Subscribe to Updates
Get the latest creative news from FooBar about art, design and business.
- ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಸುರೇಖಾ ನೇಮಕ
- ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ
- ಹೊಳೆನರಸೀಪುರಕ್ಕೆ ನೂತನ ವಸತಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ: ಪಟಾಕಿ, ಸೇಬಿನ ಹಾರ ಹಾಕಿ ಭವ್ಯ ಸ್ವಾಗತ
- ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ
- ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್
- ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆ
- ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಚುರುಕು: 105 ಅಡಿಗೆ ತಲುಪಿದ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ
- ಬಿಜೆಪಿಯವರು ಬರ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ನೀಡಲಿ: ಸಚಿವ ಸಂತೋಷ್ ಲಾಡ್
Author: admin
ರಾಮನಗರ: ಜಿಲ್ಲೆಯಲ್ಲಿ ಕನಿಷ್ಠ 25 ಸಾವಿರ ಯುವಕರಿಗೆ ಉದ್ಯೋಗ ಕೊಡಿಸುವಂತ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಚನ್ನಪಟ್ಟಣ ನಗರ ವ್ಯಾಪ್ತಿಯ ಹಲವಾರು ವಾರ್ಡ್ ಗಳಿಗೆ ಭೇಟಿ ನೀಡಿ ಮತಯಾಚಿಸಿದ ಅವರು, ನಿರುದ್ಯೋಗ ಸಮಸ್ಯೆಯಿಂದ ಸಾಕಷ್ಟು ಯುವಕರು ವಂಚಿತರಾಗಿದ್ದಾರೆ. ಕುಮಾರಣ್ಣನ ಪರವಾಗಿ ಯುವ ಸಮುದಾಯದ ಒಬ್ಬ ಯುವಕನಾಗಿ ನಿಮಗೆ ಮಾತು ಕೊಡುತ್ತಿದ್ದೇನೆ, ಯುವಕರ ಧ್ವನಿಯಾಗಿ ನಾನು ಕೆಲಸ ಮಾಡುತೇನೆ, ಜಿಲ್ಲೆಯಲ್ಲಿ ಕನಿಷ್ಠ 25 ಸಾವಿರ ಯುವಕರಿಗೆ ಉದ್ಯೋಗ ಕೊಡಿಸುವಂತ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು. ಕುಮಾರಣ್ಣ ರೈತರ ಪರವಾಗಿ ಮಾತು ಕೊಟ್ಟು, ಕೊಟ್ಟ ಮಾತಿನಂತೆ ರೈತರ ಸಾಲ ಮನ್ನ ಮಾಡಿದ್ದರೋ ಅದೇ ರೀತಿ ರಾಮನಗರ ಮತ್ತು ಚನ್ನಪಟ್ಟಣ ಜನತೆಗೆ ಉದ್ಯೋಗ ಕಲ್ಪಿಸಿಕೊಡಿಸುತ್ತೇನೆ ಎಂಬ ಸವಾಲು ಸ್ಪೀಕರ ಮಾಡಿದ್ದಾರೆ ಕುಮಾರಣ್ಣ ಅವರು ಎಂದರು. ಕುಮಾರಣ್ಣ ಈಗಾಗಲೇ ದೆಹಲಿಯಲ್ಲಿ ನಾಲ್ಕುವರೆ ತಿಂಗಳಿಂದ ಸರಣಿ ಸಭೆ ಮಾಡುತ್ತಿದ್ದಾರೆ. ಅನೇಕ ಬೃಹತ್ ಕೈಗಾರಿಕಾ ಕಾರ್ಖಾನೆಯನ್ನ ರಾಮನಗರ ಜಿಲ್ಲೆಯಲ್ಲಿ ಸ್ಥಾಪನೆ ಮಾಡುವ ಉದ್ದೇಶದಿಂದ ಕೆಲಸ…
ಕೊರಟಗೆರೆ: ವಿಶ್ವಕ್ಕೆ ಶಾಂತಿ ಅಹಿಂಸಾ ಧರ್ಮವನ್ನು ಬೋಧಿಸುವ ಜೈನ ಧರ್ಮದ ಮಂತ್ರಗಳು , ಬೋಧನೆ , ಪಾಠ ಪ್ರವಚನಗಳನ್ನು ನೀಡುವ ಧರ್ಮಭೂಮಿ ತೋವಿನಕೆರೆಯಾಗಿದೆ ,ಇಲ್ಲಿ ನಡೆಯುತ್ತಿದ್ದ ಮಂತ್ರಗಳು ಬೋಧನೆಗಳು, ಪ್ರವಚನಗಳು ವಿಶ್ವಮಾನವಾಗಿದ್ದು ,ಇದೊಂದು ಧರ್ಮ ಭೂಮಿಯಾಗಿದೆ ಎಂದು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿಶ್ರೀ ಲಕ್ಷ್ಮಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. ಅವರಿಂದು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚನ್ನರಾಯನ ದುರ್ಗ ಹೋಬಳಿ ತೋವಿನಕೆರೆಯಲ್ಲಿ ಶ್ರೀ ದಿಗಂಬರ ಜೈನ ಶ್ರೀ ಚಂದ್ರಪ್ರಭಾ ತೀರ್ಥಂಕರರ ಜಿನಮಂದಿರದಲ್ಲಿ ಚಂದ್ರನಾಥ ಭವನದ ಉದ್ಘಾಟನಾ ಸಮಾರಂಭದ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಈ ಹಿಂದೆ ಇಲ್ಲಿ ಮಂತ್ರಗಳ ಬೋಧನೆ ,ಪಾಠ ಪ್ರವಚನಗಳು ನಡೆಯುತ್ತಿದ್ದವು, ಮಾತಾಜಿಗಳು ಪ್ರವಚನ ನೀಡುತ್ತಿದ್ದರು, ಇದೊಂದು ಧರ್ಮ ಭೂಮಿಯಾಗಿದ್ದು ಧರ್ಮಕ್ಕೆ, ಸಾಹಿತ್ಯಕ್ಕೆ, ಹಲವಾರು ಮಹತ್ವದ ಕೊಡುಗೆಗಳನ್ನು ನೀಡಿದೆ ಎಂದರು. ಸರ್ಕಾರದಲ್ಲಿ ಇಂದು ಓಟು ಬ್ಯಾಂಕ್ ರಾಜಕೀಯ ನಡೆದಿದೆ, ದೇಶದಲ್ಲಿ ಇಂದು ಸಂಸ್ಕೃತಿಯ ಉದ್ಧಾರ ಬೇಕಿಲ್ಲ, ಭೂಮಿ, ಇತಿಹಾಸ ಬೇಡವಾಗಿದೆ ಎಂದು ವಿಷಾದಿಸಿದ…
ತುಮಕೂರು: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತೀ ಸಣ್ಣ(SME)ಘಟಕಗಳ ಸ್ಥಾಪನೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಉದ್ದಿಮೆದಾರರು/ಫಲಾನುಭವಿಗಳು ಸಹಾಯಧನ ಸೌಲಭ್ಯಕ್ಕಾಗಿ ಮಾರ್ಗಸೂಚಿಯನ್ವಯ ಪೂರ್ಣ ಪ್ರಮಾಣದ ಪ್ರಸ್ತಾವನೆ ಅರ್ಜಿಯನ್ನು ಕೂಡಲೇ ಸಲ್ಲಿಸತಕ್ಕದ್ದು. ವಿಶೇಷ ಘಟಕ ಯೋಜನೆಯಡಿ ಭೌತಿಕ-೫ ಹಾಗೂ ಗಿರಿಜನ ಉಪ ಯೋಜನೆಯಡಿ ಭೌತಿಕ-೨ ಘಟಕಗಳಿಗೆ ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಿದ್ದಗಂಗಾ ಬಡಾವಣೆ, ೫ನೇ ಮುಖ್ಯ ರಸ್ತೆ, ನಾಗನಿಲಯ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಕಚೇರಿ ಅಥವಾ ದೂ.ವಾ.ಸಂ. ೦೮೧೬–೨೨೭೫೩೭೦ಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ನವೆಂಬರ್ 14ರಂದು ಬೆಳಿಗ್ಗೆ 9 ಗಂಟೆಗೆ “ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಎನ್.ಸಿ.ಡಿ(ಅಸಾಂಕ್ರಾಮಿಕ) ಖಾಯಿಲೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಸೈಕಲ್ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಾಥಾ ಕಾರ್ಯಕ್ರಮವನ್ನು ” Diabetes and well–being ” ಎಂಬ ಘೋಷ ವಾಕ್ಯದೊಂದಿಗೆ ಏರ್ಪಡಿಸಲಾಗಿದ್ದು, ಈ ಜಾಥಾದಲ್ಲಿ ಎನ್.ಸಿ.ಸಿ. ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಜಾಥಾ ಕಾರ್ಯಕ್ರಮವು ಜಿಲ್ಲಾ ಆಸ್ಪತ್ರೆ ಆವರಣದಿಂದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದವರೆಗೆ ಸಾಗಲಿದೆ ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಜಿಲ್ಲೆಯ ಹಳ್ಳಿ–ಹಳ್ಳಿಗಳಿಗೆ ಭೇಟಿ ನೀಡಿ ಜನರಲ್ಲಿ ಕಾನೂನು ಅರಿವು ಮೂಡಿಸಲಾಗುತ್ತಿದೆಯಾದರೂ ಜನರಲ್ಲಿ ಇನ್ನೂ ಕಾನೂನು ಪ್ರಜ್ಞೆ ಬಂದಿಲ್ಲ. ಆದರೆ ಕಾನೂನು ಅರಿವಿದ್ದವರು ಕಾನೂನು ಉಲ್ಲಂಘನೆಯಲ್ಲಿ ತೊಡಗಿಕೊಳ್ಳುವುದು ಹೆಚ್ಚಾಗುತ್ತಿರುವುದು ಬೇಸರದ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಯಂತ ಕುಮಾರ್ ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾನೂನು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನು ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಯುವ ಜೊತೆ ಜೊತೆಗೆ ಅನುಭವಾತ್ಮಕ ಕಲಿಕೆಯನ್ನೂ ಹೊಂದಬೇಕು. ಕಾನೂನಿನ ವ್ಯಾಖ್ಯಾನವನ್ನು ಅರ್ಥಮಾಡಿಕೊಂಡಾಗ ಮಾತ್ರ ತಮ್ಮ ಕಕ್ಷಿದಾರರಿಗೆ ನ್ಯಾಯ ದೊರೆಕಿಸಿಕೊಡಲು ಸಾಧ್ಯ. ನ್ಯಾಯಾಲಯದಲ್ಲಿ ವಾದ ಮಂಡಿಸುವ ಮುನ್ನ ವ್ಯಾಜ್ಯ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ, ಪುರಾವೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಬೇಕು. ಪೂರ್ವಸಿದ್ಧತೆಗಳಿಲ್ಲದೆ ವಾದ ಮಂಡಿಸಲು ಸಾಧ್ಯವಿಲ್ಲವೆಂದರಲ್ಲದೆ…
ಸಾರ್ ನನ್ ಮಗ ಸರಿಯಿಲ್ಲ. ಗಾಂಜಾ ಹೊಡೀತಾನೆ, ಡ್ರಗ್ಸ್ ತಗೋತಾನೆ, ಸಿಕ್ಕ ಸಿಕ್ಕವರ ಮೇಲೆ ಹೊಡೆದಾಟಕ್ಕೆ ಹೋಗ್ತಾನೆ. ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತಾಡ್ತಾನೆ. ಕೀಟಲೆ ಮಾಡ್ತಾನೆ. ಜನರ ಕೈಲಿ ಒದೆ ತಿಂತಾನೆ. ಅದನ್ನು ನಾನು ನೋಡಕ್ಕೆ ಆಗಲ್ಲ. ಕೈ ಕಾಲು ಮುರಿದು ಹಾಕ್ತಾರೆ. ಜನಗಳು ನಮ್ ಮನೆ ಮುಂದೆ ಬಂದು ಗಲಾಟೆ ಮಾಡ್ತಾರೆ. ಮರ‍್ಯಾದೆ ಹೋಗ್ತಾ ಇದೆ. ದಯಮಾಡಿ ನನ್ ಮಗನ್ನ ಜೈಲಿಗೆ ಹಾಕಿ. ಇಲ್ಲಾಂದ್ರೆ ನನಗೆ ಅವನನ್ನು ಸಾಯಿಸಕ್ಕೆ ಪರ್ಮಿಷನ್ ಕೊಡಿ. ಎಂದು ಮಹಿಳೆಯೊಬ್ಬರು ಅಂಗಲಾಚಿದ ಘಟನೆ ನಡೆದಿದೆ. ಹೌದು. ನಂಬಿದರೆ ನಂಬಿ.ಬಿಟ್ಟರೆ ಬಿಡಿ. ಇದು ತುರುವೇಕೆರೆ ಪಟ್ಟಣದಲ್ಲಿ ಸಣ್ಣ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ರೇಣುಕಮ್ಮರ ನೋವು. ತಮ್ಮ 20 ವರ್ಷ ವಯೋಮಾನದ ಮಗ ಅಭಿ ಕೆಟ್ಟ ಸ್ನೇಹಿತರ ಸಹವಾಸಕ್ಕೆ ಬಿದ್ದು ಕಲಿಯಬಾರದ ಚಟಗಳನ್ನೆಲ್ಲಾ ಕಲಿತಿದ್ದಾನೆ. ಚಟಗಳಿಂದ ಮುಕ್ತಗೊಳಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಆದರೂ ಪ್ರಯೋಜನವಾಗಿಲ್ಲ. ಪಟ್ಟಣದಲ್ಲಿ ಗಾಂಜಾ ಸೇರಿದಂತೆ ಹಲವಾರು ಮಾದಕ ವಸ್ತುಗಳು ಮಾರಾಟವಾಗುತ್ತಿವೆ. ಇದು ಯುವಕರನ್ನು…
ಬೀದರ್: ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕಮಲನಗರ ಪೊಲೀಸರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಕಮಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮನೆ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಶಿವಾನಂದ ಪವಾಡಶೆಟ್ಟಿ ಡಿವೈಎಸ್ ಪಿ ಭಾಲ್ಕಿ, ಅಮರಪ್ಪ ಶಿವಬಲ್ ಸಿಪಿಐ ಕಮಲನಗರ ವೃತ್ತ, ಇವರ ನೇತೃತ್ವದಲ್ಲಿ ಚಂದ್ರಶೇಖರ ಪಿ.ಎಸ್.ಐ, ಬಾಲಾಜಿ ಪಿ.ಎಸ್.ಐ ಕಮಲನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರಾದ ಇಮ್ರಾನ, ಪ್ರಶಾಂತ, ರಾಜಪ್ಪಾ, ಉಮಾಕಾಂತ ಇವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತಂಡವು ವೈಜ್ಞಾನಿಕ ನೆರವು, ಸಿ.ಸಿಟಿ.ವಿ., ಪೊಲೀಸ್ ಬಾತ್ಮೀದಾರರ ಮಾಹಿತಿಯಂತೆ ಕುಶನೂರ ಗ್ರಾಮದಲ್ಲಿ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಆರೋಪಿಗಳಿಂದ 1,81,200 ರೂಪಾಯಿ ಬೆಲೆ ಬಾಳುವ 30 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಸಿಸಿ ಕ್ಯಾಮರಾ ಅಳವಡಿಸಲು ಮನವಿ: ಜಿಲ್ಲೆಯಲ್ಲಿ ಪ್ರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗ್ರಾಮಗಳ ಪ್ರಮುಖ ರಸ್ತೆಗಳ ಮೇಲೆ,…
ಪಾವಗಡ: ತಾಲೂಕಿನ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯ ಆವರಣದಲ್ಲಿ ಎಸ್ ಸಿ ಎಸ್ ಟಿ ಕುಂದು ಕೊರತೆ ಸಭೆಯನ್ನು ಭಾನುವಾರ ಪಿಎಸ್ ಐ ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಮಾಡಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡರು ವೈ.ಎನ್.ಹೊಸಕೋಟೆಯಿಂದ ದೊಡ್ಡಹಳ್ಳಿಯ ಮುಖ್ಯ ರಸ್ತೆಯ ಪಕ್ಕದಲ್ಲಿ ಕೋಳಿ ತ್ಯಾಜ್ಯಗಳನ್ನು ಎಸೆದಿದ್ದಾರೆ. ಆದ್ದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಇದನ್ನು ಶೀಘ್ರವೇ ತೆರವುಗೊಳಿಸಬೇಕು. ಜೊತೆಗೆ ಮುಂದೆ ಅಲ್ಲಿ ತ್ಯಾಜ್ಯಗಳನ್ನು ಎಸೆದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿ ಉತ್ತರಿಸಿದ ಪಿಎಸ್ ಐ ರಾಮಚಂದ್ರಪ್ಪ ಅವರು, ವೈ.ಎನ್.ಹೊಸಕೋಟೆ ಎಲ್ಲಾ ಕೋಳಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ ಮುಂದೆ ಅಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕದ ಹಾಗೆ ನೋಡುತ್ತೇವೆ. ಮುಂದೆ ಏನಾದರೂ ಕೋಳಿ ತ್ಯಾಜ್ಯ ವಸ್ತುಗಳನ್ನು ಹಾಕಿದ್ದರೆ ಅಂತವರಿಗೆ ದಂಡ ಹಾಕುತ್ತೇವೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ASI ನರಸಿಂಹಮೂರ್ತಿ, ಪೊಲೀಸ್ ಪೇದೆಗಳಾದ ಸದ್ದಾಂ, ಪುಂಡಲಿ ಕೂಗಿ ಹಾಗೂ ದಲಿತ ಮುಖಂಡರು ಹಾಜರಾಗಿದ್ದರು. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರಿನ ಕ್ಷಣ…
ತುಮಕೂರು: ಜಿಲ್ಲೆಯ ತೋವಿನಕೆರೆ ಗ್ರಾಮದಲ್ಲಿ ಶ್ರೀ ಚಂದ್ರಪ್ರಭ ಜಿನಮಂದಿರದ ಆವರಣದಲ್ಲಿ ನಡೆದ ಜೈನ ಧಾರ್ಮಿಕ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಜೈನ ಮಠದ ಶ್ರೀ ಲಕ್ಷ್ಮೀ ಸೇನ ಭಟ್ಟರಕ ಸ್ವಾಮೀಜಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸುಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಶ್ರೀ ವೀರೇಶನಂದ ಸ್ವಾಮೀಜಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಜರಿದ್ದರು. ಮಾಜಿ ಸಂಸದ ವಿ ಎಸ್ ಉಗ್ರಪ್ಪ ಮಾತನಾಡಿ, ಜೈನ ಧರ್ಮ ಮನಷ್ಯನಿಗೆ ಮನುಷ್ಯತ್ವ ಕೊಟ್ಟಿದೆ, ಜೈನ ಧರ್ಮವು ಭಾರತದ ಉಳಿವಿನಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ ಎಂದರು. ರಾಮಕೃಷ್ಣ ಆಶ್ರಮದ ಶ್ರೀ ವೀರೇಶನಂದ ಸ್ವಾಮೀಜಿ ಮಾತನಾಡಿ, ಸುಮಾರು 45 ವರ್ಷಗಳಿಂದ ಒಡನಾಟ ಹೊಂದಿದ್ದೇನೆ. ಜೈನ ಧರ್ಮ ಮನಷ್ಯನಿಗೆ ಮನುಷ್ಯತ್ವ ಕೊಟ್ಟಿದೆ, ಜೈನ ಧರ್ಮವು ಹಾಲಿನಲ್ಲಿ ಜೇನು ಸೇರಿದಂತೆ ಸೇರಿದೆ. ಜೈನ ಧರ್ಮವು ಭಾರತದ ಉಳಿವಿನಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ. ಆಚರಣೆ ದೃಷ್ಟಿ ಯಲ್ಲಿ ಜೈನ ಧರ್ಮ ವನ್ನು ಒಪ್ಪಿಕೊಳ್ಳಬೇಕಿದೆ ಎಂದರು. ಧರ್ಮವು ಸಮಾಜದಲ್ಲಿ ಐಕ್ಯತೆಯಿಂದ ಬದುಕಲು…
ಬೆಂಗಳೂರು: ಡಾ. ಶಿವರಾಜ್ ಕುಮಾರ್ ಅಭಿನಯದ ‘ಭೈರತಿ ರಣಗಲ್’ ಚಿತ್ರ ನವೆಂಬರ್ 15ರಂದು ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿರುವ ‘ಭೈರತಿ ರಣಗಲ್’ ಚಿತ್ರವನ್ನು ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡಿದ್ದಾರೆ. ನರ್ತನ್ ನಿರ್ದೇಶಿಸಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ‘ಭೈರತಿ ರಣಗಲ್’ ನಿರ್ಮಾಣವಾಗಿದ್ದು, ದೇಶಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿರುವ ‘ಭೈರತಿ ರಣಗಲ್’ ಹೇಗೆ ಸಿನಿಪ್ರಿಯರಿಗೆ ಮೋಡಿ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q