ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ನೂತನ ವರ್ಷದ ಸಂಘದ ಕ್ಯಾಲೆಂಡರ್ ಮತ್ತು ಡೈರಿಯನ್ನು ಬೆಂಗಳೂರಿನ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ಹರಿಪ್ರಸಾದ್ ಚಲನಚಿತ್ರ ನಿರ್ಮಾಪಕರು ಹಾಗೂ ಅಮ್ಮ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರು ಎಸ್.ಸೋಮಶೇಖರ್ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು.
ಪ್ರಖ್ಯಾತ ವೈದ್ಯರಾದ ಅಂತ ಡಾ.ರಕ್ಷಿತ್ ಗೌಡ (ಫಿಜಿಸಿಯನ್) ಅವರು ಮಾತನಾಡಿ, ಕರ್ನಾಟಕ ಸಂಪಾದಕ ಮತ್ತು ವರದಿಗಾರರ ಸಂಘದ ವೇದಿಕೆಯ ಮೇಲಿರುವ ಎಲ್ಲ ಪದಾಧಿಕಾರಿಗಳಿಗೆ ವಂದನೆಗಳನ್ನು ಸಲ್ಲಿಸುತ್ತಾ, ಈ ವೇದಿಕೆಗೆ ನಾನು ಚಿಕ್ಕವನಾದರೂ ನನ್ನ ಸೇವೆ ಮತ್ತು ಪ್ರಾಮಾಣಿಕತೆಯನ್ನು ಗುರುತಿಸಿರುವುದು ನನಗೆ ತುಂಬಾ ಸಂತೋಷದ ವಿಷಯ. ಪತ್ರಕರ್ತರು ಈ ದೇಶದ ಬೆನ್ನೆಲುಬು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೆದ್ದಿರಬಹುದು ಆದರೆ, ಈ ದೇಶದ ಪ್ರಧಾನಿ ಆಗಬೇಕಾದರೆ 50% ಪತ್ರಕರ್ತರ ಪರಿಶ್ರಮದಿಂದ ಎನ್ನಬಹುದು ಎಂದರು.
ಇನ್ನೂ ಕೋವಿಡ್ 19 ಬಗ್ಗೆ ಮಾತನಾಡಿ, ಜನವರಿ ಮತ್ತು ಫೆಬ್ರವರಿ ಕೊನೆಯಲ್ಲಿ ಕೋವಿಡ್ 19 ಮೂರನೇ ಅಲೆ ಜಾಸ್ತಿಯಾಗುತ್ತಿದೆ. ಆದ್ದರಿಂದ ಎಲ್ಲರೂ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಿ, ಗುಂಪುಸೇರದೇ ಸರ್ಕಾರದ ಸುರಕ್ಷಿತ ಕ್ರಮಗಳನ್ನು ನಾವು ಪಾಲಿಸಬೇಕಾಗಿದೆ ಎಂದರು.
ಚಲನಚಿತ್ರ ನಿರ್ಮಾಪಕ ಹಾಗೂ ಅಮ್ಮ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಬೆಂಗಳೂರು ಹರಿಪ್ರಸಾದ್ ಮಾತನಾಡಿ, ಹುಟ್ಟು ಮತ್ತು ಸಾವಿನ ಮಧ್ಯೆ ನಾವು ಏನು ಮಾಡಿದ್ದೀವಿ ಎನ್ನುವುದೇ ಮುಖ್ಯ. ಆ ಜೀವನವನ್ನು ನಾನು ಮಾಡಲು ಹೊರಟಿದ್ದೇನೆ ನಿಮ್ಮೆಲ್ಲರ ಬೆಂಬಲ ಹಾಗೂ ಸಹಕಾರ ನನ್ನ ಮೇಲೆ ಇರಲಿ ಎಂದು ತಿಳಿಸಿದರು.
ಸಂಘದ ಗೌರವಾಧ್ಯಕ್ಷರಾದ ಡಾ.ಭಾಸ್ಕರ್ ಮಾತನಾಡಿ, ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘವನ್ನು ತಿಪಟೂರಿನಲ್ಲಿ ಉದ್ಘಾಟನೆ ಮಾಡಬೇಕು ಎಂದು ನಾನು ನನ್ನ ಆತ್ಮೀಯ ಪತ್ರಕರ್ತರು ಗಣೇಶ್ ಅವರು ಸೇರಿ ಒಂದು ವಾರದಲ್ಲೇ ಸಂಘದ ಉದ್ಘಾಟನೆಯನ್ನು ಮಾಡಿದೆವು. ಅವತ್ತಿನ ಪರಿಶ್ರಮದಿಂದ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಇವತ್ತು ಈ ಸಂಘ ಹೆಚ್ಚು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿಕೊಂಡು ಜನಸಾಮಾನ್ಯರ ಸೇವೆಯನ್ನು ಮಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಗಣೇಶ್, ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ವಿಜಯಕುಮಾರ್, ಸಂಘದ ಉಪಾಧ್ಯಕ್ಷರಾದ ಬಳ್ಳೇಕಟ್ಟೆ ಶಂಕ್ರಪ್ಪ, ಸೋಮಶೇಖರ್ ಶಿಕ್ಷಕರು ಬಸವರಾಜ್ ವಕೀಲರು ಕೆ ಸದಾಶಿವಯ್ಯ ವಕೀಲರು ಸಂಘದ ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪಾಳು ವೆಂಕಟೇಶ್ ಉಪನ್ಯಾಸಕರು .ಗುರುಗದಹಳ್ಳಿ ಮಂಜುನಾಥ್ ಪತ್ರಕರ್ತರು ಸೇರಿದಂತೆ ಪ್ರಮುಖ ಮುಖಂಡರುಗಳು ಪತ್ರಕರ್ತರುಗಳು ಹಾಜರಿದ್ದರು.
ವರದಿ: ಮಂಜು ಗುರುಗದಹಳ್ಳಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy