Author: admin

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಅಮ್ಮಾ.. ತಾಯಿ.. ಅಂತಾ ದಯನೀಯ ಸ್ಥಿತಿಯಲ್ಲಿ ಬೇಡುವ ಸನ್ನಿವೇಶ ಉದ್ಭವವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಗೌರವ ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದಾರೆ? ಈ ರಾಜ್ಯದ ಸರ್ಕಾರವನ್ನು ಭಿಕ್ಷುಕರ ಸರ್ಕಾರವನ್ನಾಗಿ ಮಾಡಲು ಹೊರಟಿದ್ದಿರಾ? ಕೆಲವರು ಮನೆಗಳ ಮುಂದೆ ಹೋದಾಗ ರಾತ್ರಿ ಊಟ ಉಳಿದಿದ್ರೆ ಕೊಡಿ ಅಂತಾ ಭಿಕ್ಷೆ ಕೇಳ್ತಾರೆ, ಅದೇ ರೀತಿ ಸಿಎಂ ಕೇಳ್ತಿದ್ದಾರೆ ಎಂದು ಟೀಕಿಸಿದರು. ಹಸಿವನ್ನ ನೀಗಿಸಿಕೊಳ್ಳಲು ಹೋಗುವ ಜನ ಅಮ್ಮಾ.. ತಾಯಿ ಕೊಡಿ ಅಂತಾ ಕೇಳ್ತಾರೆ. ವಿಧಾನಪರಿಷತ್‌ನಲ್ಲಿ ಅಮ್ಮಾ.. ತಾಯಿ.. 6 ಸಾವಿರ ಕೋಟಿ ಕೊಡು ತಾಯಿ ಅಂತ ಬೇಡ್ತಾ ಸಿಎಂ ಪ್ರಸ್ತಾಪ ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ಕರ್ನಾಟಕ ಸಂಪತ್ ಭರಿತ ರಾಜ್ಯ. ಹಣದ ಕೊರತೆಯಿಲ್ಲ, ರಸ್ತೆ ತೆರಿಗೆ ಆದಾಯ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ನಂ.1 ಸ್ಥಾನದಲ್ಲಿದೆ. ಸ್ವಂತ ಟ್ಯಾಕ್ಸ್ ಕಲೆಕ್ಟ್ ಮಾಡೋದ್ರಲ್ಲಿ ಮೊದಲನೆ ಸ್ಥಾನದಲ್ಲಿದ್ದೇವೆ. ಆದ್ರೆ ನಿಮ್ಮ ಲೂಟಿಯ ದಾಹಕ್ಕೆ ರಾಜ್ಯದ ಖಜಾನೆ…

Read More

ಬೀದರ್: 18 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ತಂಬಾಕು ಪದಾರ್ಥ ಮತ್ತು ಮಿಕ್ಸ್ ಮಾಡುವ ಖಂಡಿ ವಸ್ತುಗಳ ಪ್ಯಾಕೇಟ್ ಹಾಗೂ ಲಾರಿ ಸಹಿತ ಆರೋಪಿಯನ್ನು ಬೀದರ್ ಜಿಲ್ಲಾ ಹಳ್ಳಿಖೇಡ್ –ಬಿ ಪೊಲೀಸರು ಬಂಧಿಸಿದ್ದಾರೆ. ಹುಮನಾಬಾದ ತಾಲೂಕಿನ ಕಬೀರಾಬಾದವಾಡಿ ಕ್ರಾಸ್ ಹತ್ತಿರ ಲಾರಿಯೊಂದರಲ್ಲಿ ಅಕ್ರಮವಾಗಿ ಜರ್ದಾ ತಂಬಾಕು ಮತ್ತು ತಂಬಾಕಿನಲ್ಲಿ ಮಿಕ್ಸ್ ಮಾಡುವ ಖಂಡಿ ಪದಾರ್ಥಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಹಳ್ಳಿಖೇಡ್–ಬಿ ಪೊಲೀಸ್ ಠಾಣೆಯ ಪಿ.ಎಸ್.ಐ ಅಯ್ಯಪ್ಪ , ಇಕೇಶ, ಕರಿಲಿಂಗಪ್ಪ ಇವರನ್ನೊಳಗೊಂದ ತಂಡ ದಾಲಿ ನಡೆಸಿ ಲಾರಿಯನ್ನು ವಶಕ್ಕೆ ಪಡೆದು, ಜರ್ದಾ ತಂಬಾಕು ಪಾಕೇಟ್ ಮತ್ತು ತಂಬಾಕುವಿನಲ್ಲಿ ಮಿಕ್ಸ್ ಮಾಡುವ ವಸ್ತು ಖಂಡಿ ಹೀಗೆ ಒಟ್ಟು 18,20,000 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರಕಾರದಿಂದ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ತಂಬಾಕು ಪದಾರ್ಥಗಳನ್ನು ಸಾಗಿಸಲಾಗುತ್ತಿತ್ತು. ವರದಿ: ಅರವಿಂದ ಮಲ್ಲಿಗೆ, ಬೀದರ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ಸರಗೂರು: ಸಂವಿಧಾನದ ಮಹತ್ವ ಹಾಗೂ ಆಶಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾದನೂರು ಗ್ರಾಮ ಪಂಚಾಯಿತಿ ವತಿಯಿಂದ ‘ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ’ ಬುಧವಾರ ರಂದು ಸಂಜೆ ಹಮ್ಮಿಕೊಳ್ಳಲಾಗಿತ್ತು. 75 ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ಸಂವಿಧಾನ ಜಾಗೃತಿ ಜಾಥಾ ಸ್ತಬ್ಧ ಚಿತ್ರಕ್ಕೆ ಹೂವಿನ ಮಾಲಾರ್ಪಣೆ ಮಾಡಿ, ಸಂವಿಧಾನ ಪೀಠಿಕೆಯ ಭಿತ್ತಿಪತ್ರಗಳನ್ನು ಹಿಡಿದು, ಪೂರ್ಣಕುಂಭ ಸ್ವಾಗತ ಕೋರಲಾಯಿತು. ಇದೇ ವೇಳೆ ಒಕ್ಕೂರಲಿನಿಂದ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಬೋಧಿಸಿದರು.  ನಂತರ ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಮಹತ್ವ ಹಾಗೂ ಪ್ರತಿಯೊಬ್ಬರು ಅರಿತು ಇತರರಿಗೂ ತಿಳಿಸುವ ಮೂಲಕ ಪ್ರತಿಯೊಬ್ಬರ ಭಾರತೀಯ ಪ್ರಜೆಯಲ್ಲೂ ಸಂವಿಧಾನದ ಜಾಗೃತಿ ಮೂಡಿಸಬೇಕಿದೆ ಎಂದರು. ದೇಶದ ಸ್ವಾತಂತ್ರ್ಯ ನಂತರ ಅವಶ್ಯವಾಗಿರುವ ಎಲ್ಲ ಕಾನೂನು ಹಕ್ಕು ಮತ್ತು ಕರ್ತವ್ಯಗಳನ್ನು ಒಳಗೊಂಡ ಸಂವಿಧಾನ ಹೃದಯ ಮತ್ತು ತಾಯಿ ಇದ್ದಂತೆ ಎಂದರು. ಸಂವಿಧಾನವು ಶಿಕ್ಷಣ ಉದ್ಯೋಗ ಸಮಾನತೆ ಬದುಕು ಸಾಗಿಸಲು ಎಲ್ಲರಿಗೂ ಮುಕ್ತ ಅವಕಾಶ ನೀಡಿದೆ. ಯಾವಾಗಲಾದರೂ ನಮ್ಮ…

Read More

ತಿಪಟೂರು: ಕಲೆ ಹಾಗೂ ಶಿಕ್ಷಣಕ್ಕೆ ತವರೂರಾಗಿರುವ ತಿಪಟೂರಿನ, ಭೋವಿ ಕಾಲೋನಿ, ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1972 ರಲ್ಲಿ ಪ್ರಾರಂಭ ಗೊಂಡು ಐವತ್ತು ವಸಂತಗಳನ್ನು ಪೂರೈಸಿದ್ದು, ಫೆಬ್ರವರಿ 2024 ರಂದುಸುವರ್ಣ ಮಹೋತ್ಸವದ ಜೊತೆಗೆ ಶಾಲಾ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು . “ವಿಶ್ವ ಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂಬ ಘೋಷವಾಕ್ಯ ಮೊಳಗಿಸಿ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪ ನಮನ ಸಲ್ಲಿಸಿ, ಜ್ಯೋತಿ ಬೆಳಗುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕಿನ ಜನಪ್ರಿಯ ಶಾಸಕರಾದ ಕೆ. ಷಡಕ್ಷರಿ, ಮಕ್ಕಳ ಸರ್ವತೋಮಖ ಬೆಳವಣಿಗೆಗೆ ಸಹ ಪಠ್ಯ ಚಟುವಟಿಕೆಗಳು ಸಹಾಯಕವಾಗಿವೆ ಎಂದರು. ಶಾಲೆಯು ಸುವರ್ಣ ಮಹೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹೊಸದಾಗಿ ನಮ್ಮ ತಾಲ್ಲೂಕಿಗೆ ನೇಮಕಗೊಂಡ ಶಿಕ್ಷಕರಿಗೆ ಸ್ವಾಗತ, ತಾಲ್ಲೂಕಿನ ಶಿಕ್ಷಕರಿಗೆ ಗುರುವಂದನೆಯನ್ನು ಹಮ್ಮಿಕೊoಡಿರುವುದು ಸಂತಸ ತಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸುವ ಭಾಗ್ಯವನ್ನು ನನಗೆ ನೀಡಿದ ಈ ಶಾಲೆ ಉತ್ತುಂಗ ಸ್ಥಿತಿ ತಲುಪಲಿ. ಇಲ್ಲಿನ ಕ್ರಿಯಾಶೀಲ ಶಿಕ್ಷಕರ ಶ್ರಮ…

Read More

ರೈತರ ಪ್ರತಿಭಟನೆ ವೇಳೆ ಮತ್ತೊಬ್ಬ ರೈತ ಸಾವನ್ನಪ್ಪಿದ್ದ ಹಿನ್ನಲೆಯಲ್ಲಿ ಸಂತ್ರಸ್ತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗಕ್ಕೆ ಒತ್ತಾಯಿಸಿ ಒಕ್ಕೂಟದ ಮುಖಂಡ ಪಟಿಯಾಲ ತಿಳಿಸಿದ್ದಾರೆ. ದೆಹಲಿ ಚಲೋ, ರೈತ ಮುಖಂಡ ಸರ್ವಾನ್‌ಗೆ ಕರೆ ನೀಡಿರುವ ಪ್ರತಿಭಟನೆಯಲ್ಲಿ ಖಾನೌರಿ ಗಡಿಯಲ್ಲಿ ಮತ್ತೊಬ್ಬ ಪ್ರತಿಭಟನಾನಿರತ ರೈತ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 4 ಕ್ಕೆ ತಲುಪಿದೆ ಎಂದು ಸಿಂಗ್ ಪಂಧೇರ್ ಶುಕ್ರವಾರ ಹೇಳಿದ್ದಾರೆ. ಬಟಿಂಡಾ ಜಿಲ್ಲೆಯ ಅಮರ್ಗಢ ಗ್ರಾಮದ ದರ್ಶನ್ ಸಿಂಗ್ ಎಂಬ 62 ವರ್ಷದ ರೈತ ಫೆಬ್ರವರಿ 13 ರಿಂದ ಖಾನೌರಿ ಗಡಿಯಲ್ಲಿ ನೆಲೆಸಿದ್ದರು. ದರ್ಶನ್ ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ “ಅವರು ರೈತರ ಆಂದೋಲನದ ನಾಲ್ಕನೇ ಹುತಾತ್ಮರಾಗಿದ್ದಾರೆ ಎಂದು ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ. ಮೃತಪಟ್ಟ ಸಂತ್ರಸ್ತನ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂದು ಹೇಳಿದರು. “ಹಿಂದಿನ ಮೂವರು ಹುತಾತ್ಮರಿಗೆ ನೀಡಿದ ಪರಿಹಾರದಂತೆಯೇ ಪರಿಹಾರವನ್ನು ನೀಡಬೇಕು ಮತ್ತು ಅವರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು. ಅವರು ಈ…

Read More

ಹೈದರಾಬಾದ್:‌ ಇಂದು ಬೆಳಗ್ಗೆ 6.30ರ ಸುಮಾರಿಗೆ ಹೈದರಾಬಾದ್ ‌ನ ಹೊರವಲಯದಲ್ಲಿರುವ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಟಂಚೇರು ಎಂಬಲ್ಲಿ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಭಾರತ್ ರಾಷ್ಟ್ರ ಸಮಿತಿಯ (BRS) ಶಾಸಕಿ ಜಿ ಲಾಸ್ಯ ನಂದಿತಾ(37) ದುರ್ಮರಣಕ್ಕೀಡಾಗಿದ್ದಾರೆ. ಬಿಆರ್‌ಎಸ್‌ನ ಮಾಜಿ ಶಾಸಕ ದಿವಂಗತ ಜಿ ಸಾಯಣ್ಣ ಅವರ ಪುತ್ರಿಯಾಗಿರುವ ನಂದಿತಾ ಅವರು ಕಳೆದ ನವೆಂಬರ್ ‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕಂಟೋನ್ಮೆಂಟ್ ಕ್ಷೇತ್ರದಿಂದ ಜಿ ವೆನ್ನೆಲ ಅವರನ್ನು ಸೋಲಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದರು. ನಂದಿತಾ ಅವರು ತಮ್ಮ ಎಸ್‌ ಯುವಿ ಕಾರಿನಲ್ಲಿ ನಗರಕ್ಕೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಎಕ್ಸ್‌ ಪ್ರೆಸ್‌ ವೇಯ ಎಡಭಾಗದಲ್ಲಿರುವ ಲೋಹದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಶಾಸಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಕಾರು ಚಾಲಕನನ್ನು ಸಮೀಪದ ಪಟಂಚೇರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ…

Read More

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ, ಆನಡಗು ಗ್ರಾಮದಲ್ಲಿ ಕೆಂಪಮ್ಮ ದೇವಿ ದೇವಾಲಯದ ಲೋಕಾರ್ಪಣೆಯನ್ನು ನಟ ಜಗ್ಗೇಶ್ ಅವರ ಉಪಸ್ಥಿತಿಯಲ್ಲಿ ನಡೆಸಲಾಯಿತು. ತನ್ನದೇ ಹುಟ್ಟೂರು ಆದ ಆನಡಗೂ ಗ್ರಾಮದಲ್ಲಿರುವ ಕೆಂಪಮ್ಮ ದೇವಿ, ನಟ ಜಗ್ಗೇಶ್ ಅವರ ಮನೆದೇವರು ಕೂಡ ಆಗಿದ್ದು, ಈ ಲೋಕಾರ್ಪಣೆ ಕಾರ್ಯಕ್ಕೆ ಅವರ ಸಹೋದರ ಕೋಮಲ್ ಕೂಡ ಆಗಮಿಸಿ, ಅವರ ಕುಟುಂಬದವರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಜಗ್ಗೇಶ್ ಮಾತನಾಡಿ,  ನನ್ನ ಬದುಕಲ್ಲಿ ಈ ಜಾಗ ಒಂದು ರೀತಿ ಮಾನಸ ಸರೋವರ, ಕಾರಣ ಏನೆಂದರೆ, ಗ್ರಾಮೀಣ ಪ್ರದೇಶದ ನಾವುಗಳು ಈ ಮಟ್ಟಕ್ಕೆ ಬೆಳೆಯಬೇಕಾದರೆ ಗುರುಹಿರಿಯರ ನಮ್ಮ ತಂದೆ ತಾಯಿಗಳ ಜೊತೆಗೆ ಈ ಊರ ಗ್ರಾಮ ದೇವತೆ ಕೆಂಪಮ್ಮ ದೇವಿ ಹಾಗೂ ಭೈರವೇಶ್ವರ ಇವರುಗಳ ಆಶೀರ್ವಾದ ಇರುವುದರಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ, ನನ್ನ ಗ್ರಾಮದ ಜನತೆ ಹಾಗೂ ನನ್ನ ಎಲ್ಲಾ ಬಂಧುಗಳು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಚಿರಋಣಿ ಎಂದರು. ಇದೇ ವೇಳೆ ಮಾಜಿ ಪ್ರಧಾನಿಯಾದ ದೇವೇಗೌಡ…

Read More

ತುರುವೇಕೆರೆ: ರಾಜ್ಯದಲ್ಲಿ ರೈತರ ಮಕ್ಕಳಿಗಾಗಿ ಜಾರಿಗೆ ತಂದ ವಿದ್ಯಾಸಿರಿ ಹಾಗೂ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್  ಯೋಜನೆಗೆ, ರಾಜ್ಯ ಸರ್ಕಾರದಿಂದ ನೀಡುತ್ತಿದ್ದ 4ಸಾವಿರ ರೂ ಮತ್ತು ಶ್ರಮ ಶಕ್ತಿ ಯೋಜನೆಗಳನ್ನು  ರಾಜ್ಯ ಸರ್ಕಾರ  ನಿಲ್ಲಿಸಿದೆ.  ರೈತರ ಬಗ್ಗೆ ಕಾಳಜಿ ಇಲ್ಲದ ಕೆಟ್ಟ ರಾಜ್ಯ ಸರ್ಕಾರ ಎಂದು ಬಿಜೆಪಿ ರಾಜ್ಯ ರೈತಮೋರ್ಚಾ ಅಧ್ಯಕ್ಷ ಎ.ಎಸ್.ನಡಹಳ್ಳಿ ನೇರ ಆರೋಪ ಮಾಡಿದರು. ತಾಲ್ಲೂಕಿನ ದಬ್ಬೇಘಟ್ಟ  ಹೋಬಳಿಯ ಮುದಿಗೆರೆ ಗ್ರಾಮದಲ್ಲಿ ಏರ್ಪಡಿಸಿದ್ದ ರೈತ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ಪಿ.ಎಂ.ಕಿಸಾನ್ ಸನ್ಮಾನ ಯೋಜನೆಯ 6 ಸಾವಿರದ ಜೊತೆಗೆ  ರಾಜ್ಯ ಸರಕಾರವೂ 4 ಸಾವಿರ ಸೇರಿಸಿ, ವಾರ್ಷಿಕ 10 ಸಾವಿರ ರೂ ರೈತರ ಖಾತೆಗೆ ನೇರ ವರ್ಗಾವಣೆಯಾಗುವಂತೆ ಮಾಡಿದ್ದರು.  ಅತಿ ವೃಷ್ಟಿ, ಅನಾವೃಷ್ಟಿಯಂತಹ ಕಾಲದಲ್ಲಿ ಕೇಂದ್ರದ ಅನುದಾನಕ್ಕೆ ಕಾಯದೆ, ರಾಜ್ಯ ಸರಕಾರವೇ ಎಕರೆಗೆ 10 ಸಾವಿರ ರೂ ಪರಿಹಾರ ನೀಡಿತ್ತು ಆದರೆ ಈಗ ರಾಜ್ಯ ಸರಕಾರದ ಬಳಿ ಎಕರೆಗೆ 2000 ರೂ ಪರಿಹಾರ ನೀಡಿಲ್ಲ, …

Read More

13 ವರ್ಷದ ಬಾಲಕಿ ಮೇಲೆ 60 ವರ್ಷದ ವೃದ್ಧನೊಬ್ಬ ಅತ್ಯಾಚಾರ ನಡೆಸಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಗೆ ಪೋಷಕರು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿ ಈಗ ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದಾಳೆ. 13 ವರ್ಷದ ಮಗಳ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದಾರೆ. ಇನ್ನು ಯಾರು ಹೀಗೆ ಮಾಡಿದ್ದು ಎಂದು ಪ್ರಶ್ನಿಸಿದಾಗ ವೃದ್ಧನ ಹೆಸರು ಬಾಯ್ಬಿಟಿದ್ದಾಳೆ ಎನ್ನಲಾಗಿದೆ. ಆರೋಪಿ ವೃದ್ಧನ ಮನೆಗೆ ಹಾಲು ಕೊಡಲು ಬಾಲಕಿಯ ತಂದೆ ಹೋಗುತ್ತಿದ್ದರು. ಕೆಲವೊಂದು ಸಮಯದಲ್ಲಿ ತಂದೆ ಇಲ್ಲದ ದಿನ, ಈ ಬಾಲಕಿಯೇ ಹಾಲು ಕೊಡಲು ವೃದ್ಧನ ಮನೆಗೆ ಹೋಗುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ತಿಳಿದು ಬಂದಿದೆ. ಇನ್ನು ಈ ವೃದ್ಧ, 5 ವರ್ಷಗಳ ಹಿಂದೆಯೂ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ. ಆದರೆ, ಭಯದಿಂದ ಬಾಲಕಿ ಸುಮ್ಮನಿದ್ದಳು. ಇದೀಗ ಐದು ವರ್ಷಗಳ…

Read More

ಭೋಪಾಲ್:‌ ಜೈತಾರಿ ಅರಣ್ಯ ವ್ಯಾಪ್ತಿಯಲ್ಲಿ ಆನೆಯೊಂದು ಬೆಳೆ ನಾಶ ಮಾಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಓಡಿಸಲು ಮುಂದಾದಾಗ, ಯುವಕನ ಮೇಲೆ ಆನೆ ದಾಳಿ ಮಾಡಿದ ಘಟನೆ ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆಯೇ, ಸಿಟ್ಟಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೇ ಅವರ ವಾಹನಗಳನ್ನು ಜಖಂಗೊಳಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸ್ಥಳಕ್ಕೆ ಪೊಲೀಸ್ ಪಡೆಗಳನ್ನು ರವಾನಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More