Subscribe to Updates
Get the latest creative news from FooBar about art, design and business.
- ದೇವಾಲಯದಲ್ಲಿ ಅಕ್ಷರಾಭ್ಯಾಸ ಮಕ್ಕಳ ಜೀವನದ ಶ್ರೇಷ್ಠ ಆರಂಭ: ಡಾ.ಹನುಮಂತನಾಥ ಸ್ವಾಮೀಜಿ
- ಸರಗೂರು: ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಆಷಾಢ ಅಮಾವಾಸ್ಯೆ ಪೂಜೆ; ಬಸ್ ವ್ಯವಸ್ಥೆಯಿಲ್ಲದೆ ಭಕ್ತರ ಪರದಾಟ
- ಹೊಳವನಹಳ್ಳಿ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ಯೋಗೇಶ್ ಅವರಿಗೆ ಬೀಳ್ಕೊಡುಗೆ
- ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ರಾಜಗೋಪುರಕ್ಕೆ 5 ಲಕ್ಷ ದೇಣಿಗೆ
- ಕಾಡುಬೆಗೂರಿನಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರ ಆಗ್ರಹ
- ಸರಗೂರು: ಚಿಕ್ಕದೇವಮ್ಮ ಬೆಟ್ಟದಲ್ಲಿ ಆಷಾಢ ಅಮಾವಾಸ್ಯೆ ವಿಶೇಷ ಪೂಜೆ; ಸಹಸ್ರಾರು ಭಕ್ತರ ಭಾಗಿ
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
Author: admin
ಯಾದಗಿರಿ: ಸುರಪುರದ ತಿಂಥಣಿಯಲ್ಲಿ ಕುಡಿದ ಮತ್ತಿನಲ್ಲಿ ಇಬ್ಬರು ಬಳೆ ವ್ಯಾಪಾರಿಗಳ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಅಥಣಿಯ ಮಲ್ಲಪ್ಪ(38) ಕೊಲೆಯಾದವ್ಯಕ್ತಿಯಾಗಿದ್ದಾನೆ. ಬಾಗಲಕೋಟೆ ಮೂಲದ ಮತ್ತೊಬ್ಬ ಬಳೆ ವ್ಯಾಪಾರಿ ಬುರ್ಯಾನ್ ಕೊಲೆಗೈದ ಆರೋಪಿಯಾಗಿದ್ದಾನೆ. ಇಬ್ಬರೂ ತಿಂಥಣಿಯ ಐತಿಹಾಸಿಕ ಮೌನೇಶ್ವರ ಜಾತ್ರೆಯಲ್ಲಿ ಬಳೆ ವ್ಯಾಪಾರ ಮಾಡಲು ಬಂದಿದ್ದರು. ಅಕ್ಕಪಕ್ಕದಲ್ಲೇ ಬಳೆ ಅಂಗಡಿ ಹಾಕಿಕೊಂಡಿದ್ದು, ಇಬ್ಬರ ನಡುವೆ ತಡರಾತ್ರಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಆರಂಭಗೊಂಡಿದೆ. ಗಲಾಟೆ ವೇಳೆ ಮಾತಿಗೆ ಮಾತು ಬೆಳೆದು ಮಲ್ಲಪ್ಪನ ಮೇಲೆ ಬುರ್ಯಾನ್ ಹಲ್ಲೆ ನಡೆಸಿದ್ದು, ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಬುರ್ಯಾನ್ ನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮುಸುಕಿನ ಜೋಳದ ಜುಟ್ಟಿನಲ್ಲಿವೆ ಹಲವಾರು ಆರೋಗ್ಯ ಪ್ರಯೋಜನಗಳು: ಜೋಳ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಅದರ ರೇಷ್ಮೆಯಂತಹ ಕೂದಲು ಸಹ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಆದ್ರೆ ಇದು ನಿಜ, ಈ ಕಾರ್ನ್ ಸಿಲ್ಕ್ ನಿಂದ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಮಧುಮೇಹ ನಿಯಂತ್ರಣ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಗರ್ಭಿಣಿಯರಿಗೆ ತುಂಬಾನೇ ಉಪಯುಕ್ತ. ಕಿಡ್ನಿಗಳಿಗೆ ಸೂಪರ್ ಮೆಡಿಸಿನ್ ಆಗಿದೆ. ಊಟವಾದ ಕೂಡಲೇ ಈ ಪದಾರ್ಥ ಸೇವಿಸಿದರೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ: ರಾತ್ರಿಯಿಡೀ ನೀರಿನಲ್ಲಿ ಓಂಕಾಳನ್ನು ನೆನೆಸಿ ತಯಾರಿಸಿದ ಅಜೈನ್ ನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಊಟದ ನಂತರ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಆಹಾರವನ್ನು ತಿಂದ ನಂತರ ಒಂದು ಲೋಟ ಓಂಕಾಳಿನ ನೀರನ್ನು ಕುಡಿಯುವುದರಿಂದ ಉಬ್ಬುವುದು, ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಓಂಕಾಳಿನ ಜೀರ್ಣಕಾರಿ ಗುಣಲಕ್ಷಣಗಳು ಜೀರ್ಣಕಾರಿ ಕಿಣ್ವಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ, ಸಮರ್ಥ ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಚಯಾಪಚಯವನ್ನು ಉತ್ತೇಜಿಸುತ್ತದೆ.…
ಕೇರಳ: ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಸ್ಥಳೀಯ ಸಮಿತಿ ಕಾರ್ಯದರ್ಶಿಯನ್ನು ಗುರುವಾರ ತಡರಾತ್ರಿ ದೇವಸ್ಥಾನದ ಆವರಣದ ಬಳಿ ಹತ್ಯೆ ಮಾಡಿದ ಘಟನೆ ಕೋಝಿಕ್ಕೋಡ್ ನಲ್ಲಿ ನಡೆದಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ಪಿ.ವಿ.ಸತ್ಯನಾಥನ್ ಎಂದು ಗುರುತಿಸಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಓರ್ವ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಪೆರುವತ್ತೂರಿನ ಚೆರಿಯಪುರಂ ದೇವಸ್ಥಾನದಲ್ಲಿ ಉತ್ಸವ ನಡೆಯುತ್ತಿದ್ದು,ಈ ವೇಳೆ ಸಿಪಿಐ(ಎಂ) ನಾಯಕ ಉತ್ಸವಕ್ಕೆ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ವೇಳೆ ಆರೋಪಿಗಳು ಪಿ.ವಿ.ಸತ್ಯನಾಥನ್ ರವರ ಬೆನ್ನು ಮತ್ತು ಕತ್ತಿನ ಮೇಲೆ ದಾಳಿ ಮಾಡಿದ್ದಾರೆ ದಾಳಿಯಿಂದ ತೀವ್ರ ಗಾಯಗೊಂಡ ಸತ್ಯನಾಥನ್ ರವರನ್ನು ಕೊಯಿಲಾಂಡಿ ತಾಲೂಕು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. “ಓರ್ವ ಆರೋಪಿಯನ್ನು ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು” ಎಂದು ಕೊಯಿಲಾಂಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಪಿ ಮೋಹನನ್ ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪಿಗಳು ಸತ್ಯನಾಥನ್…
ರಾಹುಲ್ ಗಾಂಧಿ ಅವರು ಕನ್ನಡತಿಯಾಗಿರುವ ಐಶ್ವರ್ಯಾ ರೈ ಅವರನ್ನು ಅವಮಾನಿಸಿರುವ ಬಗ್ಗೆ ಪ್ರಶ್ನೆ ಮಾಡಿದೆ. ರಾಹುಲ್ ಗಾಂಧಿ, ಭಾರತದ ಹೆಮ್ಮೆಯ ಐಶ್ವರ್ಯಾ ರೈ ಅವರನ್ನು ಅವಮಾನಿಸುವ ಮೂಲಕ ಇನ್ನಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ಬಿಜೆಪಿ ಕಿಡಿ ಕಾರಿದೆ. ಶೂನ್ಯ ಸಾಧನೆ ಮಾಡಿರುವ ನಾಲ್ಕನೇ ತಲೆಮಾರಿನ ರಾಜಕೀಯ ಮನೆತನದ ಕುಡಿಯು ಈಗ ಭಾರತಕ್ಕೆ ಹೆಚ್ಚು ಕೀರ್ತಿ ತಂದ ಐಶ್ವರ್ಯಾ ರೈ ವಿರುದ್ಧ ನಿಂದನೆಗೆ ಇಳಿದಿದೆ ಎಂದು ಬಿಜೆಪಿ ಕುಟುಕಿದೆ. ಇಷ್ಟು ಮಾತ್ರವಲ್ಲ, ರಾಜ್ಯ ಬಿಜೆಪಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯನವರೇ, ನಿಮ್ಮ ಬಾಸ್ ಕನ್ನಡಿಗರನ್ನು ಅವಮಾನಿಸುವುದನ್ನು ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ ನೀವು ನಿಮ್ಮ ಕನ್ನಡಾಭಿಮಾನವನ್ನು ಎತ್ತಿ ಹಿಡಿಯುತ್ತೀರಾ? ಮತ್ತು ಇಂತಹ ಅಗೌರವದ ಮಾತುಗಳ ವಿರುದ್ಧ ಮಾತನಾಡುತ್ತೀರಾ? ಅಥವಾ ನಿಮ್ಮ ಸಿಎಂ ಕುರ್ಚಿಯನ್ನು ಕಾಪಾಡಲು ಮೌನವಾಗಿರುತ್ತೀರಾ? ಎಂದು ಬಿಜೆಪಿ ಗುಡುಗಿದೆ. ಜನವರಿ 22 ರಂದು ನಡೆದ ರಾಮಮಂದಿರ ಉದ್ಘಾಟನೆಯ ಸಮಾರಂಭದಲ್ಲಿ ಐಶ್ವರ್ಯಾ ರೈ ಉಪಸ್ಥಿತಿಯ ವಿರುದ್ಧ ರಾಹುಲ್ ಗಾಂಧಿ ಮಾತನಾಡಿರುವ ವಿಡಿಯೋ…
ಮಧುಗಿರಿ: ತಾಲೂಕಿನ ಕೊಡ್ಲಾಪುರ ಗ್ರಾಮ ಪಂಚಾಯತ್ ನ ಪುರವರ ಹೋಬಳಿಯ ತಾಳಕೆರೆ ಶಾಲೆ ಕಳೆದ ಒಂದು ವರ್ಷಗಳಿಂದ ದುರಸ್ತಿಯಲ್ಲಿದೆ. ಇದೀಗ ಶಾಲೆಯ ಮೇಲ್ಛಾವಣಿಯಿಂದ ಸಿಮೆಂಟ್ ಗಳು ಕಿತ್ತು ಕೆಳಗೆ ಬೀಳುತ್ತಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸಿರಲಿಲ್ಲ. ಶಾಲೆಯ ದುಸ್ಥಿತಿಯ ಬಗ್ಗೆ ಶಾಲೆಯ ಎಸ್ ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಕಾಳಜಿ ತಂಡಕ್ಕೆ ಮಾಹಿತಿ ನೀಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಕಾಳಜಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಬಳಿಕ ಬಿಇಒ ಹನುಮಂತರಾಯಪ್ಪನವರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಅವರು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಹಾಗೂ ಇಂಜಿನಿಯರ್ ಗೆ ಶೀಘ್ರವೇ ಶಾಲೆಯ ದುರಸ್ತಿ ವೀಕ್ಷಿಸಿ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ. ಶಾಲೆಯ ಉಳಿವಿಗಾಗಿ , ಕಾಳಜಿ ತಂಡ, ಭೀಮ್ ಆರ್ಮಿ, ಕರುನಾಡು ವಿಜಯ ಸೇನೆ ಮುಂದಾಳುತ್ವದಲ್ಲಿ ದೂರು ಬಿಇಒ ಅವರಿಗೆ ದೂರು ಸಲ್ಲಿಸಲಾಗಿದೆ. ಇನ್ನೂ ಕಾಳಜಿ ತಂಡದ ಪ್ರಮುಖರಾದ ಕಾಳಜಿ ಮಹೇಶ್ ಅವರ ತಂಡಕ್ಕೆ ಸ್ಥಳೀಯರು ಹಾಗೂ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದು, …
ಅಯೋಧ್ಯೆಯಿಂದ ವಾಪಸಾಗುತ್ತಿದ್ದ ಯಾತ್ರಿಕರಿಗೆ ಅಯೋಧ್ಯೆ ವಿಶೇಷ ರೈಲಿಗೆ ನುಗ್ಗಿ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲು ಮಾಡಲಾಗಿದೆ. ಗದಗದ ಬಳಿ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಯಾತ್ರಿಕರಿದ್ದ ಬೋಗಿಗೆ ಮೂವರು ಯುವಕರು ಹತ್ತಿ ಅವರೊಂದಿಗೆ ಕಾರಣವಿಲ್ಲದೆ ವಾಗ್ವಾದಕ್ಕಿಳಿದ್ದರು. ಮಾತಿನ ಭರದಲ್ಲಿ ಕಿಡಿಗೇಡಿಗಳು ಬೋಗಿಗೆ ಬೆಂಕಿ ಹಚ್ಚುವುದಾಗಿ ಧಮ್ಕಿ ಹಾಕಿದ್ದರು ಎನ್ನಲಾಗಿದೆ. ಹೊಸಪೇಟೆಯ ರೈಲ್ವೆ ನಿಲ್ದಾಣದಲ್ಲಿ ಮೂವರು ಯುವಕರ ಆಕ್ಷೇಪಾರ್ಹ ಹೇಳಿಕೆಯಿಂದ ಶ್ರೀರಾಮ ಭಕ್ತರು ಕೆರಳಿದ್ದಾರೆ. 8.15ಕ್ಕೆ ಹೊಸಪೇಟೆಗೆ ಬಂದ ರೈಲು, 10 ಗಂಟೆಗೆ ಬಳ್ಳಾರಿ ಕಡೆ ಪ್ರಯಾಣ ಬೆಳೆಸಿದೆ. ಎರಡು ಗಂಟೆ ಕಾಲ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಅಯೋಧ್ಯೆ ಧಾಮ ರೈಲು ಮಾರ್ಗ ಮಧ್ಯೆ ನಿಂತಿದೆ. ಯುವಕರನ್ನು ಬಂಧಿಸುವಂತೆ ಪ್ರತಿಭಟಿಸಲಾಗಿದೆ. ಸ್ಥಳಕ್ಕೆ ವಿಜಯನಗರ ಎಸ್ಪಿ ಶ್ರೀಹರಿಬಾಬು, ಹೊಸಪೇಟೆಯ ಉಪವಿಭಾಗದ ಪೊಲೀಸ್ ಅಧಿಕಾರಿಗಳಿಂದ ಮನವೊಲಿಸಿದ್ದಾರೆ ಎಂದು ವರದಿ ತಿಳಿಸಿದೆ. ಹಿಂದೂಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು…
ಒಂಟೆಯ ಕಣ್ಣೀರಿನಲ್ಲಿ ಅನೇಕ ರೀತಿಯ ಅಗತ್ಯ ಪ್ರೋಟೀನ್ ಗಳು ಕಂಡುಬರುತ್ತವೆ. ಇದು ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತದೆ. ಒಂಟೆಯ ಕಣ್ಣೀರಿನಲ್ಲಿ ಕಂಡುಬರುವ ಲೈಸೋಜೈಮ್ ಗಳು, ಬ್ಯಾಕ್ಟೀರಿಯಾ, ವೈರಸ್ ಸೇರಿದಂತೆ ಇತರೆ ಸೋಂಕುಗಳನ್ನು ತಡೆಯುತ್ತದೆ. ಕಣ್ಣೀರು ಮಾತ್ರವಲ್ಲ ಒಂಟೆ ಮೂತ್ರದಲ್ಲಿ ಔಷಧೀಯ ಶಕ್ತಿಯೂ ಇದೆ, ಇದನ್ನು ಹಿಂದಿನಿಂದಲೂ ಬಳಸಲಾಗುತ್ತಿದೆ. ಈ ಕಣ್ಣೀರು ಹಾವಿನ ವಿಷವನ್ನು ಸಹ ತೆಗೆದುಹಾಕುವಷ್ಟು ಪರಿಣಾಮಕಾರಿಯಾಗಿದೆ. ಭಾರತ ಮತ್ತು ಅಮೆರಿಕದಂತಹ ಅನೇಕ ದೇಶಗಳಲ್ಲಿ ಈ ವಿಷಯದ ಬಗ್ಗೆ ಸಂಶೋಧನೆಯೂ ನಡೆಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಹಾವು ಕಡಿತಕ್ಕೆ ಒಂಟೆಯ ಕಣ್ಣೀರು ಮದ್ದು ಅನ್ನೋದರ ಬಗ್ಗೆ ನಿಮ್ಗೆ ಗೊತ್ತಿದೆಯಾ? ಹೌದು, ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗುತ್ತಿರಬಹುದಲ್ವ? ಈ ಸುದ್ದಿ ನಿಜ. ಒಂಟೆಯ ಕಣ್ಣೀರಿನಲ್ಲಿ ಇರುವ ರಾಸಾಯನಿಕಗಳು ಹಾವಿನ ವಿಷಕ್ಕೆ ಪ್ರತಿವಿಷವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಇತ್ತೀಚಿನ ಸಂಶೋಧನೆಗಳು ಬಹಿರಂಗಪಡಿಸಿವೆ..! ನಿಮಗೆ ಗೊತ್ತಿರೋ ಹಾಗೆ ಹಾವುಗಳಲ್ಲಿ ಎರಡು ಬಗೆ ಇದೆ. ಒಂದು ವಿಷಕಾರಿ ಹಾವುಗಳು ಮತ್ತೊಂದು ವಿಷಕಾರಿಯಲ್ಲದ ಹಾವುಗಳು. ಹಾವುಗಳು ಕಚ್ಚಿದಾಗ ಅತೀ ಬೇಗನೆ ಚಿಕಿತ್ಸೆ…
ಚುನಾವಣೆ ಹತ್ತಿರ ಬಂತು ಎಂದರೆ ಮಾತ್ರ ಬಿಜೆಪಿಗೆ ಹಿಂದೂಗಳ ಬಗ್ಗೆ ಎಲ್ಲಿಲ್ಲದ ಪ್ರೇಮ ಉಕ್ಕಿ ಬರುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯವಾಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿವಾದ ಮಾಡೋದೆ ಬಿಜೆಪಿಯವರ ಹುಟ್ಟುಗುಣ ಎಂದರು. ಅವರಿಗೆ ಕಾನೂನಿನ ಅರಿವಿಲ್ಲ ಎಂಬುದು ಅವರು ಮಾತನಾಡುವ ರೀತಿಯಲ್ಲೇ ತಿಳಿಯುತ್ತದೆ ಎಂದು ಕಿಡಿಕಾರಿದರು. ರಾಜ್ಯದ ಹಿಂದೂ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿಂದೂ ದೇವಸ್ಥಾನಗಳ ಅಭಿವೃದ್ಧಿ, ಅರ್ಚಕರು ಹಾಗೂ ಅವರ ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಅನುಷ್ಠಾನಗೊಳಿಸಲು ಬದ್ಧವಾಗಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು. 2024ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕದಲ್ಲಿ ಧಾರ್ಮಿಕ ಪರಿಷತ್ ಗೆ ಕೆಲವು ತಿದ್ದುಪಡಿ ತಂದಿದ್ದೇವೆ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ವಿಶ್ವಕರ್ಮ ಸಮುದಾಯಕ್ಕೆ ಅವರ…
ಮುಂಬೈ: ಪಿಕ್ ನಿಕ್ ವೇಳೆ 8ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರಿಗೆ ಬಸ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮುಂಬೈನ ಥಾಣೆಯಲ್ಲಿ ನಡೆದಿದೆ. ಖಾಸಗಿ ಶಾಲೆ ಮಕ್ಕಳ ಪಿಕ್ ನಿಕ್ ಆಯೋಜಿಸಿತ್ತು. 8ನೇ ತರಗತಿ ವಿದ್ಯಾರ್ಥಿಗಳು ಈ ಸಂಭ್ರಮದಲ್ಲಿ ಬಸ್ ಹತ್ತಿದ್ದಾರೆ. ಮುಂಬೈ ಹೊರವಲಯ ಅಮ್ಯೂಸ್ ಮೆಂಟ್ ಪಾರ್ಕ್‌ಗೆ ಪಿಕ್ ನಿಕ್ ತೆರಳಲಾಗಿದೆ. ಇದಕ್ಕಾಗಿ ಖಾಸಗಿ ಬಸ್ ಬುಕ್ ಮಾಡಲಾಗಿದೆ. ಆದರೆ ವಿದ್ಯಾರ್ಥಿನಿಯರು ಬಸ್ ಹತ್ತುವ ವೇಳೆ, ಪ್ರಯಾಣದ ವೇಳೆ ಸೇರಿದಂತೆ ಹಲವು ಸಮಯದಲ್ಲಿ ವಿದ್ಯಾರ್ಥಿನಿಯರನ್ನು ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. ವಿದ್ಯಾರ್ಥಿನಿಯರ ತೊಡೆ, ಎದೆ, ದೇಹದ ಹಲವು ಭಾಗಗಳನ್ನು ಅಚಾನಕ್ಕಾಗಿ ಸ್ಪರ್ಶಿಸಿದಂತೆ ನಟಿಸಿದ್ದಾನೆ. ಈ ಕುರಿತು ಪಿಕ್ ನಿಕ್ ನಿಂದ ಮರಳಿದ ವಿದ್ಯಾರ್ಥಿನಿಯರು ಪೋಷಕರಲ್ಲಿ ದೂರಿದ್ದಾರೆ. ಲೈಂಗಿಕ ಕಿರುಕುಳ ಕುರಿತು ಹಲವು ವಿದ್ಯಾರ್ಥಿನಿಯರು ಪೋಷಕರಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ಶಾಲೆಗೆ ಆಗಮಿಸಿದ ಪೋಷಕರು ಈ ಮಾಹಿತಿ ತಿಳಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ವೇಳೆ ಬಸ್ ನಲ್ಲಿ ಈ ರೀತಿಯ ಘಟನೆ ನಡೆದಿರುವ…
ಮತದಾರರನ್ನು ಸೆಳೆಯಲು ಮದ್ಯ ಹಂಚೋದನ್ನು ,ಹಣ ಹಂಚೋದನ್ನು ಕೇಳಿದ್ದೇವೆ. ಆದರೆ ಇದೇನಿದು ಹೊಸ ವಿಧಾನ..? ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಮಾತ್ರವಲ್ಲ ಈ ಕುರಿತಾದ ವಿಡಿಯೋ ತುಣುಕೊಂದು ಹರಿದಾಡುತ್ತಿದ್ದು, ನೆಟ್ಟಿಗರು ಗರಂ ಆಗಿದ್ದಾರೆ. ಆಡಳಿತಾರೂಢ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ ನಾಯಕರು ತಮ್ಮ ಪಕ್ಷದ ಚಿಹ್ನೆಗಳನ್ನು ಒಳಗೊಂಡ ಕಾಂಡೋಮ್ ಪ್ಯಾಕೆಟ್ ಗಳನ್ನು ಹಂಚಿದ್ದಾರೆ ಎಂದು ಹೇಳಲಾಗಿದೆ. ಲೋಕಸಭಾ ಚುನಾವಣೆಯ ಹೊತ್ತಲ್ಲೇ ಕಾಂಡೋಮ್ ಇದೀಗ ಸದ್ದು ಮಾಡುತ್ತಿದ್ದು, ಆಂಧ್ರಪ್ರದೇಶದಲ್ಲಿ ಇವುಗಳು ಚುನಾವಣಾ ಪ್ರಚಾರದ ಸಾಧನವಾಗಿ ಮಾರ್ಪಟ್ಟಿವೆ ಎಂದರೆ ಖೇದಕರ ಸಂಗತಿ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕಾಂಡೋಮ್ ಪ್ಯಾಕ್ ಗಳನ್ನು ಎರಡೂ ಪಕ್ಷಗಳ ಚಿಹ್ನೆಗಳೊಂದಿಗೆ ಗುರುತಿಸಲಾಗಿದ್ದು, ಆಡಳಿತ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಮತ್ತು ಪ್ರಮುಖ ವಿರೋಧ ಪಕ್ಷವಾದ ತೆಲುಗು ದೇಶಂ ಪಾರ್ಟಿ(ಟಿಡಿಪಿ), ಪಕ್ಷದ ಕಾರ್ಯಕರ್ತರು ಮತದಾರರಿಗೆ ಹಂಚುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈ…