Subscribe to Updates
Get the latest creative news from FooBar about art, design and business.
- 36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!
- ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ: ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ
- ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ
- ರಾಹುಲ್ ಗಾಂಧಿ ಪ್ರಧಾನಿಯಾಗಲಿ: ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ
- ಆಗಸ್ಟ್ 9ರಂದು ತಿಪಟೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಯೋಗ ಚಾಂಪಿಯನ್ಷಿಪ್ ಸ್ಪರ್ಧೆ
- ಆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ
- ಶಿಕ್ಷಣ ನಿಮ್ಮ ಬದುಕಿಗೆ ಭದ್ರ ಬುನಾದಿ: ಶ್ರೀ ಸಿದ್ಧಲಿಂಗ ಮಹಾಸ್ವಾಮಿ
- ಹೂ ಲೋಕ, ಭೂರಮೆಯ ರಥ : ಪ್ರಕೃತಿ ಮಡಿಲಲ್ಲಿ ಚೆಲುವಿನ ರಥಯಾತ್ರೆ ವಾಹ್..!
Author: admin
ಬೀದರ್: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದ ಬೀದರ್ ಗುತ್ತಿಗೆದಾರ ಸಚಿನ್, ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರು ಸೇರಿದಂತೆ ಒಟ್ಟು 8 ಜನರ ಹೆಸರನ್ನು ಉಲ್ಲೇಖಿಸಿದ್ದರು. ಸಿಐಡಿ ಪೊಲೀಸರು ಪ್ರಕರಣ ಸಂಬಂಧ ಇಂದು ಬೀದರ್ನಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜು ಕಪನೂರು, ಘೊರಕ್ ನಾಥ್, ನಂದಕುಮಾರ್ ನಾಗಬುಜಂಗಿ, ರಾಮನಗೌಡಾ ಪಾಟೀಲ್, ಸತೀಶ್ ಎನ್ನುವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಗೆ ವಿಚಾರಣೆಗೆ ಬರುವಂತೆ ಸಿಐಡಿ ನೋಟಿಸ್ ನೀಡಿತ್ತು. ಅದರಂತೆ ಐವರು ಇಂದು ಬೀದರ್ ರೈಲ್ವೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಸೂಕ್ತವಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಸಿಐಡಿ, ಆರೋಪಿಗಳನ್ನು ಬಂಧಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ಬೆಂಗಳೂರು: ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಒಂದು ವರ್ಷದಲ್ಲಿ 3ನೇ ಬಾರಿಗೆ ಬಿಯರ್ ಬೆಲೆ ಹೆಚ್ಚಳ ಮಾಡಲು ಮುಂದಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ಅಬಕಾರಿಯಿಂದ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಜೆಟ್ ಗೂ ಮುನ್ನವೇ ಬಿಯರ್ ದರ ಏರಿಕೆ ಮಾಡಲು ನಿರ್ಧರಿಸಿದೆ. ಜನವರಿ 20ರಿಂದ ಬಿಯರ್ ಬೆಲೆ ಕನಿಷ್ಠ 15 ರೂಪಾಯಿಯಿಂದ 50 ರೂಪಾಯಿವರೆಗೂ ಹೆಚ್ಚಳವಾಗುವ ಸಾಧ್ಯತೆ ಇದ್ದು, ಒಂದು ವೇಳೆ ಹೆಚ್ಚಳವಾದರೆ ಒಂದು ವರ್ಷದಲ್ಲಿ ಮೂರನೇ ಬಾರಿಗೆ ಬಿಯರ್ ಬೆಲೆ ಹೆಚ್ಚಳವಾದಂತೆ ಆಗುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರು, ಬಿಯರ್ ಬೆಲೆ ಏರಿಕೆ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ಬಿಯರ್ ಬೆಲೆ ಹೊರತುಪಡಿಸಿ ಬೇರೆ ಯಾವುದೇ ಮದ್ಯದ ಬೆಲೆಯ ಹೆಚ್ಚಳದ ಬಗ್ಗೆ ಚಿಂತನೆ ಇಲ್ಲ ಎಂದು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ತುಮಕೂರು: 7ನೇ ತರಗತಿ ವಿದ್ಯಾರ್ಥಿ, ಬಿಜೆಪಿ ಕಾರ್ಯಕರ್ತೆ ಶಂಕುತಲಾ ನಟರಾಜ್ ಪುತ್ರ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ತುಮಕೂರು ನಗರದ ವಿಜಯನಗರದ 2 ಮುಖ್ಯ ರಸ್ತೆಯಲ್ಲಿ ನಡೆದಿದೆ. ಸರ್ವೊದಯ ಸ್ಕೂಲ್ ನಲ್ಲಿ 7ನೇ ತರಗತಿ ಓದುತ್ತಿದ್ದ ತ್ರಿಶಾಲ್, ತನ್ನ ತಾಯಿ ಶಂಕುತಲಾ ಜೊತೆ ವಿಜಯನಗರದ 2 ನೇ ಮುಖ್ಯ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಇಂದು ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಾಲಾ ಸಮವಸ್ತ್ರದಲ್ಲೇ ನೇಣುಬಿಗಿದುಕೊಂಡು ತ್ರಿಶಾಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೂ ಮುನ್ನ ಡೇತ್ ನೋಟ್ ಬರೆದಿಟ್ಟಿದ್ದಾನೆ. ಪಾರಿವಾಳದ ಬೆಟ್ಟಿಂಗ್ ವಿಚಾರಕ್ಕೆ ಸ್ನೇಹಿತರ ಜೊತೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ತುಮಕೂರು: ಜಿಲ್ಲೆಯ ತಿಪಟೂರು ನಗರಕ್ಕೆ ಕುಡಿಯುವ ನೀರು ನಿಲ್ಲಿಸಿದ್ದು, ನಗರದ ಜನ ಕುಡಿಯುವ ನೀರಿಗೂ ತತ್ಪರ ಪಡುವಂತಾಗಿದೆ, ಸರ್ಕಾರ ಹಾಗೂ ನಗರಸಭೆಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ಮಾಧ್ಯಮಗಳಲ್ಲೂ ವರದಿಗಳು ಬಂದಿವೆ, ನಗರ ಆಡಳಿತ ಹಾಗೂ ಪೌರಾಯುಕ್ತರು, ನಗರದ ಜನರಿಗೆ ಕುಡಿಯುವ ನೀರು ನೀಡದೆ, ನಗರದ ಜನಕ್ಕೆ ತೊಂದರೆ ಮಾಡಲಾಗುತ್ತಿದೆ ಕೂಡಲೇ ನಗರಸಭೆ ಆಡಳಿತ ಉತ್ತರ ನೀಡಬೇಕು ಎಂದು ಒತ್ತಾಯಿಸಿ, ನಗರಸಭೆ ವಿರೋಧ ಪಕ್ಷದ ನಾಯಕ ರಾಮ್ ಮೋಹನ್ ನೇತೃತ್ವದಲ್ಲಿ ನಗರಸಭೆ ವಿಶೇಷ ಸಾಮಾನ್ಯ ಸಭೆ ಬಹಿಷ್ಕರಿಸಿ ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು. ತಿಪಟೂರು ನಗರಸಭೆ ಅಧ್ಯಕ್ಷರಾದ ಯಮುನಾ ಧರಣೇಶ್, ಅಧ್ಯಕ್ಷತೆಯಲ್ಲಿ ಶಾಸಕರಾದ ಕೆ.ಷಡಕ್ಷರಿಯವರ ಉಪಸ್ಥಿತಿಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಸಲಾಯಿತು. ಸಭೆ ಆರಂಭವಾಗುತ್ತಿದ್ದಂತೆ, ಬಿಜೆಪಿ ಸದಸ್ಯರು ತಿಪಟೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರವಿದೆ, ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ನಗರಕ್ಕೆ ನೀರು ಪೂರೈಸುವ ನೀರು ನಿಲ್ಲಿಸಲಾಗಿದೆ. ಈಚನೂರು ಕೆರೆ ನೀರಿಗೆ ಯುಜಿಡಿ ಕೊಳಚೆ ನೀರು ಸೇರಿ, ಕಲುಷಿತವಾಗಿದ್ದು,…
ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದ ಶಿರಾ ರಸ್ತೆಯ ದೇವಗಿರಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜಾ ಕಾರ್ಯಕ್ರಮಗಳು ಶುಕ್ರವಾರ ಅದ್ದೂರಿಯಾಗಿ ಜರುಗಿದವು. ಭಕ್ತರಿಗೆ ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅನುಕೂಲ ಕಲ್ಪಿಸಲಾಗಿದ್ದು, ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆಯನ್ನೂ ತೃಪ್ತಿಕರವಾಗಿ ನಡೆಸಲಾಯಿತು. ವಿಶೇಷ ಅಲಂಕಾರದೊಂದಿಗೆ ಶ್ರೀ ವೆಂಕಟೇಶ್ವರನಿಗೆ ಪೂಜೆಯನ್ನು ನೆರವೇರಿಸಿದ್ದು, ದೇವರ ಮೂರ್ತಿಯ ಶೋಭೆ ಭಕ್ತರನ್ನು ಆಕರ್ಷಿಸಿತು. ವೈಕುಂಠ ಏಕಾದಶಿಯ ಪ್ರಯುಕ್ತ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸ್ವಾಮಿಯ ದರ್ಶನವನ್ನು ಪಡೆದರು. ದೇವಾಲಯದ ಆಡಳಿತ ಮಂಡಳಿಯ ಸಮರ್ಪಕ ವ್ಯವಸ್ಥೆ ಮತ್ತು ಆಧ್ಯಾತ್ಮಿಕ ವಾತಾವರಣ ಭಕ್ತರಿಗೆ ಆನಂದ ನೀಡಿತು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಚಾಣಕ್ಯ ತನ್ನ ಜೀವಿತಾವಧಿಯಲ್ಲಿ ಅನೇಕ ನೀತಿಗಳನ್ನು ರಚಿಸಿದ್ದಾರೆ. ಇದು ಚಾಣಕ್ಯನ ನೀತಿಗಳು ಎಂದೇ ಪ್ರಸಿದ್ಧಿ ಪಡೆದಿವೆ. ಚಾಣಕ್ಯನ ನೀತಿಯ ಪ್ರಕಾರ ಈ 5 ಗುಣಗಳೇ ಮನುಷ್ಯನ ವಿನಾಶಕ್ಕೆ ಕಾರಣವಂತೆ, ಆ ಗುಣಗಳು ಯಾವುದು ತಿಳಿದುಕೊಳ್ಳೋಣ ಬನ್ನಿ… ಸೋಮಾರಿತನ: ಯಾವುದೇ ವ್ಯಕ್ತಿ ಯಶಸ್ವಿ ಮತ್ತು ಸಮೃದ್ಧ ಜೀವನ ನಡೆಸಲು ಮೊದಲು ಸೋಮಾರಿತನದಿಂದ ಬಿಡುಗಡೆ ಹೊಂದಬೇಕಂತೆ. ಸೋಮಾರಿ ತನ ನಿಮ್ಮನ್ನು ಜೀವನದಲ್ಲಿ ಮುಂದೆ ಹೋಗಲು ಬಿಡುವುದಿಲ್ಲ. ಅದು ವಿನಾಶದತ್ತ ನಿಮ್ಮನ್ನು ಕೊಂಡೊಯ್ಯುತ್ತದೆ. ಅಹಂಕಾರ: ಅಹಂಕಾರಿ ವ್ಯಕ್ತಿ ಎಂದಿಗೂ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಯಾಕೆಂದರೆ, ಜೀವನದಲ್ಲಿ ಯಶಸ್ಸು ಪಡೆಯಲು ಅಹಂಕಾರವೇ ಅಡ್ಡಿಯಾಗಬಹುದು. ನಾನು ಎನ್ನುವ ಅಹಂಕಾರ, ನನ್ನಿಂದಲೇ ಎಲ್ಲ ಎನ್ನುವ ಅಹಂಕಾರ ಇರುವ ಮನುಷ್ಯರಿಂದ ಪ್ರತಿಯೊಬ್ಬರೂ ದೂರವಿರುತ್ತಾರೆ. ಹಾಗಾಗಿ ಆತ ಯಶಸ್ಸು ಪಡೆಯುವುದು ತುಂಬಾನೇ ಕಷ್ಟವಂತೆ. ದುರಾಸೆ: ಚಾಣಕ್ಯನ ಪ್ರಕಾರ ದುರಾಸೆ ಹೊಂದಿದ ವ್ಯಕ್ತಿ ಬೇಗನೇ ನಾಶವಾಗುತ್ತಾನಂತೆ. ಜೀವನದಲ್ಲಿ ಯಶಸ್ಸು, ಸಂತೋಷ ಬೇಕಾದರೆ, ದುರಾಸೆಯಿಂದ ದೂರವಿರಬೇಕು. ಎಲ್ಲರನ್ನೂ ಸಮಾನವಾಗಿ ನೋಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸುಳ್ಳು ಹೇಳುವ…
ತುಮಕೂರು: ತಾಯಿ ಮತ್ತು ಮಗಳು ಕೆರೆಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಅದಲಗೆರೆ ಗ್ರಾಮದ ಕೆರೆಯಲ್ಲಿ ನಡೆದಿದೆ. ತಾಲ್ಲೂಕಿನ ನಿಟ್ಟೂರು ಹೋಬಳಿ ವಿರುಪಾಕ್ಷಿ ಪುರ ಗ್ರಾಮದ ತಾಯಿ ಪ್ರೇಮ್ ಕುಮಾರಿ (50) ವರ್ಷ ಮಗಳ ಪೂರ್ಣಿಮಾ (30) ಮೃತ ದುರ್ದೈವಿಗಳು. ಮಗಳು ಪೂರ್ಣಿಮಾ ಬುದ್ದಿಮಾಂದ್ಯ ಯುವತಿಯಾಗಿದ್ದು, ಈ ಕಾರಣಕ್ಕೆ ಮಾನಸಿಕವಾಗಿ ತಾಯಿ ಮನನೊಂದಿದ್ದಳು. ಇಬ್ಬರು ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಗುರುವಾರ ಎಮ್ಮೆ ಮೇಯಿಸುವ ನಿಟ್ಟಿನಲ್ಲಿ ತೋಟದ ಬಳಿ ಹೋದ ಇಬ್ಬರು ಸಮೀಪದ ಅದಲಗೆರೆ ಗ್ರಾಮದ ಕೆರೆಗೆ ಬಿದ್ದಿದ್ದಾರೆ. ರಾತ್ರಿ ಇಡೀ ಗ್ರಾಮಸ್ಥರ ಸಹಾಯದಿಂದ ತೀವ್ರ ಹುಡುಕಾಟ ನಡೆಸಲಾಗಿತ್ತು. ಇಂದು ಮೃತ ದೇಹಗಳು ಪತ್ತೆಯಾಗಿವೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಬಹಳ ಹಿಂದೆ ಸುರಪುರವೆಂಬ ಊರಿನಲ್ಲಿ ಶಂಭು ಎಂಬ ಬಡವನಿದ್ದ. ಇವನು ಮಹಾನ್ ದೈವ ಭಕ್ತ. ಪ್ರತಿದಿನ ದೇವರನ್ನು ಪ್ರಾರ್ಥಿಸದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಇವನ ಭಕ್ತಿಗೆ ದೇವರೂ ಕೂಡ ಸಂಪ್ರೀತನಾಗಿದ್ದನು. ಶಂಭು ಮೇಕೆಗಳನ್ನು ಸಾಕಿದ್ದ, ಪ್ರತಿದಿನ ಕಾಡಿನ ಸಮೀಪ ಕರೆದುಕೊಂಡು ಹೋಗಿ ಮೇಯಿಸಿಕೊಂಡು, ಹೊಳೆಯಲ್ಲಿ ನೀರು ಕುಡಿಸಿಕೊಂಡು ಬರುತ್ತಿದ್ದ. ಇವನ ಬಳಿ ಮೇಕೆಕೊಳ್ಳಲು ಅಕ್ಕಪಕ್ಕದ ಜನರು ಬರುತ್ತಿದ್ದರು ವ್ಯಾಪಾರದಿಂದ ಬರುವ ಹಣದಿಂದ ತಕ್ಕಮಟ್ಟಿನ ಜೀವನ ನಡೆಸುತ್ತಿದ್ದ. ಹೀಗೆಯೇ ಹಲವು ದಿನಗಳು ಕಳೆದವು. ಶಂಭುವಿನ ಹಣೆಬರಹದಂತೆ ಕೆಟ್ಟದಿನಗಳು ಬರಲು ಪ್ರಾರಂಭವಾದವು. ಆಗ ವೈಕುಂಠದಲ್ಲಿ ದೇವಿ ದೇವನಲ್ಲಿ ಕೇಳುತ್ತಾಳೆ ಹೇ ದೇವ ಶಂಭು ನಿಮ್ಮ ಪರಮ ಭಕ್ತ ಅವನಿಗೆ ಕಷ್ಟಗಳನ್ನು ಎದುರಿಸುವ ಶಕ್ತಿ ಇಲ್ಲ, ಅವನನ್ನು ಕಾಪಾಡುವ ಹೊಣೆ ನಿಮ್ಮದಲ್ಲವೇ ಎಂದಾಗ ದೇವನು ಹೌದು ದೇವಿ ನೀನು ಹೇಳುವುದು ಸರಿಯಾಗಿದೆ. ಆದರೆ ಅವನ ಹಣೆ ಬರಹ ಅವನು ಅನುಭವಿಸಲೇ ಬೇಕು ಅಲ್ಲವೇ ಎಂದಾಗ, ದೇವಿಯು ಆದರೂ ಕಡೆಯಪಕ್ಷ ಅವನಿಗೆ ಸಹಾಯ ಮಾಡಬಹುದಲ್ಲವೇ ಎಂದಾಗ ದೇವನು…
ನವದೆಹಲಿ: ಶಾಲೆಗಳಿಗೆ ಬಾಂಬ್ ಬೆದರಿಕೆ ಕಳುಹಿಸಿದ್ದ ಆರೋಪದಲ್ಲಿ 12 ನೇ ತರಗತಿ ವಿದ್ಯಾರ್ಥಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸುಮಾರು 10 ಶಿಕ್ಷಣ ಸಂಸ್ಥೆಗಳಿಗೆ ನಿನ್ನೆ ಬಾಂಬ್ ಬೆದರಿಕೆ ಬಂದಿದ್ದು,ಎಚ್ಚೆತ್ತ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆದರಿಕೆ ಹಾಕಿದ 12 ನೇ ತರಗತಿ ವಿದ್ಯಾರ್ಥಿಯು ಅಪ್ರಾಪ್ತ ವಯಸ್ಕನಾಗಿದ್ದಾನೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಳನ್ನು ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯ ಮೂಲಕ ಬಹಿರಂಗ ಪಡಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ನವದೆಹಲಿ: ದಟ್ಟವಾದ ಮಂಜಿನಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ 100 ಕ್ಕೂ ಹೆಚ್ಚು ವಿಮಾನಗಳ ಸೇವೆ ವಿಳಂಬಗೊಂಡಿದೆ. ದಟ್ಟ ಮಂಜಿನ ಕಾರಣ ವಿಮಾನ ನಿಲ್ದಾಣದಲ್ಲಿ ಗೋಚರತೆ ಕಾಣದ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ 100 ಕ್ಕೂ ಹೆಚ್ಚು ವಿಮಾನಗಳ ಸೇವೆ ವಿಳಂಬಗೊಂಡಿದೆ. ದಟ್ಟವಾದ ಮಂಜಿನಿಂದಾಗಿ, ವಿಮಾನ ನಿರ್ಗಮನದ ಮೇಲೆ ಪರಿಣಾಮ ಬೀರಿದೆ, ವಿಮಾನಗಳು ದೆಹಲಿ ವಿಮಾನ ನಿಲ್ದಾಣದಿಂದ ಇಳಿಯಲು ಮತ್ತು ನಿರ್ಗಮಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲಾಗಿತ್ತು. ಫ್ಲೈಟ್ ಟ್ರ್ಯಾಕಿಂಗ್ ವೆಬ್ ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ವಿಮಾನ ನಿಲ್ದಾಣದಲ್ಲಿ 100 ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ. ದೆಹಲಿ ಇಂಟರ್ ನ್ಯಾಶನಲ್ ಏರ್ ಪೋರ್ಟ್ ಲಿಮಿಟೆಡ್ ಅಪ್ ಡೇಟ್ ಮಾಡಲಾದ ವಿಮಾನ ಮಾಹಿತಿಗಾಗಿ ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಪ್ರಯಾಣಿಕರನ್ನು ಕೇಳಿದೆ ಮತ್ತು ಪ್ರಯಾಣಿಕರಿಗೆ ಉಂಟಾದ ಯಾವುದೇ ಅನಾನುಕೂಲತೆಗಾಗಿ ವಿಷಾದಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx