nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮೇ 9ರಂದು ಚಿತ್ರದುರ್ಗದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣದ ‘ಅಭಿಮಾನೋತ್ಸವ’

    April 24, 2026

    ಮೈಸೂರು: ಕುಡಿಯಲು ಹಣ ನೀಡದಿದ್ದಕ್ಕೆ ಪೀಡಿಸುತ್ತಿದ್ದ ಮಗನನ್ನೇ ಕೊಂದ ತಾಯಿ!

    April 24, 2026

    ಕೊರಟಗೆರೆಯ ಫ್ರೆಂಡ್ಸ್ ಗ್ರೂಪ್ ವತಿಯಿಂದ ಉಚಿತ ಆಂಬ್ಯುಲೆನ್ಸ್ ಲೋಕಾರ್ಪಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

    April 24, 2026
    Facebook Twitter Instagram
    ಟ್ರೆಂಡಿಂಗ್
    • ಮೇ 9ರಂದು ಚಿತ್ರದುರ್ಗದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣದ ‘ಅಭಿಮಾನೋತ್ಸವ’
    • ಮೈಸೂರು: ಕುಡಿಯಲು ಹಣ ನೀಡದಿದ್ದಕ್ಕೆ ಪೀಡಿಸುತ್ತಿದ್ದ ಮಗನನ್ನೇ ಕೊಂದ ತಾಯಿ!
    • ಕೊರಟಗೆರೆಯ ಫ್ರೆಂಡ್ಸ್ ಗ್ರೂಪ್ ವತಿಯಿಂದ ಉಚಿತ ಆಂಬ್ಯುಲೆನ್ಸ್ ಲೋಕಾರ್ಪಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
    • ಕನ್ನಡ ನಾಡು–ನುಡಿಗೆ ಡಾ.ರಾಜ್ ಕುಮಾರ್ ನೀಡಿದ ಕೊಡುಗೆ ಅಪಾರ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ
    • ಗುಬ್ಬಿ: “ಕೆಲಸವೇ ದೇವರು ಎಂಬ ಬಸವಣ್ಣನವರ ತತ್ವ ಪಾಲಿಸಿ”: ಗೃಹ ಸಚಿವ ಡಾ.ಜಿ.ಪರಮೇಶ್ವರ್
    • ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’: ಲೇಖಕರು, ಪ್ರಕಾಶಕರಿಂದ ಪುಸ್ತಕಗಳ ಆಹ್ವಾನ
    • SSLC ಫಲಿತಾಂಶ: ಸಿರಾ ತಾಲೂಕಿನಲ್ಲಿ ಶೇ. 89.75 ಫಲಿತಾಂಶ ದಾಖಲು
    • ತುಮಕೂರು: SSLC ಫಲಿತಾಂಶ: ಜಿಲ್ಲೆಗೆ ಸಾದಿಯಾಬಾನು, ಹಿತಶ್ರೀ ಟಾಪರ್ಸ್ | ಶೇ. 92.90 ಫಲಿತಾಂಶ ದಾಖಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಾಂತಲಾ ನಾಟ್ಯಾಲಯ ಇನ್ಸ್ಟಿಟ್ಯೂಟ್ ವತಿಯಿಂದ ‘ನೃತ್ಯೋಲ್ಲಾಸ’ ಕಾರ್ಯಕ್ರಮ
    ರಾಜ್ಯ ಸುದ್ದಿ April 18, 2023

    ಶಾಂತಲಾ ನಾಟ್ಯಾಲಯ ಇನ್ಸ್ಟಿಟ್ಯೂಟ್ ವತಿಯಿಂದ ‘ನೃತ್ಯೋಲ್ಲಾಸ’ ಕಾರ್ಯಕ್ರಮ

    By adminApril 18, 2023No Comments2 Mins Read
    nruthyollasa

    ಬೆಳಗಾವಿ: ಶಾಂತಲಾ ನಾಟ್ಯಾಲಯ ಇನ್ಸ್ಟಿಟ್ಯೂಟ್ ವತಿಯಿಂದ ಭಾರತ ಸರಕಾರದ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಟಿಳಕ ಚೌಕ್ ಬಳಿಯ ಲೋಕಮಾನ್ಯ ರಂಗಮಂದಿರದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಉಪಸ್ಥಿತಿಯಲ್ಲಿ ‘ನೃತ್ಯೋಲ್ಲಾಸ’ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು.

    ಶಾಂತಲಾ ನಾಟ್ಯಾಲಯದ ಗುರು ವಿದೂಷಿ ರೇಖಾ ಹೆಗಡೆ ಅವರ ನಿರ್ದೇಶನದಲ್ಲಿ ನಾಟ್ಯಾಲಯದ ವಿದ್ಯಾರ್ಥಿಗಳು ವೈವಿದ್ಯಮಯ ನೃತ್ಯಗಳನ್ನು ಪ್ರದರ್ಶಿಸಿದರು. ವಿದೂಷಿ ಅನುಶ್ರೀ ಖಡಬಡಿ ಹಾಗೂ ವಿದ್ವತ್ ತಂಡದ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.


    Provided by
    Provided by

    ಸಬ್ ಜೂನಿಯರ್ ತಂಡದ ಶ್ಲೋಕ ಮತ್ತು ರೋಹಿತ್ ಹಾಗೂ ವಿದ್ವತ್ ತಂಡದ ಸಂಪೂರ್ಣ ರಾಮಾಯಣ ಪ್ರೇಕ್ಷಕರಿಂದ ಭಾರೀ ಕರತಾಡನ ಪಡೆಯಿತು. ಮಾ. ನಿನಾದ್ ಅಶೋಕ್ ಹಾಗೂ ಕಿರಿಯರ ತಂಡದ ವಚನ, ವಿದೂಷಿ ರೇಖಾ ಅಶೋಕ ಹೆಗಡೆ ಅವರ ದೇವರ ನಾಮ, ಮಾ. ಋತ್ವಿಕ್ ಅಶೋಕ ಹಾಗೂ ಹಿರಿಯರ ತಂಡದ ಪದಂ, ಸಮೀಕ್ಷಾ ಆರ್. ಕಾರಂತ ಹಾಗೂ ಹಿರಿಯರ ತಂಡದ ಏಕತೆ ಮತ್ತು ವೈವಿದ್ಯತೆ ಪ್ರಕಾರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

    ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಬೆಳಗಾವಿ ಕಲಾವಿದರ ಬೀಡಾಗಿದ್ದು, ಇಲ್ಲಿನ ಕಲೆಗಳು ಅತ್ಯಂತ ಸಮೃದ್ಧತೆಯಿಂದ ಕೂಡಿದೆ. ಕಲೆಯನ್ನು ನಾನು ಆಸ್ವಾದಿಸಬಹುದೇ ವಿನಃ ಅವುಗಳನ್ನು ವರ್ಣಿಸುವಷ್ಟು ಶಕ್ತಿ ನಮಗಿಲ್ಲ. ಶಾಂತಲಾ ನಾಟ್ಯಾಲಯ ಕಳೆದ 35 ವರ್ಷದಲ್ಲಿ ಸಾವಿರಾರು ಮಕ್ಕಳನ್ನು ಬೆಳಕಿಗೆ ತರುವ ಮೂಲಕ ನಿಜವಾದ ಕಲಾಸೇವಗೈಯ್ಯುತ್ತಿದೆ. ಅವರ ಸೇವೆಯನ್ನು ಗಮನಿಸಿದರೆ ಸರಕಾರ ನೀಡುವ ಅನುದಾನ ಅತ್ಯಲ್ಪವಾಗಿದೆ. ಇಂತಹ ಸಂಸ್ಥೆ ನಮ್ಮ ಜಿಲ್ಲೆಯಲ್ಲಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

    ಕಳೆದ 25 ವರ್ಷದಿಂದ ಹುಬ್ಬಳ್ಳಿ ಮತ್ತು ಶಿರಸಿಯಲ್ಲಿ ನಾಟ್ಯ ಸೇವೆಯಲ್ಲಿ ನಿರತವಾಗಿರುವ ನಾಟ್ಯಾಂಜಲಿ ನೃತ್ಯಕಲಾ ಕೇಂದ್ರದ ನಿರ್ದೇಶಕಿ ಡಾ.ಸಹನಾ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ನಾಟ್ಯ ಶಾಲೆಯನ್ನು ನಡೆಸುವಾಗ ಅದರ ಹಿಂದಿನ ಶ್ರಮವೇನು ಎನ್ನುವ ಅರಿವು ನನಗಿದೆ. ವಿದೂಷಿ ರೇಖಾ ಭಟ್ ಅವರು ಕಳೆದ 35 ವರ್ಷಗಳಿಂದ ತಪಸ್ಸಿನ ರೀತಿಯಲ್ಲಿ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದಾರೆ. ಅವರ ಕಲಾ ಸೇವೆಯನ್ನು ಬಹಳ ಹತ್ತಿರದಿಂದ ನಾನು ನೋಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಸಾವಿರಾರು ಮಕ್ಕಳನ್ನು ಬೆಳೆಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹಾರೈಸಿದರು.

    ಗೌರವ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ, ಪ್ರಗತಿವಾಹಿನಿ ಮುಖ್ಯ ಸಂಪಾದಕ ಎಂ.ಕೆ. ಹೆಗಡೆ ಮಾತನಾಡಿ, ಶ್ರೀಮತಿ ಹೆಗಡೆ ಹಾಗೂ ವಿದೂಷಿ ರೇಖಾ ಹೆಗಡೆ ಹಾಗೂ ಅವರ ತಂಡದವರು, ಮಕ್ಕಳ ಸಂಖ್ಯೆ, ಅದರಿಂದ ಬರುವ ಆದಾಯ ಯಾವುದನ್ನೂ ಯೋಚಿಸದೆ ದೇವರ ಕೆಲಸ ಎನ್ನುವ ರೀತಿಯಲ್ಲಿ ನಿಷ್ಠೆಯಿಂದ ನಾಟ್ಯಾಲಯವನ್ನು ನಡೆಸುತ್ತ ಬಂದಿದ್ದಾರೆ. ಸಹಸ್ರಾರು ಮಕ್ಕಳ ಪ್ರತಿಭೆಯನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ. 35 ವರ್ಷಗಳಿಂದ ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಈ ನಾಟ್ಯ ಶಾಲೆಗೆ ಸರಕಾರದಿಂದ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ಸಿಗದಿರುವುದು ಬೇಸರದ ಸಂಗತಿ. ಈ ವರ್ಷವಾದರೂ ಇಂತಹ ಸಂಸ್ಥೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಸರಕಾರ ತನ್ನ ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

    ಪಂಡಿತ ರವೀಂದ್ರ ಶರ್ಮಾ, ಪ್ರದೀಪ ಭಟ್,  ಶ್ರೀಮತಿ ಹೆಗಡೆ, ರತ್ನಮ್ಮ ವೇದಿಕೆಯಲ್ಲಿದ್ದರು. ಸುಬ್ರಹ್ಮಣ್ಯ ಭಟ್ ಮತ್ತು ಆರ್ಯ ಭಂಡಾರಕರ ಅತ್ಯಂತ ಮನೋಜ್ಞವಾಗಿ ಕಾರ್ಯಕ್ರಮ ನಿರೂಪಿಸಿದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಮೇ 9ರಂದು ಚಿತ್ರದುರ್ಗದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣದ ‘ಅಭಿಮಾನೋತ್ಸವ’

    April 24, 2026

    ಮೈಸೂರು: ಕುಡಿಯಲು ಹಣ ನೀಡದಿದ್ದಕ್ಕೆ ಪೀಡಿಸುತ್ತಿದ್ದ ಮಗನನ್ನೇ ಕೊಂದ ತಾಯಿ!

    April 24, 2026

    ಕನ್ನಡ ನಾಡು–ನುಡಿಗೆ ಡಾ.ರಾಜ್ ಕುಮಾರ್ ನೀಡಿದ ಕೊಡುಗೆ ಅಪಾರ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ

    April 24, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಮೇ 9ರಂದು ಚಿತ್ರದುರ್ಗದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣದ ‘ಅಭಿಮಾನೋತ್ಸವ’

    April 24, 2026

    ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಐದು ದಶಕಗಳ ಸುದೀರ್ಘ ರಾಜಕೀಯ ಜೀವನವನ್ನು…

    ಮೈಸೂರು: ಕುಡಿಯಲು ಹಣ ನೀಡದಿದ್ದಕ್ಕೆ ಪೀಡಿಸುತ್ತಿದ್ದ ಮಗನನ್ನೇ ಕೊಂದ ತಾಯಿ!

    April 24, 2026

    ಕೊರಟಗೆರೆಯ ಫ್ರೆಂಡ್ಸ್ ಗ್ರೂಪ್ ವತಿಯಿಂದ ಉಚಿತ ಆಂಬ್ಯುಲೆನ್ಸ್ ಲೋಕಾರ್ಪಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

    April 24, 2026

    ಕನ್ನಡ ನಾಡು–ನುಡಿಗೆ ಡಾ.ರಾಜ್ ಕುಮಾರ್ ನೀಡಿದ ಕೊಡುಗೆ ಅಪಾರ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ

    April 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.