Author: admin

ಕೊರಟಗೆರೆ: ಹೆಜ್ಜೇನು ದಾಳಿಯಿಂದ ಓರ್ವ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯ ಎಸ್ಸಾರ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಹುಲವಂಗಲ ಗ್ರಾಮದ ಗ್ರಾಪಂ ನಿವೃತ್ತ ಕಾರ್ಯದರ್ಶಿ ಕೃಷ್ಣಮೂರ್ತಿ(65) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಪುಟ್ಟಸಂದ್ರದ ರೈ ಸೋಮಣ್ಣ ಎಂಬವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಘಟನೆಯಲ್ಲಿ ಸಂಕೇನಹಳ್ಳಿ ಗ್ರಾಮದ ಜಯಪ್ರಕಾಶ್ ಮತ್ತು ಶರತ್ ಎಂಬವರಿಗೆ ಗಾಯಗಳಾಗಿದ್ದು, ಅವರಿಗೆ ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಎಸ್ಸಾರ್ ಪೆಟ್ರೋಲ್ ಬಂಕ್ ಸಮೀಪದಲ್ಲಿರುವ ಆಲದ ಮರದಲ್ಲಿ ನಾಲ್ಕು ಹೆಜ್ಜೇನು ಗೂಡುಗಳಿದ್ದು, ಈಗಾಗಲೇ ಸಾಕಷ್ಟು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಕೊರಟಗೆರೆ ತಹಶೀಲ್ದಾರ್ ನಹೀದಾ, ಕೋಳಾಲ ಪಿಎಸೈ ಮಹಾಲಕ್ಷ್ಮಿ ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಕೊಟ್ಟಾಯಂ: ಕೊಟ್ಟಾಯಂನಲ್ಲಿ ಕ್ರೀಮ್ ಬನ್‌ ನಲ್ಲಿ ಕ್ರೀಂ ಇಲ್ಲ ಎಂದು ಆರೋಪಿಸಿ ಬೇಕರಿ ಮಾಲೀಕನನ್ನು  ದುಷ್ಕರ್ಮಿಗಳು ಥಳಿಸಿದ ಘಟನೆ ಕೇರಳದಲ್ಲಿ ನಡೆದಿದ್ದು, ಇದೇ ಬೇಕರಿಯಲ್ಲಿ ಟೀ ಕುಡಿದ ವೃದ್ಧನಿಗೂ ತಂಡ ಹಲ್ಲೆ ನಡೆಸಿದೆ. ಇಲ್ಲಿನ ವೈಕಂ ತಾಲೂಕು ಆಸ್ಪತ್ರೆ ಬಳಿ ಇರುವ ಟೀ ಅಂಗಡಿಗೆ ಆರು ಯುವಕರು ಟೀ ಕುಡಿಯಲು ಬಂದಿದ್ದರು. ಈ ವೇಳೆ  ಕ್ರೀಂ ಬನ್‌ ನಲ್ಲಿ ಕ್ರೀಂ ಇಲ್ಲವೆಂದು ಹೇಳಿ ಬೇಕರಿ ಮಾಲಿಕ ಶಿವಕುಮಾರ್, ಅವರ ಪತ್ನಿ ಕವಿತಾ, ಮಕ್ಕಳಾದ ಕಾಶಿನಾಥನ್ ಮತ್ತು ಸಿದ್ಧಿ ವಿನಾಯಕ್ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಚಾ ಕುಡಿಯಲು ಬಂದ 95 ವರ್ಷದ ವೇಲಾಯುಧನ್ ಎಂಬವರಿಗೆ  ಬಿಸಿ ಇಲ್ಲದ ಟೀ ಕುಡಿಯುತ್ತೀಯಾ? ಎಂದು ಪ್ರಶ್ನಿಸಿ ಯುವಕರು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಮದಾಗಿ  ವೇಲಾಯುಧನ್ ಅವರ ಸೊಂಟಕ್ಕೆ ಗಾಯಗೊಂಡಿದೆ ಎನ್ನಲಾಗಿದೆ. ಸದ್ಯ ಪೊಲೀಸರು ದಾಳಿಕೋರರನ್ನು ಮರವಂತುರುತ್ತು ನಿವಾಸಿಗಳು ಎಂದು ಗುರುತಿಸಿದ್ದಾರೆ.  ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ…

Read More

ಸಿಂಗಾಪುರ: ಮೂತ್ರದಿಂದ ಬಿಯರ್ ತಯಾರಿಸುವ ಮೂಲಕ ಸಿಂಗಾಪುರ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ.  ಇದರಿಂದ ಶುದ್ಧ ನೀರಿನ ನಷ್ಟ ಗಣನೀಯವಾಗಿ ಕಡಿಮೆಯಾಗಲಿದೆ ಎಂಬುದು ಅಧಿಕಾರಿಗಳ ಹೇಳಿಕೆ.ಈಗ ಹೊಸ ಬಿಯರ್ ಅನ್ನು ಸಿಂಗಾಪುರದಲ್ಲಿ ನ್ಯೂಬ್ರೂ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.  ಈ ಬಿಯರ್‌ನ ರುಚಿ ಅತ್ಯುತ್ತಮವಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಸಿಂಗಾಪುರದ ರಾಷ್ಟ್ರೀಯ ಜಲ ಮಂಡಳಿಯೂ ಈ ಕಲ್ಪನೆಯ ಹಿಂದೆ ಇದೆ.  ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯನೀರಿನ ಸಂಸ್ಕರಣೆಗೆ ವಿವಿಧ ಯೋಜನೆಗಳು ಈಗಾಗಲೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ.  ಇದರೊಂದಿಗೆ, ಬಿಯರ್ ಅನ್ನು ಮಾಲಿನ್ಯಕಾರಕಗಳು ಮತ್ತು ಮೂತ್ರದಿಂದ ತಯಾರಿಸಲಾಗುತ್ತದೆ. ಬಿಯರ್ ಅನ್ನು ಮೂತ್ರದಿಂದ ಹಲವಾರು ಶುದ್ಧೀಕರಣ ಪ್ರಕ್ರಿಯೆಗಳ ಮೂಲಕ ತಯಾರಿಸಲಾಗುತ್ತದೆ.  ಜಗತ್ತಿನಲ್ಲಿ ಹೆಚ್ಚುತ್ತಿರುವ ಸಿಹಿನೀರಿನ ಕೊರತೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಈ ಕಲ್ಪನೆಯು ಒಳ್ಳೆಯದು ಎಂದು ಅಧಿಕಾರಿಗಳು ಹೇಳುತ್ತಾರೆ.  ಈಗ ಬಾರ್ ಮತ್ತು ಮದ್ಯದ ಅಂಗಡಿಗಳಲ್ಲಿ ಮೂತ್ರ ಬಿಯರ್ ಲಭ್ಯವಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಳಿಯಾರ್ ರಸ್ತೆಯ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಳೆದ ವಾರ ಬಿಡುವಿಲ್ಲದೆ ಸುರಿದ ಮಳೆಯಿಂದಾಗಿ ಹಿರಿಯೂರು ನಗರಸಭೆ ನಿರ್ಮಾಣದ  ರಸ್ತೆಯ ಕಾಮಗಾರಿಯ ನಿಜ ಬಣ್ಣ ಇದೀಗ  ಬಯಲಾಗಿದೆ. ಮಹಾಮಾರಿ ಕೊರೋನಾದಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡು ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಆದರೆ ಹಿರಿಯೂರು ತಾಲ್ಲೂಕಿನ ನಗರಸಭೆಯಿಂದ ನಿರ್ಮಾಣ ಮಾಡಿರುವ  ರಸ್ತೆ ಕಾಮಗಾರಿ ಕಳಪೆ ಮಾಡಿ, ಹಿರಿಯೂರು ನಗರಸಭೆಯ ಸಾಮಾನ್ಯ ನಿಧಿ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ರೂ. 25,00000 ಹಣ ಇದೀಗ  ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಅಂದ ಹಾಗೆ ಗುತ್ತಿಗೆದಾರರು ನಿರ್ಮಿಸಿದ ಆ ಅಂದದ ರಸ್ತೆ ಬಗ್ಗೆ ನಿಮಗೆ ಹೇಳ್ತೀವಿ ನೋಡಿ. ಕಣ್ಣು ಹಾಯಿಸಿದಷ್ಟು ದೂರ ಬಿರುಕು, ಅಲ್ಲಲ್ಲಿ ಮಂಡಿ ಆಳದ ಗುಂಡಿ,  ಹೊಳೆಯಂತೆ ಹರಿಯುವ ನೀರು. ನಡೆದುಕೊಂಡು ಹೋಗಲು ಪ್ರಯಾಸಪಡಬೇಕಾದ ಪರಿಸ್ಥಿತಿ. ಇದೆಲ್ಲಾ  ಚಿತ್ರದುರ್ಗ ಜಿಲ್ಲೆಯ ಹಿರಿಯೂರು  ತಾಲೂಕಿನಲ್ಲಿ ಹಿರಿಯೂರು ನಗರದ ವೇದಾವತಿ ನಗರದಿಂದ ಹಿಡಿದು ಮೈಸೂರು ರಸ್ತೆ, ಚರ್ಚ್ ರಸ್ತೆ , ಗಾಂಧಿ ಸರ್ಕಲ್…

Read More

ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ಚಿಕ್ಕರಸನಹಳ್ಳಿ ಗ್ರಾಮದಲ್ಲಿ ಬೆಳ್ಳಬೆಳಗ್ಗೆಯೇ ಆಹಾರವನ್ನು ಅರಸಿ ಬಂದಂತಹ 2 ಕರಡಿಗಳು ಊರಿನ ಹೊರ ಭಾಗದಲ್ಲಿ ಇರುವಂತಹ ಗ್ರಾಮಠಾಣ ಜಮೀನಿನಲ್ಲಿ ಇರುವ ಹಳೆ ಬಾವಿ ಹೊಂಡದಲ್ಲಿ ಅವಿತು ಕುಳಿತಿರುವ ಘಟನೆ ಇಂದು ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕರಡಿಗಳನ್ನು ನೋಡಿ ಊರಿನ ಹಿರಿಯರ ಗಮನಕ್ಕೆ ತಂದಿದ್ದಾರೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಘಟನೆಯನ್ನು ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣವೇ ಕೊರಟಗೆರೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಮಧುಗಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿಕೊಂಡು.ಎರಡು ಕರಡಿಗಳ ರಕ್ಷಣೆಗೆ ಮುಂದಾಗಿದ್ದಾರೆ. ನಂತರ ಕೊರಟಗೆರ ಆರಕ್ಷಕ ಠಾಣೆಯ ಸಿಪಿಐ ಸಿದ್ದರಾಮೇಶ್ವರ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ನೀಡಿದ್ದಾರೆ. ಅಪಾಯದ ವಾತಾವರಣ ವಿರುವುದರಿಂದ ಗಡಿಬಿಡಿ ಗೊಂದಂತಹ ಊರಿನ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ. ನಂತರ ಘಟನೆಯ ಬಗ್ಗೆ ತಹಶೀಲ್ದಾರ್…

Read More

ತುಮಕೂರು: ಜಿಲ್ಲೆಯ  ಕುಣಿಗಲ್ ಹಾಗೂ ತುರುವೇಕೆರೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಕುಣಿಗಲ್ ಪಟ್ಟಣದ ಉಪ್ಪಾರ ಬೀದಿ ನಿವಾಸಿ ಅಶ್ವಥ್ (42) ತಮ್ಮ ಮನೆಯಲ್ಲೇ ಶಾಲಿನಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಶ್ವಥ್ ಹಲವು ದಿನಗಳಿಂದ ರಕ್ತದ ಒತ್ತಡದಿಂದ ಬಳಲುತ್ತಿದ್ದರು. ಜತೆಗೆ ಅವರ ಮಗ  ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಮನನೊಂದ ಅವರು, ತನ್ನ ಪತ್ನಿ ಹಾಗೂ ಮಕ್ಕಳನ್ನು ತಿರುಪತಿಗೆ ಕಳಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಘಟನೆಯಲ್ಲಿ ತುರುವೇಕೆರೆ ತಾಲೂಕು ದೆಬ್ಬೇಘಟ್ಟ ಹೋಬಳಿ ದೇವನಾಯಕನಹಳ್ಳಿ ಗ್ರಾಮದ ಕೆಂಪರಾಜು (32) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಂಪರಾಜು ಮೂಲತಃ ದೇವನಾಯಕನಹಳ್ಳಿ ಗ್ರಾಮದವರಾಗಿದ್ದು, ಕಳೆದ ಐದು ವರ್ಷಗಳಿಂದ ಕುಣಿಗಲ್‌ ನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ನಡುವೆ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ಎನ್ನಲಾಗಿದೆ. ಅನಾರೋಗ್ಯದಿಂದ ಬೇಸತ್ತ ಅವರು,, ಕುಣಿಗಲ್ ಪಟ್ಟಣದ ಶಿಕ್ಷಕರ ಭವನದ ಕಿಟಕಿಗೆ ಹಗ್ಗ ಬಿಗಿದುಕೊಂಡು…

Read More

ನವದೆಹಲಿ: ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನಿರ್ದೋಷಿ ಎಂದು ಕ್ಲೀನ್ ಚಿಟ್ ನೀಡಲಾಗಿದೆ. ಸುದೀರ್ಘ ವಿಚಾರಣೆ ನಡೆಸಿದ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಆರ್ಯನ್ಖಾನ್ ವಿರುದ್ಧ ಆರೋಪ ಸಾಬೀತು ಪಡಿಸಲು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳಲಾಗಿದೆ. ಆರ್ಯನ್ ಖಾನ್ ಜತೆಗಿದ್ದ ಇತರ ನಾಲ್ವರ ವಿರುದ್ಧವೂ ಪ್ರಕರಣವನ್ನು ಕೈ ಬಿಡಲಾಗಿದೆ. ಕಳೆದ ಅಕ್ಟೋಬರ್ 2ರಂದು ಮುಂಬೈನಿಂದ ಗೋವಾಕ್ಕೆ ಹೊರಟ್ಟಿದ್ದ ಐಷಾರಾಮಿ ಹಡಗಿನಲ್ಲಿ ಪಾರ್ಟಿ ನಡೆಯುತ್ತಿದ್ದು, ಅದರಲ್ಲಿ ಮಾದಕ ವಸ್ತು ಬಳಕೆಯಾಗುತ್ತಿದೆ ಎಂಬ ಸುಳಿವು ಆಧರಿಸಿ ದಾಳಿ ನಡೆಸಿದ ಎನ್ಸಿಬಿ ಆರ್ಯನ್ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಸಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಬೆಂಗಳೂರು ಮೇ 27: ಕುಟುಂಬ ರಾಜಕಾರಣದ ನೆಪವೊಡ್ಡಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ತಂತ್ರ ಫಲಿಸದು. ಭಾರತವೆಂದರೆ; ಬಿಜೆಪಿಯಷ್ಟೇ ಅಲ್ಲ, 140 ಕೋಟಿಗೂ ಹೆಚ್ಚು ಭಾರತೀಯರು ಸೇರಿದರೆ ಮಾತ್ರ ಭಾರತ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಕಿಡಿಕಾರಿದ್ದಾರೆ. ಪ್ರಧಾನಿ ಅವರ ಹೇಳಿಕೆ ಕರ್ನಾಟಕದಲ್ಲಿ ಬಿಜೆಪಿ ನಡೆಸಿದ ಆಪರೇಷನ್ ಕಮಲ, ಹಣಕ್ಕಾಗಿ ಮುಖ್ಯಮಂತ್ರಿ ಪದವಿ ಸೇಲ್ ವಿಚಾರ, ಭ್ರಷ್ಟಾಚಾರ, ಭಾವುಕ ವಿಷಯಗಳಿಂದ ಸಮಾಜದಲ್ಲಿ ಒಡಕು ಉಂಟು ಮಾಡುವ ವಿಷಯಗಳನ್ನು ಇಟ್ಟುಕೊಂಡು ತಿರುಗೇಟು ನೀಡಿದ್ದಾರೆ. “ಕುಟುಂಬ ಆಧರಿತ ಪಕ್ಷಗಳು ದೇಶಕ್ಕೆ ಮತ್ತು ಯುವಜನರ ಪಾಲಿಗೆ ದೊಡ್ಡ ಶತ್ರು. ಇದು ರಾಜಕಾರಣದ ದೊಡ್ಡ ಸಮಸ್ಯೆಯೂ ಹೌದು.” ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಉಪದೇಶವಿದು. ವಾಸ್ತವ ಗುರುತಿಸಿ, ಬಿಜೆಪಿ ಬೆಳವಣಿಗೆಯ ಹಿನ್ನೆಲೆ ಅರಿತು ಅವರು ಭಾಷಣ ಮಾಡಬೇಕಿತ್ತು. ಕೇವಲ ಚುನಾವಣಾ ಪ್ರಚಾರ ಶೈಲಿಯ ಭಾಷಣ ಮಾಡಿದ್ದಾರಷ್ಟೇ. ಕಾಂಗ್ರೆಸ್ ನೆಲಕಚ್ಚಿದ ಮೇಲೆ ಬಿಜೆಪಿಗೆ ಪ್ರತಿರಾಜ್ಯದಲ್ಲಿ ಎದುರಾಗುತ್ತಿರುವ ರಾಜಕೀಯ ವೈರಿಗಳೆಂದರೆ ಪ್ರಾದೇಶಿಕ ಪಕ್ಷಗಳೇ.…

Read More

ಬೆಂಗಳೂರು:ಮಾಜಿ ಪ್ರಧಾನಿ ನೆಹರು ಅವರ 58ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರ್ ಎಸ್ ಎಸ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್ ಎಸ್ ಎಸ್ ನವರು ಮೂಲತಃ ಭಾರತೀಯರೇ ಎಂದು ಪ್ರಶ್ನಿಸುವ ಮೂಲಕ ವಿವಾದದ ಸುಳಿಗೆ ಸಿಲುಕಿದ್ದು, ನಾನು ಇಷ್ಟು ದಿನ ಈ ವಿಷಯ ಚರ್ಚಿಸಬಾರದು ಎಂದಿದ್ದೆ. ಆರ್ಯರು ಭಾರತೀಯರಲ್ಲ. ಮಧ್ಯಪ್ರಾಚ್ಯದಿಂದ ಬಂದವರು. ದ್ರಾವಿಡರು ಇಲ್ಲಿನ ಮೂಲ ನಿವಾಸಿಗಳು ಎಂದು ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ನೆಹರು ಮತ್ತು ಹಾಲಿ ಪ್ರಧಾನಿ ಮೋದಿಗೆ ಹೋಲಿಕೆ ಸರಿಯಲ್ಲ. ಇಬ್ಬರ ನಡುವೆ ಆಕಾಶ, ಭೂಮಿಯಷ್ಟು ಅಂತರವಿದೆ. ನೆಹರು ಅವರು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದರು. ಮೋದಿ ಆ ಜಾಗದಲ್ಲಿ ನೀತಿ ಆಯೋಗ ಹೆಸರಿನಲ್ಲಿ ಇತಿಹಾಸ ಅಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಧಾನಿಯಾಗಿ ಮೋದಿ 8 ವರ್ಷ ಪೂರೈಸಿದ್ದಾರೆ. ಅವರ ಸಾಧನೆ ಏನು…

Read More

ತುಮಕೂರು:  ಇಂಗ್ಲಿಷ್ ಭಾಷೆಗೆ ಹೆದರಿದ ಬಾಲಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಆತಂಕಕಾರಿ ಘಟನೆ ತುಮಕೂರು ತಾಲೂಕಿನ ಉರ್ಡಿಗೆರೆಯಲ್ಲಿ ನಡೆದಿದೆ. 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಯಾಗಿದ್ದು, ಇಂಗ್ಲಿಷ್ ಓದಲು ನನಗೆ ಕಷ್ಟವಾಗುತ್ತದೆ ಎಂದು ಬಾಲಕ ಹೆದರಿದ್ದ. ಬಾಲಕನ ಮನವೊಲಿಸಿದ್ದ ಪೋಷಕರು ಆತನನ್ನು ಶಾಲೆಗೆ ಕಳುಹಿಸಿದ್ದರು ಎನ್ನಲಾಗಿದೆ. ಇನ್ನೂ ಶಾಲೆಗೆ ಹೋಗಲು ಹೆದರಿದ ಬಾಲಕ, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮನೆಯಲ್ಲಿ ಕುಸಿದು ಬಿದ್ದಿದ್ದ. ತಕ್ಷಣವೇ ಆತನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತುಮಕೂರು ನಗರದ ಕೋತಿ ತೋಪು ಮೂಲದ ದಂಪತಿಯ ಪುತ್ರ ಆತ್ಮಹತ್ಯೆಗೆ ಯತ್ನಿಸಿದ ಬಾಲಕನಾಗಿದ್ದು, ಈತನ ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಗ ಚೆನ್ನಾಗಿ ಕಲಿಯಲಿ ಎನ್ನುವುದು ಪೋಷಕರ ಆಸೆಯಾಗಿದೆ. ಆದರೆ ಪುತ್ರನಿಗೆ ಇಂಗ್ಲಿಷ್ ಕಗ್ಗಂಟಾಗಿದ್ದು, ಶಾಲೆಗೆ ಹೋಗಲು ಹೆದರಿಕೊಳ್ಳುತ್ತಿದ್ದಾನೆ. ಇದೀಗ ಆತ್ಮಹತ್ಯೆಗೆ ಯತ್ನಿಸಿರುವುದರಿಂದ ಪೋಷಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಸದ್ಯ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,  ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾನೆ ಎಂದು ತಿಳಿದು…

Read More