Subscribe to Updates
Get the latest creative news from FooBar about art, design and business.
- ನವೆಂಬರ್ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ತುಮಕೂರು ಜಿಲ್ಲಾ ಪ್ರವಾಸ
- ತುಮಕೂರು | SSLC ಫಲಿತಾಂಶ ಸೇರಿದಂತೆ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು ಜಿಲ್ಲೆಯ ಹಲವು ಸಮಸ್ಯೆಗಳು!
- ಜಮೀನಿನ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ: ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಲೋಕಾಯುಕ್ತ ಬಲೆಗೆ
- ಬೀದರ್ | ದೇವರ ದರ್ಶನ ಮುಗಿಸಿ ಬರುತ್ತಿದ್ದ ವೇಳೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು
- ತಿಪ್ಪಯನದುರ್ಗ ಗ್ರಾಮದಲ್ಲಿ ಮಣ್ಣು ಹಗರಣ: ಪ್ರಶ್ನಿಸಿದಾಗ ಸ್ಥಳೀಯ ಶಾಸಕರ ಹೆಸರು ದುರ್ಬಳಕೆ!
- ಮೇಟಿಯವರ ನಿಧನ ನನಗೆ ವೈಯಕ್ತಿಕ ನಷ್ಟ: ಸಿಎಂ ಸಿದ್ದರಾಮಯ್ಯ
- ಅಶ್ಲೀಲ ಸಂದೇಶ ಕಳಿಸಿ ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ
- ಪರಿಶಿಷ್ಟ ಪಂಗಡಗಳನ್ನು ಕಾಂಗ್ರೆಸ್ ಕೇವಲ ಮತಬ್ಯಾಂಕ್ ಆಗಿ ಪರಿಗಣಿಸುತ್ತಿದೆ: ಬಿ.ವೈ. ವಿಜಯೇಂದ್ರ ಆರೋಪ
Author: admin
ಬೆಂಗಳೂರು: ರಾಜ್ಯದಲ್ಲಿರುವ ನಿರಾಶ್ರಿತ 72 ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡುವ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ದೆಹಲಿಯ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯ ಎಂಬವರು ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿ ಅಭಿಪ್ರಾಯ ಕೇಳಿತ್ತು. ಈ ಅರ್ಜಿಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ, ಬೆಂಗಳೂರಿನಲ್ಲಿ 72 ರೊಹಿಂಗ್ಯಾ ಮುಸ್ಲಿಮರು ವಾಸ ಮಾಡುತ್ತಿದ್ದು, ನಗರದ ವಿವಿಧೆಡೆಗಳಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳುವ ಯಾವುದೇ ಯೋಚನೆ ಇಲ್ಲ. ಅವರನ್ನು ಗಡಿಪಾರು ಮಾಡಲು ಕಾನೂನಿನಲ್ಲಿ ಕೂಡ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಜೊತೆಗೆ ರೊಹಿಂಗ್ಯಾ ಮುಸ್ಲಿಮರ ಗಡಿಪಾರಿಗೆ ಒತ್ತಾಯಿಸಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ ಗೆ ರಾಜ್ಯ ಬಿಜೆಪಿ ಸರ್ಕಾರ…
ನವದೆಹಲಿ: ಸರ್ಕಾರಿ ಉದ್ಯೋಗಗಳ ಬಡ್ತಿಯಲ್ಲಿ ಪರಿಶಿಷ್ಟ ಜಾತಿ(SC) ಪರಿಶಿಷ್ಟ ಪಂಗಡ(ST) ನೌಕರರಿಗೆ ಮೀಸಲಾತಿ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್, ಸಂಜೀವ ಖನ್ನಾ ಹಾಗೂ ಬಿ.ಆರ್.ಗವಾಯಿ ಇವರಿರುವ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದೆ. ನವದೆಹಲಿ: ಸರ್ಕಾರಿ ಉದ್ಯೋಗಗಳ ಬಡ್ತಿಯಲ್ಲಿ ಪರಿಶಿಷ್ಟ ಜಾತಿ(SC) ಪರಿಶಿಷ್ಟ ಪಂಗಡ(ST) ನೌಕರರಿಗೆ ಮೀಸಲಾತಿ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್, ಸಂಜೀವ ಖನ್ನಾ ಹಾಗೂ ಬಿ.ಆರ್.ಗವಾಯಿ ಇವರಿರುವ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದೆ. ಗ್ರೂಪ್ ‘ಎ’ ನಂತಹ ಉನ್ನತ ಹುದ್ದೆಗೇರುವುದು ಎಸ್ಸಿ ಹಾಗೂ ಎಸ್ಟಿ ನೌಕರರಿಗೆ ಬಹಳ ಕಷ್ಟ. ಇಂತಹ ಉನ್ನತ ಹುದ್ದೆಗಳಿಗೆ ಎಸ್ಟಿ, ಎಸ್ಟಿ ಹಾಗೂ ಒಬಿಸಿ ನೌಕರರನ್ನು ಭರ್ತಿ ಮಾಡುವುದಕ್ಕೆ ಅನುಕೂಲ ಕಲ್ಪಿಸುವಂತಹ ವಾಸ್ತವದಿಂದ ಕೂಡಿದ ಆಧಾರವನ್ನು ಸುಪ್ರೀಂಕೋರ್ಟ್ ಒದಗಿಸಬೇಕು ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ನ್ಯಾಯಾಲಯಕ್ಕೆ ಮನವಿ…
ಚೆನ್ನೈ: ತಮಿಳುನಾಡಿನಲ್ಲಿ ಮತ್ತೊಂದು ಪಟಾಕಿ ದುರಂತ ಸಂಭವಿಸಿದ್ದು, ಪಟಾಕಿ ಮಳಿಗೆಗೆ ಬೆಂಕಿ ಬಿದ್ದು 5 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಹಲವರು ಗಾಯಗೊಂಡಿದ್ದಾರೆ. ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಶಂಕರಪುರಂಪಟ್ಟಣದ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ., ಹಲವರಿಗೆ ಗಾಯ ಕೂಡ ಆಗಿದೆ. ಪಟಾಕಿ ಸ್ಫೋಟದಿಂದ ಸಮೀಪದ ಕಟ್ಟಡದವರು ಕೂಡ ಆತಂಕಕ್ಕೀಡಾಗಿದ್ದಾರೆ. ಘಟನೆ ಹಿನ್ನೆಲೆ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಗಂಭೀರ ಗಾಯಗೊಂಡವರಿಗೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಇನ್ನೂ ಘಟನೆ ನಡೆದ ತಕ್ಷಣವೇ ಈ ಸಂಬಂಧ ಮಾಹಿತಿ ಪಡೆದ ತಮಿಳುನಾಡು ಸಿಎಂ ಎಂ.ಕೆ.ಸ್ಟ್ಯಾಲಿನ್ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.
ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ವಕೀಲ ರಾಜೇಶ್ ಭಟ್ ಎಂಬಾತನಿಗೆ ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪದಲ್ಲಿ ನಗರದ ಬೋಂದೆಲ್ ನಿವಾಸಿ ಕೆ. ಅನಂತ ಭಟ್ ಎಂಬಾತನನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲೈಂಗಿಕ ಕಿರುಕುಳದ ಆರೋಪಿ ರಾಜೇಶ್ ಭಟ್ ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ 48 ವರ್ಷ ವಯಸ್ಸಿನ ಅನಂತ್ ಭಟ್, ರಾಜೇಶ್ ಭಟ್ ತಲೆಮರೆಸಿಕೊಳ್ಳಲು ಸಹಕರಿಸಿದ್ದ ಎಂದು ಆರೋಪಿಸಲಾಗಿದೆ. ಆರೋಪಿ ರಾಜೇಶ್ ಭಟ್ ಬಳಸುತ್ತಿದ್ದ ಕಾರು ಮತ್ತು ಮೊಬೈಲ್ ಫೋನ್ ನ್ನು ಅಜ್ಞಾತ ಸ್ಥಳದಲ್ಲಿ ಬಚ್ಚಿಟ್ಟು ಪೊಲೀಸರ ತನಿಖೆಯನ್ನು ಹಾದಿ ತಪ್ಪಿಸಲು ಅನಂತ್ ಭಟ್ ಯತ್ನಿಸಿದ್ದ ಎಂದು ಹೇಳಲಾಗಿದೆ. ಮಂಗಳೂರಿನ ಖ್ಯಾತ ವಕೀಲ ರಾಜೇಶ್ ಭಟ್ ತನ್ನ ಕಚೇರಿಯಲ್ಲಿ ತರಬೇತಿಗಾಗಿ ಬಂದಿದ್ದ ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂಬಂಧ ಪ್ರಕರಣ ದಾಖಲಾದ ಬಳಿಕ ಆರೋಪಿ ರಾಜೇಶ್ ಭಟ್ ತಲೆ ಮರೆಸಿಕೊಂಡಿದ್ದಾನೆ.
ಬೆಂಗಳೂರು: ಕಂಬಳಿ ಹೊದ್ದುಕೊಳ್ಳಲು ಯೋಗ್ಯತೆ ಬೇಕು, ನೀನು ಎಂದಾದರೂ ಕುರಿ ಕಾಯ್ದಿದ್ದೀಯಾ? ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ನೀಡಿದ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರು ಮುಸ್ಲಿಮರ ಧಾರ್ಮಿಕ ಟೋಪಿ ಹಾಕಿಕೊಂಡಿರುವ ಫೋಟೋವನ್ನು ಶೇರ್ ಮಾಡಿರುವ ಸಿ.ಟಿ.ರವಿ, ಕಂಬಳಿ ಹಾಕಲು ಕುರುಬ ಜಾತಿಯವರೇ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ, ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೇ ಎಂದು ತಿರುಗೇಟು ನೀಡಿದ್ದಾರೆ. ಇನ್ನೂ ಸಿದ್ದರಾಮಯ್ಯನವರ ಹೇಳಿಕೆಗೆ ಹೆಚ್.ವಿಶ್ವನಾಥ್ ಕೂಡ ವಿರೋಧ ವ್ಯಕ್ತಪಡಿಸಿದ್ದು, ಕಾಗಿನೆಲೆ ಪೀಠಕ್ಕೆ ಯಾರೇ ಹೋದರೂ ಕಂಬಳಿ ಹೊದಿಸಿ ಗೌರವ ತೋರುತ್ತಾರೆ. ಅದೇ ರೀತಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಹೊದಿಸಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದಲ್ಲ. ಸಿದ್ದರಾಮಯ್ಯ, ಇದನ್ನು ಒಂದು ದೊಡ್ಡ ಅಪರಾಧ ಎನ್ನುವಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಂಟ್ವಾಳ: ಬಿಜೆಪಿ ಮುಖಂಡನ ಮನೆಗೆ ನುಗ್ಗಿದ ಬಜರಂಗದಳದ ಕಾರ್ಯಕರ್ತರೆನ್ನಲಾಗಿರುವ ತಂಡವೊಂದು ತಲ್ವಾರ್ ನಿಂದ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಬಡಗಬೆಳ್ಳೂರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ನಿವಾಸಿ, ಬಿಜೆಪಿ ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರು ಅವರ ಮೇಲೆ ಬಜರಂಗದಳದ ಕಾರ್ಯಕರ್ತರು ಎನ್ನಲಾಗಿರುವ ತಂಡವೊಂದು ದಾಳಿ ನಡೆಸಿದೆ ಎನ್ನುವ ಆರೋಪ ಕೇಳಿ ಬಂದಿದೆ. ನಿತಿನ್ ಬಡಗಬೆಳ್ಳೂರು, ನಿಶಾಂತ್ ಬೆಗಬೆಳ್ಳೂರು, ಪವನ್ ಕುಮ್ಡೇಲ್ ಮತ್ತಿತರರು ತಲ್ವಾರ್ ದಾಳಿ ನಡೆಸಿದವರಾಗಿದ್ದಾರೆ ಎಂದು ಹೇಳಲಾಗಿದೆ. ದಾಳಿ ವೇಳೆ ತಡೆಯಲು ಬಂದ ಪ್ರಕಾಶ್ ಅವರ ತಾಯಿ ಹಾಗೂ ಅಣ್ಣನಿಗೆ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗೊಂಡಿರುವ ಪ್ರಕಾಶ್ ಅವರನ್ನು ಬಂಟ್ವಾಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾಂಗ್ಲಿ: ಭಾರತದ ದಲಿತ ಚಳುವಳಿ ಮತ್ತು ಅಂಬೇಡ್ಕರ್ ವಾದದ ಸಂಶೋಧಕಿ ಹಾಗೂ ಬರಹಗಾರ್ತಿ ಡಾ.ಗೇಲ್ ಓಮ್ವೇಡ್ ಅಲ್ಪಕಾಲದ ಅನಾರೋಗ್ಯದ ಬಳಿಕ ಬುಧವಾರ ಕಾಸೆಂಗಾಂವ್ ನಲ್ಲಿ ನಿಧನರಾಗಿದ್ದು, ತಮ್ಮ 81 ವರ್ಷ ವಯಸ್ಸಿನ ಬದುಕಿಗೆ ವಿದಾಯ ಹೇಳಿದ್ದಾರೆ. ಅಮೆರಿಕದಲ್ಲಿ ಜನಿಸಿದ್ದರೂ, ಭಾರತಕ್ಕೆ ಬಂದ ಬಳಿಕ ಅಂಬೇಡ್ಕರ್ ಅವರ ವಿಚಾರಗಳಿಂದ ಆಕರ್ಷಿತರಾದ ಅವರು, ದಲಿತರು, ಬಡವರು, ರೈತರು, ಮಹಿಳೆಯರು ಮತ್ತು ಇತರ ಸಾರ್ವಜನಿಕ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಮೆರಿಕದಲ್ಲಿ ತಮ್ಮ ಉನ್ನತ ವ್ಯಾಸಂಗ ಮುಗಿಸಿ ಭಾರತಕ್ಕೆ ಬಂದಿದ್ದ ಅವರು, 1983ರಲ್ಲಿ ಭಾರತೀಯ ಪ್ರಜೆಯಾದರು. 1980ರ ದಶಕ ಆರಂಭದಲ್ಲಿ ಶ್ರಮಿಕ್ ಮುಕ್ತಿ ದಳವನ್ನು ಸ್ಥಾಪಿಸಿದರು. ಅಮೆರಿಕದ ಮಿನ್ನೇಸೋಟ ರಾಜ್ಯದ ಮಿನ್ನಿಯಾಪೋಲಿಸ್ ನಲ್ಲಿ ಜನಿಸಿದ್ದರೂ, ಭಾರತದಕ್ಕೆ ಬಂದು ಅಂಬೇಡ್ಕರ್ ವಾದದಿಂದ ಪ್ರೇರಣೆಗೊಂಡು, ಇಲ್ಲಿಯ ಪ್ರಜೆಯೇ ಆಗಿ ಬದಲಾದ ಅವರು ದಲಿತರ, ಬಡವರ, ಸಾರ್ಜನಿಕರ ಸೇವೆಯಲ್ಲಿ ತೊಡಗಿದ್ದರು. ಡಾ.ಓಮ್ವೇಡ್ ಅವರ ಪತಿ ಡಾ.ಭರತ್ ಪಟಂಕರ್, ಪುತ್ರಿ ಪ್ರಾಚಿ, ಅಳಿಯ ತೇಜಸ್ವಿ ಹಾಗೂ ಮೊಮ್ಮಗಳು ನಿಯಾ ಅಮೇರಿಕದಲ್ಲಿ ನೆಲೆಸಿದ್ದಾರೆ. ಡಾ.ಓಮ್ವೇಡ್ತ್…
ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ವಕೀಲ ರಾಜೇಶ್ ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ. ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಧ್ರುವ, ಮಹಾಲಕ್ಷ್ಮೀ ಹೆಗ್ಡೆ, ಶಿವಾನಂದ ಅವರಿಗೆ ಜಾಮೀನು ಮಂಜೂರು ಮಾಡಿಸಿಕೊಳ್ಳಲು ಹಾಗೂ ರಾಜೇಶ್ ತಲೆ ಮರೆಸಿಕೊಳ್ಳಲು ಸಹಕರಿಸಿ ಬಂಧಿಸಲ್ಪಟ್ಟಿದ್ದ ಅನಂತ್ ಭಟ್ ಜಾಮೀನಿನ ಮೇಲೆ ಗುರುವಾ ಬಿಡುಗಡೆಗೊಂಡಿದ್ದಾರೆ. ಆಗಸ್ಟ್ 8ರಂದು ತನ್ನ ಕಚೇರಿಯಲ್ಲಿ ತರಬೇತಿ ಪಡೆಯುತ್ತಿದ್ದ ಯುವತಿಯನ್ನು ತನ್ನ ಚೇಂಬರ್ ಗೆ ಕರೆದು ಅಸಭ್ಯವಾಗಿ ವರ್ತಿಸಿ, ಲೈಂಗಿಕವಾಗಿ ಬಳಸಿಕೊಳ್ಳಲು ರಾಜೇಶ್ ಭಟ್ ಯತ್ನಿಸಿದ್ದ, ಈ ವೇಳೆ ಯುವತಿಯು ಸ್ಥಳದಿಂದ ತಪ್ಪಿಸಿಕೊಂಡಿದ್ದಳು ಎನ್ನಲಾಗಿದೆ.
ಬ್ಯಾಂಕ್ ಆಫ್ ಬರೋಡಾದಲ್ಲಿ ಸೀನಿಯರ್ ರಿಲೇಶನ್ ಶಿಪ್ ಮ್ಯಾನೇಜರ್, ಇ-ವೆಲ್ತ್ ರಿಲೇಶನ್ ಶಿಪ್ ಮ್ಯಾನೇಜರ್, ಪ್ರಾಂತ್ಯ ಮುಖ್ಯಸ್ಥ, ಗ್ರೂಪ್ ಹೆಡ್, ಪ್ರಾಡಕ್ಟ್ ಹೆಡ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಪ್ರಕಟಿಸಲಾಗಿದೆ. ಸೀನಿಯರ್ ರಿಲೇಶನ್ ಶಿಪ್ ಮ್ಯಾನೇಜರ್- (407 ಹುದ್ದೆಗಳು), ಎ-ವೆಲ್ತ್ ರಿಲೇಶನ್ ಶಿಪ್ ಮ್ಯಾನೇಜರ್-(50 ಹುದ್ದೆಗಳು), , ಪ್ರಾಂತ್ಯ ಮುಖ್ಯಸ್ಥ-(44 ಹುದ್ದೆಗಳು), ಗ್ರೂಪ್ ಹೆಡ್-(06 ಹುದ್ದೆಗಳು), ಪ್ರಾಡಕ್ಟ್ ಹೆಡ್-(01 ಹುದ್ದೆ), ಮುಖ್ಯಸ್ಥ-(01 ಹುದ್ದೆ), ಡಿಜಿಟಲ್ ಸೇಲ್ಸ್ ಮ್ಯಾನೇಜರ್-(01 ಹುದ್ದೆಗಳು), ಐಟಿ ಫಂಕ್ಷನಲ್ ಅನಾಲಿಸ್ಟ್ ( 01 ಹುದ್ದೆ)ಗಳು ಖಾಲಿ ಇವೆ. ಅಭ್ಯರ್ಥಿಗಳು ಕನಿಷ್ಠ 24ರಿಂದ ಗರಿಷ್ಠ 45 ವರ್ಷದೊಳಗಿನವರಾಗಿರಬೇಕು. ಇನ್ನೂ ಸಾಮಾನ್ಯ ಅಭ್ಯರ್ಥಿ, ಒಬಿಸಿ ಅಭ್ಯರ್ಥಿಗಳು ಅರ್ಜಿ ಶುಲ್ಕ 600 ರೂ. ಪಾವತಿಸಬೇಕು. ಎಸ್ ಸಿ, ಎಸ್ ಟಿ, ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್, ಮೊಬೈಲ್ ವ್ಯಾಲೆಟ್ ಮೂಲಕವೂ…
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಜಿಮ್ ಸೆಂಟರ್ ಗಳನ್ನು ಬಂದ್ ಮಾಡಿ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಲು ನಿರ್ಧರಿಸಿವೆ ಎಂದು ವರದಿಯಾಗಿದೆ. ಇಂದು ಬೆಳಗ್ಗೆ ಎಂದಿನಂತೆಯೇ ಪುನೀತ್ ರಾಜ್ ಕುಮಾರ್ ಅವರು ಸುಮಾರು ಎರಡು ಗಂಟೆಗಳ ಕಾಲ ಜಿಮ್ ನಲ್ಲಿ ಕಸರತ್ತು ನಡೆಸಿದ್ದಾರೆ. ಸುಮಾರು 10 ಗಂಟೆಯ ವೇಳೆಗೆ ಅವರಿಗೆ ಭಾರೀ ಪ್ರಮಾಣದಲ್ಲಿ ಹೃದಯಾಘಾತವಾಗಿದೆ. ಜಿಮ್ ವೇಳೆ ದೇಹದಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜವಾಗಿದೆ. ಹಾಗಾಗಿ ಇದು ಸಣ್ಣಪುಟ್ಟ ನೋವು ಅಂದುಕೊಂಡು ಪುನೀತ್ ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಆದರೂ ಕುಟುಂಬದ ವೈದ್ಯರ ಬಳಿಗೆ ಹೋಗಿ ತೋರಿಸಿದ್ದಾರೆ. ಈ ವೇಳೆ ವೈದ್ಯರಿಗೆ ಪರಿಸ್ಥಿತಿಯ ಗಂಭೀರತೆ ತಿಳಿದು ಬಂದಿದ್ದು, ಅವರು ತಕ್ಷಣವೇ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಪುನೀತ್ ರಾಜ್ ಕುಮಾರ್ ಅವರ ಹಾರ್ಟ್ ಬೀಟ್ ತೀವ್ರವಾಗಿ ಕುಸಿದಿತ್ತು ಎನ್ನಲಾಗಿದೆ. ಆ ಬಳಿಕ…