ನ ಮೇಲೆ ಸುಳ್ಳು ಆರೋಪವನ್ನು ಮಾಡಲಾಗುತ್ತಿದೆ. ನಿಜವಾದ ಬಿಜೆಪಿ ಕಾರ್ಯಕರ್ತರು ಈ ರೀತಿ ಆರೋಪವನ್ನು ಮಾಡುವುದಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಮ್ಮ ಪಕ್ಷವೇ ಆಗಲಿ ವಿರೋಧ ಪಕ್ಷವೇ ಆಗಲಿ ಅಭಿವೃದ್ಧಿ ಆಧಾರದಲ್ಲಿ ಚರ್ಚೆಗೆ ಸಿದ್ದ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದರು. ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದವರು ಈ ರೀತಿ ಮಾಡಿಸಿರಬಹುದು, ಅವರು ಹಿಂದಿದ್ದ ಪಕ್ಷದಲ್ಲಿ ಇಂತಹ ಚಾಳಿಯನ್ನು ನಡೆಸಿದ್ದಾರೆ. ಇಲ್ಲೂ ನಡೆಸಿದ್ದಾರೆ. ಇದ್ಯಾವುದಕ್ಕೂ ತಲೆ ಕಡೆಸಿಕೊಳ್ಳುವುದಿಲ್ಲ ಅಭಿವೃದ್ಧಿ ಆಧಾರದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ತಮ್ಮ ವಿರುದ್ದ ಗೋಬ್ಯಾಕ್ ಶೋಭಾ ಅಭಿಯಾನಕ್ಕೆ ತಿರುಗೇಟು ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್ ಕೇಳಲು ಎಲ್ಲರಿಗೂ ಅವಕಾಶವಿದೆ. ಆದರೆ, ಇನ್ನೊಬ್ಬರ ತೇಜೋವಧೆ ಮಾಡುವ ಕೆಲಸ ಮಾಡಬಾರದು. ನಾವು ನಮ್ಮ ವಿರುದ್ದ ನಿಲ್ಲುವ ಅಭ್ಯರ್ಥಿಯನ್ನು…

Read More

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್‌ ಬಾಸ್‌ ಮನೆಯಲ್ಲಿ ಕಾರ್ತಿಕ್‌ ಅವರ ಜೊತೆ ಇದ್ದಿದ್ದು ತನಿಷಾ. ಒಳ್ಳೆ ಫ್ರೆಂಡ್‌ ಆಗಿ, ಗೈಡ್‌ ಆಗಿ ತನ್ನ ಸ್ನೇಹಿತನನ್ನು ಪ್ರೋತ್ಸಾಹ ಮಾಡಿದ್ದರ ಶ್ರೇಯಸ್ಸು ತನಿಷಾ ಅವರಿಗೆ ಸಲ್ಲುತ್ತೆ. ಇದೀಗ ಅವರ ಫ್ರೆಂಡ್‌ ಶಿಪ್‌ ಬಿಗ್‌ ಬಾಸ್‌ ಮನೆಯಿಂದ ಹೊರಗೆ ಬಂದ ನಂತರವೂ ಮುಂದುವರಿದಿದೆ. ಹೌದು, ತನಿಷಾ ಹಾಗೂ ಕಾರ್ತಿಕ್‌ ಮಹೇಶ್‌ ಸಿನಿಮಾ ಸಂಬಂಧ ಮತ್ತೆ ಜೊತೆಗೇ ಕೆಲಸ ಮಾಡುವ ವರದಿಯಾಗಿದೆ. ಕಾರ್ತಿಕ್‌ ಅವರು ಬಿಗ್‌ ಬಾಸ್‌ನಿಂದ ಹೊರ ಬಂದ ಮೇಲೆ ಅವರು ಮಾಡುವ ಸಿನಿಮಾ ಕುರಿತು ಅಷ್ಟಾಗಿ ಹೇಳಿಲ್ಲ.  ಅವರು ಈಗ ಬೇರೆ ಕೆಲಸಗಳಲ್ಲಿ ಬಿಝಿ ಇರುವುದರಿಂದ ಬಿಡುವು ಮಾಡಿಕೊಂಡು ಕಥೆ ಕೇಳುವುದಾಗಿ ಹೇಳಿದ್ದಾರೆ. ಹಾಗೂ ನಟನೆ ಮಾಡಲಿದ್ದಾರೆ. ಮಾಹಿತಿ ಪ್ರಕಾರ, ತನಿಷಾ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತದೆ ಹಾಗೂ ಅದರಲ್ಲಿ ಕಾರ್ತಿಕ್‌ ಅವರು ನಟಿಸಲಿದ್ದಾರೆ ಎಂಬ ಮಾಹಿತಿಯೊಂದು ವರದಿಯಾಗಿದೆ.

Read More

ಬೆಂಗಳೂರು : ರಾತ್ರಿ ವೇಳೆ ಕಸ ಎಸೆಯುವುದಕ್ಕೆ ಹೋಗಿದ್ದ ಯುವತಿಗೆ ಕಿಡಿಗೇಡಿಗಳು ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಕೋರಮಂಗದಲ್ಲಿ ನಡೆದಿದೆ. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋರಮಂಗಲ ಆಟೋ ಸ್ಟಾಂಡ್ ಬಳಿಯಲ್ಲಿ ಕಸ ಎಸೆಯಲು ಹೋಗಿದ್ದ ಯುವತಿಯನ್ನು ಹಿಡಿದುಕೊಂಡು ಯುವಕನೋರ್ವ ಲೈಂಗಿಕ ಕಿರುಕುಳ ನೀಡಿದ್ದು, ಜ.28ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೋರಮಂಗಲದ ಆಟೋ ನಿಲ್ದಾಣದ ಬಳಿ ಇರುವ ಜಾಗದಲ್ಲಿ ಕಸವನ್ನು ಎಸೆಯಲು ಹೋಗಿದ್ದ ಯುವತಿ,  ತಾನು ಲೈಂಗಿಕ ಕಿರುಕುಳ ಅನುಭವಿಸಿದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಅಂದು ರಾತ್ರಿ ಯುವತಿಯೊಬ್ಬಳು ತನ್ನ ಸ್ನೇಹಿತನೊಂದಿಗೆ ಮಧ್ಯರಾತ್ರಿ ವೇಳೆ ಕಸ ಎಸೆಯಲು ಹೋಗಿದ್ದಳು. ಈ ವೇಳೆ ಕೋರಮಂಗಲ ಆಟೋ ಸ್ಟಾಂಡ್ ಬಳಿ ಕುಳಿತಿದ್ದ ಪುಂಡರ ಗುಂಪು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕ–ಯುವತಿಯನ್ನು ಹಿಂಬಾಲಿಸಿಕೊಂಡು ಹೋಗಿದೆ. ನಂತರ, ನಿರ್ಜನ ಪ್ರದೇಶದಲ್ಲಿ ಕಸ ಎಸೆದು ವಾಪಸ್ ಬರುವಾಗ ಅವರನ್ನು ಹಿಂಬಾಲಿಸಿದ ಪುಂಡರ ಗುಂಪಿನಲ್ಲಿದ್ದ ನಾಲ್ವರು, ಯುವತಿಯನ್ನು ಅಡ್ಡಗಟ್ಟಿ ಹಿಡಿದುಕೊಂಡಿದ್ದಾರೆ.…

Read More

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಿಂದಲೂ ಸರ್ಕಾರದ 5 ಗ್ಯಾರಂಟಿಗಳನ್ನು ಲೇವಡಿ ಮಾಡಿಕೊಂಡು ಬಂದಿದ್ದ ಬಿಜೆಪಿಗೆ ಯಾವುದಾದರೂ ಹೊಸ ಅಸ್ತ್ರ ಸಿಗುತ್ತಾ ಅನ್ನೋದನ್ನು ಕಾಯುತ್ತಲೇ ಇದೆ. ಇದೀಗ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಕಷ್ಟವಾಗುವ ಸ್ಥಿತಿ ಬಂದಿದೆ. ಶ್ರೀಮಂತ ದೇವಾಲಯಕ್ಕೆ ಸರಕಾರ ಕನ್ನ ಹಾಕಲು ಮುಂದಾಗಿದೆ. ದೇವಾಲಯಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಒಂದು ಹುಂಡಿ ಇಟ್ಟು ಬಿಡಿ. ದಾನಿಗಳು ಅಲ್ಲೇ ಬಂದು ದಾನ ಮಾಡುತ್ತಾರೆ ಎಂದು ಟೀಕಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು 224 ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಅನುದಾನವನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ಈ ಸರ್ಕಾರದ ದುರಾಡಳಿತದಿಂದಾಗಿ ಸರ್ಕಾರಿ ನೌಕರರಿಗೆ ಸಂಬಳವನ್ನೂ ಕೊಡಲು ಕಷ್ಟವಾಗುವ ಸ್ಥಿತಿ ಬಂದಿದೆ. ರಾಜ್ಯದ ಹಣೆಬರಹ ಏನಾಗುತ್ತಿದೆ ನೋಡಿ ಎಂದು ಆರೋಪಿಸಿದ್ದಾರೆ.

Read More

ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಜೈಲಿನಲ್ಲಿ ಗಲಾಟೆ ಮಾಡಿಕೊಂಡಿದ್ದು, ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ ಎಂದು ವರದಿ ತಿಳಿಸಿದೆ. ಶಿವಮೊಗ್ಗ ಹರ್ಷ ಕೊಲೆಯ ಪ್ರಕರಣದ ಆರೋಪಿಗಳು ಮತ್ತು ಇತರೆ ಆರೋಪಿಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಹೊಡೆದಾಟ ನಡೆಸಿದ್ದಾರೆ ಎನ್ನಲಾಗಿದೆ. ಈ ಗಲಾಟೆಯಲ್ಲಿ ಎರಡು ಗುಂಪಿನ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆಯ ಬಳಿಕ ಡಿಸಿಪಿ ನೇತೃತ್ವದಲ್ಲಿ ಜೈಲಿನ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಮಾರಕಾಸ್ತ್ರ 10 ಸಾವಿರ ನಗದು ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಪಾವಗಡ:  ಪಟ್ಟಣದ ಸುಪ್ರಸಿದ್ಧ ಶನಿ ಮಹಾತ್ಮ ದೇವಸ್ಥಾನದಲ್ಲಿ ಶನಿವಾರ ಮಧ್ಯಾಹ್ನ 12:15 ರ ಸಮಯದಲ್ಲಿ ಬ್ರಹ್ಮರಥೋತ್ಸವಕ್ಕೆ ಶನಿಮಹಾತ್ಮಕಾರಿ ನಿರ್ವಾಹಕ ಸಂಘದ ಅಧ್ಯಕ್ಷರಾದ ಸಿ ಎನ್ ಆನಂದ್ ರಾವ್ ಅವರು ಚಾಲನೆ ನೀಡಿದರು ರಥವನ್ನು ಮತ್ತು ದೇವಸ್ಥಾನವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು,  ಈ ಬಾರಿಯ ವಿಶೇಷವೆಂದರೆ ರಥೋತ್ಸವದ ಸಮಯದಲ್ಲಿ ರಥಕ್ಕೆ ಮತ್ತು ದೇವಸ್ಥಾನಕ್ಕೆ ಆಕಾಶದೆತ್ತರದಿಂದ ಗರುಡ ಪಕ್ಷಿಯೊಂದು ಪ್ರದಕ್ಷಿಣ ಹಾಕಿ ಭಕ್ತರ ಅಚ್ಚರಿಗೆ ಕಾರಣವಾಯಿತು. ವಿಷ್ಣುವಿನ ಅವತಾರವಾಗಿರುವ ಗರುಡ ಪಕ್ಷಿಯು ಇಂತಹ ಬ್ರಹ್ಮರಥೋತ್ಸವ ನಡೆಯುವ ಸಂದರ್ಭದಲ್ಲಿ ಆಗಮಿಸಿ ಪ್ರದಕ್ಷಣೆ ಹಾಕುವುದು ವಿಷ್ಣುದೇವ ಆಗಮಿಸಿದಷ್ಟೇ ಪುಣ್ಯ ಇಂದು ಜನರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ರಥ ಎಳೆಯುವ ಸಂದರ್ಭದಲ್ಲಿ ಪಾವಗಡದ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ರಾಮಕೃಷ್ಣ ರೆಡ್ಡಿ ಅವರ ಕಾಲಿನ ಮೇಲೆ ರಥದ ಚಕ್ರ ಹರಿದು ಗಂಭೀರ ಗಾಯ ಆಗಿರುವುದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ, ರಥೋತ್ಸವದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದ ಹಾಗೆ ಪಾವಗಡ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್…

Read More

ಸಮಾಜವಾದಿ ಪಕ್ಷ ಕಾಂಗ್ರೆಸ್ ಗೆ ಗೆಲ್ಲುವ ಅವಕಾಶ ಇಲ್ಲದ ಸ್ಥಾನಗಳನ್ನು ನೀಡಿದೆ ಎನ್ನಲಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ 17 ಸೀಟು ಹಂಚಿಕೆಯಾಗಿದ್ದು, 12ರಲ್ಲಿ ಪಕ್ಷ ಕಟ್ಟಿದ್ದ ಹಣವನ್ನು ಕಳೆದುಕೊಂಡಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯನ್ನು ಉತ್ತರ ಪ್ರದೇಶದ ನಾಯಕರು ರಾಷ್ಟ್ರೀಯ ನಾಯಕತ್ವಕ್ಕೆ ಪ್ರತಿಭಟಿಸಿದರು.ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 67 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಉತ್ತರ ಪ್ರದೇಶದಲ್ಲಿ 67 ಸ್ಥಾನಗಳ ಪೈಕಿ 63ರಲ್ಲಿ ಕಾಂಗ್ರೆಸ್ 2019ರ ಪ್ರತಿಜ್ಞೆಯನ್ನು ಕಳೆದುಕೊಂಡಿದೆ. ಭಾರತದ ಮುಂಭಾಗದಲ್ಲಿ, ಉತ್ತರ ಪ್ರದೇಶವು ಸೀಟು ಹಂಚಿಕೆ ಮಾತುಕತೆಯಲ್ಲಿ ಬಿಕ್ಕಟ್ಟನ್ನು ಎದುರಿಸಿದ ಮತ್ತೊಂದು ರಾಜ್ಯವಾಗಿದೆ. ಸಮಾಜವಾದಿ ಪಕ್ಷವು ಮೂಲತಃ ಪ್ರಸ್ತಾಪಿಸಿದ ಸೂತ್ರವನ್ನು ಕಾಂಗ್ರೆಸ್ ಒಪ್ಪಿಕೊಳ್ಳಲಿಲ್ಲ. ಅಂತಿಮವಾಗಿ ಸಮಾಜವಾದಿ ಪಕ್ಷ 17 ಸ್ಥಾನಗಳನ್ನು ನೀಡುವುದಾಗಿ ಕಾಂಗ್ರೆಸ್‌ಗೆ ತಿಳಿಸಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಮಾತುಕತೆ ಪೂರ್ಣಗೊಳ್ಳುವವರೆಗೆ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಸುಳಿವು ನೀಡಿದ್ದರು. ಮೊದಲು ಸೀಟು ಹಂಚಿಕೆ ಮಾತುಕತೆ…

Read More

ಹಾಸನ: ಎತ್ತಿನಹೊಳೆ ಯೋಜನೆಯ ಶಂಕು ಸ್ಥಾಪನೆಗೆ ಆಗ ಜೆಡಿಎಸ್ ನಲ್ಲಿದ್ದ ಶಾಸಕ ಶಿವಲಿಂಗೇಗೌಡ ಮಾತ್ರ ಬಂದಿದ್ದರು. ಪದೇಪದೇ ತಮ್ಮನ್ನು ತಾವೇ ಮಣ್ಣಿನ ಮಕ್ಕಳು ಎಂದು ಕರೆದುಕೊಳ್ಳುವ ಮಾಜಿ ಸಿಎಂ ಎಚ್.ಡಿ. ‌ಕುಮಾರಸ್ವಾಮಿ ಮತ್ತು ಕುಟುಂಬದವರು ಈ ಯೋಜನೆ ವಿರೋಧ ವ್ಯಕ್ತಪಡಿಸಿದ್ದರು ಎಂದು‌ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಾಸನದಲ್ಲಿ ಮಾತನಾಡಿದ ಅವರು, ಎತ್ತಿನ‌ ಹೊಳೆ ಯೋಜನೆಯು ಅರಸಿಕೇರೆ ಕ್ಷೇತ್ರಕ್ಕೆ ಇರಲಿಲ್ಲ. ಶಿವಲಿಂಗೇಗೌಡ ಅವರ ಶ್ರಮದಿಂದ ಕ್ಷೇತ್ರದ ಜನರು ನೀರು ಕಾಣುವಂತಾಯಿತು ಎಂದು ಶಿವಲಿಂಗೇಗೌಡ ಅವರನ್ನು‌ ಸಿಎಂ‌ ಹಾಡಿ ಹೊಗಳಿದರು. ಇದೇ ವೇಳೆ ಸಂಸದ ಅನಂತ ಕುಮಾರ್ ಹೆಗಡೆ ಅವರು ಸಿದ್ದರಾಮುಲ್ಲಾಖಾನ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಅಲ್ಪ ಸಂಖ್ಯಾತರ ವಿರೋಧಿಗಳು. ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ‌ ಎಂದು ಸಿಎಂ ತಿರುಗೇಟು ನೀಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More