Author: admin

ಬೀದರ್: ಕೈಕೊಟ್ಟ ಬೆಳೆ ಮತ್ತು ಸಾಲದ ಹೊರೆಯಿಂದಾಗಿ ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಮಂಗಳವಾರ ನಡೆದಿವೆ. ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದ ಯುವ ರೈತ ಕಾರ್ತಿಕ್ (21) ಎಂಬುವವರು ಖಾನಾಪುರ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಕಾರ್ತಿಕ್ ಬೇರೆಯವರ ಜಮೀನು ಗುತ್ತಿಗೆ ಪಡೆದು ಬೇಸಾಯ ಮಾಡುವುದಕ್ಕಾಗಿ ಬ್ಯಾಂಕ್ ಹಾಗೂ ಖಾಸಗಿಯವರ ಬಿಳಿ ಕೈಸಾಲ ಸೇರಿ ಒಟ್ಟು ₹4 ಲಕ್ಷ ಸಾಲ ಪಡೆದಿದ್ದರು ನಿರೀಕ್ಷೆಯಂತೆ ಬೆಳೆ ಬೆಳೆಯದೆ ಸಂಕಷ್ಟಕ್ಕೆ ಸಿಲುಕಿದ್ದರು ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಈ ಕುರಿತು ಧನ್ನೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾವಿಗೆ ಹಾರಿ ರೈತ ಆತ್ಮಹತ್ಯೆ: ಬಸವಕಲ್ಯಾಣ ತಾಲೂಕಿನ ಇಲ್ಲಾಳ ಗ್ರಾಮದ ರೈತ ಜಗದೀಶರೆಡ್ಡಿ ಪ್ರಲ್ಹಾದರೆಡ್ಡಿ (49) ತಮ್ಮ ಜಮೀನಿನಲ್ಲಿ ಇರುವ ಬಾವಿಗೆ ಹಾರಿ ಮಂಗಳವಾರ ನಸುಕಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಈ ಹಿಂದೆ ಎರಡೂವರೆ ಎಕರೆ ಜಮೀನು ಇತ್ತು ರೇಷ್ಮೆ ಹಾಗೂ ಇತರೆ…

Read More

ಬೆಂಗಳೂರು: 13 ವರ್ಷದ ಬಾಲಕನೋರ್ವ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಗೊಲ್ಲರಹಟ್ಟಿಯ ರತ್ನನಗರದಲ್ಲಿ ನಡೆದಿದೆ. ಮೊಬೈಲ್ ಗೀಳಿನಿಂದಾಗಿ ಬಾಲಕ ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ. ತನ್ನ 9 ವರ್ಷದ ತಂಗಿಯ ಎದುರೇ ಬಾಲಕ ನೇಣು ಬಿಗಿದುಕೊಂಡಿದ್ದಾನೆ. ಆಕೆ ಅಣ್ಣ ಏನು ಮಾಡುತ್ತಿದ್ದಾನೆ ಎನ್ನುವುದು ತಿಳಿಯದೇ ನೋಡುತ್ತಾ ನಿಂತಿದ್ದಳು ಎನ್ನಲಾಗಿದೆ. ಸಂಜೆ 7 ಗಂಟೆಯ ಸುಮಾರಿಗೆ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ಉಡದಾರ ಕುತ್ತಿಗೆಗೆ ಬಿಗಿದು, ತುಂಡಾಗಿ ಬಾಲಕ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆತನ ತಾಯಿ ಬಂದಿದ್ದರು. ತಕ್ಷಣವೇ ಬಾಲಕನನ್ನು  ನೆರೆಹೊರೆಯವರ ಸಹಕಾರದಿಂದ ಆಸ್ಪತ್ರೆಗೆ ಕರೆದೊಯ್ಯಲಾಯ್ತು, ಆದರೆ ಬಾಲಕ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಜೋಧ್ ಪುರ: ತುರ್ತು ಬಾಗಿಲು ತೆರೆದಿದ್ದಕ್ಕಾಗಿ ಜೋಧ್‌ ಪುರದಿಂದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ. ನಿರ್ಗಮನದ ಸಮಯದಲ್ಲಿ ಪ್ರಯಾಣಿಕ ತುರ್ತು ನಿರ್ಗಮನ ಫ್ಲಾಪ್ ನ್ನು ತೆರೆದಿದ್ದರ ಪರಿಣಾಮ ವಿಮಾನ ಟೇಕ್ ಆಫ್ ಆಗುವುದು 20 ನಿಮಿಷಗಳ ವಿಳಂಬವಾಯಿತು. ಕ್ಯಾಬಿನ್ ಸಿಬ್ಬಂದಿ ಸುರಕ್ಷತಾ ಸೂಚನೆಗಳನ್ನು ನೀಡುತ್ತಿದ್ದಾಗ ಮತ್ತು ವಿಮಾನವು ಟೇಕ್ ಆಫ್ ಆಗಲು ಸಿದ್ಧವಾದಾಗ ಈ ಘಟನೆ ಸಂಭವಿಸಿದೆ. ಬ್ಯಾಂಕ್ ಉದ್ಯೋಗಿ ಸಿರಾಜ್ ಕಿದ್ವಾಯಿ ಬಂಧಿತ ಪ್ರಯಾಣಿಕನಾಗಿದ್ದಾರೆ. ತಾನು ಆಕಸ್ಮಿಕವಾಗಿ ತುರ್ತು ನಿರ್ಗಮನ ಫ್ಲಾಪ್ ತೆರೆದಿರುವುದಾಗಿ ಪ್ರಯಾಣಿಕ ಹೇಳಿದ್ದಾರೆ. ಈ ವೇಳೆ , ವಿಮಾನ ಸಿಬ್ಬಂದಿ ತ್ವರಿತವಾಗಿ ಕ್ರಮ ಕೈಗೊಂಡರು ಮತ್ತು ಪೈಲಟ್‌ಗೆ ತಕ್ಷಣವೇ ಎಚ್ಚರಿಕೆ ನೀಡಲಾಯಿತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಪ್ರಯಾಗ್ರಾಜ್: ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನದ ವೇಳೆ ನಡೆದ ಕಾಲ್ತುಳಿತದಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ಸ್ಥಳದಲ್ಲಿ ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಇಂದು ಪ್ರಯಾಗ್‌ರಾಜ್‌ನಲ್ಲಿ ಸುಮಾರು 8 ರಿಂದ 10 ಕೋಟಿ ಭಕ್ತರು ಸೇರಿದ್ದು, ಸಂಗಮದೆಡೆಗೆ ಭಕ್ತರ ಸಂಚಾರ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಅಖಾರ ಮಾರ್ಗದಲ್ಲಿ ಬ್ಯಾರಿಕೇಡಿಂಗ್ ದಾಟಲು ಕೆಲವರು ಯತ್ನಿಸಿದ್ದು, ಈ ವೇಳೆ ಕೆಲ ಭಕ್ತರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತಿಪಟೂರು: ಭೂಮಿ ಥಿಯೇಟರ್ ಹಾಗೂ ಜನಸ್ಪಂದನ ಟ್ರಸ್ಟ್ ಇವರ ಸಹಯೋಗದೊಂದಿಗೆ ತಿಪಟೂರಿನ ಬಯಲು ರಂಗ ಮಂದಿರದಲ್ಲಿ ಇದೇ ತಿಂಗಳು ಫೆಬ್ರವರಿ 2ನೇ ತಾರೀಖಿನವರೆಗೆ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರ್ ತಿಳಿಸಿದರು. ನಾಲ್ಕು ದಿನಗಳ ಕಾಲ ನಡೆಯುವ ರಂಗ ಉತ್ಸವದ ಪ್ರಯುಕ್ತ ಮಾಲತಿ ಮಾಧವ್, ಅಂಕದ ಪರದೆ, ತಿಂಡಿಗೆ ಬಂದ ತುಂಡೇರಾಯ, ಹಾಗೂ ಬಾಬಾ ಮರ್ಲಿಂಗ್ ಫಾರ್ಮ್ ಕೊಡಿಹಳ್ಳಿ ಎಂಬ ನಾಟಕದ ಪ್ರದರ್ಶನವು ನಡೆಯಲಿದ್ದು, ಕಲಾಸಕ್ತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಜನ ಸ್ಪಂದನ ಟ್ರಸ್ಟ್ ನ ಅಧ್ಯಕ್ಷ ಸಿ.ಬಿ. ಶಶಿಧರ್ ಮಾತನಾಡಿ, ತಿಪಟೂರು ನಗರದ ಭೂಮಿ ಥಿಯೇಟರ್ ಸುಮಾರು 30 ವರ್ಷಗಳಿಂದ ರಂಗಭೂಮಿಗೆ ತನ್ನದೇ ಕೊಡುಗೆಗಳನ್ನು ನೀಡಿದ್ದು, ಮುಂದೆಯೂ ತಿಪಟೂರು ಸತೀಶ್ ರವರ ಮೂಲಕ ಇನ್ನು ಅನೇಕ ನಾಟಕಗಳನ್ನು ನಗರದಲ್ಲಿ ನಡೆಸಲಾಗುವುದು ಎಂದರು. ಈ ಕಾರ್ಯಕ್ರಮಗಳನ್ನು ಸಾರ್ವಜನಿಕರು ಪ್ರೋತ್ಸಾಹಿಸಬೇಕು ಮತ್ತು ಈ ಮೂಲಕ ಯಶಸ್ವಿಗೊಳಿಸಬೇಕೆಂದು ತಿಳಿಸಿದರು ವರದಿ: ಆನಂದ್, ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ತುಮಕೂರು:  ದ್ವಿಚಕ್ರ ವಾಹನದಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದನ್ನು ಕಂಡು ದಂಡ ವಿಧಿಸಲು ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಾಲ್ವರು ಯುವಕರನ್ನು ಬಂಧಿಸಿ  ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತುಮಕೂರು ನಗರದ ರಾಣಿ ಚೆನ್ನಮ್ಮ ಸರ್ಕಲ್ ಬಳಿ ಇರುವ ರಿಂಗ್ ರಸ್ತೆಯಲ್ಲಿ ಜನವರಿ 27 ರಂದು ಸಂಜೆ 7:30ರಲ್ಲಿ ಘಟನೆ ನಡೆದಿದೆ. ತುಮಕೂರು ನಗರದ ಮೊಹಮದ್ ಇಸ್ಮಾಯಿಲ್, ಮೊಹಮದ್ ಅಬ್ಬಾಸ್, ಅದ್ಮಾನ್ ಅಹಮದ್,  ಮೊಹಮದ್ ಅಲೀ ಬಂಧಿತ ಆರೋಪಿಗಲಾಗಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿದ್ದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಮಹಿಳಾ ಪಿ.ಎಸ್‌.ಐ. ಟಿ.ಎಸ್. ಚಂದ್ರಕಲಾ ಮತ್ತು ಎ.ಎಸ್.ಐ. ಮೋಹನ್ ಕುಮಾರ್ ಕೆ. ಹಾಗೂ ಸಿಬ್ಬಂದಿ ತಮ್ಮರಾಯ ಮಾಡಕರಿರವರುಗಳು ರಾಣಿ ಚೆನ್ನಮ್ಮ ಸರ್ಕಲ್ ಬಳಿ ಅನುಚಿತವಾಗಿ ವರ್ತಿಸಿದ್ದರು. ಈ ವೇಳೆ ಸರ್ವಿಸ್ ರಸ್ತೆಯಿಂದ ರಿಂಗ್ ರಸ್ತೆಗೆ KA–06–EV–3695 ನೇ ನಂಬರಿನ ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ  4 ಜನ ಯುವಕರು ಒಂದೇ ದ್ವಿಚಕ್ರ ವಾಹನದಲ್ಲಿ ಕುಳಿತುಕೊಂಡು, ಯಾವುದೇ ಹೆಲ್ಮೇಟ್ ಧರಿಸದೆ, ರಾಂಗ್ ರೂಟಿನಲ್ಲಿ ತಮ್ಮ ದ್ವಿಚಕ್ರ…

Read More

ತಿಪಟೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ ರಾತ್ರಿ ಕಳ್ಳರು ಲಕ್ಷಾಂತರ ಮೌಲ್ಯದ ಸುಮಾರು 3,635 ಕೆ.ಜಿ. ಕೊಬ್ಬರಿ ಕಳವು ಮಾಡುವ ಮೂಲಕ ಕೈಚಳಕ ತೋರಿಸಿದ್ದಾರೆ. ಎಪಿಎಂಸಿ ಮಾರುಕಟ್ಟೆಯ ಮುಖ್ಯದ್ವಾರದ ಬೀಗ ಒಡೆದು ಕಳ್ಳರು ಘಟಕಿನಕೆರೆ ಮೂಲದ ನಾಗರಾಜ್ ಎಂಬುವರ ಒಡೆತನಕ್ಕೆ ಸೇರಿದ ಗಂಗಾ ಟ್ರೇಡರ್ಸ್ ನ ಕಂಪೌಂಡ್ ಹಾಗೂ ಅಂಗಡಿ ಬಾಗಿಲು ಬೀಗ ಮುರಿದು 3,645 ಕೆ.ಜಿ. ತೂಕದ ಕೊಬ್ಬರಿಯನ್ನು ಕಳ್ಳತನ ಮಾಡಲಾಗಿದೆ. ಏಷಿಯಾ ಖಂಡದಲ್ಲಿಯೇ ದೊಡ್ಡ ಮಾರುಕಟ್ಟೆಯ ಕಾವಲುಗಾರರ ಕಣ್ ತಪ್ಪಿಸಿ ಕಳವು ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದು. ಮಾರುಕಟ್ಟೆಯಲ್ಲಿ ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಬಲ್ಲಮೂಲಗಳ ಪ್ರಕಾರ, 4 ಟನ್ ಕೊಬ್ಬರಿಯನ್ನ ಲಾರಿಯಲ್ಲಿ ತುಂಬಿ ಸಾಗಿಸಲಾಗಿದೆ. ಇಷ್ಟೊಂದು ರಾಜಾರೋಷವಾಗಿ ಕಳ್ಳತನವಾಗಿರುವುದು, ಎಪಿಎಂಸಿ ಮಾರುಕಟ್ಟೆ ವೈಫಲ್ಯವನ್ನ ತೋರಿಸುತ್ತಿದ್ದು, ಕಳ್ಳರು ಪೂರ್ವ ನಿಯೋಜಿತ ಸಂಚುರೂಪಿಸಿ ಕಳ್ಳತನ ಮಾಡಿದ್ದಾರೆ. ಕದಿಯಲು ಬಂದ ಕಳ್ಳರು ಚಾಕು ಹಾಗೂ ಕಾರದ ಪುಡಿಯನ್ನು ತಂದಿದ್ದು, ಕಾರದಪುಡಿಯನ್ನು ಅಲ್ಲೇ ಚೆಲ್ಲಿ ಹೋಗಿದ್ದಾರೆ. ಸ್ಥಳಕ್ಕೆ ಎಪಿಎಂಸಿ ಅಧಿಕಾರಿಗಳು, ತಿಪಟೂರು ಡಿವೈಎಸ್ಪಿ…

Read More

ಬೀದರ್:  ಜಿಲ್ಲೆಯ ಹುಮನಾಬಾದ್  ವೀರಭದ್ರೇಶ್ವರ ಜಾತ್ರಾ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ  ಈಶ್ವರ ಬಿ. ಖಂಡ್ರೆರವರು ಹಾಗೂ ಮಾಜಿ ಸಚಿವರಾದ ರಾಜಶೇಖರ ಬಿ. ಪಾಟೀಲ್ ರವರು ಜಂಟಿಯಾಗಿ ವೀರಭದ್ರೇಶ್ವರ ದೇವರ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಲೋಕಸಭೆ ಸದಸ್ಯರಾದ  ಸಾಗರ ಖಂಡ್ರೆ, ವಿಧಾನ‌ ಪರಿಷತ್ ಸದಸ್ಯರಾದ  ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಡಿ.ಸಿ.ಸಿ. ಬ್ಯಾಂಕ್ ನ ಉಪಾಧ್ಯಕ್ಷರು ಅಭಿಷೇಕ  ಪಾಟೀಲ್ , ದೇವಸ್ಥಾನ ಮಂಡಳಿಯ ಅಧ್ಯಕ್ಷರಾದ  ವೀರಣ್ಣ ಪಾಟೀಲ್,  ಧನರಾಜ ತಾಳಂಪಳ್ಳಿ  ರವರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ,  ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಬೀದರ್:  ಲೋಕಸಭಾ ಕ್ಷೇತ್ರದ ಕೋಸಂ ಗ್ರಾಮದ ರೈತ ಶಿವಪುತ್ರ ಸ್ವಾಮಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ ಬೀದರ್ ಲೋಕ ಸಭಾ ಕ್ಷೇತ್ರದ ಸಂಸದರಾದ  ಸಾಗರ್ ಖಂಡ್ರೆ ಅವರು, ಮೃತರ  ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ರೈತನ ಕುಟುಂಬಕ್ಕೆ ತ್ವರಿತ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ತಕ್ಷಣ ಕ್ರಮಕೈಗೊಳ್ಳುವ ಇದೇ ವೇಳೆ ಸಂಸದರು ಸೂಚನೆ ನೀಡಿದಾರೆ. ಆತ್ಮಹತ್ಯೆ ಯಾವ ಸಮಸ್ಯೆಗೂ ಪರಿಹಾರವಲ್ಲ, ರೈತರ ಹಿತ ಕಾಪಾಡುವುದು ನಮ್ಮ ಪ್ರಥಮ ಕರ್ತವ್ಯವಾಗಿದೆ. ದುಡುಕು ನಿರ್ಧಾರ ತೆಗೆದುಕೊಳ್ಳಬಾರದೆಂದು ಸಂಸದ ಸಾಗರ್ ಖಂಡ್ರೆ ಅವರು ಮನವಿ ಮಾಡಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಕೊರಟಗೆರೆ : ಪಟ್ಟಣದ 9ನೇ ವಾರ್ಡಿನ ದೊಡ್ಡಪೇಟೆಯಲ್ಲಿ ಪೂರ್ವಿಕರ ಕಾಲದಿಂದಲೂ ನೆಲೆಸಿರುವ ರಾಮಾಂಜನನ ಬೀದಿ ಹಟ್ಟಿ ಮಾರಮ್ಮ ಎಂದೇ ಪ್ರಖ್ಯಾತಿಗೊಂಡಿರುವ  ಮಾರಮ್ಮ ದೇವಿಯ  ನೂತನ ದೇವಸ್ಥಾನ ನಿರ್ಮಾಣ ಹಾಗೂ  ದೇವಿಯ ಮೆರವಣಿಗೆ ವಿಗ್ರಹವನ್ನು ಸ್ಥಾಪಿಸಲಾಯಿತು. ವಾರ್ಡಿನ ಪ್ರತಿ ಮನೆಯಿಂದ  ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.. ದೇವಸ್ಥಾನದ ಅರ್ಚಕರು ಮಾತನಾಡಿ, ನಮ್ಮ ಹಿಂದೂ ಧರ್ಮದಲ್ಲಿ ಅದರಲ್ಲೂ ಯುವಕರಲ್ಲಿ ದೇವರ ಮೇಲಿನ ಭಕ್ತಿ ದಿನೇ ದಿನೇ  ಕಡಿಮೆಯಾಗುತ್ತಿದೆ ನಮ್ಮ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಬೇಕು ದೇವರಲ್ಲಿ ನಂಬಿಕೆ ಇಡಬೇಕು ನಮ್ಮ ವಾರ್ಡಿನ ಯುವಕರೆಲ್ಲರೂ ಸೇರಿ ಈ ದೇವಿಯ  ದೇವಸ್ಥಾನದ ಜೀವನೋದ್ಧಾರವನ್ನ ಮಾಡಿದ್ದೇವೆ  ಪ್ರತಿ ಗ್ರಾಮದಲ್ಲೂ ದೇವಸ್ಥಾನ ಶಾಲೆ ಇರಲೇಬೇಕು  ದೇವಸ್ಥಾನದಲ್ಲಿ ಭಕ್ತಿ ಶಾಲೆಯಲ್ಲಿ ವಿದ್ಯೆ  ಪಡೆದವನು ದೇಶವನ್ನೇ ಗೆಲ್ಲಬಲ್ಲ ಎಂದು ತಿಳಿಸಿದರು ಗ್ರಾಮಸ್ಥರು ಒಬ್ಬರು ಮಾತನಾಡಿ,  ನಾವು ಚಿಕ್ಕ ವಯಸ್ಸಿನಲ್ಲಿ ಹುಷಾರಿಲ್ಲದಿದ್ದಾಗ ಆಸ್ಪತ್ರೆಗೆ ಹೋಗುತ್ತಿರಲಿಲ್ಲ ನಮ್ಮ ತಾಯಿ ತಂದೆ ಇಲ್ಲಿ ಹರಕೆ ಕಟ್ಟುತ್ತಿದ್ದರು  ಹರಕೆ ಕಟ್ಟಿದ ಮರುದಿನವೇ  ನಾವು ಆರೋಗ್ಯದಿಂದ ಓಡಾಡುತ್ತಿದ್ದೆವು  ಅದೇ ಭಕ್ತಿ…

Read More