Subscribe to Updates
Get the latest creative news from FooBar about art, design and business.
- ಕಳ್ಳಿ ಗಿಡದ ಹಣ್ಣು ತಿನ್ನುವುದು ಹೇಗೆ? ಇಲ್ಲಿದೆ ಸುಲಭ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು!
- ಪಾವಗಡ: ಮಹಿಳೆ ಮೇಲೆ ಹಲ್ಲೆ ನಡೆಸಿ ಆಭರಣ ಕದ್ದಿದ್ದ ಆರೋಪಿ ಸೆರೆ
- ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಿ: ಡಾ.ಚಂದ್ರಶೇಖರ್
- ದೈವಾರಾಧನೆ ಜೊತೆ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿ: ಎಂಜಿನಿಯರ್ ತಿಮ್ಮರಾಯಪ್ಪ
- ಬೆಳೆ ವಿಮೆ ನೋಂದಣಿ: ರೈತರಿಗೆ ಸಲಹೆ
- ಮಧುಗಿರಿ: ಬೀದಿ ನಾಯಿಗಳ ದಾಳಿಗೆ 24 ಕುರಿ ಸಾವು
- ಗೂಳೂರು ಬಳಿ 106 ಎಕರೆ ಭೂಮಿ ಮರಳಿ ಸರ್ಕಾರಕ್ಕೆ | 50 ವರ್ಷಗಳ ಹಳೆಯ ಗೇಣಿ ಅರ್ಜಿ ಪ್ರಕರಣಕ್ಕೆ ತೆರೆ
- ನೋವಿನಲ್ಲೂ ಸುಖ ಅನುಭವಿಸುವ ಜನರಿದ್ದಾರಂತೆ!: ಏನಿದು ರೋಚಕ ಮನೋವಿಜ್ಞಾನ!
Author: admin
ಇತ್ತೀಚಿನ ದಿನಗಳಲ್ಲಿ ನೈಟ್ರಸ್ ಆಕ್ಸೆಡ್ ನ ಸಣ್ಣ ಡಬ್ಬಿಗಳ ಮಾರಾಟದಲ್ಲಿ ಏರಿಕೆಯ ನಂತರ, ಯುನೈಟೆಡ್ ಕಿಂಗಡಮ್ ನಗುವ ಅನಿಲವನ್ನು ನಿಷೇಧಿಸಿದೆ. ಯುವಕರು ಮೋಜಿಗಾಗಿ ಈ ನಗುವ ಅನಿಲವನ್ನು ವೇಗವಾಗಿ ಒಳಗಡೆ ಎಳೆದುಕೊಳ್ಳುತ್ತಿದ್ದು, ಬ್ರಿಟನ್‌ನಲ್ಲಿ ಲಾಫಿಂಗ್ ಗ್ಯಾಸ್ ಹೊಂದುವುದು ಕಾನೂನುಬಾಹಿರವಾಗಿದೆ. ಬುಧವಾರದಿಂದ ಈ ಹೊಸ ಕಾನೂನನ್ನು ಜಾರಿಗೆ ತರಲಾಗಿದ್ದು, ಪುನರಾವರ್ತಿತ ಅಪರಾಧಿಗಳಿಗೆ ಎರಡು ವರ್ಷಗಳವರೆಗೆ ಮತ್ತು ಡೀಲರ್ ಗಳಿಗೆ 14 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಜೆಡಿಎಸ್ ನ ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹಾಸನದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ H.D.ಕುಮಾರಸ್ವಾಮಿ ಹೇಳಿದರು. ನಿನ್ನೆ ಸಭೆಯಲ್ಲಿ 19 ಶಾಸಕರ ಪೈಕಿ 18 ಶಾಸಕರು ಭಾಗಿಯಾಗಿದ್ದರು. ಶಾಸಕ ಶರಣಗೌಡ ಕಂದಕೂರ್ ಭಾಗಿಯಾಗಿರಲಿಲ್ಲ. ಕಂದಕೂರ್ ನಮ್ಮ ಮನೆಯ ಮಗ, ಅವರಲ್ಲಿ ಸ್ವಲ್ಪ ಗೊಂದಲ ಇದೆ. ಅವರನ್ನು ಕರೆದು ಮಾತನಾಡ್ತೇನೆ. ಶಾಸಕರು ಪಕ್ಷ ಬಿಟ್ಟು ಹೋಗ್ತಾರೆಂದು ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ನಮ್ಮ ಶಾಸಕರ ಮೇಲೆ ಯಾವುದೇ ಅನುಮಾನ ಇಲ್ಲ. ಕಾಂಗ್ರೆಸ್ ಆಮಿಷಕ್ಕೆ ಒಳಗಾಗಿ ಯಾವ ಶಾಸಕರು ಪಕ್ಷ ಬಿಡುವುದಿಲ್ಲ ಎಂದರು.
ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಶೇಕಡ 95ರಷ್ಟು ಮನೆಯ ಒಡತಿಯರಿಗೆ ತಲುಪಿದ್ದು, ತಾಂತ್ರಿಕ ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಂಗಳೂರಿನ ಬಿಡಬ್ಲ್ಯು ಎಸ್ ಎಸ್ ಬಿ ಕಚೇರಿಯಲ್ಲಿರುವ ಬೆಂಗಳೂರು ಒನ್ ಕೇಂದ್ರದಲ್ಲಿ ನಡೆಯುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ತರಬೇತಿ ಕುರಿತು ಸಚಿವರು ಮಾಹಿತಿ ಪಡೆದು ಕೊಂಡರು. ಗೃಹಲಕ್ಷ್ಮಿ ಯೋಜನೆ ಕುರಿತು ಆಗಿರುವ ತಾಂತ್ರಿಕ ದೋಷಗಳನ್ನು ಶೀಘ್ರವೇ ಬಗೆಹರಿಸಬೇಕೆಂದು ಸಿಡಿಪಿಒಗಳಿಗೆ ಸೂಚನೆ ನೀಡಿದರು. ತಾಂತ್ರಿಕ ದೋಷ, ಸಿಬ್ಬಂದಿಗಳ ತೊಡಕಿನ ಕುರಿತು ಪರಿಶೀಲನೆ ನಡೆಸಿದರು. ಶೇಕಡ 95 ರಷ್ಟು ಯಶಸ್ವಿ: ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಗೃಹಲಕ್ಷ್ಮಿ ಯೋಜನೆ ಇದುವರೆಗೂ ಶೇಕಡ 95 ರಷ್ಟು ಯಶಸ್ವಿಯಾಗಿದ್ದು, ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿದಿನ ಮೂರು ಜಿಲ್ಲೆಗಳ ಸಿಡಿಪಿಒಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು. ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ…
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ದಿಲ್ಲಿ ಹೈಕಮಾಂಡ್ ಭೇಟಿಯ ಹಿನ್ನೆಲೆಯಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಸದ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು ಕುರಿತು ಮಾತುಕತೆ ನಡೆಸಿದ್ದಾರೆ. ಈ ಬೆಳವಣಿಗೆಯಿಂದ ಬೆಳಗಾವಿ ರಾಜಕಾರಣದಲ್ಲಿ ಕೆಲವೊಂದು ಬದಲಾವಣೆಗಳು ಆಗುವುದು ನಿಶ್ಚಿತ ಬೆಳಗಾವಿ ಸೂಪರ್ ಪವರ್ ಆಗಿರುವ ಸಚಿವ ಸತೀಶ್ ಜಾರಕಿಹೊಳಿ ರಾಜಕೀಯ ಚದುರಂಗದ ಆಟದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ತಮ್ಮ ಆಪ್ತ ವಲಯದಲ್ಲಿ ಇರುವ ನಾಯಕರಗಳಿಗೆ ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ನೀಡಿ ಪಕ್ಷದಲ್ಲಿ ತನ್ನ ಬಲ ಮತ್ತು ಹಿಡಿತವನ್ನು ಸಾಧಿಸಲು ಮುಂದಾಗಿದ್ದಾರೆ. ಅದರ ಮೊದಲನೇ ಹೆಜ್ಜೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಖಾನಾಪುರ್ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಇದರಿಂದಾಗಿ ಒಂದೇ ಕಲ್ಲಿಂದ ಎರಡು ಹಣ್ಣುಗಳನ್ನು ಬೀಳಿಸಲು ಸಚಿವರು ಯೋಜನೆಯ ರೂಪಿಸಿದಂತಾಗಿದೆ ಎಂದು ಸ್ಪಷ್ಟವಾಗಿದೆ ಮುಂದೆ ಬರುವ ದಿನಗಳಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಲಿದೆ.
ತುಮಕೂರು: ಜಾನುವಾರುಗಳಿಗೆ ಮೇವುಗಳ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಈ ವಾರ ಜಿಲ್ಲೆಯ ರೈತರಿಗೆ ಮೇವು ಬೀಜಗಳನ್ನು ವಿತರಿಸಲು ಸೂಚಿಸಲಾಗಿದ್ದು ,ಜಿಲ್ಲೆಯಿಂದ ಬೇರೆ ಸ್ಥಳಗಳಿಗೆ ಮೇವು ಮಾರಾಟ ಮಾಡುವದನ್ನು ನಿಷೇಧಿಸಲಾಗವುದು, ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ರವರು ಹೇಳಿದರು. ಮಧುಗಿರಿ ತಾಲೂಕಿನ ನಿರೀಕ್ಷಣಾ ಮಂದಿರದ ಸಭಾಂಗಣದಲ್ಲಿ ನಡೆದ ‘ಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯಗಳ ಕುರಿತ ಪತ್ರಿಕಾಗೋಷ್ಠಿಯ ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನೀರಿರುವ ಕೆರೆಗಳ ಸದ್ಬಳಕೆ ಮಾಡಿಕೊಂಡು, ಪಶುಗಳಿಗಾಗಿ ಮೇವುಗಳನ್ನು ಬೆಳೆಸಿ , ಮುಂದಿನ ಬೇಸಿಗೆಯಲ್ಲಿ ಪಶುಗಳಿಗೆ ಮೇವು ಕೊರತೆಯಾಗದಂತೆ ವಿವಿಧ ಹಂತಗಳಲ್ಲಿ ಮೇವು ಸಂಗ್ರಹಿಸಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ, ಜಿಲ್ಲೆಯಲ್ಲಿ ಸಮರ್ಪಕ ಕುಡಿಯುವ ನೀರು ಸರಬರಾಜುಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿಲ್ಲ . ರಾಜ್ಯದ 223 ತಾಲೂಕಗಳನ್ನು ಬರ ಪೀಡಿತ ತಾಲೂಕುಗಳನ್ನಾಗಿ ಘೋಷಿಸಲಾಗಿದೆ, ಇಡೀ ರಾಜ್ಯ ಬರ ಪೀಡಿತವಾಗಿದೆ, ಬೆಳೆ ನಷ್ಟ, ಜಾನುವಾರು ನಷ್ಟ ಸೇರಿದಂತೆ ಒಟ್ಟು 37 ಸಾವಿರ ಕೋಟಿ ನಷ್ಟವಾಗಿದ್ದರೂ, ಕೇಂದ್ರ ಸರ್ಕಾರ ದಿಂದ 17…
ಬೆಂಗಳೂರು: ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಚಿತ್ರದುರ್ಗ ಮುರುಘಾ ರಾಜೇಂದ್ರ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರಿಗೆ ಹೈಕೋರ್ಟ್ ಜಾಮೀನು ನೀಡಿದೆ. ಪ್ರಕರಣದ ವಿಚಾರಣೆ ಮುಗಿಯುವರೆಗೆ ಚಿತ್ರದುರ್ಗ ಜಿಲ್ಲೆಯ ಪ್ರವೇಶ ಮಾಡಬಾರದು. ಎರಡು ಲಕ್ಷ ರು. ವೈಯಕ್ತಿ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷಿಗಳನ್ನು ಸಂಪರ್ಕಿಸಬಾರದು ಹಾಗೂ ಅವರನ್ನು ಬೆದರಿಸಬಾರದು. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ಜಾಮೀನು ಮಂಜೂರಾತಿ ಆದೇಶವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ನ್ಯಾಯಾಲಯದ ವಿಧಿಸಿದ ಯಾವುದೇ ಷರತ್ತು ಉಲ್ಲಂಘಿಸಿದರೆ, ಜಾಮೀನು ತನ್ನಿಂದ ತಾನೇ ರದ್ದಾಗಲಿದೆ ಎಂದು ಕೋರ್ಟ್ ಆದೇಶಿಸಿದೆ. ಸ್ವಾಮೀಜಿ ವಿರುದ್ಧ ಇನ್ನೊಂದು ಪ್ರಕರಣ ಬಾಕಿ ಇರುವ ಕಾರಣ ಸದ್ಯಕ್ಕೆ ಬಿಡುಗಡೆ ಇಲ್ಲ ಎಂದು ಹೇಳಿದೆ.
ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಈಗ ‘ಚೀತಾ’ ಚಿತ್ರತಂಡ ಸೇರಿಕೊಂಡಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಸದ್ಯ ನೃತ್ಯ ಸಂಯೋಜಕ-ನಿರ್ದೇಶಕ ರಾಜಾ ಕಲೈ ಕುಮಾರ್ ಅವರ ಚೊಚ್ಚಲ ಸಿನಿಮಾ ‘ಚೀತಾ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರವು ಈ ವಾರವಷ್ಟೇ ಸೆಟ್ಟೇರಿದೆ. ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮನೆ ಮಾತಾದ ಮೇಘಾ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಟ್ರಿಬಲ್ ರೈಡಿಂಗ್’ ಮೂಲಕ ತಮ್ಮ ಸಿನಿ ಜರ್ನಿಯನ್ನು ಪ್ರಾರಂಭಿಸಿದರು. ನಂತರ ದಿಲ್ ಪಸಂದ್ ಚಿತ್ರದಲ್ಲೂ ಕಾಣಿಸಿಕೊಂಡರು. ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಅಡಿ ಪ್ರತಿಭಾ ನರೇಶ್ ನಿರ್ಮಿಸಿದ ಈ ಚಿತ್ರದಲ್ಲಿ ನಟ ವಿನಯ್ ರಾಜ್ಕುಮಾರ್ ಮತ್ತು ಯೋಗಿ ಸಹ ನಟಿಸಿದ್ದಾರೆ. ತೆಲುಗು ನಟ ಸುನೀಲ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರೊಂದಿಗೆ ನಟಿ ಶ್ರುತಿ ಹರಿಹರನ್ ಕೂಡ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬೆಂಗಳೂರು: ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿ ರಾಜಕೀಯ ಸಮಸ್ಯೆಗಳು ಮುಗಿಯಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ಮಾಧ್ಯಮದವರು ಕೇಳಿದಾಗ, ಸತೀಶ್ ಜಾರಕಿಹೊಳಿ ಅವರು ಹಾಗೆ ಹೇಳೋಕೆ ಸಾದ್ಯವೇ ಇಲ್ಲ. ಕಥೆಯೇ ಇಲ್ಲ ಮುಗಿಯೋದು ಏನಿದೆ? ಎಂದು ಪ್ರಶ್ನಿಸಿದರು. ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ನಾನು ಗಮನಿಸಲ್ಲ. ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯವಾಗಿ ಯಾವುದೇ ಸಮಸ್ಯೆಯೂ ಇಲ್ಲ. ನನ್ನ ಜೊತೆಯೂ ಯಾವ ಸಮಸ್ಯೆ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.
ಬಾಗಲಕೋಟೆ: ಖಾಸಗಿ ಸುದ್ದಿ ವಾಹಿನಿಯ ವರದಿಗಾರನೊಬ್ಬ ಅಶ್ಲೀಲ ವಿಡಿಯೋ ತಯಾರಿಸಿ ಬಿಜೆಪಿ ಕಾರ್ಯಕರ್ತೆಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಪ್ರಕರಣ ಸಂಬಂಧ ಜಮಖಂಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂದೆನವಾಜ್ ಸರಕಾವಸ್ ಎಂಬುವವನು ಕೃತ್ಯ ಎಸಗಿದ್ದಾನೆ. ಖಾಸಗಿ ಸುದ್ದಿ ವಾಹನಿ ವರದಿಗಾರ ಎಂದು ಹೇಳಿಕೊಂಡು ತಿರುಗಾಡುವ ಬಂದೆನವಾಜ್ ಸರಕಾವಸ್ ಜಮಖಂಡಿ ಬಿಜೆಪಿ ನಗರಮಂಡಳ ಅಧ್ಯಕ್ಷೆ, ಖಾಸಗಿ ಶಾಲಾ ಶಿಕ್ಷಕಿ ಗೀತಾ ಸೂರ್ಯವಂಶಿ ಅವರ ಅಶ್ಲೀಲ ವೀಡಿಯೊ ತಯಾರಿಸಿದ್ದಾನೆ. ಗೀತಾ ಸೂರ್ಯವಂಶಿ ಅವರ ಭಾವಚಿತ್ರದ ಕಣ್ಣಿಗೆ ಕಪ್ಪು ಪಟ್ಟಿ ಅಂಟಿಸಿದ್ದಾನೆ. ಬಳಿಕ ಅವರದ್ದೇ ಅಶ್ಲೀಲ ವಿಡಿಯೋ ಎಂಬಂತೆ ಬಿಂಬಿಸಲು ಯಾವುದೋ ಪೋರ್ನ್ ದೃಶ್ಯವನ್ನು ಎಡಿಟ್ ಮಾಡಿ ವಿಡಿಯೋ ತಯಾರಿಸಿದ್ದಾನೆ. ಅದಕ್ಕೆ ಬಿಜೆಪಿ ಕಾರ್ಯಕರ್ತೆಯ ರಾಸಲೀಲೆ ಎಂದು ಬರಹ ಹಾಕಿದ್ದು, ಎಮ್ಮೊ ಎಮ್ಮೊ ನೋಡ್ದೆ ನೋಡ್ದೆ ಹಾಡು ಅಳವಡಿಸಿದ್ದಾನೆ. ಈ ಸಂಬಂಧ ಗೀತಾ ಸೂರ್ಯವಂಶಿ ಅವರು ಜಮಖಂಡಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮುಂಬೈ: ಸೇತುವೆ ಮೇಲಿನಿಂದ ಉರುಳಿದ ಕಾರು ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ಪರಿಣಾಮ ಸ್ಥಳೀಯ ಆರ್ ಪಿಐ ಕಾರ್ಯಕರ್ತ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮೃತರನ್ನು ಧರ್ಮಾನಂದ ಗಾಯಕ್ವಾಡ್ (41) ಮತ್ತು ಅವರ ಸಂಬಂಧಿಕರಾದ ಮಂಗೇಶ್ ಜಾಧವ್ (46) ಮತ್ತು ನಿತೀನ್ ಜಾಧವ್ (48) ಎಂದು ಗುರುತಿಸಲಾಗಿದೆ. ಗಾಯಕ್ವಾಡ್ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ ಗುಂಪು) ಕಾರ್ಯಕರ್ತರಾಗಿದ್ದರು ಎಂದು ತಿಳಿದುಬಂದಿದೆ. ಮಂಗಳವಾರ ಮುಂಜಾನೆ 3:30 ರಿಂದ 4 ಗಂಟೆಯ ವೇಳೆಗೆ ಕಿನವಲಿ ಬಳಿಯ ಸೇತುವೆಯ ಮೇಲೆ ಕಾರು ಮುಂಬೈ-ಪನ್ವೇಲ್ ರಸ್ತೆಯಲ್ಲಿ ನೇರಲ್ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪನ್ವೇಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರಕು ಸಾಗಣೆ ರೈಲು ರಾಯಗಢ ಜಿಲ್ಲೆಯ ಪನ್ವೇಲ್ ನಿಂದ ಕರ್ಜತ್ ಗೆ ತೆರಳುತ್ತಿತ್ತು. ಘಟನೆಯಿಂದಾಗಿ ಅದರ ಕೆಲವು ವ್ಯಾಗನ್ ಗಳು ಬೇರ್ಪಟ್ಟಿವೆ ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಶಿವರಾಜ್ ಮನಸ್ ಪುರೆ…