Subscribe to Updates
Get the latest creative news from FooBar about art, design and business.
- ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ
- ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ
- ಆ.29: ಪಾವಗಡದಲ್ಲಿ ಉದ್ಯೋಗ ಮೇಳ
- ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್
- ಮೇಕೆ ಮೇಲೆ ದಾಳಿ ಮಾಡಲು ಬಂದ ಚಿರತೆ ಸೆರೆ
- ವಿಐಪಿ ಸೆಲ್ ನಿಂದ ಸಾಮಾನ್ಯ ಕೈದಿಗಳ ಸೆಲ್ ಗೆ ಪ್ರಜ್ವಲ್ ರೇವಣ್ಣ ಶಿಫ್ಟ್: ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ!
- ಸರಗೂರು: ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ – ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಎನ್. ಸುಬ್ಬಣ್ಣ ಕರೆ
- ವಿದ್ಯಾರ್ಥಿಗಳಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಪ್ರಾಮಾಣಿಕತೆ ಬೆಳೆಸಿಕೊಳ್ಳುವುದು ಮುಖ್ಯ: ಸಾಹಿತಿ ರಿಜ್ವಾನ್ ಪಾಷಾ
Author: admin
ತುಮಕೂರು: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಎಗ್ಗಿಲ್ಲದೆ ಲಂಚಾವತಾರ ನಡೆಯುತ್ತಿದೆ, ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಲಂಚದ ಕರ್ಮಕಾಂಡ ಕೆಡಿಪಿ ಸಭೆಯಲ್ಲಿ ಬಟಾಬಯಲಾಗಿದೆ. ಜಿಲ್ಲಾಸ್ಪತ್ರೆಯ ಕರ್ಮಕಾಂಡಕ್ಕೆ ಕೆಡಿಪಿ ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್ ಕೆರಳಿ ಕೆಂಡವಾಗಿದ್ದು, ಹೆರಿಗೆ ಮಾಡಿಸೋಕೆ ಜಿಲ್ಲಾಸ್ಪತ್ರೆಯಲ್ಲಿ ದುಡ್ಡು ತಗೊಳೋದು ನಂಗೆ ಗೊತ್ತಿಲ್ಲವೇನ್ರೀ.. ಎಂದು ಅಧಿಕಾರಿಗಳಿಗೆ ಜೋರು ಧ್ವನಿಯಲ್ಲಿ ಸಚಿವ ಡಾ.ಜಿ. ಪರಮೇಶ್ವರ್ ಗದರಿದರು. ಬಳಿಕ ಡಿಎಚ್ ಒ ಚಂದ್ರಶೇಖರ್ ಹಾಗೂ ಡಿಎಸ್ ಅಸ್ಗರ್ ಬೇಗ್ ಅವರಿಗೆ ತೀವ್ರವಾಗಿ ತರಾಟೆಗೆತ್ತಿಕೊಂಡು ಚಳಿ ಬಿಡಿಸಿದರು. ಪರಮೇಶ್ವರ್ ಬೆನ್ನಲ್ಲೇ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಕೂಡ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಹಣ ಪಡೆಯುತ್ತಿರುವುದು ಒಂದಡೆಯಾದರೆ ಉಳಿದ ಕರ್ಮಕಾಂಡ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಹೆರಿಗೆಯಲ್ಲಿ ಶಸ್ತ್ರಚಿಕಿತ್ಸೆಯೇ ಹೆಚ್ಚಾಗಿ ನಡೆಯುತ್ತಿದೆ, ತುಮಕೂರು ನಂ-1 ಸ್ಥಾನದಲ್ಲಿದೆ. ಯಾಕೆ ನಾರ್ಮಲ್ ಹೆರಿಗೆ ಮಾಡುತ್ತಿಲ್ಲ, ಎಲ್ಲವನ್ನೂ ಸಿಜರಿಯನ್ನೇ ಮಾಡುತ್ತಿದ್ದೀರಾ? ಖಾಸಗಿ ಆಸ್ಪತ್ರೆಗಳಲ್ಲಿ ಸಿಜರಿಯನ್ ಹೆಚ್ಚಾಗಿದ್ರು ಕಡಿವಾಣ ಯಾಕೆ ಹಾಕ್ತಿಲ್ಲ? ಖಾಸಗಿ ಆಸ್ಪತ್ರೆಗಳ ದರ್ಬಾರ್ ಗೆ ಕಡಿವಾಣ ಹಾಕುವಲ್ಲಿ ಯಾಕೆ ನಿರ್ಲಕ್ಷ್ಯ ಮಾಡ್ತಿದ್ದೀರಿ ಎಂದು ಪರಮೇಶ್ವರ್…
ತುಮಕೂರು: ಫೋಟೋ ಶೂಟ್ ವಿಚಾರಕ್ಕೆ ಪ್ರಿಯಕರನ ಜೊತೆ ಜಗಳದ ಬಳಿಕ ಯುವತಿ ನೇಣಿಗೆ ಶರಣಾಗಿರುವ ಘಟನೆ ತುಮಕೂರು ಗ್ರಾಮಾಂತರದ ಹೊಸಹಳ್ಳಿಯಲ್ಲಿ ನಡೆದಿದೆ. ಚೈತನ್ಯ(22) ನೇಣಿಗೆ ಶರಣಾದ ಯುವತಿಯಾಗಿದ್ದಾಳೆ. ಈಕೆ ತುಮಕೂರು ಗ್ರಾಮಾಂತರದ ಹೊಸಹಳ್ಳಿ ನಿವಾಸಿಯಾಗಿದ್ದು, ನಿನ್ನೆ ರಾತ್ರಿ 10 ಘಂಟೆ ಸುಮಾರಿಗೆ ತನ್ನ ಪ್ರಿಯಕರನ ಜೊತೆಗೆ ಜಗಳವಾಡಿದ ನಂತರ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ. ತಾಯಿ ಜೊತೆ ವಾಸವಿದ್ದ ಚೈತನ್ಯ, ತುಮಕೂರಿನ ಎಸ್ ಎಸ್ ಐಟಿ ಕಾಲೇಜಿನಲ್ಲಿ ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡುತಿದ್ದಳು. ಜೊತೆಗೆ ಮಾಡಲಿಂಗ್ ನ ಮೇಕಪ್ ಆರ್ಟಿಸ್ಟ್ ಸಹ ಆಗಿದ್ದಳು. ಈ ನಡುವೆ ಪಕ್ಕದ ಊರಿನ ವಿಜಯ್ ಕುಮಾರ್ ಎಂಬಾತನೊಂದಿಗೆ ಚೈತನ್ಯ ಪ್ರೀತಿಯಲ್ಲಿ ಬಿದ್ದಿದ್ದಳು. ವಿಜಯ್ ಕುಮಾರ್ ವೃತ್ತಿಯಲ್ಲಿ ಚಾಲಕನಾಗಿ ದುಡಿಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇವರ ನಡುವೆ ಪ್ರೀತಿಯಿತ್ತು. ಪ್ರೀತಿಯ ವಿಚಾರ ತಿಳಿದು ಯುವತಿ ಮನೆಯವರು ವಾರ್ನ್ ಕೂಡ ಮಾಡಿದ್ದರು ಎನ್ನಲಾಗಿದೆ. ಚೈತನ್ಯ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಸ್ಟ್ರೀಟ್ ಫೋಟೋಗ್ರಫಿ ಮಾಡಿಸಿದ್ದರು. ಬಳಿಕ…
ಬೀದರ್: ಮಾದಕ ದ್ರವ್ಯ ಸೇವನೆ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ತಿಳಿಸಿದರು. ಜಿಲ್ಲಾ ಪೊಲೀಸ್ ಉಪವಿಭಾಗದ ವತಿಯಿಂದ ನಗರದ ಕರ್ನಾಟಕ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾದಕ ದ್ರವ್ಯ ಸೇವನೆಯಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದಾಗಿ ವ್ಯಕ್ತಿ ತಾನು ಏನು ಮಾಡುತ್ತಿದ್ದಾನೆ ಎಂಬುವುದರ ಅರಿವು ಕೂಡ ಆತನಿಗೆ ಇರುವುದಿಲ್ಲ. ಇಂತಹ ನಶೆಯಲ್ಲಿ ಇರುವವರು ಕಳ್ಳತನ, ಕೊಲೆ, ದರೋಡೆ, ಲೈಂಗಿಕ ಕಿರುಕುಳದಂಥ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೆಟ್ಟ ನಶೆಗಳಿಂದ ದೂರ ಸರಿದು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಶಿವನಗೌಡ ಪಾಟೀಲ್, ಎಸ್.ಬಿ.ಐ.ನ ಪ್ರಾದೇಶಿಕ ವ್ಯವಸ್ಥಾಪಕ ಜೈಕುಮಾರ್, ಹೆಚ್ಚುವರಿ ಡ್ರಗ್ಸ್ ಕಂಟ್ರೋಲರ್ ಧನಂಜಯ್, ಮನೋರೋಗ ತಜ್ಞ ರಾಘವೇಂದ್ರ ವಾಗ್ನರೆ, ರೈಲ್ವೆ ಪೋಲಿಸ್ ಠಾಣಾಧಿಕಾರಿ ಪಾಷಾ,…
ದಾವಣಗೆರೆ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ದಾವಣಗೆರೆ ತಾಲೂಕಿನ ಗ್ರಾಮವೊಂದರಲ್ಲಿ ಭಾನುವಾರ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವರದಿಗಳ ಪ್ರಕಾರ, ಮನೆ ಮುಂದೆ ಆಟವಾಡುತ್ತಿದ್ದ ಏಳು ವರ್ಷದ ಬಾಲಕಿಯನ್ನು ನೆರೆಹೊರೆಯ 15 ಮತ್ತು 17 ವರ್ಷದ ಅಪ್ರಾಪ್ತ ಬಾಲಕರು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಮಗಳು ಕಾಣಿಸದ ಹಿನ್ನೆಲೆ ತಾಯಿ ಹುಡುಕಿಕೊಂಡು ನೆರೆ ಮನೆಗೆ ಹೋದಾಗ ಕೃತ್ಯ ಬಯಲಿಗೆ ಬಂದಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ನೊಂದ ಬಾಲಕಿ 7 ವರ್ಷ ವಯಸ್ಸಿನವಳಾಗಿದ್ದು, ಸದ್ಯ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದು, ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿ ಬಾಲಕರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ಬೆಂಗಳೂರು: ಭ್ರಷ್ಟಾಚಾರದಲ್ಲಿ ನನ್ನ ಕೈವಾಡ ಇದ್ದರೆ ನೂರಕ್ಕೆ ನೂರರಷ್ಟು ರಾಜೀನಾಮೆ ನೀಡುತ್ತೇನೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು. ತಮ್ಮ ಸರ್ಕಾರಿ ನಿವಾಸದ ಬಳಿ ಬಿ.ಆರ್.ಪಾಟೀಲ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಡವರ ಮನೆಯ ಹಣ ಪಡೆಯುವಷ್ಟು ದರಿದ್ರ ನನಗೆ ಬಂದಿಲ್ಲ ಎಂದಿದ್ದಾರೆ. ಬಿ.ಆರ್.ಪಾಟೀಲ್ ನನ್ನ ಮೇಲೆ ಆರೋಪ ಮಾಡಿಲ್ಲ. ನಾನು ಕೊಟ್ಟ ಪತ್ರಕ್ಕೆ ಮನೆ ಕೊಟ್ಟಿಲ್ಲ ಎಂದಿದ್ದಾರೆ. ಪಂಚಾಯತಿ ಮೇಲೆ ಆರೋಪ ಮಾಡಿದ್ದಾರೆ. ಪ್ರತಿ ಪಂಚಾಯತಿಗೆ 900 ಮನೆ ನೀಡಲಾಗಿದೆ. ಎರಡು ಸಾವಿರ ಮನೆ ಕೇಳಿದ್ರೆ 900 ಮನೆ ನೀಡಲಾಗಿದೆ. ಶಾಸಕರು ಕೊಟ್ಟ ಮನವಿ ನಮ್ಮ ಬಳಿ ಇವೆ. ಬಿ.ಆರ್.ಪಾಟೀಲ್ ಹಿರಿಯರಿದ್ದಾರೆ. ಯಾಕೆ ಆರೋಪ ಮಾಡಿದ್ರೋ ಗೊತ್ತಿಲ್ಲ ಎಂದರು. ಬಿಜೆಪಿಗರು ಹೇಳುವುದೇ ಬೇಡ ನಾನೇ ರಾಜೀನಾಮೆ ನೀಡುತ್ತೇನೆ. ಯಾರ ಬಳಿಯೂ ನಾವು ದುಡ್ಡು ಪಡೆದು ಮನೆ ಕೊಟ್ಟಿಲ್ಲ. ರಾಮನಗರಕ್ಕೆ ಕೂಡ ಮನೆ ಕೊಟ್ಟಿದ್ದೇವೆ. ಎಲ್ಲರಿಗೂ ಮನೆ ಕೊಟ್ಟಿದ್ದೇವೆ. ದುಡ್ಡು ಪಡೆದು ಮನೆ ಕೊಟ್ಟರೆ ಹುಳ ಬಿದ್ದು…
ನವದೆಹಲಿ: ರಾಜ್ಯ ಶಾಸಕಾಂಗವು ಅಂಗೀಕರಿಸಿದ ಏಳು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ರಾಷ್ಟ್ರಪತಿಗಳ ಮುಂದೆ ಮಂಡಿಸಲಾದ ಪ್ರಮುಖ ಮಸೂದೆಗಳಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ, 2015 ಸೇರಿದ್ದು, ಇದು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಆರ್‌ಟಿಇ ಚೌಕಟ್ಟನ್ನು ಮಾರ್ಪಡಿಸಲು ಪ್ರಯತ್ನಿಸುತ್ತದೆ. ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ಮಸೂದೆ, 2024 ತನ್ನ ಖನಿಜ ಸಂಪನ್ಮೂಲಗಳಿಂದ ರಾಜ್ಯದ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರೂಪಿಸಲಾಗಿರುವ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ತಿದ್ದುಪಡಿ ಕಾಯ್ದೆ 2025 ಮಸೂದೆಗೆ ಅನುಮೋದನೆ ಕೇಳಲಾಗಿದೆ. ಆಡಳಿತ ಪ್ರಕ್ರಿಯೆಗಳನ್ನು ಸುಗಮಗೊಳಿಸುವತ್ತ ಗಮನಹರಿಸುವ ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2025 ಮತ್ತು ಅದರ ಪ್ರತಿರೂಪವಾದ ನೋಟರಿಗಳು (ಕರ್ನಾಟಕ ತಿದ್ದುಪಡಿ) ಮಸೂದೆ, 2025…
ಬೆಂಗಳೂರು: ದುಡ್ಡಿಲ್ಲ ಅಂತ ಯಾರು ಹೇಳಿದ್ದು?. ನಾನು ತಮಾಷೆಗೆ ಹೇಳಿದ್ದೇನೆ ಅಷ್ಟೇ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಸಿದ್ದರಾಮಯ್ಯರ ಬಳಿ ಹಣವಿಲ್ಲ ಎಂಬ ವಿಡಿಯೋವೊಂದು ವೈರಲ್ ಆಗಿರುವ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನಾನು ಸರ್ಕಾರದ ಬಳಿ ದುಡ್ಡಿಲ್ಲ ಅಂತ ಹೇಳಿಲ್ಲ. ಯಾವುದೇ ರೀತಿಯ ಆರ್ಥಿಕ ಮುಗ್ಗಟ್ಟು ಇಲ್ಲ. ಹಣ ಬಿಡುಗಡೆ ಸ್ವಲ್ಪ ನಿಧಾನ ಆಗಿರಬಹುದು. ಡಿಪಿಆರ್ ಮಾಡೋದ್ರಲ್ಲಿ ತಡ ಆಗಿರಬಹುದು ಎಂದು ಸ್ಪಷ್ಟಪಡಿಸಿದರು. ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಪ್ರಕರಣ ಸಂಬಂಧ ಮಾತನಾಡಿ, “ನನಗೆ ಬಂದಿರುವ ಮಾಹಿತಿ ಪ್ರಕಾರ ಅನಂತ್ ಕುಮಾರ್ ಹೆಗಡೆ ಹೈವೈನಲ್ಲಿ ಬರಬೇಕಾದರೆ ಘಟನೆ ನಡೆದಿದೆ. ಡ್ರೈವರ್, ಗನ್ ಮ್ಯಾನ್ ಕಾರು ನಿಲ್ಲಿಸಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಆದರೆ ಗನ್ ಮ್ಯಾನ್ ಹೊಡೆದಿಲ್ಲ ಅಂತಿದ್ದಾರೆ. ಇದರ ಬಗ್ಗೆ ಈಗಲೇ ಹೇಳೋಕೆ ಆಗಲ್ಲ. ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕಿದೆ. ಇನ್ನಷ್ಟು ದಿನ ಕಾದು ನೋಡೋಣ. ತನಿಖೆಯಲ್ಲಿ ಏನು ಬರುತ್ತೆ ಅಂತ ನೋಡೋಣ ಎಂದರು.…
ಬಾಗಲಕೋಟೆ: ಒಂದು ಇಲಾಖೆಯಲ್ಲಿನ ತಪ್ಪಿಗೆ ಇಡೀ ಸರ್ಕಾರವನ್ನೇ ದೂಷಿಸುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನವನಗರದಲ್ಲಿ ನಿರ್ಮಿಸಿರುವ ನೂತನ ಸಮುದಾಯ ಭವನ “ಧಾತ್ರಿ” ಮಂಗಲ ಭವನ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪ, ಕಾಂಗ್ರೆಸ್ ನಾಯಕರ ಬಹಿರಂಗ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಇಡೀ ವಸತಿ ಇಲಾಖೆ ಹಾಗೂ ಸರ್ಕಾರವನ್ನೇ ದೂಷಣೆ ಮಾಡುವ ಬದಲು, ಇಲಾಖೆಯ ಯಾವ ವಿಭಾಗದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದರೆ ನಾವು ಕ್ರಮ ಕೈಗೊಳ್ಳಬಹುದು. ನೀವು ಪೊಲೀಸ್ ಇಲಾಖೆಗೆ ದೂರು ಕೊಟ್ಟರೂ ಎಫ್ ಐಆರ್ ಮಾಡಿ ನಾವು ತನಿಖೆ ಮಾಡುವುದಾಗಿ ಹೇಳಿದ್ದೇನೆ ಎಂದರು. ರಾಜು ಕಾಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದಿರುವ ಬಗ್ಗೆ ಪ್ರತಿಕ್ರಿಯಿಸಿ, “ನಾವು ಅದನ್ನು ಪರಿಶೀಲಿಸುತ್ತೇವೆ. ಯಾವ ಸಂದರ್ಭದಲ್ಲಿ 13 ಕೋಟಿ ರೂ ಕಾಮಗಾರಿ ಮಂಜೂರಾಗಿಲ್ಲ ಅಂತ ಹೇಳಿದ್ದಾರೆ. ಅದನ್ನು ಪರಿಶೀಲನೆ ಮಾಡಿ, ಆದಷ್ಟೂ ಬೇಗ ಸರಿ ಮಾಡಿಕೊಡುತ್ತೇವೆ ಎಂದರು. ಗಣಿ ಹಗರಣದ ಬಗ್ಗೆ ಸಚಿವ ಎಚ್.ಕೆ.ಪಾಟೀಲ್ ಸಿಎಂಗೆ ಪತ್ರ…
ಶಿಮ್ಲಾ: ಸರ್ಕಾರಿ ಶಾಲೆಯೊಂದರಲ್ಲಿ 24 ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ನಡೆದಿದೆ. ಶಾಲೆಯಲ್ಲಿ ನಡೆಸಲಾದ ಶಿಕ್ಷಾ ಸಂವಾದ ಕಾರ್ಯಕ್ರಮದಲ್ಲಿ ಲೈಂಗಿಕ ಕಿರುಕುಳ ನಡೆದಿರುವ ವಿಚಾರವನ್ನು ವಿದ್ಯಾರ್ಥಿನಿಯರು ಬಹಿರಂಗಪಡಿಸಿದ್ದಾರೆ. 8, 9, 10ನೇ ತರಗತಿಯ ವಿದ್ಯಾರ್ಥಿನಿಯರು ಗಣಿತ ಶಿಕ್ಷಕ ಅನುಚಿತವಾಗಿ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಉಲ್ಲೇಖ ಮಾಡಿದ್ದರು. ಶಾಲೆಯಲ್ಲಿ ನಡೆದ ಲೈಂಗಿಕ ಕಿರುಕುಳ ಸಮಿತಿಯ ಸಭೆಯಲ್ಲಿ ವಿದ್ಯಾರ್ಥಿಗಳು ಗಣಿತ ಶಿಕ್ಷಕನ ವಿರುದ್ಧ ಲಿಖಿತ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಆರೋಪಿಯನ್ನು ಭಾನುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಸದ್ಯ ಆರೋಪಿ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ತಿಪಟೂರು: ಜೆಡಿಎಸ್ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೂಚನೆಯಂತೆ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ಮುಂದಾಗಿದ್ದು, ರಾಜ್ಯಾದ್ಯಂತ 50 ಲಕ್ಷ ಸದಸ್ಯತ್ವ ನೋಂದಣಿಯನ್ನು ಮಾಡುವ ಕನಸು ನನಸು ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಪಟೂರು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ತಿಳಿಸಿದರು. ಬೂತ್ ಮಟ್ಟದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮತ್ತು ಮಿಸ್ ಕಾಲ್ ಮೂಲಕ ಪಕ್ಷದ ಕಾರ್ಯಕರ್ತರ ನೋಂದಣಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಿದ್ದೇವೆ, ಜುಲೈ 21ರಂದು ನಿಖಿಲ್ ಕುಮಾರಸ್ವಾಮಿ ಆಗಮನದ ನಿರೀಕ್ಷೆಯಿದ್ದು ಒಂದು ಬೃಹತ್ ಸಭೆ ಏರ್ಪಡಿಸಿ ಪಕ್ಷ ಸಂಘಟನೆಗೆ ಬಲ ನೀಡಲಿದ್ದೇವೆ ಎಂದು ತಿಳಿಸಿದರು. ಕಳೆದ ವರ್ಷ ಕೊಬ್ಬರಿ ಬೆಲೆ ಏಳು ಎಂಟು ಸಾವಿರ ಇದ್ದಾಗ ಹೋರಾಟ ಹಮ್ಮಿಕೊಂಡಿದ್ದನ್ನು ಶಾಂತಕುಮಾರ್ ಸ್ಮರಿಸಿದರು. 24,000 ಮುಟ್ಟಿದೆ ಮುಂದಿನ ದಿನಗಳಲ್ಲಿ 30,000 ದಾಟಬಹುದು ತೆಂಗಿನಮರದಲ್ಲಿ ಇಳುವರಿ ಕಡಿಮೆಯಾಗಿದ್ದು, ಇಳುವರಿ ಕಡಿಮೆಯಾಗಿರುವ ಕಾರಣ ಕಂಡುಕೊಂಡು ಇಳುವರಿ ಹೆಚ್ಚು ಮಾಡಲು ವೈಜ್ಞಾನಿಕ ವಿಧಾನ ಬಳಸಬೇಕು, ಇದರಿಂದ ರೈತ ಸಮುದಾಯಕ್ಕೆ ಅನುಕೂಲವಾಗುತ್ತದೆ. ಇದಕ್ಕೆ ಕೊನೆಯಲ್ಲಿ ಕೃಷಿ…