Subscribe to Updates
Get the latest creative news from FooBar about art, design and business.
- ಕಾರಲ್ಲೇ ಪ್ರೇಮಿಗಳ ಗಲಾಟೆ: ಸ್ಫೋಟಕ ಸಿಡಿಸಿಕೊಂಡು ಯುವಕ ಸಜೀವ ದಹನ, ಯುವತಿಗೆ ಗಾಯ
- ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹುಲಿ ದಾಳಿ
- ತುಮಕೂರು: ಜೂ.29ರಂದು ವಿವಿಧ ಹುದ್ದೆಗಳಿಗೆ ಕಾರ್ಯಾಗಾರ
- ವಚನ ಗಾಯನ, ಪ್ರಬಂಧ ಸ್ಪರ್ಧೆ: ನೋಂದಾಯಿಸಲು ಸೂಚನೆ
- ತೋಟಗಾರಿಕಾ ಬೆಳೆಗಳಿಗೆ ವಿಮಾ ಸೌಲಭ್ಯ: ರೈತರಿಗೆ ಉಪಯುಕ್ತ ಮಾಹಿತಿ ಇಲ್ಲಿದೆ
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ನೀರಿಗಾಗಿ ಮಹಿಳೆಯರ ಪರದಾಟ: ಅಧಿಕಾರಿಗಳ ವಿರುದ್ಧ ಆಕ್ರೋಶ
- ಪಂಚಗ್ಯಾರಂಟಿ ಯೋಜನೆಗಳ ಸ್ಥಗಿತ ಸಾಧ್ಯವಿಲ್ಲ: ಸಿ.ಡಿ. ಚಂದ್ರಶೇಖರ್
- ಜೂಜಾಟ: 12 ಮಂದಿ ಆರೋಪಿಗಳ ಬಂಧನ
Author: admin
ತುಮಕೂರು: ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದಲ್ಲಿರುವ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ 2025–26ನೇ ಸಾಲಿನ ಬಿ.ವಿ.ಎ.(ದೃಶ್ಯಕಲಾ)–ಚಿತ್ರಕಲಾ ಪದವಿ ತರಗತಿ ಪ್ರವೇಶಾತಿಗಾಗಿ ಆಸಕ್ತ ಪಿ.ಯು.ಸಿ / ಐಟಿಐ / ಡಿಪ್ಲೋಮಾ / 10+2 / ತತ್ಸಮಾನ ವಿದ್ಯಾರ್ಹತೆ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಲ್ಲದೆ, ಹೊಸದಾಗಿ ಬಿ.ವಿ.ಎ.–ಅನಿಮೆಷನ್ ಪದವಿ ಮತ್ತು ಬಿವಿಎ–ಗ್ರಾಫಿಕ್ಸ್ ಡಿಸೈನ್ ಪದವಿ ಕೋರ್ಸುಗಳನ್ನು ಪ್ರಾರಂಭಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಈ ಪದವಿಗಳು ವಿವಿಧ ವೃತ್ತಿ ಕೌಶಲ್ಯಗಳನ್ನೊಳಗೊಂಡಿದ್ದು, ಪದವಿ ಪೂರ್ಣಗೊಂಡ ಬಳಿಕ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ ಅಥವಾ ಸ್ವಯಂ ಉದ್ಯೋಗ ಕೈಗೊಳ್ಳಬಹುದಾಗಿದೆ. ದೃಶ್ಯಕಲಾ ಪದವಿಗಳು 4 ವರ್ಷದ ಅವಧಿಯ 8 ಸೆಮಿಸ್ಟರ್ಗಳಲ್ಲಿ ನಡೆಯಲಿದ್ದು, ಬಿ.ವಿ.ಎ–ಪೇಟಿಂಗ್, ಬಿ.ವಿ.ಎ–ಅನಿಮೇಶನ್, ಬಿ.ವಿ.ಎ–ಗ್ರಾಫಿಕ್ ಡಿಸೈನಿಂಗ್ ಪದವಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು. ಪ್ರವೇಶಕ್ಕಾಗಿ ಆನ್ ಲೈನ್ / ಆಫ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಪ್ರವೇಶಾತಿ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 8147870998 / 9886744229ನ್ನು ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರು…
ಕೊರಟಗೆರೆ: ದೊಡ್ಡಸಾಗ್ಗೆರೆಯ ಮರಿಸ್ವಾಮಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ರೈತರ ಮೇಲೆ ನಿರಂತರ ದರ್ಪ ತೋರಿಸುತ್ತಿದ್ದು, ನಮ್ಮನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಅವಧಾರನಹಳ್ಳಿ ರೈತರು ತಹಶೀಲ್ದಾರ್ ಕಚೇರಿ ಮುತ್ತಿಗೆ ಹಾಕಿದರು. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಾಜಿಹಳ್ಳಿ ಗ್ರಾಮದ ಸರ್ವೇ ನಂಬರ್ 33ರಲ್ಲಿ ಸುಮಾರು 30 ವರ್ಷಗಳಿಂದ ರೈತರು ಸಾಗುವಳಿ ಮಾಡುತ್ತಿದ್ದಾರೆ. ಬಗರ್ ಹುಕ್ಕುಮ್ ಅಡಿಯಲ್ಲಿ ಅರ್ಜಿ ಹಾಕಿ ಸರ್ಕಾರಕ್ಕೆ ಟಿ.ಟಿ. ಸಹ ಈ ಬಡರೈತರು ಕಟ್ಟಿದ್ದಾರೆ. ಆದರೆ ಇದೀಗ ಅನುಭವದಲ್ಲಿ ಇರುವ ರೈತರನ್ನು ಒಕ್ಕಲು ಎಬ್ಬಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ತೋಟಗಾರಿಕೆ ಇಲಾಖೆಯ ಕೆಂಪೇಗೌಡ ಎಂಬ ಅಧಿಕಾರಿ ರೈತರಿಗೆ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ದನ ಕುರಿಗಾಹಿ ಹೆಣ್ಣು ಮಕ್ಕಳು ಕುರಿ ದನ ಕಾಯುಲು ಹೋದರೆ ಅಸಭ್ಯವಾಗಿ ವರ್ತಿಸುವುದು ಪೋಟೊ ತೆಗೆಯುವುದು ಮಾಡುತ್ತಾರೆ ಎಂದು ಆರೋಪಿಸಿದರು. ತಹಶೀಲ್ದಾರ್ ಕಚೇರಿ ಮುತ್ತಿಗೆ ಹಾಕಿದ ರೈತರು ಸೂಕ್ತ ನ್ಯಾಯ ಒದಗಿಸುವಂತೆ ತಹಶೀಲ್ದಾರ್ ಗೆ ಮನವಿ…
ಬೀದರ್: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ ತಂದೆಯನ್ನು ಕೊಲೆ ಮಾಡಿರುವ ಘಟನೆ ಹುಲಸೂರ ತಾಲೂಕಿನ ಬೇಲೂರ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ ಕೊಲೆಯಾದ ಶಿವಕುಮಾರ್ ದಿನಾಲೂ ಮದ್ಯ ಸೇವಿಸಿ ಬಂದು ಮನೆಯಲ್ಲಿ ಕುಟುಂಬಸ್ಥರಿಗೆ ಗಲಾಟೆ ಮಾಡುತ್ತಿದ್ದ ಭಾನುವಾರ (ಮೇ11) ರಂದು ರಾತ್ರಿ ಕುಡಿದ ಅಮಲಿನಲ್ಲಿ ಮನೆಗೆ ಬಂದು ಪುನಃ ಕಿರಿಕಿರಿ ತೆಗೆದಿದ್ದ ಇದರಿಂದ ಕೋಪಗೊಂಡ ಮಗ ರೇವಣಸಿದ್ದ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಪರಿಣಾಮವಾಗಿ ಗಂಭೀರ ಗಾಯಗೊಂಡಿದ್ದ ಶಿವಕುಮಾರ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ವಿಷಯ ತಿಳಿದು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹುಮನಾಬಾದ್ ಡಿವೈಎಸ್ಪಿ ಜೆ ಎಸ್. ನ್ಯಾಮೇಗೌಡ, ಬಸವಕಲ್ಯಾಣ ಸಿಪಿಐ ಅಲಿಸಾಬ್,ಹುಲಸೂರ ಪಿಎಸ್ ಐ ಶಿವಪ್ಪ ಮೇಟಿ ಹಾಗೂ ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲಿಸಿದರು.ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಮುಂದುವರೆದಿದೆ. ವರದಿ: ಅರವಿಂದ ಮಲ್ಲಿಗೆ ನಮ್ಮತುಮಕೂರಿನ…
ತುಮಕೂರು: ಮೈಸೂರಿನ ಜೆಎಸ್ ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ವತಿಯಿಂದ 3 ವರ್ಷಗಳ ಅವಧಿಯ ವಿವಿಧ ಡಿಪ್ಲೊಮಾ ಕೋರ್ಸುಗಳ ಪ್ರವೇಶಕ್ಕೆ ಅರ್ಹ ವಿಕಲಚೇತನ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಆರ್ಕಿಟೆಕ್ಚರ್ ಅಸಿಸ್ಟೆಂಟ್ ಷಿಪ್, ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್ಸ್(ಫಾರ್ ವಿಜ್ಯುವಲಿ ಇಂಪರ‍್ಡ್), ಅಪೆರಲ್ ಡಿಸೈನ್ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ & ಎಲೆಕ್ಟ್ರಿಕ್ ವೆಹಿಕಲ್ ಟೆಕ್ನಾಲಜಿ ಕೋರ್ಸುಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿಶೇಷ ಚೇತನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿದ್ಯಾರ್ಥಿ ವೇತನದ ಆರ್ಥಿಕ ಸಹಾಯ ದೊರೆಯುತ್ತದೆ. ಪಾಲಿಟೆಕ್ನಿಕ್ ನ ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುವುದು. ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯದ ಸೌಲಭ್ಯ ಕಲ್ಪಿಸಲಾಗುವುದು. ಅರ್ಹ ವಿದ್ಯಾರ್ಥಿಗಳು (ಸಾಮಾನ್ಯ ವರ್ಗದ ಅಭ್ಯರ್ಥಿಗಳು…
ತುಮಕೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಶೇ.5ರಷ್ಟು ರಿಯಾಯಿತಿ ತೆರಿಗೆ ಪಾವತಿ ಮಾಡುವ ಅವಧಿಯನ್ನು ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ತಿಳಿಸಿದ್ದಾರೆ. ಆಸ್ತಿ ತೆರಿಗೆ ಪಾವತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಹಾಗೂ ಸ್ವಯಂ ತೆರಿಗೆ ಪಾವತಿಯನ್ನು ಉತ್ತೇಜಿಸಲು ಕಳೆದ ಏಪ್ರಿಲ್ 1 ರಿಂದ 30ರವರೆಗೆ ಮಾತ್ರ ಕಲ್ಪಿಸಲಾಗಿದ್ದ ಶೇ.5ರಷ್ಟು ರಿಯಾಯಿತಿ ತೆರಿಗೆ ಪಾವತಿ ಅವಧಿಯನ್ನು ವಿಸ್ತರಿಸಲಾಗಿದ್ದು, ಜೂನ್ 30ರೊಳಗೆ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿಸಿದಲ್ಲಿ ಶೇ.5ರಷ್ಟು ರಿಯಾಯಿತಿ ಲಭ್ಯವಾಗಲಿದೆ. ಮಹಾ ನಗರಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರು ಈ ಸದಾವಕಾಶದ ಪ್ರಯೋಜನ ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW ————————————
ಚಿತ್ರದುರ್ಗ: ಭಾರತ ಮತ್ತು ಪಾಕ್ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಏನು ಹೆಡ್ ಮಾಸ್ಟ್ರಾ? ನಾವೇನು ಸ್ಕೂಲ್ ಮಕ್ಕಳಾ? ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು. ಪಾಕ್ ಹಾಗೂ ಭಾರತ ನಡುವಿನ ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸಾರ್ವಜನಿಕ ವಲಯದಲ್ಲೊಂದು ಪ್ರಶ್ನೆ ತಲೆಯೆತ್ತಿದ್ದು, ಮೊದಲು ನಾವು ಎಲ್ಲಾ ವಿಷಯವನ್ನು ಅವಲೋಕಿಸಿದ ಬಳಿಕ ಸಂಘರ್ಷ ಮಾಡಬೇಕಿತ್ತು. ಆದರೆ ಸಂಘರ್ಷ ಆರಂಭವಾದ ಮೇಲೆ ಅವರಿಗೆ ಪಾಠ ಕಲಿಸಬೇಕಾದ್ದು ನಮ್ಮ ಗುರಿಯಾಗಬೇಕಿತ್ತು. ದಿಢೀರ್ ಅಂತ ಅಮೆರಿಕ ಹೇಳಿದಾಕ್ಷಣ ಕದನ ವಿರಾಮ ಘೋಷಣೆ ಕಂಡಾಗ, ಪಾಕ್ ಗೆ ನಾವು ನಿಜವಾಗಿಯೂ ಪಾಠ ಕಲಿಸಿದ್ದೀವಾ ಎಂಬ ಪ್ರಶ್ನೆ ನನಗೆ ಮೂಡುತ್ತಿದೆ ಎಂದರು. ಈ ಕದನ ವಿರಾಮದ ಬಳಿಕ ಭಾರತಕ್ಕೆ ನಾವು ಪಾಠ ಕಲಿಸಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಾರೆ. ಆದರೆ ಪಾಕ್ಗೆ ಪಾಠ ಕಲಿಸಿದ್ದೀವಿ ಎಂದು ನಾವು ಹೇಳಿಕೊಳ್ಳುತ್ತಿದ್ದೇವೆ. ಒಮ್ಮೆ ಸಂಘರ್ಷ ಆರಂಭವಾದ…
ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ನಿಧನದ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ‘ಕಾಂತಾರ ಚಾಪ್ಟರ್ 1’ರಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ತುಂಬಲಾರದ ನಷ್ಟ ಎಂದು ಬರೆದುಕೊಂಡಿದ್ದಾರೆ. ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ರಿಷಬ್ ಶೆಟ್ಟಿ, ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ‘ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗೂ ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ. ಮತ್ತೆ ಹುಟ್ಟಿ ಬಾ ಗೆಳೆಯ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಇನ್ನೂ ಹೊಂಬಾಳೆ ಫಿಲ್ಮ್ಸ್ ಕೂಡ ರಾಕೇಶ್ ಅಗಲಿಕೆಗೆ ಸಂತಾಪ ಸೂಚಿಸಿದ್ದು, ನಟ ರಾಕೇಶ್ ಪೂಜಾರಿ ನಿಧನಕ್ಕೆ ತೀವ್ರ ಸಂತಾಪಗಳು. ಈ ನೋವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ, ಅವರ ಆಪ್ತರಿಗೆ…
ತುಮಕೂರು: ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಡೆಂಗ್ಯೂ, ಚಿಕುಂಗುನ್ಯಾ, ಮೆದುಳುಜ್ವರ, ಆನೆ ಕಾಲು ರೋಗ, ಮಲೇರಿಯಾ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಮಲೇರಿಯಾ ಅಧಿಕಾರಿ ಡಾ.ಕೆ.ಎಸ್. ರಂಗನಾಥ್ ಅವರಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ, ತಾಯಿ ಮರಣ ಮತ್ತು ಶಿಶು ಮರಣ ಪ್ರಕರಣಗಳ ಪರಿಶೀಲನೆಗೆ ಸಂಬಂಧಿಸಿದಂತೆ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಲೇರಿಯ, ಡೆಂಗ್ಯೂ, ಚಿಕುಂಗುನ್ಯಾ, ಮೆದುಳುಜ್ವರ, ಆನೆ ಕಾಲು ರೋಗದ ಪ್ರಕರಣಗಳು ಬಾರದಂತೆ ಶಾಲಾ–ಕಾಲೇಜು, ವಸತಿ ನಿಲಯಗಳಲ್ಲಿಯೂ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಸೂಚಿಸಿದರು. ಸೊಳ್ಳೆಗಳ ಮೂಲಕ ಡೆಂಗ್ಯೂ, ಚಿಕುಂಗುನ್ಯಾ, ಮೆದುಳುಜ್ವರ ರೋಗಗಳು ಹರಡುತ್ತಿದ್ದು, ಸೊಳ್ಳೆಗಳನ್ನು ನಿಯಂತ್ರಿಸಲು ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸುವ; ಸ್ವಚ್ಛತೆ ಕಾಪಾಡಿಕೊಳ್ಳುವ; ನೀರಿನ ಬಾವಿ, ಕಾರಂಜಿ, ಕೆರೆ–ಕುಂಟೆ, ಹೊಂಡಗಳಿಗೆ ಸೊಳ್ಳೆ ಮರಿಗಳನ್ನು ತಿನ್ನುವ; ಗ್ಯಾಂಬೂಸಿಯಾ ಮತ್ತು ಗಪ್ಪಿ ಲಾರ್ವಾಹಾರಿ…
ತುಮಕೂರು: ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ನೇರವಾಗಿ 2ನೇ ವರ್ಷದ ಡಿಪ್ಲೋಮಾ(ಡಿ.ಹೆಚ್.ಟಿ.ಟಿ.) ಕೋರ್ಸ್ ಪ್ರವೇಶಕ್ಕಾಗಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವ್ಯಾಸಂಗದ ಸಮಯದಲ್ಲಿ ಮಾರ್ಗಸೂಚಿ ಪ್ರಕಾರ ಪ್ರತಿ ಮಾಹೆ 2500 ರೂ.ಗಳ ಶಿಷ್ಯ ವೇತನ ಹಾಗೂ ಆಯಾ ಐ.ಐ.ಹೆಚ್.ಟಿ. ನಿಯಮಾನುಸಾರ ವಸತಿ ನಿಲಯದ ಸೌಲಭ್ಯವನ್ನು ಕಲ್ಪಿಸಲಾಗುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಣಿತ, ಭೌತಶಾಸ್ತ್ರ ಹಾಗೂ ರಾಸಾಯನಶಾಸ್ತ್ರ ವಿಷಯದಲ್ಲಿ 10+2 ಪರೀಕ್ಷೆ/ ಯಾವುದೇ ಜವಳಿ ವಿಭಾಗದ ವೃತ್ತಿಪರ ವಿಭಾಗದಲ್ಲಿ 10+2 ಪರೀಕ್ಷೆ/ 10ನೇ ತರಗತಿ+2 ವರ್ಷಗಳ ಐಟಿಐ/ 10+2(2ವರ್ಷಗಳ ಐಟಿಐ) ತರಗತಿ ಉತ್ತೀರ್ಣರಾಗಿರಬೇಕು. 2025ರ ಜುಲೈ 1ಕ್ಕೆ ಅನ್ವಯಿಸುವಂತೆ 25 ವರ್ಷ ವಯೋಮಿತಿಯೊಳಗಿನ ಸಾಮಾನ್ಯ ಹಾಗೂ 27 ವರ್ಷ ವಯೋಮಿತಿಯೊಳಗಿನ ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಗದಗ-ಬೆಟಗೇರಿ(ಕರ್ನಾಟಕ)ಯ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ 2; ಸೇಲಂ(ತಮಿಳುನಾಡು)ನ ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ 3; ವೆಂಕಟಗಿರಿ(ನಲ್ಲೂರು ಜಿಲ್ಲೆ, ಆಂಧ್ರಪ್ರದೇಶ) ಎಸ್.ಪಿ.ಕೆ.ಎಂ. ಭಾರತೀಯ ಕೈಮಗ್ಗ…
ತುಮಕೂರು: ಬೌದ್ಧ ಧರ್ಮ ವಿಜ್ಞಾನ ಮತ್ತು ವೈಚಾರಿಕತೆಗೆ ಮಹತ್ವ ನೀಡುವುದರೊಂದಿಗೆ ನೈತಿಕತೆಗೂ ಸಮಾನ ಮಹತ್ವ ನೀಡುತ್ತದೆ ಎಂದು ಬೆಂಗಳೂರು ನ್ಯಾಷನಲ್ ಕಾಲೇಜಿನ ಸಹ ಪ್ರಾಧ್ಯಾಪಕ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ರವಿಕುಮಾರ್ ಬಾಗಿ ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಗೌತಮ ಬುದ್ಧ ಅಧ್ಯಯನ ಪೀಠ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಸೋಮವಾರ ಬುದ್ಧಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಧಮ್ಮ ಕುರಿತ ಬುದ್ಧನ ಚಿಂತನೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಬುದ್ಧನ ಧರ್ಮ ದೇವರು ಇದ್ದಾನೋ ಇಲ್ಲವೋ ಎಂಬ ಚರ್ಚೆಗೆ ಪ್ರಾಮುಖ್ಯತೆ ನೀಡುವುದಿಲ್ಲ; ಬದಲಾಗಿ “ನನಗೆ ತಿಳಿದಿಲ್ಲ” ಎನ್ನುತ್ತದೆ. ಇತರ ಮಹಾನ್ ವ್ಯಕ್ತಿಗಳ ಅಸ್ತಿತ್ವವನ್ನು ಗೌರವಿಸುತ್ತದೆ. ಪ್ರಜ್ಞೆಯೇ ಮುಖ್ಯವೆಂದು ಸಾರುವ ಬುದ್ಧ, ತನ್ನ ಹೇಳಿಕೆಗಳನ್ನು ಯಾರೂ ನಂಬಲೇಬೇಕಾಗಿಲ್ಲ, ಬದಲಾಗಿ ಪರಿಶೀಲಿಸಬಹುದೆಂದು ತಿಳಿಸುತ್ತಾನೆ ಎಂದು ವಿಶ್ಲೇಷಿಸಿದರು. ಕಾಲ ಮತ್ತು ಸಂದರ್ಭಕ್ಕೆ ಹೊಂದಿಕೆಯಾಗದಿದ್ದರೆ ಯಾವುದನ್ನಾದರೂ ತಿರಸ್ಕರಿಸುವ ಸ್ವಾತಂತ್ರ‍್ಯವಿದೆ, ಆದರೆ ಆಲೋಚಿಸುವ ಸಾಮರ್ಥ್ಯ ಪ್ರತಿಯೊಬ್ಬರಿಗೂ ಇರಬೇಕು. ಬುದ್ಧ ಧರ್ಮದಲ್ಲಿ ನೈತಿಕತೆಗೆ ಹೆಚ್ಚಿನ ಸ್ಥಾನವಿದ್ದು, ತಪ್ಪು ಮಾಡಿದವರು ತಪ್ಪಿತಸ್ಥರು, ಸರಿ…