Subscribe to Updates
Get the latest creative news from FooBar about art, design and business.
- ‘ಮತ್ಸ್ಯವಾಹಿನಿ’ ಇ–ತ್ರಿಚಕ್ರ ವಾಹನಕ್ಕಾಗಿ ಅರ್ಜಿ ಆಹ್ವಾನ
- ಮಧ್ಯಾಹ್ನದ ಊಟದ ರುಚಿ ಹೆಚ್ಚಿಸಲು ಇಲ್ಲಿವೆ 6 ಸುಲಭ ಚಟ್ನಿ ರೆಸಿಪಿಗಳು!
- ಮಹಿಳೆಯರ ಸುರಕ್ಷತೆಗೆ ಕಾನೂನು ಅರಿವು ಅಗತ್ಯ: ಶಶಿಧರ ಹೆಚ್.ಜಿ.
- ಎಸ್ ಐಆರ್ ಪ್ರಕ್ರಿಯೆ ನಿರ್ಲಕ್ಷಿಸದೇ ಗಂಭೀರವಾಗಿ ಪರಿಗಣಿಸಿ: ಬಿಜೆಪಿ ಮುಖಂಡ ಸ್ಫೂರ್ತಿ ಚಿದಾನಂದ್ ಮನವಿ
- ತುಮಕೂರು: ಜುಲೈ 10 ರಿಂದ 3 ದಿನಗಳ ಕಾಲ ‘ಬಿಲ್ಡ್ ಟೆಕ್-2026’ ಬೃಹತ್ ವಸ್ತು ಪ್ರದರ್ಶನ
- ವಕೀಲರ ಮೇಲಿನ ಹಲ್ಲೆ ಖಂಡಿಸಿ ನ್ಯಾಯಾಲಯದ ಬಳಿ ಪ್ರತಿಭಟನೆ: ಕಲಾಪದಿಂದ ಹೊರಗುಳಿದ ವಕೀಲರು
- ಸರಗೂರು: ನಿಯಮ ಗಾಳಿಗೆ ತೂರಿ ಕೆಪಿಎಸ್ ಶಾಲೆಗೆ ರಾಜಕೀಯ ನಾಯಕರ ನೇಮಕ – ಶಾಸಕರ ವಿರುದ್ಧ ಎಸ್ ಡಿಎಂಸಿ ಆಕ್ರೋಶ, ಪ್ರತಿಭಟನೆಗೆ ನಿರ್ಧಾರ
- ಸಂವಿಧಾನ ರಕ್ಷಣೆಗೆ ಯುವ ಪೀಳಿಗೆ ಜಾಗರೂಕರಾಗಬೇಕು: ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕರೆ
Author: admin
ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಮುಂದೆ ನಾಳೆಯೇ ನಮ್ಮ ಬಳಿ ನೀರು ಇಲ್ಲ, ನೀರು ಬಿಡಲು ಸಾಧ್ಯವಿಲ್ಲ ಎಂದು ಮರುಪರಿಶೀಲನಾ ಅರ್ಜಿ ಹಾಕಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಅಡ್ವೊಕೇಟ್ ಜನರಲ್ ಅವರೊಂದಿಗೆ ನಡೆದ ಸಭೆಯ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಶಾಂತಿಯುತವಾಗಿ ಬಂದ್ ನಡೆದಿದ್ದು, ಇದಕ್ಕೆ ಸಹಕರಿಸಿದ ಸಾರ್ವಜನಿಕರನ್ನು, ಸಂಘ ಸಂಸ್ಥೆಗಳಿಗೆ, ಅಭಿನಂದಿಸಿದ ಮುಖ್ಯಮಂತ್ರಿಗಳು ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದ ಅಧಿಕಾರಿಗಳನ್ನು ಕೂಡ ಅಭಿನಂದಿಸಿದರು. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಮಾಜಿ ಅಡ್ವೊಕೇಟ್ ಜನರಲ್ ಗಳು ಸಭೆಯಲ್ಲಿ ಭಾಗವಹಿಸಿದ್ದರು. ಅವರ ಅನುಭವದ ಆಧಾರದ ಮೇಲೆ ಕೆಲವು ಅಭಿಪ್ರಾಯ, ಸಲಹೆಗಳನ್ನು ನೀಡಿದ್ದಾರೆ. ಅವರ ಸಲಹೆಗಳನ್ನು ಪರಿಗಣಿಸಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದರು. ಪರಿಣಿತರ ಸಲಹಾ ಸಮಿತಿ: ಮುಖ್ಯವಾಗಿ ರಾಜ್ಯದ ನೀರಾವರಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪರಿಣಿತರ ಸಲಹಾ ಸಮಿತಿಯನ್ನು ರಚಿಸಿ, ಡಾಟಾ ಸಂಗ್ರಹ…
ಚಿತ್ರ : ರವೀಂದ್ರ ಭಟ್ ಉಳ್ಳಿಂಜ ಬರಹ : ಕುಮಾರ್ ಪೆರ್ನಾಜೆ ಪುತ್ತೂರು ಪೆರ್ನಾಜೆ ಮನೆ ಪೆರ್ನಾಜೆ ಕರಾವಳಿಯ ಮುಖ್ಯ ಬೆಳೆ ಅಡಿಕೆ ಅದರಲ್ಲೂ ಒಕ್ಕಣ್ಣ ಇದನ್ನು ನಂಬಬಾರದು ಎಂದು ನಮ್ಮ ಹಿರಿಯರ ಮಾತು ಅಕ್ಷರಶಃ ಸತ್ಯ. ಇದರಲ್ಲಿ ಏರಿಳಿತಗಳು ಸಾಮಾನ್ಯ ಹಾಗೆ ಪ್ರಕೃತಿ ವೈಪರೀತ್ಯಗಳು ಇನ್ನೊಂದೆಡೆ ಮಹಾಮಾರಿ ಕೊಳೆರೋಗ ಹಳದಿ ರೋಗ ಎಲೆ ಚುಕ್ಕೆ ರೋಗಗಳು ಅಲ್ಲದೆ ಅಡಿಕೆಯಲ್ಲಿರುವ ಔಷಧೀಯ ಗುಣಗಳು ಹಾಗೆ ಕೃಷಿಗೆ ಕಾಡುಪ್ರಾಣಿಗಳ ಹಾವಳಿ ಆನೆ ,ಕಾಡೆಮ್ಮೆ ,ಹಂದಿ, ಮಂಗ ಮುಂತಾದವುಗಳು ಕೃಷಿಕರನ್ನು ಬೆಚ್ಚಿ ಬೀಳಿಸುತ್ತದೆ ಪ್ರಯೋಗಗಳು ಬಹಳಷ್ಟು ನಡೆದರು ಪ್ರಕೃತಿಯ ಮುಂದೆ ನಾವು ಏನೇನೋ ಅಲ್ಲ. ಈ ಜಗತ್ತು ಕೆಲವೊಮ್ಮೆ ತುಂಬಾ ವಿಚಿತ್ರ ಅನಿಸುತ್ತದೆ. ನಾವು ಈ ಭೂಮಿಯಲ್ಲಿ ಬಹಳ ಅದ್ಭುತಗಳನ್ನೇ ಕಾಣುತ್ತೇವೆ ಅದೇ ಬೀಜಗಳು ಮೊಳಕೆ ಒಡೆಯುವುದು ಅದ್ಭುತವೇ ಹೊಸ ಹೊಸ ಸೃಷ್ಟಿ ಮೂಡಿ ಮೋಡಿ ಮಾಡಿದೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಉಳ್ಳಿಂಜ ಜಯರಾಮ್ ಭಟ್ರ ತೋಟದಲ್ಲಿ ವಿಶೇಷ ಅಡಿಕೆ ಗಿಡವು ಒಂದು…
ತುಮಕೂರು: ಮನೆಯೊಂದರಲ್ಲಿ ಆಕಸ್ಮಿಕ ಸ್ಫೋಟ ಸಂಭವಿಸಿದ ಪರಿಣಾಮ ಮನೆ ಗೋಡೆ ಕುಸಿದು ಆರು ಮಂದಿ ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ನಗರದ ಮಧುಗಿರಿ ರಸ್ತೆಯ ಪಾರ್ಕ್‌ನಲ್ಲಿ ಘಟನೆ ನಡೆದಿದೆ. ಮೊಹಲ್ಲಾದ ನಜೀರ್ ಎಂಬುವವರ ಮನೆ ಕುಸಿದು ಬಿದ್ದಿದೆ. ಸ್ಫೋಟಕ್ಕೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಸ್ಫೋಟದಲ್ಲಿ ಆರು ಮಂದಿ ಗಾಯಗೊಂಡಿದ್ದು, ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಕಸ್ಮಿಕ ಸ್ಪೋಟಕ್ಕೆ ಕುಸಿದು ಬಿದ್ದ ಮನೆ ಗೋಡೆ ಆರಂಭದಲ್ಲಿ ಸಿಲಿಂಡರ್ ಸ್ಫೋಟ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸಿಲಿಂಡರ್ ಸ್ಫೋಟವಲ್ಲ ಎನ್ನಲಾಗಿದೆ. ಘಟನೆಗೆ ನಿಖರ ಕಾರಣ ಪತ್ತೆ ಹಚ್ಚಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಶಾಸಕ ಟಿ.ಬಿ.ಜಯಚಂದ್ರ ಭೇಟಿ ನೀಡಿದ್ದು, ತುಮಕೂರು ಎಸ್ ಪಿ ಕೆ.ವಿ.ಅಶೋಕ್ ಬಳಿ ಮಾಹಿತಿ ಪಡೆದಿದ್ದಾರೆ. ಸ್ಫೋಟದ ಹಿಂದಿರುವ ಕಾರಣವನ್ನು ತಿಳಿಸಲು ಸೂಚಿಸಿದ್ದಾರೆ. ಇತ್ತ ಸ್ಥಳಕ್ಕೆ ಬಾಂಬ್ ನಿಷ್ಟ್ರೀಯ ದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುರುವೇಕೆರೆ: ಕಾವೇರಿ ನೀರು ತಮಿಳುನಾಡಿಗೆ ಬಿಟ್ಟಿರುವ ವಿಚಾರವಾಗಿ ಇಂದು ನಡೆಯುತ್ತಿರುವ ಕರ್ನಾಟಕ ಬಂದ್ ಗೆ ತುರುವೇಕೆರೆ ಪಟ್ಟಣ ಸ್ತಬ್ಧವಾಗಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ವಿರುಳವಾಗಿದ್ದು ರಸ್ತೆ ಸಂಚಾರ ಸುಗಮವಾಗಿದೆ. ಆಸ್ಪತ್ರೆ ಮೆಡಿಕಲ್ ಶಾಪ್ ಹಾಲು ಬಿಟ್ಟು ಮಿಕ್ಕಿಲ್ಲ ಅಂಗಡಿ ಮುಖಂಡರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರುನಾಡ ವಿಜಯ ಸೇನೆ ವಿವಿಧ ಪ್ರಗತಿಪರ ಸಂಘಟನೆಗಳು ಬೀದಿಬದಿ ವ್ಯಾಪಾರಿಗಳು ಸಾರ್ವಜನಿಕರಿಂದ ವ್ಯಾಪಾರಿಗಳಿಂದ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ನಿಂತಲ್ಲಿಯೇ ಬಸ್ ಗಳು ನಿಂತಿವೆ ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿದ್ದು ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿದೆ. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ಬಿಹಾರದಲ್ಲಿ ಸಾಲ ತೀರಿಸದ ಆರೋಪದ ಮೇಲೆ ಮಹಿಳೆಯನ್ನು ಹೊಡೆದು ಕೊಂದ ಘಟನೆ ನಡೆದಿದೆ ಸಾಲಗಾರರ ದಾಳಿಯಲ್ಲಿ ಮಹಿಳೆಯ ಅಪ್ರಾಪ್ತ ಮಗಳು ಕೂಡ ಗಾಯಗೊಂಡಿದ್ದಾರೆ. ಘಟನೆಯಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಪೂರ್ವ ಕತಿಹಾರ್ ನಗರದಲ್ಲಿ ಈ ಘಟನೆ ನಡೆದಿದೆ. ಮಹಿಳೆ ಲೇವಾದೇವಿಗಾರರಿಂದ ಸಾಲ ಪಡೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಗುರುವಾರ ಗುಂಪೊಂದು ಮನೆಗೆ ಬಂದಿತ್ತು. ಕಂತು ಕಟ್ಟಲು ಹಣವಿಲ್ಲದಿದ್ದರೆ ಗ್ಯಾಂಗ್ ಮಹಿಳೆಯ ಮೊಬೈಲ್ ಗೆ ಬೇಡಿಕೆಯಿಟ್ಟಿತು ಎಂದು ಮಗಳು ಪೊಲೀಸರಿಗೆ ತಿಳಿಸಿದ್ದಾರೆ. ಮಹಿಳೆ ತನ್ನ ಮೊಬೈಲ್ ಫೋನ್ ನೀಡಲು ನಿರಾಕರಿಸಿದಾಗ ವಾಗ್ವಾದ ನಡೆಯಿತು. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಗುಂಪು ಮಹಿಳೆಗೆ ಥಳಿಸಿದೆ. ಮಹಿಳೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ದಾಳಿಯಲ್ಲಿ ಮಹಿಳೆಯ ಅಪ್ರಾಪ್ತ ಮಗಳು ಕೂಡ ಗಾಯಗೊಂಡಿದ್ದಾರೆ. ಮಹಿಳೆಯ ಕುಟುಂಬದ ದೂರಿನ ಮೇರೆಗೆ ಫಾಲ್ಕಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ತಮಿಳುನಾಡಿಗೆ 18 ದಿನಗಳ ಕಾಲ ನಿತ್ಯ 3000 ಕ್ಯುಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಶಿಫಾರಸು ಬಗ್ಗೆ ನಿರ್ಣಯ ಕೈಗೊಳ್ಳುವ ಬಗ್ಗೆ ಕಾವೇರಿ ನೀರುನಿರ್ವಹಣಾ ಪ್ರಾಧಿಕಾರ ಇಂದು ಸಭೆ ನಡೆಸಲಿದೆ. ಈ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ರಾಜ್ಯಗಳ ಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದು, ತಮ್ಮ ತಮ್ಮ ಅಹವಾಲು ಮಂಡನೆ ಮಾಡಲಿದ್ದಾರೆ. ಏತನ್ಮಧ್ಯೆ, ಕಾವೇರಿ ವಿಚಾರವಾಗಿ ಕಾನೂನು ಹೋರಾಟ ತೀವ್ರಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂದು ಬೆಳಿಗ್ಗೆ ಹಿರಿಯ ವಕೀಲರು ಹಾಗೂ ಕಾನೂನು ತಜ್ಞರೊಂದಿಗೆ ರಾಜ್ಯ ಸರ್ಕಾರ ಸಭೆ ನಡೆಸುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಸಭೆಯಲ್ಲಿ ರಾಜ್ಯವು ವಾಸ್ತವಿಕ ಸ್ಥಿತಿಯನ್ನು ಪ್ರಸ್ತುತಪಡಿಸಲಿದೆ. ಆದಾಗ್ಯೂ ಸಿಡಬ್ಲ್ಯೂಎಂಎ ಏನನ್ನು ಶಿಫಾರಸು ಮಾಡುತ್ತಿದೆ ಎಂಬುದನ್ನು ಕಾದು ನೋಡೋಣ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಕಾವೇರಿ ವಿವಾದದ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಸಭೆ ಕರೆಯಲಿದ್ದು, ಸಭೆಯಲ್ಲಿ ಕೃಷಿ ಮತ್ತು ನೀರಾವರಿ ತಜ್ಞರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಮಧುಗಿರಿ: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು ಓರ್ವ ತೀವ್ರ ಗಾಯಗೊಂಡು ಆಸ್ಪತ್ರೆ ದಾಖಲಾಗಿರುವ ಘಟನೆ ತಾಲೂಕಿನ ಮಿಡಿಗೇಶಿ ಕೆಶಿಪ್ ರಸ್ತೆಯಲ್ಲಿ ರಾತ್ರಿ ನಡೆದಿದೆ. ಪಾವಗಡ ತಾಲೂಕಿನ ಗುಜ್ಜ ನುಡು ಗ್ರಾಮದ ಆಕಾಶ್, ಕಾರ್ತಿಕ್, ಹೇಮಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಜ್ವಲ್ ತೀವ್ರ ಗಾಯಗೊಂಡು ತುಮಕೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಂಗಳೂರು ಬಂದ್ ಇದ್ದ ಕಾರಣ ಗ್ರಾಮದಲ್ಲಿ ನಡೆಯುತ್ತಿದ್ದ ಮಾರಮ್ಮ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ ಮಿಡಿಗೇಶಿ ಬಳಿ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದ ಮುಂಭಾಗದ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಮೃತರ ದೇಹಗಳನ್ನು ಮದುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗೆ ತರಲಾಗಿದ್ದು ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಅಬಿದ್ ಮಧುಗಿರಿ
ನೆಲ, ಜಲ, ಭಾಷೆ ವಿಷಯದಲ್ಲಿ ಯಾವಾತ್ತು ರಾಜಿಯಾಗುವುದಿಲ್ಲ ಎಂದು ನಟಿ ಪೂಜಾಗಾಂಧಿ ಹೇಳಿದರು. ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನ ಫಿಲ್ಡ್ ಚೇಂಬರ್ ಮುಂದೆ ಆಯೋಜಿಸಿರುವ ಧರಣಿಯಲ್ಲಿ ಅವರು ಮಾತನಾಡಿದರು. ಕಾವೇರಿ ನಮ್ಮದು, ಕೆಆರ್ ಎಸ್ ನಿಂದ ಒಂದೂ ಹನಿಯನ್ನು ಬಿಡಬಾರದು. ನಮ್ಮ ರಾಜ್ಯದ ರೈತರ ಹಿತವೂ ನಮಗೆ ಮುಖ್ಯ ಎಂದು ಕಿಡಿಕಾರಿದರು. ಮೇಕೆದಾಟು ಯೋಜನೆ ನಮಗೆ ಎಷ್ಟು ಮುಖ್ಯವಾಗಿದೆ ಎನ್ನುವುದನ್ನು ಮನಗಾಣಬೇಕು ಎಂದು ಸಲಹೆ ನೀಡಿದರು. ಈ ವೇಳೆ ನಟಿ ಪೂಜಾ ಗಾಂಧಿ ಮಾತನಾಡಿ ಕನ್ನಡಿಗರು ಸ್ನೇಹ, ಸಹಬಾಳ್ವೆಯಿಂದ ಇದ್ದೇವೆ. ಈ ನಾಡಿಗೆ ಚೆನ್ನಾಗಿ ಮಳೆ ಬರಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ. ಕನ್ನಡಿಗರು ತುಂಬಾ ತಾಳ್ಮೆ ಇರುವವರು. ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಮೇಕೆದಾಟು ಎಷ್ಟು ಅವಶ್ಯಕ ಅನ್ನೋದನ್ನು ಯೋಚಿಸಬೇಕು. ಎಲ್ಲದಕ್ಕೂ ಒಂದು ಕೀಲಿಗೈ ಇರುತ್ತೆ. ಹಾಗೇ ಎಲ್ಲಾ ಸಮಸ್ಯೆಗೂ ಪರಿಹಾರ ಇರುತ್ತೆ. ನಾವು ಆ ಪರಿಹಾರ ಹುಡುಕಲು ಮುಂದಾಗಬೇಕು ಎಂದು ಹೇಳಿದರು.
ಬೆಂಗಳೂರು: ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬಂದ್ ಮಾಡದಂತೆ ಸಂಘಟನೆಗಳಿಗೆ ಮನವಿ ಮಾಡಿದ್ದೇವೆ. ಕಾನೂನಿನ ಪ್ರಕಾರ ಬಂದ್ ಮಾಡಬಾರದು. ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದೇನೆ. ನಿಯಮ ಉಲ್ಲಂಘಿಸಿದರೇ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. ಸುಖ ಸುಮ್ಮನೆ ಬಂಧಿಸುವುದಿಲ್ಲ. ಕಾನೂನು ವಿರುದ್ಧ ನಡೆದುಕೊಂಡರೆ ಬೇರೆ ವಿಧಿಯಿಲ್ಲ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಜೆಡಿಎಸ್ ಪಕ್ಷದಿಂದ ನೈತಿಕ ಬೆಂಬಲ ಘೋಷಣೆ ಮಾಡಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ಕಾವೇರಿ ನೀರಿಗಾಗಿ ಹೋರಾಟ ಮಾಡೋದು ಅನಿವಾರ್ಯ. ಸರ್ಕಾರದ ನಡವಳಿಕೆಯನ್ನು ನೋಡಿದರೆ ಒಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು ತಮಿಳುನಾಡಿನಲ್ಲಿ ಈಗಾಗಲೇ ಸಾಕಷ್ಟು ಮಳೆಯಾಗಿದೆ. ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಆದರೂ ನೀರಿಗಾಗಿ ಖ್ಯಾತೆ ನಡೆಯುತ್ತಿದೆ. ಸರ್ಕಾರ ಯಾವುದೇ ರೀತಿ ರಾಜ್ಯದ ಜನರ ಪರವಾಗಿ ನಿಲುವು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಕಾವೇರಿಗಾಗಿ ಬಂದ್ ಹೋರಾಟಕ್ಕೆ ಇಡೀ ಕರುನಾಡು ಮಿಡಿದಿದೆ. ಇಂದಿನ ಬಂದ್ ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಡು, ನುಡಿ, ನೆಲ, ಜಲದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು. ಕನ್ನಡ ಕುಟುಂಬದಲ್ಲಿ ಹಾಸುಹೊಕ್ಕಾಗಿರುವ ಈ ಸಾಮರಸ್ಯ ಹಾಗೂ ಐಕ್ಯತೆ ನೆರೆ ರಾಜ್ಯಗಳಿಗೆ ಎಚ್ಚರಿಕೆ ಗಂಟೆ ಆಗಬೇಕು. ಕಾಂಗ್ರೆಸ್ ಸರ್ಕಾರ ಕನ್ನಡ ಭಾವನೆಗಳನ್ನು ದಮನ…