ಸದಾ ಒಂದಲ್ಲ ಒಂದು ವಿವಾದಗಳಿಗೆ ಕಾರಣವಾಗುತ್ತಿದ್ದ ಬಾಲಿವುಡ್ ನ ಮಾದಕ ನಟಿ ಪೂನಂ ಪಾಂಡೆಯ ಇದೀಗ ಹೊಸ ಶೈಲಿಯ ಉಡುಪಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ ನೀಡುತ್ತಿದ್ದಾರೆ. ಅಂದ ಹಾಗೆ ಇವರ ಉಡುಪು ಕಂಡು ಸಾಮಾಜಿಕ ಜಾಲತಾಣ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನ್ಯೂಸ್ ಪೇಪರ್ ನ್ನು ಮೈಗೆ ಸುತ್ತಿಕೊಂಡು ಫೋಟೋ ಶೂಟ್ ನಡೆಸಿರುವ ಪೂನಂ “ನನ್ನನ್ನು ಓದಲು ಬಯಸುತ್ತೀರಾ? ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ಗೆ ಜನರು ತಮಗೆ ತೋಚಿದಂತೆ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ.
ಸಾಕಷ್ಟು ಜನರು ನ್ಯೂಸ್ ಪೇಪರ್ ಕೊಡಿ ಓದಿ ಕೊಡುತ್ತೇವೆ ಎಂದು ಕಾಮೆಂಟ್ ಹಾಕಿ ನಟಿಗೆ ತಿರುಗೇಟು ನೀಡಿದ್ದಾರೆ. ಅಂತೂ ತಮ್ಮ ಹೊಸ ಫೋಟೋ ಮೂಲಕ ನಟಿ ಪೂನಂ ಪಾಂಡೆ ಮತ್ತೆ ಅಭಿಮಾನಿಗಳಿಗೆ ಕಚಗುಳಿಯಿಟ್ಟಿದ್ದಾರೆ.
ಈ ಹಿಂದೆ ತಾನು ಗರ್ಭ ಕಂಠ ಕ್ಯಾನ್ಸರ್ ನಿಂದ ಸಾವನ್ನಪ್ಪಿರುವುದಾಗಿ ನಟಿ ಪೂನಂ ತನ್ನ ಸಾವಿನ ಸುದ್ದಿಯನ್ನು ತಾನೇ ಹಬ್ಬಿಸಿಕೊಂಡಿದ್ದರು. ಈ ಸುದ್ದಿಯನ್ನು ಇಡೀ ದೇಶವೇ ನಂಬುವಂತೆ ಮಾಡಿದ್ದರು. ಆದರೆ ಬಳಿಕ ತಾನು ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದೆ ಎಂದು ತಾನು ಸತ್ತಿಲ್ಲ ಬದುಕಿರುವುದಾಗಿ ಹೇಳಿದ್ದರು. ಈ ಘಟನೆಯಿಂದಾಗಿ ಅವರು ಸಾಕಷ್ಟು ವಿರೋಧಗಳನ್ನು ಎದುರಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW