Author: admin

ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶರೀರಶಾಸ್ತ್ರ ವಿಭಾಗದಿಂದ ಶುಕ್ರವಾರ CME ಸಭೆ ನಡೆಯಿತು. ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಅವರು ಶರೀರ ಶಾಸ್ತ್ರದ ಮಹತ್ವದ ಬಗ್ಗೆ ವಿವರಿಸಿದರು. ಮುಖ್ಯ ಅಥಿತಿಯಾಗಿ ಡಾ| ಸಂಧ್ಯಾ ಟಿ ಅವಧಾನಿ ಪಾಲ್ಗೊಂಡಿದ್ದರು. ಸಭೆಯು ದೀಪ ಬೆಳಗುವುದರೊಂದಿಗೆ ಪ್ರಾರಂಭಗೊಂಡಿತು. ನಂತರ ಕೆ.ವಿ.ಜಿ.ಮ್.ಸಿ.ಎಚ್. ಡೀನ್, ಡಾ| ನೀಲಾಂಬಿಕೈ ನಟರಾಜನ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ| ದಾಮೋಧರ್ ಡಿ ವಂದಿಸಿ, ರಕ್ಷತಾ ರಮೇಶ್ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು. ನಂತರ ಕಾರ್ಯಕ್ರಮದ ಕೇಂದ್ರ ಬಿಂದು ನುರಿತ ವೈದ್ಯರುಗಳಿಂದ ವೈಜ್ಞಾನಿಕ ಅಧಿವೇಶನ ನಡೆಯಿತು. ತಮಿಳುನಾಡಿನ ತಿರುವನ್ನಮಲೈ ಮೆಡಿಕಲ್ ಕಾಲೇಜಿನ ಶರೀರಶಾಸ್ತ್ರ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ| ಪ್ರೇಮ್ ಬಳಗೂರು, ಹಿರಿಯ ಸಹಾಯಕ ಪ್ರಾಧ್ಯಾಪಕರು, ಡಾ| ಅರುಣ ಯಡಿಯಾಳ್, ಪ್ರಾಧ್ಯಾಪಕರು, ಮನೋವೈದ್ಯಶಾಸ್ತ್ರ ವಿಭಾಗ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮಂಗಳೂರು, ಡಾ | ರಾಘವೇಂದ್ರ ಪ್ರಸಾದ, ಕನ್ಸಲ್ಟೆಂಟ್ ಗ್ಯಾಸ್ಟ್ರೋಎಂಟರಾಲಜಿಸ್ಟ್, ಎ.ಜೆ.…

Read More

ಮಣಿಪುರದಲ್ಲಿ ಮತ್ತೆ ಸಂಘರ್ಷ. ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಐಇಡಿ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ತಂಗಮೈಬಂದ್‌ ನ ಡಿಎಂ ಕಾಲೇಜು ಆವರಣದಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ 9.20ರ ಸುಮಾರಿಗೆ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಡಿಎಂ ಕಾಲೇಜು ಕ್ಯಾಂಪಸ್‌ ನಲ್ಲಿರುವ ಎಎಂಎಸ್‌ ಯು ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ. ಓಯಿನಮ್ ಕೆನೆಜಿ ಎಂಬ 24 ವರ್ಷದ ವ್ಯಕ್ತಿ ಹತ್ಯೆಗೀಡಾದ. ಗಾಯಗೊಂಡ ಓಯಿನಮ್ ಕೆನೆಜಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಗಂಭೀರವಾಗಿ ಗಾಯಗೊಂಡಿರುವ ಇನ್ನಿಬ್ಬರು ರಾಜ್ ಮೆಡಿಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದ ಹೊಣೆಯನ್ನು ಇನ್ನೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಮಣಿಪುರ ಪೊಲೀಸರು ಮತ್ತು ಅರೆಸೇನಾ ಪಡೆಗಳು ಪ್ರದೇಶವನ್ನು ಸುತ್ತುವರೆದಿದ್ದು, ಶೋಧವನ್ನು ಪ್ರಾರಂಭಿಸಿದವು. ಸ್ಫೋಟದ ಕಾರಣ ಮತ್ತು ಅದರ ಹಿಂದೆ ಇರುವವರ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೈಲಿನಿಂದ ಹೊರಬಂದ ಶಾಂತನ್ ಶ್ರೀಲಂಕಾಕ್ಕೆ ತೆರಳಿದ್ದರು. ಶಾಂತನ್ ಒಂದು ವಾರದಲ್ಲಿ ಶ್ರೀಲಂಕಾಕ್ಕೆ ಹೋಗುತ್ತಾನೆ. ಕೇಂದ್ರ ಸರ್ಕಾರದ ನಿರ್ಗಮನ ಪರವಾನಗಿಯನ್ನು ತಿರುಚಿರಾಪಳ್ಳಿ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಗಿದೆ. ಭಾರತವನ್ನು ತೊರೆದ ಖೈದಿಗಳಲ್ಲದವರಲ್ಲಿ ಶಾಂತನ್ ಮೊದಲಿಗ. ಲಂಕಾ ಸರ್ಕಾರವು ಆಗಸ್ಟ್‌ ವರೆಗೆ ಚಾಲ್ತಿಯಲ್ಲಿರುವ ಪ್ರಯಾಣದ ದಾಖಲೆಯನ್ನು ನೀಡಿದ ನಂತರ ಸಂತಾನ್ ಮನೆಗೆ ಮರಳಲು ಅವಕಾಶ ನೀಡಲಾಯಿತು. ತನ್ನ ವಯಸ್ಸಾದ ತಾಯಿಯೊಂದಿಗೆ ವಾಸಿಸಲು ಶ್ರೀಲಂಕಾಕ್ಕೆ ಬಿಡುಗಡೆ ಮಾಡುವಂತೆ ಶಾಂತನ್ ಈ ಹಿಂದೆ ವಿನಂತಿಸಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ಶಾಂತನ್ ಮತ್ತು ಇತರರನ್ನು ವಿಧಿರಪಲ್ಲಿಯ ವಿಶೇಷ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 32 ವರ್ಷಗಳ ಜೈಲುವಾಸದಲ್ಲಿ ತನ್ನ ತಾಯಿಯನ್ನು ನೋಡಲು ಸಾಧ್ಯವಾಗದ ಕಾರಣ, ಶಾಂತನ್ ಶ್ರೀಲಂಕಾಕ್ಕೆ ಭೇಟಿ ನೀಡಲು ಮತ್ತು ತನ್ನ ತಾಯಿಯನ್ನು ನೋಡಿಕೊಳ್ಳಲು ಅವಕಾಶ ನೀಡುವಂತೆ ರಾಷ್ಟ್ರಪತಿಗೆ ಮನವಿ ಮಾಡಿದರು. ಸೆಪ್ಟೆಂಬರ್ 2018 ರಲ್ಲಿ, ತಮಿಳುನಾಡು ಕ್ಯಾಬಿನೆಟ್ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಎಲ್ಲಾ ಏಳು ಜೀವಾವಧಿ ಅಪರಾಧಿಗಳನ್ನು ಬಿಡುಗಡೆ…

Read More

ಮಹಾರಾಷ್ಟ್ರ: ಅಣ್ಣ, ತಂಗಿ ತಪ್ಪು ದಾರಿ ತುಳಿದರೂ ಬುದ್ಧಿ ಹೇಳೊ ಬದಲು ಆತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಕೆಯ ತಪ್ಪಿಗೆ ರಕ್ಷಕನಾಗಿ ಖತರ್ನಾಕ್ ಪ್ಲಾನ್ ಮಾಡಿ ಸಿಕ್ಕಿಬಿದ್ದಿದ್ದಾನೆ. ತನ್ನ ಸಹೋದರಿಗೆ 12ನೇ ತರಗತಿ ಪರೀಕ್ಷೆಯಲ್ಲಿ ನಕಲು ಮಾಡಲು ನೆರವಾಗುವ ನಿಟ್ಟಿನಲ್ಲಿ, ವ್ಯಕ್ತಿಯೊಬ್ಬ ಪೊಲೀಸ್‌ ಸಮವಸ್ತ್ರ‌ ಧರಿಸಿ ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಕಾರ್ಯವನ್ನು ನಿರ್ವಹಿಸುವಂತೆ ನಟಿಸಿ ಸಿಕ್ಕಿಬಿದ್ದಿರುವ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ. ಅನುಪಮ್ ಮದನ್ ಖಂಡಾರೆ(24) ಎಂಬಾತ ಪೊಲೀಸ್‌ ಕೈಗೆ ಸಿಕ್ಕಿಬಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. ಪಾತೂರು ಪಟ್ಟಣದ ಶಹಬಾಬು ಉರ್ದು ಪ್ರೌಢಶಾಲೆಯಲ್ಲಿ 12ನೇ ತರಗತಿಯ ಮೊದಲ ಪರೀಕ್ಷೆಯ ವೇಳೆ ಈ ಘಟನೆ ನಡೆದಿದೆ. ಪಾಂಗ್ರಾ ಬಂಡಿಯಿಂದ ಬಂದ ಖಂಡಾರೆ, ತನ್ನ ತಂಗಿಗೆ ಪರೀಕ್ಷೆಯಲ್ಲಿ ಕಾಪಿ ಮಾಡಲು ನೆರವಾಗುವ ನಿಟ್ಟಿನಲ್ಲಿ ನಿಜವಾದ ಪೊಲೀಸ್‌ ಧಿರಿಸಿನಲ್ಲಿ ಶಾಲೆಗೆ ಬಂದಿದ್ದಾನೆ. ಪರೀಕ್ಷಾ ಕೇಂದ್ರದ ಭದ್ರತೆಗೆ ನಿಂತು ಅಲ್ಲಿಂದ ಉತ್ತರ ಪತ್ರಿಕೆಯನ್ನು ತೆಗೆದುಕೊಂಡು ಹೋಗುವ ಯೋಜನೆಯನ್ನು ಅನುಪಮ್‌ ಹಾಕಿಕೊಂಡಿದ್ದ ಎನ್ನಲಾಗಿದೆ. ಇದೇ…

Read More

ಒಂದು ಲಕ್ಷ ರೂಪಾಯಿ ವಧು ದಕ್ಷಿಣೆ ಕೊಟ್ಟು ಮದುವೆಯಾದ ಈತ ಬಹಳ ಮೋಸ ಗೋಗಿದ್ದಾನೆ ಎಂದು ಮದುವೆಯ ನಂತರ ತಿಳಿದು ವರ ಶಾಕ್ ಗೆ ಒಳಗಾಗಿದ್ದಾನೆ. ಮದುವೆಯಾದ ವಧು ಮೊದಲ ರಾತ್ರಿಯೇ ಆಕೆ ಎಸ್ಕೇಪ್‌ ಆಗಿದ್ದಾಳೆ. ಭಾರತೀಯ ವಿವಾಹಗಳಲ್ಲಿ, ಪುರುಷ ಕಡೆಯವರು ಸಾಮಾನ್ಯವಾಗಿ ವರದಕ್ಷಿಣೆ ತೆಗೆದುಕೊಳ್ಳುತ್ತಾರೆ. ಮದುವೆಯಾದ ಮೇಲೆ ಹೆಣ್ಣುಮಕ್ಕಳ ಕುಟುಂಬಗಳು ಗಂಡುಮಕ್ಕಳಿಗೆ ನಗದು, ವಿವಿಧ ವಸ್ತುಗಳು, ಬೈಕ್ ‌ಗಳು, ಕಾರುಗಳು ಇತ್ಯಾದಿಗಳನ್ನು ನೀಡುತ್ತಾರೆ. ಆದರೆ ಇನ್ನೂ ಕೆಲವೆಡೆ ಹುಡುಗಿಯರನ್ನು ಮದುವೆಯಾಗಲು ಜನರು ಅಂದರೆ ವರ ಕಡೆಯವರೇ ಹಣ ಕೊಡುತ್ತಾರೆ. ಹುಡುಗಿಯ ಪೋಷಕರಿಗೆ ನಗದು ಪಾವತಿಸಿದ ನಂತರ, ಅವರ ಮಗಳನ್ನು ಮದುವೆಯಾಗುತ್ತಾರೆ. ಉತ್ತರ ಪ್ರದೇಶದ ಸುಲ್ತಾನ್‌ ಪುರದ ಹುಡುಗಿಯನ್ನು ಹುಡುಗ ಮದುವೆಯಾಗಿದ್ದ. 20 ದಿನಗಳ ಹಿಂದೆ, ಈ ಮದುವೆಯ ಮರುದಿನವೇ ದೊಡ್ಡ ಅನಾಹುತ ಸಂಭವಿಸಿದೆ ಹುಡುಗ ಮದುವೆಗೂ ಮುನ್ನ ಹುಡುಗಿಯ ಕುಟುಂಬಕ್ಕೆ 1 ಲಕ್ಷ ರೂಪಾಯಿ ನಗದನ್ನು ನೀಡಿದ್ದಾನೆ. ನಂತರ ಫೆಬ್ರವರಿ 17 ಅನ್ನು ಮದುವೆಯ ದಿನ ಎಂದು ನಿಗದಿಪಡಿಸಲಾಯಿತು. ಭರತ್‌…

Read More

ನಕ್ಸಲೀಯ ಸಂಘಟನೆಯ ಪಾಮ್ಡ್ ಏರಿಯಾ ಕಮಿಟಿ ಕೂಡ ಹತ್ಯೆಯ ಹೊಣೆ ಹೊತ್ತು ಪ್ರೆಸ್ ನೋಟ್ ಬಿಡುಗಡೆ ಮಾಡಿದ ಘಟನೆ ಛತ್ತೀಸ್‌ ಗಢದ ಹಳ್ಳಿಯೊಂದಲ್ಲಿ ನಡೆದಿದೆ. ಮೃತರಿಬ್ಬರೂ ನಕ್ಸಲ್ ಪೀಡಿತ ಗ್ರಾಮೀಣ ಪ್ರದೇಶವಾದ ದುಲ್ಲೆಡ್ ಗ್ರಾಮದ ನಿವಾಸಿಗಳು. ಮಾಹಿತಿ ಪ್ರಕಾರ ಮೃತ ಗ್ರಾಮಸ್ಥರ ಹೆಸರು ಸೋದಿ ಹಂಗ ಮತ್ತು ಮದ್ವಿ ನಂದಾ. ನಕ್ಸಲೀಯರು ಗ್ರಾಮಸ್ಥರನ್ನು ಅವರ ಮನೆಯಿಂದ ಅಪಹರಿಸಿ ಸ್ವಲ್ಪ ದೂರಕ್ಕೆ ಕರೆದೊಯ್ದು ಹರಿತವಾದ ಆಯುಧದಿಂದ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಚಿಂತಗುಫಾ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಎರಡೂ ಗ್ರಾಮಸ್ಥರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸ್ಥಳದಿಂದ ನಕ್ಸಲೀಯ ಕರಪತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಗ್ರಾಮಸ್ಥರಿಬ್ಬರೂ ಪೊಲೀಸರಿಗೆ ಮಾಹಿತಿದಾರರು ಎಂದು ನಕ್ಸಲೀಯರು ಆರೋಪಿಸಿದ್ದಾರೆ. ಇದಲ್ಲದೇ ಅದೇ ಗ್ರಾಮದ ಮತ್ತಿಬ್ಬರು ನಿವಾಸಿಗಳಾದ ಪದ್ಮಾ(ಪಾಂಗಲ್ ದೇಂಗಲ್) ಮತ್ತು ದೇವೆ ಎಂಬುವವರನ್ನು ಪೊಲೀಸ್ ಮಾಹಿತಿದಾರರೆಂದು ಆರೋಪಿಸಿ ನಕ್ಸಲೀಯರು ಈ ಕೆಲಸ ಬಿಟ್ಟು ಸಹಜ ಜೀವನ ನಡೆಸುವಂತೆ ಎಚ್ಚರಿಕೆ…

Read More

ಅನಧಿಕೃತ ಮಳಿಗೆ ಖಾಲಿ ಮಾಡಿಸಲು ಹೋದ ನಗರಸಭೆ ಸಿಬ್ಬಂದಿಗೆ ಮಚ್ಚು ತೋರಿಸಿ ಜೀವ ಬೆದರಿಕೆ ಹಾಕಿದ ಘಟನೆ ರಾಯಚೂರು ನಗರದ ಮಹಿಳಾ ಸಮಾಜದ ಬಳಿ ನಡೆದಿದೆ. ಅನಧಿಕೃತವಾಗಿ ಮಳಿಗೆಯಲ್ಲಿ ವ್ಯಾಪಾರ ನಡೆಸುತ್ತಿದ್ದು, ಯಾವುದೇ ತೆರಿಗೆ, ಬಾಡಿಗೆ ಕೊಡದೇ ವ್ಯಾಪಾರ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ದೂರು ಬಂದಿತ್ತು ಎನ್ನಲಾಗಿದೆ. ಇವರಿಗೆ ಕಳೆದ ಏಪ್ರಿಲ್ ತಿಂಗಳಲ್ಲೇ ಮಳಿಗೆ ಖಾಲಿ ಮಾಡುವಂತೆ ನಗರಸಭೆ ಸಿಬ್ಬಂದಿ ನೋಟಿಸ್ ನೀಡಿದ್ದರು. ನೋಟಿಸ್ ಕೊಟ್ಟರೂ ವ್ಯಾಪಾರ ವಹಿವಾಟು ಮುಂದುವರಿಸಿದ್ದರು. ನೋಟಿಸ್ ಅವಧಿ ಮುಗಿದಿರೋದ್ರಿಂದ ನಗರಸಭೆ ಸಿಬ್ಬಂದಿ ಮಳಿಗೆ ತೆರವು ಕಾರ್ಯಾಚರಣೆಗೆ ಮುಂದಾಗಿದ್ರು. ಈ ವೇಳೆ ಮಳಿಗೆ ಖಾಲಿ ಮಾಡಿ ಎಂದಿದ್ದಕ್ಕೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿರುವ ವ್ಯಾಪಾರಿಗಳು ಮಚ್ಚು ಹಿಡಿದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Read More

ಬೆಲೆ ಏರಿಕೆಯಾಗುತ್ತಿರುವಂತೆಯೇ ಬೆಳ್ಳುಳ್ಳು ಬೆಳೆದ ರೈತರು ಒಂದೆಡೆ ಖುಷಿ ಪಟ್ಟರೇ ಮತ್ತೊಂದೆಡೆ ಆತಂಕ ಪಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ಬೆಲೆ ಕೆಜಿಗೆ 300, 400 ರೂಪಾಯಿಯಿಂದ 500 ರೂಪಾಯಿಗೆ ತಲುಪಿದ್ದು ರೈತರು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೆ ಬೆಳೆ ಕಳ್ಳತನವಾಗುವ ಭಯ ಕೂಡ ಅನೇಕ ರೈತರಲ್ಲಿ ಕಾಣುತ್ತಿದೆ. ಇದೇ ಕಾರಣಕ್ಕೆ ಮಧ್ಯಪ್ರದೇಶದ ರೈತರೊಬ್ಬರು ತಮ್ಮ ಹೊಲಕ್ಕೆ ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಮಧ್ಯಪ್ರದೇಶದ ರೈತ ರಾಹುಲ್ ದೇಶಮುಖ್ ತಮ್ಮ 13 ಎಕರೆ ಹೊಲದಲ್ಲಿ ಬೆಳ್ಳುಳ್ಳಿ ಬೆಳೆಯಲು 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಈಗಾಗಲೇ ಬೆಳ್ಳುಳ್ಳಿ ಮಾರಾಟದಿಂದ ಸುಮಾರು 1 ಕೋಟಿ ರೂಪಾಯಿಗಳ ಗಮನಾರ್ಹ ಲಾಭವನ್ನು ಪಡೆದಿದ್ದಾರೆ. ಹೀಗಾಗಿಯೇ ತಮ್ಮ ತಮ್ಮ ಬೆಳೆಯನ್ನು ರಕ್ಷಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ತಮ್ಮ ಹೊಲದಲ್ಲಿ ರಾಹುಲ್ ದೇಶಮುಖ್ ಸೌರಶಕ್ತಿಯನ್ನು ಬಳಸಿಕೊಳ್ಳುವುದು ಮತ್ತು ಮೊಬೈಲ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರ ಮೂಲಕ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಕೆ.ಜಿ.ಗೆ…

Read More

ಪಾವಗಡ: ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೇ  ಹೆಲ್ತ್ ಸೊಸೈಟಿ ನಿಸ್ವಾರ್ಥ ಸೇವೆ  ಮಾಡುತ್ತಿದೆ ಎಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಈರಪ್ಪ ತಿಳಿಸಿದ್ದಾರೆ. ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಶಂಕರ್ ಕಣ್ಣಿನ ಆಸ್ಪತ್ರೆ ಬೆಂಗಳೂರು ಮತ್ತು ಹೆಲ್ಪ್ ಸೊಸೈಟಿ  ಪಾವಗಡ ಇವರ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ  ಅವರು ಮಾತನಾಡುತ್ತಿದ್ದರು. ಹೆಲ್ಪ್ ಸೊಸೈಟಿಯು ಸದಾ ಕ್ರಿಯಾಶೀಲವಾಗಿ ಸಮಾಜಮುಖಿ ಕೆಲಸ ಮಾಡುತ್ತಿರುತ್ತದೆ. ಈ ಬಾರಿ ಗಡಿ ಭಾಗವಾದ ವೈ ಎನ್ ಹೊಸಕೋಟೆಯಲ್ಲಿ  ನೇತ್ರ ತಪಾಸಣೆ ಶಸ್ತ್ರಚಿಕಿತ್ಸೆ ಶಿಬಿರವನ್ನು ಹಮ್ಮಿಕೊಂಡು ಜನತೆಗೆ ತುಂಬಾ ಅನುಕೂಲ ಮಾಡಿದೆ. ಇಂಥ ಶಿಬಿರಗಳಲ್ಲಿ ಜನತೆ ಭಾಗವಹಿಸಿ ಇದರ ಸದುಪಯೋಗ  ಪಡೆದುಕೊಳ್ಳಬೇಕು ಎಂದರು. ಉಪತಹಶೀಲ್ದಾರ್ ಕಿರಣ್ ಕುಮಾರ್ ಮಾತನಾಡಿ, ಸಮಾಜ ಸೇವೆಯಲ್ಲಿ ಹೆಲ್ಪ್ ಸೊಸೈಟಿ ಸದಾ ಮುಂಚೂಣಿಯಲ್ಲಿರುತ್ತದೆ. ಇಂದು ನಡೆದ ಶಿಬಿರದಲ್ಲಿ ನಿರೀಕ್ಷೆಗೂ ಮೀರಿ ಜನತೆ ಭಾಗವಹಿಸಿದ್ದಾರೆ. ಆರೋಗ್ಯದ ಪರವಾಗಿರುವ ಇನ್ನಷ್ಟು  ಶಿಬಿರಗಳನ್ನು ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನ್ಯಂ ಶಶಿಕಿರಣ್ ಹಮ್ಮಿಕೊಳ್ಳಬೇಕು ಎಂದರು.…

Read More

ಬೆಂಗಳೂರು: ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ನಮ್ಮ 138 ಶಾಸಕರು ಒಂದಾಗಿದ್ದಾರೆ, ನಮ್ಮ ಮನೆಯನ್ನು ಭದ್ರವಾಗಿಟ್ಟುಕೊಳ್ಳುವುದು ಹೇಗೆ ಅಂತ ಗೊತ್ತು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತಾಡಿದ ಅವರು, ರಾಜ್ಯಸಭಾ ಚುನಾವಣೆಗೆ ನಮ್ಮ ಪಕ್ಷ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಿರೋಧ ಪಕ್ಷದವರು ಏನೆಲ್ಲ ಕಸರತ್ತು ನಡೆಸಿದ್ದಾರೆನ್ನುವುದರ ಮೇಲೂ ನಿಗಾ ಇಡಲಾಗಿದೆ. ಜನರ್ದನ ರೆಡ್ಡಿ ಬೆಂಬಲ ನಮಗಿದೆ ಎಂದು ಹೇಳಿದರು. ಬಿಜೆಪಿಯವರು ಏನೇನು ಚರ್ಚೆ ಮಾಡಿದ್ದಾರೆ, ಯಾವ್ಯಾವ ಶಾಸಕರಿಗೆ ಕರೆಮಾಡಿದ್ದಾರೆ ಎನ್ನುವುದರ ಕುರಿತು ನಮಗೆ ಅರಿವಿದೆ. ಅವರ ಬತ್ತಳಿಕೆಯಲ್ಲಿ ಏನಿದೆ ಎನ್ನುವುದು ನಮಗೆ ಗೊತ್ತು. ಅದೇ ರೀತಿ ನಮ್ಮ ಬತ್ತಳಕೆಯಲ್ಲಿ ಏನಿದೆ ಎನ್ನುವುದು ಅವರಿಗೆ ತಿಳಿದಿದೆ ಎಂದರು. ನಾವು ನಮ್ಮ ಶಾಸಕರಿಗೆ ಶಾಸಕಾಂಗ ಸಭೆಯನ್ನು ಕರೆದಿದ್ದೇವೆ ಅಲ್ಲಿ ಮಾಕ್‌ ವೋಟಿಂಗ್‌ ಇರುತ್ತದೆ. ಬೇರೆಯವರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ನಾವು ನಮ್ಮ ಮನೆಯನ್ನು ಹೇಗೆ ಭದ್ರಪಡಿಸಿಕೊಳ್ಳಬೇಕೆನ್ನುವುದು ನಮಗೆ ತಿಳಿದಿದೆ ಎಂದು ತಿರುಗೇಟು ನೀಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…

Read More