Subscribe to Updates
Get the latest creative news from FooBar about art, design and business.
- ಸರಗೂರು: ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷರಾಗಿ ಮನುಗನಹಳ್ಳಿ ಎಂ.ಪಿ. ಮಂಜುನಾಥ್ ನೇಮಕ
- ತುಮಕೂರು: ವಿಮೆ ಹಣ, ಮದ್ಯದ ಅಮಲಿಗೆ ನಡೆದಿದ್ದ 3 ಭೀಕರ ಕೊಲೆ ಕೇಸ್ ಭೇದಿಸಿದ ಪೊಲೀಸರು; 7 ಮಂದಿ ಬಂಧನ
- ಉತ್ತಮ ಆರೋಗ್ಯಕ್ಕೆ ರಕ್ತ ಪರೀಕ್ಷೆ ಸಹಕಾರಿ: ಮುರಳೀಧರ್ ಹಾಲಪ್ಪ
- ತುಮಕೂರು: ಆನ್ಲೈನ್ ಕೌನ್ಸಿಲಿಂಗ್ ಮೂಲಕ 41 ಸರ್ಕಾರಿ ನೌಕರರ ವರ್ಗಾವಣೆ
- ವೃದ್ದೆಯನ್ನು ಕೊಲೆ ಮಾಡಿ ಕೇರಳ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
- ಸರಗೂರು: ಕೆಎಸ್ ಆರ್ ಟಿಸಿ ಬಸ್ ಹರಿದು ಮಹಿಳೆಗೆ ಗಂಭೀರ ಗಾಯ; ಆಕ್ರೋಶ
- ಸರಗೂರು: ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ಕಾರ್ಯಕ್ರಮ ಚಾಲನೆ
- ಭಯ ಬೇಡ, ಪೊಲೀಸರನ್ನು ಸಮುದಾಯದ ಭಾಗವಾಗಿ ಕಾಣಿ: ಸಿಪಿಐ ಶ್ರೀನಿವಾಸ್ ಡಿಜೆ
Author: admin
ತುಮಕೂರು: ಗಣೇಶನ ಹಬ್ಬದ ಸಂಭ್ರಮ ಎಲ್ಲೆಲ್ಲೂ ಕಂಡು ಬರುತ್ತಿದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಸುಗಮವಾಗಿ ಹಬ್ಬ ಆಚರಿಸಲು ಅನುಕೂಲವಾಗುವಂತೆ ತುಮಕೂರು ಜಿಲ್ಲಾ ಪೊಲೀಸ್ ಕೆಲವೊಂದು ಮಾರ್ಗದರ್ಶನ, ಸೂಚನೆಗಳನ್ನ ನೀಡಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಮಯದಲ್ಲಿ ಅನುಸರಿಸಬೇಕಾದ ಸೂಚನೆಗಳು: ಗಣೇಶ ಪ್ರತಿಷ್ಠಾಪನೆ ಮಾಡುವ ಮೊದಲು ಸಂಬಂಧಿಸಿದ ಪೊಲೀಸ್ ಠಾಣೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯುವುದು. ಪಿಓಪಿಗಳಿಂದ ಮಾಡಲ್ಪಟ್ಟ ವಿಗ್ರಹಗಳ ಬಳಕೆಯನ್ನು ತಪ್ಪಿಸಿ ಪರಿಸರಸ್ನೇಹಿ ವಸ್ತುಗಳಿಂದ ಮಾಡಲ್ಪಟ್ಟ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದು. ಗಣೇಶ ಮಂಟಪದಲ್ಲಿ ಅಥವಾ ಮೆರವಣಿಗೆ ಸಮಯದಲ್ಲಿ ಅಶ್ಲೀಲ ನೃತ್ಯ, ಅಶ್ಲೀಲ ಚಿತ್ರಗೀತೆಗಳು, ಸಂಭಾಷಣೆ ಅಥವಾ ಸ್ಥಬ್ದ ಚಿತ್ರಗಳನ್ನು ಹಾಕಬಾರದು ಹಾಗೂ ಕೋಮು ಪ್ರಚೋದಕ/ಉದ್ರೇಕಕಾರಿ ಘೋಷಣೆಗಳನ್ನು ಕೂಗುವಂತಿಲ್ಲ. ಸದಾಕಾಲ ಮಂಟಪದಲ್ಲಿ ಸ್ವಯಂ ಸೇವಕರು ಇರಬೇಕು. ಗಣೇಶ ಮಂಟಪಗಳಿಂದ ವಾಹನ ಸಂಚಾರಕ್ಕೆ ಅದರಲ್ಲೂ ಕೂಡ ಸಾರ್ವಜನಿಕರ ಸಂಚಾರಕ್ಕೆ ಮತ್ತು ಅಗ್ನಿಶಾಮಕ ವಾಹನಗಳ ಸಂಚಾರಕ್ಕೆ ಅಡೆತಡೆಯಾಗುವಂತೆ ಮಂಟಪಗಳನ್ನು ನಿರ್ಮಿಸಕೂಡದು ಹಾಗೂ ಅಗ್ನಿ ಅನಾಹುತಗಳಿಗೆ ಆಸ್ಪದವಾಗದಂತೆ ಮಂಟಪಗಳನ್ನು ನಿರ್ಮಿಸುವುದು. ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ವಿದ್ಯುತ್ ಕಂಬ ಹೈಟೆನ್ಷನ್ ಕೇಬಲ್ ಗಳ…
ಮಧುಗಿರಿ : ಶಾಸಕ ಕೆ.ಎನ್.ರಾಜಣ್ಣನವರನ್ನು ಸಂಪುಟದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಮಿಡಿಗೇಶಿ ಗ್ರಾ.ಪಂ. ಸದಸ್ಯರು ರಾಜೀನಾಮೆ ನೀಡಿದ್ದು ಇಂದು ಇಡೀ ಗ್ರಾಪಂ ಪೂರ್ತಿ 11 ಸದಸ್ಯರು ಅಧ್ಯಕ್ಷರಾದಿಯಾಗಿ ವೈಯಕ್ತಿಕವಾಗಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ತಾಲೂಕಿನ ಮಿಡಿಗೇಶಿ ಹೋಬಳಿಯ ಮಿಡಿಗೇಶಿ ಗ್ರಾ.ಪಂ. ಆಡಳಿತ ಮಂಡಳಿಯೇ ಪೂರ್ತಿ ರಾಜೀನಾಮೆ ಪತ್ರವನ್ನು ಉಪವಿಭಾಗಾಧಿಕಾರಿಗಳ ಕಚೇರಿಗೆ ನೀಡಿದ್ದಾರೆ. ಇದೇ ವೇಳೆ ಮಿಡಿಗೇಶಿ ಗ್ರಾಪಂ ಮಾಜಿ ಅಧ್ಯಕ್ಷ ಎಸ್ ಎನ್ ರಾಜು ಮಾತನಾಡಿ, ಕಾಂಗ್ರೆಸ್ ಹೈ ಕಮಾಂಡ್ ರಾಜಣ್ಣನವರ ವಿಚಾರದಲ್ಲಿ ಆತುರಪಟ್ಟಿದೆ. ರಾಜಣ್ಣ ಇದ್ದರಷ್ಟೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅವರು ಹೇಳಿದ ಮಾತನ್ನು ತಿರುಚಿ ರಾಹುಲ್ ಗಾಂಧಿಯವರಿಗೆ ತಪ್ಪು ಮಾಹಿತಿ ನೀಡಿದ ಕಾರಣ ಕೆ.ಎನ್.ಆರ್. ವಜಾಗೊಂಡರು ಎಂದು ಆರೋಪಿಸಿದರು. ಆದರೆ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿಯವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಕೇಸು ಹಾಕಿಸಿದ್ದ ಅಮಿತ್ ಷಾ ಜೊತೆ ವೇದಿಕೆ ಹಂಚಿಕೊಂಡವರು, ಸದನದಲ್ಲಿ ಕಾಂಗ್ರೆಸ್ ವಿರೋಧಿಸುವ ಆರ್ ಎಸ್ ಎಸ್ ಗೀತೆಯನ್ನು ಹಾಡುವವರು ಹಾಗೂ ಇತರೆ ಒಳ ರಾಜಕೀಯ ಮಾಡುವ ಜೊತೆಗೆ ಕುಂಭ…
ಮಧುಗಿರಿ: ಸದಾ ಸಮುದಾಯದ ಅಭಿವೃದ್ಧಿಗಾಗಿ ಸದಾ ಮಂದಿರುವೆ ಹಾಗೂ ಶೀಘ್ರದಲ್ಲಿ ವೀರಶೈವ ಲಿಂಗಾಯಿತ ಸಮುದಾಯ ಭವನವನ್ನು ಕಟ್ಟಿಸಿಕೊಡಲಾಗುವುದು ಎಂದು ಕೇಂದ್ರ ಜಲ ಶಕ್ತಿ ಮತ್ತು ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ಭರವಸೆ ನೀಡಿದರು. ಪಟ್ಟಣದ ಕನ್ನಡ ಭವನದ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ಭಾನುವಾರ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯಿತ ಒಂದು ಇತಿಹಾಸವುಳ್ಳ ಸಮಾಜ ವಾಗಿದ್ದು, ಸಮಾಜದಲ್ಲಿರುವ ನೂನ್ಯತೆಗಳನ್ನು ಸರಿಪಡಿಸಿಕೊಂಡು ಒಂದೇ ನಾಣ್ಯದ ಎರಡು ಮುಖಗಳಾಗಿ ಸಮಾಜ ಬೆಳೆಯಬೇಕಾಗಿದೆ. ಸಮಾಜದ ಅಭಿವೃದ್ಧಿಗಾಗಿ ಸದಾ ಬದ್ಧವಾಗಿರುವೆ ಶೀಘ್ರದಲ್ಲೇ ಸಮುದಾಯ ಭವನವನ್ನು ಕಟ್ಟಿಕೊಡಲಾಗುವುದು ಎಂದು ಹೇಳಿದರು. ಮೋದಿ ದೇಶದ ಭವಿಷ್ಯದ ಆಸ್ತಿ ಎಲ್ಲಾ ವರ್ಗದವರನ್ನು ಸಮಾನವಾಗಿ ನೋಡುವಂತಹ ಮಹಾನ್ ವ್ಯಕ್ತಿ, ಮೋದಿಯವರ ಕಾಳಜಿಯಿಂದ 10,000 ವೈದ್ಯಕೀಯ ಸೀಟುಗಳು ಈ ವರ್ಷದಲ್ಲೇ ಹೆಚ್ಚುವರಿ ಆಗಲಿದೆ ಇದರಿಂದ ಬಡವರಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಸಮಾಜದ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ…
ಬೀದರ್ : ಅತಿವೃಷ್ಟಿ ಪೀಡಿತ ಪ್ರದೇಶದ ಪ್ರತಿ ಎಕರೆಗೆ ಸರಕಾರದಿಂದ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ಶಾಸಕ ಪ್ರಭು ಚೌವ್ಹಾಣ್ ಒತ್ತಾಯಿಸಿದರು. ಔರಾದ್ (ಬಿ) ಹಾಗೂ ಕಮಲಗನರ ತಾಲ್ಲೂಕಿನ ಗ್ರಾಮಗಳಾದ ನಾಮಾನಾಯಕ್ ತಾಂಡಾ, ಬಾವಲಗಾಂವ, ಚೊಂಡಿಮುಖೇಡ್, ಚಿಕ್ಲಿ(ಯು) ತಾಂಡಾ, ಅಕನಾಪೂರ, ಗಂಗನಬೀಡ, ದಾಬಕಾ, ಮುತಖೇಡ್, ನಂದಿ ಬಿಜಲಗಾಂವ, ಚಿಮ್ಮೇಗಾಂವ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಮಳೆಯಿಂದಾದ ಹಾನಿಯನ್ನು ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಔರಾದ್ (ಬಿ) ತಹಶೀಲ್ದಾರ್ ಮಹೇಶ್ ಪಾಟೀಲ್, ಕಮಲನಗರ ತಹಶೀಲ್ದಾರ್ ಅಮಿತಕುಮಾರ್ ಕುಲಕರ್ಣಿ, ಔರಾದ ಹಾಗೂ ಕಮಲಗನರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್, ಹಣಮಂತ್ ಕೌಟಗೆ, ಪಂಚಾಯತ್ ರಾಜ್ ಇಲಾಖೆಯ ಎಇಇ ಸುನೀಲ್ ಚಿಲ್ಲರ್ಗೆ, ಲೋಕೋಪಯೋಗಿ ಇಲಾಖೆಯ ಎಇಇ ಪ್ರೇಮಸಾಗರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಮಾರುತಿ ರಾಠೋಡ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ರಂಗೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,…
ಬೀದರ್: ಜಿಲ್ಲೆಯ ಕಮಲನಗರ ತಾಲೂಕಿನ ಹೊರಂಡಿ ಗ್ರಾಮದಲ್ಲಿ ಸಾಹಿತ್ಯ ರತ್ನ ಲೋಕಶಾಹಿರ ಅಣ್ಣಾಭಾವು ಸಾಠೆ ಅವರ 105ನೇ ಜಯಂತ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಮಾದಿಗ ಸಮುದಾಯದ ಯುವ ಮುಖಂಡ ಸುಧಾಕರ್ ಕೊಳ್ಳುರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಣ್ಣಾಭಾವು ಸಾಠೆ ಅವರ ಸಾಹಿತ್ಯ ಕಥೆ ಕಾದಂಬರಿಗಳು ಇಡೀ ವಿಶ್ವ ವಿಖ್ಯಾತವಾಗಿದೆ. ಅವರ ಕಾದಂಬರಿಗಳ ಮೇಲೆ ಅನೇಕ ರಾಷ್ಟ್ರಗಳಲ್ಲಿ ಅಧ್ಯಯನಗಳ ನಡೆಸಿ ಡಾಕ್ಟರೇಟ್ ಪದವಿ ಪಡೆಯುತ್ತಿದ್ದಾರೆ. ಮಾದಿಗ ಸಮುದಾಯದ ಯುವಕರು ಶಿಕ್ಷಕರಾಗಬೇಕು. ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಮತ್ತು ಎಲ್ಲರೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸ ಸೌಹಾರ್ದತೆಯಿಂದ ಬದುಕಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಬಾಬುರವ ಪಾಟೀಲ ವಹಿಸಿಕೊಂಡು ಮಾತನಾಡಿದರು, ಪಾಂಡುರಂಗ ಸೂರ್ಯವಂಶಿ ಉಪನ್ಯಾಸ ಮಂಡಿಸಿದರು, ದಿಲೀಪ್ ಬಿರಾದಾರ, ರಾಜಕುಮಾರ್ ಕೊಂಡೆ, ಶಾಂಗಶೆಟ್ಟಿ, ದಿಲೀಪ ಡೊಂಗಳೆ, ಶರತ, ಶಾಲಿವನ್ ಬಿರಾದರ್, ತುಳಸಿರಾಮ್ ಜಕ್ಕತೆ, ಗೋಪಾಲ್ ಗಾಯಕ್ವಾಡ್, ಚಂದ್ರಕಾಂತ್ ಸೂರ್ಯವಂಶಿ, ಶಿಕಂದರ, ದೇವೇಂದ್ರ, ಅನಿಲ, ನಾಗನಾಥ್ ಗಾಯಕೋಡ್, ಸುದರ್ಶನ್, ಅಂಬಾದಾಸ, ಮುಂತಾದರೂ ಉಪಸ್ಥಿತರಿದ್ದರು. ವರದಿ: ಅರವಿಂದ…
ತಿಪಟೂರು: ಕಟ್ಟಕಡೆಯ ಸಾರ್ವಜನಿಕರಿಗೆ ಬೇಗನೆ ಅನುಕೂಲ ಮತ್ತು ಸಹಾಯ ಪಡೆಯಲು ಸಹಕಾರಿ ಕ್ಷೇತ್ರ ಎಷ್ಟೋ ಜನರ ಆಪದ್ಬಾಂಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಗುರುಮಲ್ಲಿಕಾರ್ಜುನ ಸ್ವಾಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಮತ್ತು ತಮ್ಮಡಿಹಳ್ಳಿ ವಿರಕ್ತಮಠಧ್ಯಕ್ಷರಾದ ಶ್ರೀ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ನಗರದ ಗೊರಗೊಂಡನಹಳ್ಳಿ ಶ್ರೀ ಅಭಿನವ ಸದನದ ಆವರಣದಲ್ಲಿ ಶ್ರೀ ಗುರುಮಲ್ಲಿಕಾರ್ಜುನ ಸ್ವಾಮಿ ವಿವಿಧೋದ್ದೇಶ ಪತ್ತಿನ ಸಹಕಾರ ಸಂಘ ನಿಯಮಿತದ 2024–25 ನೇ ಸಾಲಿನ 14ನೇ ವರ್ಷದ ಸರ್ವ ಸದಸ್ಯರುಗಳ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಭಾರತ ದೇಶ ಸಂಸ್ಕೃತಿ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆಗೆ ಹೆಸರುವಾಸಿಯಾಗಿದೆ. ಅದರಲ್ಲೂ ಕರ್ನಾಟಕ ರಾಜ್ಯ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಚಾಪು ಮೂಡಿಸಿ, ಸಾರ್ವಜನಿಕರಿಗೆ ಸ್ಪಂದಿಸುವಲ್ಲಿ ಮಹತ್ತರ ಬೆಳವಣಿಗೆ ಸಾಧಿಸಿದೆ. ನಾವುಗಳು ನೊಂದವರಲ್ಲಿ ಮತ್ತು ಬೆಂದವರಲ್ಲಿ ದೇವರನ್ನು ಕಾಣುತ್ತಾ ಸೇವೆಗೆ ಮುಡಿಪಾಗಿದ್ದೇವೆ. ನಿಮ್ಮದೇ ಹಣವನ್ನು ದುರುಪಯೋಗಪಡಿಸಿಕೊಳ್ಳದೆ ಸಹಕಾರಿಯ ಬೆಳವಣಿಗೆಗೆ ಸಹಕರಿಸಿ ಎಂದು ತಿಳಿಸಿದರು. ಕುಮಾರ್ ಆಸ್ಪತ್ರೆ ವೈದ್ಯ ಡಾ.ಜಿ.ಎಸ್.ಶ್ರೀಧರ್ ಮಾತನಾಡಿ,…
ಕಲಬುರಗಿ: ಗುಟ್ಕಾ ತಿನ್ನಬೇಡ ಎಂದು ಅಜ್ಜಿ ಬುದ್ಧಿ ಹೇಳಿದ್ದಕ್ಕೆ ಬಾಲಕನೊಬ್ಬ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಶನಿವಾರ ನಡೆದಿದೆ. ರೋಹಿತ್ ಮಣ್ಣಾಂಕಲಗಿ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ರೋಹಿತ್ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ದಮಯಂತಿ ಎಂಬ ಅಜ್ಜಿ ತನ್ನ ಮೊಮ್ಮಗನನ್ನು ಕಳೆದ ಏಳೆಂಟು ವರ್ಷಗಳಿಂದ ಸಾಕಿ ಸಲುಹಿ, ವಿದ್ಯಾಭ್ಯಾಸ ಕೊಡಿಸುತ್ತಿದ್ದಳು. ಅಜ್ಜಿಗೆ ಮೊಮ್ಮಗ ಗುಟ್ಕಾ ತಿನ್ನುವ ವಿಚಾರ ಆತನ ಸ್ನೇಹಿತರಿಂದ ಗೊತ್ತಾಗಿದ್ದು, ತಿನ್ನಬೇಡಾ ಎಂಬ ಬುದ್ಧಿಮಾತುಗಳನ್ನು ಹೇಳಿದ್ದಾರೆ. ಬುದ್ಧಿವಾದದ ಮಾತುಗಳನ್ನು ಹೇಳಿದ ಒಂದೇ ಕಾರಣಕ್ಕಾಗಿ, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ನಟ ದರ್ಶನ್ ಅವರ ಡೆವಿಲ್ ಸಿನಿಮಾದ `ಇದ್ರೆ ನೆಮ್ದಿಯಾಗ್ ಇರ್ಬೇಕ್ʼ ಹಾಡು ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಹಾಡಿನ ಬಿಡುಗಡೆಗೆ ದರ್ಶನ್ ಅಭಿಮಾನಿಗಳು ಹಲವು ದಿನಗಳಿಂದ ಕಾಯುತ್ತಿದ್ದರು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ದೀಪಕ್ ಬ್ಲೂ ಹಾಡಿಗೆ ಧ್ವನಿಯಾಗಿದ್ದಾರೆ. ಆಗಸ್ಟ್ 15ರಂದು ಈ ಹಾಡು ಬಿಡುಗಡೆ ಆಗಬೇಕಿತ್ತು. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಕಾರಣದಿಂದಾಗಿ, ಆಗಸ್ಟ್ 14ರಂದು ದರ್ಶನ್ ಮತ್ತೆ ಜೈಲುಪಾಲಾದರು. ಇಂದು ಈ ಹಾಡನ್ನು ರಿಲೀಸ್ ಮಾಡಲಾಗಿದೆ. ಚಿತ್ರದ ನಿರ್ದೇಶಕ ಪ್ರಕಾಶ್ ವೀರ್, ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ದರ್ಶನ್ ಜೊತೆ ಚರ್ಚಿಸಿ ಇಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಎಂಬ RSS ಗೀತೆಯ ಮೊದಲ ಕೆಲವು ಸಾಲುಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದನದಲ್ಲಿ ಹಾಡಿದ ನಂತರ, ಆಡಳಿತಾರೂಢ ಕಾಂಗ್ರೆಸ್ ಶಾಸಕ ಎಚ್.ಡಿ.ರಂಗನಾಥ್ ಕೂಡ ಭಾನುವಾರ RSS ಗೀತೆಯ ಆರಂಭಿಕ ಸಾಲುಗಳನ್ನು ಹಾಡಿ ಹೊಗಳಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಂಗನಾಥ್, RSS ಗೀತೆ ‘ನಮಸ್ತೆ ಸದಾ ವತ್ಸಲೇ’ದ ಆರಂಭಿಕ ಸಾಲುಗಳನ್ನು ಹಾಡಿದರು. ಈ ಗೀತೆ ‘ತುಂಬಾ ಒಳ್ಳೆಯ ಹಾಡು’. ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಅದನ್ನು ಹಾಡಿದ ನಂತರ ನಾನು ಅದನ್ನು ಕೇಳಿದೆ’ ಎಂದು ಹೇಳಿದರು. ‘ನಾನು ಅದರ ಅರ್ಥವನ್ನು ಓದಿದ್ದೇನೆ. ನಾವು ಹುಟ್ಟಿದ ಭೂಮಿಗೆ ನಮಸ್ಕರಿಸಬೇಕು ಎಂದು ಅದು ಹೇಳುತ್ತದೆ. ಅದರಲ್ಲಿ ನನಗೆ ಯಾವುದೇ ತಪ್ಪಿಲ್ಲ. ನಮ್ಮದು ಜಾತ್ಯತೀತ ಪಕ್ಷ ಮತ್ತು ನಾವು ಇತರರಿಂದ ಒಳ್ಳೆಯದನ್ನು ಸ್ವೀಕರಿಸಬೇಕು’ ಎಂದು ಹೇಳಿದರು. ಬಿಜೆಪಿಯನ್ನು ಟೀಕಿಸಿದ ಅವರು, ಬಲಪಂಥೀಯರು ಜಾತಿ ಮತ್ತು ಧರ್ಮವನ್ನು ವಿಭಜಿಸಲು ಒತ್ತಾಯಿಸುತ್ತಾರೆ. ಅದನ್ನು ನಾವು ವಿರೋಧಿಸುತ್ತೇವೆ. ಅವರ ಸಿದ್ಧಾಂತವು ನಮ್ಮ ಸಿದ್ಧಾಂತಕ್ಕೆ…
ತುಮಕೂರು: ಚೆನ್ನೈ–ಬೆಂಗಳೂರು ರಸ್ತೆ ಕಾರಿಡಾರ್ ನಂತೆ ತುಮಕೂರು–ಬೆಂಗಳೂರು ರೈಲ್ವೆ ಕಾರಿಡಾರ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶನಿವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು–ಬೆಂಗಳೂರು ನಡುವೆ ನಾಲ್ಕು ಪಥದ ರೈಲ್ವೆ ಹಳಿ ನಿರ್ಮಾಣಕ್ಕೆ ಸರ್ವೆ ಆಗಿದ್ದು, ಡಿಪಿಆ ಆಗಬೇಕಾಗಿದೆ ಎಂದು ಹೇಳಿದರು. ನಗರದ ಹೊರವಲಯದ ತಿಮ್ಮರಾಜನಹಳ್ಳಿ ಬಳಿ ಬೃಹತ್ ರೈಲ್ವೆ ಗೋದಾಮು ನಿರ್ಮಾಣ ಸಂಬಂಧ ಕೆಐಎಡಿಬಿ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಪಾವಗಡ-ಮಡಕಶಿರಾ-ಮಧುಗಿರಿ ಮಾರ್ಗದ ರೈಲು ಮಾರ್ಗದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಹಾಗೆಯೇ ತುಮಕೂರು-ಊರುಕೆರೆ, ಸಿರಾ- ತಾವರೆಕೆರೆ ಮಾರ್ಗದ ರೈಲು ಮಾರ್ಗ ಕಾಮಗಾರಿಗೆ ಈಗಾಗಲೇ ಟೆಂಡರ್ ಆಗಿದೆ. ಮು೦ದಿನ 10-15 ವರ್ಷ ಗಳಲ್ಲಿ ತುಮಕೂರು ಬೆಂಗಳೂರಿಗೆ ಸರಿಸಮನಾಗಿ ಬೆಳವಣಿಗೆಯಾಗುತ್ತದೆ. ಇದಕ್ಕೆ ಅಗತ್ಯ ಇರುವ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ರೂ. 4,500 ಕೋಟಿ ವೆಚ್ಚದ ಹಾಸನ, ತಿಪಟೂರು, ಚಿಕ್ಕನಾಯಕನಹಳ್ಳಿ, ಹಿರಿಯೂರು ಎಕ್ಸ್‌ಪ್ರೆಸ್…