Subscribe to Updates
Get the latest creative news from FooBar about art, design and business.
- ತಿಪಟೂರು | ಸರಿಯಾಗಿ ಕಾರ್ಯನಿರ್ವಹಿಸದ ಸಂಚಾರ ಸಿಗ್ನಲ್ ಗಳು: ವಾಹನ ಚಾಲಕರಿಂದ ಆಕ್ರೋಶ
- ಕನಕದಾಸರು ಸಮಾಜದ ಓರೆಕೋರೆಗಳನ್ನು ತಿದ್ದಲು ಶ್ರಮಿಸಿದವರು: ಸಿ.ವಿ.ಕುಮಾರ್
- ಅವೈಜ್ಞಾನಿಕ ಸುತ್ತೋಲೆ ವಾಪಸ್ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಂಶುಪಾಲರ, ಉಪನ್ಯಾಸಕರ ಸಂಘ ಆಗ್ರಹ
- ತುಮಕೂರು | ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ
- ಕುಲವಿಲ್ಲದ ನೆಲೆಗಾಗಿ ನಡೆದಾಡಿದ ಸಂತ ಕವಿ ಕನಕದಾಸರು: ಬಿಡಗಲು ಶಿವಣ್ಣ ಅಭಿಮತ
- ಸಾಮಾಜಿಕ ನ್ಯಾಯ ಎತ್ತಿ ಹಿಡಿದವರು ಕನಕದಾಸರು: ಎಂ.ಬಿ.ಆನಂದ
- ರಾಜ್ಯ ಮಟ್ಟದ ಕನ್ನಡ ಸೇವಾರತ್ನ ಪ್ರಶಸ್ತಿಗೆ ಡಾ.ಸತ್ಯಕ್ಕ ಗಡ್ಡೆ ಆಯ್ಕೆ
- ನರಹಂತಕ ವ್ಯಾಘ್ರನ ಸೆರೆ: ಜನರ ನಿದ್ದೆಗೆಡಿಸಿದ 9 ವರ್ಷದ ಹುಲಿಯನ್ನು ಹಿಡಿದ ಅರಣ್ಯ ಇಲಾಖೆ
Author: admin
ತುಮಕೂರು: ನಗರದ ಮಹಾತ್ಮ ಗಾಂಧಿ ಸ್ಟೇಡಿಯಂ ಎದುರಿನ ಒಳಾಂಗಣ ಕ್ರೀಡಾಂಗಣದಲ್ಲಿ ಮುಂಜಾನೆ ಗೆಳೆಯರ ಬಳಗದ ತುಮಕೂರು ನಗರದ ಅಂತರಾಷ್ಟ್ರೀಯ ಕ್ರೀಡಾಪಟು ಆನಂದ್ ಅವರ 74ನೇ ಹುಟ್ಟು ಆಚರಣೆಯನ್ನು ಆಚರಿಸಲಾಯಿತು. ಇಂದು ಬೆಳಿಗ್ಗೆ ಪ್ರಾತಃಕಾಲದ ವಾಕಿಂಗ್ ಸಮಯದಲ್ಲಿ 74ನೇ ವಸಂತಕ್ಕೆ ಕಾಲಿಟ್ಟ ಆನಂದ್ ಅವರಿಗೆ ಶುಭಾಶಯ ಕೋರಿ ಸನ್ಮಾನಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ವೇಳೆ ಮುಂಜಾನೆ ಗೆಳೆಯರ ಬಳಗದ ಸದಸ್ಯ ಧನ್ಯಕುಮಾರ್ ಮಾತನಾಡಿ, ಹೋಬಳಿ ತಾಲ್ಲೂಕು ರಾಜ್ಯ ದೇಶಗಳ ಮಟ್ಟದಲ್ಲಿ ಎಲ್ಲರಿಗೂ ಸ್ಪೂರ್ತಿಯಾಗಿ 74 ಇಳಿವಯಸ್ಸಿನಲ್ಲೂ ನವಯುವಕನಂತೆ ಸಾಧನೆಗೆ ಸಿದ್ದವಿರುವ ಆನಂದ್ ಅವರ ಕಾರ್ಯ ವೈಖರಿ ಶ್ಲಾಘನೀಯ ಎಂದರು ಇಂದಿನ ಯುವಕರಿಗೆ ಸ್ಪೂರ್ತಿಯಾಗಿರುವ ಆನಂದ್ ಅವರು ಅನೇಕ ಕ್ರೀಡಾಸಕ್ತರುನ್ನು ಬೆಳೆಸಿ ಪ್ರೋತ್ಸಾಹಿಸಿದ್ದಾರೆ ಹಲವು ಕ್ರೀಡಾಸಕ್ತರಿಗೆ ಕ್ರೀಡಾ ಉಪಕರಣ ಹಾಗೂ ಶೂ, ಬಟ್ಟೆ ಮತ್ತು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯುವ ಕ್ರೀಡೆಗಳಿಗೆ ತೆರಳಲು ಉಚಿತ ಪ್ರವಾಸ ಖರ್ಚು ಭರಿಸುತ್ತಿದ್ದರು. ಇಂತಹ ಅಮೋಘ ಸಾಧನೆ ಮಾಡಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಿಗೆ ಗೌರವಾರ್ಥವಾಗಿ…
ಮಧುಗಿರಿ: ಕೇಂದ್ರ ಸರ್ಕಾರವು ಇಂದಿನಿಂದ 15 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊವಿಡ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ಜಿಲ್ಲೆಯಲ್ಲಿಯೂ ಕಾರ್ಯಕ್ರಮ ನಡೆಯಿತು. ಶಾಸಕರಾದ ಎಂ.ವಿ.ವೀರಭದ್ರಯ್ಯ ಇಂದು ಮಧುಗಿರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕೊವಿಡ್ ಲಸಿಕೆ ಕಾರ್ಯಕ್ರಮದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನೇಶನ್ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು: ಬೆಂಗಳೂರಿನ ನಯನ ಸಭಾಂಗಣ ( ರವೀಂದ್ರ ಕಲಾಕ್ಷೇತ್ರ) ದಲ್ಲಿ ಲೇಖಕಿ ರೂಪಾ ಜಿ.ಎಂ. ರವರ ಚೊಚ್ಚಲ ಕಾದಂಬರಿ” ಬಂಧಗಳ ಬಲೆಯೊಳಗೆ ” ಕೃತಿಯನ್ನು ಕರ್ನಾಟಕ ರೈಲ್ವೇಸ್ ಐಪಿಎಸ್, ಎಡಿಜಿಪಿ ಭಾಸ್ಕರ್ ರಾವ್ ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿಗಳಾದ ಜಾಣಗೆರೆ ವೆಂಕಟರಾಮಯ್ಯ ಉದ್ಘಾಟನೆ ನೆರವೇರಿಸಿದರು. ಕೃತಿಯ ಪರಿಚಯವನ್ನು ಸಾಹಿತಿಗಳಾದ ಡಾ.ಬೇಲೂರು ರಘುನಂದನ್ ಮಾಡಿಕೊಟ್ಟರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಲಕ್ಷ್ಮಿ ಎಸ್ ಎ. ಗೋವಿಂದರಾಜು, ಪಿ.ರಾಜಶೇಖರ್, ಶಂಕರ್ ಬೆನ್ನೂರ್, ಸಂತೋಷ ಹುಣಸನಹಳ್ಳಿ, ದೇವರಾಜು ಚನ್ನಸಂದ್ರ, ಮಾಲತೇಶ್ ಮಾಳಮ್ಮನವರ್ ಉಪಸ್ಥಿತರಿದ್ದರು. ವರದಿ: ಆಂಟೋನಿ, ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಹೊಸ ವರ್ಷ ಪ್ರಾರಂಭ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ಮೈಸೂರಿನಲ್ಲಿ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. 300ರೂ.ಗಳ ವಿಶೇಷ ದರ್ಶನವೆಂದು ಹಣ ಪಡೆಯುತ್ತಿದ್ದು, ಆಡಳಿತ ಮಂಡಳಿಯ ವಿರುದ್ಧ ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ. ಹೊಸವರ್ಷದ ಪ್ರಯುಕ್ತ ನಿನ್ನೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಾಯಿಯ ದರ್ಶನಕ್ಕೆ ಆಗಮಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಕೊರೋನಾ ಹಿನ್ನೆಲೆಯಲ್ಲಿ ನಿರ್ಬಂಧವನ್ನು ವಿಧಿಸಲಾಗಿತ್ತು. ಈ ಬಾರಿ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ಯಾವುದೇ ಅಡ್ಡಿ ಇಲ್ಲದೇ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.ಹೊಸ ವರ್ಷದಲ್ಲಿ ಬೆಟ್ಟಕ್ಕೆ ಭಕ್ತರು ಬರುತ್ತಾರೆಂಬ ನಿರೀಕ್ಷೆಯಲ್ಲಿ 300ರೂ.ಗಳ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಳದ ಆಡಳಿತಾಕಾರಿ ಯತೀಂದ್ರ ಎಂಬವರು 300ರೂ.ಗಳ ವಿಶೇಷ ದರ್ಶನದ ರಸೀದಿ ನೀಡುತ್ತಿದ್ದು, ಇಷ್ಟೊಂದು ಹಣ ಯಾಕೆ ಕೊಡಬೇಕು? ಇದು ಸುಲಿಗೆಯಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದಾರೆ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ. ಆದರೆ ಶಾಸಕ ಜಿ.ಟಿ.ದೇವೇಗೌಡರನ್ನು ಸಂಪರ್ಕಿಸಿದಾಗ ಅವರು ನನಗೆ ಆ ವಿಷಯ…
ದೇಶಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 33,750 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ. 123 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಒಟ್ಟು 1,45,582 ಸಕ್ರಿಯ ಪ್ರಕರಣಗಳಿದ್ದು, ನಿನ್ನೆ 10,846 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ದೇಶದಲ್ಲಿ 3,42,95,407 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ ಒಂದು ದಿನದಲ್ಲಿ 123 ಜನ ಸೋಂಕಿತರು ಸಾವನ್ನಪ್ಪಿರುವುದು ಸೇರಿದಂತೆ ಈ ಮೂಲಕ ಒಟ್ಟು ದೇಶದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 4,81,893ಕ್ಕೆ ಏರಿಕೆಯಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿತ್ತು. ಆದರೆ ಕಳೆದ ಒಂದು ವಾರದಿಂದ ಸೋಂಕಿನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 3,194, ಮಹಾರಾಷ್ಟ್ರದಲ್ಲಿ 11,877, ಕರ್ನಾಟನದಲ್ಲಿ 1,187 ಪ್ರಕರಣಗಳು ಪತ್ತೆಯಾಗಿವೆ. ಶೇ.28ರಷ್ಟು ಕೋವಿಡ್ ಕೇಸ್ಗಳು ಮಹಾರಾಷ್ಟ್ರದಲ್ಲಿ ಕಂಡುಬಂದಿರುವುದು ಆತಂಕಕ್ಕೆ ಎಡೆಮಾಡಿದೆ. ಕೋವಿಡ್ ಜೊತೆಗೆ ಓಮಿಕ್ರಾನ್ ವೈರಸ್ ಸೋಂಕಿನ ಪ್ರಕರಣಗಳು ಕೂಡ…
ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ನೂತನ ವರ್ಷದ ಸಂಘದ ಕ್ಯಾಲೆಂಡರ್ ಮತ್ತು ಡೈರಿಯನ್ನು ಬೆಂಗಳೂರಿನ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ಹರಿಪ್ರಸಾದ್ ಚಲನಚಿತ್ರ ನಿರ್ಮಾಪಕರು ಹಾಗೂ ಅಮ್ಮ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರು ಎಸ್.ಸೋಮಶೇಖರ್ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು. ಪ್ರಖ್ಯಾತ ವೈದ್ಯರಾದ ಅಂತ ಡಾ.ರಕ್ಷಿತ್ ಗೌಡ (ಫಿಜಿಸಿಯನ್) ಅವರು ಮಾತನಾಡಿ, ಕರ್ನಾಟಕ ಸಂಪಾದಕ ಮತ್ತು ವರದಿಗಾರರ ಸಂಘದ ವೇದಿಕೆಯ ಮೇಲಿರುವ ಎಲ್ಲ ಪದಾಧಿಕಾರಿಗಳಿಗೆ ವಂದನೆಗಳನ್ನು ಸಲ್ಲಿಸುತ್ತಾ, ಈ ವೇದಿಕೆಗೆ ನಾನು ಚಿಕ್ಕವನಾದರೂ ನನ್ನ ಸೇವೆ ಮತ್ತು ಪ್ರಾಮಾಣಿಕತೆಯನ್ನು ಗುರುತಿಸಿರುವುದು ನನಗೆ ತುಂಬಾ ಸಂತೋಷದ ವಿಷಯ. ಪತ್ರಕರ್ತರು ಈ ದೇಶದ ಬೆನ್ನೆಲುಬು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೆದ್ದಿರಬಹುದು ಆದರೆ, ಈ ದೇಶದ ಪ್ರಧಾನಿ ಆಗಬೇಕಾದರೆ 50% ಪತ್ರಕರ್ತರ ಪರಿಶ್ರಮದಿಂದ ಎನ್ನಬಹುದು ಎಂದರು. ಇನ್ನೂ ಕೋವಿಡ್ 19 ಬಗ್ಗೆ ಮಾತನಾಡಿ, ಜನವರಿ ಮತ್ತು ಫೆಬ್ರವರಿ ಕೊನೆಯಲ್ಲಿ ಕೋವಿಡ್ 19 ಮೂರನೇ ಅಲೆ ಜಾಸ್ತಿಯಾಗುತ್ತಿದೆ.…
ಹಿರಿಯೂರು: ಹೊಸವರ್ಷದ ಆಚರಣೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರಸಭೆ ಅಧ್ಯಕ್ಷೆ ಶಂಶುನ್ನಿಸಾ ಅವರು ವಾರ್ಡ್ ನಂ 8ರ ಮಿರ್ಜಾ ಬಡಾವಣೆಯಲ್ಲಿ ಮಾಜಿ ಸಚಿವರಾದ ಡಿ.ಸುಧಾಕರ್ ನೀಡಿರುವಂತಹ ಹೊಸ ವರ್ಷದ ಕ್ಯಾಲೆಂಡರ್ ಗಳನ್ನು ಹಂಚುವ ಮೂಲಕಹೊಸ ವರ್ಷದ ಶುಭಾಶಯಗಳು ತಿಳಿಸಿದರು . ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಂಶುನ್ನಿಸಾ ಹಾಗೂ ಸಾದತ್ ಉಲ್ಲಾ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಉಪಸ್ಥಿತರಿದ್ದರು. ವರದಿ: ಮುರುಳಿಧರನ್ ಆರ್. ಹಿರಿಯೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ನಗರದ ಕರಿಬಸವೇಶ್ವರ ಸ್ವಾಮಿಯ ಮಠದಲ್ಲಿದ್ದ ಆನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಸ್ ಕಂಪೆನಿಗೆ ಮಾರಾಟ ಮಾಡುವ ವಿಫಲ ಯತ್ನ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಗರದ ಕರಿಬಸವೇಶ್ವರ ಸ್ವಾಮಿ ಮಠದಲ್ಲಿ ಸುಮಾರು, 29 ವರ್ಷಗಳಿಂದ ಇರುವ ಆನೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆ ಕೊಡಿಸುವ ನೆಪವೊಡ್ಡಿ ಬನ್ನೇರುಘಟ್ಟದ ಅರಣ್ಯ ಪ್ರದೇಶಕ್ಕೆ ಕರೆದೊಯ್ಯುವುದಾಗಿ ಹೇಳಿ, ಗುಜರಾತ್ ಮೂಲದ ಸರ್ಕಸ್ ಕಂಪೆನಿಗೆ ಮಾರಾಟ ಮಾಡಲು ಯತ್ನಿಸಿದ್ದಾರೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಆನೆಯನ್ನು ಲಾರಿಯಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ದಾಬಾಸ್ ಪೇಟೆ ಬಳಿ ಮಠದ ಸಿಬ್ಬಂದಿಯನ್ನು ಲಾರಿಯಿಂದ ಕೆಳಗಿಳಿಸಿ ಹಲ್ಲೆ ನಡೆಸಿ, ಕುಣಿಗಲ್ ಭಾಗದ ಹಳ್ಳಿಯೊಂದರಲ್ಲಿ ಬಚ್ಚಿಡಲಾಗಿತ್ತು ಎಂದು ಮಠದ ಸಿಬ್ಬಂದಿ ಆರೋಪಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರಸಭೆ ಅಭಿವೃದ್ಧಿಯಾಗ ಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯವಾದದ್ದು, ಸಾರ್ವಜನಿಕರು ಸಹಕಾರ ನೀಡಿ, ನಗರಸಭೆಗೆ ಕಟ್ಟಬೇಕಾದ ಅಗತ್ಯ ತೆರಿಗೆಗಳನ್ನು ಪಾವತಿ ಮಾಡಿದರೆ ಮಾತ್ರ ನಗರಸಭೆಯಿಂದ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್ ರವರು ಹೇಳಿದರು. ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಂಷುನ್ನೀಸಾರವರ ಅಧ್ಯಕ್ಷತೆಯಲ್ಲಿ ಹಿರಿಯೂರು ನಗರಸಭೆಯ 2022-23ನೇ ಸಾಲಿನ ಕರಡು ಆಯವ್ಯಯ ಪಟ್ಟಿ ತಯಾರಿಸುವ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಗರದಲ್ಲಿ ಬಹಳಷ್ಟು ಸಾರ್ವಜನಿಕರು ಬಹಳ ವರ್ಷಗಳಿಂದ ತಮ್ಮ ಮನೆಗಳ ಕಂದಾಯಗಳನ್ನು ಕಟ್ಟಿರುವುದಿಲ್ಲ, ಅನೇಕ ಉದ್ದಿಮೆದಾರರು ವರ್ತಕರು ತಮ್ಮ ಟ್ರೇಡ್ ಲೈಸನ್ಸ್ ಗಳನ್ನು ನವೀಕರಿಸಿರುವುದಿಲ್ಲ, ಅವುಗಳನ್ನು ಈಗ ಪಟ್ಟಿ ಮಾಡಲು ಹೇಳಿದ್ದೇನೆ, ಅವರಿಗೆ ನೋಟೀಸ್ ನೀಡುವ ಮೂಲಕ, ಕಂದಾಯ ವಸೂಲಾತಿ ಮಾಡಬೇಕಿದೆ ಎಂಬುದಾಗಿ ಅವರು ಹೇಳಿದರು. ಆದರೆ ನಮ್ಮಲ್ಲಿ ಈ ಎಲ್ಲಾ ಕೆಲಸ-ಕಾರ್ಯಗಳಿಗೆ ನೌಕರರ ಕೊರತೆಯಿದ್ದು, ಅಗತ್ಯ ಸಿಬ್ಬಂದಿ ಬೇಕಾಗಿದೆ,…
ಮಧುಗಿರಿ: ತಾಲ್ಲೂಕು, ಪುರವರ ಹೋಬಳಿ, ಬ್ಯಾಲ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಳಬಾಗಿಲಪಾಳ್ಯ ಗ್ರಾಮದಲ್ಲಿ ಹೊಸ ವರ್ಷದ ದಿನದಂದು ಗ್ರಾ.ಪಂ ಸದಸ್ಯೆ ರಾಧಮ್ಮ ಅವರ ನೇತೃತ್ವದಲ್ಲಿ ಕುಂದುಕೊರತೆಯ ಸಭೆ ನಡೆಯಿತು. ಈ ವೇಳೆ ನಿವೇಶನ, ಮಳೆಯಿಂದ ಕುಸಿದ ಮನೆಗಳ ಪರಿಹಾರ, ಪಿಂಚಣಿ, ಚರಂಡಿ, ಶುದ್ದನೀರು, ಪಡಿತರ ಚೀಟಿ ಇನ್ನಿತರೆ ಕೊಂದು ಕೊರತೆಗಳ ಬಗ್ಗೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಪುರವರ ಹೋಬಳಿ ಆರ್.ಐ. ರವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ ತಕ್ಷಣ ಸ್ಪಂದಿಸಿದ ಆರ್.ಐ ರವರು ಸ್ಥಳಕ್ಕೆ ಗ್ರಾಮ ಲೆಕ್ಕಿಗ ಶ್ರೀಧರ್ ರವರನ್ನು ಕಳುಹಿಸಿ ಮಹಜರ್ ಮಾಡಿಸಿ, ಸಮಸ್ಯೆಗಳನ್ನು ಪರಿಹರಿಸಲಾಗುವುದೆಂದು ಭರವಸೆ ನೀಡಿದರು. ಈ ವೇಳೆ ಗ್ರಾಮ ಸಹಾಯಕ ಮೂರ್ತಿ, ಗ್ರಾಮದ ಮಾಜಿ ಸದಸ್ಯ ಮಲ್ಲಿಕಾರ್ಜುನ್, ಗ್ರಾ.ಪಂ. ಸದಸ್ಯ ಅರುಣ,ವಕೀಲರಾದ ತಿಮ್ಮಣ್ಣ,ಮಂಜುನಾಥ್, ಅಗ್ರಹಾರ ವೆಂಕಟೇಶ್, ಹನುಮಂತಪುರ ತಿಮ್ಮರಾಜು, ಸೌಭಾಗ್ಯ, ಬೇಬಿ, ಆಶಾ, ರೂಪ, ರತ್ಮಮ್ಮ, ವೀದಭದ್ರಯ್ಯ, ಮಧು, ಮಲ್ಲಣ್ಣ, ನಾಗೇಂದ್ರ, ಇತರರು ಹಾಜರಿದ್ದರು. ನಮ್ಮತುಮಕೂರು.ಕಾಂನ ಕ್ಷಣ…