Author: admin

ಗದಗ: ಜನಪದ ಕಲೆಗಳನ್ನು ಮೈಗೂಡಿಸಿಕೊಂಡು ದೇಶ ವಿದೇಶಗಳಲ್ಲಿ  ಜನಪದ ಕಲಾ ಪ್ರದರ್ಶನ ನೀಡಿದ  ಬಯಲು ಸೀಮೆಯ ಜಾಲಿಗಿಡದ ಕೋಗಿಲೆ ಎಂದು ಪ್ರಸಿದ್ಧಿ ಪಡೆದ ಜನಪದ ಸಂಜೀವಿನಿ ಗದಗ ಜಿಲ್ಲೆಯ  ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ  ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರ ಜೀವಮಾನದ ಸಾಧನೆಯನ್ನು ಪರಿಗಣಿಸಿ  ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಜಗದ್ಗುರು  ಶ್ರೀ ಶಿವಶಕ್ತಿ ಪೀಠ ಸುಕ್ಷೇತ್ರ ಇರಕಲ್ ಮಠದಲ್ಲಿ ನಡೆದ ಜಾತ್ರಾಮಹೋತ್ಸವದಲ್ಲಿ  2022ನೇ ಸಾಲಿನ “ಕಲಾ ಶ್ರೇಷ್ಠ” ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಇರಕಲ್ ಶಿವ ಶಕ್ತಿ ಪೀಠದ  ಶ್ರೀ ಬಸವ ಪ್ರಸಾದ ಸ್ವಾಮೀಜಿ, ಶ್ರೀ ಭಗೀರಥ ಪೀಠ ಮಹಾಸಂಸ್ಥಾನದ ಪೂ.ಜ.ಪುರುಷೋತ್ತಾಮನಂದಪುರಿ ಮಹಾಸ್ವಾಮಿಗಳು, ಕುಂಚಟಗಿ ಮಹಾಸಂಸ್ಥಾನ ಮಠದ ಪೂ.ಜ.ಡಾ.ಶಾಂತವೀರ ಮಹಾಸ್ವಾಮಿಗಳು ಹೂಸದುರ್ಗ,ಭೋವಿ ಗುರುಪೀಠದ ಪೂ.ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ಶ್ರೀ ಹಡಪದ ಅಪ್ಪಣ್ಣ ಗುರುಪೀಠದ ಪೂ.ಜ.ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ಶ್ರೀ ಕುಂಬಾರ ಗುರು ಪೀಠದ ಪೂ.   ಬಸವ ಗುಂಡಯ್ಯಮಹಾಸ್ವಾಮಿಗಳು ,ಶ್ರೀ ಕಾಶಿ ಅನ್ನಪೂರ್ಣೇಶ್ವರಿ …

Read More

ಕೊರಟಗೆರೆ : ಡಾ.ಜಿ.ಪರಮೇಶ್ವರ್,  ಕೆ.ಎನ್.ರಾಜಣ್ಣ ಅವರು ತುಮಕೂರು ಜಿಲ್ಲೆಗೆ ರಾಮ-ಲಕ್ಷ್ಮಣರಿದ್ದಂತೆ ಎಂದು ಮಾಜಿ ಸಚಿವ ದಿವಂಗತ ಚೆನ್ನಿಗಪ್ಪನವರ ಹಿರಿಯ ಪುತ್ರ ಡಿ.ಸಿ.ಅರುಣ್ ಕುಮಾರ್ ಹೇಳಿದರು. ತಾಲ್ಲೂಕಿನ ಕೋಳಾಲ ಹೋಬಳಿಯ ಕುರುಬರಪಾಳ್ಯ(ಮಜರೆ ಪುಟ್ಟ ಸಂದ್ರ)ಗ್ರಾಮದಲ್ಲಿ ಶ್ರೀ ಮುತ್ತುರಾಯಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕುರುಕ್ಷೇತ್ರ ನಾಟಕದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ತುಮಕೂರು ಜಿಲ್ಲೆಗೆ ಡಾ.ಜಿ. ಪರಮೇಶ್ವರ್ ಮತ್ತು ಕೆ.ಎನ್. ರಾಜಣ್ಣ ರಾಮ-ಲಕ್ಷ್ಮಣರು ಇದ್ದಂತೆ, ಇಬ್ಬರೂ ಸೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಾಗೂ ಕೊರಟಗೆರೆ ತಾಲ್ಲೂಕು ಮತ್ತು ಮಧುಗಿರಿ ತಾಲ್ಲೂಕುಗಳನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮವಹಿಸುತ್ತಿದ್ದಾರೆ  ಎಂದರು. ಮಧುಗಿರಿ ಶೈಕ್ಷಣಿಕ ಜಿಲ್ಲೆಯನ್ನು ಕಂದಾಯ ಜಿಲ್ಲೆಯನ್ನಾಗಿ ಮಾಡಲು ಕೆ.ಎನ್.ರಾಜಣ್ಣ ಬಹಳ ಶ್ರಮವಹಿಸುತ್ತಿದ್ದಾರೆ.  ಇವರಿಬ್ಬರಿಂದ ನಮ್ಮ ತುಮಕೂರು ಜಿಲ್ಲೆಯು ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ  ಅಭಿವೃದ್ಧಿ ಹೊಂದುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿ, ರಾಜ್ಯದ ಮುಖ್ಯಮಂತ್ರಿಗಳಾಗಿ  ಡಿ.ಕೆ.ಶಿವಕುಮಾರ್…

Read More

ಕೊರಟಗೆರೆ: ತಾಲ್ಲೂಕಿನ ಹೊರವಲಯದಲ್ಲಿರುವ ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇರುವ  ಹೊರಾಂಗಣದಲ್ಲಿ ವಿಷ್ಣು ಸಮಾಜವು ಹೋಳಿ ಹಬ್ಬವನ್ನು ಸಡಗರ ಸಂಭ್ರಮ ಆಚರಿಸಿದರು. ವಿಷ್ಣು ಸಮಾಜದ ಹೆಣ್ಣು ಮಕ್ಕಳು ಅವರ ಜನಾಂಗದಲ್ಲಿ ಬರುವ ಜನಪದ ಗೀತೆಗಳನ್ನು ಹಾಡುತ್ತಾ ಸಂಭ್ರಮಿಸಿದರೆ, ಇತ್ತ ಹುಡುಗರು ನಾವೇನು ಕಮ್ಮಿ ಎನ್ನುವಂತೆ ಸಮಾಜದ ಹಲವು ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ವಿಷ್ಣು ಸಮುದಾಯದ ಮುಖಂಡ  ಜಯರಾಂ ಮಾತನಾಡಿ, ನಮ್ಮ ಪೂರ್ವಿಕರ ಕಾಲದಿಂದಲೂ ಮಾಡಿಕೊಂಡು ಬಂದಿರುವ ಹೋಳಿ ಹಬ್ಬದ ಸಂಭ್ರಮಾಚರಣೆ ನಾವು ಕೂಡ ಮುಂದುವರಿಸುತ್ತಿದ್ದೇವೆ. ಪ್ರತಿವರ್ಷ ಹೋಳಿ ಹಬ್ಬ ಬಂತೆಂದರೆ ಸಾಕು ನಮ್ಮ ಸಮುದಾಯದ ಎಲ್ಲಾ ಜನರು ಒಟ್ಟಿಗೆ ಕೂಡಿ ಸಂಭ್ರಮಿಸುತ್ತೇವೆ. ಕಳೆದ 3ವರ್ಷಗಳಿಂದ ಕೋವಿಡ್ ಹಿನ್ನೆಲೆ ಯಾವುದೇ ಸಂಭ್ರಮಾಚರಣೆ ಮಾಡಲು ಸಾಧ್ಯವಾಗಿರಲಿಲ್ಲ  ಇದೀಗ ದೇವರ ದಯೆಯಿಂದ ಎಲ್ಲಾ ಮಹಾಮಾರಿಯಿಂದ ದೂರವಾಗಿ ಸಂಭ್ರಮಗಳು ಮನೆ ಮಾಡುತ್ತಿವೆ ಎಂದು ತಿಳಿಸಿದರು. ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಕೊರಟಗೆರೆ : ಹುಲಿಕುಂಟೆ ಗ್ರಾಮ ಪಂಚಾಯಿತಿ ಮಾಜಿ  ಅಧ್ಯಕ್ಷ ಜೆ.ಸಿ.ರಮೇಶ್ ರಾಜೀನಾಮೆಯಿಂದ  ತೆರವಾಗಿದ್ದ ಸಾಮಾನ್ಯ ಮೀಸಲು ಕ್ಷೇತ್ರದ  ಅಧ್ಯಕ್ಷ ಸ್ಥಾನಕ್ಕೆ ಫ್ರೆಂಡ್ಸ್ ಗ್ರೂಪ್ ಡಿ.ಎಲ್.ಮಲ್ಲಣ್ಣ ಸರ್ವ ಸದಸ್ಯರ  ಬೆಂಬಲದಿಂದ ಅವಿರೋಧವಾಗಿ ಆಯ್ಕೆ  ಆಗಿದ್ದಾರೆ. ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹುಲೀಕುಂಟೆ ಗ್ರಾಪಂಯಲ್ಲಿ ಇಂದು ನಡೆದ  ಅಧ್ಯಕ್ಷರ ಚುನಾವಣೆಯಲ್ಲಿ ಫ್ರೆಂಡ್ಸ್ ಗ್ರೂಪ್  ಮಲ್ಲಣ್ಣ ನೂತನ ಅಧ್ಯಕ್ಷರಾಗಿ ಅವಿರೋಧ  ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ  ಹುಲೀಕುಂಟೆ ಅನ್ನಪೂರ್ಣ ಮುಂದುವರಿದಿದ್ದಾರೆ. ಈ ಸಂದರ್ಭ ಕೊರಟಗೆರೆ ತಹಶೀಲ್ದಾರ್ ನಾಹೀದಾ ಮಾತನಾಡಿ, ಹುಲೀಕುಂಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದೆ. ಅಧ್ಯಕ್ಷ ಸ್ಥಾನದ  ಆಕಾಂಕ್ಷಿಯಾಗಿ ಮಲ್ಲಣ್ಣ ಒಬ್ಬರೇ ನಾಮಪತ್ರ  ಸಲ್ಲಿಸಿದ್ದಾರೆ.  ಮಲ್ಲಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಯಾರೂ ಪ್ರತಿಸ್ಪರ್ಧಿಗಳಿಲ್ಲದ ಕಾರಣ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ  ನಡೆದಿಲ್ಲ ಹಾಗೇ ಮುಂದುವರೆಯಲಿದ್ದಾರೆ  ಎಂದು ತಿಳಿಸಿದರು. ಹುಲೀಕುಂಟೆ ಗ್ರಾಮ ಪಂಚಾಯಿತಿಯ  ನೂತನ ಅಧ್ಯಕ್ಷ ಮಲ್ಲಣ್ಣ ಮಾತನಾಡಿ, ಕರುನಾಡಿನ ಯುವರಾಜ  ಅಪ್ಪು ಹುಟ್ಟಿದ ದಿನ ನಾನು ಗ್ರಾಮ ಪಂಚಾಯಿತಿಯ ಅಧ್ಯಕ್ಷನಾಗಿ…

Read More

ಗುಬ್ಬಿ: ತಾಲೂಕಿನ ಕಡಬ ಗ್ರಾಮದಲ್ಲಿ ದಿವಂಗತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ಯುವ ಬ್ರಿಗೇಡ್ ವತಿಯಿಂದ ರಕ್ತದಾನ ಶಿಬಿರ ಹಾಗೂ ದಾಸೋಹ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಸಮೀಪದ ಗ್ರಾಮಸ್ಥರೂ ಆಗಮಿಸಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ವರದಿ: ಮಂಜುನಾಥ್, ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಶಿಕ್ಷಣ ಮತ್ಚು ಉದ್ಯೋಗಕ್ಕಾಗಿ ಶೇ. 7.5 ಮೀಸಲಾತಿ ನೀಡುವ ಭರವಸೆಯನ್ನು ನೀಡಿತ್ತು. ಆದರೆ ಇನ್ನು ಈಡೇರಿಲ್ಲ ಎಂದು ಹೆಚ್.ಡಿ.ಕೋಟೆಯ ಶಾಸಕ ಅನಿಲ್ ಚಿಕ್ಕಮಾದು ಒತ್ತಾಯಿಸಿದರು. ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು,  ನಾಗಮೋಹನದಾಸ್ ವರದಿಯನ್ನು ತಕ್ಷಣವೇ ಜಾರಿಗೊಳಿಸಬೇಕು. ಇದು  ಸಾಕಷ್ಟು ವರ್ಷಗಳಿಂದ ಬಾಕಿ ಉಳಿದಿದೆ. ನಾಯಕ ಜನಾಂಗದವರು ಶೈಕ್ಷಣಿಕವಾಗಿ ಮತ್ತು ಉದ್ಯೋಗ ಇಲ್ಲದೆ ಹಿಂದೆ ಉಳಿದಿದ್ದಾರೆ ಎಂದು ತಿಳಿಸಿದರು. ಸುಮಾರು 40 ವರ್ಷಗಳಿಂದ ನಾಯಕ ಸಮಾಜದವರು ಹೋರಾಟವನ್ನು ನಿರಂತರವಾಗಿ ಮಾಡುತ್ತಿದ್ದು ನಮ್ಮ ಹೋರಾಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಹಿರಿಯೂರು: ನಗರದ ನಂಜುಡೇಶ್ವರ ಚಿತ್ರಮಂದಿರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರ ಪ್ರದರ್ಶನ ನಿನ್ನೆಯಿಂದ ಆರಂಭಗೊಂಡಿದ್ದು, ಇಲ್ಲಿನ ದೊಡ್ಮನೆ ಅಭಿಮಾನಿ ಬಳಗದವರು ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ಚಿತ್ರವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಅಭಿಮಾನಿಗಳು ವಾದ್ಯ ಸಂಗೀತಗಳೊಂದಿಗೆ ಕುಣಿದು ಕುಪ್ಪಳಿಸಿದರಲ್ಲದೆ. ಪಟಾಕಿಗಳನ್ನು ಸಿಡಿಸಿ ಖುಷಿಪಟ್ಟರು. ಕೇಕ್ ಕತ್ತರಿಸಿ, ಸಾರ್ವಜನಿಕರಿಗೆ ವಿತರಿಸಿದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪರವಾಗಿ ಘೋಷಣೆಗಳನ್ನು ಕೂಗಿದರಲ್ಲದೆ, ಅಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ಉಪಹಾರ ವಿತರಣೆ ಮಾಡುವ ಮೂಲಕ ಅಭಿಮಾನ ಮೆರೆದರು. ಈ ಸಂದರ್ಭದಲ್ಲಿ ಹಿರಿಯೂರು ನಗರ ಪೋಲಿಸ್ ಅಧಿಕಾರಿಯಾದ ಶಿವಕುಮಾರ್ ರವರು ಸಹ ಸ್ಥಳಕ್ಕೆ ಆಗಮಿಸಿದರು. ಹಿರಿಯೂರು ನಗರದ ನಂಜುಡೇಶ್ವರ ಚಿತ್ರಮಂದಿರದ ಆವರಣದಲ್ಲಿ ದೊಡ್ಮನೆ ಅಭಿಮಾನಿ ಬಳಗದ ನೂರಾರು ಜನ ಸದಸ್ಯರು ಹಾಗೂ ಪುನೀತ್ ರಾಜ್ ಕುಮಾರ್ ರವರ ಸಾವಿರಾರು ಜನ ಅಭಿಮಾನಿಗಳು ನಟ ಪುನೀತ್ ರಾಜ್ ಕುಮಾರ್ ಅಭಿನಯದ ಜೇರ್ಮ್ಸ್ ಚಿತ್ರದ ವೀಕ್ಷಣೆಗಾಗಿ ತುದಿಗಾಲಲ್ಲಿ…

Read More

ತುಮಕೂರು: ತುಮಕೂರು ನಗರದ 19 ವರ್ಷದ ಯುವತಿಯ ಸಾವು ಪ್ರಕರಣದ  ಪ್ರಮುಖ ಆರೋಪಿಯಾದ ರಾಜೇಂದ್ರ ಕುಮಾರ್ ನನ್ನು ಗುರುವಾರ ಮಧ್ಯಾಹ್ನ ಪೊಲೀಸರು ಬಂಧಿಸಿದ್ದಾರೆ. ಇನ್ನು ಪ್ರಕರಣದ ಪ್ರಮುಖ ಆರೋಪಿಯಾದ ರಾಜೇಂದ್ರ ಕುಮಾರ್ ಹಾಗೂ ಇತರರು ತಲೆಮರೆಸಿಕೊಂಡಿದ್ದರು. ಆದರೆ ಕೊನೆಗೂ ತುಮಕೂರು ಪೊಲೀಸರು ಪ್ರಮುಖ ಆರೋಪಿ ರಾಜೇಂದ್ರಕುಮಾರ್ ನನ್ನ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಗುರುವಾರ ಮಧ್ಯಾಹ್ನ ಪ್ರಮುಖ ಆರೋಪಿ ರಾಜೇಂದ್ರಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ತುಮಕೂರು ನಗರದ 19 ವರ್ಷದ ಯುವತಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ಪ್ರಮುಖ ಆರೋಪಿ ರಾಜೇಂದ್ರ ಕುಮಾರ್ ವಿರುದ್ಧ ಮೃತ ಯುವತಿಯ ತಾಯಿ ದೂರು ದಾಖಲಿಸಿದ್ದರು. ತಾಯಿ ದೂರಿನನ್ವಯ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯ ಮರಣೋತ್ತರ ಪರೀಕ್ಷೆ. ಕಳೆದ ಮೂರು ದಿನಗಳ ಹಿಂದೆ  ಯುವತಿಯ ಮೃತದೇಹವನ್ನು ಬೆಂಗಳೂರಿನ ಸ್ಥಳೀಯ ಅಧಿಕಾರಿಗಳು ವೈದ್ಯರು ಹಾಗೂ ಪೊಲೀಸರ ಸಮ್ಮುಖದಲ್ಲಿ  ಬೆಂಗಳೂರಿನ ಶಾಂತಿನಗರದ ಭಾರತೀಯ ಕ್ರೈಸ್ತ ಸಮಾಧಿ ಗೇಟ್ ನಲ್ಲಿರುವ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಮಣ್ಣು…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ  ಜವನಗೊಂಡನಹಳ್ಳಿ ಹೋಬಳಿಯ ಬಗ್ಗನಡು ಗೇಟ್ ಬಳಿ ಟೆಂಪೂ ಟ್ರಾವೆಲರ್ ವಾಹನವು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ  ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಶ್ವೇತಾ (24), ಟೆಂಪೊ ಟ್ರಾವೆಲರ್ ಕ್ಲೀನರ್ ಅರಿಕ್ಯದಾಸ್ (19) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತ ಯುವತಿಯು ಬೆಂಗಳೂರಿನ ಪಿ.ಎಸ್.ಕೆ. ನಾಯ್ಡು ರಸ್ತೆ,ಮು ದ್ದಮ್ಮ ಗಾರ್ಡನ್ ನ ಫ್ರೇಜರ್ ಟೌನ್ ಬೆಂಗಳೂರು ವಾಸಿ ಎಂದು ಹೇಳಲಾಗಿದೆ. ಬೆಂಗಳೂರಿನ ಇಂಡಿಯನ್ ಅಕಾಡೆಮಿ ಕಾಲೇಜಿನಲ್ಲಿ ಬಿಸಿಎ ಪದವಿ ವ್ಯಾಸಂಗ ಮಾಡಿದ್ದ 2013ರ ಬ್ಯಾಚ್ ನ ಒಟ್ಟು 11 ಮಂದಿ ಸ್ನೇಹಕೂಟ (ಗೆಟ್ ಟುಗೆದರ್) ಮಾಡಲು ಮಾರ್ಚ್ 10ರಂದು ಉಡುಪಿ, ಗೋಕರ್ಣಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ಶಿರಸಿ ಮಾರ್ಗವಾಗಿ ದಾವಣಗೆರೆ , ಚಿತ್ರದುರ್ಗದ ಮೂಲಕ ಬೆಂಗಳೂರಿಗೆ ವಾಪಸ್ ಆಗುವ ವೇಳೆ ಈ ದುರ್ಘಟನೆ ನಡೆದಿದೆ. ಕ್ಲೀನರ್ ಅರಿಕ್ಯದಾಸ್ ಸ್ಥಳದಲ್ಲೇ ಮೃತ ಪಟ್ಟರೆ, ಶ್ವೇತಾ ಅವರು…

Read More

ತುಮಕೂರು: ತುಮಕೂರಿನ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಡಾ.ವಿದ್ಯಾಕುಮಾರಿ ನೇತೃತ್ವದಲ್ಲಿ ಎಸೆಸೆಲ್ಸಿ ಪರೀಕ್ಷೆಯ ಪೂರ್ವ ಸಿದ್ಧತೆ ಪರಿಶೀಲನೆ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಸಿಇಓ ಡಾ.ವಿದ್ಯಾಕುಮಾರಿ,  ಎಸೆಸೆಲ್ಸಿ ಮಕ್ಕಳು ಪರೀಕ್ಷೆ ಬರೆಯುವುದನ್ನು ಖಾತರಿಪಡಿಸುವುದು  ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ಎಲ್ಲೆಲ್ಲಿ ಪರೀಕ್ಷೆ ನಡೆಯುತ್ತದೆ ಅಲ್ಲಿನ ಕೇಂದ್ರಗಳಲ್ಲಿ ಸಮರ್ಪಕವಾದ ವ್ಯವಸ್ಥೆಯನ್ನು ಮಾಡಬೇಕು ಎಂದರು. ಸರ್ಕಾರದ ಮಾರ್ಗಸೂಚಿಯ  ಪ್ರಕಾರ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಯಾವ ರೀತಿ ಮಾಡಬೇಕು ಅದಕ್ಕೆ ಎಲ್ಲರೂ ಬದ್ಧವಾಗಿರಬೇಕಾಗುತ್ತದೆ. ಎಲ್ಲರೂ ಕೂಡ ಅದನ್ನು ಪಾಲಿಸಬೇಕಾಗುತ್ತದೆ. ಮಕ್ಕಳಿಗೆ ಕುಡಿಯುವ ನೀರನ್ನು ಇಡಬೇಕು ಮತ್ತುಸಣ್ಣ ಸಣ್ಣಅಂಶಗಳನ್ನು ನಾವು ಪಾಲಿಸಬೇಕಾಗುತ್ತದೆ ಎಂದರು. ವರದಿ:  ಎ.ಎನ್. ಪೀರ್ ,  ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More