Subscribe to Updates
Get the latest creative news from FooBar about art, design and business.
- ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಯುಜಿಸಿ ಗಮನಹರಿಸಬೇಕಿದೆ: ಡಾ.ಜಿ.ಪರಮೇಶ್ವರ್
- ತುಮಕೂರು: ಜುಲೈ 15ರಿಂದ ಉಚಿತ ಯೋಗ ತರಬೇತಿ, ತರಗತಿಗಳು ಆರಂಭ
- ಅರಸೀಕೆರೆ–ಯಲಹಂಕ ಮೆಮು ರೈಲಿಗೆ ಹಸಿರು ನಿಶಾನೆ
- ಮಾದಕ ವ್ಯಸನಗಳಿಗೆ ಒಳಗಾದರೆ ನಿಮ್ಮ ಇಡೀ ಜೀವನವೇ ನಾಶವಾಗುತ್ತದೆ: ಜನಜಾಗೃತಿ ವೇದಿಕೆ ಸದಸ್ಯ ಶಿವಕುಮಾರ್
- ಪ್ರತಿ ಠಾಣೆಗಳಲ್ಲಿ 2ನೆ ಭಾನುವಾರ ಪರಿಶಿಷ್ಟರ ಸಭೆ: ಪ್ರಿಯಾಂಕ್ ಖರ್ಗೆ
- ಮೀನುಗಾರರಿಗೆ ಸೌಲಭ್ಯ ಸಹಾಯಧನ : ಅರ್ಜಿ ಆಹ್ವಾನ
- ಪಿ.ಆರ್.ಸಿ. ಕಾಯ್ದೆ ಮೂಲಕ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಲು ಹುನ್ನಾರ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
- ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ
Author: admin
ಅಮೆರಿಕದ ಚಿಕಾಗೋದಲ್ಲಿ ನಡೆದ ಮೂರು ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಹಿಂಸಾಚಾರಕ್ಕೆ ಕಾರಣ ಸ್ಪಷ್ಟವಾಗಿಲ್ಲ. ದಾಳಿಕೋರ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎಂಟು ಜನರು ತಮ್ಮ ಮನೆಗಳಲ್ಲಿ ಕೊಲ್ಲಲ್ಪಟ್ಟರು. ಎರಡು ದಿನಗಳ ನಂತರ ಶವಗಳು ಪತ್ತೆಯಾಗಿವೆ. ಭಾನುವಾರ ಒಬ್ಬರ ಶವ ಅವರ ಮನೆಯಲ್ಲಿ ಪತ್ತೆಯಾಗಿದ್ದು, ಸೋಮವಾರ ಎರಡು ಮನೆಗಳಲ್ಲಿ ಏಳು ಮಂದಿಯ ಶವ ಪತ್ತೆಯಾಗಿದೆ. ಶಂಕಿತ ವ್ಯಕ್ತಿ ಶಸ್ತ್ರಸಜ್ಜಿತನಾಗಿದ್ದು, ಜಾಗರೂಕರಾಗಿರಬೇಕು ಎಂದು ಪ್ರದೇಶದ ನಿವಾಸಿಗಳಿಗೆ ಸೂಚಿಸಲಾಗಿದೆ. ಇವರು 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತನಿಖೆ ನಡೆಸುತ್ತಿರುವ ಪೊಲೀಸ್ ಮುಖ್ಯಸ್ಥ ವಿಲಿಯಂ ಇವಾನ್ಸ್ ಅವರು “ಈ ಅವಧಿಯಲ್ಲಿ ನಾನು ಎದುರಿಸಿದ ಅತ್ಯಂತ ಘೋರ ಅಪರಾಧ” ಎಂದು ಹೇಳಿದ್ದಾರೆ.
ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ವೇಳೆ ಹೃದಯಾಘಾತಕ್ಕೊಳಗಾದ ರಾಮ ಭಕ್ತನ ನೆರವಿಗೆ ಭಾರತೀಯ ವಾಯುಸೇನೆ ಮುಂದಾಗಿದೆ. ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಸಮಯೋಚಿತ ಮಧ್ಯಪ್ರವೇಶದಿಂದ ಭಕ್ತನ ಪ್ರಾಣ ಉಳಿಯಿತು. ರಾಮಕೃಷ್ಣ ಶ್ರೀವಾಸ್ತವ(65) ದೇವಸ್ಥಾನದ ಸಂಕೀರ್ಣದೊಳಗೆ ಕುಸಿದು ಬಿದ್ದಿದ್ದಾರೆ. ವಿಂಗ್ ಕಮಾಂಡರ್ ಮನೀಶ್ ಗುಪ್ತಾ ನೇತೃತ್ವದ ‘ಭೀಷ್‌ಎಂ’ ಕ್ಯೂಬ್ ತಂಡವು ಅವರನ್ನು ಅಲ್ಲಿಂದ ಸ್ಥಳಾಂತರಿಸಿತು ಮತ್ತು ನಿಮಿಷಗಳಲ್ಲಿ ಪ್ರಥಮ ಚಿಕಿತ್ಸೆ ನೀಡಿತು. ನಂತರ ಹೆಚ್ಚಿನ ವೀಕ್ಷಣೆ ಮತ್ತು ವಿಶೇಷ ಆರೈಕೆಗಾಗಿ ಅವರನ್ನು ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಿರ್ಣಾಯಕ ಸುವರ್ಣ ಯುಗದಲ್ಲಿ ತಕ್ಷಣದ ಚಿಕಿತ್ಸೆಯನ್ನು ಖಚಿತಪಡಿಸಿಕೊಂಡಿದ್ದರಿಂದ ಮಾತ್ರ ಜೀವಗಳನ್ನು ಉಳಿಸಲಾಗಿದೆ ಎಂದು ವೈದ್ಯರು ಹೇಳಿದರು. ಆರಂಭಿಕ ಮೌಲ್ಯಮಾಪನದಲ್ಲಿ, ಶ್ರೀವಾಸ್ತವ ಅವರ ರಕ್ತದೊತ್ತಡ ಅಪಾಯಕಾರಿಯಾಗಿ ಹೆಚ್ಚಿರುವುದು ಕಂಡುಬಂದಿದೆ. 65 ವರ್ಷದ ವ್ಯಕ್ತಿಯ ಸ್ಥಿತಿ ಸುಧಾರಿಸಿದೆ ಎಂದು ವಾಯುಪಡೆಯ ಹೇಳಿಕೆ ತಿಳಿಸಿದೆ.
ಸೂರ್ಯೋದಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಒಂದು ಕೋಟಿ ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಗುರಿಯನ್ನು ಹೊಂದಿರುವ ಯೋಜನೆಯನ್ನು ಘೋಷಿಸಲಾಗಿದೆ. ಅಯೋಧ್ಯೆಯಿಂದ ವಾಪಸಾದ ಬಳಿಕ ತಾವು ಕೈಗೊಳ್ಳಲಿರುವ ಮೊದಲ ನಿರ್ಧಾರ ಇದು ಎಂದು ನರೇಂದ್ರ ಮೋದಿ ಅವರು ಈ ಘೋಷಣೆ ಮಾಡಿದ್ದಾರೆ. ಮನೆಯ ವಿದ್ಯುತ್ ಬಿಲ್ ಗಳನ್ನು ಕಡಿಮೆ ಮಾಡುವುದು ಮತ್ತು ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವುದು ಯೋಜನೆಯ ಗುರಿಯಾಗಿದೆ ಎಂದು ಪ್ರಧಾನಿ ವಿವರಿಸಿದರು. ಪ್ರಪಂಚದಾದ್ಯಂತದ ಭಕ್ತರು ಯಾವಾಗಲೂ ಸೂರ್ಯವಂಶಿಯಾದ ಶ್ರೀರಾಮನ ಬೆಳಕಿನಿಂದ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಇಂದು, ಅಯೋಧ್ಯೆಯಲ್ಲಿ ಅಭಿಷೇಕದ ಶುಭ ಸಂದರ್ಭದಲ್ಲಿ, ಸೂರ್ಯೋದಯ ಯೋಜನೆಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ ಎಂದು ನರೇಂದ್ರ ಮೋದಿ ಹೇಳಿದರು. ಅಯೋಧ್ಯೆಯ ಅಧಿದೇವತೆ ಈ ಯೋಜನೆಯ ಕುರಿತು ಸರ್ಕಾರದ ಚಿಂತನೆಗಳಿಗೆ ಹೆಚ್ಚಿನ ಬಲವನ್ನು ನೀಡಿದೆ ಎಂದು ಮೋದಿ ಹೇಳಿದರು.
ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕು ಯರೇಕುಪ್ಪಿ ಗ್ರಾಮದಲ್ಲಿ ಅಯೋಧ್ಯೆಯ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯವಾಗಿ ಯರೇಕುಪ್ಪಿ ಗ್ರಾಮದಲ್ಲಿ ಬೆಳಿಗ್ಗೆ ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಕಾರ್ಯಕ್ರಮ ನೆರವೇರಿತ್ತು. ನಂತರ ಶ್ರೀ ಪ್ರಭು ಶ್ರೀರಾಮಚಂದ್ರನ ಭಾವಚಿತ್ರ ಮೆರವಣಿಗೆ ನಡೆಸಲಾಯಿತು . ಮೆರವಣಿಗೆಯಲ್ಲಿ ಶ್ರೀ ದುರ್ಗಾದೇವಿ ಹಲಗಿ ಮೇಳ, ಶ್ರೀ ವೀರಭದ್ರೇಶ್ವರ ಸಮಾಳ, ಶ್ರೀ ಮಾರುತಿ ಹವ್ಯಾಸಿ ಭಜನಾ ಸಂಘ, ಶ್ರೀ ಮಾರುತಿ ಸೌಂಡ್ಸ್ , ಮತ್ತು ಎಲ್ಲಾ ಶ್ರೀರಾಮ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಶ್ರೀ ಪ್ರಭು ಶ್ರೀರಾಮಚಂದ್ರನ ಪ್ರಸಾದ ನಡೆಯಿತು . ಸಾಯಂಕಾಲ ದೀಪೋತ್ಸವ ಹಾಗೂ ಶ್ರೀ ಕಡಕೇರಮ್ಮ ದೇವಿ ಕೋಲಾಟ ಮೇಳ ಹಾಗೂ ಶಾಲಾ ಮಕ್ಕಳ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಯರೇಕುಪ್ಪಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಪಾಲ್ಗೊಂಡು ಜೈ ಶ್ರೀ ರಾಮ್ ಎಂದು ಘೋಷಣೆ ಮೊಳಗಿಸಿದ್ದರು. ವರದಿ: ಮಂಜು ಶ್ರವಣೂರು.
ಇಂದಿನಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ಸಾರ್ವಜನಿಕರಿಗೆ ತೆರೆಯಲಿದೆ. ಬೆಳಿಗ್ಗೆ 6:30 ರಿಂದ ದರ್ಶನ ಪ್ರಾರಂಭವಾಗುತ್ತದೆ. ಪ್ರತಿದಿನ ಒಂದು ಲಕ್ಷ ಜನರು ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿದೆ. ಯುಪಿ ಪೊಲೀಸರ ವಿಶೇಷ ತಂಡವು ಸಿಆರ್ ಪಿಎಫ್ ನಿಂದ ದೇವಾಲಯದ ಭದ್ರತೆಯನ್ನು ವಹಿಸಿಕೊಳ್ಳಲಿದೆ. ಪ್ರಾಣ ಪ್ರತಿಷ್ಠೆಗಾಗಿ ಆಹ್ವಾನಿತ ಅತಿಥಿಗಳಿಗೆ ಮಾತ್ರ ನಿನ್ನೆಯ ದರ್ಶನ. ನಿನ್ನೆ ಮಧ್ಯಾಹ್ನ 12.20 ರಿಂದ 12.30ರ ನಡುವೆ ಪ್ರಾಣ ಪ್ರತಿಷ್ಠೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇವಸ್ಥಾನದ ಗರ್ಭಗೃಹದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ನೆರವೇರಿತು. ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭವು ಭಾವನಾತ್ಮಕ ಕ್ಷಣವಾಗಿದೆ ಎಂದು ಸಮಾರಂಭದ ನಂತರ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಹೆಚ್.ಡಿ.ಕೋಟೆ: ದಲಿತ ಸಂಘರ್ಷ ಸಮಿತಿ ಸರ್ವ ಸದಸ್ಯರ ಸಭೆ ಹೆಚ್ ಡಿ ಕೋಟೆ ತಾಲೂಕಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ವೇದಿಕೆಯ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಕೆ.ಎನ್.ಲಿಂಗಪ್ಪ, ಸ್ವಾಭಿಮಾನ ಸಮಾನತೆ ಸ್ವಾವಲಂಬನೆ ಕನಸು ಹೊತ್ತು ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸುತ್ತ ಬಂದಿದೆ, ಪ್ರಸ್ತುತ ವರ್ತಮಾನದ ಪರಿಸ್ಥಿತಿಯಲ್ಲಿ ಸಂಘಟನೆ ಬಲವರ್ಧನೆ ಆಗಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಂಚಾಲಕರದ ಕೋಟೆ ಬೆಟ್ಟಯ್ಯ ಮಾತನಾಡಿ, ಕೋಮುವಾದಿಗಳು, ಮತ್ತು ಬಂಡವಾಳ ಶಾಹಿಗಳು ಒಡ್ದುವ ಸವಾಲುಗಳಿಗೆ ಪ್ರತ್ಯುತ್ತರ ನೀಡಲು ಕಾರ್ಯಕರ್ತರಲ್ಲಿ ನೈತಿಕತೆ ಬದ್ಧತೆ ದೃಢತೆ ಬೆಳಸಿಕೊಳ್ಳುವುದು ಅತ್ಯವಶ್ಯಕ ಎಂದು ಹೇಳಿದರು ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಹೋಬಳಿ ವಾರು ತಾಲೂಕುವಾರು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹೆಗ್ಗನೂರು ನಿಂಗರಾಜು, ಆಲಗೂಡು ಶಿವಕುಮಾರ್, ಮುತ್ತು, ಸಿದ್ದರಾಜು, ಮಹೇಶ್ ಮಲಾರ, ದಾಸಯ್ಯ, ಪುಟ್ಟರಾಜು, ಸೋಮಸುಂದರ್ ಹಾಗೂ ಸುಮಾರು ಐನೂರಕ್ಕೂ ಅಧಿಕ ಕಾರ್ಯ ಕರ್ತರು,…
ದೊಡ್ಡಬಳ್ಳಾಪುರ: ಬೈಕ್ ಮತ್ತು ಪೆಟ್ರೋಲ್ ಟ್ಯಾಂಕರ್ ನಡುವೆ ಅಪಘಾತವಾಗಿ, ವೃದ್ಧರೊಬ್ಬರು ಗಾಯಗೊಂಡಿರುವ ಘಟನೆ ನಗರದ ಟಿ.ಬಿ. ಸರ್ಕಲ್ ಬಳಿ ನಡೆದಿದೆ. ಹನುಮಂತರಾಯಪ್ಪ(60) ಅಪಘಾತಕ್ಕೆ ಒಳಗಾದ ವ್ಯಕ್ತಿ. ದೊಡ್ಡಬಳ್ಳಾಪುರದ ಕೆಳಗಿನ ಜೂಗಾನಹಳ್ಳಿಯ ನಿವಾಸಿಯಾದ ಇವರು, ದೊಡ್ಡಬಳ್ಳಾಪುರದಿಂದ ದಾಬಸ್ ಪೇಟೆ ಕಡೆ ಪ್ರಯಾಣಿಸುವ ವೇಳೆ ಘಟನೆ ನಡೆದಿದೆ. ವೃದ್ಧನ ಕೈ ಕಾಲುಗಳಿಗೆ ಗಾಯಗಳಾಗಿವೆ. ಬೈಕ್ ಮೇಲೆ ಟ್ಯಾಂಕರ್ ಹಿಂಬದಿ ಚಕ್ರ ಹರಿದ ಕಾರಣ ಬೈಕ್ ನಜ್ಜುಗುಜ್ಜಾಗಿದ್ದು, ಗಾಯಾಳುವನ್ನು ದೊಡ್ಡಬಳ್ಳಾಪುರದ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆಯ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ರಾಮಮಂದಿರ ಪ್ರತಿಷ್ಠಾಪನೆಗೊಳ್ಳುತ್ತಿರುವ ಈ ಪವಿತ್ರವಾದ ಅಯೋಧ್ಯೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಇಂದು ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಹಾಗೂ ಎಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ನಿಖಿಲ್ ಕುಮಾರಸ್ವಾಮಿ ವಿಮಾನದಲ್ಲಿ ಅಯೋಧ್ಯೆಗೆ ತೆರಳಿದರು. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಆಹ್ವಾನಿತರಲ್ಲಿ ನಿಖಿಲ್ ಕುಮಾರಸ್ವಾಮಿ ಕೂಡ ಒಬ್ಬರಾಗಿದ್ದಾರೆ. ಜನವರಿ (22) ಆದ ಇಂದು ನಟ ನಿಖಿಲ್ ಕುಮಾರಸ್ವಾಮಿಯವರ ಹುಟ್ಟುಹಬ್ಬವಾಗಿದೆ. ಶ್ರೀರಾಮ ಜನ್ಮ ಭೂಮಿಯಲ್ಲಿಯೇ ನಿಖಿಲ್ ಕುಮಾರಸ್ವಾಮಿ ಅವರು ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ಪುಣ್ಯಭೂಮಿ ಅಯೋಧ್ಯೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದು, ನನ್ನ ಪುಣ್ಯ ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಿದ್ದು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಮುಂದೆ ಕಾಶಿ, ಮಥುರಾದಲ್ಲೂ ದೇವಾಲಯ ನಿರ್ಮಾಣವಾಗಲಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು. ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ, ರಾಮಲಲ್ಲಾ ಮೂರ್ತಿ ಉದ್ಘಾಟನೆಯಾದ ಹಿನ್ನೆಲೆ ಸಾರ್ವಜನಿಕರಿಗೆ ಸಿಹಿ ಹಂಚಿ ನಂತರ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಈ ದಿನ ನಮ್ಮಲ್ಲರಿಗೂ ಸುದಿನ. ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯಾಗಿದೆ. ಮುಂದೆ ಕಾಶಿ ಮಥುರಾದಲ್ಲಿ ದೇವಾಲಯ ನಿರ್ಮಾಣವಾಗಲಿದೆ ಎಂದರು. ಮೋದಿ ವಿಶ್ವನಾಯಕ. ಇಲ್ಲಿ ಸಿಎಂ ಸಿದ್ದರಾಮಯ್ಯ ಓರ್ವ ಖಳನಾಯಕನ ರೀತಿ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಲಿದೆ ಎಂದು ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.
ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸದ ಉದಯವಾಗಲಿದೆ. ಇಂದು ನಮ್ಮ ರಾಮ ಬಂದಿದ್ದಾನೆ. ಶ್ರೀರಾಮನ ಆಗಮನದಿಂದ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು. ಇಂದು ರಾಮಜನ್ಮಭೂಮಿ ಅಯೋಧ್ಯೆ ರಾಮಮಂದಿರದಲ್ಲಿ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಬಳಿಕ ಸಾರ್ವಜನಿಕ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಇಂದು ನಮ್ಮ ರಾಮ ಬಂದಿದ್ದಾನೆ. ಅನೇಕ ಜನರ ತ್ಯಾಗ, ಬಲಿದಾನ, ಶ್ರಮದ ಫಲವಾಗಿ ಪ್ರಭು ಶ್ರೀರಾಮ ಚಂದ್ರ ಮತ್ತೆ ಬಂದಿದ್ದಾನೆ. ವರ್ಷಗಳ ಹೋರಾಟದ ಬಳಿಕ ರಾಮ ಬಂದಿದ್ದಾನೆ. ಈ ಶುಭ ಘಳಿಗೆ ಹಿನ್ನೆಲೆ ಎಲ್ಲರಿಗೂ ಶುಭಾಶಯ. ಹೇಳಲು ಎಷ್ಟೊಂದು ವಿಷಯಗಳು ಇವೆ. ಆದರೆ, ಮಾತುಗಳೇ ಹೊರಳದೇ ನನ್ನ ಕಂಠ ತುಂಬಿ ಬರುತ್ತಿದೆ. ನಮ್ಮ ರಾಮಲಲ್ಲಾ ಇನ್ಮುಂದೆ ಟೆಂಟ್ ನಲ್ಲಿ ಇರಲ್ಲ, ನಮ್ಮ ರಾಮ ಲಲ್ಲಾ ದಿವ್ಯ ಮಂದಿರದಲ್ಲಿ ಇರಲಿದ್ದಾನೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಕ್ಷಣ ಅತ್ಯಂತ ಪವಿತ್ರವಾದದ್ದು. 2024 ರ ಜನವರಿ 22 ಇದು…