Subscribe to Updates
Get the latest creative news from FooBar about art, design and business.
- ತುಮಕೂರು: ಜಯನಗರದಲ್ಲಿ ಡ್ರಗ್ಸ್ ಮಾರಾಟ ಜಾಲ ಪತ್ತೆ; ಮೂವರ ಬಂಧನ
- ಮಾನಸಿಕ ಹಿಂಸೆ ನೀಡಿ ಮಹಿಳೆಯ ಗೃಹಬಂಧನ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಂತ್ರಸ್ತೆಯ ರಕ್ಷಣೆ
- ಬಸವಣ್ಣ ಯಾವುದೇ ಜಾತಿಗೆ ಸೀಮಿತವಲ್ಲ: ಕೊಟ್ಟೇಶ್ ಎಸ್.ಉಪ್ಪಾರ್
- ನೀಟ್ ಪರೀಕ್ಷೆ ವೈಫಲ್ಯಕ್ಕೆ ಕೇಂದ್ರವೇ ಹೊಣೆ: ತುಮಕೂರು ಸಂಸದರ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ ಯುವ ಕಾಂಗ್ರೆಸ್
- ತುಮಕೂರು: ಆನ್ಲೈನ್ ಔಷಧ ಮಾರಾಟ ವಿರೋಧಿಸಿ ಮೇ 20ರಂದು ಜಿಲ್ಲೆಯಾದ್ಯಂತ ಔಷಧ ಅಂಗಡಿಗಳ ಬಂದ್
- NTA ರದ್ದುಗೊಳಿಸಲು ಆಗ್ರಹಿಸಿ ಎಐಡಿಎಸ್ ಓ ಪ್ರತಿಭಟನೆ
- ಮಾರಮ್ಮ ತಾಯಿ ಕೃಪೆಯಿಂದ ಆದಷ್ಟು ಬೇಗ ಮಳೆ ಆಗಮನವಾಗಲಿ: ಸಿದ್ದರಬೆಟ್ಟ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ
- ಕೊರಟಗೆರೆ: ಬೂದಗವಿಯಲ್ಲಿ ಹೊಸ ಕೊಳವೆಬಾವಿ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು
Author: admin
ಕುಂದಾಪುರ ಕನ್ನಡ ಭಾಷೆ ಮಾತನಾಡುವವರು ರಾಜ್ಯ ಮಾತ್ರವಲ್ಲ ಪ್ರಪಂಚದ ಮೂಲೆ ಮೂಲೆಯಲ್ಲೂ ನೆಲೆಸಿದ್ದಾರೆ. ಕುಂದಗನ್ನಡ ಎಂದು ಪ್ರಖ್ಯಾತಿಯ ಗ್ರಾಮೀಣ ಸೊಗಡಿನ ಭಾಷೆಗೆ ತನ್ನದೇ ಅಸ್ತಿತ್ವ ಕೊಡಬೇಕು. ಈ ಭಾಷೆ ಕೇವಲ ಹಾಸ್ಯಕ್ಕೆ ಸೀಮಿತವಾಗದೇ ಇದು ಕುಂದಾಪುರದ ಜನರ ಬದುಕಿನ ಭಾಷೆಯಾಗಿದೆ ಎನ್ನುವುದನ್ನು ತಿಳಿಸುವುದಕ್ಕಾಗಿಯೇ ವಿಶ್ವಕುಂದಾಪ್ರಕನ್ನಡ ದಿನಾಚರಣೆ ನಗರದ ಅತ್ತಿಗುಪ್ಪೆಯ ಬಂಟರ ಸಂಘದಲ್ಲಿ ನಡೆಯಿತು. ಇಂದು ಮೊದಲಿಗೆ ಕುಂದಾಪುರದ ರಥವನ್ನು ಶಾಸಕ ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಲಿ, ಕಂಬಳದ ಧುರೀಣ ಶಾಂತರಾಮ್ ಶೆಟ್ಟಿ ಬಾರ್ಕೂರ್ ಎಳೆದು ಸಂಸ್ಕೃತಿಯನ್ನು ಮೆರೆದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಾಂಪ್ರದಾಯಿಕವಾಗಿ ಕಂಬಕ್ಕೆ ಕುಂದಾಪುರ ದಿನದ ಲೋಗೋ ಏರಿಸಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ಳೂರು ಭಾಗವಹಿಸಿದ್ದರು. ಉದ್ಘಾಟನೆ ಬಳಿಕ ಯಕ್ಷಗಾನ, ಹಾಡು, ನಾಟಕಗಳು ಸೇರಿದ್ದ ಜನರ ಮನಸೆಳೆದವು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ತಾವು ಈಗ ಫುಲ್ ಬ್ಯುಸಿ, ನಾನು ಬಲ್ಲೆ. ಆದರೂ ಕೊಂಚ ಬಿಡುವು ಮಾಡಿಕೊಳ್ಳಿ, ಸದನ ಸಮಿತಿ ವರದಿಯ ಮೇಲೆ ಕಣ್ಣಾಡಿಸಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇವೇಗೌಡರು ಸಿಎಂ ಆಗಿದ್ದ 1995ರ ಅಕ್ಟೋಬರ್, ನವೆಂಬರಿನಲ್ಲಿ ಈ ಯೋಜನೆಗೆ ಸಹಿ ಹಾಕುವ ವೇಳೆ ಇಂದಿನ ಮುಖ್ಯಮಂತ್ರಿಗಳೂ ಅಂದು ಹಣಕಾಸು ಸಚಿವರಾಗಿದ್ದರು. ಅವರಿಗೂ ಸತ್ಯ ಗೊತ್ತಿರುತ್ತದೆ. ಒಮ್ಮೆ ವಿಚಾರಿಸಲು ನಿಮಗೇನು ಸಮಸ್ಯೆ? ಎಂದು ಪ್ರಶ್ನೆ ಮಾಡಿದರು. ಸದನ ಸಮಿತಿಯ ಕೊನೆ ಪ್ಯಾರಾ ಓದಿಕೊಳ್ಳಿ. ಸಮಿತಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ. ನಿಮಗೆ ಧೈರ್ಯವಿದ್ದರೆ ಸಿಬಿಐ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ. 135 ಸೀಟುಗಳ ಬಹುಮತ ಸರಕಾರ ನಿಮ್ಮದಲ್ಲವೇ? ನುಡಿದಂತೆ ನಡೆಯುವ ಸರ್ಕಾರ ನಿಮ್ಮದಲ್ಲವೇ?? ನೀವು ನುಡಿದಂತೆ ನಡೆಯುವ ಸಮಯ ಬಂದಿದೆ. ನಡೆದು ತೋರಿಸುವಿರಾ? ಎಂದು ಸವಾಲು ಹಾಕಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ಐಷಾರಾಮಿ ಜೀವನ ಶೈಲಿಗಾಗಿ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಕಳ್ಳನನ್ನು ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮೂಲದ ರಫೀಕ್ (29) ಬಂಧಿತ ಆರೋಪಿ, ಒಂದು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ ನೆಲಮಂಗಲ ಹಾಗೂ ರಾಜಾಜಿನಗರದಲ್ಲಿ ಮತ್ತೆ ಕೈಚಳಕ ತೋರಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಐಷಾರಾಮಿ ಜೀವನಕ್ಕಾಗಿ ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಆರೋಪಿ, ಬೆಂಗಳೂರು ಸೇರಿದಂತೆ ಹಲವು ಕಡೆ ಕಳ್ಳತನ ಮಾಡಿದ್ದ. ಬೀಗ ಹಾಕಿದ ಮನೆ, ಅಂಗಡಿಗಳನ್ನೇ ಗುರಿಯಾಗಿಸಿಕೊಂಡು ಬರೋಬ್ಬರಿ 20 ಕಡೆ ಕಳ್ಳತನ ಮಾಡಿ ಜೈಲು ಸೇರಿದ್ದ. ಕಳೆದ ತಿಂಗಳಷ್ಟೇ ಜೈಲಿನಿಂದ ಹೊರಬಂದಿದ್ದವನು, ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ನೆಲಮಂಗಲದ ಬಳಿ ಫಿಶ್ ಟೆಂಡರ್ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರ ಮನೆಯಲ್ಲಿಯೂ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ಎರಡು ಪ್ರಕರಣಗಳಿಂದ 22 ಲಕ್ಷ ಮೌಲ್ಯದ 409 ಗ್ರಾಂ ಚಿನ 425 ಗಾಂಬೆಲಿ, 189 ಗ್ರಾಂ ತೂಕದ…
ಬೆಂಗಳೂರು ನಗರದ ಹೆಬ್ಬಗೋಡಿ ಸಮೀಪದ ತಿರುಪಾಳ್ಯ ಕೆರೆಯಲ್ಲಿ ನಡೆಯುತ್ತಿರುವ ಭೂಮಾಫಿಯಾಗಳ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಮೋಹನ್ ದಾಸರಿ ನೇತೃತ್ವದಲ್ಲಿ ನಿಯೋಗ ಭೇಟಿ ಮಾಡಿ ಇಂದು ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಮಾತನಾಡಿದ ಮೋಹನ್ ದಾಸರಿ “ತಿರುಪಾಳ್ಯ ಕೆರೆ 16 ಎಕರೆ ವಿಸ್ತೀರ್ಣವಿದ್ದು, ಭೂ ಮಾಫಿಯಾಗಳು ಸಾಕಷ್ಟು ಒತ್ತುವರಿ ಮಾಡಿಕೊಂಡಿರುವುದು ಕಂಡು ಬರುತ್ತಿದೆ. ಕೆರೆಗಳ ಪುನರುಜ್ಜಿವನ ಕಾರ್ಯದಲ್ಲಿ ಸಾಕಷ್ಟು ವರ್ಷಗಳಿಂದ ತೊಡಗಿಸಿಕೊಂಡಿರುವ ಆನಂದ್ ಮಲ್ಲಿಗೆವಾಡ್ ಈ ಕೆರೆಯನ್ನು ಪುನರುಜ್ಜಿವನಗೊಳಿಸುವ ಕಾರ್ಯದಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಈಗಾಗಲೇ ಭೂ ಮಾಫಿಯಾ ಗಳಿಂದ ಪುನರುಜೀವನ ಕಾರ್ಯಕ್ಕೆ ಸಾಕಷ್ಟು ಅಡೆತಡೆಗಳನ್ನು ನೀಡಿ, ಬೆದರಿಕೆಗಳನ್ನು ಒಡ್ಡಲಾಗುತ್ತಿದ್ದು, ಆಮ್ ಆದ್ಮಿ ಪಕ್ಷವು ಈ ಕೆರೆಯ ಪುನರುಜ್ಜಿವನಕ್ಕಾಗಿ ಆನಂದ್ ರವರೊಂದಿಗೆ ಸದಾ ಕಾಲ ಇರುತ್ತದೆ ಹಾಗೂ ಈ ಮಾಫಿಯಾಗಳ ವಿರುದ್ಧ ಹೋರಾಟ ಮಾಡಲಾಗುತ್ತದೆ” ಎಂದು ಎಚ್ಚರಿಸಿದರು. “ಈಗಾಗಲೇ ಈ ಕೆರೆಗೆ ಸಾಕಷ್ಟು ರಾಸಾಯನಿಕಗಳನ್ನು ಹಾಗೂ ಕಲುಷಿತ ನೀರನ್ನು ಹರಿಯ ಬಿಡಲಾಗುತ್ತಿದೆ. ಕೂಡಲೇ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್ ಇತ್ತ ಕಡೆ…
ಉದ್ಯೋಗಕ್ಕೆ ಕಂಪನಿಗಳ ಮೊರೆ ಹೋಗದೆ ಸಮಾಜಮುಖಿ ವಕೀಲ ವೃತ್ತಿಗೆ ಕಾನೂನು ಪದವೀಧರರು ಬರಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್. ಟಿ. ನರೇಂದ್ರ ಪ್ರಸಾದ್ ಹೇಳಿದರು. ಸಿಡೆದಹಳ್ಳಿಯ ಸೌಂದರ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘ವಕೀಲರಿಗೆ ಕೆಲಸವಿಲ್ಲವೆಂಬ ತಪ್ಪು ಭಾವನೆಯಿದೆ. ಅದು ಸುಳ್ಳಾಗಿದೆ. ಉದಾಹರಣೆಗೆ ಅಮೆರಿಕದಲ್ಲಿ 250 ಜನರಿಗೆ ಒಬ್ಬ ವಕೀಲರಿದ್ದಾರೆ. ಇಂಗ್ಲೆಂಡ್ ನಲ್ಲಿ 500 ಜನರಿಗೆ ಒಬ್ಬ ವಕೀಲನಿದ್ದರೆ, ಭಾರತದಲ್ಲಿ ಒಂದು ಸಾವಿರ ಜನರಿಗೆ ಒಬ್ಬರಿದ್ದಾರೆ. ಇದನ್ನು ಮನಗಂಡು ಪ್ರತಿಯೊಬ್ಬ ಕಾನೂನು ಪದವೀಧರರು ಸಮಾಜಮುಖಿಯಾದ ವೃತ್ತಿಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಆಶಿಸುತ್ತೇನೆ’ ಎಂದರು. ಕಾಲೇಜಿನ ಸಂಸ್ಥಾಪಕ ಪಿ. ಮಂಜಪ್ಪ ಮಾತನಾಡಿ ನೂತನ ಆವಿಷ್ಕಾರಗಳು ಬಂದಾಗ ಅದನ್ನು ನಾವು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಕಾಲೇಜಿನ ಸಿಇಒ ಎಂ. ಕೀರ್ತನ್ ಕುಮಾರ್ ಮಾತನಾಡಿದರು. ಪ್ರಾಂಶುಪಾಲ ಡಾ. ಮಹೇಶ್, ಟ್ರಸ್ಟಿ ವರುಣ್ ಕುಮಾರ್, ಬಿಸಿಎ ವಿಭಾಗದ ಮುಖ್ಯಸ್ಥೆ ರೇಖಾ, ಸಿಮ್ಸ್ ಕಾಲೇಜಿನ ನಿರ್ದೇಶಕ ವಾಸು, ಪ್ರಾಂಶುಪಾಲ ಸಂಜೀವ್ ಸಾಲಂಕಿ ಇದ್ದರು.…
‘ಪರೀಕ್ಷೆ ವೇಳೆ ವಿದ್ಯಾರ್ಥಿ ತಪ್ಪು ಎಸಗಿದಾಗ ತಿಳಿಹೇಳುವ ಕೆಲಸ ಮಾಡಿದ್ದೇವೆಯೇ ಹೊರತು ಆತ್ಮಹತ್ಯೆಗೆ ಪ್ರಚೋದನೆ ನೀಡಿಲ್ಲ’ ಎಂದು ವಿದ್ಯಾರ್ಥಿ ಆದಿತ್ಯ ಪ್ರಭು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಇಎಸ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ‘ಸದ್ಯ ತನಿಖೆ ಪ್ರಗತಿಯಲ್ಲಿ ಇರುವುದರಿಂದ ಹೆಚ್ಚಿನ ವಿಚಾರ ಬಹಿರಂಗವಾಗಿ ಹೇಳುವುದು ಕಾನೂನಿನ ಪ್ರಕಾರ ತಪ್ಪು. ಆದರೆ, ಸತ್ಯಾಂಶವನ್ನು ವರದಿ ಮೂಲಕ ತನಿಖಾ ಸಮಿತಿಗೆ ಸಲ್ಲಿಸಿದ್ದೇವೆ’ ಎಂದು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ತಿಳಿಸಿದ್ದಾರೆ. ‘ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ಕಳೆದುಕೊಂಡಿರುವ ಬಗ್ಗೆ ಕಾಲೇಜಿಗೂ ಅತೀವ ಬೇಸರವಿದೆ. ಆದಿತ್ಯ ಉತ್ತಮ ವಿದ್ಯಾರ್ಥಿಯಾಗಿದ್ದ. ಶೈಕ್ಷಣಿಕವಾಗಿಯೂ ಮುಂದಿದ್ದ. ಆತ್ಮಹತ್ಯೆ ಮಾಡಿಕೊಳ್ಳುವಂತಹ ವಿಚಾರಕ್ಕೆ ನಮ್ಮ ಖಂಡನೆ ಇದೆ’ ಎಂದು ಹೇಳಿದ್ದಾರೆ. ಜುಲೈ 17ರಂದು ವಿದ್ಯಾರ್ಥಿಯು ಪರೀಕ್ಷೆಗೆ ಹಾಜರಾಗಿದ್ದ. ಆ ವೇಳೆ ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ಬಳಕೆ ಮಾಡಿದ್ದರಿಂದ ಬುದ್ಧಿ ಹೇಳಲಾಗಿತ್ತು. ಪ್ರಕರಣ ಸಂಬಂಧ ವಿದ್ಯಾರ್ಥಿ ಪೋಷಕರು ದೂರು ದಾಖಲಿಸಿದ್ದಾರೆ. ‘ತನಿಖೆ ಪ್ರಗತಿಯಲ್ಲಿರುವಾಗ ವಿಶ್ವವಿದ್ಯಾಲಯ ತನ್ನ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಮೌನ ವಹಿಸಲಾಗಿತ್ತು.…
ಅಪರಾಧ ಪ್ರಕರಣಗಳ ಜೊತೆಯಲ್ಲಿ, ಅಪಘಾತ ಹಾಗೂ ಸಂಚಾರ ಸಂಬಂಧಿತ ತುರ್ತು ಸಹಾಯಕ್ಕಾಗಿ 112: ಪೊಲೀಸ್ ಕಮಿಷನರ್ ಬಿ. ದಯಾನಂದ್
ಜನರ ತುರ್ತು ಸಹಾಯಕ್ಕಾಗಿ ನಮ್ಮ 112 ಕಾರ್ಯನಿರ್ವಹಿಸುತ್ತಿದೆ. ಅಪರಾಧ ಪ್ರಕರಣಗಳ ಜೊತೆಯಲ್ಲಿ, ಅಪಘಾತ ಹಾಗೂ ಸಂಚಾರ ಸಂಬಂಧಿತ ತುರ್ತು ಸಹಾಯಕ್ಕಾಗಿಯೂ ಜನರು ಕರೆ ಮಾಡಬಹುದು’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದ್ದಾರೆ. ಮಲ್ಲೇಶ್ವರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡಿದ್ದ ಜನ, ‘ನಮ್ಮ 112 ಎಲ್ಲ ರೀತಿಯ ತುರ್ತು ಸಹಾಯಕ್ಕೂ ವಿಸ್ತರಣೆ ಮಾಡಿ’ ಎಂದು ಕೋರಿದ್ದರು. ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದ ದಯಾನಂದ್, ‘ನಮ್ಮ 112 ವಿಸ್ತರಣೆ ಮಾಡಲಾಗಿದೆ’ ಎಂದು ಟ್ವಿಟ್ ಮಾಡಿದ್ದಾರೆ. ‘ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕ್ಕೆ ಸಿಲುಕಿದರೆ, ಕಾನೂನು ಸುವ್ಯವಸ್ಥೆಗೆ ಯಾರಾದರೂ ಧಕ್ಕೆ ತಂದರೆ 112ಕ್ಕೆ ಕರೆ ಮಾಡಬಹುದು. ಅಪಘಾತದ ವೇಳೆ ಸಹಾಯ ಹಾಗೂ ಸಂಚಾರದಲ್ಲಿ ಏನಾದರೂ ತೊಂದರೆಯಾದರೂ ಜನರು 112ಕ್ಕೆ ಕರೆ ಮಾಡಿ ತುರ್ತು ಸಹಾಯ ಕೇಳಬಹುದು. ಸಂಬಂಧಪಟ್ಟ ಸಿಬ್ಬಂದಿ, ಕೆಲ ನಿಮಿಷಗಳಲ್ಲಿ ಸ್ಥಳದಲ್ಲಿ ಹಾಜರಾಗಿ ಸಮಸ್ಯೆ ಆಲಿಸಲಿದ್ದಾರೆ’ ಎಂದು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…
ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೇಯ ಕೃತ್ಯವನ್ನು ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಖಂಡಿಸಿದೆ. ಬಂಡಾಯ ಸಾಹಿತ್ಯ ಸಂಘಟನೆಯ ಬರಗೂರು ರಾಮಚಂದ್ರಪ್ಪ, ಜಿ. ರಾಮಕೃಷ್ಣ, ಆರ್. ಜಿ. ಹಳ್ಳಿ ನಾಗರಾಜ್, ಭಕ್ತರಹಳ್ಳಿ ಕಾಮರಾಜ್, ಎಚ್. ಎಲ್. ಪುಷ್ಪ, ಸುಕನ್ಯಾ ಮಾರುತಿ, ಎಲ್. ಹನುಮಂತಯ್ಯ, ವೈ. ಬಿ. ಹಿಮ್ಮಡಿ, ಕೆ. ಶರೀಫಾ, ಸಿದ್ಧನಗೌಡ ಪಾಟೀಲ, ಅಶ್ವಿನಿ ಮದನಕರ, ಬಿ. ಎಂ. ಹನೀಫ್, ಪಿ. ಆರ್. ವೆಂಕಟೇಶ್, ಗುರುಶಾಂತ್, ಬಿ. ರಾಜಶೇಖರ ಮೂರ್ತಿ, ಬಿ. ಎನ್. ಮಲ್ಲೇಶ್, ಎ. ಬಿ. ರಾಮಚಂದ್ರಪ್ಪ ಅವರು ಖಂಡನಾ ಹೇಳಿಕೆ ನೀಡಿದ್ದಾರೆ. ಇದೊಂದು ಆಘಾತಕಾರಿ ಘಟನೆಯಾಗಿದ್ದು, ಮಾನವೀಯ ಮೌಲ್ಯದ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಘಟನೆ ನಡೆದು 77 ದಿನಗಳ ನಂತರ ಬಯಲಾಗಿರುವುದು ಮತ್ತು ಕ್ರಮ ಕೈಗೊಳ್ಳಲು ವಿಳಂಬವಾಗಿರುವುದು ಆಡಳಿತಗಾರರ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಹಿಂಸೆಯನ್ನು ನಿಯಂತ್ರಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನಾದರೂ ಎಲ್ಲ ಪಕ್ಷಗಳ, ಚಿಂತಕರ, ಸಾಮಾಜಿಕ ಕಾರ್ಯಕರ್ತರ ಸಹಕಾರವನ್ನು ಪಡೆದು ಶಾಂತಿ…
ಮಣಿಪುರದಲ್ಲಿ ಮೇ 4ರಂದು ನಡೆದಿದ್ದ ಹಿಂಸಾಚಾರದ ವೇಳೆ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ಘಟನೆಯನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್ಎಸ್) ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದರು. ‘ಮಣಿಪುರದ ಕುಕಿ ಸಮುದಾಯದ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುವವರೆಗೂ ಮಣಿಪುರದ ಪೊಲೀಸರು ತನಿಖೆ ಕೈಗೊಂಡಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು. ‘ಬೇಟಿ ಬಚಾವೊ, ಬೇಟಿ ಪಡಾವೊ’ ಎಂಬುದು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಕೆಲವು ತಿಂಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಶಾಂತಿ ಸ್ಥಾಪಿಸಲು ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದೆ. ಮಾನವೀಯತೆಯ ಮೇಲಿನ ದಾಳಿಯನ್ನು ಪ್ರಜ್ಞಾವಂತ ಸಮಾಜ ಒಗ್ಗಟ್ಟಾಗಿ ಧ್ವನಿ ಎತ್ತಬೇಕು. ಮಣಿಪುರದಲ್ಲಿ ಮಹಿಳೆಯರ ಮೇಲೆ ಅಮಾನವೀಯ ದೌರ್ಜನ್ಯ ಎಸಗಿದ ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷ ನೀಡಬೇಕು’ ಎಂದು ಆಗ್ರಹಿಸಿದರು. ಸಂಘಟನೆಯ ರಾಜ್ಯ ಸಮಿತಿಯ ಸದಸ್ಯೆಯರಾದ ಭಾಗ್ಯ,…
ಆರೋಗ್ಯ ಕವಚ 108 ಯೋಜನೆಯಡಿ ಆಂಬುಲೆನ್ಸ್ ಸೇವೆ ಸುಧಾರಿಸಲು ಮುಂದಾಗಿರುವ ಆರೋಗ್ಯ ಇಲಾಖೆ, ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನ ಮಾಡಲು ತಾಂತ್ರಿಕ ಸಮಿತಿ ರಚಿಸಿದೆ. ‘104’ ಆರೋಗ್ಯ ಸಹಾಯವಾಣಿ ಸೇವೆ ಸುಧಾರಿಸಲು ಸಹ ಈ ಸಮಿತಿ ನೆರವಾಗಲಿದೆ. ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಹಾಗೂ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಿರ್ದೇಶಕರ ಅಧ್ಯಕ್ಷತೆಯಲ್ಲಿ ಈ ಸಮಿತಿ ಕಾರ್ಯ ನಿರ್ವಹಿಸಲಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾಜಿ ಕುಲಪತಿ, ಕಾರ್ಮಿಕ ಇಲಾಖೆಯ ಆಯುಕ್ತ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರನ್ನು ಸಮಿತಿ ಒಳಗೊಂಡಿರಲಿದೆ ಎಂದು ಇಲಾಖೆ ತಿಳಿಸಿದೆ. ಟೆಂಡರ್ ಪ್ರಕ್ರಿಯೆ, ಉತ್ತಮ ಆರೋಗ್ಯ ಸೇವೆಗೆ ಅಳವಡಿಸಿಕೊಳ್ಳಬೇಕಾದ ಸೌಲಭ್ಯ, ತಂತ್ರಜ್ಞಾನದ ಬಗ್ಗೆ ಒಂದು ತಿಂಗಳೊಳಗೆ ಸಮಿತಿ ವರದಿ ನೀಡಲಿದೆ ಎಂದು ಇಲಾಖೆ ಹೇಳಿದೆ. ಯೋಜನೆ ನಿರ್ವಹಿಸುತ್ತಿರುವ ಜಿವಿಕೆ-ಇಎಂಆರ್‌ಐ ಸಂಸ್ಥೆ ವಿರುದ್ಧ ಆರೋಪಗಳಿದ್ದವು. ವೇತನ ಪಾವತಿಯಾಗುತ್ತಿಲ್ಲ ಎಂದು ಸಂಸ್ಥೆಯ ನೌಕರರು ದೂರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…