Author: admin

ತುಮಕೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹೆಸರು ಮಾತ್ರ ರಾಮಂದು, ಮುಖ ರಾವಣಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಿದ್ದರಾಮಯ್ಯ ವಿರುದ್ಧ ಆಕೋಶ್ರ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಆಯೋಜಿಸಿದ್ದ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ನಳಿನ್‌ ಕುಮಾರ್‌ ಸಿದ್ದರಾಮಯ್ಯನ ಆಡಳಿತ ಕಾಲದಲ್ಲಿ ಅತಿ ಹೆಚ್ಚು ಗೋ ಹತ್ಯೆ ನಡೆದಿದೆ. ಸಿದ್ದರಾಮಯ್ಯನವರ ಕಾರಣದಿಂದ 61 ಮಂದಿ ಕಾಂಗ್ರೆಸ್ ನಾಯಕರು ಪಕ್ಷ ತೊರೆದಿದ್ದಾರೆ ಎಂದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗಂಜಿ ಕೇಂದ್ರದ ಆಸೆಗಾಗಿ ಆರ್​ಎಸ್​ಎಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಿದ್ದರಾಮಯ್ಯ ಟ್ವೀಟ್​ಗೆ ತಿರುಗೇಟು ನೀಡಿದ್ದಾರೆ. ಇಟಲಿ ಮೂಲದ ನಾಯಕರಿಗೆ ಹತ್ತಿರವಾಗಲು ಸಿದ್ದರಾಮಯ್ಯ ಆ ರೀತಿಯ ಹೇಳಿಕೆ ನೀಡ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಮಾತಿಗೆ ಬೆಲೆಯಿತ್ತು. ಆದರೆ ಈಗ ಅವರ ಮಾತನ್ನು ಅವರ ಪಕ್ಷದ ಕಾರ್ಯಕರ್ತರೇ ಕೇಳುತ್ತಿಲ್ಲ. ಅವರ ಮಾತಿಗೆ ಕಿಮ್ಮತ್ತು ಇಲ್ಲ ಎಂದು ಸಹಕಾರ…

Read More

ಬೆಂಗಳೂರು: ನಾನು ಮಾತ್ರವಲ್ಲ, ನೀವೂ ದ್ರಾವಿಡರೇ ಆಗಿದ್ದೀರಿ. ಈ ಸ್ಪಷ್ಟತೆ ನನಗಿದೆ. ನಾನು ದ್ರಾವಿಡ ಮೂಲವನ್ನು ಉಳಿಸಿಕೊಂಡಿದ್ದೇನೆ, ನೀವು ಮಾತ್ರ ಅಧಿಕಾರದ ದುರಾಸೆಯಿಂದ ಮೂಲವನ್ನು ತೊರೆದು ಪಕ್ಷಾಂತರ ಮಾಡಿದ್ದೀರಿ. ಬೇಗ ‘ಘರ್ ವಾಪಸಿ” ಆಗಿಬಿಡಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗಳಿಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು,  ನೆಹರು ಅವರನ್ನು ಮೋದಿಗೆ ಹೋಲಿಸಲು ಸಾಧ್ಯವೇ ಇಲ್ಲ ಎಂದು ಮತ್ತೆ ಮತ್ತೆ ಹೇಳುತ್ತೇನೆ. ಇಬ್ಬರು ನಾಯಕರ ಸಾಧನೆ ಬಗ್ಗೆ ಮುಕ್ತ ಚರ್ಚೆಗೆ ನೀವು ಸಿದ್ಧ ಇದ್ದರೆ ನಾನೂ ಸಿದ್ಧನಿದ್ದೇನೆ ಎಂದಿದ್ದಾರೆ. ನನ್ನ ಮಾತಿಗೆ ನೀವು ಖರೀದಿಸಿಟ್ಟಿರುವ ”ಟ್ರೋಲ್ ಗ್ಯಾಂಗ್” ಮೂಲಕ ಉತ್ತರ ಕೊಡಿಸಲು ಹೋಗಬೇಡಿ. ಭಾರತ ಮಾತೆ ತನ್ನ ಭಕ್ತನನ್ನು ಕಳೆದುಕೊಂಡಿದ್ದಾಳೆ, ಶಾಂತಿ ತನ್ನ ರಕ್ಷಕನನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ, ನಿರಾಶ್ರಿತರು ತನ್ನ ಆಶ್ರಯದಾತನನ್ನು, ಸಾಮಾನ್ಯ ಜನ ತಮ್ಮ ಕಣ್ಮಣಿಯನ್ನು ಕಳೆದುಕೊಂಡಿದ್ದಾರೆ.. ಪರದೆ ಬಿದ್ದಿದೆ -ಹೀಗೆಂದು ನೆಹರು…

Read More

ಬೆಂಗಳೂರು: ನಾಳೆ ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಮಾಲಿಕರು ಮುಷ್ಕರ ನಡೆಸಲು ನಿರ್ಧರಿಸಿದ್ದು , ಈ ಹಿನ್ನೆಲೆಯಲ್ಲಿ  ಪೆಟ್ರೋಲ್ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಪೆಟ್ರೋಲ್, ಡೀಸೆಲ್ ಖರೀದಿ ಬಂದ್ ಮಾಡಲಿದ್ದಾರೆ. ಬಂಕ್ ನಲ್ಲಿ ಸ್ಟಾಕ್ ಇರುವ ಪೆಟ್ರೋಲ್, ಡೀಸೆಲ್ ಮಾತ್ರ ಮಾರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಎರಡು ಬಾರಿ ಪೆಟ್ರೋಲ್, ಡೀಸೆಲ್ ಮೇಲಿನ ಟ್ಯಾಕ್ಸ್ ಕಡಿತಗೊಳಿಸಿದೆ. ನಾವು ಖರೀದಿಸಿದ್ದ ತೈಲಕ್ಕೆ ನೀಡಿದ್ದ ತೆರಿಗೆ ಮರುಪಾವತಿ ಮಾಡಿಲ್ಲ. ಹೀಗಾಗಿ ಪ್ರತಿ ಡೀಲರ್ ಗೆ 7-8 ಲಕ್ಷ ನಷ್ಟವಾಗಿದೆ. ತೈಲ ಕಂಪನಿಗೆ ಮೊದಲೇ ಕಟ್ಟಿದ್ದ ತೆರಿಗೆ ಮರುಪಾವತಿಸಬೇಕು. ಬೇಡಿಕೆಗೆ ತಕ್ಕಂತೆ ಪೆಟ್ರೋಲ್, ಡೀಸೆಲ್ ಪೂರೈಸಬೇಕು ಎಂದು ಮಾಲೀಕರು ಆಗ್ರಹಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಕನ್ನಡದ ಪ್ರೇಮಲೋಕ ರಣಧೀರ, ಕನಸುಗಾರ ಎಂದೆ ಕನ್ನಡ ಸಿನಿ ರಂಗದಲ್ಲಿ ಪ್ರಖ್ಯಾತ ಪಡೆದಿರುವ ನಟ ರವಿಚಂದ್ರನ್  ರವರ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕ ನಟನಾಗಿ ನಟಿಸುತ್ತಿರುವ ಕನ್ನಡದ ಬಹಳಷ್ಟು ರವಿಚಂದ್ರನ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ತ್ರಿವಿಕ್ರಮ ಸಿನಿಮಾದ ಹಾಡಿಗೆ ಸ್ಟೆಪ್ ಹಾಕಿದ ಶಿವರಾಜ್​ ಕುಮಾರ್  ಶುಭಾಶಯ ಕೋರಿದರು. ಕನ್ನಡದ ಕನಸುಗಾರ ವಿ.ರವಿಚಂದ್ರನ್ ರವರ ಎರಡನೇಯ ಮಗ  ವಿಕ್ರಮ್  ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ‌ ತ್ರಿವಿಕ್ರಮ ಚಿತ್ರದ ಪೋಸ್ಟರ್ ಹಾಗೂ ಟೀಸರ್​ನಿಂದಲೇ ಸ್ಯಾಂಡಲ್ ವುಡ್​ನಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಮಮ್ಮಿ ಪ್ಲೀಸ್ ಮಮ್ಮಿ ಎಂಬ ಹಾಡು ಬಿಡುಗಡೆ ಆಗಿ ಸೋಷಿಯಲ್‌‌ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ತ್ರಿವಿಕ್ರಮ ಸಿನಿಮಾಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಯಹಸ್ತ ಸಿಕ್ಕಿದೆ. ಈ‌ ಸಿನಿಮಾ ಹಾಗು ಪ್ಲೀಸ್ ಮಮ್ಮಿ ಹಾಡಿನ ಬಗ್ಗೆ ಮಾತನಾಡಿದ್ದಾರೆ. ಶಿವರಾಜ್ ಕುಮಾರ್ ತ್ರಿವಿಕ್ರಮ ಸಿನಿಮಾದ ಸ್ಪೆಷಾಲಿಟಿ ಹಾಗೂ ರವಿಚಂದ್ರನ್ ಮಗ ವಿಕ್ರಮ್ ಬಗ್ಗೆ ಮಾತನಾಡಿದ್ದಾರೆ. ಶಿವರಾಜ್ ಕುಮಾರ್, ಯುವ ನಟ ವಿಕ್ರಮ್…

Read More

ಮಡಿಕೇರಿ: ಇಲ್ಲಿನ ಮುಕ್ಕೋಡ್ಲು ಗ್ರಾಮದ ಕೋಟೆ ಅಬ್ಬಿಯಲ್ಲಿ ಈಜಲು ಹೋದ ಮೂವರು ಪ್ರವಾಸಿಗರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ರವಿವಾರ ನಡೆದಿದೆ. ತೆಲಂಗಾಣದಿಂದ ಕೊಡಗಿಗೆ ಪ್ರವಾಸಕ್ಕೆ ಆಗಮಿಸಿದ್ದ ಪ್ರವಾಸಿಗರು ದುರಂತ ಅಂತ್ಯಕಂಡಿದ್ದು,  ತೆಲಂಗಾಣದಿಂದ ಆಗಮಿಸಿದ್ದ ಈ ಪ್ರವಾಸಿಗರು ಕುಶಾಲನಗರದ ಹೋಂ ಸ್ಟೇಯಲ್ಲಿ ತಂಗಿದ್ದರು ಎನ್ನಲಾಗಿದೆ. ಇಂದು ಕೋಟೆ ಅಬ್ಬಿಗೆ ಬಂದಿದ್ದ  ಇವರು ಸ್ನಾನಕ್ಕೆಂದು ನೀರಿಗೆ ಇಳಿದಿದ್ದು, ಈ ವೇಳೆ ಮೂವರೂ ನೀರು ಪಾಲಾಗಿದ್ದಾರೆ.  ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ಮೂವರ ದೇಹವನ್ನು ನೀರಿನಿಂದ ಎತ್ತಿದ್ದಾರೆ. ಆದರೆ ಅದಾಗಲೇ ಮೂವರೂ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ದಾವಣಗೆರೆ: ಪಠ್ಯಪುಸ್ತಕ ಮರು ಪರಿಷ್ಕರಣೆಯ ಸಂಬಂಧ ಉಂಟಾಗಿರುವ ವಿವಾದ ವಿಚಾರವಾಗಿ ಮುಖ್ಯಮಂತ್ರಿ ಗಳು ಮಧ್ಯಪ್ರವೇಶಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಮನವಿ ಮಾಡಿದ್ದಾರೆ. ಸುದ್ದಿಗಾರರ ಜೊತೆಗೆ ಭಾನುವಾರ ಮಾತನಾಡಿದ ಅವರು, ಶೈಕ್ಷಣಿಕ ಘನತೆ ಉಳಿಯಬೇಕು ಎಂಬುದು ನನ್ನ ಕಳಕಳಿ. ಹಾಗಾಗಿ ಮುಖ್ಯಮಂತ್ರಿಯವರು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು. ಶೈಕ್ಷಣಿಕ ಘನತೆ ಉಳಿಯಲು ಮುಖ್ಯಮಂತ್ರಿ ಯವರ ಮಧ್ಯಪ್ರವೇಶ ಅನಿವಾರ್ಯವೂ ಹೌದು. ನಮ್ಮ ಕಾಲದಲ್ಲೂ ಪಠ್ಯಪುಸ್ತಕ ಪರಿಷ್ಕರಣೆ ಆಗಿತ್ತು. ಅದು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ಹಾಗೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ನಡೆದಿತ್ತು. ಯಾವ ಪಠ್ಯವನ್ನ ಸೇರಿಸಲಾಗಿದೆ, ಬಿಟ್ಟಿದ್ದೇವೆ ಎಂಬುದಕ್ಕೆ ಸ್ಪಷ್ಟ, ನಿರ್ದಿಷ್ಟ ಕಾರಣ ನೀಡಲಾಗಿತ್ತು ಎಂದು ತಿಳಿಸಿದರು. ಈಗ ಪಠ್ಯಪುಸ್ತಕ ಪರಿಷ್ಕರಣೆ ಆಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹಾಗು ಸಂವಿಧಾನ ಆಶಯಕ್ಕೆ ಪಠ್ಯಪುಸ್ತಕ ರಚನೆ ಆಗಬೇಕು. ಈ ಬಾರಿಯ ಮರು ಪರಿಷ್ಕರಣೆಯಲ್ಲಿ ಅನೇಕ ಮುಖ್ಯ ಪಠ್ಯಗಳು ಕೈಬಿಟ್ಟಿರುವುದರಿಂದ ಕನ್ನಡ…

Read More

ಹರ್ಯಾಣ: ದೆಹಲಿಯಂತೆ ಹರ್ಯಾಣದಲ್ಲೂ ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳನ್ನು ಅಭಿವೃದ್ಧಿಗೊಳಿಸುವುದಾಗಿ ಎಎಪಿ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭರವಸೆ ನೀಡಿದ್ದಾರೆ. ಕುರುಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷದ ಮೊದಲ ರಾಜ್ಯಮಟ್ಟದ ರ‍್ಯಾಲಿ ಉದ್ದೇಶಿಸಿದ ಮಾತನಾಡಿದ ಕೇಜ್ರಿವಾಲ್‌, ಮುಂದಿನ ತಿಂಗಳು ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಬೆಂಬಲ ನೀಡುವಂತೆ ಜನರಲ್ಲಿ ಮನವಿ ಮಾಡಿದರು. ಪಂಜಾಬ್‌ ನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ವಿಜಯ್‌ ಸಿಂಗ್ಲಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದನ್ನು ಉಲ್ಲೇಖಿಸಿ, ‘ದೆಹಲಿ ಮತ್ತು ‍ಪಂಜಾಬ್‌ನಲ್ಲಿ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದ್ದೇವೆ. ಹರಿಯಾಣದಲ್ಲೂ ಭ್ರಷ್ಟಾಚಾರ ತೊಲಗಿಸುತ್ತೇವೆ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುಮಕೂರು: ಅಮಾನಿಕೆರೆ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕ್ರೇಜಿಸ್ಟಾರ್ ವಿ ರವಿಚಂದ್ರನ್  ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಕುರಿತು ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿದ ಕ್ರೇಜಿಸ್ಟಾರ್ ಅಭಿಮಾನಿಗಳು,  ಕನ್ನಡ ಸಿನಿಚಿತ್ರರಂಗಕ್ಕೆ ವಿ.ರವಿಚಂದ್ರನ್ ಹೊಸರಂಗು ತಂದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನೇಕ ರೀಮೇಕ್ ಸಿನಿಮಾಗಳನ್ನು ಕನ್ನಡಕ್ಕೆ ತಂದರೂ ಮೂಲಸಿನಿಮಾದ ಛಾಯೆ ಇಲ್ಲದೇ ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಸೊಗಡಿನಲ್ಲಿ ಸೂಪರ್ ಹಿಟ್ ಗಳನ್ನು ನೀಡಿದ್ದಾರೆ ಎಂದರು. ರವಿಚಂದ್ರನ್ ಅವರು, ಕನ್ನಡದ ಖ್ಯಾತ ನಿರ್ಮಾಪಕರಾದ ಎನ್.ವೀರಾಸ್ವಾಮಿಯವರ ಮಗ. ತಂದೆಯಾದ ಎನ್.ವೀರಸ್ವಾಮಿ ಅವರು ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ.  ರವಿಚಂದ್ರನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಸಿಪಾಯಿ ಚಿತ್ರದೊಡನೆ ಈಶ್ವರಿ ಸಂಸ್ಥೆ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು. ರವಿಚಂದ್ರನ್ ಒಬ್ಬ ಬಹುಮುಖ ಪ್ರತಿಭೆಯ ನಟ, ಚಿತ್ರ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷಣೆ ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ.  ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ…

Read More

ಕೊರಟಗೆರೆ: ಪಟ್ಟಣದಲ್ಲಿನ ಕಸಾಯಿ ಖಾನೆಗಳ ಮೇಲೆ ಕೊರಟಗೆರೆ ಸಿಪಿಐ ಸಿದ್ದೇರಾಮೇಶ್ವರ ನೇತೃತ್ವದ ಪೊಲೀಸರ ತಂಡದಿಂದ ದಿಢೀರ್ ದಾಳಿ ನಡೆಸಿ 4 ಜನ ಆರೋಪಿಗಳ ಜೊತೆಯಲ್ಲಿ 6 ಪುಟ್ಟ ಪುಟ್ಟ   ಕರುಗಳನ್ನು ರಕ್ಷಣೆ ಮಾಡಲಾಗಿದೆ.  ಕೊರಟಗೆರೆ ಪಟ್ಟಣದ 4 ಮತ್ತು 5ನೇ ವಾರ್ಡಿನಲ್ಲಿರುವ 4 ಕಸಾಯಿ ಖಾನೆ ಹಾಗೂ ಒಂದು ಮನೆ ಮೇಲೆ ಗೌಗ್ಯಾನ್ ಪೌಂಡೇಷನ್ ದೂರಿನ ಅನ್ವಯ ಕೊರಟಗೆರೆಯ  ಪೊಲೀಸರ ತಂಡ ದಿಢೀರ್ ಕಾರ್ಯಾಚರಣೆ  ನಡೆಸಿದ್ದಾರೆ.  ಸರ್ಕಾರ ಗೋ ಮಾಂಸವನ್ನು ಮಾರಾಟ ಮಾಡುವುದನ್ನು ನಿಷೇಧ ಮಾಡಿದ್ದರೂ ನಿಗೂಢವಾಗಿ ಎಗ್ಗಿಲ್ಲದೆ ಗೋ ಮಾಂಸ ಮಾರಾಟ ನಡೆಯುತ್ತಿದ್ದು,   ಈ ಹಿನ್ನೆಲೆಯಲ್ಲಿ ಗೌ ಗ್ಯಾನ್ ಪೌಂಡೇಷನ್ ಸ್ವಯಂ ಸೇವಕರ ತಂಡದ ದೂರಿನ ಮೇಲೆ ವಾಸದ ಮನೆ ಮತ್ತು ಅಂಗಡಿಯಲ್ಲಿ ಶೇಖರಣೆ ಮಾಡಲಾಗಿದ್ದ 4 ಟನ್ ಗೂ ಅಧಿಕ  ದನದ ಮಾಂಸ ವಶಪಡಿಸಿಕೊಂಡ ಪೊಲೀಸರು, 4 ಮಂದಿಯನ್ನು ಬಂಧಿಸಿದ್ದಾರೆ. ಈ ವೇಳೇ 6 ಗೋವುಗಳನ್ನು ಹಾಗೂ ಚಿಕ್ಕ ಚಿಕ್ಕ ಕರುಗಳನ್ನು  ರಕ್ಷಣೆ ಮಾಡಲಾಗಿದೆ. ಉಳಿದಂತೆ ಕರುಗಳ ಸಾಗಾಣಿಕೆಗೆ…

Read More

ತುಮಕೂರು:  ಆರೆಸ್ಸೆಸ್ ನವರು ಮೂಲತಃ ಭಾರತದವರಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದು,  ಟೀಕಾ ಪ್ರಹಾರ ನಡೆಸಿದರು. ತುಮಕೂರು ನಗರದಲ್ಲಿ ಭಾನುವಾರ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದಿಂದ ಹಮ್ಮಿಕೊಂಡಿದ್ದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಆಗಲು ಬಿಡಲಿಲ್ಲ. ಈಗ ಡಿ.ಕೆ.ಶಿವಕುಮಾರ್ ಅವರನ್ನು ಮುಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೀರಿ . ಮುಖ್ಯಮಂತ್ರಿ ಕುರ್ಚಿಯ ಮೇಲೆ ಟವಲ್ ಹಾಕಿದ್ದೀರಿ. ಮುಂದೆ ನೀವು ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ  ಎಂದು ಕಿಡಿಕಾರಿದರು. ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲೆ ಹೊರಗಡೆಯಿದ್ದಾರೆ. ಕಳ್ಳರ ಸಂಘ ಇಟ್ಟುಕೊಂಡಿರುವ ಸಿದ್ದರಾಮಯ್ಯ ಅವರಿಗೆ ಆರೆಸ್ಸೆಸ್ ಬಗ್ಗೆ ಮಾತನಾಡುವ ನೈತಿಕತೆ, ಯೋಗ್ಯತೆಯಿಲ್ಲ ಎಂದು ಟೀಕಿಸಿದರು. ನಿಮ್ಮನ್ನು ರಾಜಕೀಯದಲ್ಲಿ ಬೆಳೆಸಿದ ದೇವೇಗೌಡರನ್ನು ತುಳಿಯುವ ಕೆಲಸ ಮಾಡಿದೀರಿ. ನಿಮ್ಮಿಂದಾಗಿ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಿದೆ ನಿಮಗೆ ಧನ್ಯವಾದಗಳು ಎಂದರು. ಸಿದ್ದರಾಮಯ್ಯ ಅವರು ಹೆಸರು ಬದಲಾವಣೆ…

Read More