Author: admin

ಹಾವೇರಿ: ತಾಲೂಕಿನ ನೆಗಳೂರು ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬವನ್ನ ಭಾವೈಕ್ಯತೆಯಿಂದ ಆಚರಿಸಲಾಯಿತು. ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಮುಸ್ಲಿಂ ಬಾಂಧವರು ಗಣೇಶನಿಗೆ ಪೂಜೆ ಸಲ್ಲಿಸಿ ಸೌಹಾರ್ಹತೆ ಸಾರಿದರು. ಸರ್ವಧರ್ಮ ಮಹಾ ಗಣಪತಿ ದೇವರಿಗೆ ಪೂಜೆ ಸಲ್ಲಿಸಿದ ಮುಸ್ಲಿಮರು ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರಿದರಲ್ಲದೇ, ಹಿಂದೂ–ಮುಸ್ಲಿಂ ಬಾಂಧವರೆಲ್ಲ ಸೇರಿ ಗಣಪನಿಗೆ ಪೂಜೆ ಸಲ್ಲಿಸಿ ಮಾರ್ಲಾಪಣೆ ಮಾಡಿದರು. ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಈದ್ ಮಿಲಾದ್ ಹಬ್ಬ ಮೆರವಣಿಗೆ ಮಾಡಿ ಅರ್ಥಪೂರ್ಣವಾಗಿ ಆಚರಿಸಿದರು. ಪ್ರತಿ ವರ್ಷ ಗ್ರಾಮದಲ್ಲಿ ಸರ್ವಧರ್ಮ ಆಶಯದೊಂದಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಗುತ್ತದೆ.‌ ವಿವಿಧ ಧರ್ಮದ ಜನರೂ ಭಾಗವಹಿಸಿ ಪೂಜೆ ಸಲ್ಲಿಸುತ್ತಾರೆ. ಮುಸ್ಲಿಮರು ಸಹ ಪ್ರಾರ್ಥನೆ ಸಲ್ಲಿಸಿ ಪೂಜೆಯನ್ನ ಮಾಡುತ್ತಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬೆಂಗಳೂರು: ಅನ್ನದಾತ ರೈತರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರ ಇರಲಿ ಅಂತ  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ. ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲತಾಣ Xನಲ್ಲಿ ಶಿವಕುಮಾರ್‌ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಅವರು, ಈ ಹಿಂದೆ ರೈತರ ಸರಣಿ ಆತ್ಮಹತ್ಯೆ ವಿಷಯ ಬಂದಾಗ ಎಲ್ಲಿದೆ ಆತ್ಮಹತ್ಯೆ? ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲಾ ರೈತರು ಅನ್ನೋಕಾಗತ್ತಾ? ಸುಳ್ಳು ಅದೆಲ್ಲಾ ಎಂದು ರೈತರ ಬಗ್ಗೆ ತುಚ್ಛವಾಗಿ ಮಾತನಾಡಿದ್ದೀರಿ. ಈಗ ರೈತರು ಧಿಕ್ಕಾರ ಕೂಗೋದು ಬಿಟ್ಟು ಬೇರೇನೂ ಮಾಡುವುದಕ್ಕಾಗುವುದಿಲ್ಲ ಎಂದು ರೈತರನ್ನು ಅಸಹಾಯಕರು ಅನ್ನುವ ರೀತಿ ಹೀಯಾಳಿಸಿ ಮಾತನಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇಡೀ ದೇಶಕ್ಕೆ ಅನ್ನ ನೀಡುವ ರೈತ ಜೀವನವಿಡೀ ತಾನು ಬದುಕುವುದು, ದುಡಿಯುವುದು ಎಲ್ಲವೂ ಇನ್ನೊಬ್ಬರಿಗಾಗಿಯೇ ಹೊರತು ತನ್ನ ಸ್ವಂತಕ್ಕಾಗಿ ಅಲ್ಲ.  ಕೈಗಾರಿಕೆಗಳಿಗೆ, ರೈಲು, ರಸ್ತೆ, ವಿಮಾನ ನಿಲ್ದಾಣಕ್ಕೆ ಈ ಹಿಂದೆಯೂ ರೈತರ ಬಳಿ ಜಮೀನು ಪಡೆಯಲಾಗಿದೆ. ಹೆಚ್‌ಎಂಟಿ ಕಾರ್ಖಾನೆ ಬಂದಾಗ ಸ್ವತಃ ನಮ ಕುಟುಂಬ…

Read More

ಬೆಂಗಳೂರು:  ದೇವನಹಳ್ಳಿ ತಾಲ್ಲೂಕಿನಲ್ಲಿ ಕೈಗಾರಿಕೆ ಉದ್ದೇಶಕ್ಕೆ ಮಾಡಲಾಗಿದ್ದ ಭೂ ಸ್ವಾಧೀನವನ್ನು ಕೈಬಿಟ್ಟು ಹಸಿರುವಲಯ (ಗ್ರೀನ್‌ ಬೆಲ್ಟ್ )ವಾಗಿ ಮುಂದುವರೆಸಲಾಗುವುದು ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ವಿರೋಧ ಇರುವ ಒಂದು ಎಕರೆ ಜಮೀನನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಸ್ವ ಇಚ್ಛೆಯಿಂದ ಯಾರು ಕೃಷಿ ಜಮೀನು ನೀಡಲು ಮುಂದೆ ಬರುತ್ತಾರೆಯೋ ಅಂಥ ಜಮೀನನ್ನು ಪಡೆಯುತ್ತೇವೆ ಎಂದರು. ವರ್ಷದ ನಂತರ ಭೂಮಿಯ ಬೆಲೆ ದುಬಾರಿಯಾಗಿದೆ. ಹೀಗಾಗಿ ಜಮೀನು ನೀಡಲು ನಿರಾಕರಿಸಿದವರ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುತ್ತೇವೆ ಎಂದು ಹೇಳಿದರು. ಕೃಷ್ಣ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನದ ಗೊಂದಲದ ವಿಚಾರ ಈಗ ಒಂದು ಹಂತಕ್ಕೆ ಬಂದಿದೆ. 75 ಸಾವಿರ ಎಕರೆ ಪ್ರದೇಶ ಮುಳುಗಡೆಯಾಗಲಿದೆ. 75 ಸಾವಿರ ಎಕರೆ ಭೂಸ್ವಾಧೀನ ಆಗಬೇಕು. ಅದಕ್ಕೆ ಪರಿಹಾರ ನೀಡಬೇಕಾಗಿದೆ. ಪ್ರತಿ ಎಕರೆ 50 ಲಕ್ಷ ರೂ. ನೀಡಬೇಕೆಂಬ ಬೇಡಿಕೆ ಇದೆ. ಒಟ್ಟಾರೆ 25 ಸಾವಿರ ಕೋಟಿ ರೂ. ಬೇಕಾಗಬಹುದು ಎಂದರು. ನಾಲೆಗಳಿಗೆ 11 ಕೋಟಿ ಬೇಕಾಗುತ್ತದೆ.…

Read More

ಹೆಚ್‌.ಡಿ.ಕೋಟೆ: ನಿರಂತರವಾಗಿ ತಾಲೂಕಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ದಿನನಿತ್ಯ ಪತ್ರಿಕೆ ವಿತರಿಸಲು ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರಿಗೆ ಜರ್ಕಿನ್ ವಿತರಿಸಲಾಗಿದೆ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬೀಚನಹಳ್ಳಿ ಮಂಜು ತಿಳಿಸಿದರು. ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಸದಸ್ಯರುಗಳಿಗೆ ಜರ್ಕಿನ್ ವಿತರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಅತಿ ಹೆಚ್ಚಾಗಿ ಕಳೆದ ಮೂರು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪತ್ರಕರ್ತರು ದಿನನಿತ್ಯ ಪತ್ರಿಕೆ ವಿತರಿಸಲು ಕಷ್ಟಕರವಾಗುತ್ತಿತ್ತು ಹಾಗೂ ಕೆಲವು ಸಂದರ್ಭದಲ್ಲಿ ಸದಸ್ಯರು ಅನಾರೋಗ್ಯಕ್ಕೆ ಈಡಾಗುತ್ತಿದ್ದರು  ಆದ್ದರಿಂದ ಅದನ್ನು ಮನಗೊಂಡ ಸದಸ್ಯರುಗಳಿಗೆ ಜರ್ಕಿನ್ ಗಳನ್ನು ನೀಡಲಾಗಿದೆ. ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಸ್. ಆರ್. ನಾಗರಾಮ, ಸಹಕಾರ್ಯದರ್ಶಿ  ದೊಡ್ಡಸಿದ್ದು, ಖಜಾಂಚಿ ಮಂಜು ಕೋಟೆ, ನಿರ್ದೇಶಕರುಗಳಾದ ಹಂಪಾಪುರ ನಾಗೇಶ್, ಪುಟ್ಟರಾಜು, ಜಿ. ರವಿಕುಮಾರ್, ರಂಗರಾಜು, ರವಿಕುಮಾರ್ ಆರಾದ್ಯ,  ಸದಸ್ಯರುಗಳಾದ ಕನ್ನಡ ಪ್ರಮೋದ್, ಶ್ರೀನಿಧಿ, ಬಸವರಾಜು, ನಿಂಗಣ್ಣ ಕೋಟೆ, ವಾಸುಕಿ ನಾಗೇಶ್, ಸುರೇಶ್, ಆನಂದ್,  ರಘು, ದಾಸೇಗೌಡ, ಚಿಕ್ಕಣ್ಣೆಗೌಡ, ಶರವಣ, ಚಂದ್ರು, ಪುರುಷೋತ್ತಮ್, ಹಾಜರಿದ್ದರು. ವರದಿ:…

Read More

ಬೆಂಗಳೂರು:  ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಯಂತ್ರ ಬದಿಗಿಟ್ಟು ಬ್ಯಾಲಟ್‌ ಪೇಪರ್‌ ಬಳಕೆಗೆ ನಿರ್ಧರಿಸಿರುವ ಕಾಂಗ್ರೆಸ್‌‍ ಸರ್ಕಾರದ ಸಂಪುಟದ ತೀರ್ಮಾನ ತಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ಮತಗಳ್ಳತನದಿಂದ ಎಂದು ಸ್ವಯಂ ಪ್ರಮಾಣೀಕರಿಸಿಕೊಂಡಂತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ Xನಲ್ಲಿ ಸರ್ಕಾರದ ವಿರುದ್ಧ ಪೋಸ್ಟ್‌ ಮಾಡಿರುವ ಅವರು, ಇವಿಎಂ ಮತಯಂತ್ರ ಬಳಸಿ ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಆರಿಸಿ ಬಂದಿರುವ 136 ಕಾಂಗ್ರೆಸ್‌‍ ಶಾಸಕರಿಂದ ಮೊದಲು ರಾಜೀನಾಮೆ ಕೊಡಿಸಲಿ, ರಾಜ್ಯದಿಂದ ಆಯ್ಕೆಯಾದ ಒಂಬತ್ತು ಕಾಂಗ್ರೆಸ್‌‍ ಲೋಕಸಭಾ ಸದಸ್ಯರಿಂದ ರಾಜೀನಾಮೆ ಕೊಡಿಸಲಿ, ಮತಪತ್ರ ಬಳಸಿ ಮತ್ತೆ ಚುನಾವಣೆಯಿಂದ ಗೆದ್ದು ಬರಲಿ, ಇಲ್ಲದಿದ್ದರೆ ಮತಗಳ್ಳತನದಿಂದ ನಾವು ಆಯ್ಕೆಯಾಗಿ ಅಧಿಕಾರಕ್ಕೆ ಬಂದಿರುವುದು ಎಂದು ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ. ದೇಶದಲ್ಲಿ ಅತಿಹೆಚ್ಚು ಅಕ್ರಮ ಮತದಾನ, ಮತಗಳ್ಳತನದ ದೂರುಗಳು, ಚುನಾವಣಾ ದೌರ್ಜನ್ಯದ ಘಟನೆಗಳು, ಚುನಾವಣಾ ಅಕ್ರಮಗಳು ನಡೆದ ಬಗ್ಗೆ ನ್ಯಾಯಾಲಯಗಳಲ್ಲಿ ದೂರುಗಳು ಅತಿ ಹೆಚ್ಚು ದಾಖಲಾಗಿದ್ದರೆ ಅದು ಮತಪತ್ರ ಆಧರಿಸಿ…

Read More

ಸರಗೂರು:  ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಗಳು ಶಕ್ತಿಕೇಂದ್ರ ಇದ್ದ ಹಾಗೆ,  ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸದಸ್ಯರ ಯೋಜನೆಗಳೇ ಅಂತಿಮ. ವಾರ್ಡ್ ನಿರ್ವಹಣೆ ಜವಾಬ್ದಾರಿ ಅವರ ಮೇಲಿದೆ ಎಂದು ಶಾಸಕ, ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಗಳ ಅಧ್ಯಕ್ಷ ಅನಿಲ್ ಚಿಕ್ಕಮಾದು ತಿಳಿಸಿದರು. ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ, ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಶಕ್ತಿಕೇಂದ್ರವಾದ ವಿಧಾನಸೌಧದಲ್ಲಿ ಚರ್ಚಿಸಿ, ಅನುದಾನ ತರುತ್ತಾರೆ. ಅದೇ ಮಾದರಿಯಲ್ಲಿ ಸದಸ್ಯರು ತಮ್ಮ ಶಕ್ತಿಕೇಂದ್ರವಾದ ಗ್ರಾಮ ಪಂಚಾಯಿತಿಯಿಂದ ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನ ತಂದು ನಿರ್ವಹಣೆ ಮಾಡುತ್ತಾರೆ. ತಮ್ಮ ವಾರ್ಡ್‌ನಲ್ಲಿನ ರಸ್ತೆ, ಚರಂಡಿ, ವಿದ್ಯುತ್ ಸಮಸ್ಯೆಗಳಿಗೆ ಸ್ಪಂದಿಸಿ ಮಾಡುತ್ತಾರೆ. ಗ್ರಾಮ ಪಂಚಾಯಿತಿಯಲ್ಲಿಯೂ ನಾನಾ ಯೋಜನೆ ಗಳಿದ್ದು ಅದನ್ನು ಸದಸ್ಯರು ಕಾರ್ಯರೂಪಕ್ಕೆ ಕೆಲಸ ತರಬೇಕು,” ಎಂದು ಸಲಹೆ ನೀಡಿದರು. “ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ…

Read More

ತುಮಕೂರು: ತುಮಕೂರು ಜಿಲ್ಲೆ ಜೆ.ಜೆ.ಎಮ್. ಗುತ್ತಿಗೆದಾರರು ತುಮಕೂರು  ನಗರದ ಕುಣಿಗಲ್ ರಸ್ತೆಯಲ್ಲಿರುವ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮುಂದೆ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳ ಜೆ.ಜೆ.ಎಮ್. ಕಾಮಗಾರಿ ಮಾಡಿರುವ ಗುತ್ತಿಗೆದಾರರು ಪ್ರತಿಭಟನೆ ಮಾಡಿ ಮೆನೇಜರ್ ಸಿದ್ದರಾಜು ಅವರಿಗೆ ಮನವಿ ಪತ್ರ ನೀಡಿದರು. ಪ್ರತಿಭಟನೆ ಉದ್ದೇಶಿಸಿ ಗುತ್ತಿಗೆದಾರರಾದ ಚಂದ್ರಶೇಖರ್ ರೆಡ್ಡಿ ಮಾತನಾಡಿ, ತುಮಕೂರು ಜಿಲ್ಲೆಯ ಜೆ.ಜೆ.ಎಮ್. ಗುತ್ತಿಗೆದಾರರು ಮನೆಮನೆ ಗಂಗೆ  ಕಾಮಗಾರಿಯನ್ನು ಜಿಲ್ಲೆಯ ನೂರಾರು ಗುತ್ತಿಗೆದಾರರು ಕೆಲಸ ಮಾಡಿದ್ದು, ವರ್ಷಗಳೇ ಕಳೆದರೂ ಗುತ್ತಿಗೆದಾರರ ಬಿಲ್ ಪಾವತಿಯಾಗುತ್ತಿಲ್ಲ ದಯವಿಟ್ಟು ಸರ್ಕಾರ ಹಾಗೂ ಜನಪ್ರತಿನಿಧಿಗಳು ಅಧಿಕಾರಿಗಳು ಮುಂದೆ ಬಂದು ಗುತ್ತಿಗೆದಾರರಿಗೆ ಹಣ ಪಾವತಿ ಮಾಡಬೇಕೆಂದು  ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗುತ್ತಿಗೆದಾರರಾದ ಲೋಕೇಶ್ ಪಾಳೇಗಾರ್ ಮಾತನಾಡಿ, ಜಿಲ್ಲೆಯ ಜೆ.ಜೆ.ಎಮ್. ಗುತ್ತಿಗೆದಾರರ ಸಮಸ್ಯೆಗಳಾದ ಸಿ.ಸಿ. ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಇ.ಓ.ಟಿ. ಹಾಗೂ ವರ್ಕ್ ಸ್ಲಿಪ್ ಗೆ ಸಂಬಂಧಿಸಿದಂತೆ ಕಡತಗಳನ್ನು ತಡೆಹಿಡಿಯದೆ ಗುತ್ತಿಗೆದಾರರಿಗೆ ತೊಂದರೆ ಆಗದಂತೆ  ಕಡಿಮೆ ದಂಡ…

Read More

ಬೆಂಗಳೂರು: ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ (ಪಿಎಂಎಫ್ ಎಂಇ) ಯೋಜನೆಯು ಕರ್ನಾಟಕದ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಈ ಯೋಜನೆಯಡಿ, ರಾಜ್ಯ ಸರ್ಕಾರವು ಹೆಚ್ಚುವರಿ ಶೇ.15ರಷ್ಟು ಸಹಾಯಧನ ನೀಡುತ್ತಿದ್ದು, ಕಿರು ಉದ್ದಿಮೆದಾರರಿಗೆ ಶೇ.50ರಷ್ಟು ಅಥವಾ ಗರಿಷ್ಠ ರೂ.15 ಲಕ್ಷ ಸಾಲ ಸಂಪರ್ಕಿತ ಸಹಾಯಧನ ಲಭ್ಯವಾಗುತ್ತಿದೆ. ಇದರಲ್ಲಿ ಕೇಂದ್ರದ ರೂ.6 ಲಕ್ಷ ಹಾಗೂ ರಾಜ್ಯದ ರೂ.9 ಲಕ್ಷ ಸಹಾಯಧನ ಸೇರಿದೆ. ಈ ಯೋಜನೆಯ ಯಶಸ್ಸಿಗೆ ಕಾರಣರಾದ ಕರ್ನಾಟಕದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ನಾಯಕತ್ವ ಹಾಗೂ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಅವರ ಅವಿರತ ಶ್ರಮವನ್ನು ಉದ್ಯಮಿಗಳು ಮತ್ತು ರೈತರು ವ್ಯಾಪಕವಾಗಿ ಮೆಚ್ಚಿದ್ದಾರೆ. ವಾರ್ಷಿಕ ಸಾಲ ಮಂಜೂರಾತಿಯ ಪ್ರಗತಿ: ಪಿಎಂಎಫ್ಎಂಇ ಯೋಜನೆಯಡಿ ಕಳೆದ ಐದು ಸಾಲುಗಳಲ್ಲಿ ಸಹಾಯ ಧನದಡಿಯಲ್ಲಿ ಸಾಲ…

Read More

ಯಾವುದೇ ಕಿಡ್ನಿ ಕಾಯಿಲೆ ಇದ್ದರೆ ಆರಂಭಿಕ ಹಂತದಲ್ಲಿ ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳಿರುವುದಿಲ್ಲ. ರೋಗ ಮುಂದುವರೆದಂತೆ ಅದರ ಚಿಹ್ನೆಗಳು ದೇಹದಲ್ಲಿ ಕಾಣಿಸಿಕೊಳ್ಳಲು ಆರಂಭವಾಗುತ್ತವೆ. ಮೂತ್ರಪಿಂಡದ ಕಾಯಿಲೆಯಿದ್ದರೆ ಚರ್ಮದ ಮೇಲೆ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಚರ್ಮದ ಮೇಲೆ ಕಾಣಿಸಿಕೊಳ್ಳುವ ಚಿಹ್ನೆಗಳು ದೇಹದೊಳಗೆ ಏನೋ ನಡೆಯುತ್ತಿದೆ ಎಂಬುದನ್ನು ಸೂಚನೆಯಾಗಿದೆ. ಒಣ ಚರ್ಮ, ಚರ್ಮದ ಮೇಲೆ ತುರಿಕೆ, ಚರ್ಮದ ಮೇಲೆ ದದ್ದುಗಳು ಅಥವಾ ಬಣ್ಣ ಬದಲಾವಣೆ, ಈ ರೀತಿಯ ಲಕ್ಷಣಗಳು ಕೇವಲ ಮೇಲ್ನೋಟದ ಸಮಸ್ಯೆಗಳಲ್ಲ. ಇವುಗಳು ಗಂಭೀರ ಕಿಡ್ನಿ ವೈಫಲ್ಯದ ಸಂಕೇತವಾಗಿರಬಹುದು. ಚರ್ಮದ ಶುಷ್ಕತೆ: ಮೂತ್ರಪಿಂಡಗಳಲ್ಲಿ ಯಾವುದೇ ಸಮಸ್ಯೆಯಿದ್ದರೆ, ಒಣ ಚರ್ಮ ಸಮಸ್ಯೆ ಕಾಡುತ್ತದೆ. ಮೂತ್ರಪಿಂಡದ ಸ್ಥಿತಿ ತೀವ್ರವಾಗಿದ್ದರೆ ಚರ್ಮವು ತುಂಬಾ ಒಣಗುತ್ತದೆ, ಒರಟಾಗಿರುತ್ತದೆ ಹಾಗೂ ಬಿಗಿಯಾಗಿರುತ್ತದೆ. ಚರ್ಮದಲ್ಲಿನ ಈ ಬದಲಾವಣೆಯು ಕಿಡ್ನಿಗಳಲ್ಲಿ ಸಮಸ್ಯೆಯಿದೆ ಎಂದು ತಿಳಿಯುತ್ತದೆ. ಚರ್ಮವು ಸುಲಭವಾಗಿ ಬಿರುಕು ಬಿಡುತ್ತದೆ. ಕೆಲವು ಜನರಲ್ಲಿ ಚರ್ಮವು ಮೀನಿನ ಚರ್ಮದಂತೆ ಚಿಪ್ಪುಗಳುಳ್ಳಂತೆ ಕಾಣಲು ಆರಂಭಿಸುತ್ತದೆ. ಚರ್ಮದಲ್ಲಿ ತುರಿಕೆ ಕಾಣಿಸುತ್ತೆ: ಕಿಡ್ನಿ…

Read More

ಬೆಂಗಳೂರು: ಕೆ.ಸಿ.ವ್ಯಾಲಿ 2ನೇ ಹಂತದ ಯೋಜನೆಯಡಿ ಲಕ್ಷ್ಮೀ ಸಾಗರ ಪಂಪ್ ಹೌಸ್​​ನಿಂದ ಕೋಲಾರ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾವೇರಿ ನಿವಾಸದಲ್ಲಿ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಸಿಎಂ, ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳ ಅಂತರ್ಜಲ ಅಭಿವೃದ್ಧಿಗೆ ನಾವು ಹಿಂದಿನ ಸಲ ಅಧಿಕಾರದಲ್ಲಿದ್ದಾಗ ಕೈಗೊಂಡ ಯೋಜನೆಗಳು ಈ ಭಾಗದ ರೈತರ ಜೀವನ ಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. 250ಕ್ಕೂ ಹೆಚ್ಚು ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪ್ರತಿನಿತ್ಯ ಹರಿಸಲಾಗುತ್ತಿದೆ ಎಂದರು. ಕೆ.ಸಿ.ವ್ಯಾಲಿ ಎರಡನೇ ಹಂತದ ಯೋಜನೆಯಡಿ ಕೋಲಾರ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸಲಾಗುವುದು. ಮೊದಲನೇ ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಚಿಕ್ಕಬಳ್ಳಾಪುರ ಕೆರೆಗಳನ್ನು ಯಶಸ್ವಿಯಾಗಿ ತುಂಬಿಸಲಾಗಿದೆ. ಈ ನೀರನ್ನು ಕುಡಿಯಲು ಬಳಸುವುದಿಲ್ಲ. ಕೆರೆ ತುಂಬಿಸಿದ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಉತ್ತಮಗೊಂಡಿದೆ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…

Read More