Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ಬೆಂಗಳೂರು: ಇಂದು ಬೆಂಗಳೂರಲ್ಲಿ ನಡೆದ 545 ಪಿಎಸ್ ಐ ನೇಮಕಾತಿ ಮರುಪರೀಕ್ಷೆಯಲ್ಲಿ ಕೆಲವರು ಉದ್ದತೋಳಿನ ಶರ್ಟ್ ಮತ್ತು ಮಹಿಳೆಯರು ಆಭರಣಗಳನ್ನು ಧರಿಸಿ ಬಂದಿದ್ದರು. ಪರೀಕ್ಷಾರ್ಥಿಗಳಿಗೆ ನೀಡಿದ ಸೂಚನೆಗಳಲ್ಲಿ ಪೂರ್ತಿ ತೋಳಿನ ಶರ್ಟ್ ಧರಿಸಿ ಬರಕೂಡದು ಮತ್ತು ಮಹಿಳಾ ಅಭ್ಯರ್ಥಿಗಳು ಯಾವುದೇ ಬಗೆಯ ಅಭರಣ ಧರಿಸಿ ಬರಬಾರದು ಅಂತ ಸ್ಪಷ್ಟವಾಗಿ ಹೇಳಲಾಗಿದ್ದರು ಎನ್ನಲಾಗಿದೆ. ಉದ್ದತೋಳಿನ ಶರ್ಟ್ ಧರಿಸಿ ಬಂದಿದ್ದ ಅಭ್ಯರ್ಥಿಗಳ ಶರ್ಟ್ ತೋಳುಗಳನ್ನು ಪ್ರಾಧಿಕಾರದ ಸಿಬ್ಬಂದಿ ಕತ್ತರಿಸಿ ಅರ್ಧತೋಳು ಮಾಡಿದ್ದಾರೆ. ನೌಕರಿಗಾಗಿ ನಿರೀಕ್ಷಿಸುತ್ತಿರುವ ಯುವಕರು ಅನಿವಾರ್ಯವಾಗಿ ತಮ್ಮ ಅಂಗಿಗಳ ತೋಳನ್ನು ಕತ್ತರಿಸಲು ಒಪ್ಪಲೇ ಬೇಕಾಯಿತು. ಹಾಗೆಯೇ, ಮಹಿಳಾ ಅಭ್ಯರ್ಥಿಗಳು ಆಭರಣಗಳನ್ನು ತೆಗೆದಿಟ್ಟು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಿದರು. ಕೆಲ ಮಹಿಳೆಯರು ಪರೀಕ್ಷೆ ಬರೆಯದೆ ವಾಪಸ್ಸು ಹೋದರೆಂಬ ಮಾಹಿತಿಯೂ ಇದೆ. ಇದರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ್ದೇನೂ ತಪ್ಪಿಲ್ಲಅನ್ನಬಹುದು. ಪರೀಕ್ಷಾರ್ಥಿಗಳಿಗೆ ಮೊದಲೇ ಪರೀಕ್ಷಾ ನಿಬಂಧನೆಗಳನ್ನು ನೀಡಿದ್ದರೆನ್ನಲಾಗಿದೆ.
ಬೆಂಗಳೂರು: ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಂಜಿತಾ (27) ಮೃತ ದುರ್ದೈವಿ. ಐದು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಮೂರು ವರ್ಷದ ಹೆಣ್ಣು ಮಗು ಇದೆ. ರಂಜಿತಾ ವೃತ್ತಿಯಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದರೆ, ಪತಿ ಮಧು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾದಗಿನಿಂದಲೂ ಮಧು ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ವರದಕ್ಷಿಣೆ ನೀಡಿಲ್ಲವೆಂದು ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆಂದು ರಂಜಿತಾ ಪೋಷಕರು ಆರೋಪ ಮಾಡಿದ್ದಾರೆ. ವರದಕ್ಷಿಣೆ ಕಿರುಕುಳದ ಬಗ್ಗೆ ರಂಜಿತಾ ಆಗಾಗ ತಾಯಿ ಬಳಿ ಹೇಳಿದ್ದರು. ಅಲ್ಲದೆ ರಂಜಿತಾ ಸಾವಿಗೂ ಮುನ್ನ ತಾಯಿಗೆ ವಿಡಿಯೋ ಕಾಲ್ ಮಾಡಿದ್ದರು. ಬಳಿಕ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಜ್ಞಾನಭಾರತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಡ್ಯ: ಶಿಕ್ಷಕಿಯನ್ನು ಕೊಲೆ ಮಾಡಿ ಮಣ್ಣಲ್ಲಿ ಹೂತುಹಾಕಿರುವ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಪರಿಚಯಸ್ಥ ಯುವಕನಿಂದಲೇ ಶಿಕ್ಷಕಿಯ ಕೊಲೆ ನಡೆದಿದೆ ಎಂದು ಇದೀಗ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಯಾವಾಗ ಶಿಕ್ಷಕಿ ದೀಪಿಕಾ ಮೃತದೇಹ ಪತ್ತೆಯಾಯಿತು ಅಂದಿನಿಂದ ಯುವಕ ಗ್ರಾಮದಿಂದ ನಾಪತ್ತೆಯಾಗಿದ್ದಾನೆ. ಶಿಕ್ಷಕಿ ದೀಪಿಕಾ ಅವರ ಮೊಬೈಲ್ ಪರಿಶೀಲಿಸಿದಾಗ ಕೊನೆಯದಾಗಿ ಕರೆ ಬಂದಿದ್ದು ಇದೇ ಯುವಕನದ್ದಾಗಿದೆ. ಜನವರಿ 20ರಂದು ಮೃತ ಶಿಕ್ಷಕಿ ದೀಪಿಕಾಗೆ ಮಧ್ಯಾಹ್ನ 12 ಗಂಟೆಗೆ ಪರಿಚಯಸ್ಥ ಯುವಕನಿಂದ ಕರೆ ಬಂದಿದ್ದು, ಗ್ರಾಮದ ಯುವಕನ ಮೇಲೆ ಪೋಷಕರು ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶ್ರೀರಂಗಪಟ್ಟಣದ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಹಾಗೂ ಯುವಕ ಜಗಳವಾಡುತ್ತಿದ್ದನ್ನು ಪ್ರವಾಸಿಗರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. 13 ಸೆಕೆಂಡ್ ಗಳ ಈ ವಿಡಿಯೋವನ್ನು ಪ್ರವಾಸಿಗರು ಪೊಲೀಸರಿಗೆ ನೀಡಿದ್ದಾರೆ. ಜನವರಿ 20ರ ನಂತರ ದೀಪಿಕಾ ಶಾಲೆ ಮುಗಿಸಿಕೊಂಡು ಬರುವಾಗ ಅಡ್ಡಗಟ್ಟಿ ಹತ್ಯೆಗೈದು ಬೆಟ್ಟದ ತಪಲಿನಲ್ಲಿ ಗುಂಡಿ ತೆಗೆದು ಮೃತದೇಹವನ್ನು ಮುಚ್ಚಿದ್ದಾನೆ. ಇದೀಗ ನಾಪತ್ತೆಯಾಗಿರುವ ಯುವಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಬೆಳಗ್ಗೆ 7ರಿಂದ 9.30ರವರೆಗೆ ಶಾಲಾ ವಾಹನಗಳ ತಪಾಸಣೆ ನಡೆಸಿದ್ದು ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿ ಶಾಲಾ ವಾಹನ ಓಡಿಸುತ್ತಿದ್ದ ಚಾಲಕರು ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಸುಮಾರು 3,414 ಶಾಲಾ ವಾಹನಗಳನ್ನು ತಪಾಸಣೆ ಮಾಡಿದ್ದು ಈ ಪೈಕಿ 16 ಚಾಲಕರು ಮದ್ಯಸೇವಿಸಿ ಶಾಲಾ ವಾಹನ ಚಾಲನೆ ಮಾಡಿದ್ದು ಬೆಳಕಿಗೆ ಬಂದಿದೆ. 16 ಶಾಲಾ ಚಾಲಕರ ವಿರುದ್ಧ ಸಂಚಾರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಕುಡಿದು ವಾಹನ ಚಲಾಯಿಸುತ್ತಿದ್ದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. 16 ಚಾಲಕರ ವಾಹನ ಪರವಾನಗಿ ಪತ್ರ ಆರ್ ಟಿಒ ಕಚೇರಿಗೆ ರವಾನಿಸಲಾಗಿದೆ.
ತಿಪಟೂರು: ವಿನಾಯಕ ನಗರದ ರಾಘವೇಂದ್ರ ಬಡಾವಣೆಯ ಅಯೋಧ್ಯ ಶ್ರೀ ರಾಮ ವಿದ್ಯಾರ್ಥಿ ಮತ್ತು ನಾಗರೀಕರ ಬಳಗದ ವತಿಯಿಂದ ಅಯೋಧ್ಯ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶ್ರೀರಾಮ ಭಾವಚಿತ್ರಕ್ಕೆ ಪುಷ್ಪಾರ್ಚನೆ, ವಿಶೇಷ ಪೂಜೆ, ದೀಪ ಬೆಳಗಿಸುವ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಬಡಾವಣೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ನಗರಸಭಾ ಸದಸ್ಯ ಸಂಗಮೇಶ್ (ಕೇಬಲ್), ಸಾಹಿತಿ ದಿಬ್ಬದಹಳ್ಳಿ ಶ್ಯಾಮ ಸುಂದರ್ ಹಾಗೂ ಚಿತ್ರಾ ಗ್ಲಾಸ್ ನ ತೋಂಟದಾರ್ಯ ಉದ್ಘಾಟಿಸಿ, ಮಾತನಾಡಿದರು. ಕೃಷ್ಣಪ್ರಸಾದ್, ಶಿವಾಜಿ, ಸಂಗೀತ ರಮೇಶ್, ಉತ್ತಮ್ ಮತ್ತು ರಂಗನಾಥ್ ಸೇರಿದಂತೆ ಬಡಾವಣೆಯ ಮಹಿಳೆಯರು,ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ: ಆನಂದ ತಿಪಟೂರು
ತುಮಕೂರು: ನಗರದ ನಜರಾಬಾದ್ ಬಡಾವಣೆ ವಾಸಿ ಆಝಮ್ ಪಾಷಾ (37) ಮೀಟರ್ ಬಡ್ಡಿ ದಂಧೆಕೋರರ ಕಾಟಲ್ಕೆ ಬೇಸತ್ತು ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತುಮಕೂರಿನ ಸದಾಶಿವನಗರದಲ್ಲಿ 2 ತಿಂಗಳ ಹಿಂದೆ ಒಂದೇ ಕುಟುಂಬದ ಐದು ಮಂದಿ ಮೀಟರ್ ಬಡ್ಡಿ ದಂಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು, ಮೀಟರ್ ಬಡ್ಡಿ ದಂಧೆಕೋರರ ದಬ್ಬಾಳಿಕೆಗೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇನ್ನು ನಗರದಲ್ಲಿ ನಿರಂತರವಾಗಿ ಒಂದಲ್ಲ ಒಂದು ಮೀಟರ್ ಬಡ್ಡಿ ದಂಧೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆತ್ಮಹತ್ಯೆಗೆ ಯತ್ನಿಸಿದ ನಜರಾಬಾದ್ ಬಡಾವಣೆಯ ನಿವಾಸಿ ಅಝಮ್ ಪಾಷಾ, ಖಾಸಗಿಯಾಗಿ ಕೈಸಾಲವನ್ನು ಪಡೆದಿದ್ದು ಮರು ಪಾವತಿಸಲಾರದೇ ಈ ನಿರ್ಧಾರ ತೆಗೆದು ಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಮೀಟರ್ ಬಡ್ಡಿ ದಂಧೆಕೋರರ ಕಾಟ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆ…
ಯುವಕನೊಬ್ಬ ತೃತೀಯಲಿಂಗಿಯೊಬ್ಬಳನ್ನು ಮದುವೆಯಾಗಿರುವ ಘಟನೆ ತೆಲಂಗಾಣ ಖಮ್ಮಂ ಜಿಲ್ಲೆಯ ಎಂಕೂರಿನಲ್ಲಿ ನಡೆದಿದೆ. ಎನ್ನೂರಿನ ತೃತೀಯಲಿಂಗಿ ನಕ್ಷತ್ರ ಮತ್ತು ಆಂಧ್ರದ ಎನ್ ಟಿಆರ್ ಜಿಲ್ಲೆಯ ವಿಸ್ಸನ್ನಪೇಟೆಯ ಯುವಕ ನಂದು ಇನ್ ಸ್ಟಾ ಪರಿಚಯವಾಗಿ, ಇದು ಪ್ರೀತಿಗೆ ತಿರುಗಿತ್ತು. ಈ ವಿಷಯವನ್ನು ತೃತೀಯಲಿಂಗಿ ಸಮುದಾಯದವರಿಗೆ ತಿಳಿಸಿದಾಗ, ಅವರು ಈ ಮದುವೆಗೆ ಸಹಮತವನ್ನು ನೀಡಿದ್ದು, ಏಣಕೂರು ಮಂಡಲದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಿನ್ನೆ ಅದ್ಧೂರಿ ವಿವಾಹವಾಗಿದ್ದಾರೆ.
ಪುಂಗನೂರು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದ ಚಿತ್ತೂರು ಜಿಲ್ಲೆಯ ಕೆಲವು ಭಾಗಗಳಿಗೆ ಸ್ಥಳೀಯವಾಗಿರುವ ಕುಬ್ಬ ತಳಿಯಾಗಿದೆ. ಅವುಗಳನ್ನು ವಿಶ್ವದ ಅತ್ಯಂತ ಕಡಿಮೆ ಗೂನು ಜಾನುವಾರು ಎಂದು ಪರಿಗಣಿಸಲಾಗಿದೆ. ಇವುಗಳು ನೋಡಲು ಚಿಕ್ಕಾದಾಗಿದ್ದು, ಸುಲಭವಾಗಿ ಮನೆಯಲ್ಲಿ ಸಾಕಬಹುದಾಗಿದೆ. ಪುಂಗನೂರು ಹಸುಗಳು ಬಿಳಿ, ಬೂದು, ತಿಳಿ ಕಂದು ಅಥವಾ ಗಾಢ ಕಂದು ಬಣ್ಣದ್ದಾಗಿರಬಹುದು. ಅವು 10-15 ಸೆಂ.ಮೀ. ಉದ್ದದ ಸಣ್ಣ, ಅರ್ಧಚಂದ್ರಾಕಾರದ ಕೊಂಬುಗಳನ್ನು ಹೊಂದಿರುತ್ತವೆ. ಹೆಣ್ಣು ಕೂಡ ಸ್ವಲ್ಪ ಉದ್ದವಾದ ಕೊಂಬುಗಳನ್ನು ಹೊಂದಿರುತ್ತದೆ.
ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಇದೇ 25 ರಂದು ಆರಂಭವಾಗಲಿದೆ. ಈ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಟ್ರೀತ್ ಬುಮ್ರಾ, ಅವೇಶ್ ಖಾನ್.
ಇಂದು 545 ಪಿಎಸ್ ಐ ನೇಮಕಾತಿ ಮರು ಪರೀಕ್ಷಾ ಕೇಂದ್ರಗಳ ಸುತ್ತಾ ಮುತ್ತಾ 200 ಮೀಟರ್ ವ್ಯಾಪ್ತಿಯಲ್ಲಿ(144 ಸೆಕ್ಷನ್) ನಿಷೇಧಾಜ್ಞೆ ಜಾರಿ ಮಾಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ರಿಂದ ಆದೇಶ ಹೊರಡಿಸಲಾಗಿದೆ. ಪರೀಕ್ಷೆ ವೇಳೆ ಯಾವುದೇ ಪರೀಕ್ಷಾ ಅಕ್ರಮ ಚಟುವಟಿಕೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲೂ 144 ಸೆಕ್ಷನ್ ಜಾರಿ ಮಾಡಿ ಕಮಿಷನರ್ ಆದೇಶಿಸಿದ್ದಾರೆ. ಇಂದು ಬೆಂಗಳೂರು ನಗರದ 117 ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬರನ್ನೂ ಲೋಹಶೋಧಕ ಯಂತ್ರದ ಮೂಲಕ ತಪಾಸಣೆ ನಡೆಸಲಾಗುವುದು. ಪರೀಕ್ಷಾ ಕೇಂದ್ರಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಭೇಟಿ ನೀಡಲಿದ್ದಾರೆ. ಅಭ್ಯರ್ಥಿಗಳು ವಸ್ತ್ರ ಸಂಹಿತೆಯಲ್ಲಿನ ಸೂಚನೆಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಎಲೆಕ್ಟ್ರಾನಿಕ್ ಸಾಧನಗಳನ್ನು ತರುವುದನ್ನಾಗಲಿ, ಮೊಬೈಲ್ ಇಟ್ಟುಕೊಂಡು ಬರುವುದನ್ನಾಗಲಿ ನಿಷೇಧಿಸಲಾಗಿದೆ. ಪೊಲೀಸರು ಪರೀಕ್ಷಾ ಕೇಂದ್ರಗಳ ಸುತ್ತ ಅನುಮಾನಾಸ್ಪದವಾಗಿ ಓಡಾಡುವವರು, ಗಾಳಿಸುದ್ದಿ ಹಬ್ಬಿಸುವ ಕಿಡಿಗೇಡಿಗಳು ಮತ್ತು ಜೆರಾಕ್ಸ್ ಅಂಗಡಿಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ.