ತುಮಕೂರು: ಜಿಲ್ಲೆಯ ತಿಪಟೂರು ನಗರಕ್ಕೆ ಕುಡಿಯುವ ನೀರು ನಿಲ್ಲಿಸಿದ್ದು, ನಗರದ ಜನ ಕುಡಿಯುವ ನೀರಿಗೂ ತತ್ಪರ ಪಡುವಂತಾಗಿದೆ, ಸರ್ಕಾರ ಹಾಗೂ ನಗರಸಭೆಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ಮಾಧ್ಯಮಗಳಲ್ಲೂ ವರದಿಗಳು ಬಂದಿವೆ, ನಗರ ಆಡಳಿತ ಹಾಗೂ ಪೌರಾಯುಕ್ತರು, ನಗರದ ಜನರಿಗೆ ಕುಡಿಯುವ ನೀರು ನೀಡದೆ, ನಗರದ ಜನಕ್ಕೆ ತೊಂದರೆ ಮಾಡಲಾಗುತ್ತಿದೆ ಕೂಡಲೇ ನಗರಸಭೆ ಆಡಳಿತ ಉತ್ತರ ನೀಡಬೇಕು ಎಂದು ಒತ್ತಾಯಿಸಿ, ನಗರಸಭೆ ವಿರೋಧ ಪಕ್ಷದ ನಾಯಕ ರಾಮ್ ಮೋಹನ್ ನೇತೃತ್ವದಲ್ಲಿ ನಗರಸಭೆ ವಿಶೇಷ ಸಾಮಾನ್ಯ ಸಭೆ ಬಹಿಷ್ಕರಿಸಿ ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.
ತಿಪಟೂರು ನಗರಸಭೆ ಅಧ್ಯಕ್ಷರಾದ ಯಮುನಾ ಧರಣೇಶ್, ಅಧ್ಯಕ್ಷತೆಯಲ್ಲಿ ಶಾಸಕರಾದ ಕೆ.ಷಡಕ್ಷರಿಯವರ ಉಪಸ್ಥಿತಿಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಸಲಾಯಿತು. ಸಭೆ ಆರಂಭವಾಗುತ್ತಿದ್ದಂತೆ, ಬಿಜೆಪಿ ಸದಸ್ಯರು ತಿಪಟೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರವಿದೆ, ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ನಗರಕ್ಕೆ ನೀರು ಪೂರೈಸುವ ನೀರು ನಿಲ್ಲಿಸಲಾಗಿದೆ.
ಈಚನೂರು ಕೆರೆ ನೀರಿಗೆ ಯುಜಿಡಿ ಕೊಳಚೆ ನೀರು ಸೇರಿ, ಕಲುಷಿತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎನ್ನಲಾಗಿದ್ದು, ನಗರಸಭೆ ಆಡಳಿತ ನಗರದ ಜನರಿಗೆ ಕುಡಿಯುವ ನೀರೊದಗಿಸಲು, ಪರ್ಯಾಯವಾಗಿ ಯಾವ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯಾ ಎಂದು ಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರಶ್ನೆ ಮಾಡಿದ್ದಾಗ, ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರು ನಡುವೆ ವಾಗ್ವಾದ ನಡೆಯಿತು.
ಶಾಸಕ ಕೆ.ಷಡಕ್ಷರಿ ಮಾತನಾಡಿ, ತಾಲೂಕಿನಲ್ಲಿ ಹೆಚ್ಚು ಮಳೆಯಾದ ಕಾರಣ ಈಚನೂರು ಕೆರೆಗೆ ಮಳೆನೀರಿನೊಂದಿಗೆ ಯುಜಿಡಿ ನೀರು ಸೇರಿ, ಕಲುಷಿತವಾಗಿದೆ, ಈಚನೂರು ಕೆರೆ ನೀರನ್ನ ಲ್ಯಾಬ್ ಗೆ ಕಳುಹಿಸಲಾಗಿದ್ದು. ತಜ್ಞರ ವರದಿಯಂತೆ ಮುಂದಿನ ಕ್ರಮವಹಿಸುತ್ತೇವೆ. ನಗರದ ಜನರಿಗೆ ತೊಂದರೆಯಾಗದಂತೆ ನಗರಕ್ಕೆ ನೀರುಕೊಡಲು ಪರ್ಯಾಯ ಮಾರ್ಗಗಳನ್ನ ಯೋಚನೆ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಸಕರ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಸಭೆ ಬಹಿಷ್ಕಾರಿಸಿ ನಗರಸಭೆ ಮುಂಭಾಗ ಧರಣಿ ನಡೆಸಿ ನಗರಸಭೆ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ನಿರತ ಸದಸ್ಯರ ಬಳಿ ಆಗಮಿಸಿದ ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ, ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವುದು ನಮ್ಮ ಮೊದಲ ಆದ್ಯತೆ, ಈಚನೂರು ಕೆರೆ ನೀರು ಕಲುಷಿತವಾಗಿದೆ, ನಗರದ ಜನರಿಗೆ ತೊಂದರೆಯಾಗದಂತೆ ಪರ್ಯಾಯ ಮೂಲಗಳಿಂದ ನೀರು ಪೂರೈಸಲು, ಎಲ್ಲಾ ಸದಸ್ಯರು ಸಹಕಾರ ನೀಡಿ. ನಿಮ್ಮ ವಾರ್ಡ್ ಸಮಸ್ಯೆಗಳನ್ನ ಮುಕ್ತವಾಗಿ ಚರ್ಚೆ ಮಾಡಿ, ಎಲ್ಲರ ಸಮಸ್ಯೆಗಳಿಗೂ ಸೂಕ್ತವಾಗಿ ಸ್ಪಂದಿಸುತ್ತೇವೆ ಎಂದರು.
ನಗರಸಭೆ ಬಿಜೆಪಿ ವಿರೋಧ ಪಕ್ಷದ ನಾಯಕ ಮಾಜಿ ನಗರಸಭೆ ಅಧ್ಯಕ್ಷ ರಾಮ್ ಮೋಹನ್ ಮಾತನಾಡಿ ಬೇಸಿಗೆ ಆರಂಭವಾಗುವ ಮೊದಲೆಡ ತಿಪಟೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರ ಪಟುವಂತಾಗಿದೆ, ನಗರದ ಜನ ಟ್ಯಾಂಕರ್ ಮೊರೆಹೋಗುತ್ತಿದ್ದಾರೆ. ನಗರದ ಜನರಿಗೆ ಕುಡಿಯುವ ನೀರು ಪೂರೈಸಬೇಕ್ಕಾದ ನಗರ ಆಡಳಿತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು ಸದಸ್ಯರ ವಾರ್ಡ್ ಗಳ ಸಮಸ್ಯೆಗಳಿಗೆ ಪೌರಾಯುಕ್ತರು ಸ್ಪಂದಿಸುತ್ತಿಲ್ಲ. ಸಮಸ್ಯೆಯ ಆರಂಭದಲ್ಲೆ ನಗರದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು, ಯಾವುದೇ ಮುಂದಾಲೋಚನೆ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ನಗರದ ಜನರಿಗೆ ಮುಂದಿನ ನೀರುಪೂರೈಸಲು , ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ ಸಭೆಯಲ್ಲಿ ಉಪಸ್ಥಿತರಿದರು. ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ರಾಮ್ ಮೋಹನ್, ಸಂಗಮೇಶ್, ಪ್ರಸನ್ನ ಕುಮಾರ್, ಸಂಧ್ಯಾಕಿರಣ್, ಶ್ರೀನಿವಾಸ್, ಮಲ್ಲೇಶ್ ನಾಯ್ಕ, ಶಶಿಕಿರಣ್, ಲತಾ ಲೋಕೇಶ್, ಜಯಲಕ್ಷ್ಮಿ, ಓಹಿಲಾಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx