Author: admin

ಭವ್ಯ ಭಾರತಕ್ಕೆ ಸಾಕ್ಷಿಯಾದ 500 ವರ್ಷಗಳ ಹಿಂದೂ ಧರ್ಮದ ಕನಸಾಗಿದ್ದ ಅಯೋಧ್ಯೆಯ ರಾಮಮಂದಿರ ಇಂದು ನನಸಾಗಿ ದೇಶದಲ್ಲೇ ಸಂಭ್ರಮ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕೊರಟಗೆರೆ ಪಟ್ಟಣದ ಪ್ರತಿ ಗಲ್ಲಿ ಗಲ್ಲಿಯಲ್ಲಿ ಮನೆ ಮನೆಯಲ್ಲಿಯೂ ರಾಮನ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಪ್ರತಿ ದೇವಸ್ಥಾನದಲ್ಲಿ ಬೆಳಗ್ಗಿನಿಂದ ಸಂಜೆವರೆಗೂ ಹೋಮ ಹವನಗಳನ್ನು ಮಾಡುತ್ತಾ ಭಕ್ತರು ರಾಮ ಭಜನೆ ಮಾಡಿದರು. ಕೊರಟಗೆರೆಯ ಪಟ್ಟಣದ ಕನ್ನಿಕ ಪರಮೇಶ್ವರಿ ಸಮುದಾಯ ಭವನದಲ್ಲಿ ಹಾಗೆಯೇ ಪಟ್ಟಣದ ಎಚ್ ಎಸ್ ಆರ್ ಸರ್ಕಲ್ ನಲ್ಲಿ ಮತ್ತು ಕೆಎಸ್ ಆರ್ ಟಿಸಿ ಮುಂಭಾಗದಲ್ಲಿ ರಾಮನ ಭಾವಚಿತ್ರಗಳಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಿ ಹಬ್ಬವನ್ನು ಆಚರಿಸಲಾಯಿತು. ಬಣ್ಣದ ಪೆನ್ಸಿಲ್ ಗಳನ್ನು ಬಳಸಿ ಲಕ್ಷ ಅಕ್ಷರದಲ್ಲಿ ರಾಮನ ಹೆಸರಿನಲ್ಲಿ ಮೂಡಿ ಬಂದ ಅಯೋಧ್ಯೆ ಹಾಗೂ ಶ್ರೀ ರಾಮನ ಭಾವಚಿತ್ರ ವಿಶೇಷವಾಗಿ ಗಮನ ಸೆಳೆಯಿತು. ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ

Read More

ಅಯೋಧ್ಯೆಯಲ್ಲಿ ನಡೆಯುತ್ತಿರೋ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಸಚಿವ ಕೆ.ಎನ್. ರಾಜಣ್ಣ ಕುಟುಂಬದಿಂದ ರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧುಗಿರಿ ತಾಲೂಕಿನ ಕಿತ್ತಗಳ್ಳಿ ಗ್ರಾಮದಲ್ಲಿ ಕೆ.ಎನ್. ರಾಜಣ್ಣ ಕುಟುಂಬದಿಂದ ಪೂಜೆ ಸಲ್ಲಿಸಲಾಯಿತು. ಕಿತ್ತಗಳ್ಳಿ ಗ್ರಾಮದಲ್ಲಿ ಇರುವ ರಾಮ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಹೋಮ ನಡೆಸಿ ಪೂಜೆ ಸಲ್ಲಿಸುತ್ತಿರುವ ಕುಟುಂಬದವರು ವಿಧಿ ವಿಧಾನದಂತೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಹೋಮದಲ್ಲಿ ಪಾಲ್ಗೊಂಡ ಸಚಿವ ಕೆ.ಎನ್. ರಾಜಣ್ಣ ಪತ್ನಿ ಶಾಂತಲ ಹಾಗೂ ಸಂಬಂಧಿಕರು, ಕೆ.ಎನ್. ರಾಜಣ್ಣ ನಿರ್ಮಾಣ ಮಾಡಿರುವ ದೇವಸ್ಥಾನವಾಗಿದ್ದು 2006ರಲ್ಲಿ ನಿರ್ಮಿಸಲಾಗಿದೆ. ಪಾಳು ಬಿದ್ದಿದ್ದ ದೇವಸ್ಥಾನವನ್ನು ಕೆ.ಎನ್ ರಾಜಣ್ಣ ಜೀರ್ಣೋದ್ಧಾರ ಮಾಡಿದ್ದಾರೆ. ಅಂದಾಜು 20 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ದೇವಸ್ಥಾನದಾಲ್ಲಿ ಇಂದು ವಿಶೇಷ ಪೂಜಾ ಕಾರ್ಯಕ್ರಮಗಳು ಮುಂಜಾನೆಯಿಂದಲೂ ನೆರವೇರುತ್ತಿವೆ. ಇಂದು ಅಯೋಧ್ಯೆ ದೇವಸ್ಥಾನದ ಉದ್ಘಾಟನೆಯ ಸಮಯಕ್ಕೆ ಸರಿಯಾಗಿ ಪೂಜೆ ಸಲ್ಲಿಕೆ ಮಾಡಲಾಗುವುದು.

Read More

ತಿಪಟೂರು: ನಗರದ ಹಳೆ ಬಸ್ ನಿಲ್ದಾಣ ಮುಂಭಾಗದ ನಗರಸಭಾ ಮಳಿಗೆಯಲ್ಲಿ ಕರ್ನಾಟಕ ಸರ್ಕಾರದ ಬಹು ಮಹತ್ವಾಕಾಂಕ್ಷೆಯ ಯೋಜನೆಯಾದ ಕರ್ನಾಟಕ ಒನ್ ಸಮಗ್ರ ನಾಗರೀಕ ಸೇವಾ ಕೇಂದ್ರವನ್ನು ಶಾಸಕ ಕೆ. ಷಡಕ್ಷರಿ ಉದ್ಘಾಟಿಸಿದರು. ವೈದ್ಯರಾದ ಡಾ.ಜಿ.ಬಿ. ವಿವೇಚನ್ ಮತ್ತು ಡಾ. ಜಿ. ಎಸ್.ಶ್ರೀಧರ್, ಇ-ಆಡಳಿತ ಇಲಾಖೆಯ ಸಂಯೋಜನಾಧಿಕಾರಿಗಳಾದ ಉಮೇಶ್, ಎಲ್.ಸುರೇಶ್, ಎ.ಆರ್. .ಟಿ .ಓ .ಸುಧಾಮಣಿ, ಸಿಡಿಪಿಓ ಅಶೋಕ್, ಬೆಸ್ಕಾಂ A.W. ಮನೋಹರ್, ಗ್ರೇಡ್ 2 ತಹಶೀಲ್ದಾರ್ ಜಗನ್ನಾಥ್, ಶಿರಸ್ತೆದಾರ್ ರವಿಕುಮಾರ್, ಕೆ.ಎಂ.ಎಫ್ ನಿರ್ದೇಶಕ ಮಾದೀಹಳ್ಳಿ ಪ್ರಕಾಶ್, ಪತ್ರಕರ್ತ ಬಿ.ಟಿ.ಕುಮಾರ್, ಕರ್ನಾಟಕ ಒನ್ ನ ಜಿ. ರೋಹನ್ ರಾಜ್, ಎಐಟಿಯುಸಿ ಗೋವಿಂದರಾಜ್ ಮುಖಂಡರಾದ ಶಾಂತಪ್ಪ ಮತ್ತು ಲೋಕನಾಥ್ ಸಿಂಗ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ವರದಿ: ಆನಂದ ತಿಪಟೂರು

Read More

ಕೊರಟಗೆರೆ: ವಿಧಾನಸಭಾ ಕ್ಷೇತ್ರದ ಕೋರ ಹೋಬಳಿಯ ಅಮೃತಗಿರಿ ಮತ್ತು ಅವಳಿಪಾಳ್ಯ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಯುವಪಡೆ ನೊಂ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ದೇವರಾಜ್ ಗೌಡ್ರು ಗ್ರಾಮ ಘಟಕವನ್ನ ಉದ್ಘಾಟಿಸಿದರು. ನಾಡ ಪ್ರಭು ಕೆಂಪೇಗೌಡರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ವಿಶೇಷ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೆಂಪೇಗೌಡರು ನಡೆದು ಬಂದ ಹಾದಿ,  ಪರಂಪರೆ ಮತ್ತು ಅವರ ಆಳ್ವಿಕೆಯ ವಿಚಾರಗಳನ್ನು ಸಂಘಟನೆಯ ನೂತನ ಕಾರ್ಯಕರ್ತರ ಮನ ಮುಟ್ಟುವಂತೆ ಮಾತನಾಡಿ ನೂತನವಾಗಿ ಸ್ಥಾಪನೆಗೊಂಡಿರುವ ನಾಡ ಪ್ರಭು ಕೆಂಪೇಗೌಡ ಒಕ್ಕಲಿಗರ ಯುವ ವೇದಿಕೆಯು ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಂಸ್ಕೃತಿಯ ಪರ ಹೋರಾಟ ಮಾಡುತ್ತದೆ ಮತ್ತು ನೊಂದವರ ಪರ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರಿಗೆ ಮತ್ತು ದೇಶಸೇವೆ ಮಾಡಿದ ಹಿರಿಯ ಸೈನಿಕರೊಬ್ಬರಿಗೆ ಸನ್ಮಾನ ಮಾಡಲಾಯಿತು ನಂತರ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚಿನ ಅಂಕ ಪಡೆದ  ವಿದ್ಯಾರ್ಥಿ-…

Read More

ಕೊರಟಗೆರೆ: ತಾಲೂಕಿನ ಮಲ್ಲೇಶ್ವರ ಗ್ರಾಮದ ಇತಿಹಾಸ ಪ್ರಸಿದ್ಧವುಳ್ಳ ಶ್ರೀ ಚೌಡೇಶ್ವರಿ ತಾಯಿಯ ದೇವಸ್ಥಾನವನ್ನ ಶ್ರೀ ಚೌಡೇಶ್ವರಿ ದೇವಿ ನೇಕಾರರ ತೊಗಟವೀರ ಸಂಘ ಹಾಗೂ ಸಹಸ್ರರು ಭಕ್ತಾದಿಗಳ ಸಹಕಾರದಿಂದ ಪುನರ್ ನಿರ್ಮಿಸಲ್ಪಟ್ಟ ಚೌಡೇಶ್ವರಿ ತಾಯಿಯ ದೇವಾಲಯವನ್ನು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟನೆ ಮಾಡಿದರು. ಶ್ರೀ ವರಧಾತ್ರೈ ಚೌಡೇಶ್ವರಿ ಅಮ್ಮನವರ ಪುನರ್ ಪ್ರತಿಷ್ಠಾಪನೆ ಹಿನ್ನೆಲೆ ಮಲ್ಲೇಶ್ವರ ಗ್ರಾಮಸ್ಥರಲ್ಲಿ ಸಡಗರ ಸಂಭ್ರಮ ತುಂಬಿತ್ತು. ಇದೇ ವೇಳೆ ಮಾತನಾಡಿದ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ, ಪ್ರತಿ ಕುಲಕ್ಕೂ ಕುಲದೇವರು ಇದ್ದೇ ಇರುತ್ತದೆ. ನಮ್ಮ ಪೂರ್ವಿಕರು ಕುಲದೇವರ ಪೂಜೆಯನ್ನ ಸುಮ್ಮನೆ ಮಾಡಿಲ್ಲ, ಹಿಂದೂ ಧರ್ಮದಲ್ಲಿ ದೇವರ ಪ್ರಾರ್ಥನೆ ಪರಂಪರೆಯಾಗಿದೆ ಎಂದರು. ಶ್ರೀ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ದೇವಸ್ಥಾನದ ಮೇಲ್ಭಾಗದ ವಿಮಾನ ಗೋಪುರದ ಕಳಶ ಪ್ರತಿಷ್ಠಾಪಿಸಿ ಸಕಲ ಮಂತ್ರಗಳ ವಿಧಿ ವಿಧಾನಗಳೊಂದಿಗೆ ಶ್ರೀ ಚೌಡೇಶ್ವರಿ ತಾಯಿಯ ಕಣ್ಣು ತೆರೆಸಲಾಯಿತು.. ನಂತರ ಗೋಮಾತೆಗೆ ಪೂಜೆಯನ್ನು ಸಲ್ಲಿಸಿ ದೇವಿಯ ದರ್ಶನವನ್ನು ಮಾಡಿಸಿ ಭಕ್ತಾದಿಗಳಿಗೆ ತಾಯಿಯ ದರ್ಶನಕ್ಕೆ ಅವಕಾಶ…

Read More

ಅಸ್ಸಾಂನ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ರಾಹುಲ್ ಗಾಂಧಿ ಅವರನ್ನು ಪೊಲೀಸರು ತಡೆದರು. ಅಸ್ಸಾಂನ ಸಮಾಜ ಸುಧಾರಕ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವಾದ ಬಟದ್ರವ ಸತ್ರ ದೇವಸ್ಥಾನಕ್ಕೆ ಭೇಟಿ ನೀಡಲು, ರಾಹುಲ್ ಮತ್ತು ಇತರ ಕಾಂಗ್ರೆಸ್ ನಾಯಕರು ಬಂದಾಗ ಪೊಲೀಸರು ತಡೆದರು. ಪೊಲೀಸರ ಕ್ರಮವನ್ನು ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪ್ರತಿಭಟಿಸುತ್ತಿದ್ದಾರೆ. ನಾವು ದೇವಸ್ಥಾನಕ್ಕೆ ಭೇಟಿ ನೀಡಲು ಬಯಸುತ್ತೇವೆ. ನಾನು ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗದ ಅಪರಾಧವೇನು? ನಾನು ಸಮಸ್ಯೆಗಳನ್ನು ಸೃಷ್ಟಿಸಲು ಬಯಸುವುದಿಲ್ಲ, ನಾನು ಕೇವಲ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಬಯಸುತ್ತೇನೆ ಎಂದು ರಾಹುಲ್ ಹೇಳಿದರು. ಇನ್ನು ದೇವಸ್ಥಾನಕ್ಕೆ ಯಾರು ಹೋಗಬೇಕು ಎಂಬುದನ್ನು ಮೋದಿಯವರು ನಿರ್ಧರಿಸುತ್ತಾರೆ ಎಂದ ರಾಹುಲ್, ಇಂದು ಒಬ್ಬರು ಮಾತ್ರ ದೇವಸ್ಥಾನಕ್ಕೆ ಪ್ರವೇಶಿಸಬಹುದು ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು. ಆಮಂತ್ರಣ ಸ್ವೀಕರಿಸಿ ಬಂದಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದಾರೆ. ಜನವರಿ 11 ರಂದು, ಬ್ಯಾಡರವ ಇನ್‌ ನಿಂದ ಆಹ್ವಾನ ಬಂತು. ದೇವಸ್ಥಾನದ ಅಧಿಕಾರಿಗಳು ಬೆಳಿಗ್ಗೆ…

Read More

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ವೇಳೆಯೇ ನಟ ಧ್ರುವ ಸರ್ಜಾ ಅವರು ಮಕ್ಕಳ ನಾಮಕರಣ ಶಾಸ್ತ್ರ ನಡೆದಿದ್ದು,ಮಕ್ಕಳಿಗೆ ಅರ್ಥಪೂರ್ಣವಾದ ಹೆಸರನ್ನೇ ಇಟ್ಟಿರುವುದು ವಿಶೇಷವಾಗಿದೆ. ನಟ ಧ್ರುವ ಸರ್ಜಾ ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ. ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ನಾಮಕರಣ ಶಾಸ್ತ್ರ ನಡೆದಿದೆ. ಇಂದು ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ ಮಾಡಿದ್ದ, ಅನೇಕ ಮಹಿಳೆಯರು ಇಂದೇ ಧ್ರುವ ಸರ್ಜಾ ಕುಟುಂಬಸ್ಥರು ಆಂಜನೇಯನ ಭಕ್ತರು. ಆಂಜನೇಯ ಗುಡಿಯನ್ನೇ ಈ ಕುಟುಂಬ ನಿರ್ಮಾಣ ಮಾಡಿದೆ. ರಾಮನ ಮಂದಿರ ಉದ್ಘಾಟನೆ ದಿನದಂದು ತಮ್ಮ ಪುತ್ರಿ ಹಾಗೂ ಪುತ್ರನಿಗೆ ನಾಮಕರಣ ಮಾಡಿದ್ದು ವಿಶೇಷವಾಗಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Read More

ಗದಗ:  ಯುವಕನೊಬ್ಬ ಅಯೋಧ್ಯೆ ಶ್ರೀರಾಮಮಂದಿರ ಚಿತ್ರವನ್ನು ಬೇರೆ ರೀತಿ ಬದಲಾಯಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಅಶಾಂತಿ ಉಂಟು ಮಾಡಿದ್ದ, ಗದಗ ಜಿಲ್ಲೆಯ ಗಜೇಂದ್ರಗಢದ ವ್ಯಕ್ತಿ ತಾಜುದ್ದೀನ್ ದಫೇದಾರನನ್ನು ಪೊಲೀಸರು ಬಂದಿಸಿದ್ದಾರೆ. ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾಕಿರುವ ಚಿತ್ರವನ್ನು ಸಾಮಾಜಿಕ ಜಾಲತಾಣ ಫೇಸ್‌ ಬುಕ್ ನಲ್ಲಿ ಹಂಚಿಕೊಳ್ಳಲಾಗಿತ್ತು. ಈ ವಿವಾದಾತ್ಮಕ ಪೋಸ್ಟ್ ನಿಂದ ಗಜೇಂದ್ರಗಡ ಪಟ್ಟಣದಲ್ಲಿ ದ್ವೇಷಮಯ ವಾತಾವರಣ ಉಂಟಾಗಿದ್ದು, ಸದ್ಯ ಅಶಾಂತಿ ಉಂಟುಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ.

Read More

ಲಕ್ನೋ: 5 ವರ್ಷದ ಮಗು ಮೊಬೈಲ್‌ ನಲ್ಲಿ ಕಾರ್ಟೂನ್‌ ನೋಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಕೊತ್ವಾಲಿಯದ ಹತೈಖೇಡಾದಲ್ಲಿ ನಡೆದಿದೆ. ಬಾಲಕ ತನ್ನ ಅಮ್ಮನ ಜೊತೆದಯ ಮಲಗಿಕೊಂಡು ಮೊಬೈಲ್‌ ನಲ್ಲಿ ಕಾರ್ಟೂನ್‌ ವೀಕ್ಷಿಸುತ್ತಿತ್ತು.ಇದೇ ವೇಳೆ ಮಗುವಿನ ಕೈಯಿಂದ ಫೋನ್ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದು ಆ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾದರೂ. ಅದಾಗಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. “ಮಗು ಹೃದಯಾಘಾತದಿಂದ ಸಾವನ್ನಪ್ಪಿದೆಯೇ ಅಥವಾ ಬೇರೆ ಯಾವುದಾದರೂ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆಯೇ ಎಂಬುದು ತನಿಖೆಯ ವಿಷಯವಾಗಿದೆ” ಎಂದು ಅಮ್ರೋಹಾ ಮುಖ್ಯ ವೈದ್ಯಾಧಿಕಾರಿ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.

Read More

ಚೀನಾ: ಚೀನಾದ ನೈಋತ್ಯ ಪರ್ವತದಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, ಯುನ್ನಾನ್ ಪ್ರಾಂತ್ಯದಲ್ಲಿ 47 ಜನರು ಸಾವನ್ನಪ್ಪಿದ್ದಾರೆ. ಭೂಕುಸಿತಕ್ಕೆ ನಿಖರವಾದ ಕಾರಣವನ್ನು ತಿಳಿಯಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಭೂಕುಸಿತದಲ್ಲಿ ಸುಮಾರು 18 ಕ್ಕೂ ಹೆಚ್ಚು ಮನೆಗಳು ಕುಸಿದಿದೆ. 200 ಕ್ಕೂ ಹೆಚ್ಚು ಜನರನ್ನು ಘಟನಾ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ. 200 ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರು ,33 ಅಗ್ನಿಶಾಮಕ ವಾಹನಗಳು ಹಾಗೂ ಅಧಿಕಾರಿಗಳು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಭೂಕುಸಿತದಲ್ಲಿ ಕಾಣೆಯಾದ ಜನರನ್ನು ಹುಡುಕಲು 10 ಲೋಡಿಂಗ್ ಯಂತ್ರಗಳನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Read More