Subscribe to Updates
Get the latest creative news from FooBar about art, design and business.
- ಐಸಿಡಿಎಸ್ ಸುವರ್ಣ ಮಹೋತ್ಸವ: ಅರಮನೆ ಮೈದಾನದಲ್ಲಿ ಉದ್ಘಾಟನೆ
- LIVE | ICDS ಸುವರ್ಣ ಮಹೋತ್ಸವ: ಬೆಂಗಳೂರು ಅರಮನೆ ಮೈದಾನ
- ತುಮಕೂರು ಉಪ ವಿಭಾಗಾಧಿಕಾರಿ ಮೇಲೆ ಸುಳ್ಳು ಆರೋಪ: ತುಮಕೂರು ಜಿಲ್ಲಾ ನಾಗರಿಕರ ಹಿತರಕ್ಷಣಾ ಸಮಿತಿ ಖಂಡನೆ
- ಕಲಾವಿದರಿಗೆ ಧನ ಸಹಾಯಕ್ಕಾಗಿ ಆನ್ ಲೈನ್ ಅರ್ಜಿ ಆಹ್ವಾನ
- ಆಗ್ನೆಯ ಪದವೀಧರರ ಕ್ಷೇತ್ರದ ಚುನಾವಣೆ: ಮತದಾರರ ಪಟ್ಟಿಗೆ ನೋಂದಾಯಿಸಲು ಡಿ.10 ಕೊನೆಯ ದಿನ
- ನ.28 ರಂದು ಪತ್ರಿಕಾ ವಿತರಕರ ಕ್ರೀಡಾಕೂಟದ ಬಹುಮಾನ ವಿತರಣೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
- ಡಿ.6–7ರಂದು ಶ್ರೀ ಅಯ್ಯಪ್ಪಸ್ವಾಮಿಯ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ
- ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಳವು!
Author: admin
ಮಹಾರಾಷ್ಟ್ರದ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಹಾಗೂ ಸಿಬ್ಬಂದಿ ಕೊರತೆಯಿಂದ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಮುಂದುವರೆಯುತ್ತಲೇ ಇದೆ. ಮೃತಪಟ್ಟ ನವಜಾತ ಶಿಶುಗಳ ಸಂಖ್ಯೆ 31 ಕ್ಕೇರಿದೆ. ನಿನ್ನೆ ಒಂದೇ ದಿನ 12 ನವಜಾತ ಶಿಶುಗಳು ಸೇರಿದಂತೆ 24 ಮಂದಿ ಸಾವನ್ನಪ್ಪಿದ್ದರು. ಇದೀಗ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿಕೆಯಾಗಿದ್ದು, ಇದು ಇನ್ನಷ್ಟು ಹೆಚ್ಚಾಗಬಹುದು ಎಂದು ತಿಳಿದುಬಂದಿದೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅಶೋಕ್ ಚೌವ್ಹಾಣ್, ನಾಂದೇಡ್ ಆಸ್ಪತ್ರೆಯಲ್ಲಿ ರೋಗಿಗಳ ಸ್ಥಿತಿ ನರಕಸದೃಶವಾಗಿದೆ. ಕಡೆ ಪಕ್ಷ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಘಟನೆಯ ಬಗ್ಗೆ ಮಾಹಿತಿಯನ್ನೂ ಪಡೆದುಕೊಂಡಿಲ್ಲ.ಆಸ್ಪತ್ರೆಯ ಡೀನ್ ಡಾ.ವಾಕೋಡೆ ಅವರು ರೋಗಿಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇರುವ ಸಿಬ್ಬಂದಿಗಳು ಹಾಗೂ ರೋಗಿಗಳ ಸಂಖ್ಯೆಗೆ ಸಾಕಷ್ಟು ವ್ಯತ್ಯಾಸವಿದೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ. ಕಳೆದ ರಾತ್ರಿಯಿಂದ ಈವರೆಗೂ 4 ನವಜಾತ ಶಿಶು ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ದುರದೃಷ್ಟವೆಂದರೆ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾತಾ ಅಮೃತಾನಂದಮಯಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ, ಅಮ್ಮ ಪ್ರೀತಿ, ಸಹಾನುಭೂತಿ, ಸೇವೆ ಮತ್ತು ತ್ಯಾಗದ ಮೂರ್ತರೂಪ ಎಂದು ಹೇಳಿದರು. ವೀಡಿಯೊ ಸಂದೇಶದ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಮಾತಾ ಅಮೃತಾನಂದಮಯಿ ಜೀ ಅವರ 70 ನೇ ಜನ್ಮದಿನದಂದು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಹಾರೈಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಹಾಗೂ ಅವರು ಸೇವೆ ಮತ್ತು ಆಧ್ಯಾತ್ಮಿಕತೆಯ ಸಂಕೇತವಾಗಿದೆ ಎಂದು ಹೇಳಿದರು. 30 ವರ್ಷಗಳಿಗೂ ಹೆಚ್ಚು ಕಾಲ ಅಮ್ಮಾ ಅವರೊಂದಿಗಿನ ಒಡನಾಟದ ಮೇಲೆ ಬೆಳಕು ಚೆಲ್ಲುವ ಪ್ರಧಾನಿ, ಕಛ್ ನಲ್ಲಿ ಭೂಕಂಪದ ನಂತರ ಅವರ ಜೊತೆ ದೀರ್ಘಕಾಲ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡರು. ಅಮ್ಮನ 60ನೇ ಹುಟ್ಟುಹಬ್ಬವನ್ನು ಅಮೃತಪುರಿಯಲ್ಲಿ ಆಚರಿಸಿದ್ದನ್ನು ನೆನಪಿಸಿಕೊಂಡರು. ಇಂದಿಗೂ, ಅಮ್ಮನ ನಗುತ್ತಿರುವ ಮುಖದ ಪ್ರೀತಿಯ ಸ್ವಭಾವವು ಮೊದಲಿನಂತೆಯೇ ಇದೆ ಎಂದು ಪ್ರಧಾನಿ ಮೋದಿ ಹೇಳಿದರು. ಪ್ರಧಾನಿ ಮೋದಿ ಅವರು ಅಮ್ಮನ ಅನುಯಾಯಿಗಳು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಿಂದ ಒಟ್ಟುಗೂಡಿದ ಪ್ರತಿಯೊಬ್ಬರನ್ನು ಅಭಿನಂದಿಸಿದರು…
ಅಮೃತಸರ: ಪಂಜಾಬ್ ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಗೆ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿ, ದೇವರ ದರ್ಶನ ಪಡೆದ ಬಳಿಕ ರಾಹುಲ್ ಗಾಂಧಿಯವರು ಕರಸೇವೆಯಲ್ಲಿ ತೊಡಗಿಕೊಂಡರು. ಬಳಿಕ ಕಾಂಗ್ರೆಸ್ ಸದಸ್ಯರು ಹಾಗೂ ಗುರುದ್ವಾರದ ಸ್ವಯಂಸೇವಕರ ಜೊತೆ ತಾವೂ ಪಾತ್ರೆ ತೊಳೆದರು. ಈ ವೇಳೆ ರಾಹುಲ್ ಗಾಂಧಿ ಅವರು ತಲೆಗೆ ನೀಲಿ ಬಣ್ಣದ ಕರವಸ್ತ್ರ ಸುತ್ತಿದ್ದಾರೆ. ರಾಹುಲ್ ಗಾಂಧಿಯವರು ಇಂದು ರಾತ್ರಿ ನಗರದಲ್ಲಿಯೇ ಉಳಿದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ. ಇದು ಅವರ ಖಾಸಗಿ ಭೇಟಿಯಾಗಿದೆ. ಹೀಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಭೇಟಿಗೆ ಅವಕಾಶ ನೀಡಿರಲಿಲ್ಲ. ಕಾಂಗ್ರೆಸ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷ ನಡುವಿನ ಉದ್ವಿಗ್ನತೆಯ ನಡುವೆ ರಾಹುಲ್ ಗಾಂಧಿ ಅವರ ಅಮೃತಸರ ಭೇಟಿ ಕುತೂಹಲ ಹುಟ್ಟು ಮಾಡಿದೆ.
ಶಿವಮೊಗ್ಗ: ಸೆಪ್ಟೆಂಬರ್ 30ರಂದು ನಡೆದ ಈದ್ ಮೆರವಣಿಗೆ ವೇಳೆ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ತಲವಾರು ಝಳಪಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಮಧು ಬಂಗಾರಪ್ಪ ನೀಡಿರುವ ಹೇಳಿಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಗಾಯಾಳುಗಳ ಭೇಟಿ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗದಲ್ಲಿ ದೊಡ್ಡ ಮಟ್ಟದಲ್ಲಿ ಗಲಭೆ ಏನು ನಡೆದಿಲ್ಲ. ಸಾರ್ಜನಿಕರು ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ. ಶಿವಮೊಗ್ಗದಲ್ಲಿ ಈ ಘಟನೆ ಆಗಬಾರದಿತ್ತು. ಗಾಯಾಳುಗಳಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ಮಾಡುತ್ತೇನೆ. ಕೊಡುವುದಾದರೆ ಸರ್ಕಾರದಿಂದ ಕೊಡಿಸುತ್ತೇನೆ. ಪೊಲೀಸರು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಶಿವಮೊಗ್ಗ ಶಾಂತಿಯಿಂದ ಇದೆ, ಜನ ಸಹಕರಿಸುತ್ತಿದ್ದಾರೆ. ಕಾನೂನು ಹದ್ದುಬಸ್ತು ಮಾಡಬೇಕು. ಅಧಿಕಾರಿಗಳು ಆ ಕೆಲಸ ಮಾಡುತ್ತಿದ್ದಾರೆ. ಗಣಪತಿ ಹಬ್ಬ ಚೆನ್ನಾಗಿ, ಅದ್ಧೂರಿಯಾಗಿ ಆಯ್ತು. ಈದ್ ಮಿಲಾದ್ ಮೆರವಣಿಗೆ ಕೂಡ ಚೆನ್ನಾಗಿ ಆಯ್ತು. ಆದರೆ, ಕೊನೆಯಲ್ಲಿ ಕೆಲವರಿಂದ ಅಶಾಂತಿ ಉಂಟಾಗಿದೆ. ಗಲಭೆ ಹಿನ್ನೆಲೆಯಲ್ಲಿ 24 ಎಫ್ ಐಆರ್ ಆಗಿದೆ, 60 ಮಂದಿಯನ್ನು ಬಂಧಿಸಲಾಗಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ನಾನು…
ಬೆಳಗಾವಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರಾಜ್ಯದಲ್ಲಿ ಕೋಮುಗಲಭೆ ಹೆಚ್ಚಳವಾಗುತ್ತದೆ ಎಂಬ ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಆರೋಪಿಗಳನ್ನು ಬಂಧಿಸಿ ಕಾನೂನಡಿ ಪೊಲೀಸರು ಕ್ರಮ ಕೈಗೊಳ್ಳಲಾಗುತ್ತದೆ. ನಾವು ಕೋಮುಗಲಭೆಗೆ ತಕ್ಷಣ ಕ್ರಮ ಕೈಗೊಂಡಿದ್ದೇವೆ. ಯಾರೇ ಕೋಮುಗಲಭೆ ಮಾಡಿದ್ರೆ ಅವರ ವಿರುದ್ಧ ಕಠಿಣ ಕ್ರಮ. ಬಿಜೆಪಿಯವರು ಪ್ರತಿಭಟನೆ ಮಾಡಲಿ, ಪ್ರತಿಭಟನೆಗೆ ಅಡ್ಡಿ ಮಾಡುವುದಿಲ್ಲ. ಯಾವುದೇ ಪ್ರತಿಭಟನೆ ಶಾಂತಿಯುತವಾಗಿರಬೇಕು ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು ಆರೋಪ ಮಾಡೋದು ಬಿಟ್ಟು, ಬೇರೆ ಏನು ಕೆಲಸ ಇದೆ. ಆರೋಪ ಮಾಡುವುದೇ ಅವರ ಕೆಲಸ, ಅರೋಪ ಮಾಡುತ್ತಿರುವುದೆಲ್ಲವೂ ಸುಳ್ಳು. ಕೋಮುಗಲಭೆ ಎಲ್ಲಿ ನಡೆದಿದೆ ಎಂದು ಬಿಜೆಪಿಗೆ ಪ್ರಶ್ನಿಸಿದ್ದಾರೆ.
ರಾಜಸ್ಥಾನದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಹಳಿ ತಪ್ಪಿಸಲು ಯತ್ನ. ಸಿಬ್ಬಂದಿಯ ಮಧ್ಯಪ್ರವೇಶದಿಂದ ಭಾರೀ ಅನಾಹುತ ತಪ್ಪಿದೆ. ಟ್ರ್ಯಾಕ್ ಮೇಲೆ ದೊಡ್ಡ ಕಲ್ಲುಗಳು ಮತ್ತು ತಂತಿಯ ತುಂಡುಗಳು ಕಂಡು ಬಂದಿವೆ. ಭಿಲ್ವಾರಾ ಬಳಿ ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್ ಪ್ರೆಸ್ ವಿರುದ್ಧ ವಿಧ್ವಂಸಕ ಯತ್ನ ನಡೆದಿದೆ. ಪ್ರಾಥಮಿಕ ತನಿಖೆಯ ನಂತರ, ನಡೆದಿರುವುದು ವಿಧ್ವಂಸಕ ಯತ್ನ ಎಂದು ರೈಲ್ವೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಬಂಡೆಗಲ್ಲುಗಳ ಜೊತೆಗೆ ಬೋಲ್ಟ್ ಮತ್ತು ತಂತಿಗಳನ್ನು ಟ್ರ್ಯಾಕ್ ನಲ್ಲಿ ಹುದುಗಿಸಿ ಅದನ್ನು ಚಲಿಸದಂತೆ ಮಾಡಲಾಗಿತ್ತು. ಇದೆಲ್ಲವೂ ರೈಲನ್ನು ಹಳಿತಪ್ಪಿಸುವ ಪ್ರಯತ್ನ ಎಂದು ಅಧಿಕಾರಿಗಳು ವಿವರಿಸುತ್ತಾರೆ. ಲೊಕೊ ಪೈಲಟ್ ಗಳ ಗಮನಕ್ಕೆ ತಂದಾಗ ಭಾರಿ ಅನಾಹುತ ತಪ್ಪಿದೆ.
ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಅತ್ಯಂತ ಹಿಂದುಳಿದ ವರ್ಗ ಶೇ.36.01, ಹಿಂದುಳಿದ ವರ್ಗ ಶೇ.27.1 ಮತ್ತು ಸಾಮಾನ್ಯ ವರ್ಗ ಶೇ.15.52 ಎಂದು ಅಂಕಿಅಂಶಗಳು ತೋರಿಸುತ್ತವೆ. ಜನಗಣತಿಯ ಪ್ರಕಾರ ರಾಜ್ಯದ ಜನಸಂಖ್ಯೆಯ ಶೇ.19.65ರಷ್ಟು ಪರಿಶಿಷ್ಟ ಜಾತಿಗಳು ಮತ್ತು ಶೇ.1.68ರಷ್ಟು ಪರಿಶಿಷ್ಟ ಪಂಗಡಗಳು. ರಾಜ್ಯದಲ್ಲಿ ಜಾತಿ ಗಣತಿ ವರದಿ ಬರುತ್ತಿರುವುದು ದೇಶದಲ್ಲಿ ಇದೇ ಮೊದಲು. ರಾಜ್ಯದ ಒಟ್ಟು ಜನಸಂಖ್ಯೆ 13 ಕೋಟಿ. ಇದೇ ವೇಳೆ ಗಾಂಧಿ ಜಯಂತಿಯಂದು ಜನಗಣತಿ ವರದಿಯನ್ನು ಬಿಡುಗಡೆ ಮಾಡಿದ್ದಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಜನಗಣತಿಯಲ್ಲಿ ಕೆಲಸ ಮಾಡಿದ ಇಡೀ ತಂಡವನ್ನು ಅಭಿನಂದಿಸುತ್ತೇನೆ ಎಂದು ಮುಖ್ಯಮಂತ್ರಿ ಎಕ್ಸ್ ಪ್ಲಾಟ್ ಫಾರ್ಮ್ ನಲ್ಲಿ ಹೇಳಿದರು. ಜನಗಣತಿಯು ಎಲ್ಲರಿಗೂ ಪ್ರಯೋಜನಕಾರಿಯಾಗಿದೆ ಮತ್ತು ಬಡವರು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿತೀಶ್ ಕುಮಾರ್ ಹೇಳಿದರು. ಒಬಿಸಿ ಮೀಸಲಾತಿಯನ್ನು ಶೇ.27ಕ್ಕೆ ಏರಿಸುವುದು ಸೇರಿದಂತೆ ಜಾತಿ ಗಣತಿಗೆ ಸಂಬಂಧಿಸಿದ ಮುಂದಿನ ಕ್ರಮಗಳನ್ನು ಮಿತ್ರಪಕ್ಷಗಳೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗುವುದು ಎಂದು ಬಿಹಾರ ಮುಖ್ಯಮಂತ್ರಿ…
ಪ್ರಶ್ನೆ ಕೇಳುವ ವೇಳೆ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಟೀಕೆ. ರಾಜ್ಯ ಘಟಕದ ಅಧ್ಯಕ್ಷರಾಗದಿದ್ದರೆ ಬಿಜೆಪಿಯಲ್ಲೇ ಉಳಿಯುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಬಿಜೆಪಿ ಅಧ್ಯಕ್ಷರು ಕೆರಳಿದರು. ಆಗ, ಅಣ್ಣಾಮಲೈ ಅವರ ಪ್ರತಿಕ್ರಿಯೆ ಯಾರು ‘ಆ ಪ್ರಶ್ನೆ ಕೇಳಿದ್ದು ಅಕ್ಕ ಇಲ್ಲಿ ಬನ್ನಿ ಎಲ್ಲರೂ ನೋಡಲಿ. ಬಂದು ನನ್ನ ಜೊತೆ ಇರು. ನನಗೆ ಇಂತಹ ಪ್ರಶ್ನೆ ಕೇಳಿದವರು ಟಿವಿಯಲ್ಲಿ ನೋಡಲಿ. ಪ್ರಶ್ನೆಗಳನ್ನು ಕೇಳಲು ಒಂದು ಮಾರ್ಗವಿದೆ. ಇಂತಹ ಅದ್ಭುತ ಪ್ರಶ್ನೆಯನ್ನು ಕೇಳಿದ ವ್ಯಕ್ತಿಯನ್ನು ಎಂಟು ಕೋಟಿ ಜನರು ತಿಳಿದುಕೊಳ್ಳಬೇಕು’ ಎಂದು ಬಿಜೆಪಿ ನಾಯಕ ಹೇಳಿದರು. ವರದಿಗಾರರನ್ನು ಕ್ಯಾಮರಾ ಮುಂದೆ ನಿಲ್ಲುವಂತೆ ಬಿಜೆಪಿ ಅಧ್ಯಕ್ಷರು ಕೇಳಿದಾಗ, ಸಹ ಪತ್ರಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಕೊಯಮತ್ತೂರು ಪ್ರೆಸ್ ಕ್ಲಬ್ ಕೂಡ ಅಣ್ಣಾಮಲೈ ಅವರ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ಪತ್ರಿಕೋದ್ಯಮದ ನೀತಿಯನ್ನು ಕಲಿಸುವ ಮೊದಲು ನಾಯಕತ್ವದ ಸದ್ಗುಣಗಳನ್ನು ಕಲಿತು ಘನತೆಯಿಂದ ವರ್ತಿಸಬೇಕು. ಕೊಯಮತ್ತೂರು ಪ್ರೆಸ್ ಕ್ಲಬ್ ಪದಾಧಿಕಾರಿಗಳು ಪ್ರತಿಕ್ರಿಯಿಸಿ, ಪತ್ರಿಕೋದ್ಯಮ ಜನರು ಮತ್ತು…
ಮಂಡ್ಯ: ಕಲ್ಲು ತೂರುವವರು, ಗಲಭೆ ಸೃಷ್ಟಿಸುವವರಿಗೆ ಈ ಸರ್ಕಾರದಲ್ಲಿ ಕಾನೂನಿನ ಭಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಗಲಭೆಯ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಸಣ್ಣ ಗಲಾಟೆ ಎಂದು ಹೇಳಿರುವುದು ದುರ್ದೈವದ ಸಂಗತಿ. ಮನೆಗಳಿಗೆ ಕಲ್ಲು ತೂರಿದ್ದಾರೆ. ಕೋಲಾರದಲ್ಲಿಯೂ ಇದೇ ರೀತಿ ಘಟನೆ ನಡೆಯಿತು. ಸರ್ಕಾರ ಇಂತಹ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಗೃಹ ಸಚಿವ ಪರಮೇಶ್ವರ ಅವರ ಹೇಳಿಕೆ ಬಾಲಿಶವಾಗಿದೆ ಎಂದು ಹೇಳಿದರು. ಸರ್ಕಾರದ ಈ ನಡವಳಿಕೆಯಿಂದಲೇ ಜೂಜುಕೋರರು, ಗಲಭೆಕೋರರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಎಂದರು.
ಮಣಿಪಾಲ: ಎರಡು ತಂಡಗಳ ಮಧ್ಯೆ ಮಣಿಪಾಲದಲ್ಲಿ ಅ.1ರಂದು ರಾತ್ರಿ ವೇಳೆ ನಡೆದ ಚೂರಿ ಇರಿತ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಏಳು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಸೈಫ್ ಕುಕ್ಕಿಕಟ್ಟೆ, ಉದಾಫ್ ಚಿಟ್ಪಾಡಿ, ರಾಹುಲ್ ಶೆಟ್ಟಿ ಕಟಪಾಡಿ ಮತ್ತು ಅಫ್ರಿದಿ ದೊಡ್ಡಣಗುಡ್ಡೆ, ಬೈಕಾಡಿಯ ಹರ್ಷಿತ್, ತಿಲಕ್ ಹಾಗೂ ರಿತೇಷ್ ಬಂಧಿತ ಆರೋಪಿಗಳು. ಚೂರಿ ಇರಿತಕ್ಕೆ ಒಳಗಾದ ಪ್ರತಾಪ್(19) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳಿಕ ಪ್ರತಾಪ್, ತಿಲಕ್ ಮತ್ತು ಹರ್ಷಿತ್ ನೊಂದಿಗೆ ರಾತ್ರಿ ಮಣಿಪಾಲದ ಎಡ್ಜ್ ಹೊಟೇಲ್ ಬಳಿ ಹೋದಾಗ ಕಾರಿನಲ್ಲಿ ಬಂದ ಇದೇ ಮೂರು ಜನ ಹಾಗೂ ಇತರರು ಪ್ರತಾಪ್ ಗೆ ಕೈಯಿಂದ ಹೊಡೆದು ಚೂರಿಯಿಂದ ಕೈಗೆ ಇರಿದು ಗಾಯಗೊಳಿಸಿದ್ದಾರೆ ಎಂದು ದೂರಲಾಗಿದೆ.