Author: admin

ಗುಬ್ಬಿ: ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಕೈಗೊಂಡಿರುವ ಸಿ.ಸಿ.ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ದಲಿತ ಕಾಲೋನಿಯ ಸಂಪರ್ಕದ ರಸ್ತೆಯಲ್ಲಿ ಕಾಮಗಾರಿ ಮಾಡದೇ ತಾರತಮ್ಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಇಂದು ಜಿ. ಹೊಸಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಗ್ರಾಮಸ್ಥ ಮುರುಳಿ, ಒಟ್ಟು 900 ಮೀಟರ್ ನಷ್ಟು ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದ್ದು, ದಲಿತ ಕಾಲೋನಿ ಸಂಪರ್ಕ ದ 200 ಮೀಟರ್ ರಸ್ತೆ ಕಾಮಗಾರಿ ನಡಸದೆ ಉದ್ದೇಶ ಪೂರ್ವಕವಾಗಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಮುಂದುವರಿದ ಸಮುದಾಯದವರ ಮನೆಯ ಸಂಪರ್ಕಕ್ಕೆ ರಸ್ತೆ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕಾಲೋನಿ ರಸ್ತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು. ಅರ್ಚಕ ಸೋಮಶೇಖರ್ ಮಾತನಾಡಿ, ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ದಲಿತ ಕಾಲೋನಿ ಅಭಿವೃದ್ಧಿಗೆ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ. ಗ್ರಾಮದ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ದೂರು ನೀಡಿದರೆ ಪ್ರಯೋಜನವಾಗುತ್ತಿಲ್ಲ. ಈಗ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲೂ ಸಹ ತಾರತಮ್ಯ…

Read More

ನವದೆಹಲಿ: ಗಣರಾಜ್ಯೋತ್ಸವ ಪರೇಡ್ ವೇಳೆ ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಬಹುದು ಎಂದು ಐಬಿ ಮಂಗಳವಾರ ಎಚ್ಚರಿಕೆ ನೀಡಿದ್ದು, ಉಗ್ರರು ಗುಂಪನ್ನು ಗುರಿಯಾಗಿಸಬಹುದು ಎಂದು ಹೇಳಿದೆ. ಐಬಿ ನಿಷೇಧಿತ ಸಂಘಟನೆಗೆ ಖಲಿಸ್ತಾನಿ ಲಿಬರೇಶನ್ ಫೋರ್ಸ್ ಎಂದು ಹೆಸರಿಸಿದೆ ಮತ್ತು ಈ ಸಂಘಟನೆಯು ದಾಳಿ ನಡೆಸಬಹುದು ಎಂದು ಹೇಳಿದೆ. ಗಾಜಿಪುರದಲ್ಲಿ ವಶಪಡಿಸಿಕೊಂಡಿದ್ದ ಐಎಡಿ ಬಾಂಬ್ ಗಳು ಪಾಕಿಸ್ತಾನದ ಮೂಲದವು ಎಂದು ಗುರುತಿಸಲಾಗಿದೆ. IED ಅಮೋನಿಯಂ ನೈಟ್ರೇಟ್, RDX, ಒಂಬತ್ತು-ವೋಲ್ಟ್ ಬ್ಯಾಟರಿ ಮತ್ತು ಕಬ್ಬಿಣದ ಸಣ್ಣ ತುಂಡುಗಳನ್ನು ಒಳಗೊಂಡಿರುವ ಸ್ಪೋಟಕಗಳನ್ನ ವಶಪಡಿಸಿಕೊಳ್ಳಲಾಗಿದೆ. ಭದ್ರತಾ ಪಡೆಗಳು ಸುಮಾರು 3 ಕೆಜಿ ಸ್ಫೋಟಕಗಳನ್ನು ನಾಶಪಡಿಸಿದವು ಮತ್ತು ಉಳಿದವುಗಳನ್ನು ತನಿಖೆಗಾಗಿ ಹರಿಯಾಣದ ಮನೇಸರ್‌ ನಲ್ಲಿರುವ ರಾಷ್ಟ್ರೀಯ ಬಾಂಬ್ ಡೇಟಾ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ದೇಶದಲ್ಲಿ ಕೋಮು ಉದ್ವಿಗ್ನತೆಯನ್ನ ಹರಡುವುದಕ್ಕಾಗಿ ಮಾದಕ ವಸ್ತುಗಳ ಹಣದದ ಮೂಲಕ ನಿರಂತರವಾಗಿ ಐಇಡಿಗಳನ್ನ ರವಾನೆ ಮಾಡುತ್ತಿದ್ದಾರೆ ಎಂದು ಭದ್ರತಾ ಏಜೆನ್ಸಿಗಳು ತಿಳಿಸಿವೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ನವದೆಹಲಿ: ಎಲ್ಲಾ ರಾಜಕೀಯ ಪಕ್ಷಗಳು ಕ್ರಿಮಿನಲ್ ಹಿನ್ನೆಲೆಯಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಕ್ಕೆ ಸಕಾರಣಗಳನ್ನು ಸಾರ್ವಜನಿಕವಾಗಿ ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲು ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಹಿರಿಯ ವಕೀಲ ಅಶ್ವಿನ್ ಕುಮಾರ್ ದುಬೆ ಅವರ ಮೂಲಕ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ಪ್ರಕಾರ, ಪ್ರತಿ ರಾಜಕೀಯ ಪಕ್ಷವು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ವ್ಯಕ್ತಿಗೆ ಏಕೆ ಆದ್ಯತೆ ನೀಡಿದೆ ಮತ್ತು ಕ್ರಿಮಿನಲ್ ಪೂರ್ವಾಪರಗಳಿಲ್ಲದ ಅಭ್ಯರ್ಥಿಯನ್ನು ಏಕೆ ಆಯ್ಕೆ ಮಾಡಲಿಲ್ಲ ಎಂಬುದನ್ನು ವಿವರಿಸಬೇಕು. ಈ ವಿಚಾರವನ್ನು ಚುನಾವಣಾ ಆಯೋಗ ಗಮನಿಸಬೇಕು. ಪ್ರತಿಯೊಬ್ಬ ರಾಜಕಾರಣಿಯೂ ಎಲೆಕ್ಟ್ರಾನಿಕ್, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿವರಗಳನ್ನು ಪ್ರಕಟಿಸಬೇಕು. ಈ ನಿಯಮಗಳನ್ನು ಉಲ್ಲಂಘಿಸುವ ಪಕ್ಷದ ಅಧ್ಯಕ್ಷರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.…

Read More

ತುರುವೇಕೆರೆ: ತಾಲ್ಲೂಕು ದಂಡಿನಶಿವರ ಹೋಬಳಿಯ ಚಿಮ್ಮನಹಳ್ಳಿ ಶ್ರೀಮುನೇಶ್ವರ ದಾಸೋಹಮಠಕ್ಕೆ ಮಠದ ಆವರಣದಲ್ಲಿ ನಡೆಯುತ್ತಿರುವ ವಿವಿಧ ದೇವರುಗಳ ದೇವಾಲಯಗಳ ಅಭಿವೃದ್ಧಿ ವೀಕ್ಷಣೆಗಾಗಿ ಮಾಜಿ ವಿಧಾನ ಪರಿಷತ್ತಿನ ಸದಸ್ಯ ಬೆಮೇಲ್ ಕಾಂತರಾಜು ಭೇಟಿ ನೀಡಿದರು. ಈ ಸಂದರ್ಭದಲ್ಲಿ ದಾಸೋಹ ಮಠದ ಉಸ್ತುವಾರಿ ಹಾಗೂ ಕಾರ್ಯದರ್ಶಿಗಳಾದ ಸಿ.ಆರ್.ಶಿವಪ್ಪ ಅವರು ಕಾಂತರಾಜು ಅವರನ್ನು ಸನ್ಮಾನಿಸಿ, ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೆಮೆಲ್ ಕಾಂತರಾಜು, ಈ ಕುಗ್ರಾಮದಲ್ಲಿ ಶಿವಪ್ಪರವರು ಶಿಕ್ಷಣಕ್ಕೆ ಅಕ್ಕ ಪಕ್ಕದ ಹಳ್ಳಿಗಳ ಬಡ ಮಕ್ಕಳ ಹಿತ ದೃಷ್ಟಿಯಿಂದ ಮಠವನ್ನು ಸ್ಥಾಪಿಸಿ ಕೈಲಾದಷ್ಟು ಸೇವೆ ನೀಡುತ್ತಿದ್ದಾರೆ. ಈ ಮಠದ ವಠಾರದಲ್ಲಿ ಹಲವಾರು ದೇವಾಲಯವನ್ನು ಸ್ಥಾಪಿಸುವ ಮೂಲಕ ಜನರಿಗೆ ದೇವರ ದರ್ಶನ ಇಲ್ಲೇ ಸಿಗುವಂತೆ ಮಾಡಬಹುದಾಗಿದೆ ಎಂದರು. ಕೊರೊನಾ ಮಹಾಮಾರಿಯಿಂದ ಶಾಲೆಯಲ್ಲಿ ಮಕ್ಕಳ ಹಾಜರಿ ಕಡಿಮೆಯಾಗಿದ್ದು, ಮುಂದಿನ ದಿನದಲ್ಲಿ ದಾಖಲಾತಿ ಹೆಚ್ಚಾಗಲಿ, ಮಠವು ಉನ್ನತಿಯನ್ನು ಕಾಣಲಿ, ಭಕ್ತರ ಸಂಖ್ಯೆ ಹೆಚ್ಚಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಠದ ಅಧಿಕಾರಿ ಸಿ.ಆರ್.ಶಿವಪ್ಪ, ತುರುವೇಕೆರೆ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ…

Read More

ತಿಪಟೂರು: ತಾಲೂಕಿನ ಹೊನವಳ್ಳಿ ಹೋಬಳಿಯ ಕೆ.ಪಿ.ಎಸ್. ಶಾಲೆ ಆವರಣದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡಗಳನ್ನು ಹಾಗೂ ಪ್ರಯೋಗಾಲಯವನ್ನು ಪ್ರಾಥಮಿಕ ಪ್ರೌಢಶಿಕ್ಷಣ ಸಚಿವರಾದ ಬಿಸಿ ನಾಗೇಶ್ ಅವರು ‌ ಉದ್ಘಾಟನೆ ಮಾಡಿದರು. ಇದೇ ವೇಳೆ 2 ಕೋ.ರೂ. ವೆಚ್ಚದಲ್ಲಿ ಕೆ.ಪಿ.ಎಸ್. ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೆಪಿಎಸ್ ಶಾಲೆ ಹೋನವಳ್ಳಿ ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗ, ಹೊನವಳ್ಳಿ ಹೋಬಳಿ ಮುಖಂಡರು ಸೇರಿದಂತೆ ಪ್ರಮುಖರು ಹಾಜರಿದ್ದರು. ವರದಿ: ಮಂಜು ಗುರುಗದಹಳ್ಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪಾವಗಡ: 108ಕ್ಕೆ ಕರೆ ಮಾಡಿ 7 ಗಂಟೆ ಕಳೆದರೂ ಆಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಮನೆಯಲ್ಲಿಯೇ ಹೆರಿಗೆಯಾದ ಘಟನೆ ತಾಲ್ಲೂಕಿನ ಪೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮೀಣ ಭಾಗದಲ್ಲಿ ತುರ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ವೇಳೆ ತಕ್ಷಣವೇ 108 ಕ್ಕೆ ಕರೆ ಮಾಡಿ, ವಿವರ ನೀಡಲಾಗಿದೆ. ಆದರೆ ಗಂಟೆಗಟ್ಟಲೆ ಕಾದರೂ ಆಂಬುಲೆನ್ಸ್ ಬರಲಿಲ್ಲ. ಕೊನೆಗೆ ಮಹಿಳೆ ಮನೆಯಲ್ಲಿಯೇ ಹೆರಿಗೆಯಾದ ಘಟನೆ ನಡೆದಿದ್ದು, ಮಹಿಳೆಯ ಪ್ರಾಣಕ್ಕೆ ತೊಂದರೆಯಾಗಿದ್ದರೆ ಹೊಣೆ ಯಾರು? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಾವಗಡದ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಕಿರಣ್ ರವರಿಗೆ ಈ ವ್ಯವಸ್ಥೆಯನ್ನು ಸರಿಪಡಿಸಲು ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ತರುಣ್, ಸರಕಾರದಿಂದ 4 ಆಂಬುಲೆನ್ಸ್ ನೀಡಲಾಗಿದೆ ಹಾಗೂ ಸೋಲಾರ್ ವತಿಯಿಂದ 2 ಆಂಬುಲೆನ್ಸ್ ನೀಡಲಾಗಿದೆ ಆದರೆ ಈ…

Read More

ಇತ್ತೀಚೆಗೆ ಅಂದ್ರೆ 2021 ರಲ್ಲಿ ಟಾಲಿವುಡ್ ನ ಸ್ಟಾರ್ ಕಪಲ್ ಸಮಂತಾ – ನಾಗಚೈತನ್ಯ ಡಿವೋರ್ಸ್ ಪಡೆದಿದ್ದರು.. ಇದೀಗ ಸೌತ್ ಇಂಡಸ್ಟ್ರಿಯ ಮತ್ತೊಂದು ಸ್ಟಾರ್ ಜೋಡಿ ವಿಚ್ಛೇಧನ ಪಡೆದಿದೆ.. ನಟ ಧನುಷ್ ಹಾಗೂ ಪತ್ನಿ ಐಶ್ವರ್ಯಾ ರಜನಿಕಾಂತ್ ಇಬ್ಬರೂ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ. 18 ವರ್ಷಗಳ ಬಳಿಕ ಇಬ್ಬರೂ ಬೇರೆಯಾಗಲು ನಿರ್ಧರಿಸಿರುವುದು ತಮಿಳು ಚಿತ್ರರಂಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿದೆ. ರಜನಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ನಟ ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಟ್ವಿಟ್ಟರ್ ನಲ್ಲಿ ಬೇರೆಯಾಗುತ್ತಿರುವ ವಿಷಯವನ್ನು ಘೋಷಣೆ ಮಾಡಿದ್ದಾರೆ. ಇಬ್ಬರೂ ಬೇರೆಯಾಗುತ್ತಿರುವುದಾಗಿ ಧನುಷ್ ಹಾಗೂ ಐಶ್ವರ್ಯಾ ಜೊತೆಯಾಗಿ ಟ್ವೀಟ್ ಮಾಡಿ ಘೋಷಣೆ ಮಾಡಿದ್ದಾರೆ. ಧನುಷ್ ಸೋಶಿಯಲ್ ಮೀಡಿಯಾ ಮೂಲಕ ವಿಚ್ಛೇದನದ ಬಗ್ಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. “18 ವರ್ಷ ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಹಾಗೂ ಹಿತೈಷಿಯಾಗಿ ಜೊತೆಗಿದ್ದೆವು. ಬೆಳವಣಿಗೆ, ಪರಸ್ಪರ ಅರಿತುಕೊಳ್ಳುವಿಕೆ, ಹೊಂದಾಣಿಕೆ ಹಾಗೂ ಒಪ್ಪಿಕೊಳ್ಳುವ ಜರ್ನಿ ಮಧುರವಾಗಿತ್ತು. ಇವತ್ತು ನಾವು ನಮ್ಮ ಬೇರೆ ದಾರಿಗಳನ್ನು…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಬೇತೂರ್ ಗ್ರಾಮದ ಅಂಬಾದೇವಿ ಜಾತ್ರ ಮಹೋತ್ಸವದಲ್ಲಿ ಮಾಜಿ ಶಾಸಕರು ಹಾಗೂ ಮಾಜಿ ಸಚಿವ ಡಿ.ಸುಧಾಕರ್ ಭಾಗವಹಿಸಿದ್ದರು. ಈ ವೇಳೆ ಗ್ರಾಮದ ಗ್ರಾಮಸ್ಥರು ಹಾಗೂ ಅಂಬಾದೇವಿಯ ದೇವಸ್ಥಾನದ ಅರ್ಚಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರು ಡಿ.ಸುಧಾಕರ್ ರವರನ್ನು ಸನ್ಮಾನಿಸಿದರು. ಜಾತ್ರೆಯಲ್ಲಿ ಪಾಲ್ಗೊಂಡ ಡಿ.ಸುಧಾಕರ್ ರವರು ದೇವಿಯ ಕೃಪೆಗೆ ಪಾತ್ರರಾಗಿ ದೇವರ ದರ್ಶನ ಪಡೆದರು. ಈ ಸಂದರ್ಭ ಅಂಬಾದೇವಿಯ ಭಕ್ತಾಧಿಗಳು ಹಾಗೂ ದೇವಸ್ಥಾನದ ಅರ್ಚಕರು, ಮಂಡಳಿಯವರು ಇದ್ದರು. ವರದಿ: ಮುರುಳಿಧರನ್ ಆರ್., ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆಯನ್ನು ಒದಗಿಸಿ ಅವರ ಹಿತರಕ್ಷಣೆ ಮಾಡುವುದರ ಮೂಲಕ ಗಂಡಸ್ಥನ ಪ್ರದರ್ಶಿಸಬೇಕೆಂದು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ನಗರದ ಹಿರಿಯ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಅತಿಥಿ ಉಪನ್ಯಾಸಕರು ತಮ್ಮ ಸೇವಾ ಭದ್ರತೆ ಹಾಗೂ ಸೇವಾ ವಿಲೀನತೆಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಅತಿಥಿ ಉಪನ್ಯಾಸಕರ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದ್ದು, ಸುಮಾರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಅವರೊಂದಿಗೆ ಮಾತನಾಡುವ ಕನಿಷ್ಠ ಸೌಜನ್ಯ ತೋರಿಲ್ಲ. ಈ ಮಧ್ಯದಲ್ಲಿ ಹೊಸದೊಂದು ಆದೇಶ ಹೊರಡಿಸಿ ಅತಿಥಿ ಉಪನ್ಯಾಸಕರ ಒಗ್ಗಟ್ಟನ್ನು ಒಡೆದು ಆಳುವ ನೀಚ ನಡೆಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉನ್ನತ ಶಿಕ್ಷಣ ಸಚಿವರು ವೇದಿಕೆಯ ಮೇಲೆ ಸೂಟು ಬೂಟು ಧರಿಸಿ, ಗಂಡಸ್ಥನದ ಬಗ್ಗೆ ವೀರಾವೇಶವಾಗಿ ಮಾತನಾಡುತ್ತಾರೆ. ಅಷ್ಟು ಅಭಿವೃದ್ದಿಯ ಬಗ್ಗೆ ಕಾಳಜಿ ಹೊಂದಿರುವವರು ಅತಿಥಿ ಉಪನ್ಯಾಸಕರ ಹಿತ…

Read More

ಬೆಂಗಳೂರು: ಚಿನ್ನದ ಗಟ್ಟಿ ಖರೀದಿಸಲು ಚಿಕ್ಕಬಳ್ಳಾಪುರದಿಂದ ನಗರಕ್ಕೆ ಬಂದಿದ್ದ ಜ್ಯುವೆಲ್ಲರಿ ಮಾಲೀಕನ ಬ್ಯಾಗಿಗೆ ಬ್ಲೇಡ್ ಹಾಕಿದ ಚೋರರು 3.57 ಲಕ್ಷ ರೂ. ಹಣ ಹಾಗೂ 28 ಗ್ರಾಂ ಆಭರಣ ಕಳ್ಳತನ ಮಾಡಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಮೂಲದ ಮೆಹರಾಮ್ ಎಂಬುವರು ಚಿನ್ನದ ಗಟ್ಟಿ ಖರೀದಿಸಲು ಜ.10ರಂದು ಹಣದೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ. ಅಂದು ಮಧ್ಯಾಹ್ನ ಎಸ್‍ಪಿ ರಸ್ತೆಯ ಎಚ್‍ಕೆಕೆ ರಸ್ತೆಯಲ್ಲಿ ನಡೆದುಕೊಂಡು ಇವರು ಹೋಗುತ್ತಿದ್ದಾಗ ಜನಜಂಗುಳಿ ಮಧ್ಯೆ ಖದೀಮ ಇವರ ಬ್ಯಾಗನ್ನು ಬ್ಲೇಡ್‍ನಿಂದ ಕೊಯ್ದು ಹಣ ಹಾಗೂ ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಕೆಲಸ ಸಮಯದ ಬಳಿಕ ಬ್ಯಾಗ್ ನೋಡಿಕೊಂಡಾಗ ಬ್ಯಾಗ್‍ನ ಒಂದು ಬದಿ ಕೊಯ್ದಿರುವುದು ಗಮನಿಸಿ ತೆಗೆದು ನೋಡಿದಾಗ ಅದರಲ್ಲಿದ್ದ ಹಣ ಹಾಗೂ 28 ಗ್ರಾಂ ಚಿನ್ನದ ಸರ ಕಳ್ಳತನವಾಗಿರುವುದು ಕಂಡುಬಂದಿದೆ.ತಕ್ಷಣ ಮೆಹರಾಮ್ ಅವರು ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆ ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿ ಪರಿಶೀಲಿಸಿ…

Read More