Subscribe to Updates
Get the latest creative news from FooBar about art, design and business.
- ದೇವಾಲಯದಲ್ಲಿ ಅಕ್ಷರಾಭ್ಯಾಸ ಮಕ್ಕಳ ಜೀವನದ ಶ್ರೇಷ್ಠ ಆರಂಭ: ಡಾ.ಹನುಮಂತನಾಥ ಸ್ವಾಮೀಜಿ
- ಸರಗೂರು: ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಆಷಾಢ ಅಮಾವಾಸ್ಯೆ ಪೂಜೆ; ಬಸ್ ವ್ಯವಸ್ಥೆಯಿಲ್ಲದೆ ಭಕ್ತರ ಪರದಾಟ
- ಹೊಳವನಹಳ್ಳಿ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ಯೋಗೇಶ್ ಅವರಿಗೆ ಬೀಳ್ಕೊಡುಗೆ
- ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ರಾಜಗೋಪುರಕ್ಕೆ 5 ಲಕ್ಷ ದೇಣಿಗೆ
- ಕಾಡುಬೆಗೂರಿನಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರ ಆಗ್ರಹ
- ಸರಗೂರು: ಚಿಕ್ಕದೇವಮ್ಮ ಬೆಟ್ಟದಲ್ಲಿ ಆಷಾಢ ಅಮಾವಾಸ್ಯೆ ವಿಶೇಷ ಪೂಜೆ; ಸಹಸ್ರಾರು ಭಕ್ತರ ಭಾಗಿ
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
Author: admin
ಪಾವಗಡ: ತಾಲೂಕಿನ ನಿಡಗಲ್ಲು ಹೋಬಳಿ ವ್ಯಾಪ್ತಿಯ ಸಿ.ಕೆ.ಪುರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ ಹಾಗೂ ಅಧ್ಯಕ್ಷರು, ಸದಸ್ಯರು ಎಲ್ಲರು ಸೇರಿ ಸಂವಿಧಾನ ಜಾಗೃತಿ ಜಾಥಾ ರಥೋತ್ಸವವನ್ನು ಬಹಳ ಅದ್ದೂರಿಯಾಗಿ ಬರಮಾಡಿಕೊಂಡರು. ಕಲಾವಿದ ಹನುಮಂತರಾಯಪ್ಪ ಸಿ.ಕೆ.ಪುರ ಅವರ ತಂಡದಿಂದ ಅಂಬೇಡ್ಕರ್ ಗೀತೆಯ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ಸಿದ್ದೇಶ್ವರ ಸ್ವಾಮಿ ಪ್ರೌಢಶಾಲೆ ಮುಂಭಾಗದಿಂದ ವಿದ್ಯಾರ್ಥಿಗಳು ಕಲಾ ವೃಂದದವರು, ವಿವಿಧ ವೇಷಭೂಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತಮಟೆ, ಕುಣಿತ ಕುಂಭಮೇಳ ಮೂಲಕ ಅದ್ದೂರಿಯಾಗಿ ರಥವನ್ನು ಸ್ವಾಗತಿಸಿದರು, ತಮಟೆ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೂರ್ಣ ಕುಂಭದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದರು. ಕೆಪಿಸಿಸಿ ಮಾಜಿ ಸದಸ್ಯರಾದ ಕೋಟೆ ಪ್ರಭಾಕರ್ ಜಾಗೃತಿ ಜಾಥಾದ ಬಗ್ಗೆ ಮಾತನಾಡಿ, ಸಿ.ಕೆ.ಪುರ ಗ್ರಾಮ ಪಂಚಾಯಿತಿಗೆ ಸಂವಿಧಾನ ಜಾಥಾ ರಥೋತ್ಸವವನ್ನು ಬಂದಿದೆ, ಅದಕ್ಕೆ ನಾವೆಲ್ಲರೂ ಆಭಾರಿಯಾಗಿದ್ದೇವೆ, ಅಂಬೇಡ್ಕರ್ ಎಂಬ ವ್ಯಕ್ತಿ ಅಸ್ಪೃಶ್ಯತೆಯಿಂದ ಅವಮಾನಗಳನ್ನು ಅನುಭವಿಸುತ್ತ ಎದೆಗುಂದದೆ ಸಂವಿಧಾನವನ್ನು ರಚಿಸಿದರು,…
ಚಾಮರಾಜನಗರ: ಚಾಮರಾಜನಗರದ ಜನ್ನೂರು ಗ್ರಾಮದಲ್ಲಿ ಮಾವನೊಬ್ಬ ಅಳಿಯನನ್ನೇ ಕೊಚ್ಚಿ ಕೊಲೆಗೈದಿರುವ ಘಟನೆ ನಡೆದಿದೆ. ಉಮೇಶ್(28) ಹತ್ಯೆಯಾದವನು. ಮಾವ ನಂಜುಂಡಯ್ಯ ಆರೋಪಿ ಆಗಿದ್ದಾರೆ. ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಳಿಯ ನಿತ್ಯ ಕುಡಿದು ಬಂದು ನಂಜುಂಡಯ್ಯರ ಮಗಳಿಗೆ ತೊಂದರೆ ಕೊಡುತ್ತಿದ್ದ. ಕುಡಿತವನ್ನೇ ಚಟವನ್ನಾಗಿಸಿಕೊಂಡಿದ್ದ ಉಮೇಶ್ ದುಡಿದ ದುಡ್ಡನ್ನೆಲ್ಲ ಕುಡಿತಕ್ಕೆ ಹಾಕುತ್ತಿದ್ದ. ಇದಲ್ಲದೇ ಕುಡಿದು ಬಂದು ಪತ್ನಿಗೆ ಕಿರುಕುಳ ಮಾಡುತ್ತಿದ್ದ. ಇದರಿಂದ ಬೇಸತ್ತು ಅಳಿಯನನ್ನು ಕೊಡಲಿಯಿಂದ ಕೊಚ್ಚಿ ನಂಜುಂಡಯ್ಯ ಕೊಲೆ ಮಾಡಿದ್ದಾರೆ. ಉಮೇಶ್ ಮುಖಕ್ಕೆ ಕೊಡಲಿಯಿಂದ ಕೊಚ್ಚಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುದೇರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿಲಾಗಿದ್ದು, ಮಾವ ನಂಜುಂಡಯ್ಯನನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ನಾಗರಬಾವಿ ರಿಂಗ್ ರಸ್ತೆಯ ಮಲೆಮಹದೇಶ್ವರ ದೇವಸ್ಥಾನದ ಬಳಿ ಖಾಸಗಿ ಬಸ್ ಹರಿದು ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮುರಳಿ(40) ಮೃತ ದುರ್ದೈವಿಯಾಗಿದ್ದಾನೆ. ಮುರಳಿ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭ ವೇಗವಾಗಿ ಬಂದ ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಬೈಕ್ ಸವಾರ ಕೆಳಗೆ ಬಿದ್ದಿದ್ದು, ಬಸ್ ಮುರಳಿ ತಲೆಯ ಮೇಲೆ ಹರಿದಿದೆ. ಇದರಿಂದ ಮುರಳಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜ್ಞಾನಭಾರತಿ ಸಂಚಾರಿ ಠಾಣೆಯಲ್ಲಿ ಪ್ರಕರಣ ನಡೆದಿದೆ. ಸದ್ಯ ಬಸ್ ಚಾಲಕನನ್ನು ಜ್ಞಾನಭಾರತಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿದ ಮುರಳಿ ಮೃತದೇಹವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ದಾವಣಗೆರೆ: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ಜೋಕಾಲಿ ಆಡುತ್ತಿದ್ದ ವಿದ್ಯಾರ್ಥಿಯೊಬ್ಬ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಪಿ.ಜೆ. ಕೊಟ್ರೇಶ್(14) ಮೃತ ವಿದ್ಯಾರ್ಥಿಯಾಗಿದ್ದಾನೆ. ಈತ ಖಾಸಗಿ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದನು. ಬಾಲಕನು ಶಾಲೆ ಮುಗಿಸಿ ಬಂದು ಮನೆಯಲ್ಲಿ ಜೋಕಾಲಿಯಲ್ಲಿ ಕುಳಿತು ಆಟವಾಡುತ್ತಿದ್ದ ಸಂದರ್ಭದಲ್ಲಿ ಜೋಕಾಲಿ ಹಗ್ಗವು ಆಕಸ್ಮಿಕವಾಗಿ ಕೊರಳಿಗೆ ಸುತ್ತಿಕೊಂಡಿದೆ. ಇದರಿಂದಾಗಿ ಹಗ್ಗ ಬಿಗಿಗೊಂಡು ಬಾಲಕನಿಗೆ ಉಸಿರಾಡಲು ಸಾಧ್ಯವಾಗದೇ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೈದರಾಬಾದ್: ಮದುವೆ ಆಗಲು ವೀಡಿಯೋ ನಿರೂಪಕ ನನ್ನು ಅಪಹರಣ ಮಾಡಿಸಿದ್ದ ಮಹಿಳಾ ಉದ್ಯಮಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಭೋಗಿರೆಡ್ಡಿ ತ್ರಿಶಾ ಎಂದು ಗುರುತಿಸಲಾಗಿದೆ. ಆಕೆ ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿ ಎಂದು ತಿಳಿದು ಬಂದಿದೆ. ತ್ರಿಶಾ ಮ್ಯಾಟ್ರಿಮೋನಿಯಲ್ ವೆಬ್‍ಸೈಟ್ ನಲ್ಲಿ ಟಿವಿ ಆಂಕರ್ ಪ್ರಣವ್ ಎಂಬವರ ಪ್ರೊಫೈಲ್ ನೋಡಿ ಮದುವೆ ಪ್ರಸ್ತಾಪ ಮಾಡಿದ್ದಳು. ಈ ಪ್ರಸ್ತಾಪಕ್ಕೆ ಪ್ರಣವ್ ಕಡೆಯಿಂದಲೂ ಒಪ್ಪಿಗೆ ಸಿಕ್ಕಿತ್ತು. ಇದಾದ ಬಳಿಕ ಚಾಟಿಂಗ್ ಆರಂಭಿಸಿ ಹಲವು ತಿಂಗಳ ಬಳಿಕ ಅದು ನಕಲಿ ಪ್ರೊಫೈಲ್ ಎಂದು ತ್ರಿಶಾಗೆ ಗೊತ್ತಾಗಿದೆ. ಇದಾದ ಬಳಿಕ ಆಕೆ ಪ್ರಣವ್ ಅವರ ನಿಜವಾದ ಮೊಬೈಲ್ ನಂಬರ್ ಪಡೆದು ನಡೆದ ವಿಚಾರವನ್ನು ಹೇಳಿಕೊಂಡಿದ್ದಳು. ಅಲ್ಲದೇ ಮದುವೆ ವಿಚಾರ ಪ್ರಸ್ತಾಪಿಸಿದ್ದಳು. ಇದಕ್ಕೆ ಪ್ರಣವ್ ಒಪ್ಪಿರಲಿಲ್ಲ. ಇದರಿಂದ ಬೇಸತ್ತ ತ್ರಿಶಾ ಆಂಕರ್ ನ ಕಾರಿಗೆ ಜಿಪಿಎಸ್ ಟ್ರ್ಯಾಕ್ ಅಳವಡಿಸಿ ಆತನ ಚಲನವಲನಗಳ ಮೇಲೆ ನಿಗಾ ವಹಿಸಿದ್ದ 31 ವರ್ಷದ ಮಹಿಳಾ ಉದ್ಯಮಿ ಹಣ ನೀಡಿ ಅಪಹರಣಕಾರರ ಮೂಲಕ…
ಸ್ನಾಯು ಮತ್ತು ಕೀಲು ನೋವಿಗೆ ಆಯುರ್ವೇದವೇ ಮದ್ದು!: ಅಶ್ವಗಂಧ ಭಾರತ ಮತ್ತು ಉತ್ತರ ಆಫ್ರಿಕಾದಲ್ಲಿ ಕಂಡುಬರುವ ಒಂದು ಸಣ್ಣ ಮರ. ಈ ಸಸ್ಯ ಬೇರುಗಳು ಮತ್ತು ಹಣ್ಣುಗಳನ್ನು ಹೊಂದಿದೆ. ಇದನ್ನು ಅತ್ಯಂತ ಜನಪ್ರಿಯ ಆಯುರ್ವೇದ ಪರಿಹಾರವನ್ನು ಉತ್ಪಾದಿಸಲು ಬಳಸಲಾಗುತ್ತದೆ. ಇದು ನಿಮ್ಮ ದೇಹವು ಒತ್ತಡವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಮೂಲಿಕೆಯು ಒತ್ತಡವನ್ನು ಹೆಚ್ಚಿಸುವ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಸ್ನಾಯು ಮತ್ತು ಕೀಲು ನೋವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಊಟದ ನಂತರ ಬೆಲ್ಲ ತಿಂದರೆ ಇಷ್ಟೆಲ್ಲಾ ಪ್ರಯೋಜನಗಳು..!: ಹಿಂದಿನ ದಿನಗಳಲ್ಲಿ ಅನೇಕ ಜನರು ಬೆಲ್ಲ ತಿನ್ನುತ್ತಿದ್ದರು. ಇದರಿಂದ ಅನೇಕ ಅನುಕೂಲಗಳಿವೆ. ಬೆಲ್ಲವು ಬಿಪಿಯನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ, ಸೋಡಿಯಂ & ಕಬ್ಬಿಣದ ಅಂಶ ಹೇರಳವಾಗಿದೆ. ಇದರಿಂದ ರಕ್ತಹೀನತೆ ದೂರವಾಗಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಆಯಾಸ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುವಲ್ಲಿ ಬೆಲ್ಲ ಚೆನ್ನಾಗಿ ಕೆಲಸ ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ ಬೆಲ್ಲ ಬೆರೆಸಿ ಕುಡಿದರೆ ಜ್ವರ,…
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುಮಾರು ಮೂರು ವರ್ಷಗಳಿಂದ ಪತಿ-ಪತ್ನಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಬ್ಬರೂ ಬೇರೆ ಬೇರೆ ಜಿಲ್ಲೆಯಲ್ಲಿದ್ದಾರೆ. ಇದರಿಂದ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೆಂದು ಪೊಲೀಸ್ ಸಿಬ್ಬಂದಿ ದಯಾಮರಣ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದ ಘಟನೆ ನಡೆದಿದೆ. ಪತಿ ಒಂದು ಜಿಲ್ಲೆಯಲ್ಲಿ ವಾಸ, ಪತ್ನಿ ಇನ್ನೊಂದು ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಇದರಿಂದ ಗಂಡ-ಹೆಂಡತಿ ಜೊತೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ವಿಚ್ಛೇದನ ಪ್ರಕರಣ ಕೂಡ ಹೆಚ್ಚುತ್ತಿವೆ. ಕೆಲ ಸಿಬ್ಬಂದಿ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳಬೇಕಿದೆ. ಹೀಗಾಗಿ ವರ್ಗಾವಣೆ ಕೋರಿ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳು, ಗೃಹ ಇಲಾಖೆ ಮಂತ್ರಿಗಳು ಬಾಯಿ ಮಾತಿನಲ್ಲಿ ವರ್ಗಾವಣೆ ಮಾಡುತ್ತೇವೆ ಅಂತ ಹೇಳುತ್ತಾರೆ. ಆದರೆ ಅಂತರ ಜಿಲ್ಲಾ ವರ್ಗಾವಣೆ ಲಿಖಿತ ರೂಪದಲ್ಲಿ ಬರುತ್ತಿಲ್ಲ ಎಂದು ರಾಜ್ಯದ ಹಲವು ಠಾಣೆಗಳಲ್ಲಿನ ಸಿಬ್ಬಂದಿ ಪತ್ರ ಬರೆದಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಮತ್ತು ಕೆಸಿಎಸ್ಆರ್ ನಿಯಮದ ಪ್ರಕಾರ ಪತಿ-ಪತ್ನಿ ಒಂದೆ ಘಟಕ ಹಾಗೂ ಒಂದೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ನಿಯಮ ಇದ್ದರು…
ಯುವ ಕ್ರಿಕೆಟಿಗರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿರುವ ದುರ್ಘಟನೆ ನಡೆದಿದೆ. ಕೆ.ಹೊಯ್ಸಳ ಹೃದಯಘಾತಕ್ಕೆ ಬಲಿಯಾದ ದುರ್ದೈವಿ ಯುವ ಕ್ರಿಕೆಟಿಗರಾಗಿದ್ದಾರೆ. ವರದಿ ಪ್ರಕಾರ ಪ್ರಸ್ತುತ ನಡೆಯುತ್ತಿರುವ ಏಜಿಸ್ ಸೌತ್ ಝೋನ್ ಟೂರ್ನಿಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಮಣಿಸುವಲ್ಲಿ ಕರ್ನಾಟಕ ತಂಡ ಯಶಸ್ವಿಯಾಗಿತ್ತು. ಈ ವೇಳೆ ತಂಡದೊಂದಿಗೆ ಸಂಭ್ರಮಾಚರಣೆ ಮಾಡಿದ್ದ ಹೊಯ್ಸಳಗೆ ಮೈದಾನದಲ್ಲೇ ಎದೆಯಲ್ಲಿ ನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಯಿತಾದರೂ ಆಸ್ಪತ್ರೆಗೆ ತಲುಪುವಷ್ಟರಲೇ ಹೊಯ್ಸಳ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ಫೆಬ್ರವರಿ 22 ನೇ ಗುರುವಾರದಂದು ಈ ಘಟನೆ ನಡೆದಿದ್ದು, ಫೆಬ್ರವರಿ 23 ರ ಸಂಜೆಯಂದು ಬೆಳಕಿಗೆ ಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಅಸ್ಸಾಂ ಏಕರೂಪ ನಾಗರಿಕ ಸಂಹಿತೆಗೆ. ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆಯನ್ನು ರದ್ದುಪಡಿಸಲು ತೀರ್ಮಾನಿಸಲಾಗಿದ್ದು, ನಿನ್ನೆ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಸ್ಲಿಂ ಹೆಣ್ಣುಮಕ್ಕಳಿಗೆ 18 ವರ್ಷಕ್ಕಿಂತ ಮೊದಲು ವಿವಾಹ ನೋಂದಣಿಯನ್ನು ಸಹ ರದ್ದುಗೊಳಿಸಲಾಗುತ್ತದೆ. ಮುಸ್ಲಿಂ ಹುಡುಗರು ಮತ್ತು ಹುಡುಗಿಯರ ಮದುವೆಯ ವಯಸ್ಸು ಕ್ರಮವಾಗಿ 18 ಮತ್ತು 21 ಆಗಿರುತ್ತದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಸ್ಸಾಂ ಸಚಿವ ಜಯಂತ ಮಲ್ಲ ಬರುವಾ ಮಾಹಿತಿ ನೀಡಿದ್ದಾರೆ. ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡಿಸಲಾಗುವುದು. ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳನ್ನು ನೋಂದಾಯಿಸುವ ಅಧಿಕಾರವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ನೋಂದಣಾಧಿಕಾರಿ ವಹಿಸಿಕೊಳ್ಳಲಿದ್ದಾರೆ ಎಂದು ಸಚಿವರು ಹೇಳಿದರು. ಅಸ್ಸಾಂ ಮುಸ್ಲಿಂ ಮದುವೆ ಮತ್ತು ವಿಚ್ಛೇದನ ನೋಂದಣಿ ಕಾಯಿದೆ 1935 ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 94 ಮುಸ್ಲಿಂ ರಿಜಿಸ್ಟ್ರಾರ್ ಗಳನ್ನು ತಮ್ಮ ಕರ್ತವ್ಯದಿಂದ ಮುಕ್ತಗೊಳಿಸಲಾಗುವುದು ಮತ್ತು…
ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಟಿಯರಿಗೆ ತಮ್ಮ ಅಭಿಮಾನವನ್ನು ತೋರಿಸಲು ಹಲವು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಅನ್ನದಾನ, ರಕ್ತದಾನ, ದಿನಸಿ ನೀಡುವುದು, ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಈ ರೀತಿಯಲ್ಲಿ ತಮ್ಮ ಅಭಿಮಾನ ತೋರಿಸುತ್ತಾರೆ. ಆದರೆ, ಕೆಲವೊಮ್ಮೆ ಅದು ಅತಿರೇಕಕ್ಕೆ ಹೋಗಿಬಿಡುತ್ತದೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದೆ. ಹರ ಹರ ಮಹಾದೇವ ಖ್ಯಾತಿಯ ನಟ, ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಸ್ಪರ್ಧಿ ವಿನಯ್ ಗೌಡ ಅಭಿಮಾನಿಯೊಬ್ಬರು ತಮ್ಮ ರಕ್ತದಲ್ಲಿ ವಿನಯ್ ಗೌಡ ಚಿತ್ರವನ್ನು ಬರೆದಿದ್ದಾರೆ. ಇದನ್ನು ವಿಡಿಯೋ ಮಾಡಿ ವಿನಯ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ನಟ ವಿನಯ್ ಗೌಡ ಕೂಡ ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ರವೀಶ್ ಎಂಬ ಕಲಾವಿದ ವಿನಯ್ ಗೌಡ ಅಭಿಮಾನಿಯಾಗಿರುವ ಚಂದನ್ ಎನ್ನುವವರ ರಕ್ತವನ್ನು ಬಳಸಿ, ನಟ ವಿನಯ್ ಗೌಡ ಚಿತ್ರವನ್ನು ಬರೆದಿದ್ದಾರೆ. ಚಂದನ್ ರಕ್ತವನ್ನು ಒಂದು ಸಿರೆಂಜ್ ಮೂಲಕ ತೆಗೆದುಕೊಂಡು, ಅದರ ಮೂಲಕ ಚಿತ್ರ ಬಿಡಿಸಿರುವುದನ್ನು ವೀಡಿಯೋ ಮಾಡಿದ್ದಾರೆ ಕಲಾವಿದ ರವೀಶ್. ಈ ವಿಡಿಯೋವನ್ನು…