Author: admin

ನಿಪ್ಪಾಣಿ: ನಿಪ್ಪಾಣಿ ಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿ ಶಶಿಕಲಾ ಜೊಲ್ಲೆ ಸೋಮವಾರ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿ ಜಿ.ಎನ್. ಮಂಜುನಾಥಸ್ವಾಮಿ ಅವರಿಗೆ ಸೋಮವಾರ ಸಲ್ಲಿಸಿದದರು. ಸ್ಥಳೀಯ ಮುಖಂಡರು ಹಾಗೂ ಪಕ್ಷದ ಪದಾಧಿಕಾರಿಗಳೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮತದಾರರ ಆಶಿರ್ವಾದದಿಂದ ಎರಡು ಬಾರಿ ಶಾಸಕಿಯಾದೆ. ರಾಜ್ಯ ರಾಜಕಾರಣದವರೆಗೆ ಬೆಳೆಸಿರುವ ನನ್ನ ಕ್ಷೇತ್ರದ ಜನಬಾಂಧವರ ಪ್ರೀತಿ, ವಿಶ್ವಾಸ, ಬೆಂಬಲಕ್ಕೆ ನಾನು ಸದಾ ಚಿರಋಣಿಯಾಗಿರುವೆ. ಸಾಂಸ್ಕೃತಿಕ, ಕ್ರೀಡೆ ಮೊದಲಾದ ಎಲ್ಲ ಕ್ಷೇತ್ರಗಳ ಸಹಾಯದಿಂದ ಯುವಜನರು, ಮಹಿಳೆಯರಿಗೆ ಹಾಗೂ ಪುರುಷರು ಎಲ್ಲ ಕ್ಷೇತ್ರದಲ್ಲಿ ಮೆರೆಯಬೇಕೆನ್ನುವ ಹಂಬಲದಿಂದ ಶ್ರಮಿಸಿದ್ದೇನೆ. ಮತದಾರರು ನನ್ನನ್ನು ಮತ್ತೊಮ್ಮೆ ಆಶೀರ್ವದಿಸಿ ಬೆಂಬಲಿಸುವರು’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಯಾಧ್ಯಕ್ಷ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ಸಂಚಾಲಕ ಪಪ್ಪುಅಣ್ಣಾ ಪಾಟೀಲ, ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂದೇಶಾ, ಬಿಜೆಪಿ ಪಕ್ಷದ ನಗರ ಘಟಕದ…

Read More

ಭಾರತದ ಶ್ರೀಮಂತ ರಾಜಕಾರಣಿ ಎಂದೇ ಖ್ಯಾತರಾಗಿರುವ ನಾಗರಾಜು ಕರ್ನಾಟಕ ಚುನಾವಣೆಗೂ ಮುನ್ನವೇ ನಾಮಪತ್ರ ಸಲ್ಲಿಸಿದ್ದಾರೆ. ಕರ್ನಾಟಕದ ಸಣ್ಣ ಕೈಗಾರಿಕೆ ಸಚಿವ ನಾಗರಾಜು ಅವರ ಆಸ್ತಿ 1,609 ಕೋಟಿ ರೂ. ಇದನ್ನು ಚುನಾವಣಾ ನಾಮಪತ್ರದಲ್ಲಿ ನಮೂದಿಸಲಾಗಿದೆ. ನಾಗರಾಜು ಹೊಸಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನಾಗರಾಜು ಅವರ ಉದ್ಯೋಗವನ್ನು ರೈತ ಮತ್ತು ಕೈಗಾರಿಕೋದ್ಯಮಿ ಎಂದು ನಾಮಪತ್ರದಲ್ಲಿ ನಮೂದಿಸಲಾಗಿದೆ. ನಾಗರಾಜು 536 ಕೋಟಿ ಮೌಲ್ಯದ ಚರ ಆಸ್ತಿ ಮತ್ತು 1073 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 98.36 ಕೋಟಿ ಸಾಲ ದಾಖಲಾಗಿದೆ. 72 ವರ್ಷದ ನಾಗರಾಜು ಕೇವಲ 9ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದಾರೆ. ನಾಗರಾಜು ಅವರು 2018ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು. 2019ರಲ್ಲಿ ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡ 17 ಶಾಸಕರಲ್ಲಿ ನಾಗರಾಜು ಒಬ್ಬರು. ಈ ಪಕ್ಷಾಂತರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಯಿತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮಾಜಿ ಸಚಿವ ಸೊಗಡು ಶಿವಣ್ಣ ಸಿದ್ಧರಾಗಿದ್ದು, ಬಿಜೆಪಿ ಟಿಕೆಟ್ ವಂಚಿತರಾದ ಬಳಿಕ ಇದೀಗ ಪಕ್ಷೇತರರಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ. ಬಿಜೆಪಿ ಟಿಕೆಟ್ ಕೈ ತಪ್ಪಿದ ಬಳಿಕ ಎಚ್.ಡಿ ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದ ಸೊಗಡುಶಿವಣ್ಣ, ಜೆಡಿಎಸ್ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದರು. ಜೆಡಿಎಸ್ ಟಿಕೆಟ್ ಪಡೆಯುವ ಪ್ರಯತ್ನ ಫಲಪ್ರದವಾಗದ ಹಿನ್ನೆಲೆಯಲ್ಲಿ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿರುವ ಅವರು ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಈ ಸಂಬಂಧ ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೊಗಡು ಶಿವಣ್ಣ, ಇವತ್ತಿಂದ ಹೊಸ ಅಧ್ಯಾಯ ಶುರು ಆಗ್ತಿದೆ. ನಾನು ಸ್ವಾಭಿಮಾನಿ, ಜೊತೆಯಲ್ಲಿರುವವರು ಕೂಡ ಸ್ವಾಭಿಮಾನಿಗಳು. ಎಲ್ಲರೂ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಹಾಗಾಗಿ ನಾನು ಸ್ವತಂತ್ರ್ಯ ಅಭರ್ಥಿಯಾಗಿ ಸ್ಪರ್ಧೆ ಮಾಡ್ತೀನಿ. ಶಾಂತಿ ಮಂತ್ರ, ಸಮಾನತೆ ಮಂತ್ರ ಜಪಿಸ್ತೇನೆ. ಆಡಳಿತ ಭ್ರಷ್ಟಾಚಾರ ಮುಕ್ತವಾಗಿರಬೇಕು. ನಾನು ಇನ್ಮೇಲೆ ಮನೆ ಮನೆಗೆ ತೆರಳಿ ಮತ ಕೇಳ್ತೀನಿ ಎಂದರು. ಎರಡು…

Read More

ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವುದರ ವಿರುದ್ಧ ಬಿಲ್ಕಿಸ್ ಬ್ಯಾನ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಕಳೆದ ಬಾರಿ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠ ಜೈಲು ಬಿಡುಗಡೆಗೆ ಸಂಬಂಧಿಸಿದ ಕಡತಗಳನ್ನು ಸಲ್ಲಿಸುವಂತೆ ಕೋರಿತ್ತು. 2002ರ ಗುಜರಾತ್ ಹತ್ಯಾಕಾಂಡದ ವೇಳೆ ಬಿಲ್ಕಿಸ್ ಬಾನು ಅವರ ಮೇಲೆ ಅತ್ಯಾಚಾರ ಎಸಗಿ ಆಕೆಯ ಕುಟುಂಬ ಸದಸ್ಯರನ್ನು ಕೊಂದ ಪ್ರಕರಣದ 11 ಆರೋಪಿಗಳ ಜೈಲಿನಿಂದ ಬಿಡುಗಡೆ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳ ವಿರೋಧವನ್ನು ಮೆಟ್ಟಿನಿಂತು ಗುಜರಾತ್ ಬಿಜೆಪಿ ಸರ್ಕಾರ ಕೇಂದ್ರ ಗೃಹ ಸಚಿವಾಲಯದ ಅನುಮತಿಯೊಂದಿಗೆ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ವಿಚಾರಣೆ ಮತ್ತು ಶಿಕ್ಷೆ ಮಹಾರಾಷ್ಟ್ರದಲ್ಲಿ ನಡೆದಿರುವುದರಿಂದ ಗುಜರಾತ್ ಅವರನ್ನು ಬಿಡುಗಡೆ ಮಾಡಬಹುದೇ ಎಂಬುದು ಮುಖ್ಯ ಕಾನೂನು ಸಮಸ್ಯೆಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೇರಳ :ಕೊಟ್ಟಾಯಂ ಚೆರುವಳ್ಳಿ ದೇವಿ ದೇವಸ್ಥಾನ ಪಿಟಿಯಾನ ಕೇಸರಿ ವಾಲಿಕೆ. ವಯೋಸಹಜವಾಗಿ ಅಸ್ವಸ್ಥಗೊಂಡಿದ್ದ ಆನೆ ಇಂದು ಮುಂಜಾನೆ ಕುಸಿದು ಬಿದ್ದು ಸಾವನ್ನಪ್ಪಿದೆ. ಕುಸುಮಮ್ಮನಿಗೆ ಎಂಬತ್ತರ ವಯಸ್ಸು  ಎಂದು ತೀರ್ಮಾನಿಸಲಾಗಿದೆ. ತೆಕ್ಕಡಿಯಲ್ಲಿ ಸವಾರಿಗೆ ಬಳಸುತ್ತಿದ್ದ ಆನೆಯನ್ನು 1993ರಲ್ಲಿ ದೇವಸ್ಥಾನಕ್ಕೆ ಕರೆತರಲಾಗಿತ್ತು. ಅಂದಿನಿಂದ ಕುಸುಮಮ್ಮ ದೇವಸ್ಥಾನದ ಸಿಬ್ಬಂದಿ ಮತ್ತು ಸ್ಥಳೀಯರ ಅಚ್ಚುಮೆಚ್ಚಿನವಳಾಗಿದ್ದಳು. ಇದೇ ವೇಳೆ ದೇವಸ್ವಂ ಮಂಡಳಿ ಕುಸುಮಮ್ಮಗೆ ಚಿಕಿತ್ಸೆ ನಿರಾಕರಿಸುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಭಾರತದ ಮೊದಲ ಆ್ಯಪಲ್ ಸ್ಟೋರ್ ಇಂದು ತೆರೆಯಲಿದೆ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ. ಭಾರತದಲ್ಲಿ ಕಂಪನಿಯು 25 ವರ್ಷಗಳನ್ನು ಪೂರೈಸಿದ ಭಾಗವಾಗಿ ಅಧಿಕೃತ ಮಳಿಗೆಯನ್ನು ಪ್ರಾರಂಭಿಸಲಾಗಿದೆ. ಏತನ್ಮಧ್ಯೆ, ಆ್ಯಪಲ್ ಸಿಇಒ ಟಿಮ್ ಕುಕ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿದರು. ಕುಕ್ ತಂಡ ನಾಳೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದೆ. ಇಲ್ಲಿಯವರೆಗೆ, ಆ್ಯಪಲ್ ಭಾರತದಲ್ಲಿ ಮರುಮಾರಾಟಗಾರರ ಮೂಲಕ ಐಫೋನ್‌ ಗಳು, ಐಪ್ಯಾಡ್‌ ಗಳು ಮತ್ತು ಐಮ್ಯಾಕ್‌ ಗಳನ್ನು ಮಾರಾಟ ಮಾಡುತ್ತಿತ್ತು. ಈಗ ಬಳಕೆದಾರರು ಇವುಗಳನ್ನು ನೇರವಾಗಿ ಭಾರತದ ಅಂಗಡಿಯಿಂದ ಖರೀದಿಸಬಹುದು. ಮುಕೇಶ್ ಅಂಬಾನಿ ಒಡೆತನದ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ ನಲ್ಲಿ ಮುಂಬೈ ಸ್ಟೋರ್ 22,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ.  ಈ  ಆ್ಯಪಲ್ ಮಳಿಗೆಗೆ ತಿಂಗಳಿಗೆ 42 ಲಕ್ಷ ರೂ. ಬಾಡಿಗೆ ನೀಡಲಿದೆ ಎಂದು ವರದಿಯಾಗಿದೆ. ಆ್ಯಪಲ್ ಸ್ಟೋರ್‌ನಲ್ಲಿ 18 ಭಾರತೀಯ ಭಾಷೆಗಳನ್ನು ಮಾತನಾಡುವ 100 ಜನರ ತಂಡವು ಉಪಸ್ಥಿತರಿರುತ್ತದೆ. ಮುಂಬೈನಲ್ಲಿ ಮಳಿಗೆಯನ್ನು ತೆರೆದ…

Read More

ಬೆಳಗಾವಿ: ಶಾಂತಲಾ ನಾಟ್ಯಾಲಯ ಇನ್ಸ್ಟಿಟ್ಯೂಟ್ ವತಿಯಿಂದ ಭಾರತ ಸರಕಾರದ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಟಿಳಕ ಚೌಕ್ ಬಳಿಯ ಲೋಕಮಾನ್ಯ ರಂಗಮಂದಿರದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಉಪಸ್ಥಿತಿಯಲ್ಲಿ ‘ನೃತ್ಯೋಲ್ಲಾಸ’ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು. ಶಾಂತಲಾ ನಾಟ್ಯಾಲಯದ ಗುರು ವಿದೂಷಿ ರೇಖಾ ಹೆಗಡೆ ಅವರ ನಿರ್ದೇಶನದಲ್ಲಿ ನಾಟ್ಯಾಲಯದ ವಿದ್ಯಾರ್ಥಿಗಳು ವೈವಿದ್ಯಮಯ ನೃತ್ಯಗಳನ್ನು ಪ್ರದರ್ಶಿಸಿದರು. ವಿದೂಷಿ ಅನುಶ್ರೀ ಖಡಬಡಿ ಹಾಗೂ ವಿದ್ವತ್ ತಂಡದ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಬ್ ಜೂನಿಯರ್ ತಂಡದ ಶ್ಲೋಕ ಮತ್ತು ರೋಹಿತ್ ಹಾಗೂ ವಿದ್ವತ್ ತಂಡದ ಸಂಪೂರ್ಣ ರಾಮಾಯಣ ಪ್ರೇಕ್ಷಕರಿಂದ ಭಾರೀ ಕರತಾಡನ ಪಡೆಯಿತು. ಮಾ. ನಿನಾದ್ ಅಶೋಕ್ ಹಾಗೂ ಕಿರಿಯರ ತಂಡದ ವಚನ, ವಿದೂಷಿ ರೇಖಾ ಅಶೋಕ ಹೆಗಡೆ ಅವರ ದೇವರ ನಾಮ, ಮಾ. ಋತ್ವಿಕ್ ಅಶೋಕ ಹಾಗೂ ಹಿರಿಯರ ತಂಡದ ಪದಂ, ಸಮೀಕ್ಷಾ ಆರ್. ಕಾರಂತ ಹಾಗೂ ಹಿರಿಯರ ತಂಡದ ಏಕತೆ ಮತ್ತು ವೈವಿದ್ಯತೆ ಪ್ರಕಾರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕನ್ನಡ…

Read More

ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಲಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸೋಮವಾರ ಚಿಕ್ಕಹಟ್ಟಿಹೊಳಿ ಮನೆಯ ಆರಾಧ್ಯದೈವ ಶ್ರೀ ವೀರಭದ್ರ ದೇವರ ಸನ್ನಿಧಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು. ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ತೆರಳಿದ ಅವರು, ನಾಮಪತ್ರಕ್ಕೆ ಸಂಬಂಧಿಸಿದ ಕಾಗದಪತ್ರಗಳಿಗೂ ಪೂಜೆ ಮಾಡಿಸಿ, ದೇವರ ಎದುರು ಹಸ್ತಾಕ್ಷರ ಹಾಕಿದರು. ಯಾವುದೇ ಒಳ್ಳೆಯ ಕೆಲಸ ಮಾಡುವ ಮುನ್ನ ನಾವು ಮನೆ ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವುದು ವಾಡಿಕೆ. ಹಾಗಾಗಿ ಇಂದು ಮನೆಯ ಆರಾಧ್ಯದೈವ ಶ್ರೀ ವೀರಭದ್ರ ದೇವರ ಸನ್ನಿಧಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದ್ದೇನೆ. ದೇವರ ಆಶೀರ್ವಾದ ಪಡೆದಿದ್ದೇನೆ. ಮಂಗಳವಾರ ಬೆಂಬಲಿಗರ ಸಾಕ್ಷಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು. ಮಂಗಳವಾರ ಬೆಳಗ್ಗೆ ಹಿಂಡಲಗಾ ಗಣಪತಿ ಹಾಗೂ ಸುಳೇಬಾವಿಯ ಮಹಾಲಕ್ಷ್ಮೀ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಪಾರ ಪ್ರಮಾಣದ ಬೆಂಬಲಿಗರೊಂದಿಗೆ ತೆರಳಿ…

Read More

ತಿಪಟೂರು: ಬಂಡಾಯ ಜೆಡಿಎಸ್ ಅಭ್ಯರ್ಥಿಯಾಗಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಬಂಡೆ ರವಿ ನಾಮಪತ್ರ ಸಲ್ಲಿಸಿದರು. ಸಾವಿರಾರು ಜನ ಅಭಿಮಾನಿಗಳೊಂದಿಗೆ ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಂಡೆರವಿ, ಸಾವಿರಾರು ಜನ ಅಭಿಮಾನಿಗಳ ಜೈಕಾರ ಹರ್ಷೋದ್ಘಾರದ ನಡುವೆ ಕೋಡಿಸರ್ಕಲ್ ಬಿ.ಹೆಚ್. ರಸ್ತೆ ಮೂಲಕ ಸಾಗಿ ತಾಲ್ಲೂಕು ಆಡಳಿತ ಭವನದಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಜನತಾ ಪರಿವಾರದ ಅಭಿಮಾನಿಯಾಗಿದ್ದು, ತಿಪಟೂರು ವಿಧಾನಸಭಾ ಕ್ಷೇತ್ರ ನನ್ನ ಕರ್ಮಭೂಮಿಯಾಗಿದೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಕಡೇ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ ಕಾರಣ ಅಭಿಮಾನಿಗಳು ಹಾಗೂ  ಜೆಡಿಎಸ್ ಕಾರ್ಯಕರ್ತರ  ಒತ್ತಾಸೆಯಂತೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಈ ಬಾರಿ ಚುನಾವಣೆಯಲ್ಲಿ ಜನ ನನ್ನ ಕೈ ಹಿಡಿಯುವ ವಿಶ್ವಾಸವಿದೆ ಎಂದು ಇದೇ ವೇಳೆ ಅವರು ವಿಶ್ವಾಸ ವ್ಯಕ್ತಪಡಿಸಿದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ಕೊರಟಗೆರೆ : ಪಟ್ಟಣದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 132 ನೇ ಜಯಂತಿಯನ್ನು ಮುಖಂಡರ ನೇತೃತ್ವದಲ್ಲಿ ಆಚರಿಸಲಾಯಿತು. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪಕ್ಷದ ಆಮ್ ಆದ್ಮಿ ಪಕ್ಷದ ಸಂಭಾವ್ಯ ಅಭ್ಯರ್ಥಿಯಾದ ಹನುಮಂತರಾಯಪ್ಪ ಮಾತನಾಡಿ ವಿಶ್ವ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು ದೇಶಾದ್ಯಂತ ಅತಿ ವಿಜೃಂಭಣೆಯಾಗಿ ಆಚರಿಸಲಾಗುತ್ತಿದೆ.  ಸಂವಿಧಾನದಲ್ಲಿ ಬಡವರಿಗೆ ಮತ್ತು ಶ್ರೀಮಂತರಿಗೆ ಸಮಾನ ನ್ಯಾಯವನ್ನು ನೀಡಿದ್ದು ನಮ್ಮ ದೇಶದ ಸಂವಿಧಾನವು ಪವಿತ್ರವಾದ ಸಂವಿಧಾನವಾಗಿದ್ದು ಅದನ್ನು ಆನೆ ಗಾತ್ರದ ಸಂವಿಧಾನವೆಂದು ಕರೆಯುತ್ತಾರೆ. ಈ ಪುಸ್ತಕದಲ್ಲಿ ಎಲ್ಲಾ ಜನಾಂಗದ ಸಮುದಾಯದವರ ಅನುಕೂಲಕ್ಕಾಗಿ ಮತ್ತು ಅವರ ಹಕ್ಕುಗಳನ್ನು ಪಡೆಯುವುದಕ್ಕಾಗಿ ಸಮಾನತೆಯನ್ನು ಕಾಪಾಡಲು ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ಸಂವಿಧಾನದ ಪುಸ್ತಕವನ್ನು ರಚಿಸಿದ್ದಾರೆ. ಈ ದಿನವನ್ನು ದೇಶಾದ್ಯಂತ ಸಮಾನತೆಯ ದಿನವೆಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹನುಮಂತರಾಯಪ್ಪ,ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಮಂಜುಳ…

Read More