Subscribe to Updates
Get the latest creative news from FooBar about art, design and business.
- ಡಾ.ಜಿ.ಪರಮೇಶ್ವರರವರು ಮುಖ್ಯಮಂತ್ರಿಯಾಗಲಿ ಎಂದು 108 ತೆಂಗಿನಕಾಯಿ ಹೊಡೆದು ಹರಕೆ
- ಪರಿಶಿಷ್ಟರ ಸಮಸ್ಯೆಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ
- ಜ.31ರವರೆಗೆ ರಸ್ತೆ ಸುರಕ್ಷಾ ಮಾಸಾಚರಣೆ ಅಭಿಯಾನ
- ಡ್ರಾಪ್ ಕೊಡುವ ನೆಪದಲ್ಲಿ ಚಿನ್ನದ ಆಭರಣ ದೋಚುತ್ತಿದ್ದ ಕಳ್ಳನ ಬಂಧನ
- ತುಮಕೂರು: 40 ವರ್ಷ ವಾಸವಿದ್ದರೂ ಸಿಗದ ಹಕ್ಕು ಪತ್ರ: ನಿವಾಸಿಗಳ ಆಕ್ರೋಶ
- ಹುಯಿಲ್ ದೊರೆ ನೂತನ ಗ್ರಾ.ಪಂ. ಕಟ್ಟಡ ಉದ್ಘಾಟನೆ: ಗ್ರಾಮ ಪಂಚಾಯ್ತಿಗಳೇ ಗ್ರಾಮಗಳ ಸರ್ಕಾರವಾಗಬೇಕು: ಶಾಸಕ ಟಿ.ಬಿ.ಜಯಚಂದ್ರ
- ತುಮಕೂರು: ಗಾಜಿನ ಮನೆಯಲ್ಲಿ ‘ಸಿರಿಧಾನ್ಯ ಖಾದ್ಯಗಳ’ ಘಮಲು!
- 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ: ಎಸ್ಪಿ ಅಶೋಕ್ ಗೆ ಪದೋನ್ನತಿ
Author: admin
ಸದಾ ಒಂದಲ್ಲ ಒಂದು ವಿವಾದಗಳಿಗೆ ಕಾರಣವಾಗುತ್ತಿದ್ದ ಬಾಲಿವುಡ್ ನ ಮಾದಕ ನಟಿ ಪೂನಂ ಪಾಂಡೆಯ ಇದೀಗ ಹೊಸ ಶೈಲಿಯ ಉಡುಪಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ ನೀಡುತ್ತಿದ್ದಾರೆ. ಅಂದ ಹಾಗೆ ಇವರ ಉಡುಪು ಕಂಡು ಸಾಮಾಜಿಕ ಜಾಲತಾಣ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನ್ಯೂಸ್ ಪೇಪರ್ ನ್ನು ಮೈಗೆ ಸುತ್ತಿಕೊಂಡು ಫೋಟೋ ಶೂಟ್ ನಡೆಸಿರುವ ಪೂನಂ “ನನ್ನನ್ನು ಓದಲು ಬಯಸುತ್ತೀರಾ? ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ಗೆ ಜನರು ತಮಗೆ ತೋಚಿದಂತೆ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ಸಾಕಷ್ಟು ಜನರು ನ್ಯೂಸ್ ಪೇಪರ್ ಕೊಡಿ ಓದಿ ಕೊಡುತ್ತೇವೆ ಎಂದು ಕಾಮೆಂಟ್ ಹಾಕಿ ನಟಿಗೆ ತಿರುಗೇಟು ನೀಡಿದ್ದಾರೆ. ಅಂತೂ ತಮ್ಮ ಹೊಸ ಫೋಟೋ ಮೂಲಕ ನಟಿ ಪೂನಂ ಪಾಂಡೆ ಮತ್ತೆ ಅಭಿಮಾನಿಗಳಿಗೆ ಕಚಗುಳಿಯಿಟ್ಟಿದ್ದಾರೆ. ಈ ಹಿಂದೆ ತಾನು ಗರ್ಭ ಕಂಠ ಕ್ಯಾನ್ಸರ್ ನಿಂದ ಸಾವನ್ನಪ್ಪಿರುವುದಾಗಿ ನಟಿ ಪೂನಂ ತನ್ನ ಸಾವಿನ ಸುದ್ದಿಯನ್ನು ತಾನೇ ಹಬ್ಬಿಸಿಕೊಂಡಿದ್ದರು. ಈ ಸುದ್ದಿಯನ್ನು ಇಡೀ ದೇಶವೇ ನಂಬುವಂತೆ ಮಾಡಿದ್ದರು. ಆದರೆ ಬಳಿಕ…
ಬೆಂಗಳೂರು: ದಕ್ಷಿಣ ವಲಯದ ಇಂದಿರಾ ಕ್ಯಾಂಟೀನ್ ನಲ್ಲಿ ಸುಮಾರು 7 ಕೋಟಿ ರೂ.ಗಳ ಅವ್ಯವಹಾರದ ಹಿನ್ನೆಲೆ ಬಿಬಿಎಂಪಿ ವಲಯದ ಉಪ ಆರೋಗ್ಯಾಧಿಕಾರಿ ಡಾ.ಕಲ್ಪನಾ ಪಿ. ಅವರನ್ನು ಅಮಾನತುಗೊಳಿಸಲಾಗಿದೆ. ಪಾಲಿಕೆಯ ದಕ್ಷಿಣ ವಲಯಕ್ಕೆ ಆಹಾರ ಪೂರೈಕ ಮಾಡಿದ ಚೆಫ್ಟಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಬಿಲ್ ಪಾವತಿಯಲ್ಲಿ 7 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ನಡೆದಿದೆ ಎಂದು ಬಿಬಿಎಂಪಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆರೋಗ್ಯಾಧಿಕಾರಿಯಾಗಿದ್ದ ಡಾ.ಕಲ್ಪನಾ ಪಿ ಅವರು ಆರ್ಡರ್ ಗಳನ್ನು ಪರಿಶೀಲಿಸದೆ ಅಂದಾಜು ರೂ. 9.72 ಕೋಟಿ ಪಾವತಿಸಿದ್ದಾರೆ. ಆದರೆ ಅದಕ್ಕೆ ವಾಸ್ತವವಾಗಿ ಪಾವತಿಸಬೇಕಾದದ್ದು ಕೇವಲ ರೂ. 2.27 ಕೋಟಿ ಮಾತ್ರ,. ಇದರಿಂದ ಹೆಚ್ಚುವರಿಯಾಗಿ ಸುಮಾರು 7 ಕೋಟಿ ರೂ. ಪಾವತಿಸಿದ್ದಕ್ಕಾಗಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ಚಂಡೀಗಢ: ಪಾಕಿಸ್ತಾನ ಸೇನೆ ಮತ್ತು ಐಎಸ್ ಐಗೆ ಭಾರತ ಸೇನೆಯ ಆಪರೇಷನ್ ಸಿಂಧೂರದ ಬಗ್ಗೆ ಮಾಹಿತಿ ನೀಡುತ್ತಿದ್ದ ಆರೋಪದಲ್ಲಿ ಹರ್ಯಾಣದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಸ್ತ್‌ಗಢ ಚೀಕಾ ಗ್ರಾಮದ ದೇವೇಂದ್ರ ಸಿಂಗ್ (25) ಬಂಧಿತ ಆರೋಪಿಯಾಗಿದ್ದಾನೆ. ವಿಚಾರಣೆಯ ಸಂದರ್ಭದಲ್ಲಿ ದೇವೇಂದ್ರ ಸಿಂಗ್ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐ ಜೊತೆ ಸಂಪರ್ಕದಲ್ಲಿರುವುದಾಗಿ ಬಹಿರಂಗಪಡಿಸಿದ್ದಾನೆ. ದೇವೇಂದ್ರ ಸಿಂಗ್ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆಯೂ ಐಎಸ್ ಐಗೆ ಆಗಾಗ ಮಾಹಿತಿ ರವಾನಿಸಿದ್ದಾನೆ. ಗುಪ್ತಚರ ಮಾಹಿತಿ ಆಧಾರದ ಮೇಲೆ ಕೈಥಲ್ ಜಿಲ್ಲಾ ಪೊಲೀಸರು ದೇವೇಂದ್ರ ಸಿಂಗ್‌ನನ್ನು ಬಂಧಿಸಿದ್ದಾರೆ. ಸೈಬರ್ ಪೊಲೀಸ್ ಠಾಣೆಯಲ್ಲಿ ದೇವೆಂದ್ರ ಸಿಂಗ್ ಬಳಿ ಪತ್ತೆಯಾದ ಸಾಧನಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ತನಿಖೆ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಸ್ ಪಿ ಕೈಥಲ್ ವೀರಭನ್ ಮಾಹಿತಿ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ಕಠ್ಮಂಡು: ಮೌಂಟ್ ಎವರೆಸ್ಟ್ ಏರಿದ ಭಾರತೀಯ ಪರ್ವತಾರೋಹಿಯೊಬ್ಬರು ಇಳಿಯುವಾಗ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳದ ಸುಬ್ರತಾ ಘೋಷ್(45) ಮೃತಪಟ್ಟ ಪರ್ವತಾರೋಹಿಯಾಗಿದ್ದಾರೆ. ಇವರು 29,032 ಅಡಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಲುಪಿದರು. ಬಳಿಕ ಪರ್ವತ ಇಳಿಯುವಾಗ ಅವರಿಗೆ ಇದ್ದಕ್ಕಿದ್ದಂತೆ ಆಯಾಸ ಮತ್ತು ಹೈಟ್ ಫೋಬಿಯಾ ಕಾಣಿಸಿಕೊಂಡಿದ್ದು, ಹಿಲರಿ ಸ್ಟೆಪ್ಸ್ ಬಳಿ ಅವರು ಮೃತಪಟ್ಟಿದ್ದಾರೆ ಎಂದು ಪರ್ವತಾರೋಹಣ ಆಯೋಜಕರು ಮಾಹಿತಿ ನೀಡಿದ್ದಾರೆ. ಹೆಚ್ಚು ಆಯಾಸವಾದ ಬಳಿಕ ಘೋಷ್ ಕೆಳಗೆ ಇಳಿಯಲು ನಿರಾಕರಿಸಿದರು. ಅವರ ಮಾರ್ಗದರ್ಶಿ ಅವರನ್ನು ಕೆಳಗೆ ಕರೆತರಲು ಪ್ರಯತ್ನಿಸಿದರು. ಆದರೆ ಘೋಷ್ ರಿಂದ ಇಳಿಯಲು ಸಾಧ್ಯವಾಗಲಿಲ್ಲ. ಆ ಬಳಿಕ ಮಾರ್ಗದರ್ಶಿ ಗುರುವಾರ ರಾತ್ರಿ ಒಂಟಿಯಾಗಿ ಕ್ಯಾಂ ಪ್‌ಗೆ ಹಿಂತಿರುಗಿ ಮಾಹಿತಿ ನೀಡಿದರು ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ನವದೆಹಲಿ: ಪಹಲ್ಗಾಮ್ ದಾಳಿಯ ನಂತರ ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಭಾರತಕ್ಕೆ ಹೆಚ್ಚುವರಿಯಾಗಿ ಸಿಗಲಿರುವ ನೀರನ್ನು ವಿದ್ಯುತ್ ಬಳಕೆಗೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸಿಂಧೂ ನದಿಯ ಉಪ ನದಿಯಾದ ಚೆನಾಬ್ ಮೂಲಕ ಹರಿಯುತ್ತಿದ್ದ ನೀರನ್ನು ತಡೆಹಿಡಿಯಲಾಗಿದೆ. ಕೃಷಿಗೆ ಅಧಿಕವಾಗಿ ಬಳಸಲಾಗುತ್ತಿದ್ದ ಚೆನಾಬ್ ನದಿ ನೀರನ್ನು ಇದೀಗ, ವಿದ್ಯುತ್ ಉತ್ಪಾದನೆಗೂ ಬಳಸಿಕೊಳ್ಳಲು ಯೋಜಿಸಲಾಗಿದೆ. ಹೀಗಾಗಿ, ನದಿಗೆ ಹೊಂದಿಕೊಂಡಿರುವ ರಣವೀಲ್ ಕಾಲುವೆಯ ಉದ್ದವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಚೆನಾಬ್ ಮೂಲಕ ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದ್ದ ನೀರಿನಿಂದ 3 ಸಾವಿರ ಮೆಗಾವ್ಯಾಟ್ ಜಲವಿದ್ಯುತ್ ಅನ್ನು ಉತ್ಪಾದಿಸಲು ಭಾರತ ಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ತುಮಕೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ಹಾಗೂ ಆತನ ಕೃತ್ಯಕ್ಕೆ ಸಹಕರಿಸಿದ ಬಾಲಕಿ ಚಿಕ್ಕಮ್ಮ ಮತ್ತು ಅಜ್ಜಿಗೆ ಜೀವಾವಧಿ ಶಿಕ್ಷೆ ಮತ್ತು 3.50 ಲಕ್ಷ ರೂ. ದಂಡ ವಿಧಿಸಿ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ POCSO ನ್ಯಾಯಾಲಯವು ತೀರ್ಪು ನೀಡಿದೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ತಂದೆಗೆ ಎರಡು ಮದುವೆಯಾಗಿತ್ತು. 2ನೇ ಪತ್ನಿ ರತ್ನಮ್ಮ ಮತ್ತು ಆಕೆಯ ತಾಯಿ ಗಂಗಮ್ಮ ನೊಂದ ಬಾಲಕಿಯನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೆಲಸಕ್ಕೆ ಹೋಗೋಣ ಎಂದು ಸುಳ್ಳು ಹೇಳಿ ಪೆನುಗೊಂಡಕ್ಕೆ ಕರೆದೊಯ್ದು ಅಲ್ಲಿಂದ ವರಂಗಲ್ ನ ಶೆಡ್ ವೊಂದಕ್ಕೆ ಕರೆದೊಯ್ದು ಕೂಡಿ ಹಾಕಿ ಆರೋಪಿ ಅರುಣ್ ಕುಮಾರ್ ನನ್ನು ಶೆಡ್ ನೊಳಗೆ ಕಳುಹಿಸಿದ್ದು, ಆತ ನೊಂದ ಬಾಲಕಿ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಘಟನೆ ಸಂಬಂಧ ಬಾಲಕಿಯ ತಾಯಿ ನೀಡಿದ ದೂರಿನಂತೆ ಪಾವಗಡ ಪೊಲೀಸ್ ಇನ್ಸ್ ಪೆಕ್ಟರ್…
ಬೆಂಗಳೂರು: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-–2025 ಕ್ಕೆ ಸಂಬಂಧಿಸಿದಂತೆ, ಒಳಮೀಸಲಾತಿ ಸಮೀಕ್ಷೆಯ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿದ್ದು, ಮನೆ ಮನೆ ಭೇಟಿ ಸಮೀಕ್ಷೆಯು ಮೇ 17 ರಿಂದ 25 ವರೆಗೆ ವಿಸ್ತರಿಸಲಾಗಿದೆ. ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವನ್ನು ಸರ್ಕಾರ ರಚಿಸಿದ್ದು, ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಂಬಂಧದ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಸಂಗ್ರಹಣೆಗಾಗಿ ಜಿಲ್ಲೆಯಲ್ಲಿ ನಡೆದಿರುವ ಸಮೀಕ್ಷೆ ಕಾರ್ಯದ ಅವಧಿಯನ್ನು ಮೇ. 28 ರವರೆಗೆ ವಿಸ್ತರಿಸಲಾಗಿದೆ. ಮತಗಟ್ಟೆವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವ ಅವಧಿಯನ್ನು ಮೇ 26 ರಿಂದ 28 ಮೇ ವರೆಗೂ ನಿಗದಿಗೊಳಿಸಿದೆ. ಆನ್ಲೈನ್ ಮೂಲಕ ಸ್ವಯಂ ಘೋಷಣೆ ಮಾಡುವ ಅವಧಿಯನ್ನು ಮೇ 19 ರಿಂದ ಮೇ 28 ರವರೆಗೆ ನಿಗದಿಗೊಳಿಸಿದೆ. ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಶುಕ್ರವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಸ್ ಸಿ ಒಳ ಮೀಸಲು ಏಕಸದಸ್ಯ ವಿಚಾರಣಾ ಆಯೋಗದ ಮುಖ್ಯಸ್ಥ…
ಸರಗೂರು: ಶಂಕಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಭೂಮಿ ಒತ್ತುವರಿಯಾಗಿರುವ ಬಗ್ಗೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಹಾಗೂ ಶಾಸಕರು ಆದೇಶದಂತೆ ಒತ್ತುವರಿ ತೆರವುಗೊಳಿಸಿ ಗ್ರಾಮ ಪಂಚಾಯಿತಿ ಸುರ್ಪದಿಗೆ ನೀಡಲಾಗಿದೆ ಎಂದು ತಹಶೀಲ್ದಾರ್ ಮೋಹನಕುಮಾರಿ ತಿಳಿಸಿದರು. ಶಂಕಹಳ್ಳಿ ಗ್ರಾಮಸ್ಥರಿಗೆ ಮೀಸಲಿಟ್ಟದ ಸ್ಮಶಾನ ಭೂಮಿಯನ್ನು ಅಕ್ರಮಿಕೊಂಡಿದ ಭೂಮಿಯನ್ನು ಒತ್ತುವರಿ ತೆರವುಗೊಳಿಸಿ ಗ್ರಾಮಸ್ಥರಿಗೆ ಸಂಸ್ಕಾರ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಶಂಕಹಳ್ಳಿ ಗ್ರಾಮದ ಎಲ್ಲಾ ಸಮುದಾಯದ ಮಾಡಿದ್ದ ಮನವಿಗೆ ತಾಲೂಕು ಆಡಳಿತ ಅಧಿಕಾರಿಗಳು ಸ್ಪಂದಿಸಿ ಶುಕ್ರವಾರದಂದು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಶಂಕಹಳ್ಳಿ ರುದ್ರಭೂಮಿ ನಾಮಫಲಕವನ್ನು ತಹಶೀಲ್ದಾರ್ ಮೋಹನಕುಮಾರಿ ಸಮ್ಮುಖದಲ್ಲಿ ನಡೆಸಿದರು. ಅ ವ್ಯಕ್ತಿಯಿಂದ ಈ ಜಾಗದ ದಾಖಲೆಗಳು ತಂದರೆ ದಾಖಲೆಗಳನ್ನು ಪರಿಶೀಲಿಸಲಾಗುವುದು. ಆ ವ್ಯಕ್ತಿಗೆ ನಮ್ಮ ಅಧಿಕಾರಿಗಳು ಹಾಗೂ ಗ್ರಾಮಸ್ಥರಿಂದ ಕರೆ ಮಾಡಿ ಜಮೀನು ಹತ್ತಿರಕ್ಕೆ ಬರಬೇಕು ಎಂದು ಹೇಳಿದರೂ, ಆ ವ್ಯಕ್ತಿ ಬರಲಿಲ್ಲ. ಇದರಿಂದಾಗಿ ಆ ವ್ಯಕ್ತಿ ಸುಳ್ಳು ದಾಖಲೆಗಳನ್ನು ಮಾಡಿಕೊಂಡು ಈ ಸ್ಮಶಾನ ಭೂಮಿಯನ್ನು ಆಕ್ರಮಿಸಿಕೊಳ್ಳಲು ಮುಂದಾಗಿದ್ದಾರೆ. ಶಂಕಹಳ್ಳಿ ಗ್ರಾಮದ ಸ್ಮಶಾನ ಭೂಮಿಯನ್ನು…
ತುಮಕೂರು: ಆಪರೇಷನ್ ಸಿಂಧೂರ್ ಯಶಸ್ವಿ ಹಿನ್ನೆಲೆ, ರಾಷ್ಟ್ರೀಯ ರಕ್ಷಣೆಗಾಗಿ, ದೇಶ ಹಾಗೂ ಸೈನಿಕರ ಬೆಂಬಲಿಸಿ ಬೃಹತ್ ತಿರಂಗ ಯಾತ್ರೆ ತುಮಕೂರು ನಗರದಲ್ಲಿ ಮೆ 18 ಭಾನುವಾರ ನಡೆಯಲಿದೆ. ತುಮಕೂರು ನಗರೀಕರು ಹಾಗೂ ವಿವಿಧ ಸಂಘಟನೆಗಳಿಂದ ಸಹಯೋಗದಲ್ಲಿ ತಿರಂಗ ಯಾತ್ರೆ ಆಯೋಜನೆಯಾಗಲಿದೆ. ರಾಷ್ಟ್ರೀಯತೆ ಹಾಗೂ ರಾಷ್ಟ್ರದ ಸಾರ್ವಭೌಮತ್ವ, ಸೈನಿಕರ ಪರಾಕ್ರಮವನ್ನ ಮೇಳೈಸುವ ತಿರಂಗ ಯಾತ್ರೆಯು, ತುಮಕೂರು ನಗರದ ಎಸ್ ಐಟಿ ಮುಂಭಾಗದಿಂದ ಪ್ರಾರಂಭ ಆಗಲಿದೆ. ಎಸ್ ಐಟಿ, ಗಂಗೋತ್ರಿ ರಸ್ತೆ, ಎಸ್ ಎಸ್ ಪುರಂ, ಸೋಮೇಶ್ವರ, ಹೈಸ್ಕೂಲ್ ಮೈದಾನಲ್ಲಿ ತಿರಂಗ ಯಾತ್ರೆ ಸಾಗಲಿದೆ ಎಂದು ತಿರಂಗ ಯಾತ್ರೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ತುಮಕೂರು: ಜಿಲ್ಲೆಯ ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರೋ ಮೂರು ಕೋಟಿ ವೆಚ್ಚದ ಈಜು ಕೊಳ ಲೋಕಾರ್ಪಣೆಯಾಗಿದೆ. ತಿಪಟೂರು ಶಾಸಕ ಷಡಕ್ಷರಿ ಈಜುಕೊಳ ಲೋಕಾರ್ಪಣೆ ಮಾಡಿದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಈ ಈಜುಕೊಳ ನಿರ್ಮಾಣವಾಗಿದೆ. ಜಿಮ್ ಕೊಠಡಿಗಳ ನವೀಕರಣದೊಂದಿಗೆ ಈಜುಕೊಳ ನಿರ್ಮಾಣವಾಗಿದೆ. ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಈಜುಕೊಳ ನಿರ್ಮಾಣವಾಗಿದೆ. ತಿಪಟೂರು ಶಾಸಕ ಷಡಕ್ಷರಿಈಜುಕೊಳ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆ ಆಯುಕ್ತ ಚೇತನೆ ಸೇರಿದಂತೆ ಹಲವು ಭಾಗಿಯಾಗಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW