Subscribe to Updates
Get the latest creative news from FooBar about art, design and business.
- ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ
- ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ
- ಆ.29: ಪಾವಗಡದಲ್ಲಿ ಉದ್ಯೋಗ ಮೇಳ
- ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್
- ಮೇಕೆ ಮೇಲೆ ದಾಳಿ ಮಾಡಲು ಬಂದ ಚಿರತೆ ಸೆರೆ
- ವಿಐಪಿ ಸೆಲ್ ನಿಂದ ಸಾಮಾನ್ಯ ಕೈದಿಗಳ ಸೆಲ್ ಗೆ ಪ್ರಜ್ವಲ್ ರೇವಣ್ಣ ಶಿಫ್ಟ್: ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ!
- ಸರಗೂರು: ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ – ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಎನ್. ಸುಬ್ಬಣ್ಣ ಕರೆ
- ವಿದ್ಯಾರ್ಥಿಗಳಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಪ್ರಾಮಾಣಿಕತೆ ಬೆಳೆಸಿಕೊಳ್ಳುವುದು ಮುಖ್ಯ: ಸಾಹಿತಿ ರಿಜ್ವಾನ್ ಪಾಷಾ
Author: admin
ಮಂಡ್ಯ: ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಬೆಂಗಳೂರಿನ ಕಾನೂನು ವಿದ್ಯಾರ್ಥಿನಿ ಮರಕ್ಕೆ ಸಿಲುಕಿ ರಾತ್ರಿಯಿಡೀ ಒದ್ದಾಡಿದ್ದು, ಬಳಿಕ ಶುಕ್ರವಾರ ಬೆಳಿಗ್ಗೆ ಆಕೆಯನ್ನು ರಕ್ಷಣೆ ಮಾಡಲಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಪವಿತ್ರ (19) ನದಿಗೆ ಹಾರಿದ್ದಳು. ಬಳಿಕ ಸುಮಾರು ಐದು ಕಿ.ಮೀ. ದೂರ ಪ್ರವಾಹದಲ್ಲಿ ಕೊಚ್ಚಿ ಹೋಗಿ ನದಿಯ ಮಧ್ಯೆಯಿದ್ದ ಮರವೊಂದಕ್ಕೆ ಸಿಕ್ಕಿಕೊಂಡಿದ್ದರು. ಇಡೀ ರಾತ್ರಿ ಮರದ ಮೇಲೆ ಕುಳಿತಿದ್ದರು. ಶುಕ್ರವಾರ ಮುಂಜಾನೆ ಕಾಪಾಡಿ… ಎಂದು ಅವರು ಕೂಗಿಕೊಂಡಿದ್ದು ಈ ವೇಳೆ ರೈತರಿಗೆ ನದಿಯ ಮಧ್ಯೆ ವ್ಯಕ್ತಿಯೊಬ್ಬರು ಸಿಕ್ಕಿಕೊಂಡಿರುವುದು ತಿಳಿದಿದೆ. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು, ಯುವತಿಯನ್ನು ರಕ್ಷಿಸಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ನದಿಯಲ್ಲಿ ನೀರಿನ ಸೆಳೆತ ಮತ್ತಷ್ಟು ಹೆಚ್ಚಾಗಿದ್ದರೆ, ವಿದ್ಯಾರ್ಥಿನಿ ಕೊಚ್ಚಿ ಹೋಗುತ್ತಿದ್ದರು. ಆಕೆ ಅದೃಷ್ಟಶಾಲಿ ಎಂದು ಪಿಎಸ್ ಐ ವಿನೋದ್ ಕುಮಾರ್ ತಿಳಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಲು ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.…
ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ. 33 ವರ್ಷದ ಶರತ್ ಮೃತಪಟ್ಟ ಫಾರೆಸ್ಟ್ ಗಾರ್ಡ್ ಆಗಿದ್ದು, ಶುಕ್ರವಾರ ಬೆತ್ತಲೆ ಸ್ಥಿತಿಯಲ್ಲಿ ಇವರು ಶವವಾಗಿ ಪತ್ತೆಯಾಗಿದ್ದಾರೆ. 33 ವರ್ಷದ ಶರತ್ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ನೀಲಗಿರಿ ಪ್ಲಾಂಟೇಶನ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗಲೇ ನಾಪತ್ತೆಯಾಗಿದ್ದರು. ನೀಲಗಿರಿ ಪ್ಲಾಂಟೇಶನ್ ನಿಂದ 5 ಕಿಮೀ ದೂರದಲ್ಲಿ ಶುಕ್ರವಾರ ಬೆತ್ತಲೆ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಶರತ್ ಅವರ ಶವ ಪತ್ತೆಯಾಗಿದೆ. ಶರತ್ ಮೂಲತಃ ಕೊಡಗು ಜಿಲ್ಲೆಯ ಕಾಲೂರು ನಿವಾಸಿಯಾಗಿದ್ದು. ಕಳೆದ ನಾಲ್ಕು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ KFDC ವಿಭಾಗದಿಂದ ಸಖರಾಯಪಟ್ಟಣ ಅರಣ್ಯ ಇಲಾಖೆಯ KFDC ವಿಭಾಗಕ್ಕೆ ವರ್ಗಾವಣೆಯಾಗಿದ್ದರು. ನೀಲಗಿರಿ ಪ್ಲಾಂಟೇಶನ್ ನಲ್ಲಿ ಜೂನ್ 24 ರಂದು ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಶರತ್ ನಿಗೂಢವಾಗಿ ನಾಪತ್ತೆಯಾಗಿದ್ದರು. ಶರತ್ ಗಾಗಿ ನೂರಾರು ಅರಣ್ಯ ಇಲಾಖೆಯ ಸಿಬ್ಬಂದಿ, ಪೊಲೀಸರು ನೀಲಗಿರಿ…
ಕೊರಟಗೆರೆ : ಪಟ್ಟಣದ ಸುಭಾಷ್ ಪದವಿ ಪೂರ್ವ ಕಾಲೇಜ್ 2025–26 ನೇ ಸಾಲಿನ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ವರ್ಷದ ಮೊದಲ ಕಲಿಕಾ ದಿನದ ಶುಭ ಹಾರೈಕೆಯನ್ನು ಕಾಲೇಜಿನ ಆಡಳಿತ ಮಂಡಳಿ ಮತ್ತು ಸಂಸ್ಥೆಯ ಅಧ್ಯಕ್ಷರಾದ ಗಂಗರಾಜು “ಗ್ರಾಂಡ್ ವೆಲ್ಕಮ್ ಡೇ” ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಜಿಲ್ಲೆಯ ಹೆಸರಾಂತ ಮುಖ್ಯ ಭಾಷಣಕಾರ, ಕವಿ–ಲೇಖಕರಾದ ಗಂಗಾಧರ್ ಕೊಡ್ಲಿರವರು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಪ್ರಥಮ ಪಿಯುಸಿ ವಿದ್ಯಾರ್ಥಿ — ವಿದ್ಯಾರ್ಥಿನಿಯರಿಗೆ ವರ್ಷದ ಮೊದಲ ಕಲಿಕಾ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುವುದರ ಜೊತೆಗೆ ಮೌಲ್ಯಧಾರಿತ ಶಿಕ್ಷಣವನ್ನು ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಮತ್ತು ಅಗತ್ಯವಾದ ಪ್ರಯೋಗೀಕ ಶಿಕ್ಷಣವನ್ನು ಸಂಸ್ಥೆಯು ಪೂರೈಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿಯಾದ ನಿರ್ಮಲಾ ತಿಳಿಸಿದರು. ನಂತರ ಮಾತನಾಡಿದ ಸುಭಾಷ್, ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಗಂಗರಾಜು, ಪ್ರೌಢಶಾಲೆಯ…
ಸರಗೂರು: ಸರ್ಕಾರದ ವತಿಯಿಂದ ಚಿಕ್ಕದೇವಮ್ಮನ ಬೆಟ್ಟವನ್ನು ಪ್ರವಾಸಿ ತಾಣವನ್ನು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಮಾಡಿದ್ದಾನೆ ಎಂದು ಅರಣ್ಯ ಮತ್ತು ವಿಹಾರ ಧಾಮಗಳ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ತಾಲೂಕಿನ ನಾಡ ದೇವತೆ ಚಿಕ್ಕ ದೇವಮ್ಮನ ತಾಯಿ ಬೆಟ್ಟಕ್ಕೆ ತೆರಳಿ ಆಷಾಢ ಶುಕ್ರವಾರದಂದು ಚಿಕ್ಕದೇವಮ್ಮನ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಸರ್ಕಾರ ಹಲವು ನಿರ್ಧಾರಗಳನ್ನು ತೆಗೆದುಕೊಂಡು ಕಳೆದ ಬಾರಿ ಸಮ್ಮಿಶ್ರ ಸರ್ಕಾರ ಇದ್ದಿದ್ದ ಸಮಯದಲ್ಲಿ ಬೆಟ್ಟಕ್ಕೆ 5 ಕೋಟಿ ಅನುದಾನವನ್ನು ಹಾಕಿ, ರಸ್ತೆಗೆ 2 ಕೋಟಿ ಅನುದಾನದಲ್ಲಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಅದರಂತೆ ಸುಮಾರು 7 ಕೋಟಿ ಅನುದಾನವನ್ನು ನನ್ನ ಅವಧಿಯಲ್ಲಿ ಬಳಸಿ ಬೆಟ್ಟದ ಅಭಿವೃದ್ಧಿಗೆ ಜೊತೆಯಲ್ಲಿ ಪಾಕಶಾಲೆ, ತಡೆಗೋಡೆ, ರಸ್ತೆ, ಮೆಟ್ಟಿಲು, ಮಾಡಿಕೊಡುವ ವ್ಯವಸ್ಥೆಯನ್ನು ಮಾಡಿಕೊಡುವ ಕೆಲಸ ನನ್ನ ಅವಧಿಯಲ್ಲಿ ಮಾಡಿದ್ದಾನೆ ಎಂದು ಹೇಳಿದರು. ನಮ್ಮ ತಂದೆ ಶಾಸಕರಾದ ಸಂದರ್ಭದಲ್ಲಿ ಚಿಕ್ಕದೇವಮ್ಮ ಬೆಟ್ಟದ ತಾಯಿ ದೇವಸ್ಥಾನ ಹಳೆದಾಗಿತ್ತು. ದೇವಸ್ಥಾನ ನಿರ್ಮಾಣ ಮಾಡಲು…
ಬೆಂಗಳೂರು: ಎಂಟು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕುಂಟೆ ಪೊಲೀಸ್ ಠಾಣಾ ಪೊಲೀಸರು ಆರೋಪಿ ಅಂಗಡಿ ಮಾಲಿಕನನ್ನು ಬಂಧಿಸಿದ್ದಾರೆ. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನೊಂದ ಬಾಲಕಿ ಚಿಪ್ಸ್ ಪ್ಯಾಕೆಟ್ ಖರೀದಿಸಲು ತನ್ನ ಮನೆಯ ಹತ್ತಿರದ ಅಂಗಡಿಗೆ ಹೋಗಿದ್ದಳು. ಆಗ ಅಂಗಡಿಯಲ್ಲಿದ್ದ 25 ವರ್ಷದ ವ್ಯಕ್ತಿ, ಚಿಪ್ಸ್ ಪ್ಯಾಕೆಟ್ ಅನ್ನು ಪಕ್ಕದಲ್ಲಿರುವ ಗೋಡೌನ್‌ನಿಂದ ತರಬೇಕೆಂದು ಹೇಳಿದ್ದಾನೆ. ಚಿಪ್ಸ್ ನೀಡುವ ನೆಪದಲ್ಲಿ ಗೋಡೌನ್ ಗೆ ಕರೆದೊಯ್ದು ತನ್ನ ಖಾಸಗಿ ಭಾಗಗಳನ್ನು ಮುಟ್ಟಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ಬಾಲಕಿ ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ಮನೆಗೆ ಬಂದು ಅಳಲು ಪ್ರಾರಂಭಿಸಿದಳು. ಆಕೆಯ ಚಿಕ್ಕಮ್ಮ ಕಾರಣ ಕೇಳಿದಾಗ, ಅವಳು ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ಪೋಷಕರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿಯಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ…
ಬೆಂಗಳೂರು: ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಕೆಐಎಡಿಬಿಯಿಂದ ಭೂಸ್ವಾಧೀನ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಲು ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮೆಜೆಸ್ಟಿಕ್‌ನ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇಂದು ನಡೆದಿದೆ. ಗುಂಡ್ಲುಪೇಟೆಯ ಕುರುಬರಹುಂಡಿ ಮೂಲದ ರೈತ ಈಶ್ವರ್ (50) ಮೃತ ದುರ್ದೈವಿ. ಇಂದು ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಲು ಇವರು ಆಗಮಿಸಿದ್ದರು. ರೈಲಿನ ಮೂಲಕ ಬಂದಿಳಿದಿದ್ದ ಈಶ್ವರ್, ಪ್ರತಿಭಟನಾ ಸ್ಥಳಕ್ಕೆ ತೆರಳುವ ಮಾರ್ಗಮಧ್ಯೆ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಈಶ್ವರ್ ಸಾವನ್ನಪ್ಪಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಚೆನ್ನೈ: ಪುರಸಭೆಯ ಮಹಿಳಾ ಕೌನ್ಸಿಲರ್ ಒಬ್ಬರನ್ನು ಅವರ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುರುವಾರ ರಾತ್ರಿ ತಿರುನಿನ್ರವೂರಿನ ಪೆರಿಯಾರ್ ಕಾಲೋನಿಯಲ್ಲಿರುವ ಅವರ ಮನೆಯ ಬಳಿಯಲ್ಲಿಯೇ ನಡೆದಿದೆ. ಚೆನ್ನೈನ ಪಶ್ಚಿಮ ಉಪನಗರದಲ್ಲಿರುವ ತಿರುನಿಂದ್ರವೂರ್ ಪುರಸಭೆಯ ಮಹಿಳಾ ಕೌನ್ಸಿಲರ್ ಎಸ್. ಗೋಮತಿ (38) ಹತ್ಯೆಗೀಡಾಗಿರುವ ಕೌನ್ಸಿಲರ್ ಆಗಿದ್ದಾರೆ. ಗೋಮತಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪುರಸಭೆ ಚುನಾವಣೆಯಲ್ಲಿ ಗೆದ್ದಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಗುರುವಾರ ರಾತ್ರಿ ತಿರುನಿನ್ರವೂರಿನ ಪೆರಿಯಾರ್ ಕಾಲೋನಿಯಲ್ಲಿರುವ ಅವರ ಮನೆಯ ಬಳಿ ಆಕೆಯ ಪತಿ ಸ್ಟೀಫನ್ ರಾಜ್ ಹಲ್ಲೆ ನಡೆಸಿದ್ದ, ತೀವ್ರವಾಗಿ ಗಾಯಗೊಂಡಿದ್ದ ಸಾವನ್ನಪ್ಪಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಅಲ್ಲಿಯೇ ಸ್ಟೀಪನ್ ರಾಜ್ ಪೊಲೀಸರ ಮುಂದೆ ಶರಣಾಗಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ದಂಪತಿ ಸುಮಾರು ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ವಿಸಿಕೆ ಪಕ್ಷದ ಸದಸ್ಯರಾಗಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ತಿಪಟೂರು: ಆರ್ಥಿಕ ಸಂಕಷ್ಟದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ಕಿಟ್ ವಿತರಣೆ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆಯಿತು. ತಾಲೂಕಿನ ನೊಣವಿನಕೆರೆ ಹೋಬಳಿ ನಾಗರಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಗರಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ, ವರುಣ್, ಕಿಶೋರ್, ಉದಯ್ ಹರ್ಷಿಲ್ ತರುಣ್ ಕುಮಾರ್, ಇವರು ಬೆಳಗರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಡು ಬಡತನದಿಂದ ಕೂಡಿದವರಾಗಿದ್ದು, ಕೆಲವರು ತಂದೆಯನ್ನು ಕಳೆದುಕೊಂಡಿದ್ದು ಕೆಲವರು ತಾಯಿ ತಂದೆ ಇಬ್ಬರನ್ನು ಕಳೆದುಕೊಂಡಿರುತ್ತಾರೆ. ಹೀಗಾಗಿ ಇವರ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಇವರ ವಿದ್ಯಾಭ್ಯಾಸಕ್ಕಾಗಿ ನೋಟ್ ಬುಕ್ ಬ್ಯಾಗ್ ಪೆನ್ ಪೆನ್ಸಿಲ್ ರಬ್ಬರ್ ಚಾಮೆಟ್ರಿ ಇತ್ಯಾದಿ ಪರಿಕರಗಳು ಅವಶ್ಯಕತೆ ಇದ್ದು, ಈ ವಿಚಾರವನ್ನು ಅಂಬೇಡ್ಕರ್ ಸೇವಾ ಸಮಿತಿಯ ತಿಪಟೂರು ತಾಲೂಕು ಅಧ್ಯಕ್ಷರಾದ ಶಿವಕುಮಾರ್ ಮತಿಘಟ್ಟ ಹಾಗೂ ರಾಘು ಯಗಚಿಕಟ್ಟೆ, ರಮೇಶ್ ಮಾರನಗೆರೆ ಅವರು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಗೆ ತಿಳಿಸಿ, ವಿದ್ಯಾಭ್ಯಾಸಕ್ಕೆ ನೆರವು ನೀಡುವಂತೆ ಮನವಿಯನ್ನು ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿ ಈ ದಿನ…
ತಿಪಟೂರು: ರೋಟರಿ ಸಂಸ್ಥೆಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಜುಲೈ 6ರಂದು ತಿಪಟೂರಿನಲ್ಲಿ ನಡೆಯಲಿದೆ ಎಂದು ನೂತನ ಅಧ್ಯಕ್ಷ ವನಿತಾ ಪ್ರಸನ್ನ ತಿಳಿಸಿದರು. ನಾನು ತಿಪಟೂರು ರೋಟರಿಯ 66ನೇ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಸಂತಸ ತಂದಿದ್ದು, ರೋಟರಿ ನಗರಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶದ ಭಾಗದಲ್ಲೂ ಸರ್ಕಾರಿ ಶಾಲೆಗಳಿಗೆ ಅಗತ್ಯ ಉಪಕರಣ, ಶೌಚಾಲಯ ವ್ಯವಸ್ಥೆ, ಬಡ ಜನರ ಆರೋಗ್ಯ ಸೇವೆ, ವಿಶೇಷವಾಗಿ ಸೀಳು ತುಟಿ ಶಸ್ತ್ರ ಚಿಕಿತ್ಸೆ, ಹೀಗೆ ಹಲವಾರು ಸೇವೆಗಳನ್ನು ಸಲ್ಲಿಸಲು ಬಯಕೆ ಇದೆ ಮತ್ತು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದು ಎಂದು ತಿಳಿಸಿದರು. ಬಡವರ್ಗದವರಿಗೆ ಡಯಾಲಿಸಿಸ್ ಯೂನಿಟ್ ಅನಾಥ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಕೊಡಿಸುವ ಉದ್ದೇಶ ನನ್ನದಾಗಿದೆ ಎಂದು ಇದೇ ವೇಳೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷಡಾಬಾ ಶಂಕ್ರಣ್ಣ, ಸದಸ್ಯ ವೇದ ಶಂಕರ್ ಇತರರು ಉಪಸ್ಥಿತರಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ಪಾವಗಡ: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಹೊಸಕೋಟೆ ಪಟ್ಟಣದಲ್ಲಿ ಬುಧವಾರ ರಾತ್ರಿ 8ರ ಸುಮಾರಿಗೆ ಸಂತೆ ಮೈದಾನ ಚೌಡೇಶ್ವರಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದ ಬಳಿ ಕರಡಿ ಸಂಚರಿಸಿದ್ದು, ಕೆಲ ಕಾಲ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಜನರು ಗುಂಪು ಗುಂಪಾಗಿ ಮನೆಗಳಿಂದ ಹೊರ ಬಂದು ಏಕ ಕಾಲಕ್ಕೆ ಕರಡಿಯ ಗಾಬರಿಗೊಂಡು ಎತ್ತ ಹೋಗಲು ಸಾಧ್ಯವಾಗದೆ ಹಳೆಯ ಮನೆಯೊಳಗಡೆ ನುಗ್ಗಿತ್ತು. ಕೊನೆಗೂ ಆತಂಕದ ನಡುವೆಯೂ ಜನರು ಕರಡಿಯನ್ನು ಊರಿನಿಂದಾಚೆಗೆ ಓಡಿಸಲು ಯಶಸ್ವಿಯಾಗಿದ್ದಾರೆ. ಸದ್ಯ ಕರಡಿ ಆಗಮನದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೈ ಎನ್ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC