Subscribe to Updates
Get the latest creative news from FooBar about art, design and business.
- ತುರುವೇಕೆರೆ: ವಿದ್ಯುತ್ ಖಾಸಗಿಕರಣ ತಿರಸ್ಕರಿಸಲು ಒತ್ತಾಯಿಸಿ ರೈತ ಸಂಘದಿಂದ ಮನವಿ
- ನಾಡಪ್ರಭು ಕೆಂಪೇಗೌಡರದು ಜಾತ್ಯತೀತ ಆಡಳಿತ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾರ್ವಜನಿಕ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ | ಹೆಗ್ಗರೆ ಗ್ರಾ.ಪಂ. ಪಿಡಿಒ ಅಮಾನತು
- ತುಮಕೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರವಣ ತಪಾಸಣಾ ಶಿಬಿರ
- ಕೊರಟಗೆರೆ: 10,016 ಮಕ್ಕಳಿಗೆ ಪೋಲಿಯೋ ಲಸಿಕಾ ಗುರಿ: ಡಾ.ಜ್ಯೋತ್ಸ್ನಾ ರೆಡ್ಡಿ ಕರೆ
- ಜುಲೈ 3ರಂದು ‘ದಲಿತ ಜನಾಗ್ರಹ ಸಮಾವೇಶ’: ಸರಗೂರು ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಬಿಡುಗಡೆ
- ಮಧುಗಿರಿ: ಸಿದ್ಧಾರ್ಥ ವಸತಿ ಪ್ರೌಢಶಾಲೆಯಲ್ಲಿ 2006ರ ಬ್ಯಾಚ್ ಹಳೆಯ ವಿದ್ಯಾರ್ಥಿಗಳಿಂದ ಉಚಿತ ಸಮವಸ್ತ್ರ ವಿತರಣೆ
- SIR: ಅರ್ಹ ನಾಗರಿಕರ ಮತದಾನದ ಹಕ್ಕು ಕಸಿದುಕೊಳ್ಳುವ ಅಪಾಯ: ಹೆಚ್.ವಿ. ವಾಸು ಆತಂಕ
Author: admin
ಮಾಜಿ ಡಿಸಿಎಂ ಬೆಳಗಾವಿಯ ಪ್ರಭಾವಿ ಬಿಜೆಪಿ ನಾಯಕ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಮತ್ತೊಂದು ದೊಡ್ಡ ವಿಕೆಟ್ ಪತನವಾಗಿದೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ 7ನೇ ಬಾರಿ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲಎನ್ನುವ ಕಾರಣಕ್ಕೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಮಲ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದು, ರಾತ್ರಿ ಇಡೀ ಕಾಂಗ್ರೆಸ್ ನಾಯಕರ ಜೊತೆ ಸಭೆ ಮಾಡಿ ಚರ್ಚಿಸಿದ್ದು, ಕೈ ಹಿಡಿಯಲು ಮುಹೂರ್ತ ಫಿಕ್ಸ್ ಆಗಿದೆ. ನಿರೀಕ್ಷೆಯಂತೆ ಶೆಟ್ಟರ್‌ಗೆ ಗಾಳ ಹಾಕಿ ಕಾದು ಕುಳಿತ್ತಿದ್ದ ಕೈ ನಾಯಕರು ಫುಲ್ ಅಲರ್ಟ್ ಆಗಿದ್ರು. ಕಾಂಗ್ರೆಸ್‌ನ ಪ್ರಭಾವಿ ವೀರಶೈವ ಲಿಂಗಾಯತ ಮುಖಂಡ ಶಾಮನೂರು ಶಿವಶಂಕರಪ್ಪರನ್ನೇ ಮುಂದೆ ಬಿಟ್ಟಿದ್ರು. ಬೆಂಗಳೂರಿನ ರಿಚ್ಮಂಡ್ಟೌನ್ನಲ್ಲಿರುವ ಶಾಮನೂರು ಶಿವಶಂಕರಪ್ಪ ಅವರ ಸ್ಕೈಗಾರ್ಡನ್ ಅಪಾರ್ಟ್ಮೆಂಟ್ನ ಫ್ಲ್ಯಾಟ್‌ನಲ್ಲಿ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಉಪಸ್ಥಿತಿಯಲ್ಲಿ ನಿನ್ನೆ…
ಕೋಲಾರ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಒಟ್ಟಾಗಿ ಕೆಲಸ ಮಾಡುತ್ತಿದೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಪೂರ್ಣ ಬಹುಮತಗಳೊಂದಿಗೆ ಅಧಿಕಾರಕ್ಕೆ ತರಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಕೋಲಾರದಲ್ಲಿ ನಡೆದ ಜೈ ಭಾರತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ 40% ಹಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೀಳಿಸಬಹುದು. ಕಳ್ಳ ಹಣದಲ್ಲಿ ಸರ್ಕಾರವನ್ನು ಬೀಳಿಸುವ ಕೆಲಸ ಮಾಡಬಹುದು. ಬಿಜೆಪಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದರು. ಮೋದಿಯವರೇ ವರದಿ ಬಿಡುಗಡೆ ಮಾಡಿ. ನೀವು ವರದಿ ಬಿಡುಗಡೆ ಮಾಡಲಿಲ್ಲ ಎಂದರೆ ಅದು ಒಬಿಸಿಗೆ ಮಾಡಿದ ಅಪಮಾನ. ನೀವು ಒಬಿಸಿ ಬಗ್ಗೆ ಮಾತನಾಡಿದಿರಿ. ಅವರ ಜನಸಂಖ್ಯೆ ಎಷ್ಟಿದೆ ಎಂದು ನಮಗೆ ಗೊತ್ತಿದೆ. ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆಯ ಅನುಗುಣವಾಗಿ ಅವರಿಗೆ ಅವಕಾಶ ನೀಡಿ. ಮೊದಲು 50% ಮೀಸಲಾತಿ ಇರುವುದನ್ನು ತೆಗೆದು ಹಾಕಿ. ಆಗ ಓಬಿಸಿ ಬಗ್ಗೆ ಮಾತಾಡಬಹುದು. ಮೋದಿ ಅದಾನಿಗೆ ಸಹಾಯ…
ತಿಪಟೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತು ಶಾಲೆ ಆರ್ಯ ಬಾಲಿಕಾ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಏಪ್ರಿಲ್ 14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 133ನೇ ಜನ್ಮ ದಿನವನ್ನು ಆಚರಿಸಲಾಯಿತು. ಕ.ಸಾ.ಪ. ತಾಲೂಕು ಅಧ್ಯಕ್ಷ ಬಸವರಾಜಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರವರ ಶ್ರೇಷ್ಠ ಕೊಡುಗೆ ‘ಸಂವಿಧಾನ’ ದಿಂದಾಗಿಯೇ ಸಮಾಜದ ಎಲ್ಲ ವರ್ಗಗಳ ಜನರು ಸಮಾನ ಅವಕಾಶ, ಹಕ್ಕುಗಳನ್ನು ಪಡೆಯುವಂತಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೆಚ್.ಎಸ್.ಮಂಜಪ್ಪ ಕಾರ್ಯದರ್ಶಿ ತಾಲೂಕು ಕ.ಸಾ.ಪ. ಇವರು ಅಂಬೇಡ್ಕರ್ ರವರ ಬಾಲ್ಯ, ವಿದ್ಯಾಭ್ಯಾಸ, ಹೋರಾಟದ ಬದುಕಿನ ಬಗ್ಗೆ ತಿಳಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಉಮಾದೇವಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಮವಸ್ತ್ರ ವಿತರಿಸಲಾಯಿತು. ಮುಮ್ತಾಜ್ ಮುಖ್ಯ ಶಿಕ್ಷಕರು ಸ್ವಾಗತಿಸಿ, ವಂದಿಸಿದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುರುವೇಕೆರೆ : ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಆಚರಿಸಲಾಯಿತು. ತಾಲೂಕು ದಂಡಾಧಿಕಾರಿಗಳಾದ ವೈ.ಎಂ., ರೇಣು ಕುಮಾರ್ ರವರ ನೇತೃತ್ವದಲ್ಲಿ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆಡಳಿತ ಸೌಧದ ಸಭಾಂಗಣದಲ್ಲಿ ಅಂಬೇಡ್ಕರ್ ರವರ ಭಾವಚಿತ್ರವನ್ನು ಇರಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ದೀಪವನ್ನು ಬೆಳಗಿಸಿ ಪುಷ್ಪಾರ್ಚನೆಯನ್ನು ಮಾಡಿ ನಮನ ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಕುಮಾರಿ ತ್ರಿವೇಣಿ, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಶಂಕರ್, ದಲಿತ ಮುಖಂಡರುಗಳಾದ ಬೀಚನಹಳ್ಳಿ ರಾಮಣ್ಣ , ಮಹದೇವಯ್ಯ ,ಡಾಕ್ಟರ್ ಚಂದ್ರಯ್ಯ ,ಶಿಕ್ಷಕರಾದ ಬೋರಪ್ಪ ,ಬಾಣಸಂದ್ರ ಕೃಷ್ಣ ಮಾದಿಗ , ಕುಣಿ ಕೇನಹಳ್ಳಿ ಜಗದೀಶ್ , ಸವಿತಾ ಸಮಾಜದ ಧನಂಜಯ್ , ವಾಲ್ಮೀಕಿ ಸಮಾಜದ ಮುಖಂಡರುಗಳಾದ ಶಿವಣ್ಣ ,ವಸಂತ್ ಕುಮಾರ್ ಇತರರು ಹಾಗೂ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…
ತುರುವೇಕೆರೆ: ಕಾಂಗ್ರೆಸ್ ಅಭ್ಯರ್ಥಿ ಬಿ.ಎಂ.ಎಲ್.ಕಾಂತರಾಜ್ ರವರ ಕಚೇರಿಯಲ್ಲಿ ತಾಲ್ಲೂಕಿನ ಮಣಿಚಂಡೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ನೂರಾರು ಯುವಕರು ಬೆಮೆಲ್ ಕಾಂತರಾಜುರವರ ನಾಯಕತ್ವ ಆದರ್ಶಗಳನ್ನು ಮತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳನ್ನು ತೊರೆದು ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸ್ ಹಾಗೂ ವಕೀಲ ನಟರಾಜ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡರು. ನಂತರ ಮಾತನಾಡಿದ ಬೆಮೆಲ್ ಕಾಂತರಾಜು ನಮ್ಮ ಪಕ್ಷಕ್ಕೆ ಬಂದಿರುವ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುವುದಾಗಿ ತಿಳಿಸಿ ಎಲ್ಲರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತೇವೆ. ನಮ್ಮ ಸರ್ಕಾರ ಬರಲೆಂದು ನೀವು ನಮ್ಮ ಜೊತೆ ಕೈಜೋಡಿಸಿದ್ದೀರಿ , ಅದಕ್ಕೆ ನನ್ನ ಕೃತಜ್ಞತೆ ತಿಳಿಸುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀರೆಂದು ನಂಬಿದ್ದೇನೆ ಎಂದರು. ಇಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ನನಗೆ ವಿಶ್ವಾಸವಿದೆ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಸಹ ನನ್ನನ್ನು ಯಾವುದೇ ಸಂಕೋಚವಿಲ್ಲದೆ ಸಂಪರ್ಕಿಸಿ ಎಂದ ಅವರು, ಸೋಮವಾರ ನಾಮಪತ್ರ ಸಲ್ಲಿಸಲಿದ್ದೇನೆ, ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರುಗಳನ್ನು ಜನಗಳನ್ನು ಸೇರಿಸಿ ನಾಮಪತ್ರ ಸಲ್ಲಿಸುವ ಕಾರ್ಯವನ್ನು ನಾನು…
ತುರುವೇಕೆರೆ: ಶಾಸಕ ಮಸಾಲಾ ಜಯರಾಂ ರವರ ಸಮ್ಮುಖದಲ್ಲಿ ತಾಲ್ಲೂಕಿನ ಮಾಚೇನಹಳ್ಳಿ ಗ್ರಾಮದ ಯುವಕರುಗಳಾದ ಸುಜಯ್, ಮಂಜುನಾಥ್, ದೀಪು, ಸಿದ್ದುಶ್ರೀ, ಶಂಕರ, ಪ್ರಜ್ವಲ್ ರಾಮಡಿಹಳ್ಳಿ, ಮನು, ಮುಂತಾದ ಯುವಕರುಗಳು ಜೆಡಿಎಸ್ ತೊರೆದು ಮರಳಿ ಬಿ.ಜೆ.ಪಿ. ಪಕ್ಷವನ್ನು ಸೇರ್ಪಡೆಗೊಂಡರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಮಸಾಲಾ ಜಯರಾಮ್, ಈ ಗ್ರಾಮದ ಯುವಕರು ಪಕ್ಷಕ್ಕೆ ಮರಳಿ ಬಂದಿರುವುದು ನಮಗೆ ಆನೆ ಬಲ ಬಂದಂತಾಗಿದೆ, ನಾನು ಒಂದು ವರ್ಷದಿಂದ ಅವರ ಸಂಪರ್ಕದಲ್ಲಿದ್ದೆ, ಈಗ ಕಾಲ ಕೂಡಿ ಬಂದಿದೆ. ಮಾತೃ ಪಕ್ಷಕ್ಕೆ ಮರಳಿದ್ದಾರೆ ಎಂದರು. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ನಾವೆಲ್ಲಾ ಶ್ರಮ ವಹಿಸಿ ಕೆಲಸ ಮಾಡಬೇಕಿದೆ, ಅವಾಗ ಮಾತ್ರ ನಮಗೆ ಗೆಲುವು ಸಾಧ್ಯ. ನಮ್ಮ ಕಾರ್ಯಕರ್ತರಲ್ಲಿ ಚುನಾವಣಾ ಹುರುಪು ನನಗಿಂತ ಜಾಸ್ತಿಯಿದೆ, ಕಾರ್ಯಕರ್ತರು ಬಿಜೆಪಿಗೆ ವೋಟು ಹಾಕುವಂತೆ ಜನರ ಮನವೊಲಿಸಿ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ.ಅಧ್ಯಕ್ಷ ಕಿರಣ್, ಮುಖಂಡರಾದ ರಾಮಣ್ಣ, ರವಿ ಪಾಟೀಲ್, ಯುವಮೋರ್ಚಾದ ಬಸವೇಶ್, ಮನೋಹರ, ಸಿದ್ದಣ್ಣಯ್ಯ, ರೇಣುಕ ಸೇರಿದಂತೆ…
ಮಧುಗಿರಿ: ಅಧಿಕಾರವಿದ್ದರೂ ಕೂಡ ಜನಪರ ಕೆಲಸಗಳು ಮಾಡದ ಇಬ್ಬರು ಮಾಜಿ ಶಾಸಕರನ್ನು ಮನೆಗೆ ಕಳುಹಿಸಲು ಕ್ಷೇತ್ರದ ಜನತೆ ಮುಂದಾಗಬೇಕಾಗಿದೆ ಎಂದು ಸ್ಥಳೀಯ ಬಿಜೆಪಿ ಅಭ್ಯರ್ಥಿ ಎಲ್.ಸಿ. ನಾಗರಾಜ್ ಕರೆ ನೀಡಿದರು. ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರವು ತೀರ ಬಡಪೀಡಿತ ಪ್ರದೇಶವಾಗಿದ್ದು, ಈ ಭಾಗದಲ್ಲಿ ರೈತಾಪಿ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಮಳೆಯನ್ನೆ ಆಧರಿಸಿ ಇಲ್ಲ ಬೋರ್ವೆಲ್ ನೀರನ್ನು ಆಧರಿಸಿ ಬೆಳೆನಟ್ಟಿ ಜೀವನ ಮಾಡುವ ಪರಿಸ್ಥಿತಿ ರೈತರಿಗೆ ಹಲವಾರು ವರ್ಷಗಳಿಂದ ಎದುರಾಗಿದೆ. 90ರ ದಶಕದ ನಂತರದಿಂದ ಇಲ್ಲಿಯವರೆಗೂ ಮಳೆ ಕೈಕೊಟ್ಟ ಸಂದರ್ಭದಲ್ಲಿ ಭೂಮಿಯಲ್ಲಿ ವ್ಯವಸಾಯ ಮಾಡಲು ಆಗದಿರುವ ಸಂದರ್ಭ ವಲಸೆ ಹೋಗುವ ಪ್ರಕ್ರಿಯ ಮಧುಗಿರಿಯಲ್ಲಿ ಪ್ರಾರಂಭವಾಗಿದೆ ಎಂದು ಅವರು ಹೇಳಿದರು. ಭದ್ರಾ ಮೇಲ್ದಂಡೆ ಯೋಜನೆ ಅಡಿಯ 19 ಟಿಎಂಸಿ ನೀರು ಲಭ್ಯವಿದ್ದು ಇದನ್ನು ಬಳಸಿಕೊಂಡು ಬಯಲು ಸೀಮೆ ಭಾಗದ ಜನರಿಗಾಗಿ ಶಾಶ್ವತ ಶುದ್ಧ ನೀರು ಕೊಡುವ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರದ ನಾಯಕರೊಂದಿಗೆ ಚರ್ಚಿಸಿ…
ಜರ್ಮನಿಯು ಪರಮಾಣು ಯುಗಕ್ಕೆ ವಿದಾಯ ಹೇಳುತ್ತದೆ. ಜರ್ಮನಿಯು ಕೊನೆಯ ಮೂರು ಕಾರ್ಯನಿರ್ವಹಣೆಯ ಪರಮಾಣು ವಿದ್ಯುತ್ ಸ್ಥಾವರಗಳಾದ ಎಮ್ಸ್ಲ್ಯಾಂಡ್, ಇಸಾರ್ 2 ಮತ್ತು ನೆಕರ್ವೆಸ್ತೈಮ್ ಅನ್ನು ಮುಚ್ಚುವ ಮೂಲಕ ಪರಮಾಣು ಯುಗಕ್ಕೆ ವಿದಾಯ ಹೇಳಿತು. ಜರ್ಮನಿಯ ಈ ಕ್ರಮವು ಅನೇಕ ಯುರೋಪಿಯನ್ ರಾಷ್ಟ್ರಗಳು ಪರಮಾಣು ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. 1970 ರಿಂದ ದೇಶದಲ್ಲಿ ಪ್ರಾರಂಭವಾದ ಪರಮಾಣು ವಿರೋಧಿ ಪ್ರತಿಭಟನೆಗಳು ಪರಮಾಣು ವಿದ್ಯುತ್ ಸ್ಥಾವರಗಳ ಸ್ಥಗಿತಕ್ಕೆ ಕಾರಣವಾಯಿತು. ಪೆನ್ಸಿಲ್ವೇನಿಯಾದ ತ್ರೀ ಮೈಲ್ ಐಲ್ಯಾಂಡ್ ಪರಮಾಣು ವಿದ್ಯುತ್ ಸ್ಥಾವರದಲ್ಲಿ 1979 ರ ಸೋರಿಕೆ ಮತ್ತು 1986 ರ ಚೆರ್ನೋಬಿಲ್ ದುರಂತವು ಈ ಪ್ರತಿಭಟನೆಗಳನ್ನು ತೀವ್ರಗೊಳಿಸಿತು. 2000 ರಲ್ಲಿ, ಜರ್ಮನಿಯು ಹಂತಗಳಲ್ಲಿ ಪರಮಾಣು ಹೋಗಲಿದೆ ಎಂದು ಘೋಷಿಸಲಾಯಿತು. ನಂತರ ಪರಮಾಣು ವಿದ್ಯುತ್ ಸ್ಥಾವರಗಳು ಸ್ಥಗಿತಗೊಳ್ಳಲು ಪ್ರಾರಂಭಿಸಿದವು. 2011 ರಲ್ಲಿ ಫುಕುಶಿಮಾ ದುರಂತವು ಇದನ್ನು ಬಲಪಡಿಸಿತು. ಜರ್ಮನಿಯಲ್ಲಿ 30 ಕ್ಕೂ ಹೆಚ್ಚು ಪರಮಾಣು ವಿದ್ಯುತ್ ಸ್ಥಾವರಗಳು ಇದ್ದವು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…
ಬ್ಲಡ್ ಪುಡಿಂಗ್ ಅಥವಾ ಟೆಟೆ ಕ್ಯಾನ್ ಬಾತುಕೋಳಿ ಮತ್ತು ಹಂದಿ ರಕ್ತ ಮತ್ತು ಬೇಯಿಸಿದ ಮಾಂಸದಿಂದ ಮಾಡಿದ ಸಾಂಪ್ರದಾಯಿಕ ವಿಯೆಟ್ನಾಮೀಸ್ ಭಕ್ಷ್ಯವಾಗಿದೆ. ರಕ್ತದ ಪುಡಿಂಗ್ ಅನ್ನು ಸೇವಿಸಿದ ನಂತರ 58 ವರ್ಷದ ಮಹಿಳೆಯೊಬ್ಬರಿಗೆ ತೀವ್ರ ತಲೆನೋವು ಉಂಟಾಗುತ್ತದೆ ಮತ್ತು ಕೆಲವೊಮ್ಮೆ ತಲೆತಿರುಗುವಿಕೆಯೊಂದಿಗೆ ಮನೆಯೊಳಗೆ ಹುಳುಗಳು ಬೀಳುತ್ತದೆ. ಆಸ್ಪತ್ರೆಗೆ ದಾಖಲಾದ ನಂತರ ಮಹಿಳೆಯ ಚರ್ಮದ ಕೆಳಗೆ ಹುಳುಗಳು ಹರಿದಾಡುತ್ತಿರುವುದು ಪತ್ತೆಯಾಗಿದೆ. ಹುಳುಗಳು ಮೆದುಳನ್ನು ತಲುಪಿದ್ದವು. 58 ವರ್ಷದ ಮಹಿಳೆಯೊಬ್ಬರು ತಿಂಗಳಿಗೊಮ್ಮೆ ರಕ್ತದ ಕಡುಬು ತಿನ್ನುತ್ತಿದ್ದರು. ಇದೇ ಹಾವಳಿಗೆ ಕಾರಣವಾಯಿತು. ಹೈದ್ರಾಬಾದ್ ಯಶೋದಾ ಆಸ್ಪತ್ರೆಯ ಹಿರಿಯ ಸಮಾಲೋಚಕ ವೈದ್ಯಾಧಿಕಾರಿ ಮಾತನಾಡಿ, ಅನೇಕರು ಈ ರೀತಿ ರಕ್ತದ ಕಡುಬು ತಿಂದು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ದಿಲೀಪ್ ಗುಡೆ ಮಾಹಿತಿ ನೀಡಿದರು. ದೇಹವನ್ನು ಪ್ರವೇಶಿಸುವ ಮತ್ತು ಅಲ್ಲಿ ಗುಣಿಸುವ ಹುಳುಗಳು ಮಾನವನ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತವೆ.ಪ್ರಸ್ತುತ, 58 ವರ್ಷದ ಮಹಿಳೆ ಚೇತರಿಸಿಕೊಂಡಿದ್ದಾರೆ ಮತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಅವರ ಮನೆಗೆ ಸ್ಥಳಾಂತರಿಸಲಾಗಿದೆ. ಔಷಧಿಗಳನ್ನು…
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಯುವತಿಯರನ್ನು ಭೇಟಿ ಮಾಡಿ ವಂಚನೆ ಮಾಡುತ್ತಿದ್ದ 26 ವರ್ಷದ ಯುವಕನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮುಜಾಫರ್‌ಗಢ ನಿವಾಸಿ ವಿಶಾಲ್ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ವಿಶಾಲ್ ಸ್ವಂತ ಉದ್ಯಮ ಆರಂಭಿಸಿ ವಿಫಲರಾಗಿದ್ದರು. ನಂತರ ಸುಲಭವಾಗಿ ಹಣ ಸಂಪಾದಿಸಲು ಮ್ಯಾಟ್ರಿಮೋನಿ ಮೂಲಕ ವಂಚನೆ ಪ್ರಾರಂಭವಾಯಿತು. ವಿಶಾಲ್ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಮಾನವ ಸಂಪನ್ಮೂಲ ಉದ್ಯೋಗಿಯಾಗಿ ವಾರ್ಷಿಕ 50-70 ಲಕ್ಷ ರೂಪಾಯಿಗಳ ನಡುವೆ ಪ್ರೊಫೈಲ್ ಅನ್ನು ರಚಿಸಿದ್ದು,ಅದರ ಮೂಲಕ ಯುವತಿಯರನ್ನು ವಂಚಿಸುತ್ತಿದ್ದ ಎನ್ನಲಾಗಿದೆ.. ವಿಶಾಲ್ ರಿಕ್ವೆಸ್ಟ್ ಕಳುಹಿಸುವ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ ಮೊಬೈಲ್ ನಂಬರ್ ಪಡೆದು ಆ ಮೂಲಕ ಯುವತಿಯರ ನಂಬಿಕೆಗಳಿಸಿ ಮೊಸ ಮಾಡುತ್ತಿದ್ದ .ತೋಟದ ಮನೆಗಳ ಚಿತ್ರಗಳನ್ನು ಶೇರ್ ಮಾಡಿ ಅದೆಲ್ಲ ತನ್ನದು ಎಂದು ಹೇಳಿ ಹುಡುಗಿಯರನ್ನು ಮೂರ್ಖರನ್ನಾಗಿಸುತ್ತಿದ್ದರು. ಇದಾದ ಬಳಿಕ ಕಡಿಮೆ ಬೆಲೆಗೆ ಐಫೋನ್ 14 ಪ್ರೊ ಮ್ಯಾಕ್ಸ್ ಸಿಗುತ್ತದೆ ಎಂದು ಮಹಿಳೆಯಿಂದ ಹಣ ವಸೂಲಿ ಮಾಡಿದ್ದಾನೆ. ಮತ್ತು ನಿಮ್ಮ ಸಂಬಂಧಿಕರಿಗೆ ಫೋನ್ ಅನ್ನು…