Author: admin

ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದ ಶ್ರೀಮತಿ ಮತ್ತು ಶ್ರೀ ವೈ.ಈ. ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಾನಪದ ಉತ್ಸವಕ್ಕೆ ಮೆರುಗು ನೀಡಿದೆ. ಶುಕ್ರವಾರ ನಡೆದ ಜಾನಪದ ಉತ್ಸವವು ಗ್ರಾಮೀಣ ಸಂಸ್ಕೃತಿಯ ಸಡಗರದಿಂದ ಉಳುಮೆಯ ಹಬ್ಬದಂತೆಯೇ ನಡೆಯಿತು. ಮುಖ್ಯ ಅತಿಥಿಗಳಾದ ಜಾನಪದ ವಿದ್ವಾಂಸ ಸಣ್ಣ ನಾಗಪ್ಪ ಹಾಗೂ ಪ್ರಾಂಶುಪಾಲ ಡಾ.ಎನ್.ಶ್ರೀಧರ್ ಅವರನ್ನು ಎತ್ತಿನಗಾಡಿಯಲ್ಲಿ ಚಳ್ಳಕೆರೆ ಕ್ರಾಸ್ ನಿಂದ ಮೆರವಣಿಗೆ ಮೂಲಕ ಕಾಲೇಜಿಗೆ ಕರೆತರಲಾಯಿತು. ಡೋಲು, ತಮಟೆ, ನಾದಸ್ವರ, ಉರಿಮೆ ಸದ್ದಿಗೆ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಹೆಜ್ಜೆ ಹಾಕಿದರು. ಕಾಲೇಜಿನ ಆವರಣದಲ್ಲಿ ರಾಗಿ, ಭತ್ತ, ಗೋದಿ ಸೇರಿದಂತೆ ವಿವಿಧ ಸಿರಿಧಾನ್ಯಗಳನ್ನು ಅಲಂಕಾರಗೊಳಿಸಿ ಧಾನ್ಯ ಪೂಜೆಯೊಂದಿಗೆ ಹಬ್ಬದ ಆರಂಬವಾಯಿತು. ಗ್ರಾಮೀಣ ಸಂಪ್ರದಾಯದಂತೆ ಹಾಲೋಯ್ಯುವ ಹಬ್ಬ, ಮಾರಮ್ಮನ ಉತ್ಸವ, ಗೌರಿ ಪೂಜೆ ಮುಂತಾದ ಆಚರಣೆಗಳು ದಿನವಿಡೀ ಕಾಲೇಜು ಆವರಣವನ್ನು ಹಬ್ಬದಮಯವಾಗಿಸಿತು. ವೇದಿಕೆ ಕಾರ್ಯಕ್ರಮವನ್ನು “ರಾಗಿ ಕಲ್ಲು ಬೀಸುವ” ಮೂಲಕ ಉದ್ಘಾಟಿಸಲಾಯಿತು. ಪ್ರಮುಖ ಭಾಷಣಕಾರರಾಗಿ ಸಣ್ಣ ನಾಗಪ್ಪ ಗ್ರಾಮೀಣ ಜಾನಪದ ಸಂಸ್ಕೃತಿ ಮತ್ತು ಪಾವಗಡದ ಜಾನಪದ…

Read More

ತುಮಕೂರು: ಶೇಕ್ಸ್ಪಿಯರಿನ ಸಾಹಿತ್ಯವೆಲ್ಲವೂ ಜೀವನಾನುಭವದಿಂದ ರೂಪುಗೊಂಡವು. ಅವು ಕಾಲಾತೀತವಾದವು ಮತ್ತು ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಂಡವು ಎಂದು ಖ್ಯಾತ ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗವು ಹಮ್ಮಿಕೊಂಡಿದ್ದ ‘ಶೇಕ್ಸ್ಪಿಯರ್ ಸಾಹಿತ್ಯಕ್ಕೊಂದು ಪ್ರವೇಶ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶೇಕ್ಸ್ಪಿಯರ್‌ನ ಮೂವತ್ತೆಂಟು ನಾಟಕಗಳು ಕೇವಲ ಕಲ್ಪನೆಯ ಸೃಷ್ಟಿಗಳಲ್ಲ, ಇತಿಹಾಸ, ಓದು ಮತ್ತು ಅನುಭವದಿಂದ ರೂಪಿತವಾಗಿರುವವು ಎಂದರು. ಶೇಕ್ಸ್ಪಿಯರ್ ತನ್ನ ನಾಟಕದ ಪಾತ್ರಗಳನ್ನು ಮನುಷ್ಯ ಸಹಜ ಗುಣಗಳಿಂದ ರೂಪಿಸಿದ. ಪ್ರೀತಿ, ದ್ವೇಷ, ಅಸೂಯೆ, ಹೊಟ್ಟೆಕಿಚ್ಚು, ಸೇಡು ಇವುಗಳಿಂದ ತುಂಬಿ ಆ ಪಾತ್ರಗಳು ಜೀವಂತವಾಗಿ ನಮಗೆ ಕಾಣುತ್ತವೆ. ಜೂಲಿಯಸ್ ಸೀಸರ್‌ನಂತೆ ಅವಕಾಶ ಸಿಕ್ಕಿದಲ್ಲಿ ಸರ್ವಾಧಿಕಾರಿಯಾಗುವ ಲಕ್ಷಣವುಳ್ಳ, ಮ್ಯಾಕ್‌ಬೆತ್‌ನಂತೆ ಅಧಿಕಾರದ ಮಹತ್ವಾಕಾಂಕ್ಷೆ ಉಳ್ಳ, ಹ್ಯಾಮ್ಲೆಟ್‌ ನಂತೆ ನಿರ್ಧಾರ ತೆಗೆದುಕೊಳ್ಳಲು ಸದಾ ಹಿಂಜರಿಯುವ, ಕಿಂಗ್ ಲಿಯರ್‌ ನಂತೆ ಮಕ್ಕಳಿಗೆ ತನ್ನೆಲ್ಲಾ ಆಸ್ತಿಪಾಸ್ತಿ ಕೊಟ್ಟು ಬೀದಿಪಾಲಾಗುವ ಮನುಷ್ಯರು ಎಲ್ಲಾ ಕಾಲದಲ್ಲಿಯೂ ಇದ್ದರು ಮತ್ತು ಮುಂದೆಯೂ ಇರಲಿದ್ದಾರೆ ಎಂದು ವಿಶ್ಲೇಷಿಸಿದರು. ಶೇಕ್ಸ್ ಪಿಯರ್‌ ನ ಜೀವನಪಯಣದ…

Read More

ತುಮಕೂರು:  ಸ್ವೀಟ್ ಅಂಗಡಿಯೊಂದರಲ್ಲಿ ಕಳಪೆ ಗುಣಮಟ್ಟದ ಸ್ವೀಟ್ ಮಾರಾಟ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದು ತುಮಕೂರು ನಗರದಲ್ಲಿ ಫುಡ್ ಸೇಫ್ಟಿ ಅಧಿಕಾರಿಗಳು ಅದನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಮಹಾಲಕ್ಷ್ಮಿ ಸ್ವೀಟ್ಸ್ ಅಂಗಡಿಯಲ್ಲಿ ರಘುಕುಮಾರ್ ಎಂಬುವರು ರಸಮಲೈ ಖರೀದಿಸಿದ ವೇಳೆ ಅದು ಕಳಪೆ ಗುಣಮಟ್ಟದಿಂದ ಕೂಡಿದ್ದಾಗಿದೆ ಎಂದು ಖಚಿತಪಡಿಸಿಕೊಂಡ ನಂತರ ತಾವು ಮೋಸ ಹೋದ ಹಿನ್ನೆಲೆಯಲ್ಲಿ  ಆಹಾರ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಆಫೀಸರ್ ನಾರಾಯಣಪ್ಪ ಎಂಬವರು ಸ್ವೀಟ್ ಅನ್ನು ಸೀಲ್ ಮಾಡಿ ಲ್ಯಾಬ್ ಗೆ ಕಳುಹಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ತಿಪಟೂರು:  ಕಾಶ್ಮೀರದಲ್ಲಿ ನಡೆದ ಉಗ್ರವಾದಿಗಳ ರಣಹೇಡಿ ಕೃತ್ಯವನ್ನು ಖಂಡಿಸಿ ಪಕ್ಷಾತೀತವಾಗಿ ಸಮಸ್ತ ಹಿಂದುಬಾಂದವರು ಏಪ್ರಿಲ್ 28ರಂದು ಸೋಮವಾರ ತಿಪಟೂರು ಬಂದ್ ಗೆ ಕರೆ ನೀಡಿದ್ದಾರೆ. ಹಿಂದುಪರ ಸಂಘಟನೆಯ ಒಕ್ಕೂಟದ ಶ್ರೀಶ ಮಾತನಾಡಿ, ಹಿಂದು ಸಮಾಜದ ಮೇಲೆ ಹತ್ಯೆ ಅತ್ಯಾಚಾರದಂತ ದೌರ್ಜನ್ಯ ಕೃತ್ಯಗಳು ನಡೆಯುತ್ತಿದ್ದು, ಹಿಂದೂ ಸಮಾಜದ ಅಸ್ತಿತ್ವಕ್ಕೆ ಧಕ್ಕೆ ಆಗುವ ಸ್ಥಿತಿ ನಿರ್ಮಾಣವಾಗಿದೆ. ಕಾಶ್ಮೀರದಲ್ಲಿ ನಡೆದ ಉಗ್ರವಾದಿಗಳ ಅಟ್ಟಹಾಸಕ್ಕೆ ಸಮಾಜ ಬೆಚ್ಚಿಬಿದ್ದಿದೆ. ಹಿಂದುಗಳು ಒಟ್ಟಾಗಿ ಹೋರಾಟ ಮಾಡದಿದ್ದರೆ ಮುಂದಿನ ದಿನಗಳಲ್ಲಿ ದಬ್ಬಾಳಿಕೆಗಳು ಹೆಚ್ಚಾಗಲಿವೆ ಎಂದು ಹೇಳಿದರು. ಹಿಂದೂಪರ ಸಂಘಟನೆ ಮುಖಂಡ ಬಾಗೇಪಲ್ಲಿ ನಟರಾಜ್ ಮಾತನಾಡಿ, ಕಾಶ್ಮೀರದಲ್ಲಿ ನಡೆದ ದೌರ್ಜನ್ಯ ಇಸ್ಲಾಮಿಕ್ ಉಗ್ರಗಾಮಿಗಳು 28ಕ್ಕೂ ಹೆಚ್ಚು ಹಿಂದುಗಳ ಮೇಲೆ ಗುಂಡಿನ ದಾಳಿ ನಡೆಸಿರುವುದು ಉದ್ದೇಶಪೂರ್ವಕವಾಗಿದೆ ಎಂದರು. ಈ ಸುದ್ದಿಗೋಷ್ಠಿಯಲ್ಲಿ ಹಿಂದು ಪರ ಸಂಘಟನೆ ಮುಖಂಡರು ಹಿಂದೂ ಪರದ ಒಕ್ಕೂಟದ ತರಕಾರಿ ಗಂಗಾಧರ್ ಮಾಜಿನಗರ ಸಭೆ ಅಧ್ಯಕ್ಷ ರಾಮ್ ಮೋಹನ್ ಗೊರಗೊಂಡನಹಳ್ಳಿ ಸುದರ್ಶನ್ ಶಿವಪ್ರಕಾಶ್ ಶ್ರೀನಿವಾಸ್ ಇದ್ದರು ವರದಿ: ಆನಂದ, ತಿಪಟೂರು ನಮ್ಮತುಮಕೂರಿನ ಕ್ಷಣ…

Read More

ತುಮಕೂರು:  ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ ಮಾಡಲು  ಗೌರವಾನ್ವಿತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ  ವಿಚರಣ ಆಯೋಗ ನೀಡಿರುವ  ಆದೇಶದಂತೆ ರಾಜ್ಯದಾದ್ಯಂತ  ರಾಜ್ಯದಾದ್ಯಂತ ಪರಿಶಿಷ್ಟ ಜಾತಿಯ ಮನೆ ಮನೆ ಸಮೀಕ್ಷೆ ಮಾಡಿ  ದತ್ತಾಂಶ ಒದಗಿಸಲು ನಿರ್ದೇಶನ ನೀಡಿದ್ದು ಇದಕ್ಕೆ ಈಗಾಗಲೇ  ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಸ್.ಕೃಷ್ಣಪ್ಪ ಅವರು ತಿಳಿಸಿದರು. ಈ ಕುರಿತಾಗಿ ಈಗಾಗಲೇ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣೆ ಅಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ  ದತ್ತಾಂಶ ಸಂಗ್ರಹಿಸಲು ಪರಿಣಿತ ಅಧಿಕಾರಿಗಳಿಗೆ ಈಗಾಗಲೇ ರಾಜ್ಯಮಟ್ಟದಲ್ಲಿ ತರಬೇತಿಯನ್ನು ನೀಡಲಾಗಿದ್ದು  ಜಿಲ್ಲೆಯ ಅರ್ಹ ಗಣತಿದಾರ ಶಿಕ್ಷಕರ ಮೂಲಕ ದತ್ತಾಂಶ ಸಂಗ್ರಹಿಸುವ ಸಲುವಾಗಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಮಟ್ಟದಲ್ಲಿ ಇದೆ ತಿಂಗಳ 28ರಂದು ನಗರದ ಎಂ.ಜಿ.ರಸ್ತೆಯ ಬಾಲಭವನದಲ್ಲಿ ಸುಮಾರು 150 ನುರಿತ ಅಧಿಕಾರಿಗಳಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದ ಸಮಿಕ್ಷಾದಾರರಿಂದ ತರಬೇತಿ…

Read More

ತುಮಕೂರು:  ಸಿಡಿಲು ಬಡಿದು ಗುಡಿಸಲು ಭಸ್ಮವಾದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಯರದಕಟ್ಟೆ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ ಎಂಬುವರಿಗೆ ಸೇರಿದ ಗುಡಿಸಲು ಸುಟ್ಟು ಭಸ್ಮವಾಗಿದೆ. ಅವರು ಕಡಲೆ ಬಣವಿಗೆ ಟಾರ್ಪಲ್ ಹಾಕಲು ಹೊರಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಡಿಸಲಿನಲ್ಲಿ ಇಟ್ಟಿದ್ದ ಮೂರು ಲಕ್ಷ ಹಣ,  ಧವಸ, ಧಾನ್ಯ, ಮೊಬೈಲ್, ಜಮೀನು ಹಾಗೂ ಮನೆ ನಿರ್ಮಾಣದ ಡಾಂಕ್ಯೂಮೆಂಟ್ ಬೆಂಕಿಗಾಹುತಿಯಾಗಿದೆ. ಗ್ರಾಮಪಂಚಾಯ್ತಿಯಿಂದ ಮನೆ ಮಂಜೂರಾಗಿತ್ತು.  ಹೀಗಾಗಿ ಮಂಜುನಾಥ್ ಮನೆ ನಿರ್ಮಾಣ ಮಾಡುವ ಸಿದ್ಧತೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ಬೀದರ್: ಸಿಡಿಲು ಬಡಿದು ಎರಡು ಎಮ್ಮೆಗಳು ಮೃತಪಟ್ಟ ಘಟನೆ ಹುಮನಾಬಾದ್ ತಾಲ್ಲೂಕಿನ ಸುಲ್ತಾನಬಾದ್ ವಾಡಿ ಗ್ರಾಮದಲ್ಲಿ ನಡೆದಿದೆ. ಮೃತ ಎಮ್ಮೆಗಳು ಸುಲ್ತಾನಬಾದ ವಾಡಿ ಗ್ರಾಮದ ರಾಜಕುಮಾರ್ ಜಮಾದಾರ್ ಅವರಿಗೆ ಸೇರಿವೆ. ಎಮ್ಮೆಗಳನ್ನು ಊರ ಹತ್ತಿರವಿರುವ ರಾಜಕುಮಾರ್ ಅವರ ಹೊಲದ ಮಾವಿನ ಮರಕ್ಕೆ ಕಟ್ಟಲಾಗಿತ್ತು. ನಿನ್ನೆ ಮಧ್ಯಾಹ್ನ ಎಮ್ಮೆಗಳ ಮೇಲೆ ಸಿಡಿಲು ಬಿದ್ದು ಎಮ್ಮೆಗಳು ಮೃತಪಟ್ಟಿದ್ದಾವೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಳ್ಳಿಖೇಡ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ತುಮಕೂರು:   ಸಮಾಜ ಕಲ್ಯಾಣ ಇಲಾಖೆಯು ಜಿಲ್ಲಾ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಕಲ್ಪಿಸಲು 5ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪ.ಜಾತಿಯ ವಿದ್ಯಾರ್ಥಿಗಳಿಂದ ಆನ್‌ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ವಿದ್ಯಾರ್ಥಿಯ ಆಧಾರ್ ನಂಬರ್, ಜಾತಿ/ಆದಾಯ ಪ್ರಮಾಣ ಪತ್ರ, 5ನೇ ತರಗತಿ ಅಂಕಪಟ್ಟಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತಿತರೆ ಅಗತ್ಯ ದಾಖಲೆಗಳೊಂದಿಗೆ ಮೇ 3ರೊಳಗಾಗಿ ಜಾಲತಾಣ www.sw.kar.nic.in  ಮೂಲಕ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಸ್. ಕೃಷ್ಣಪ್ಪ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…

Read More

ತುಮಕೂರು:  ಜಿಲ್ಲೆಯಲ್ಲಿ ಶೇ.76ರಷ್ಟು ಅಧಿಕ ಮಳೆಯಾಗಿದ್ದು, ಪ್ರಸ್ತುತ ಪೂರ್ವ-ಮುಂಗಾರು ಹಂಗಾಮು ಪ್ರಾರಂಭವಾಗಿದೆ. ಪೂರ್ವ ಮುಂಗಾರು ಅವಧಿಯಲ್ಲಿ ಈವರೆಗೆ ಹೆಚ್ಚಿನದಾಗಿ ಸಿಡಿಲು-ಗುಡುಗು ಮತ್ತು ಭಾರಿ ವೇಗದ ಗಾಳಿ-ಮಳೆಯಾಗುವ ಸಾಧ್ಯತೆಯಿರುವುದರಿಂದ ಜಿಲ್ಲಾ/ತಾಲ್ಲೂಕು/ಗ್ರಾಮ ಮಟ್ಟದ ಅಧಿಕಾರಿ/ಸಿಬ್ಬಂದಿಗಳು ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪ್ರವಾಹ/ಭಾರಿ ಮಳೆಯಿಂದ ಯಾವುದೇ ಜನ–ಜಾನುವಾರು ಜೀವಹಾನಿಯಾಗದಂತೆ ಮುಂಜಾಗ್ರತೆವಹಿಸಬೇಕು. ಭಾರಿ ಮಳೆ/ಪ್ರವಾಹದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರುವುದು/ಮೈಕ್ ಮೂಲಕ ಜನರಿಗೆ ಜಾಗೃತಿ ಮೂಡಿಸಬೇಕು. ನಿರಂತರ ಮಳೆಯಿಂದ ದುರ್ಬಲ ಮಣ್ಣಿನ ಮನೆ/ಕಟ್ಟಡ, ಮರದ ಕೊಂಬೆ, ಜಲಕಾಯ, ವಿದ್ಯುತ್ ವಸ್ತುಗಳಿಂದ ದೂರವಿರುವ ಬಗ್ಗೆ ಎಚ್ಚರವಹಿಸಲು ವ್ಯಾಪಕ ಪ್ರಚಾರ ನೀಡಬೇಕು. ಶಾಲಾ/ಅಂಗನವಾಡಿ ಮೇಲ್ಛಾವಣಿ/ಗೋಡೆ ಹಾಗೂ ನದಿ/ಹಳ್ಳ/ಕೆರೆ/ಕಟ್ಟೆ/ರಸ್ತೆ/ಸೇತುವೆ/ವಿದ್ಯುತ್ ಸಂಪರ್ಕ ಇತ್ಯಾದಿ ಮೂಲಭೂತ ಸೌಕರ್ಯಗಳ ಸುಸ್ಥಿತಿ ಬಗ್ಗೆ ಪರಿಶೀಲಿಸಬೇಕು. ಹಠಾತ್ ಪ್ರವಾಹವಾಗುವ ತಗ್ಗು ಪ್ರದೇಶದ ವಾರ್ಡ್/ಅಂಡರ್ ಪಾಸ್/ರಸ್ತೆಗಳ ಕುರಿತು ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಅರ್ಹ ಪ್ರಕರಣಗಳಿಗೆ ನಿಯಮಾನುಸಾರ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ತುರ್ತು…

Read More

ತುಮಕೂರು:   ಜಿಲ್ಲೆಯಲ್ಲಿ 2025-26ನೇ ಸಾಲಿನ ಪೂರ್ವ–ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪಗಳಾದ ಪ್ರವಾಹ, ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಪರಿಹಾರ ಪಾವತಿಗೆ ಸಂಬಂಧಿಸಿದಂತೆ ಬೆಳೆ ಹಾನಿಯಾದ ರೈತರ ಪಟ್ಟಿಯನ್ನು ಜಿಲ್ಲಾಧಿಕಾರಿ/ ಉಪವಿಭಾಗಾಧಿಕಾರಿ/ ತಹಶೀಲ್ದಾರ್/ಗ್ರಾಮ ಪಂಚಾಯತಿ/ ರೈತ ಸಂಪರ್ಕ ಕೇಂದ್ರಗಳಲ್ಲಿ ಏಪ್ರಿಲ್ 24ರಂದು ಪ್ರಕಟಿಸಲಾಗಿದೆ. ಈ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಆಯಾ ತಾಲ್ಲೂಕು ತಹಶೀಲ್ದಾರ್/ ಕೃಷಿ/ತೋಟಗಾರಿಕೆ ಇಲಾಖೆಗಳ ತಾಲ್ಲೂಕು ಕಚೇರಿಗಳಿಗೆ 7 ದಿನಗಳೊಳಗಾಗಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಶುಭ ಕಲ್ಯಾಣ್ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More