Author: admin

ಬೆಂಗಳೂರು: ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್ ಪಿನ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಸಿಐಡಿ ತಂಡ ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದೆ. ದಿವ್ಯಾ ಹಾಗರಗಿ ಬಂಧನದ ಬಳಿಕ ಇಂದು ಡಿಜಿಪಿ ಪ್ರವೀಣ್ ಸೂದ್ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಅವರ ಆರ್.ಟಿ.ನಗರದ ನಿವಾಸದಲ್ಲಿ ಭೇಟಿಯಾಗಿ, ದಿವ್ಯಾ ಹಾಗರಗಿ ಬಂಧನದ ವಿಚಾರವಾಗಿ ಮಾಹಿತಿ ನೀಡಿದ್ದಾರೆ. ದಿವ್ಯಾ ಹಾಗರಗಿ ಒಡೆತನಕ್ಕೆ ಸೇರಿದ ಜ್ಞಾನ ಜ್ಯೋತಿ ಶಾಲೆಯ ಪರೀಕ್ಷೆ ಕೇಂದ್ರದಲ್ಲಿ ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಬ್ಲೂಟೂತ್ ಮೂಲಕ ಅಕ್ರಮ ಎಸಗಿದ ಹಿನ್ನೆಲೆಯಲ್ಲಿ ಕಳೆದ ಏ. 9 ರಂದು ಎಫ್ ಐಆರ್ ದಾಖಲಾಗುತ್ತಿದ್ದಂತೆ  ದಿವ್ಯಾ ಪರಾರಿಯಾಗಿದ್ದಳು. ಇದೀಗ ಕೊನೆಗೂ ಈಕೆಯನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಈ ರೈಲು ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಗಡಿಯಲ್ಲಿ ಚಲಿಸುತ್ತದೆ. ನೀವು ಭಾಕ್ರಾ ನಾಗಲ್ ಅಣೆಕಟ್ಟನ್ನು ನೋಡಲು ಹೋದರೆ, ನೀವು ಈ ರೈಲು ಪ್ರಯಾಣವನ್ನು ಉಚಿತವಾಗಿ ಆನಂದಿಸಬಹುದು. ವಾಸ್ತವವಾಗಿ ಈ ರೈಲು ನಾಗಲ್‌ನಿಂದ ಭಾಕ್ರಾ ಅಣೆಕಟ್ಟಿಗೆ ಚಲಿಸುತ್ತದೆ. ಕಳೆದ 73 ವರ್ಷಗಳಿಂದ 25 ಹಳ್ಳಿಗಳ ಜನರು ಈ ರೈಲಿನಿಂದ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಒಂದೆಡೆ ದೇಶದ ಎಲ್ಲಾ ರೈಲುಗಳ ಟಿಕೆಟ್ ದರವನ್ನು ಹೆಚ್ಚಿಸುತ್ತಿದ್ದರೆ, ಮತ್ತೊಂದೆಡೆ ಜನರು ಈ ರೈಲಿನಲ್ಲಿ ಏಕೆ ಉಚಿತವಾಗಿ ಪ್ರಯಾಣಿಸುತ್ತಾರೆ ಮತ್ತು ಅದನ್ನು ರೈಲ್ವೆ ಹೇಗೆ ಅನುಮತಿಸುತ್ತದೆ ಎಂದು ನೀವು ಯೋಚಿಸುತ್ತಿರಬೇಕು? ಭಗ್ರಾ ಅಣೆಕಟ್ಟಿನ ಬಗ್ಗೆ ಮಾಹಿತಿಗಾಗಿ ರೈಲು ಓಡಾಟ ವಾಸ್ತವವಾಗಿ, ಈ ರೈಲನ್ನು ಭಗ್ರಾ ಅಣೆಕಟ್ಟಿನ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಓಡಿಸಲಾಗಿದೆ. ಇದರಿಂದ ದೇಶದ ಭವಿಷ್ಯದ ಪೀಳಿಗೆಗೆ ದೇಶದ ಅತಿದೊಡ್ಡ ಭಾಕ್ರಾ ಅಣೆಕಟ್ಟು ಹೇಗೆ ನಿರ್ಮಾಣವಾಯಿತು ಎಂದು ತಿಳಿಯಬಹುದು. ಈ ಅಣೆಕಟ್ಟನ್ನು ನಿರ್ಮಿಸಲು ಅವರು ಎದುರಿಸಿದ ತೊಂದರೆಗಳೇನು ಎಂಬುದರ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಭಾಕ್ರಾ ಬಿಯಾಸ್ ಆಡಳಿತ…

Read More

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಇಳಿಸಿ, ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ಮೋದಿ ನೀಡಿದ ರಾಷ್ಟ್ರಹಿತದ ಕರೆಗೆ ಬಿಜೆಪಿಯೇತರ ರಾಜ್ಯ ಸರಕಾರಗಳು ಸ್ಪಂದಿಸುವ ಅವಕಾಶವನ್ನು ಕ್ಷುಲ್ಲಕ ರಾಜಕಾರಣಕ್ಕಾಗಿ ಕೈಚೆಲ್ಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆರೋಪಿಸಿದರು. ಮಾಧ್ಯಮಗಳ ಜೊತೆಗೆ ಗುರುವಾರ ಮಾತನಾಡಿದ ಅವರು, ಪ್ರತಿಪಕ್ಷಗಳು ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆ ಗಂಭೀರವಾಗಿಲ್ಲ. ಬದಲಿಗೆ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯದಲ್ಲಿ ಅವು ಮುಳುಗಿವೆ ಎಂದು ಆರೋಪಿಸಿದರು. ಕೋವಿಡ್ ಸಂಕಷ್ಟದ ನಡುವೆಯೂ ಮೋದಿಯವರು ಅಭಿವೃದ್ಧಿಪರ ರಾಜಕಾರಣಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ.  ಹಿಂದೊಮ್ಮೆ ಕೇಂದ್ರ ಸರಕಾರ ತೈಲೋತ್ಪನ್ನಗಳ ಮೇಲಿನ ತೆರಿಗೆ ಇಳಿಸಿತ್ತು. ಆಗ ಕರ್ನಾಟಕ ಸರಕಾರ ಕೂಡ ಅದಕ್ಕೆ ಪೂರಕವಾಗಿ ಸ್ಪಂದಿಸಿ, ತನ್ನ ಜನಪರತೆಯನ್ನು ತೋರಿಸಿತ್ತು ಎಂದರು. ದೇಶವು ಕಳೆದ ಎಂಟು ವರ್ಷಗಳಲ್ಲಿ ವಿಶ್ವದ ಮೂರನೇ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, 10 ಟ್ರಿಲಿಯನ್ ಮೊತ್ತದ ಆರ್ಥಿಕತೆಯನ್ನು ಬೆಳೆಸುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದೆ. ಇದು ಕೆಲವೇ ವರ್ಷಗಳಲ್ಲಿ…

Read More

ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿ ಸೇರುತ್ತಾರೆ ವದಂತಿಗೆ ಪ್ರತಿಕ್ರಿಯಿಸಿದ ಅವರು ನಾನು ಯಾವ ಪಕ್ಷದ ಬಗ್ಗೆಯೂ ಆಲೋಚಿಸಿಲ್ಲ.ಯಾವುದಾದ್ರೂ ಪಕ್ಷಕ್ಕೆ ಸೇರಬೇಕು ಅನ್ನೋ ಉದ್ದೇಶವಿದೆ.ಮಂಡ್ಯದ ಜನ ಮತ್ತು ಮಂಡ್ಯದ ಅಭಿವೃದ್ಧಿ ಕಾಳಜಿ ಇರೋ ಪಕ್ಷಕ್ಕೆ ಸೇರುತ್ತೇನೆ ಎಂದು ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿ ಸುಮಲತಾ ಅಂಬರೀಶ್ ಮಂಡ್ಯದ ಜನರನ್ನೂ ಕೇಳದೇ ನಾನು ಏನೂ ತೀರ್ಮಾನ ಮಾಡಲ್ಲ. ಗೃಹಸಚಿವ ಅಮಿತ್ ಶಾ ಬರೋ ದಿನ ನಾನು ಮಂಡ್ಯದಲ್ಲೇ ಇರಲ್ಲ ಎಂದು ಹೇಳಿದ್ದಾರೆ.ಎರಡು ವರ್ಷಗಳಿಂದ ಸಂಸದರ ನಿಧಿ ಬಂದಿರಲಿಲ್ಲ. ಈಗ ಸಂಸದರ ನಿಧಿ ಬಿಡುಗಡೆಯಾಗಿದೆ. ಈ‌ ಕಾರಣದಿಂದ ಮುಖಂಡರಿಗೆ ಸಂಸದರ ನಿಧಿ ಬಗ್ಗೆ ತಿಳಿಸುತ್ತಿದ್ದೇನೆ. ಪಕ್ಷ ಸೇರ್ಪಡೆ ವಿಚಾರವಾಗಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಇದರ ಬಗ್ಗೆ ಬಹಿರಂಗವಾಗಿ ಹೇಳಲು ಸಾದ್ಯವಿಲ್ಲ. ಎಲ್ಲರೂ ಸ್ವತಂತ್ರರು, ಯಾವ ಪಕ್ಷಕ್ಕಾದ್ರು ಸೇರಬಹುದು. ನನ್ನ ಚುನಾವಣೆ ವೇಳೆ ಎಲ್ಲಾ ಪಕ್ಷದವರು ದುಡಿದಿದ್ದಾರೆ ಎಂದು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ಎಚ್.ಡಿ. ಕೋಟೆ: ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್ ರಾಮ್  ಅವರ 115ನೇ ಹುಟ್ಟುಹಬ್ಬ ಮತ್ತು ಅಂಬೇಡ್ಕರ್ ಜಯಂತಿ ಕಾರ್ಯಕ್ರಮವು  ಶುಕ್ರವಾರ ಬೆಳಿಗ್ಗೆ 11  ಗಂಟೆಗೆ  ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಬಾಬು ಜಗಜೀವನ ರಾಂ ವಿಚಾರ ವೇದಿಕೆಯ ಅಧ್ಯಕ್ಷ ಪಿ.ನಾಗರಾಜು  ತಿಳಿಸಿದರು. ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಟ್ಟಣದ ಕೃಷ್ಣಾಪುರ ಬಾಪೂಜಿ ವೃತ್ತದಿಂದ ಅಂಬೇಡ್ಕರ್ ಭವನದ ವರೆಗೆ ಮೆರವಣಿಗೆ ಮೂಲಕ ತಾಲ್ಲೂಕಿನ ವಿವಿಧ ಗ್ರಾಮ ಗಳಿಂದ  ವಾಹನಗಳು ಭಾಗವಹಿಸಲಿವೆ. ಸತ್ತಿಗೆ, ತಮಟೆ, ನಗಾಕಿ, ನಂದಿಕಂಬ, ಮಂಗಳ ವಾದ್ಯ ಸಮೇತವಾಗಿ ಮೆರವಣಿಗೆ ನಡೆಯಲಿದೆ ಎಂದರು. ಅಂಬೇಡ್ಕರ್ ಭವನದ ಮುಂಭಾಗದ ಆವರಣದಲ್ಲಿ ಬಾಬು ಜಗಜೀವನರಾಮ್ ಮತ್ತು ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುವುದು ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಡಪ ಸಿಂಹಾಸನ ಕೋಡಿಹಳ್ಳಿ ಆದಿಜಾಂಭವ   ಮಹಾಸಂಸ್ಥಾನಮಠದ ಸಡಕ್ಷರ ಮುನಿ ದೇಶಿಕೇಂದ್ರಸ್ವಾಮೀಜಿ,  ಹರಳಯ್ಯ ಮಠದ ಗುರುರುದ್ರಪ್ಪ ಹರಳಯ್ಯ ಸ್ವಾಮೀಜಿ,  ಮಾಜಿ ಕೇಂದ್ರ ಸಚಿವ ರಾದ ಕೆ.ಎಚ್. ಮುನಿಯಪ್ಪ, ಶಾಸಕ ಅನಿಲ್ ಚಿಕ್ಕಮಾದು, ಸಂಸದರಾದ…

Read More

ನರಗುಂದ: ಯಾವುದೇ ರಾಜಕಾರಣಿಗಳು ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡಿದರೆ ವ್ಯವಸ್ಥಿತ ಹೋರಾಟ ಮಾಡಬೇಕಾಗುತ್ತದೆ ಎಂದು ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆಯನ್ನು ನೀಡಿದ್ದಾರೆ. ಸಚಿವ ಸಿ.ಸಿ. ಪಾಟೀಲ ಅವರು ವಿಧಾನಸೌಧದಲ್ಲಿ ಕುಳಿತ ನಮ್ಮ ತೇಜೋವಧೆ ಸುದ್ದಿಗೋಷ್ಠಿ ನಡೆಸಿದ್ದರು. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ನಾನು ಮಾತನಾಡಿದ್ದೆ. ಅದನ್ನು ಚರ್ಚೆಗೆ ಒಳಪಡಿಸಬೇಕಿತ್ತು. ನಮ್ಮ ಮಾತಿನ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ ನಮ್ಮ ಬಗ್ಗೆ ಸಚಿವ ಸಿ.ಸಿ. ಪಾಟೀಲ ಚರ್ಚೆ ಮಾಡಿದ್ದರಿಂದ ರೋಷ, ಹಠ ಮರೆತು ನ್ಯಾಯ ಕೇಳಲು ಬಂದಿದ್ದೆ. ಆದರೆ ಪೊಲೀಸರ ವಿನಂತಿ ಮೇರೆಗೆ ಇಲ್ಲಿಂದ ಮರಳಿ ನಿರ್ಗಮಿಸುತ್ತಿದ್ದೇವೆ ಎಂದು ಶ್ರೀಗಳು ಹೇಳಿದರು. ಬುಧವಾರ ನರಗುಂದ ಸಚಿವರ ಮನೆ ಮುಂದೆ ಧರಣಿ ನಡೆಸಲು ಆಗಮಿಸಿದ್ದ ಶ್ರೀಗಳನ್ನು ತಾಲೂಕಿನ ಸರಹದ್ದು ಬಳಿ ಪೊಲೀಸರು ತಡೆದು ನಿಲ್ಲಿಸಿದ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ ಪಕ್ಕದ ರೈತರೊಬ್ಬರ ಜಮೀನೊಂದರಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀಗಳು ಶೀಘ್ರದಲ್ಲಿ ಮಠದ ಭಕ್ತರ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ ಎಂದು ಶ್ರೀ…

Read More

ಚಿಕ್ಕಮಗಳೂರು: ಶೆಡ್​ ನಲ್ಲಿದ್ದ ಮೇಕೆ ಮರಿಯನ್ನು ಹೆಬ್ಬಾವು ನುಂಗಿರುವ ಘಟನೆ ಚಿಕ್ಕಮಗಳೂರು ನಗರದ ಕಾಫಿ ಮಂಡಳಿ ಸಮೀಪ ನಡೆದಿದೆ. ಮನೆ ಮಾಲಿಕ ವೆಂಕಟಪ್ಪ ಎಂಬವರ ಮನೆಯ ಹತ್ತಿರದ ಶೆಡ್ ಗೆ ನುಗ್ಗಿದ್ದ ಹೆಬ್ಬಾವು ವೆಂಕಟಪ್ಪನ ಎದುರಿನಲ್ಲಿ ಮೇಕೆ ಮರಿಯ ಮೇಲೆ ದಾಳಿ ನಡೆಸಿದ್ದು ಹೆಬ್ಬಾವನ್ನು ಓಡಿಸಲು ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ. ವೆಂಕಟಪ್ಪನಿಗೆ ಜಗ್ಗದ ಹೆಬ್ಬಾವು ಅವರ ಕಣ್ಣಮುಂದೆಯೇ ಮೇಕೆ ಮರಿಯನ್ನು ನುಂಗಿಹಾಕಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಸ್ನೇಕ್​ ನರೇಶ್​ ಮೇಕೆ ಮರಿಯನ್ನು ನುಂಗಿರುವ ಹೆಬ್ಬಾವನ್ನು ಸೆರೆ ಹಿಡಿದಿದ್ದು. ಚುರ್ಚೆ ಗುಡ್ಡ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್​ನವರು ಆಡಳಿತ ನಡೆಸದಂತೆ ತೊಂದರೆ ಕೊಟ್ಟರು. ತುಮಕೂರಿಗೆ ದೇವೇಗೌಡರನ್ನು ಕರೆತಂದು ನಿಲ್ಲಿಸಿ ಸೋಲಿಸದವರು ಕಾಂಗ್ರೆಸ್​ನವರೇ. ಕುಮಾರಸ್ವಾಮಿ ಸರ್ಕಾರವನ್ನು ಕಾಂಗ್ರೆಸ್​ನವರು ಬೀಳಿಸಿಲ್ಲ ಎಂದು ಡಾ.ಜಿ.ಪರಮೇಶ್ವರ ಅವರು ಸಿದ್ಧಗಂಗಾ ಮಠದ ಗದ್ದುಗೆ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಜಿಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸವಾಲು ಹಾಕಿದರು. ‘ಕಳೆದ ಬಾರಿ ತುಮಕೂರು ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಒತ್ತಾಯ ಮಾಡಿ ಕಾಂಗ್ರೆಸ್​ನವರೇ ನಿಲ್ಲಿಸಿದ್ರು, ಎಸ್​.ಪಿ.ಮುದ್ದಹನುಮೇಗೌಡರನ್ನು ಅನ್ಯಾಯವಾಗಿ ರಾಜಕೀಯವಾಗಿ ಕೊಂದ್ರು’ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು. ಜನತಾ ಜಲಧಾರೆ ರಥಯಾತ್ರೆಗೆ  ತುಮಕೂರಿಗೆ ಆಗಮಿಸಿ ನಗರದ ಗಾಜಿನ ಮನೆಯಲ್ಲಿ ಮಾತನಾಡಿದ ದೇವೇಗೌಡ, ಇತ್ತೀಚೆಗೆ ಮಧುಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಕೂಡ ನನ್ನ ಮೇಲಿನ ದ್ವೇಷದಿಂದ ಜಿಲ್ಲೆಯ ಒಕ್ಕಲಿಗ ಸಮುದಾಯದ ಮುಖಂಡರೇ ದೇವೇಗೌಡರನ್ನು ಬಲವಂತವಾಗಿ ಕರೆತಂದು ಸ್ಪರ್ಧಿಸುವಂತೆ ಮಾಡಿದ್ದರು ಎಂದು ಆರೋಪಿಸಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಕಳಪೆ ಫಾರ್ಮ್‍ನಲ್ಲಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಐಪಿಎಲ್‍ನಿಂದ ಕೈ ಬಿಡಿ ಎಂದು ಮಾಜಿ ತರಬೇತುದಾರ ರವಿಶಾಸ್ತ್ರಿ ಹೇಳಿದ್ದಾರೆ. ಖಾಸಗಿ ಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ವಿರಾಟ್ ಕೊಹ್ಲಿ ಅವರು ಸತತ ಪಂದ್ಯಗಳನ್ನು ಆಡುತ್ತಿರುವುದರಿಂದ ಅವರು ತುಂಬಾ ಬಳಲಿದ್ದಾರೆ, ಆದ್ದರಿಂದೇ ಅವರಿಂದ ಕಳಪೆ ಪ್ರದರ್ಶನ ಬರುತ್ತಿದೆ. ಆದ್ದರಿಂದ ಅವರು ಐಪಿಎಲ್‍ನ ಉಳಿದ ಪಂದ್ಯಗಳಿಂದ ಕೈಬಿಟ್ಟು ಇದುವರೆಗೂ ಅವರು ಆಡಿರುವ ಪಂದ್ಯಗಳ ವರಮಾನವನ್ನು ನೀಡುವಂತೆ ಆರ್‍ಸಿಬಿ ಫ್ರಾಂಚೈಸಿಗಳಿಗೆ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.ವಿರಾಟ್ ಕೊಹ್ಲಿ ಅವರಿಗೆ ಒತ್ತಡವಿದ್ದ ಪರಿಣಾಮದಿಂದಲೇ ಅವರು ಎಲ್ಲ ಮಾದರಿಯ ಕ್ರಿಕೆಟ್‍ಗೆ ರಾಜೀನಾಮೆಯನ್ನು ನೀಡಿದ್ದಾರೆ, ಆದರೂ ಸತತ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಅವರು ತುಂಬಾ ಬಳಲಿರುವುದರಿಂದ ಅವರು ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ಅವರಿಗೆ ಈಗ ವಿಶ್ರಾಂತಿ ಅವಶ್ಯಕವಾಗಿದೆ ಎಂದು ರವಿಶಾಸ್ತ್ರಿ ಅವರು ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಮಾತ್ರವಲ್ಲ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ರೋಹಿತ್ ಶರ್ಮಾ ಸೇರಿದಂತೆ ಕೆಲವು ಶ್ರೇಷ್ಠ…

Read More

ದಿನೇ ದಿನೇ ಕಚ್ಛಾ ಕಾಗದ ಹಾಗೂ ಮುದ್ರಣ ಸಾಮಾಗ್ರಿಗಳ ಬೆಲೆ ಹೆಚ್ಚಳವಾಗುತ್ತಿರುವುದರಿಂದ ಮುದ್ರಣಕ್ಕೆ ಎದುರಾಗಿರುವ ಸಮಸ್ಯೆಯನ್ನು ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಪರಿಹರಿಸಬೇಕು ಎಂದು ಕರ್ನಾಟಕ ಪಠ್ಯ ಪುಸ್ತಕ ಮುದ್ರಕರ ಸಂಘ ಇಂದು ಪ್ರತಿಭಟನೆ ನಡೆಸಿತು. ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ(ಫ್ರೀಡಂಪಾರ್ಕ್) ಅಸೋಸಿಯೇಷನ್ ಅಧ್ಯಕ್ಷರಾದ ಸತ್ಯಕುಮಾರ್, ಉಪಾಧ್ಯಕ್ಷರಾದ ಗೋಪಾಲಕೃಷ್ಣ, ಖಜಾ0ಚಿ ನಾಗಸುಂದರ್ , ವಿ.ಶ್ರೀನಿವಾಸ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಮುದ್ರಣ ವಿಭಾಗದ ನೂರಾರು ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಪಠ್ಯ ಪುಸ್ತಕ ಮುದ್ರಕರ ಸಂಘದ ಅಧ್ಯಕ್ಷ ಸತ್ಯಕುಮಾರ್ ಅವರು, ಒಂದು ಟನ್ ಕಾಗದದ ಬೆಲೆ ಸುಮಾರು 60 ಸಾವಿರ ರೂ.ನಿಂದ 90 ಸಾವಿರ ರೂ.ಗಳಿಗೆ ಏರಿಕೆಯಾಗಿದೆ. ಹೀಗಾದರೆ ನಾವು ಉದ್ಯಮ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.ಮುದ್ರಣದ ಮೂಲ ಸಾಮಗ್ರಿಗಳಾದ ಇಂಕು, ಪ್ಲೇಟ್, ಕೆಮಿಕಲ್ಸ್, ಕಾಗದ ಸೇರಿದಂತೆ ಎಲ್ಲಾ ಕಚ್ಚಾ ಸಾಮಗ್ರಿಗಳ ಬೆಲೆ ದುಬಾರಿಯಾಗಿದ್ದು, ಪಠ್ಯ ಪುಸ್ತಕ, ವೃತ್ತ ಪತ್ರಿಕೆ ಹಾಗೂ ಲೇಖನ ಸಾಮಗ್ರಿಗಳನ್ನು ಮುದ್ರಣ ಮಾಡಲಾಗದಂತಹ ತೀವ್ರ…

Read More