Subscribe to Updates
Get the latest creative news from FooBar about art, design and business.
- ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ
- ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಸುರೇಖಾ ನೇಮಕ
- ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ
- ಹೊಳೆನರಸೀಪುರಕ್ಕೆ ನೂತನ ವಸತಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ: ಪಟಾಕಿ, ಸೇಬಿನ ಹಾರ ಹಾಕಿ ಭವ್ಯ ಸ್ವಾಗತ
- ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ
- ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್
- ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆ
- ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಚುರುಕು: 105 ಅಡಿಗೆ ತಲುಪಿದ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ
Author: admin
ತುಮಕೂರಿನ: ನಗರದ ಸರಸ್ವತಿಪುರಂ ನಲ್ಲಿರುವ ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ.ಜಿ.ವಿ.ಆನಂದಮೂರ್ತಿ ರವರು ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ, ಈ ಭಾಷೆಗೆ ಕನ್ನಡಗರಲ್ಲದೆ, ಕರ್ನಾಟಕದಲ್ಲಿ ವಾಸಿಸುವ ಎಲ್ಲಾ ಧರ್ಮದವರ ಅಪಾರ ಕೊಡುಗೆ ಇದೆ. ಕನ್ನಡ ಭಾಷೆ ಅಂಧಾಭಿಮಾನ ಬೆಳೆಸುವುದಿಲ್ಲ, ಅದು ವೈಚಾರಿಕ ಪ್ರಜ್ಞೆಯನ್ನು ಬೆಳೆಸುತ್ತದೆ. ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ರವರು, ವಚನಕಾರರು ನಮಗೆ ಮೌಢ್ಯವನ್ನು ಬೆಳೆಸಲಿಲ್ಲ, ವೈಚಾರಿಕತೆಯನ್ನು ಬೆಳೆಸಿದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಧ್ಯಾಪಕ ಡಾ.ಮಾರುತಿ ಎನ್.ಎನ್. ರವರು ಕನ್ನಡ ನಮ್ಮೆಲ್ಲರ ಅಹಂನಲ್ಲಿ ಬೆರೆಯಬೇಕು, ಕನ್ನಡವನ್ನು ಬೆಳೆಸೋಣ, ಕಲಿಸೋಣ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿಸಿದರು. ಕರ್ನಾಟಕದ ಭೂಪಟವನ್ನು ಚಿತ್ರಿಸಿ 69 ಹಣತೆಗಳನ್ನು ಹಚ್ಚುವುದರ ಮೂಲಕ ವಿಶೇಷವಾಗಿ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಸಿದ್ದರಾಜು , ಸಹಾಯಕ…
ತುಮಕೂರು: ದಲಿತ ಬಾಲಕನಿಂದ ಮಲ ಸ್ವಚ್ಚಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ವಿವಿ ವಾವಾ ಅವರನ್ನು ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ನೇತೃತ್ವದ ತಂಡ ಭೇಟಿಯಾಗಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಲಾಯಿತು. ತುಮಕೂರಿನ ಖಾಸಗಿ ಹೋಟೆಲ್ ಗೆ ಆಗಮಿಸಿದ ವಿವಿ ವಾವಾ ಅವರಿಗೆ ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ನೇತೃತ್ವದ ತಂಡ ಭೇಟಿಯಾಗಿ ದಲಿತ ಬಾಲಕನಿಂದ ಮಲ ಸ್ವಚ್ಚಗೊಳಿಸಿದ ಪ್ರಕರಣ ಕುರಿತಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದರು. ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಓಬಳೇಶ್ ಘಟನೆಯನ್ನ ವಾವಾ ಅವರಿಗೆ ಸವಿಸ್ತಾರವಾಗಿ ವಿವರಿಸಿ ಎಫ್ ಐ ಆರ್ ನಲ್ಲಿನ ಲೋಪದೋಷಗಳನ್ನ ವಿವರಿಸಿದರು. ಜೆಟ್ಟಿ ಅಗ್ರಹಾರ ನಾಗರಾಜು ಮಾತನಾಡಿ, ಪ್ರಕರಣವನ್ನ ಮುಚ್ಚಿಹಾಕುವ ಯತ್ನ ನಡೆದಿದೆ, ಎಫ್ ಐ ಆರ್ ನಲ್ಲಿ ಬಾಲಕಾರ್ಮಿಕ ಆಕ್ಟ್, ಹಾಗೂ ಅಟ್ರಾಸಿಟಿ ಆಕ್ಟ್ ಗಳನ್ನ ಉಲ್ಲೆಖಿಸಿಲ್ಲ, ಸರ್ಕಾರ ಈ ಪ್ರಕಣವನ್ನ ಗಂಭೀರವಾಗಿ ಪರಿಗಣಿಸುತ್ತಿಲ್ಲ ಹಾಗಾಗಿ ದಯವಿಟ್ಟು ತಾವು…
ತುಮಕೂರು: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನವೆಂಬರ್ 13ರಂದು ಜಿಲ್ಲೆಯ 10 ಗ್ರಾಮ ಪಂಚಾಯತಿಗಳಲ್ಲಿ ಪಿಂಚಣಿ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಈ ಅದಾಲತ್ ನಲ್ಲಿ ಪಿಂಚಣಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಕುಂದು–ಕೊರತೆಗಳನ್ನು ಆಲಿಸಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ನವೆಂಬರ್ 13ರಂದು ಜಿಲ್ಲೆಯ ಶಿರಾ ತಾಲೂಕಿನ ತರೂರು; ತಿಪಟೂರು ತಾಲೂಕಿನ ಮಣಕೀಕೆರೆ; ಮಧುಗಿರಿ ತಾಲೂಕಿನ ಗೊಂದಿಹಳ್ಳಿ; ತುಮಕೂರು ತಾಲೂಕಿನ ಕೆಸ್ತೂರು ಹಾಗೂ ಓಬಳಾಪುರ; ಕುಣಿಗಲ್ ತಾಲೂಕಿನ ನಾಗಸಂದ್ರ ಹಾಗೂ ಹುತ್ರಿದುರ್ಗ; ಕೊರಟಗೆರೆ ತಾಲೂಕಿನ ವಜ್ಜನಕುರಿಕೆ; ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ; ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿಗಳಲ್ಲಿ ಪಿಂಚಣಿ ಅದಾಲತ್ ನಡೆಯಲಿದ್ದು, ಪಿಂಚಣಿದಾರರು ಅದಾಲತ್‌ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಸಲ್ಲಿಸಿ ಪರಿಹರಿಸಿಕೊಳ್ಳಬಹುದು ಎಂದು ಅವರು ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಬೆಸ್ಕಾಂ ಸಿ.ಎಸ್.ಡಿ.-1 ಪಶ್ಚಿಮ ಶಾಖೆಯಲ್ಲಿ ಲೈನ್ ಮೆನ್(ಜ್ಯೂನಿಯರ್ ಪವರ್ ಮ್ಯಾನ್) ಆಗಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 30 ವರ್ಷದ ಕನ್ನಯ್ಯ ಗಸ್ತಿ ಎಂಬ ವ್ಯಕ್ತಿಯು ನವೆಂಬರ್ 4 ರಿಂದ ಕಾಣೆಯಾಗಿದ್ದಾರೆ ಎಂದು ಈತನ ಅಣ್ಣ ಪರುಶರಾಮ್ ತಾನಾಜಿ ಗಸ್ತಿ ಠಾಣೆಗೆ ದೂರು ನೀಡಿದ್ದಾರೆ. ಕಾಣೆಯಾದ ವ್ಯಕ್ತಿಯು 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಮೂಗಿನ ಮೇಲೆ ಮಚ್ಚೆ ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಚೌಕುಳಿ ಅಂಗಿ, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದನು. ಈತನ ಬಗ್ಗೆ ಸುಳಿವು ಸಿಕ್ಕವರು ಕೂಡಲೇ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಕುಣಿಗಲ್ ತಾಲ್ಲೂಕು ಕಗ್ಗೆರೆ ತೋಂಟದ ಶ್ರೀ ಸಿದ್ದಲಿಂಗೇಶ್ವರಸ್ವಾಮಿ ತಪೋಕ್ಷೇತ್ರದಲ್ಲಿ ನವೆಂಬರ್ 15ರಂದು ಸಂಜೆ 5:30 ಗಂಟೆಗೆ ಶ್ರೀ ತೋಂಟದ ಶ್ರೀ ಸಿದ್ದಲಿಂಗೇಶ್ವರಸ್ವಾಮಿಗೆ ಏಕಾದಶ ಸಹಸ್ರ ದೀಪೋತ್ಸವ ಸೇವೆ ಹಾಗೂ ರಾತ್ರಿ ಮುತ್ತಿನ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ. ಏಕಾದಶ ಸಹಸ್ರ ದೀಪೋತ್ಸವದ ಒಂದು ದೀಪಕ್ಕೆ 40 ರೂ.ಗಳನ್ನು ನಿಗದಿಪಡಿಸಲಾಗಿದೆ. ಭಕ್ತಾಧಿಗಳು ಪುದುವಟ್ ಸೇವಾ ಠೇವಣಿಯಲ್ಲಿ 500 ರೂ.ಗಳನ್ನು ತೊಡಗಿಸಿದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಹುಣ್ಣಿಮೆ ದಿವಸ ಏಕಾದಶ ಸಹಸ್ರ ದೀಪೋತ್ಸವದಂದು ಒಂದು ದೀಪವನ್ನು ಹಚ್ಚಿಸುವ ಸೇವಾ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು ಅರಿವು–ಶೈಕ್ಷಣಿಕ ಸಾಲ ಯೋಜನೆಯಡಿ ಶೈಕ್ಷಣಿಕ ಸಾಲ ಸೌಲಭ್ಯ ಕಲ್ಪಿಸಲು ಆರ್ಯವೈಶ್ಯ ಸಮುದಾಯದ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಯೋಜನೆಯಡಿ ಸಿ.ಇ.ಟಿ/ಎನ್.ಇ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ ಹಾಗೂ ಪಿಹೆಚ್.ಡಿ. ವ್ಯಾಸಂಗ ಮಾಡುವ ಆರ್ಯವೈಶ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ 1 ಲಕ್ಷ ರೂ.ಗಳ ಸಾಲ ನೀಡಲಾಗುವುದು. ವ್ಯಾಸಂಗ ಪೂರ್ಣಗೊಂಡ ನಂತರ 4 ತಿಂಗಳ ವಿರಾಮಾವಧಿಯ ನಂತರ 36 ಮಾಸಿಕ ಕಂತುಗಳಲ್ಲಿ ಸಾಲವನ್ನು ಮರುಪಾವತಿಸಬೇಕು. ಅರ್ಜಿದಾರರು 18 ರಿಂದ 35 ವರ್ಷದೊಳಗಿನವರಾಗಿದ್ದು, ಕುಟುಂಬದ ವಾರ್ಷಿಕ ವರಮಾನ 6,00,000 ರೂ.ಗಳ ಮಿತಿಯೊಳಗಿರಬೇಕು ಹಾಗೂ ಸಾಮಾನ್ಯ ವರ್ಗದಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ಸೇರಿದವರಾಗಿದ್ದು, ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನಮೂನೆ-ಜಿಯಲ್ಲಿ ಪಡೆದು(ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು)ಸಲ್ಲಿಸಬೇಕು. ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಜೋಡಣೆ ಹಾಗೂ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಸಿರಬೇಕು.…
ತುಮಕೂರು: ತುಮಕೂರು ತಾಲ್ಲೂಕು ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿ ಚನಗಪ್ಪನಪಾಳ್ಯ ಬಾರೆ ಹತ್ತಿರ ಅಕ್ಟೋಬರ್ 19ರಂದು ಮಧ್ಯಾಹ್ನ 12:30ರ ಸಮಯದಲ್ಲಿ ನವಜಾತ ಶಿಶುವೊಂದು ದೊರೆತಿದ್ದು, ಪೋಷಕರು ಯಾರೆಂದು ತಿಳಿದು ಬಂದಿರುವುದಿಲ್ಲ. ನವಜಾತ ಶಿಶುವು ಸಾಧಾರಣ ಮೈಕಟ್ಟು, ಕಂದು ಮೈಬಣ್ಣ, ದುಂಡು ಮುಖ ಹೊಂದಿದ್ದು, ಪೋಷಕರ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ದೂ.ವಾ.ಸಂ.9480802953, 9110857472, 0816–2241036/ 2956699ನ್ನು ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯ ಎಲ್ಲಾ 24 ಗ್ರಾಮ ಪಂಚಾಯತಿಗಳಲ್ಲಿ ನವಂಬರ್ 27ರಿಂದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳ ಹಾಗೂ ಅನೈರ್ಮಲ್ಯ ಶೌಚಾಲಯಗಳ ಸಮೀಕ್ಷೆ ನಡೆಸಲಾಗುವುದು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಸಿ.ಅನಂತರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳ ಹಾಗೂ ಅನೈರ್ಮಲ್ಯ ಶೌಚಾಲಯಗಳ ಸಮೀಕ್ಷೆ ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದ್ದು, ವೇಳಾಪಟ್ಟಿಯನ್ವಯ ನವೆಂಬರ್ 27ರಂದು ಕೊರಟಗೆರೆ ತಾಲ್ಲೂಕಿನ ಗ್ರಾಮೀಣ ಭಾಗದ ಅನೈರ್ಮಲ್ಯ ಶೌಚಾಲಯಗಳ ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆಯಲ್ಲಿ ಕಂಡು ಬಂದ ಅನೈರ್ಮಲ್ಯ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುತ್ತಿರುವ ಮಾಲೀಕರಿಗೆ ಅನೈರ್ಮಲ್ಯ ಶೌಚಾಲಯಗಳನ್ನು ನಾಶಪಡಿಸಿ ಕೂಡಲೇ ನೈರ್ಮಲ್ಯ ಶೌಚಾಲಯಗಳನ್ನಾಗಿ ಮಾರ್ಪಡಿಸಲು ಡಿಸೆಂಬರ್ 5ರೊಳಗಾಗಿ ನೋಟೀಸ್ ಜಾರಿ ಮಾಡಲಾಗುವುದು. ಸಮೀಕ್ಷೆಯಲ್ಲಿ ಗ್ರಾಮೀಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನೈರ್ಮಲ್ಯ ಶೌಚಾಲಯಗಳು ಕಂಡು ಬರದೆ ಇದ್ದಲ್ಲಿ ಅಂತಹ ಪ್ರದೇಶಗಳನ್ನು ಅನೈರ್ಮಲ್ಯ ಶೌಚಾಲಯಗಳ ರಹಿತ ಪ್ರದೇಶ ಎಂದು ಡಿಸೆಂಬರ್ 20ರಂದು ಘೋಷಿಸಲಾಗುವುದು. ಅನೈರ್ಮಲ್ಯ ಶೌಚಾಲಯಗಳು ಕಂಡು ಬರದ ಪ್ರದೇಶಗಳಲ್ಲಿ ಅನೈರ್ಮಲ್ಯ ಶೌಚಾಲಯಗಳಲ್ಲಿ ಮಲ ಸ್ವಚ್ಛ ಮಾಡುವ…
ಔರಾದ: ಸಮರ್ಪಕ ಬಸ್ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಔರಾದ (ಘಟಕ ) ವ್ಯವಸ್ಥಾಪಕರಿಗೆ ಸೋಮವಾರ ಔರಾದ ತಾಲೂಕು ಪಂಚ ಗ್ಯಾರಂಟಿ ಯೋಜನೆ ಸದಸ್ಯ ಚಂದು ಡಿ.ಕೆ., ದತ್ತಾತ್ರಿ ಬಾಪೂರೆ ಮನವಿ ಸಲ್ಲಿಸಿದರು. ತೆಲಂಗಾಣ ಗಡಿ ಗ್ರಾಮಗಳಾದ ಜಂಬಗಿ, ಮಹಾರಾಜವಾಡಿ, ಚಿಕ್ಲಿ (ಜೆ ) ವಡಗಾಂವ, ಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಈ ಭಾಗದ ಜನರಿಗೆ ಅನುಕೂಲ ವಾಗುವಂತೆ ನೈಟ್ ಹಾಲ್ಟ್ ಬಸ್ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ( ಜನಸ್ಪಂದ ಕುಂದು ಕೊರತೆ ಸಂಖ್ಯೆ 209782 ವಿಭಾಗದಲ್ಲಿ ತಿಳಿಸಲಾಗಿತ್ತು. ಆದರೆ, ಅವರಿಂದ ಯಾವುದೆ ಸ್ಪಂದನೆ ದೊರೆಯದ ಕಾರಣ, ಸೋಮುವಾರ ಘಟಕ ವ್ಯವಸ್ಥಾಪಕರಿಗೆ ಲಿಖಿತ ಮನವಿಪತ್ರ ಸಲ್ಲಿಸಿದರು. ಸಂಜೆ 5 ಗಂಟೆ ನಂತರ ಸಂತಪುರ್ ನಿಂದ ತಾಲೂಕಿನ ಗಡಿ ಗ್ರಾಮಗಳಾದ ಜಂಬಗಿ, ವಡಗಾಂವ್, ಚಿಕ್ಲಿ, ಮಹಾರಾಜವಾಡಿ, ವಿವಿಧ ಥಾಂಡಗಳಿಗೆ ಇತರೆ ಹಳ್ಳಿಗಳಿಗೆ ಹೋಗ್ಬೇಕಾದ್ರೆ ಯಾವುದೇ ಬಸ್ ಇಲ್ಲ, ಸಂಜೆ ಆದ್ರೆ ಸಾಕು…
ಸರಗೂರು: ಮುಖ್ಯಮಂತ್ರಿಗಳು ಬರುತ್ತಾರೆ ಎಂದು ರಾಷ್ಟ್ರೀಯ ಹೆದ್ದಾರಿಗಳ ಹಳ್ಳಕೊಳ್ಳಮುಚ್ಚುತ್ತಾರೆ. ಆದರೆ, ಇದೇ ಕ್ಷೇತ್ರದ ಕಾಡಂಚಿನ ಭಾಗದಲ್ಲಿರುವ ರೈತರು ಜಾನುವಾರುಗಳು ತಿರುಗಾಡುವ ರಸ್ತೆ ಅವ್ಯವಸ್ಥೆಯಾಗಿದೆ ಇದು ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬಿದರಹಳ್ಳಿ ಗ್ರಾಮದಿಂದ ತಾಲೂಕಿನ ಗಡಿ ಭಾಗದ ಗೆಂಡತ್ತೂರು ಗ್ರಾಮದವರಗೆ ರಸ್ತೆ ದುರಸ್ತಿ ಮಾಡುವಂತೆ ಸೋಮವಾರದಂದು ಕಂಚನಹಳ್ಳಿ ಗ್ರಾಮದ ರಸ್ತೆ ಮಧ್ಯದಲ್ಲಿ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಭೀಮನ ಕೊಲ್ಲಿ ಶುಂಠಿ ಬೆಳೆಗಾರರ ಸಭೆಗೆ ತೆರಳುತ್ತಿದ್ದ ವೇಳೆ ರಸ್ತೆ ಹಳ್ಳಗುಂಡಿಗಳನ್ನ ನೋಡಿ ದಿಢೀರನೆ ಹಳ್ಳ ಕೊಳ್ಳಗಳ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲಾಯಿತು. ನಂತರ ಮಾತನಾಡಿದ ಅವರು, ಮುಖ್ಯಮಂತ್ರಿ ಬರುವ ರಸ್ತೆ ಅಧಿಕಾರಿಗಳ ಕಣ್ಣಿಗೆ ಕಾಣುತ್ತದೆ ಬಿದರಹಳ್ಳಿ ಗ್ರಾಮ ಮಾರ್ಗವಾಗಿ ಮೂರ್ಬಾಂದು, ಕೆಂಚನಹಳ್ಳಿ, ಎನ್.ಬೇಗೂರು, ಹೊಸಹಳ್ಳಿ, ಗೆಂಡತ್ತೂರು, ಹಳ್ಳಿಯ ರೈತರು ದಿನನಿತ್ಯ ತಿರುಗಾಡುತ್ತಿದ್ದಾರೆ. ಆದರೆ ತಾಲೂಕಿನ ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಹಾಗೂ…