Author: admin

ತಿಪಟೂರು:  ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಬಿ.ಹೊಸಳ್ಳಿಯ ಎಸ್.ಬಿ.ಕೆ ಕ್ರಿಕೆಟರ್ಸ್ ತಂಡದ ವತಿಯಿಂದ ರಾಜರತ್ನ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾಟ ನಡೆಯಿತು. ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಜನಸ್ಪಂದನ ಟ್ರಸ್ಟ್ ಅಧ್ಯಕ್ಷ     ಸಿ.ಬಿ.ಶಶಿಧರ್, ಗ್ರಾಮದ ಹಿರಿಯ ಮುಖಂಡ ಚಿದಾನಂದ್ ಮತ್ತು ಲಕ್ಷ್ಮಿ ಕ್ರಿಕೆಟರ್ಸ್ ನ ಚಿರಂಜೀವಿ  ಭಾಗವಹಿಸಿ ಮಾತನಾಡಿದರು. ಸಮಾಜ ಸೇವಕ ಬಿ.ಆರ್.ಶಶಿಧರ್,  ಗ್ರಾಪಂ ಸದಸ್ಯ ಸಿದ್ದಯ್ಯ, ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ. ಕುಮಾರ್, ಯುವ ಮುಖಂಡ ಶರತ್, ವಕೀಲ ಪ್ರಶಾಂತ್, ಭರತ್, ಉಮಾಶಂಕರ್, ಜಗನ್ನಾಥ್ ಮತ್ತು ಶಂಕರಲಿಂಗಪ್ಪ ಸೇರಿದಂತೆ ಎಸ್.ಬಿ.ಕೆ ಕ್ರಿಕೆಟರ್ಸ್ ನ ಪದಾಧಿಕಾರಿಗಳು, ಗ್ರಾಮದ ಮುಖಂಡರುಗಳು ಹಾಗೂ  ಕ್ರೀಡಾಭಿಮಾನಿಗಳು  ಭಾಗವಹಿಸಿದ್ದರು ಈ ಪಂದ್ಯಾವಳಿಗೆ ಸುಮಾರು ಇಪ್ಪತ್ತು ತಂಡಗಳು ಭಾಗವಹಿಸಿದ್ದು,ಮೊದಲನೇ ಬಹುಮಾನ 12,000 ರೂ.ಗಳನ್ನು ಮಾದಾಪುರದ ಜೈಮಾರುತಿ ಕ್ರಿಕೆಟ್ ತಂಡ, ಎರಡನೇ ಬಹುಮಾನ 8,000 ರೂ.ಗಳನ್ನು ಬಿ.ಹೊಸಳ್ಳಿಯ  ಎಸ್.ಬಿ.ಕೆ ಕ್ರಿಕೆಟ್ ತಂಡ, ಮೂರನೇ ಬಹುಮಾನ 3,000 ರೂ.ಗಳನ್ನು  ಸಾರ್ಥವಳ್ಳಿಯ ಶ್ರೀ ಲಕ್ಷ್ಮೀ ಕ್ರಿಕೆಟರ್ಸ್…

Read More

ರಾಜೇಶ್ ರಂಗನಾಥ್ ರಾಜ್ಯದಲ್ಲಿ ಭುಗಿಲೆದ್ದಿದ್ದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಉಚ್ಛನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಶಾಲಾ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಪಾಲಿಸಬೇಕು ಎಂಬ ತೀರ್ಪು ನೀಡಿದೆ. ಸುದೀರ್ಘ ವಿಚಾರಣೆ ವಾದ ಪ್ರತಿವಾದವನ್ನು ಆಲಿಸಿದ ರಾಜ್ಯ ಉಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠ ಹಿಜಾಬ್ ವಿವಾದಕ್ಜೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಾರಂಭಗೊಂಡ ಹಿಜಾಬ್ ವಿವಾದ ರಾಜ್ಯದಾದ್ಯಂತ ಹಬ್ಬಿ ಕೊನೆಗೆ ದೇಶ ವಿದೇಶಗಳಲ್ಲೂ ಪ್ರತಿಧ್ವನಿಸಿತ್ತು. ಕಳೆದ ಫೆ. 11 ರಂದು ಉಚ್ಛನ್ಯಾಯಾಲಯ ಮಧ್ಯಂತರ ಆದೇಶವೊಂದನ್ನು ನೀಡಿ ತೀರ್ಪು ಕಾಯ್ದಿರಿಸಿತ್ತು. ಮಧ್ಯಂತರ ಆದೇಶದ ಅನ್ವಯ ತೀರ್ಪು ಪ್ರಕಟವಾಗುವವರೆಗೂ ಧಾರ್ಮಿಕ ಚಿನ್ಹೆ ಹಾಗೂ ಧಾರ್ಮಿಕತೆಯನ್ನು ಬಿಂಭಿಸುವ ಯಾವುದೇ ರೀತಿಯ ಉಡುಪು ಧರಿಸಬಾರದು ಹಾಗೆಯೇ ಎಂದಿನಂತೆ ಶೈಕ್ಷಣಿಕ ವ್ಯವಸ್ಥೆ ನಡೆಯಬೇಕು ಎಂದು. ಸುದೀರ್ಘ ಚರ್ಚೆ, ವಾದ ಪ್ರತಿವಾದ, ಹಾಗೂ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ನ ತ್ರಿಸದಸ್ಯ ಪೀಠ ಶಾಲಾಕಾಲೇಜುಗಳಲ್ಲಿ ವಸ್ತ್ರಸಂಹಿತೆಗೆ ಅವಕಾಶ ನೀಡಿ ಹಿಜಾಬ್ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು…

Read More

ತುಮಕೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಎಲ್ಲರೂ ಪಾಲಿಸಬೇಕು ಎಂದು ನಗರದ ಸಿದ್ಧಗಂಗಾ ಮಠದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು. ಶ್ರೀ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,   ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠ ಸುದೀರ್ಘವಾದ ಚರ್ಚೆ, ವಾದ ಪ್ರತಿವಾದವನ್ನು ಆಲಿಸಿ  ತೀರ್ಪು ಪ್ರಕಟಿಸಿದೆ. ಹದಿನೈದು ದಿನಗಳ ಕಾಲ ಕಾಲಾವಕಾಶ ತೆಗೆದುಕೊಂಡು ಅಂತಿಮ ತೀರ್ಪನ್ನು ಇಂದು ಪ್ರಕಟಗೊಳಿಸಿ ಸರ್ಕಾರ ಹೊರಡಿಸಿರುವ ವಸ್ತ್ರ ಸಂಹಿತೆ ಕಾನೂನು ಪರಿಪಾಲನೆ ಮಾಡಬೇಕು ಎಂದು ಆದೇಶಿಸಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲನೆ ಮಾಡಬೇಕು  ಎಂದರು. ಶಾಲೆ ಎಂದ ಮೇಲೆ ಎಲ್ಲರೂ ಒಂದು ಎನ್ನುವ ಮನೋಭಾವ ಇಟ್ಟುಕೊಂಡು ಪ್ರೀತಿ ವಿಶ್ವಾಸದಿಂದಿರಬೇಕು‌. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಿನ್ನೆಡೆಯಾಗಬಾರದು.  ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಎಲ್ಲರೂ ಸಹಕರಿಸಬೇಕು. ಶಿಸ್ತು ನಿಯಮಪಾಲನೆ ಮಾಡುವುದರ ಮೂಲಕ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿಹಿಡಿದು ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಸಲು ಎಲ್ಲರೂ ಬದ್ಧರಾಗಬೇಕು…

Read More

ಮಾಯಸಂದ್ರ: ಕಳೆದ ವರ್ಷ ಮಾಯಸಂದ್ರ ಬಸ್ ಸ್ಟ್ಯಾಂಡ್ ಗೆ ಅಂಟಿಕೊಂಡಿದ್ದ ಚರಂಡಿಯನ್ನು ತೆರೆದು ಮುಚ್ಚದೇ ಹಾಗೆಯೇ ಬಿಡಲಾಗಿತ್ತು. ಈ ಸಂಬಂಧ ನಮ್ಮ ತುಮಕೂರು ಮಾಧ್ಯಮ ಮಾಡಿದ ವರದಿಯಿಂದ ಎಚ್ಚೆತ್ತುಕೊಂಡ  ಗ್ರಾಮ ಪಂಚಾಯ್ತಿಯು  ಇದೀಗ ಚರಂಡಿಯನ್ನು ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿದೆ. ಕಳೆದ ವರ್ಷ ಬಸ್ಟ್ಯಾಂಡ್’ ಗೆ ಅಂಟಿಕೊಂಡಿರುವ 5 ಅಡಿ ಅಳವಾದ ಹಳೆಯ ಮೋರಿಯೊಂದನ್ನು ಸ್ವಚ್ಚ ಮಾಡಲು ತೆರೆದು ಹಾಗೆಯೇ ಬಿಡಲಾಗಿತ್ತು.  ಈ ಪ್ರದೇಶದಲ್ಲಿ ರಾತ್ರಿ ವೇಳೆ ಬಸ್ ಹತ್ತಲು ಬರುವ ಪ್ರಯಾಣಿಕರಿಗೆ ಇದು ಅಪಾಯಕಾರಿಯಾಗಿ ಪರಿಣಮಿಸಿತ್ತು. ಈ ಸಂಬಂಧ ನಮ್ಮತುಮಕೂರು.ಕಾಂ‘ಬಲಿಗಾಗಿ ಕಾಯುತ್ತಿದೆ ತೆರೆದ ಮೋರಿ” ಎಂಬ ಶೀರ್ಷಿಕೆಯೊಂದಿಗೆ ವಿವರವಾದ ವರದಿಯನ್ನು ಮಾಡಿತ್ತು. ನಮ್ಮ ತುಮಕೂರು ವರದಿಯಿಂದ ಎಚ್ಚೆತ್ತ ಗ್ರಾಮ ಪಂಚಾಯತ್ ಇದೀಗ ತೆರೆದ ಚರಂಡಿಯನ್ನು ಮುಚ್ಚಿ ಇದೀಗ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಸಮಸ್ಯೆಯೊಂದ ಬಗೆಹರಿದಂತಾಗಿದೆ. ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಟಿಕೆಟ್ ಇಲ್ಲದೆ ಪ್ರಯಾಣಿಸಿದ ಪ್ರಯಾಣಿಕರಿಂದ ಪಶ್ಚಿಮ ಕೇಂದ್ರ ರೈಲ್ವೆಯ ಜಬಲ್ಪುರ ವಿಭಾಗದ ಮುಖ್ಯ ಟಿಕೆಟ್ ಪರಿವೀಕ್ಷಕರು 1.70 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದ್ದಾರೆ. 16 ಟಿಕೆಟ್ ಪರಿವೀಕ್ಷಕರು ಪ್ರತ್ಯೇಕವಾಗಿ ತಲಾ 1 ಕೋಟಿ ರೂಪಾಯಿ ಮೌಲ್ಯದ ದಂಡವನ್ನು ವಸೂಲಿ ಮಾಡಿದ್ದಾರೆ ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ವಿಶ್ವ ರಂಜನ್ ಇಲ್ಲಿ ತಿಳಿಸಿದ್ದಾರೆ. ಮುಖ್ಯ ಟಿಕೆಟ್ ಪರಿವೀಕ್ಷಕ ಆಶಿಶ್ ಯಾದವ್ ಅವರು ಏಪ್ರಿಲ್ 1, 2021 ರಿಂದ ಈ ವರ್ಷದ ಮಾರ್ಚ್ 9 ರವರೆಗೆ 20,600 ಪ್ರಯಾಣಿಕರಿಂದ 1.70 ಕೋಟಿ ರೂ. ವೈಯಕ್ತಿಕ ಸಾಮರ್ಥ್ಯದಲ್ಲಿ ಇದು ಅತ್ಯಧಿಕ ಸಂಗ್ರಹವಾಗಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಯಾದವ್ ಸೇರಿದಂತೆ 42 ಸದಸ್ಯರನ್ನೊಳಗೊಂಡ ಫ್ಲೈಯಿಂಗ್ ಸ್ಕ್ವಾಡ್ ವಿವಿಧ ರೈಲುಗಳಲ್ಲಿ ಪ್ರಯಾಣಿಕರಿಂದ 71 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದೆ ಎಂದು ರಂಜನ್ ಹೇಳಿದರು. ವರದಿ: ಆಂಟೋನಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ನಿಯಮ ಉಲ್ಲಂಘನೆಗಾಗಿ ಸಂಚಾರಿ ಪೊಲೀಸರು ಚಲನ್ ಕಡಿತಗೊಳಿಸುವುದು (Challen)  ಅವರ ಕರ್ತವ್ಯದ ಒಂದು ಭಾಗ, ತಮಿಳುನಾಡಿನಲ್ಲಿ ಚಲನ್ ಕಡಿತಗೊಳಿಸುವ ಘಟನೆ ಬೆಳಕಿಗೆ ಬಂದಿರುವುದು ಅಚ್ಚರಿ ಮೂಡಿಸಿದೆ. ಶನಿವಾರ ರಾತ್ರಿ ಲಾರಿ ಚಾಲಕ ಸಂತೋಷ್ ಕುಮಾರ್ (Santosh Kumar) ಲಾರಿಯಲ್ಲಿ ಕೊಂಡ್ಲಂಪಟ್ಟಿ (Kodlampatti) ಕ್ರಾಸ್ ಕಡೆಗೆ ಹೋಗುತ್ತಿದ್ದರು. ಆಗ ಅಲ್ಲಿ ವಾಹನದ ಹುಡುಕಾಟದಲ್ಲಿ ನಿರತರಾಗಿದ್ದ ಪೊಲೀಸರು ಅವನ ವಾಹನವನ್ನು ನಿಲ್ಲಿಸಿ ಪರಿಶೀಲನೆ (Crime News)  ನಡೆಸಿದ್ದಾರೆ. ತನಿಖೆ ವೇಳೆ ಪೊಲೀಸರು ಸಂತೋಷ್‌ ಕುಮಾರ್‌ ಪಾನಮತ್ತನಾಗಿದ್ದ ಎಂದು ಆರೋಪಿಸಿ, ವಾಹನ ಜಪ್ತಿ ಮಾಡುವುದರ ಜತೆಗೆ ಹತ್ತು ಸಾವಿರ ರೂಪಾಯಿ ದಂಡ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಈ ಘಟನೆಯಿಂದ ವಿಚಲಿತನಾದ ಸಂತೋಷ್ ಬಂಕ್‌ ನಿಂದ ಪೆಟ್ರೋಲ್ ಖರೀದಿಸಿ ಬೆಂಕಿ ಹಚ್ಚಿಕೊಂಡಿದ್ದಾನೆ. ಸಂತೋಷ್ ಕಿರುಚಾಡುವ ಸದ್ದು ಕೇಳಿದಾಗ ಅಲ್ಲೇ ಇದ್ದ ಪೊಲೀಸರು ಧಾವಿಸಿ ಸಂತೋಷ್‌ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವರದಿಯ ಪ್ರಕಾರ, 25 ವರ್ಷದ ಲಾರಿ ಚಾಲಕ ಸಂತೋಷ್ ತಮಿಳುನಾಡಿನ ಅಮಾನಿ ಕೊಂಡ್ಲಂಪಟ್ಟಿ ಪ್ರದೇಶದ ನಿವಾಸಿಯಾಗಿದ್ದಾನೆ. ಪ್ರಸ್ತುತ…

Read More

ಹಿಂದೂಸ್ತಾನ್ ಯೂನಿಲಿವರ್ (HUL) ಮತ್ತು ನೆಸ್ಲೆ ತಮ್ಮ ಹಲವು ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿವೆ. ಚಹಾ (Tea), ಕಾಫಿ, ಹಾಲು ಮತ್ತು ನೂಡಲ್ಸ್‌ಗಳ ಬೆಲೆಯನ್ನು (Noodles price)ಮಾರ್ಚ್ 14 ರಿಂದ ಅಂದರೆ ಇಂದಿನಿಂದ ಹೆಚ್ಚಿಸಲಾಗಿದೆ. ಎಚ್‌ ಯುಎಲ್ ಬ್ರೂ ಕಾಫಿಯ ಬೆಲೆಯನ್ನು 3-7% ಮತ್ತು ಬ್ರೂ ಗೋಲ್ಡ್ ಕಾಫಿ ಜಾರ್‌ ನ ಬೆಲೆಯನ್ನು 3-4% ಹೆಚ್ಚಿಸಿದೆ. ಇನ್‌ ಸ್ಟಂಟ್ ಕಾಫಿ ಪೌಚ್‌ ಗಳ ಬೆಲೆಯೂ ಶೇ.3ರಿಂದ ಶೇ.6.66ಕ್ಕೆ ಏರಿಕೆಯಾಗಿದೆ. ಇದಲ್ಲದೇ ತಾಜ್ ಮಹಲ್ (Taj Mahal) ಟೀ ಬೆಲೆ ಶೇ.3.7ರಿಂದ ಶೇ.5.8ಕ್ಕೆ ಏರಿಕೆಯಾಗಿದೆ (Tea price hike). ಬ್ರೂಕ್ ಬಾಂಡ್‌ನ (Brooke Bond) ಎಲ್ಲಾ ವಿಧದ ಚಹಾಗಳ ಬೆಲೆಗಳು 1.5% ರಿಂದ 14% ಕ್ಕೆ ಏರಿದೆ. ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ (Price hike) ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು HUL ಹೇಳಿದೆ. ಮ್ಯಾಗಿ ದರದಲ್ಲಿ ಶೇ.9ರಿಂದ 16ರಷ್ಟು ಏರಿಕೆ : ನೆಸ್ಲೆ ಇಂಡಿಯಾ (Nestle India) ಕೂಡ ಮ್ಯಾಗಿ (Maggi) ಬೆಲೆಯನ್ನು…

Read More

ಗುಬ್ಬಿ: ದಲಿತ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮಾರ್ಚ್ 18 ಮತ್ತು 19ರಂದು ದಾವಣಗೆರೆ ಚಲೋ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಗುಬ್ಬಿ ತಾಲ್ಲೂಕಿನ ದಲಿತ ಸಂಘರ್ಷ ಸಮಿತಿ ಸಂಚಾಲಕ ಜೆ.ಸಿ.ನರಸಿಂಹ ಮೂರ್ತಿ ತಿಳಿಸಿದರು. ಗುಬ್ಬಿ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಡಕಾಗಿರುವ ದಲಿತ ಸಮುದಾಯದ ಮುಖಂಡರು ಹಾಗೂ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಎರಡು ದಿವಸಗಳಕಾಲ ರಾಜ್ಯ ಸಂಚಾಲಕರಾದ ಗುರುಮೂರ್ತಿ ಹಾಗೂ ರಾಜ್ಯ ಮಟ್ಟದ ನಾಯಕರು ಮತ್ತು ಮಠಾಧೀಶರು ಮತ್ತು ರಾಜಕೀಯ ಜನಪ್ರತಿನಿಧಿಗಳ ಸಮಕ್ಷಮದಲ್ಲಿ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ಹಾಗೂ ಜಿಲ್ಲೆಯ ಎಲ್ಲಾ ಮುಖಂಡರು ಹಾಗೂ ದಲಿತ ಸಮುದಾಯದವರು ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ  ಕಾನೂನು ಸಲಹೆಗಾರರಾದ  ನಿಟ್ಟೂರು ನಾಗಭೂಷಣ್, ದೊಡ್ಡ ಗುಣಿ ಕೀರ್ತಿ, ನಿಟ್ಟೂರು ನಾಗರಾಜ್, ಬಿಕ್ಕೆಗುಡ್ದ ಕೃಷ್ಣಪ್ಪ, ನರೇಂದ್ರ ಕುಮಾರ್, ದಲಿತ್ ಗಂಗಣ್ಣ, ಜಿ.ಹೆಚ್.ಹರೀಶ್, ಶಿವು ಶೆಟ್ಟಿಹಳ್ಳಿ, ಹಾಗೂ ಇನ್ನಿತರರು ಹಾಜರಿದ್ದರು. ವರದಿ: ಮಂಜುನಾಥ್,…

Read More

ಬೆಂಗಳೂರು: ಹೈಕೋರ್ಟ್ ನ ತ್ರಿಸದಸ್ಯ ಪೀಠದಿಂದ ಇಂದು ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟವಾಗಿದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಶಾಂತಿ ಕಾಪಾಡಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದಾರೆ. ಇಂದು ಪ್ರಕಟವಾಗಿರುವ ತೀರ್ಪು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದ್ದು ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ಸಮವಸ್ತ್ರ ಎತ್ತಿ ಹಿಡಿದಿದ್ದು ಹಿಜಬ್ ಸಮುದಾಯದ ಅತ್ಯಗತ್ಯ ಭಾಗವಲ್ಲ ಎಂದು ತಿಳಿಸಿದೆ. ಮಕ್ಕಳಿಗೆ ವಿದ್ಯೆಗಿಂತ ಬೇರೆ ಯಾವುದೂ ಮುಖ್ಯವಲ್ಲ ಹೈಕೋರ್ಟ್ ತ್ರಿಸದಸ್ಯ ಪೀಠದಿಂದ ತೀರ್ಪು ನೀಡಿದ್ದು ತೀರ್ಪಿನ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದಿದ್ದಾರೆ. ಶಾಂತಿ ಕಾಪಾಡಬೇಕು , ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಎಲ್ಲರೂ ಸಹಕರಿಸಬೇಕು. ತೀರ್ಪನ್ನು ಎಲ್ಲ ಪಾಲಕರು, ಶಿಕ್ಷಕರು ಮಕ್ಕಳು ಕೂಡ ಪಾಲಿಸುವಂತಾಗಬೇಕು ಎಂದು ಮನವಿ ಮಾಡಿದ್ದಾರೆ. ತೀರ್ಪಿನ ನಂತರ ಪ್ರತಿಯೊಬ್ಬರು ಒಪ್ಪಿ ಸಾರ್ವಜನಿಕರು ರಾಜ್ಯದಲ್ಲಿ ಶಾಂತಿ ಕಾಪಾಡಿ ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ. ವರದಿ: ಮಾರುತಿ ಪ್ರಸಾದ್, ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ಮಾರ್ಚ್‌ 17ರಂದು ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನ. ಹಾಗಾಗಿ ಅದೇ ದಿನ ಜೇಮ್ಸ್‌ ಚಿತ್ರ ಬಿಡುಗಡೆ ಮಾಡಲು ಈಗಾಗಲೇ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜಕುಮಾರನಿಗಾಗಿ ಥಿಯೇಟರ್‌ಗಳು ಕೂಡ ಸಿಂಗಾರಗೊಳ್ಳುತ್ತಿವೆ. ರಾಜ್ಯವಷ್ಟೇ ಅಲ್ಲದೆ, ಹೊರ ರಾಜ್ಯ, ವಿದೇಶದಲ್ಲೂ ಜೇಮ್ಸ್‌ ಬರುವಿಕೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. 46 ವರ್ಷಗಳ ಕಾಲ ಆ ಬೆಟ್ಟದ ಹೂವು ಭೂಮಿ ಮೇಲೆ ನೆಲೆ ನಿಂತು ಎಲ್ಲರನ್ನೂ ನಕ್ಕು ನಗಿಸಿ ಕೈಗೆಟುಕದ ನಕ್ಷತ್ರದಂತೆ ನಮ್ಮಿಂದ ದೂರವಾಗಿದೆ. ಮಾರ್ಚ್‌ 17 ರಂದು ನಮಗೆ ದರ್ಶನ ನೀಡಲು ಅವ್ರು ಬರುತ್ತಿದ್ದಾರೆ. ಅವರಿಗಾಗಿ ಭಾನುವಾರ ಒಂದು ವಿಶೇಷ ಕಾರ್ಯಕ್ರಮ ನಡೆದಿದೆ. ಯಾರವರು ಅನ್ನೋದು ನಿಮಗೆ ಈಗಾಗಲೇ ಗೊತ್ತಾಗಿದೆ. ಅವರನ್ನು ನೆನೆದ ದೊಡ್ಮನೆ ಕುಟುಂಬದವರು ಭಾವುಕರಾಗಿದ್ರು. ಅಷ್ಟೇ ಅಲ್ಲ, ಅಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಕಣ್ಣೀರು ಸುರಿಸಿದ್ದಾರೆ. ಹೌದು, ಜೇಮ್ಸ್‌ ಸಿನಿಮಾ(James Movie) ಇದೀಗ ಕರುನಾಡಿನ ಜನರ ಆಸ್ತಿಯಾಗಿದೆ. ಆ ಸಿನಿಮಾ ರಿಲೀಸ್‌ ಕ್ಷಣಕ್ಕಾಗಿ ಇಡೀ ದೇಶವಷ್ಟೇ ಅಲ್ಲ ಹೊರ ದೇಶಗಳ ಜನರೂ ಕಾದು ಕುಳಿತ್ತಿದ್ದಾರೆ.…

Read More