Subscribe to Updates
Get the latest creative news from FooBar about art, design and business.
- 36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!
- ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ: ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ
- ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ
- ರಾಹುಲ್ ಗಾಂಧಿ ಪ್ರಧಾನಿಯಾಗಲಿ: ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ
- ಆಗಸ್ಟ್ 9ರಂದು ತಿಪಟೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಯೋಗ ಚಾಂಪಿಯನ್ಷಿಪ್ ಸ್ಪರ್ಧೆ
- ಆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ
- ಶಿಕ್ಷಣ ನಿಮ್ಮ ಬದುಕಿಗೆ ಭದ್ರ ಬುನಾದಿ: ಶ್ರೀ ಸಿದ್ಧಲಿಂಗ ಮಹಾಸ್ವಾಮಿ
- ಹೂ ಲೋಕ, ಭೂರಮೆಯ ರಥ : ಪ್ರಕೃತಿ ಮಡಿಲಲ್ಲಿ ಚೆಲುವಿನ ರಥಯಾತ್ರೆ ವಾಹ್..!
Author: admin
ಬೆಂಗಳೂರು: ವಿ.ಜೆ.ಇಂಟರ್ ನ್ಯಾಷನಲ್ ಶಾಲಾ ಮೈದಾನ ಬಾಗಲೂರು ಯಲಹಂಕ ತಾಲ್ಲೂಕು, ಬೆಂಗಳೂರು ಇಲ್ಲಿ ರೇಣುಕರಾಜ್.ಜಿ.ಹೆಚ್.ರವರಿಗೆ 2024 ನೇ ಸಾಲಿನ ರಾಜ್ಯ ಮಟ್ಟದ ಹೆಚ್.ನರಸಿಂಹಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು(ರಿ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆ ಮತ್ತು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ(ರಿ) ಬೆಂಗಳೂರುರವರ ಸಹಕಾರದ ವತಿಯಿಂದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ವೈಚಾರಿಕ ದಿನಾಚರಣೆ ಪ್ರಯುಕ್ತ ರಾಜ್ಯಮಟ್ಟದ 4 ನೇ ವೈಜ್ಞಾನಿಕ ಸಮ್ಮೇಳನದಲ್ಲಿ ವಿಜ್ಞಾನ — ಸಾಹಿತ್ಯ — ಸಂಸ್ಕೃತಿ ಸಮಾಗಮ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಕೊಡಲಾಗುವಂತೆ, 2024 ನೇ ಸಾಲಿನ ರಾಜ್ಯ ಮಟ್ಟದ ಹೆಚ್. ನರಸಿಂಹಯ್ಯ.ಪ್ರಶಸ್ತಿಯನ್ನು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ ತಾಲ್ಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ರೇಣುಕರಾಜ್ ಜಿ.ಹೆಚ್. ರವರಿಗೆ ಶೈಕ್ಷಣಿಕ ಕ್ಷೇತ್ರ ವಿಭಾಗದಿಂದ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಾ.ಎ.ಎಸ್.ಕಿರಣ್ ಕುಮಾರ್…
ಬೆಳಗಾವಿ: ಕ್ಯಾನ್ಸರ್ ರೋಗವು ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿರುವುದು ಕಳವಳಕಾರಿ ಸಂಗತಿ. ಇದಕ್ಕೆ ಹಲವು ಕಾರಣಗಳಿದ್ದು, ನಮ್ಮ ಜೀವನ ಶೈಲಿ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತಿದೆ. ಹಾಗಾಗಿ, ಸದೃಢ ಆರೋಗ್ಯ ಮತ್ತು ಸೂಕ್ತ ಚಿಕಿತ್ಸೆಯ ಬಗ್ಗೆ ಜನರಲ್ಲಿ ಪರಿಣಮಕಾರಿಯಾಗಿ ಅರಿವು ಮೂಡಿಸುವ ತುರ್ತು ಅಗತ್ಯತೆ ಇದೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ಕೆಎಲ್ ಇ ಡಾ.ಸಂಪತ್ ಕುಮಾರ ಶಿವಣಗಿ ನೂತನ ಕ್ಯಾನ್ಸರ್ ಆಸ್ಪತ್ರೆಯನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, “ವಿಶ್ವದ ಜನಸಂಖ್ಯೆಯಲ್ಲಿ ಪ್ರತಿ ವರ್ಷ 2 ಕೋಟಿ ಜನ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದರಲ್ಲಿ 97 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಕೂಡ ಕ್ಯಾನ್ಸರ್ ಆಘಾತಕಾರಿಯಾಗಿ ಹರಡುತ್ತಿದೆ. ಪ್ರತಿ 1 ಲಕ್ಷ ಜನರಲ್ಲಿ 100 ಜನರಿಗೆ ಕ್ಯಾನ್ಸರ್ ಬರುತ್ತಿದೆ. 2025ರಲ್ಲಿ ಕ್ಯಾನ್ಸರ್ ರೋಗ ಹರಡುವ ದರವು ಶೇ.13ರಷ್ಟು ಹೆಚ್ಚಲಿದೆ ಎಂದು ಐಸಿಎಂಆರ್ ಸಂಶೋಧನೆಯಿಂದ ಗೊತ್ತಾಗಿದೆ” ಎಂದರು. ಕ್ಯಾನ್ಸರ್ ರೋಗಿಗಳ ದೈಹಿಕ ಮತ್ತು ಮಾನಸಿಕ ಅಗತ್ಯಗಳನ್ನು ಪರಿಹರಿಸುವುದು ಮತ್ತು ಸಮಗ್ರ ಆರೈಕೆ…
ಹಾಸನ: ತಂದೆಯನ್ನು ಹತ್ಯೆ ಮಾಡಿ ಹೃದಯಾಘಾತ ಎಂದು ಬಿಂಬಿಸಲು ಯತ್ನಿಸಿದ ಪುತ್ರನೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಸಕಲೇಶಪುರದ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ದಿನೇಶ್(34) ಬಂಧಿತ ಆರೋಪಿಯಾಗಿದ್ದಾನೆ. ಈತನ ತಂದೆ ಶಶಿಧರ್(58) ಹತ್ಯೆಗೀಡಾದವರು ಎಂದು ತಿಳಿದು ಬಂದಿದೆ. ಘಟನೆ ನಡೆದ ದಿನ ದಿನೇಶ್ ಕುಡಿದು ಬಂದು ತಂದೆಯ ಜೊತೆಗೆ ಜಗಳವಾಡಿದ್ದಾನೆ. ಬಳಿಕ ತಂದೆಗೆ ಕಾಲಿನಿಂದ ಒದ್ದಿದ್ದ. ಇದರಿಂದಾಗಿ ಶಶಿಧರ್ ಕುಸಿದು ಬಿದ್ದಿದ್ದಾರೆ. ಇದನ್ನು ಕಂಡು ದಿನೇಶ್ ನ ತಾಯಿ ಹೆದರಿ ಮನೆಯಿಂದ ಸಹೋದರನ ಮನೆಗೆ ತೆರಳಿದ್ದಾರೆ. ಇದೇ ವೇಳೆ ಕುಸಿದು ಬಿದ್ದ ತಂದೆಯನ್ನು ದಿನೇಶ್ ಅರೇಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದು, ಹೃದಯಾಘಾತವಾಗಿದೆ ಎಂದು ಬಿಂಬಿಸಿದ್ದ. ಶಶಿಧರ್ ಸಾವನ್ನಪ್ಪಿರುವುದಾಗಿ ಆಸ್ಪತ್ರೆಯಲ್ಲಿ ವೈದ್ಯರು ದೃಢಪಡಿಸಿದ್ದರು. ಬಳಿಕ ಆರೋಪಿ ದಿನೇಶ್ ಅಂತ್ಯಸಂಸ್ಕಾರಕ್ಕೆ ತಂದೆಯ ಮೃತದೇಹವನ್ನು ತಂದ ವೇಳೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಇದೇ ವೇಳೆ ದಿನೇಶ್ ವಿರುದ್ಧ ಆತನ ತಾಯಿಯೇ ಅರೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ…
ಬೆಂಗಳೂರು: ಪತ್ನಿಯ ಕಿರುಕುಳ ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದ ಟೆಕ್ಕಿ ಅತುಲ್ ಸುಭಾಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮೂವರು ಆರೋಪಿಗಳಿಗೆ ಬೆಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನಿಖಿತಾ ಸಿಂಘಾನಿಯಾ, ನಿಶಾ ಸಿಂಘಾನಿಯ ಹಾಗೂ ಅನುರಾಗ್ ಸಿಂಘಾನಿಯಾಗೆ 29ನೇ ಸಿಸಿಎಚ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅತುಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದರು. ಈ ಬಂಧನ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಜ.4ರಂದು ವಿಚಾರಣೆ ನಡೆಸಿದ ಹೈಕೋರ್ಟ್ ಜಾಮೀನು ಅರ್ಜಿ ಇತ್ಯರ್ಥ ಮಾಡುವಂತೆ ಕೆಳ ನ್ಯಾಯಾಲಯಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆ ಇಂದು ಅರ್ಜಿ ವಿಚಾರಣೆ ನಡೆಸಿ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಮಂಗಳೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದ 6 ಮಂದಿಯಿದ್ದ ಅಪರಿಚಿತರ ತಂಡ ಉದ್ಯಮಿಯೊಬ್ಬರ ಮನೆಯಿಂದ 30 ಲಕ್ಷ ರೂಪಾಯಿ ದೋಚಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪಟ್ಟಣದಲ್ಲಿ ನಡೆದಿದೆ. ಜನವರಿ 3ರ ರಾತ್ರಿ ಈ ಘಟನೆ ನಡೆದಿದೆ. ಕೊಳ್ನಾಡು ನಿವಾಸಿ ಹಾಗೂ ಕೃಷಿಕ, ಬೀಡಿ ಉದ್ಯಮಿ ಮೊಹಮ್ಮದ್ ಇಕ್ಬಾಲ್(27) ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ತಮಿಳುನಾಡು ನೋಂದಣಿಯ ವಾಹನದಲ್ಲಿ ರಾತ್ರಿ 8:10ರ ಸುಮಾರಿಗೆ ಬಂದ ದರೋಡೆ ಕೋರರು, ತಾವು ಇಡಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದು, ಮನೆಯನ್ನು ಶೋಧಿಸಲು ಆದೇಶವಿದೆ ಎಂದು ಹೇಳಿದ್ದಾರೆ. ಮನೆ ಪ್ರವೇಶಿಸಿದ ನಂತರ, ಅವರು ಶೋಧ ನಡೆಸುವ ಮೊದಲು ಕುಟುಂಬ ಸದಸ್ಯರಿಂದ ಐದು ಮೊಬೈಲ್ ಫೋನ್ ಗಳನ್ನು ಕಿತ್ತುಕೊಂಡಿದ್ದಾರೆ. ತಪಾಸಣೆ ವೇಳೆ, ವ್ಯವಹಾರದ ಉದ್ದೇಶದಿಂದ ಬೀರುದಲ್ಲಿಟ್ಟಿದ್ದ 25–30 ಲಕ್ಷ ರೂ. ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಮನೆಯಲ್ಲಿ ಇಡಲು ಅನುಮತಿ ಇಲ್ಲ. ಹೀಗಾಗಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ರಾತ್ರಿ 10.30ಕ್ಕೆ, ವಶಪಡಿಸಿಕೊಂಡ…
ತುಮಕೂರು: ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳು, ಶಿಕ್ಷಣ ಭೀಷ್ಮ ಡಾ. ಹೆಚ್.ಎಂ. ಗಂಗಾಧರಯ್ಯ ರವರ ಸ್ಮರಣಾರ್ಥ ಜನವರಿ 11ರಂದು ಸಿದ್ಧಾರ್ಥ ಗಾನ ಕಲಾ ಸಂಭ್ರಮ—29 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿವರ್ಷದಂತೆ ತುಮಕೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಜನಪದಗೀತೆ, ಭಾವಗೀತೆ ಮತ್ತು ಚಿತ್ರಕಲಾಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ತುಮಕೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪದವಿ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಲು ಕೋರಲಾಗಿದೆ. ಸಿದ್ದಾರ್ಥ ಕಾಲೇಜಿನ ಡಾ.ಕೆ.ಎಂ.ಗಂಗಾಧರಯ್ಯ ಸಭಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯ ನಿಯಮಗಳು : * ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಬಹುದು. * ಪ್ರತಿ ಸ್ಪರ್ಧಿಗೆ 4-5 ನಿಮಿಷಗಳ ಕಾಲಾವಧಿಯನ್ನು ನಿಗಧಿ ಮಾಡಲಾಗುವುದು. * ಪ್ರತಿ ಸ್ಪರ್ಧೆಗೆ ಪ್ರಥಮ ಬಹುಮಾನ ರೂ. 1000, ದ್ವಿತೀಯ ಬಹುಮಾನ ರೂ.750, ತೃತೀಯ ಬಹುಮಾನ ರೂ 500. ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. * ಸ್ಪರ್ಧೆಗೆ ಭಾಗವಹಿಸುವವರು ದಿನಾಂಕ. 10-01-2025 ರೊಳಗೆ ಪ್ರವೇಶ ಪತ್ರವನ್ನು ಕಳುಹಿಸಬೇಕು. ಅಥವಾ ಸ್ಥಳದಲ್ಲೇ ನೊಂದಾಯಿಸಲು ಸಹ…
ಶಾಲಾ–ಕಾಲೇಜ್ ನಲ್ಲಿ ಮಕ್ಕಳಿಂದ ಸಿನಿಮಾ ಹಾಡು ಗಳಿಗೆ ಹೆಜ್ಜೆ ಹಾಕಿಸುವುದನ್ನು ನಿಷೇಧ ಮಾಡಿದರೂ ಸಹಾ, ಶಾಲಾ–ಕಾಲೇಜ್ ಗಳು ಸ್ಪರ್ಧೆಗೆ ಇಳಿದಂತೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ನಡೆಸುವುದು ಒಳ್ಳೆಯ ಬೆಳವಣಿಗೆ. ಆದರೆ ಸಿನಿಮಾ ಹಾಡುಗಳು ಬೆಳೆಯುವ ಮನಸ್ಸುಗಳಿಗೆ ಯಾವ ರೀತಿಯ ಪ್ರೇರಣೆ ನೀಡಬಹುದು ಎನ್ನುವುದನ್ನು ಶಿಕ್ಷಕರು – ಉಪನ್ಯಾಸಕರು ಚಿಂತಿಸದಿರುವುದು ದುರಂತ. ಶಾಲಾ-ಕಾಲೇಜುಗಳಲ್ಲಿ ಯುವ ಸಮುದಾಯವನ್ನು ಮೆಚ್ಚಿಸಲು, ಪೋಷಕರನ್ನು ಮೆಚ್ಚಿಸಲು ಸಿನಿಮಾ ಹಾಡುಗಳನ್ನು ಕಾರ್ಯಕ್ರಮಗಳಲ್ಲಿ ಬಳಸುವುದು ಎಷ್ಟು ಸರಿ? ಎನ್ನುವುದನ್ನು ಚಿಂತಿಸಬೇಕಿದೆ. ಸಿನಿಮಾ ಹಾಡುಗಳನ್ನು ಬಳಕೆ ಮಾಡುವುದಕ್ಕಿಂತ ಶಾಲಾ–ಕಾಲೇಜ್ ಗಳಲ್ಲಿ ಸಮಾಜದಲ್ಲಿ ಇರುವ ಅನಿಷ್ಟ ಪದ್ಧತಿಗಳನ್ನು, ಮೂಢನಂಬಿಕೆಗಳನ್ನು ನಿವಾರಣೆ ಮಾಡುವಂತಹ ಕಿರುನಾಟಕಗಳನ್ನು ಹಾಗೂ ದೇಶ ಅಭಿಮಾನ ನಾಡ ಅಭಿಮಾನ ಬೆಳೆಸುವಂತಹ ಕಿರುನಾಟಕಗಳ ಹಾಡುಗಳನ್ನು ಬಳಕೆ ಮಾಡಿಕೊಳ್ಳುವುದು ಅಗತ್ಯ ಇದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಚಿಂತಿಸಬೇಕಾದ ಅಗತ್ಯವಿದೆ. ಸಿನಿಮಾ ಹಾಡುಗಳ ಸಂಸ್ಕೃತಿಗೆ ಶಾಲಾ ಕಾಲೇಜುಗಳಲ್ಲಿ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಯುವ ಸಮೂದಾಯ ಸೆಲ್ಫಿ ಹಾಗೂ ರೀಲ್ಸ್ ಗಳನ್ನು ಹೆಚ್ಚು…
ಬಾಗಲಕೋಟೆ: ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗಿನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಮದುವೆ ಮಾಡಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ನಡೆದಿದ್ದು, ಮದುವೆ ಬಳಿಕ ಬ್ರೋಕರ್ ಹಾಗೂ ವಿವಾಹವಾದ ಹೆಣ್ಣು ಇಬ್ಬರೂ ಪರಾರಿಯಾಗಿದ್ದಾರೆ. ಮುಧೋಳದ ಸೋಮಶೇಖರ್ ಎಂಬವರು ಮೋಸ ಹೋದವರಾಗಿದ್ದಾರೆ. ಸೋಮಶೇಖರ್ ಹೆಣ್ಣು ಸಿಗದೇ ಹೆಣ್ಣಿಗಾಗಿ ಅಲೆದಾಡುತ್ತಿರುವ ವಿಚಾರ ತಿಳಿದು ಹೆಣ್ಣು ಕೊಡಿಸ್ತೀವಿ ಎಂದು ಹೇಳಿ 4 ಲಕ್ಷ ಹಣಕ್ಕೆ ಬ್ರೋಕರ್ ಟೀಂ ಡಿಮ್ಯಾಂಡ್ ಮಾಡಿದ್ದರು. ಹೆಣ್ಣು ಸಿಗದ ಕೊರಗಿನಲ್ಲಿದ್ದ ಸೋಮಶೇಖರ್ ಇದಕ್ಕೆ ಒಪ್ಪಿಕೊಂಡಿದ್ದರು. ಶಿವಮೊಗ್ಗದ ಮಹಿಳೆ ಮಂಜುಳಾ ಎಂಬವರನ್ನು ಕರೆತಂದು ಬಾಗಲಕೋಟೆ ಮುಧೋಳದ ಕಾಳಿಕಾದೇವಿ ದೇಗುಲದಲ್ಲಿ ವರ್ಷದ ಹಿಂದೆ ಮದುವೆ ನಡೆದಿತ್ತು. ಮದುವೆ ದಿನವೇ ಬ್ರೋಕರ್ ತಂಡವು ಪೂರ್ಣ 4 ಲಕ್ಷ ಹಣ ಪಡೆದಿತ್ತು. ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಮಂಜುಳಾ ಎಸ್ಕೇಪ್ ಆಗಿದ್ದಳು. ಪತ್ನಿ ಬಗ್ಗೆ ವಿಚಾರಿಸಲು ಹೋದ ವೇಳೆ ಈಗಾಗಲೇ ಆಕೆಗೆ ಎರಡು ಮದುವೆಯಾದ ಬಗ್ಗೆ ಸುಳಿವು ಸಿಕ್ಕಿದೆ. ಹಣ ಹೊಡೆಯಲು ಮದುವೆಯಾದ ಮಹಿಳೆಯನ್ನೇ ಶಿವಮೊಗ್ಗದಿಂದ ಮುಧೋಳಕ್ಕೆ ಬ್ರೋಕರ್…
ತುಮಕೂರು: ರಾಸಲೀಲೆ ವಿಡಿಯೋ ವೈರಲ್ ಪ್ರಕರಣದಲ್ಲಿ ಬಂಧಿತ ಡಿವೈಎಸ್ ಪಿ ರಾಮಚಂದ್ರಪ್ಪ ಅವರನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಿದ ಬಳಿಕ ನೇರವಾಗಿ ನ್ಯಾಯಾಧೀಶರ ಮುಂದೆ ಮಧುಗಿರಿ ಪೊಲೀಸರು ಹಾಜರುಪಡಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿ JMFC ಕೋರ್ಟ್ನ ಪ್ರಧಾನ ಹಿರಿಯ ನ್ಯಾಯಾಧೀಶೆ ಪ್ರೇಮಿಳಾ ಅವರು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದು, ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಡಿವೈಎಸ್ಪಿ ರಾಮಚಂದ್ರಪ್ಪ ಪರವಾಗಿ ಹಿರಿಯ ವಕೀಲ ರಘುನಾಥ್ ರೆಡ್ಡಿ ವಾದ ಮಂಡಿಸಿದರು. ಸಂತ್ರಸ್ತೆ ಪರವಾಗಿ ತಕಾರಾರು ಮಂಡಿಸಲು ಜನವರಿ 7 ವರೆಗೆ ಗಡುವು ನೀಡಲಾಗಿದೆ. ಡಿವೈಎಸ್ಪಿ ರಾಮಚಂದ್ರಪ್ಪಗೆ ಪೊಲೀಸರ ವಿಚಾರಣೆ ಬಿಸಿ ತಟ್ಟಿದೆ. ಇಂದು ಸಂಜೆ 4 ಗಂಟೆಗೆ ರಾಮಚಂದ್ರಪ್ಪರವರನ್ನು ಮಧುಗಿರಿ ಕೊರ್ಟ್ ಗೆ ಮಧುಗಿರಿ ಪೊಲೀಸರು ಹಾಜರುಪಡಿಸಿದ್ದರು. ಜನವರಿ 17 ರವರೆಗೆ ರಾಮಚಂದ್ರಪ್ಪಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಾಸಲೀಲೆ ಪ್ರಕರಣದಲ್ಲಿ ಮಧುಗಿರಿ ಡಿವೈಎಸ್ಪಿಗೆ ಸಂಕಷ್ಟಕ್ಕೆ ಸಿಲುಕಿದ್ದು ಸದ್ಯ ಜೈಲುಪಾಲಾಗಿದ್ದಾರೆ. ನಮ್ಮತುಮಕೂರಿನ ಕ್ಷಣ…
ತಮಿಳುನಾಡು: ಪಟಾಕಿ ಘಟಕದಲ್ಲಿ ನಡೆದ ಭೀಕರ ಸ್ಫೋಟದ ಪರಿಣಾಮ 6 ಮಂದಿ ಕಾರ್ಮಿಕರು ಪ್ರಾಣ ಕಳೆದುಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ವಿರುದುನಗರದಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ರಾಸಾಯನಿಕಗಳನ್ನು ಬೆರೆಸುವ ಪ್ರಕ್ರಿಯೆಯ ವೇಳೆ ಭೀಕರ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರಗೆ ನಾಲ್ಕು ಕೊಠಡಿಗಳು ನೆಲಸಮವಾಗಿವೆ. 6 ಕಾರ್ಮಿಕರು ಸಾವನ್ನಪ್ಪಿದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕದಳ ಮತ್ತು ರಕ್ಷಣಾ ಸಿಬ್ಬಂದಿ ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx