Subscribe to Updates
Get the latest creative news from FooBar about art, design and business.
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ನೀರಿನ ಹಾಹಾಕಾರ: ಸ್ಥಳಕ್ಕೆ ತಾಲೂಕು ಅಧಿಕಾರಿಗಳ ಭೇಟಿ, ಭರವಸೆ
- ಸರಗೂರು: ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷರಾಗಿ ಮನುಗನಹಳ್ಳಿ ಎಂ.ಪಿ. ಮಂಜುನಾಥ್ ನೇಮಕ
- ತುಮಕೂರು: ವಿಮೆ ಹಣ, ಮದ್ಯದ ಅಮಲಿಗೆ ನಡೆದಿದ್ದ 3 ಭೀಕರ ಕೊಲೆ ಕೇಸ್ ಭೇದಿಸಿದ ಪೊಲೀಸರು; 7 ಮಂದಿ ಬಂಧನ
- ಉತ್ತಮ ಆರೋಗ್ಯಕ್ಕೆ ರಕ್ತ ಪರೀಕ್ಷೆ ಸಹಕಾರಿ: ಮುರಳೀಧರ್ ಹಾಲಪ್ಪ
- ತುಮಕೂರು: ಆನ್ಲೈನ್ ಕೌನ್ಸಿಲಿಂಗ್ ಮೂಲಕ 41 ಸರ್ಕಾರಿ ನೌಕರರ ವರ್ಗಾವಣೆ
- ವೃದ್ದೆಯನ್ನು ಕೊಲೆ ಮಾಡಿ ಕೇರಳ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
- ಸರಗೂರು: ಕೆಎಸ್ ಆರ್ ಟಿಸಿ ಬಸ್ ಹರಿದು ಮಹಿಳೆಗೆ ಗಂಭೀರ ಗಾಯ; ಆಕ್ರೋಶ
- ಸರಗೂರು: ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ಕಾರ್ಯಕ್ರಮ ಚಾಲನೆ
Author: admin
ಬೆಂಗಳೂರು: ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕನನ್ನು ಅಪಹರಿಸಿ, ಬರ್ಬರವಾಗಿ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಹುಳಿಮಾವು ಠಾಣೆ ಪೊಲೀಸರು ಗುಂಡು ಹಾರಿಸಿ, ಬಂಧಿಸಿದ್ದಾರೆ. ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಎಂಬ ಇಬ್ಬರು ಆರೋಪಿಗಳು ಬಂಧಿತ ಆರೋಪಿಗಳಾಗಿದ್ದಾರೆ. ಬೆಂಗಳೂರಿನ ಅರಕೆರೆಯ ಶಾಂತಿನಿಕೇತನ ಲೇಔಟ್ ನ ನಿಶ್ಚಿತ್(13) ಮತ್ತು ಆತನ ಪೋಷಕರು ವಾಸವಾಗಿದ್ದರು. ನಗರದ ಪ್ರತಿಷ್ಠಿತ ಕಾಲೇಜ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ನಿಶ್ಚಿತ್ ತಂದೆಯ ಬಳಿ ಆರೋಪಿ ಗುರುಮೂರ್ತಿ ಹೆಚ್ಚುವರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಆಗಾಗ ಮನೆಗೆ ಹೋಗಿ ಬರುತ್ತಿದ್ದ ಗುರುಮೂರ್ತಿ, ನಿಶ್ಚಿತ್ ನನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಡುವ ಸಂಚು ರೂಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬುಧವಾರ ಸಂಜೆ ಟ್ಯೂಷನ್ ಮುಗಿಸಿ ಸೈಕಲ್ ನಲ್ಲಿ ಮನೆಯತ್ತ ಬರುತ್ತಿದ್ದ ನಿಶ್ಚಿತ್ ನನ್ನು ಆರೋಪಿಗಳು ಅಪಹರಿಸಿದ್ದರು. ಟ್ಯೂಷನ್ ಮುಗಿದು ಸುಮಾರು ಗಂಟೆಗಳಾದರೂ ಮನೆಗೆ ಬಾರದ ಮಗನ ಬಗ್ಗೆ ಪೋಷಕರು ಆಂತಕದಿಂದ ಹುಡುಕಾಟ ನಡೆಸಿದ್ದರು. ಬಳಿಕ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಷ್ಟೊತ್ತಿಗಾಗಲೇ ಬಾಲಕನ ತಂದೆಗೆ ಕರೆ ಮಾಡಿದ್ದ ಆರೋಪಿಗಳು…
ಬೆಂಗಳೂರು: ನಗರದಲ್ಲಿ ಆಟೋ ಪ್ರಯಾಣ ದರ ದುಬಾರಿಗೊಂಡಿದ್ದು, ಪರಿಷ್ಕೃತ ದರ ಶುಕ್ರವಾರದಿಂದ ಜಾರಿಗೆ ಬಂದಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಅವರ ಆದೇಶದಂತೆ ಆಟೋದಲ್ಲಿ ಪ್ರಯಾಣಿಲುವ ಜನರು ಮೊದಲ 2 ಕಿಮೀ (ಕನಿಷ್ಠ ದರ) ಪ್ರಯಾಣಕ್ಕೆ 36 ರೂ.ಪಾವತಿಸಬೇಕಿದೆ. ಬಸ್, ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಳದ ನಂತರ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಆಟೋ ಚಾಲಕರು ಮತ್ತು ಸಂಘಟನೆಗಳು ಆಗ್ರಹಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಕಳೆದ ಜು.14 ರಂದು ಆಟೋ ಪ್ರಯಾಣ ದರ ಹೆಚ್ಚಿಸಿ ಆದೇಶಿಸಿದ್ದರು. ಈ ಆದೇಶವು ಇಂದು ಜಾರಿಗೆ ಬಂದಿದೆ. ಆದೇಶದ ಪ್ರಕಾರ ಮೊದಲ 2 ಕಿಮೀ ಪ್ರಯಾಣದ ಮೊತ್ತವು 30 ರು.ನಿಂದ 36 ರು.ಗೆ ಹೆಚ್ಚಳವಾಗಿದ್ದು, ಉಳಿದಂತೆ ನಂತರದ ಪ್ರತಿ ಕಿಮೀ ದರವನ್ನು 15 ರೂ.ನಿಂದ 18ರೂ.ಗೆ ಹೆಚ್ಚಿಸಲಾಗಿದೆ. ಕಾಯುವಿಕೆ ದರವನ್ನು ಮೊದಲ 5 ನಿಮಿಷಕ್ಕೆ ಉಚಿತ ಮತ್ತು 5 ನಿಮಿಷದ ನಂತರದ ಪ್ರತಿ 15 ನಿಮಿಷದ…
ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ವಲಯದ ಕುರಂಕೋಟೆ ಗ್ರಾಮದ ಶ್ರೀ ದೊಡ್ಡಕಾಯಪ್ಪ (ಆಂಜನೇಯ) ಸ್ವಾಮಿ ದೇವಾಲಯದ ಗುಂಡು ಟೋಪಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ ವತಿಯಿಂದ ಗಿಡ ನಾಟಿ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕ್ಷೇತ್ರದ ಶ್ರೀ ದೊಡ್ಡಕಾಯಪ್ಪ (ಆಂಜನೇಯ) ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ನಿರ್ದೇಶಕ ಪ್ರವೀಣ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕುರಂಕೋಟೆ ಗ್ರಾಮದ ದೇವಾಲಯದ ಆವರಣದ ಗುಂಡು ಟೋಪಿನಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಸುಮಾರು 2 ಲಕ್ಷದ 80 ಸಾವಿರ ರೂಗಳ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾರ್ಯ ಮಾಡಲಾಗಿತ್ತು. ಪ್ರತಿ ವರ್ಷ ಟ್ರಸ್ಟ್ ವತಿಯಿಂದ ದಶ ಲಕ್ಷ ಗಿಡಗಳನ್ನ ನಾಟಿ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಿರ್ದೇಶಕರಾದ ಪ್ರವೀಣ್ ತಿಳಿಸಿದರು. ನಂತರ ಮಾತನಾಡಿದ ಜನ ಜಾಗೃತಿ ವೇದಿಕೆಯ ರಾಜೇಶ್ವರಿ, ಸಂಘದ ಧ್ಯೇಯೋದ್ದೇಶ…
ಸರಗೂರು: ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಗುರುವಾರದಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿ.ಆರ್.ಧ್ರುವನಾರಾಯಣ್ ರವರ 64ನೇ ಹುಟ್ಟುಹಬ್ಬವನ್ನು ಸರಳವಾಗಿ ಕೆಕ್ ಕಟ್ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಚರಣೆ ಮಾಡಲಾಯಿತು. ನಂತರ ಮಾತನಾಡಿದ ಪಪಂ ಸದಸ್ಯ ಶ್ರೀನಿವಾಸರವರು ಸರಗೂರು ತಾಲೂಕನ್ನು ಧ್ರುವನಾರಾಯಣ್ ರವರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಘೋಷಣೆ ಮಾಡಿಸಿದರು. ದಿ ಮಾಜಿ ಶಾಸಕ ಚಿಕ್ಕಮಾದುರವರು ಜೊತೆಗೂಡಿ ಸಾಕಷ್ಟು ಎರಡು ತಾಲ್ಲೂಕನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದರು. ನಂತರ ಶಾಸಕ ಅನಿಲ್ ಕುಮಾರ್ ರವರ ಶಾಸಕರಾಗಲು ಶ್ರಮ ಪಟ್ಟಿದರು. ಅವರು ಅಧಿಕಾರಿ ಇಲ್ಲದ ಸಮಯದಲ್ಲಿ ತಾಲೂಕಿನ ಜನತೆಗೆ ಕೆಲಸ ಕಾರ್ಯಗಳು ಮಾಡಿಕೊಂಡು ಬರುತ್ತಿದರು. ಕಾಯಕಯೋಗಿ ಎಂದು ಹೆಸರು ಪಡದುಕೊಂಡಿದ್ದರು. ಅವರು ಇವಾಗ ಕೂಡ ನಮ್ಮ ಜೊತೆಯಲ್ಲಿ ಇದ್ದರೆ ಎಂದು ಭಾವನೆ ಇದೆ ಎಂದರು. ತಾಲೂಕಿನ ಜನರ ಮನೆ ಮಾತಾಗಿದೆ ಧ್ರುವನಾರಾಯಣ್ ಹೆಸರು. ಏಕೆಂದರೆ ವಯಸ್ಸಾದರಿಂದ ಸಣ್ಣ ಪುಟ್ಟ ಮಕ್ಕಳವರೆಗೆ ಗೊತ್ತು. ಅವರು ಧ್ರುವತಾರೆ ಕಣ್ಮರೆಯಾಗಿ ಇಂದಿಗೆ ಮೂರು ವರ್ಷಗಳ…
ಸರಗೂರು: ಲಂಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ 2022–25 ರ ಅವಧಿಯಲ್ಲಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಮಾದೇವ ಹಾಗೂ ಉಪಾಧ್ಯಕ್ಷರಾಗಿ ಪದ್ಮ ಸುರೇಶ್ ಆಯ್ಕೆಗೊಂಡರು. ತಾಲೂಕಿನ ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಂಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ ಹಾಗೂ ನೂತನ ಎಸ್ಡಿಎಂಸಿ ಆಯ್ಕೆ ಪ್ರಕ್ರಿಯೆ ನಡೆಸಿ ನಂತರ ಗ್ರಾಮದ ಹಿರಿಯರ ಪೋಷಕರ ಸಮ್ಮುಖದಲ್ಲಿ ಬುಧವಾರದಂದು ಆಯ್ಕೆ ಮಾಡಲಾಯಿತು ಎಂದು ಶಾಲೆಯ ಮುಖ್ಯ ಶಿಕ್ಷಕಿ ಶ್ವೇತ ತಿಳಿಸಿದರು. ಮನುಗನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಂಕೆ ರಮೇಶ್ ಮಾತನಾಡಿ, ಇಡೀ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲಾಭಿವೃದ್ಧಿ ಯೋಜನೆಯನ್ನು ತಯಾರಿಸುವುದು, ಶಾಲೆಯ ವಾರ್ಷಿಕ ಚಟುವಟಿಕೆಗಳ ನೀಲನಕ್ಷೆ ರೂಪಿಸುವುದು ಹಾಗೂ ಶೈಕ್ಷಣಿಕ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಅದನ್ನು ಅನುಪಾಲನೆ ಮಾಡುವ ಜವಾಬ್ದಾರಿ ಎಸ್ ಡಿಎಂಸಿ ಮೇಲಿದೆ ಎಂದು ಹೇಳಿದರು. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಪೋಷಕರು ಸಾಮಾನ್ಯವಾಗಿ ಬಡವರು, ದಿನವಿಡೀ ದುಡಿಯುವವರು. ಅವರಿಗೆ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ…
ಸರಗೂರು: ಇಂದಿನ ದಿನಗಳಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಸಂಘಟನೆಗಳು ಕಾರ್ಯಚಟುವಟಿಕೆಗಳನ್ನು ರೂಪಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ಎಚ್.ಡಿ. ಕೋಟೆ ಮತ್ತು ಸರಗೂರು ಪತ್ರಕರ್ತರ ಸಂಘದ ವತಿಯಿಂದ ಮೈಸೂರು ನಗರದ ಲಲಿತ ಮಹಲ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ತಾಲ್ಲೂಕಿನ ಮಾಹಿತಿಯನ್ನು ಕೆಲವರು ಪತ್ರಕರ್ತರು ಎಂದು ಹೇಳಿ ಪಡೆದುಕೊಳ್ಳುತ್ತಾರೆ, ಆದರೆ ಆ ಮಾಹಿತಿ ಯಾವ ಪತ್ರಿಕೆಗಳಲ್ಲೂ ಪ್ರಕಟಗೊಂಡಿರುವುದಿಲ್ಲ, ಅಂತಹ ನಕಲಿ ಪತ್ರಕರ್ತರನ್ನು ಮಟ್ಟ ಹಾಕಬೇಕು ಎಂದು ಕರೆ ನೀಡಿದರು. ಎಚ್.ಡಿ. ಕೋಟೆ ತಾಲ್ಲೂಕಿನ ಪತ್ರಕರ್ತರ ಬಹುದಿನದ ಬೇಡಿಕೆಯ ರೀತಿ ಇಂದು ಎಚ್.ಡಿ. ಕೋಟೆ ಪಟ್ಟಣದ ಕನಕ ಭವನದ ಪಕ್ಕದಲ್ಲಿ 60*40 ಅಳತೆಯ ಸಿಎ ನಿವೇಶನವನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ತಂದೆಯವರು ರಾಜಕಾರಣಕ್ಕೆ ಬಾರದಂತೆ ವಿಧ್ಯಾಭ್ಯಾಸದತ್ತ ನಮ್ಮನ್ನು ನಡೆಸುತ್ತಿದ್ದರು, ಆದರೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಶಾಸಕ…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ನೂರಾರು ಹತ್ಯೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಮೂರನೇ ದಿನವಾದ ಇಂದು ನಡೆಯುತ್ತಿರುವ ಉತ್ಖನನ ಕಾರ್ಯಾಚರಣೆಯಲ್ಲಿ 6ನೇ ಸ್ಥಳದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ. ದೂರುದಾರ ಗುರುತಿಸಿದ ಸ್ಥಳ ಸಂಖ್ಯೆ 6 ರಲ್ಲಿ ಭಾಗಶಃ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿವೆ ಎಂದು ತಿಳಿದು ಬಂದಿವೆ. ಎಸ್ ಐಟಿ ದಳ ನೇತ್ರಾವತಿ ನದಿಯ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಸಾಕ್ಷಿ–ದೂರುದಾರರ ಸಮ್ಮುಖದಲ್ಲಿ 6ನೇ ಸ್ಥಳದಲ್ಲಿ ಶೋಧ ಕಾರ್ಯವನ್ನು ಪ್ರಾರಂಭಿಸಿತು. ಎಸ್ ಐಟಿಯು ಧರ್ಮಸ್ಥಳದ ಕಾಡುಪ್ರದೇಶದಲ್ಲಿ ಗುರುತಿಸಲಾದ ಪಾಯಿಂಟ್ ನಂಬರ್ 6 ರಲ್ಲಿ ಹಿಟಾಚಿ ಯಂತ್ರವನ್ನು ಬಳಸಿ ಉತ್ಖನನ ಕಾರ್ಯವನ್ನು ಕೈಗೊಂಡಿತು. ಈ ಸ್ಥಳದಲ್ಲಿ ನಡೆದ ಒಂದೂವರೆ ಗಂಟೆಗಳ ತೀವ್ರ ಶೋಧದ ನಂತರ, ಮೂಳೆ ರೀತಿಯ ವಸ್ತು ಪತ್ತೆಯಾಗಿದೆ. ನಂತರ ಆ ವಸ್ತುವನ್ನು ಎಚ್ಚರಿಕೆಯಿಂದ ಸಂಗ್ರಹಿಸಿ, ಫಾರೆನ್ಸಿಕ್ ವಿಶ್ಲೇಷಣೆಗಾಗಿ ರವಾನಿಸಲಾಗಿದೆ. ಈ ಕಳೇಬರವು ಮಾನವನದ್ದೇ ಎಂಬುದನ್ನು ಖಚಿತಪಡಿಸಲು ಡಿಎನ್ ಎ ಪರೀಕ್ಷೆ ಸೇರಿದಂತೆ ವೈಜ್ಞಾನಿಕ ವಿಶ್ಲೇಷಣೆ ನಡೆಯಲಿದೆ. ನಮ್ಮತುಮಕೂರಿನ…
ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಹಾಗೂ ನಟ ಪ್ರಥಮ್ ಸಮರ ಸಾರಿದ್ದಾರೆ. ಈ ವಿಚಾರವಾಗಿ ಪ್ರಥಮ್, ನಟಿ ರಮ್ಯಾ ಹಲವಾರು ಹೇಳಿಕೆ ನೀಡಿದ್ದಾರೆ. ದರ್ಶನ್ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ನಟ ದರ್ಶನ್ ಶಕ್ತಿಪೀಠ ಕಾಮಾಕ್ಯ ದೇಗುಲಕ್ಕೆ ವಿಜಯಲಕ್ಷ್ಮೀ ಜೊತೆಗೆ ಭೇಟಿ ನೀಡಿದ್ದಾರೆ. ನಟ ದರ್ಶನ್ ವಿರುದ್ಧದ ಆರೋಪಗಳಿಗೆ ಪತ್ನಿ ವಿಜಯಲಕ್ಷ್ಮೀ ತಿರುಗೇಟು ನೀಡಿದ್ದಾರೆ. ಕಾಮಾಕ್ಯ ದೇಗುಲದಲ್ಲಿ ಪತಿ ದರ್ಶನ್ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಜಯಲಕ್ಷ್ಮೀ, ‘’ಹೆಚ್ಚು ಜನರು ನಿಮ್ಮನ್ನು ಕೆಳಕ್ಕೆ ತಳ್ಳಲು ಪ್ರಯತ್ನಿಸಿದರೆ, ದೇವರು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತಾನೆ. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಬರೆದುಕೊಂಡಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಎಂಬ ನಟಿ ರಮ್ಯಾ ಅವರ ಪೋಸ್ಟ್ ಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಕಾಮೆಂಟ್, ಮೆಸೇಜ್ ಮಾಡಿದ್ದಾರೆ ಎಂದು ರಮ್ಯಾ ಆರೋಪಿಸಿದ್ದರು. ಅತ್ತ ನಟ ಪ್ರಥಮ್ ತನ್ನ ಮೇಲೆ ದರ್ಶನ್ ಫ್ಯಾನ್ಸ್ ಜೀವ ಬೆದರಿಕೆಯೊಡ್ಡಿದ್ದಾರೆ…
ಮಂಗಳೂರು: ಧರ್ಮಸ್ಥಳ ಸಾಕ್ಷಿ ದೂರುದಾರ ಗುರುತು ಪಡಿಸಿದ ಸ್ಥಳಗಳ ಪೈಕಿ ಮೊದಲನೇ ಗುರುತಿನ ಸ್ಥಳವನ್ನು ಅಗೆಯುವ ವೇಳೆ ಸಾಕ್ಷಿಗಳು ಲಭಿಸಿರುವ ಬಗ್ಗೆ ವರದಿಯಾಗಿದೆ. ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್ ಅವರು ಈ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಮಂಗಳವಾರದ ಕಾರ್ಯಾಚರಣೆಯ ವೇಳೆ ಸುಮಾರು 2.5 ಅಡಿ ಆಳದಲ್ಲಿ ಕೆಂಪು ಬಣ್ಣದ ರವಿಕೆ, PAN ಕಾರ್ಡ್ ಹಾಗೂ ATM ಕಾರ್ಡ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಎಸ್ ಐಟಿಯು ಈ ಬೆಳವಣಿಗೆಯ ನಂತರ ತಕ್ಷಣ ಸ್ಥಳದ 10 ಅಡಿ ಆಳದವರೆಗೆ ಉತ್ಖನನ ಕಾರ್ಯಾಚರಣೆಯನ್ನು ಮುಂದುವರಿಸುವ ನಿರ್ಧಾರ ತೆಗೆದುಕೊಂಡಿದ್ದು, ಇದು ಅವರ ವೃತ್ತಿಪರ ಬದ್ಧತೆಯನ್ನು ತೋರಿಸುತ್ತದೆ. ಈ ಕಾರ್ಯವು ಶ್ರಮದಾಯಕವಾದರೂ, ಯಾವುದೇ ಸಾಕ್ಷ್ಯವನ್ನು ಕಡೆಗಣಿಸದೆ ಸಮಗ್ರವಾಗಿ ಪರಿಶೀಲಿಸುವ ದೃಢ ಸಂಕಲ್ಪ ಮಾಡಿರುವ ಎಸ್ ಐಟಿಯ ಕಾರ್ಯವೈಖರಿಯು ಶ್ಲಾಘನೀಯ ಎಂದು ವಕೀಲ ಮಂಜುನಾಥ್ ಎನ್ ಹೇಳಿದ್ದಾರೆ. ಪತ್ತೆಯಾಗಿರುವ PAN ಕಾರ್ಡ್…
ನವದೆಹಲಿ: ಪಿಎಂ- ಕಿಸಾನ್ ಯೋಜನೆಯ 20ನೇ ಕಂತಿನ 20,500 ಕೋಟಿ ರೂ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 2ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದರಿಂದ ದೇಶ 9.7 ಕೋಟಿ ರೈತರಿಗೆ ಸಹಾಯವಾಗಲಿದೆ. 2019ರಲ್ಲಿ ಆರಂಭವಾದ ಈ ಯೋಜನೆ ಐದು ವರ್ಷ ಪೂರ್ಣಗೊಳಿಸಿದ್ದು, ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು. ಇಲ್ಲಿಯವರೆಗೆ ಈ ಯೋಜನೆಯಡಿ 19 ಕಂತುಗಳಲ್ಲಿ 3.69 ಲಕ್ಷ ಕೋಟಿ ರೂ ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ರೈತರ ಕೃಷಿ ಚಟುವಟಿಕೆಗಳಾದ ಬೀಜ ಖರೀದಿ ಮತ್ತು ರಸಗೊಬ್ಬರದ ಖರ್ಚಿಗೆ ಹಣ ನೆರವಾಗಲಿದೆ. ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ಆಗಸ್ಟ್ 2ರಂದು ಬಿಡುಗಡೆಯಾಗಲಿದ್ದು, 20,500 ಕೋಟಿ ಹಣ ದೇಶದ 9.7 ಕೋಟಿ ರೈತರ ಖಾತೆಗೆ ಜಮೆಯಾಗಲಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…