Author: admin

ಕಡಿಮೆ ಬೆಲೆಯ ಉತ್ಪನ್ನಗಳನ್ನು ಖರೀದಿಸುವ ಜನರನ್ನು ಗುರಿಯಾಗಿಸಿ, ಕಡಿಮೆ ಬೆಲೆಯ, ಬ್ರ್ಯಾಂಡ್ ಹೊರತಾದ ಉಡುಪುಗಳು ಹಾಗೂ ಲೈಫ್‌ ಸ್ಟೈಲ್ ಉತ್ಪನ್ನಗಳಿಗಾಗಿ ಅಮೆಜಾನ್‌ ಹೊಸ ತಾಣ ‘ಅಮೆಜಾನ್‌ ಬಜಾರ್‌’ನ್ನು ಆರಂಭಿಸುತ್ತಿದೆ ಎಂದು ತಿಳಿದು ಬಂದಿದೆ. ಅಮೆಜಾನ್‌ ಬಜಾರ್‌ ಪ್ರಸ್ತುತ ಮಾರಾಟಗಾರರನ್ನು ಆನ್‌ ಬೋರ್ಡಿಂಗ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಇವರಿಗೆ ಉಡುಪುಗಳು, ಕೈಗಡಿಯಾರಗಳು, ಚಪ್ಪಲಿ, ಆಭರಣಗಳು ಸೇರಿದಂತೆ 600 ರೂ.ಗಿಂತ ಕಡಿಮೆ ಬೆಲೆಯ ಬ್ರ್ಯಾಂಡ್ ಅಲ್ಲದ ಉತ್ಪನ್ನಗಳನ್ನು ಪಟ್ಟಿ ಮಾಡುವಂತೆ ತಿಳಿಸಿದೆ ಎಂದು ವರದಿ ಮಾಡಿದೆ. ಈ ಮೂಲಕ ಕಡಿಮೆ ಬೆಲೆಯ ಉತ್ಪನ್ನಗಳನ್ನು ಖರೀದಿಸುವ ಭಾರತೀಯ ಗ್ರಾಹಕರ ವಿಭಾಗವನ್ನು ಕೈವಶ ಮಾಡಿಕೊಳ್ಳಲು ಅಮೆಜಾನ್‌ ಹೊರಟಿದೆ. ಈಗಾಗಲೇ ಸಾಮೂಹಿಕ-ಮಾರುಕಟ್ಟೆ ಉತ್ಪನ್ನಗಳಿಗೆ ಬೇಡಿಕೆ ನಿಧಾನವಾಗಿದ್ದು, ಇದೀಗ ಬೇರೆ ದಾರಿಯಲ್ಲಿ ಆದಾಯ ಗಳಿಸಲು ಅಮೆಜಾನ್‌ ಹೊರಟಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಸ್ಕ್ಯಾಪ್ ಆದ ಬಿಎಂಟಿಸಿ ಬಸ್ ಕ್ಯಾಂಟೀನ್ ಆಗಿ ಪರಿವರ್ತನೆಯಾಗಿದೆ. 1064298 ಕಿ.ಮೀ. ಓಡಾಟ ನಡೆಸಿದ್ದ ಬಿಎಂಟಿಸಿ ಲೇಲ್ಯಾಂಡ್ ಉಗ್ರಾಣದಲ್ಲಿ ಕ್ಯಾಂಟೀನ್‌ ವ್ಯವಸ್ಥೆ ಮಾಡಲಾಗಿದೆ. ಬಿಎಂಟಿಸಿ ನೌಕರರ ಅನುಕೂಲಕ್ಕಾಗಿ ಬಸ್ ಕ್ಯಾಂಟೀನ್ ವ್ಯವಸ್ಥೆ ಮಾಡಿದ್ದು, ಊಟದ ಹಾಲ್ ನಿರ್ಮಿಸಿ, ಕ್ಯಾಂಟೀನ್ ಇಲ್ಲದಂತಹ ಘಟಕ, ಬಸ್ ನಿಲ್ದಾಣಗಳಲ್ಲಿ ತಿಂಡಿ, ಊಟ ಮಾಡಲು ಈ ಬಸ್ ಉಪಯೋಗವಾಗಿದೆ. ಭೋಜನ ಬಂಡಿ ಹೆಸರಿನಲ್ಲಿ ಕ್ಯಾಂಟೀನ್ ಬಸ್ ನಿರ್ಮಾಣ ಮಾಡಲಾಗಿದೆ. ಪೀಣ್ಯ ಮತ್ತು ಯಶವಂತಪುರ ಬಸ್‌ ಡಿಪೋಗಳಲ್ಲಿ ಈ ಬಸ್ ಕ್ಯಾಂಟೀನ್ ಸದ್ಯ ಚಾಲ್ತಿಯಲ್ಲಿ ಎನ್ನಲಾಗುತ್ತಿದೆ. ಬಸ್ ನಿಲ್ದಾಣಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಿಎಂಟಿಸಿ ನೌಕರರಿಗೆ ಉಪಹಾರ ಮತ್ತು ಮಧ್ಯಾಹ್ನದ ಊಟ ಮಾಡುವುದಕ್ಕೆ ಈ ಕ್ಯಾಂಟೀನ್ ಸಹಕಾರಿಯಾಗಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ರೈತರ ಮುಷ್ಕರಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಲು ಹರಿಯಾಣ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ರೈತ ಮುಖಂಡರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ ಮಾಡಲಾಗುವುದು. ಸಾರ್ವಜನಿಕ ಆಸ್ತಿ ನಾಶಕ್ಕೆ ರೈತ ಮುಖಂಡರಿಂದ ಪರಿಹಾರ ವಸೂಲಿ ಮಾಡಲಾಗುವುದು. ಪ್ರತಿಭಟನಾಕಾರರು ಶಾಂತಿಯುತ ವಾತಾವರಣಕ್ಕೆ ಭಂಗ ತಂದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರೈತ ಮುಖಂಡರು ಪ್ರಚೋದನಕಾರಿ ವಿಷಯಗಳನ್ನು ಹರಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೈತರ ಮುಷ್ಕರಕ್ಕೆ ಸಂಬಂಧಿಸಿದ ಖಾತೆಗಳು ಮತ್ತು ಪೋಸ್ಟ್‌ ಗಳನ್ನು ಎಕ್ಸ್ ತೆಗೆದು ಹಾಕಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದೆ ಎಕ್ಸ್. ರೈತರ ಪ್ರತಿಭಟನೆ ವರದಿ ಮಾಡುತ್ತಿದ್ದ ಪತ್ರಕರ್ತರು ಹಾಗೂ ರೈತಸಂಘದ ಮುಖಂಡರ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ದಂಡ ಸೇರಿದಂತೆ ಶಿಕ್ಷೆ ವಿಧಿಸುವುದಾಗಿ ಕೇಂದ್ರ ಬೆದರಿಕೆ ಹಾಕಿದೆ. ಪೊಲೀಸ್ ಫೈರಿಂಗ್ ನಲ್ಲಿ ಯುವ ರೈತ ಸಾವನ್ನಪ್ಪಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಬಹಿರಂಗಪಡಿಸಿದರು. ಪ್ರತ್ಯಕ್ಷದರ್ಶಿ ಕಲ್ದೀಪ್ ಸಿಂಗ್ 24 ಕ್ಕೆ ಪ್ರತಿಕ್ರಿಯಿಸಿದ್ದು, ಹರಿಯಾಣ ಪೊಲೀಸರು…

Read More

ರಷ್ಯಾದಲ್ಲಿ ಉದ್ಯೋಗ ವಂಚನೆಗೆ ಹಲವು ಭಾರತೀಯರು ಬಲಿಯಾಗಿದ್ದಾರೆ ಎಂಬ ದೂರು. ಸೆಕ್ಯುರಿಟಿ ಕೆಲಸ ಕೊಡಿಸುವುದಾಗಿ ಯುವಕರನ್ನು ವಂಚಿಸಲಾಗಿದೆ. ತೆಲಂಗಾಣ, ಕರ್ನಾಟಕ, ಗುಜರಾತ್ ಮತ್ತು ಉತ್ತರ ಪ್ರದೇಶದ 12 ಭಾರತೀಯ ಯುವಕರು ಯುದ್ಧ ವಲಯದಲ್ಲಿ ಸಿಕ್ಕಿಬಿದ್ದಿದ್ದಾರೆ. ವ್ಯಾಗ್ನರ್ ಅವರನ್ನು ಸೇನೆಗೆ ಸೇರಿ ಉಕ್ರೇನ್ ಸೇನೆಯ ವಿರುದ್ಧ ಹೋರಾಡುವಂತೆ ಕೇಳಿದಾಗ ಉದ್ಯೋಗ ವಂಚನೆ ಬೆಳಕಿಗೆ ಬಂದಿದೆ. ಯುವಕರನ್ನು ರಕ್ಷಿಸುವಂತೆ ಒತ್ತಾಯಿಸಿರುವ ವಿಡಿಯೋ ಸಂದೇಶ ಹೊರಬಿದ್ದಿದ್ದು, ಅವರನ್ನು ಯುದ್ಧ ವಲಯದಿಂದ ವಾಪಸ್ ಕರೆತರಲು ಕ್ರಮಕೈಗೊಳ್ಳುವಂತೆ ಅವರ ಸಂಬಂಧಿಕರು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿರುವ ಯುವಕನ ಸಂಬಂಧಿಕರು, ಯುವಕ ಫೈಸಲ್ ಖಾನ್ ಎಂಬ ವ್ಲಾಗರ್ ವೀಡಿಯೊವನ್ನು ನೋಡಿದ ನಂತರ, ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಅವರು ಹಗರಣದಲ್ಲಿ ಮಧ್ಯವರ್ತಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತೆಲಂಗಾಣ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದವರು. ನಲ್ಲಗೊಂಡ ಜಿಲ್ಲೆಯ ನಾರ್ಕೆಟ್ ಪಲ್ಲಿ ಮಂಡಲದಲ್ಲಿ ವಾರ್ಷಿಕ ಚೆರುವುಗುತ್ತು ಜಾತ್ರೆಯ ಅಂಗವಾಗಿ ಸಮವಸ್ತ್ರ ಧರಿಸಿದ ಪೊಲೀಸರು ಈ ಕಾರ್ಯದಲ್ಲಿ ಭಾಗವಹಿಸಿದ್ದರು. ಗಮನಾರ್ಹವೆಂದರೆ ಈ ಘಟನೆಗೂ ತನ್ನ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ತೆಲಂಗಾಣ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ನಲ್ಲಗೊಂಡ ಜಿಲ್ಲೆಯ ಪಾರ್ವತಿ ಜಡೆ ರಾಮಲಿಂಗೇಶ್ವರ ಸ್ವಾಮಿ ಜಾತ್ರೆ ಉತ್ಸವಗಳಲ್ಲಿ ಭಕ್ತರು ಅಗ್ನಿಗುಂಡದ ಮೇಲೆ ನಡೆದುಕೊಂಡು ಹೋಗುವ ಸಂಪ್ರದಾಯವಿದೆ. ಹಲವು ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಮೌಢ್ಯಾಚರಣೆ ನಿಲ್ಲಿಸಬೇಕಾದ ಪೊಲೀಸರೇ ಸಾಮಾನ್ಯ ಭಕ್ತರ ಜತೆಗೆ ಅಗ್ನಿಕುಂಡದಲ್ಲಿ ಹೆಜ್ಜೆ ಹಾಕುವ ಮೂಲಕ ಚರ್ಚೆಗೆ ಆಸ್ಪದ ನೀಡಿದ್ದಾರೆ. ಈ ಬಗ್ಗೆ ಭಾರಿ ಚರ್ಚೆಗಳು ನಡಿಯುತಿದ್ದು, ಸಮವಸ್ತ್ರ ಧರಿಸಿ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೋದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

11 ವರ್ಷದ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ಭೀಕರವಾಗಿ ಅತ್ಯಾಚಾರಗೊಳಗಾಗಿ ಹತ್ಯೆಗೊಳಗಾಗಿದ್ದ ಸೌಜನ್ಯ ಎಂಬ ವಿದ್ಯಾರ್ಥಿನಿಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರು ತನಿಖೆ ಕೋರಿ ಆಕೆಯ ತಂದೆ ರಾಜ್ಯ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಆಧರಿಸಿ ರಾಜ್ಯ ಸರ್ಕಾರ ಮತ್ತು ಸಿಬಿಐ ಕೋರ್ಟ್ ಗೆ ನೋಟಿಸ್ ಜಾರಿ ಮಾಡಲಾಗಿದೆ. 2012ರ ಅಕ್ಟೋಬರ್‌ 9ರಂದು ನಡೆದ ಈ ಘಟನೆಯಲ್ಲಿ ಆರೋಪಿ ಎಂದು ಬಂಧಿತನಾದ ಸಂತೋಷ್‌ ರಾವ್‌ ಗೆ ಸಿಬಿಐ ಕ್ಲೀನ್ ಚೀಟ್ ನೀಡಲಾಗಿತ್ತು. ಹಾಗಿದ್ದರೆ ಕೊಲೆಗಾರ ಯಾರು ಎನ್ನುವ ಪ್ರಶ್ನೆ ಗಾಢವಾಗಿ ಕಾಡುತ್ತಿದ್ದು, ಅದನ್ನು ಪತ್ತೆ ಹಚ್ಚಲು ಮರು ತನಿಖೆಯಾಗಲಿ ಎಂಬ ಬೇಡಿಕೆ ಜೋರಾಗಿ ಕೇಳಿಬಂದಿತ್ತು. ಅದರಂತೆ ಯುವತಿ ತಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ‌ ಸೌಜನ್ಯ ಅವರ ತಂದೆ ಚಂದಪ್ಪ ಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ…

Read More

ಬೆಂಗಳೂರು:  ಅರಣ್ಯದಲ್ಲಿ ಸಸ್ಯಹಾರಿ ಪ್ರಾಣಿಗಳಿಗೆ ಮಾರಕವಾಗಿರುವ ಲಾಂಟನಾ ಕಳೆಯಿಂದ ಆನೆ, ಕಾಡೆಮ್ಮೆ, ಪೀಠೋಪಕರಣ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಆದಿವಾಸಿ ಸಮುದಾಯದವರಿಗೆ ತರಬೇತಿ ಮತ್ತು ಪೋತ್ಸಾಹ ನೀಡಲು 1 ಕೋಟಿ ರೂ. ನೆರವು ನೀಡುವ ಬಗ್ಗೆ ಪರಿಶೀಲಿಸುವುದಾಗಿ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಬೆಂಗಳೂರಿನ ಲಾಲ್ ಬಾಗ್ ನಲ್ಲಿಂದು ಲಾಂಟನಾ ಕಡ್ಡಿಗಳಿಂದ ತಯಾರಿಸಿದ ಕಾಡೆಮ್ಮೆ ಮತ್ತು ಆನೆಯ ಆಕೃತಿಗಳನ್ನು ಅನಾವರಣ ಮಾಡಿ  ಅವರು ಮಾತನಾಡುತ್ತಿದ್ದರು. ಮುಳ್ಳಿನಿಂದ ಕೂಡಿದ ಲಾಂಟನಾ ರಾಜ್ಯದ ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗನ ಬೆಟ್ಟ ಮೊದಲಾದ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿ ವ್ಯಾಪಿಸಿದ್ದು, ಇದರಿಂದ ಆನೆ, ಜಿಂಕೆ ಇತ್ಯಾದಿ ಸಸ್ಯಹಾರಿ ಪ್ರಾಣಿಗಳಿಗೆ ಹುಲ್ಲೂ ಸಿಗದಂತಾಗಿದೆ. ಹೀಗಾಗಿ ಈ ಕಳೆಯನ್ನು ತೆಗೆಯುವುದು ಅನಿವಾರ್ಯವಾಗಿದೆ ಎಂದರು. ಆದಿವಾಸಿಗಳ ನೆರವಿನಿಂದ ಈ ಕಳೆ ತೆಗೆಸಿ, ಅಲಂಕಾರಿಕ ವಸ್ತು ತಯಾರಿಸಿದರೆ ಅದರಿಂದ ಜೀವನೋಪಾಯವೂ ಆಗುತ್ತದೆ, ಕಾಡಿನ ಕಳೆಯ ಸಮಸ್ಯೆಗೂ ಪರಿಹಾರ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರು.

Read More

ಬೆಳಗಾವಿ: ಕೇಂದ್ರ ಸರ್ಕಾರ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಬಂಪರ್‌ ಉಡುಗೊರೆ ನೀಡಿದ್ದು, 6,975 ಕೋಟಿ ರೂ. ಮೌಲ್ಯದ 376 ಕಿ.ಮೀ. ಹೆದ್ದಾರಿ ಕಾಮಗಾರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಅವರು ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಸೇರಿ 8 ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕೇಂದ್ರ ಸರ್ಕಾರ ಈ 8 ಜಿಲ್ಲೆಗಳ‌ 376 ಕಿ.ಮೀ ಉದ್ದದ ರಸ್ತೆಗಳಿಗೆ 6975 ಕೋಟಿ ರೂ.ಗಳ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ನಿತಿನ್ ಗಡ್ಕರಿ ಅವರು, ಬೆಳಗಾವಿ ಮುಂದಿನ ದಿನಗಳಲ್ಲಿ ಎಥೆನಾಲ್‌ ಉತ್ಪಾದನೆ ಅಷ್ಟೇ ಅಲ್ಲ, ವಿಮಾನಗಳ ಇಂಧನ ಉತ್ಪಾದನೆ ಮಾಡುವ ಕೇಂದ್ರವಾಗಲಿದೆ ತಿಳಿಸಿದರು.

Read More

ನವದೆಹಲಿ: ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾನಿರತ ರೈತನ ಸಾವಿಗೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರ ವಿರುದ್ಧ “ಕೊಲೆ” ಪ್ರಕರಣ ದಾಖಲಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಗುರುವಾರ ಒತ್ತಾಯಿಸಿದೆ. ಹರಿಯಾಣ ಪೊಲೀಸರು ಮತ್ತು ಪಂಜಾಬ್ ರೈತರ ನಡುವಿನ ಘರ್ಷಣೆಯಲ್ಲಿ ರೈತ ಸುಭಕರನ್ ಸಿಂಗ್(21) ಅವರು ಬುಧವಾರ ಸಾವನ್ನಪ್ಪಿದ್ದು, ದೆಹಲಿ ಚಲೋ ಮೆರವಣಿಗೆಯನ್ನು ಎರಡು ದಿನ ಸ್ಥಗಿತಗೊಳಿಸಲಾಗಿದೆ. ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧ 2020–21ರಲ್ಲಿ ನಡೆದ ಉಗ್ರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್‌ಕೆಎಂ, ಯುವ ರೈತನ ಸಾವಿಗೆ ಸಂತಾಪ ಸೂಚಿಸಲು ಶುಕ್ರವಾರ ‘ಕರಾಳ ದಿನ’ ಆಚರಿಸುವುದಾಗಿ ಘೋಷಿಸಿದೆ.

Read More

ತುಮಕೂರು: ಮಾಜಿ ಸಂಸದ ಮುದ್ದಹನುಮೇಗೌಡ ಅವರು ಬಿಜೆಪಿ ತೊರೆದು ಬೆಂಗಳೂರಿನ ಕೆಪಿಸಿಸಿ ಭಾರತ್ ಜೋಡೋ ಭವನದಲ್ಲಿ ಅಧಿಕೃತವಾಗಿ ಸೇರ್ಪಡೆಗೊಂಡರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ವೆಂಕಟರಮಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Read More