Subscribe to Updates
Get the latest creative news from FooBar about art, design and business.
- ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ
- ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್
- ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆ
- ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಚುರುಕು: 105 ಅಡಿಗೆ ತಲುಪಿದ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ
- ಬಿಜೆಪಿಯವರು ಬರ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ನೀಡಲಿ: ಸಚಿವ ಸಂತೋಷ್ ಲಾಡ್
- ನನ್ನ ಮತದಾನ ನನ್ನ ಹಕ್ಕು: ಎಸ್ಐಆರ್ ಜಾಗೃತಿ
- 10 ಸಾವಿರ ಕೋಟಿ ಅನುದಾನ ಬಿಡುಗಡೆಗೆ ಆಗ್ರಹ: ಕರ್ನಾಟಕದ 28 ಜಿಲ್ಲೆಗಳು ಮಳೆಯಿಲ್ಲದೇ ಬರಪೀಡಿತ | ತುಮಕೂರಿನಲ್ಲಿ ಬಿಜೆಪಿ ಬರ ಅಧ್ಯಯನ
- ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ “ಓ ಮೈ ಡಾಗ್” ಆಗಸ್ಟ್ 7ರಂದು ಅದ್ದೂರಿ ರಿಲೀಸ್
Author: admin
ನವದೆಹಲಿ: ದೆಹಲಿಯಲ್ಲಿ ಭಾನುವಾರ ಗಾಳಿ ಗುಣಮಟ್ಟ ಸೂಚ್ಯಂಕವು 359 ದಾಖಲಾಗುವ ಮೂಲಕ ಮತ್ತೆ ಅತ್ಯಂತ ಕಳಪೆ ವರ್ಗಕ್ಕೆ ಸೇರಿದ್ದು, ವಾಯುಮಾಲಿನ್ಯ ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಸುಧಾರಿಸಿದ್ದ ಗಾಳಿಯ ಗುಣಮಟ್ಟವು ಶನಿವಾರ 255 ಎಕ್ಯೂಐ ಇತ್ತು. ಆದರೆ ಭಾನುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಹೆಚ್ಚಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ತಿಳಿಸಿದೆ. 40 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 36 ಕೇಂದ್ರಗಳ ಮಾಹಿತಿ ಹಂಚಿಕೊಂಡಿರುವ ಇಲಾಖೆ, 8 ಕೇಂದ್ರಗಳನ್ನು ಹೊರತುಪಡಿಸಿ ಉಳಿದ 28 ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ಬಹಳ ಕಳಪೆಯಾಗಿದೆ ಎಂದು ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಬೆಂಗಳೂರು: ಕುಡಿದ ಮತ್ತಿನಲ್ಲಿ ಇಬ್ಬರು ಯುವಕರು ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬಿಎಂಟಿಸಿ ಬಸ್ ಯಲಹಂಕದಿಂದ ಶಿವಾಜಿನಗರಕ್ಕೆ ಬರುವ ಮಾರ್ಗಮಧ್ಯೆ ನಿನ್ನೆ ಮಧ್ಯಾನಹ್ನ 4 ಗಂಟೆ ಸಂದರ್ಭದಲ್ಲಿ ಟ್ಯಾನರಿ ರಸ್ತೆಯ ಕೆನರಾ ಬ್ಯಾಂಕ್ ಬಸ್ ಸ್ಟಾಪ್ ನಲ್ಲಿ ನಿಂತಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಏಕಾಏಕಿ ಬಸ್ ನೊಳಗೆ ನುಗ್ಗಿ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾರೆ. ಕಿಡಿಗೇಡಿಗಳು ಮದ್ಯದ ನಶೆಯಲ್ಲಿ ಅವಾಚ್ಯ ಶಬ್ದದಿಂದ ನಿಂದಿಸಿ ಅಮಾನುಷವಾಗಿ ವರ್ತಿಸಿದ್ದಾರೆ. ಮೊದಲು ಚಾಲಕ ಗಗನ್ ಮೇಲೆ ಹಲ್ಲೆ ಮಾಡಿ ನಂತರ ಬಿಡಿಸಲು ಬಂದ ನಿರ್ವಾಹಕನ ಶಿವಕುಮಾರ್ ಮೇಲೆ ಏರಗಿ ಬಸ್ ನಿಂದ ಕೆಳಗೆ ಎಳೆದು ತಂದು ನಂತರ ಮುಖಕ್ಕೆ ಗುದ್ದಿ, ಸೊಂಟಕ್ಕೆ ಹೊಡೆದು ಥಳಿಸಿದ್ದಾರೆ. ಪ್ರಯಾಣಿಕರು ರಕ್ಷಣೆ ಮುಂದಾದಾಗ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಚಾಲಕ ಗಗನ್ ನೀಡಿರುವ ದೂರಿನ ಮೇರೆಗೆ…
ಬೆಂಗಳೂರು: ಪ್ರತ್ಯೇಕ ಎರಡು ಘಟನೆಗಳಲ್ಲಿ ದರೋಡೆಕೋರರು ಮೊಬೈಲ್ ದೋಚಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದ್ದು, ದರೋಡೆಕೋರರ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಾರಿನಲ್ಲಿ ಹೋಗುತ್ತಿದ್ದ ಯುವಕನ ದರೋಡೆ: ಕಾರಿನಲ್ಲಿ ಹೋಗುತ್ತಿದ್ದ ಯುವಕನನ್ನು ದ್ವಿಚಕ್ರ ವಾಹದಲ್ಲಿ ಹಿಂಬಾಲಿಸಿದ ಇಬ್ಬರು ದರೋಡೆಕೋರರು ಅಡ್ಡಗಟ್ಟಿ ಬೆದರಿಸಿ ಮೊಬೈಲ್ ಪೋನ್ ದೋಚಿರುವ ಘಟನೆ ರಾತ್ರಿ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಭಂದಿಸಿದಂತೆ ಪರಶುರಾಮ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ರಾತ್ರಿ 9:30ರ ಸಂದರ್ಭದಲ್ಲಿ ಐಸಿರಿ ಗೋಸಾಲಾ ಬಳಿ ಪರಶುರಾಮ್ ಅವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಹೊಂಡಾ ಬೈಕ್ ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ದರೋಡೆಕೋರರು ಅಡ್ಡಗಟ್ಟಿದ್ದಾರೆ. ನಂತರ ಅವರ ಜೊತೆ ಜಗಳವಾಡಿ ಕಾರಿನಲ್ಲಿದ್ದ ಸುಮಾರು 8 ಸಾವಿರ ಮೊತ್ತದ ಮೊಬೈಲ್ ಎಗರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಮಹದೇವಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೊಬೈಲ್ ಕಳವು: ಹೈಗ್ರೌಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ…
ಶಿವಮೊಗ್ಗ: ಒಂದೇ ದಿನದಲ್ಲಿ ಎರಡು ಬಾರಿ ಹೆಜ್ಜೇನು ದಾಳಿ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ನಡೆದಿದೆ. ಚಿಕ್ಕಪೇಟೆನಗರದ ಭಾಷಾ ಎಂಬುವವರ ಮನೆ ಸಮೀಪ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಭಾಷಾ, ಅವರ ಪತ್ನಿ ಅಸ್ಮಾ , ಮಕ್ಕಳಾದ ಆರೀಪ್ , ಅನೀಫ್ , ಪಕ್ಕದ ಮನೆ ನಿವಾಸಿ ಯಾಸೀನ್ ಹಾಗೂ ಹಾಸಿಗೆ ರಿಪೇರಿಗಾಗಿ ತೆರಳಿದ್ದ ಹುಸೇನ್ ಸಾಬ್ , ಬಾಬಾ ಸಾಬ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಸೇನ್ ಸಾಬ್ (68) ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಹೊಸನಗರದ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಅದೇ ದಿನ ಮತ್ತೇ ರಾತ್ರಿ ಹೆಜ್ಜೇನು ಭಾಷಾ ಪುತ್ರ ಆರೀಫ್ ಮೇಲೆ ಮತ್ತೆ ದಾಳಿಸಿದೆ. ಒಂದೇ ದಿನ ಎರಡು ಬಾರಿ ಹೆಜ್ಜೇನು ದಾಳಿ ನಡೆಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ಸರಗೂರು: ಕರ್ನಾಟಕ ರಾಜ್ಯ ಗ್ರಾ.ಪಂ. ಬಿಲ್ ಕಲೆಕ್ಟರ್ ನೌಕರರ ಸಂಘ ಮೈಸೂರು ಜಿಲ್ಲಾ ಸಮಿತಿ ಸಮಾಲೋಚನಾ ಸಭೆ ಹಾಗೂ ಜಿಲ್ಲಾ ಸಮಿತಿಯ ಪುನರ್ ರಚನೆ ಸಭೆಯಲ್ಲಿ ಭಾನುವಾರದಂದು ರಾಜ್ಯಾಧ್ಯಕ್ಷ ಶ್ರೀಲಿಂಗೇಶ್ ರಾಜ್ಯಪ್ರಧಾನ ಕಾರ್ಯದರ್ಶಿ ನಾರಾಯಣ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಇದೇ ವೇಳೆ ಆಯ್ಕೆಯಾದ ಅಧ್ಯಕ್ಷರು ಮತ್ತು ಸದಸ್ಯರಿಗೆ ಸನ್ಮಾನಿಸಲಾಯಿತು. ಬಿಲ್ ಕಲೆಕ್ಟರ್ ನೌಕರರ ಜಿಲ್ಲಾ ಸಮಿತಿ ಆಯ್ಕೆ ಪಟ್ಟಿ: ಜಿಲ್ಲಾಧ್ಯಕ್ಷರಾಗಿ ಅನಿಲ್ ಕುಮಾರ್. ಹೆಚ್.ಡಿ.ಕೋಟೆ, ಉಪಾಧ್ಯಕ್ಷರಾಗಿ ಶಂಕರ್ ನಂಜನಗೂಡು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್, ಮೈಸೂರು ತಾಲೂಕು ಖಜಾಂಚಿಯಾಗಿ ಗಣೇಶ್ ಮೈಸೂರು, ತಾಲೂಕು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಮಹೇಶ್ ಕುಮಾರ್ ಟಿ ನರಸೀಪುರ, ನಂಜನಗೂಡು ತಾಲ್ಲೂಕಿನ ನಿರ್ದೇಶಕರಾಗಿ ಚಂದ್ರು ಶೇಖರ್. ತಾಲ್ಲೂಕು ಮಟ್ಟದ ನೌಕರರ ಪಟ್ಟಿ: ಮೈಸೂರು ತಾಲೂಕು ನಿರ್ದೇಶಕರಾಗಿ ತಿಲಕ್ , ಹೆಚ್.ಡಿ.ಕೋಟೆ ಜಯಪ್ರಕಾಶ್, ಸರಗೂರು ತಾಲೂಕು ಮಹೇಶ್ ಬಿ.ಮಟಕರೆ ಎಸ್ಸಿ ಕಾಲೋನಿ, ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲೂಕಿನ ನಿರ್ದೇಶಕರಾಗಿ ಇಂದ್ರೇಶ್, ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಪ.ಜಾತಿ…
ತುಮಕೂರು: ಮಧುಗಿರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ.ಕ್ವಿಜ್ ನಲ್ಲಿ ಭಾಗವಹಿಸಿದ ಸರ್ಕಾರಿ ಪ್ರೌಢಶಾಲೆ, ಅರಸೀಕೆರೆಯ ವಿದ್ಯಾರ್ಥಿನಿ ಕುಮಾರಿ ಯಶವಂತ ಪ್ರಿಯ ಎಸ್.ಎನ್. ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ.ಕ್ವಿಜ್ ನಲ್ಲಿ ವಿಜೇತಳಾಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಸಾಧನೆ ಮೆರೆದ ವಿದ್ಯಾರ್ಥಿನಿ ಕುಮಾರಿ ಯಶವಂತ ಪ್ರಿಯ ಎಸ್.ಎನ್. ಅವರನ್ನು ಶಾಲೆಯ ಮುಖ್ಯಶಿಕ್ಷಕರಾದ ರಾಮಚಂದ್ರಪ್ಪ ಕೆ., ಸಹಶಿಕ್ಷಕರಾದ ರೇಣುಕರಾಜ್ ಜಿ.ಹೆಚ್. ಹನುಮೇಶ ಎನ್., ಮೋಹನ್ ಕುಮಾರ್ ಜಿ.ಕೆ.ಕುಮಾರ್ ಎಸ್., ಅಭಿಷೇಕ್ ಎಂ.ವಿ., ಶಿಕ್ಷಿಕಿಯರಾದ ವಿಮಲಾ ಆರ್., ರಶ್ಮೀ ಸಿ.ಎಸ್., ಮಾನಸ ಎಂ. ಮತ್ತು ಶ್ರೀಲಕ್ಷ್ಮೀ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರುಗಳು ಅಭಿನಂದಿಸಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ನಟ ದರ್ಶನ್ ಅವರ ಹಳೆಯ ಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗುತ್ತಲೇ ಇದೆ. ಇದೀಗ ಮತ್ತೆ ಎರಡು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ “ಮೆಜೆಸ್ಟಿಕ್’, “ಶಾಸ್ತ್ರಿ’ ಸಿನಿಮಾ ಬಿಡುಗಡೆಯಾಗಿದ್ದವು. ಅದಕ್ಕೂ ಮೊದಲು “ಕರಿಯ’ ಸಿನಿಮಾ ತೆರೆ ಕಂಡಿತ್ತು. ಇತ್ತೀಚೆಗೆ “ನಮ್ಮ ಪ್ರೀತಿಯ ರಾಮು’, “ಪೊರ್ಕಿ’ ಸಿನಿಮಾ ಮತ್ತೆ ಬಿಡುಗಡೆಗೊಂಡು ತಕ್ಕಮಟ್ಟಿಗೆ ಪ್ರದರ್ಶನಗಳನ್ನು ಕಂಡಿವೆ. ಈ ನಡುವೆ “ನವಗ್ರಹ’ ಹಾಗೂ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾಗಳು ಮರು ಬಿಡುಗಡೆಗೆ ಸಿದ್ಧಗೊಂಡಿವೆ. ನವಗ್ರಹ ಸಿನಿಮಾ ನವೆಂಬರ್ 8ರಂದು ಮರು ಬಿಡುಗಡೆಯಾಗುತ್ತಿದೆ. ಅದೇ ದಿನ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ ಸಹ ಬಿಡುಗಡೆಯಾಗುವುದಿತ್ತು. ಆದರೆ, ಒಂದೇ ದಿನ ದರ್ಶನ್ ಅವರ ಎರಡು ಸಿನಿಮಾಗಳು ಮರು ಬಿಡುಗಡೆಯಾಗುವುದಕ್ಕೆ ಅಭಿಮಾನಿಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ಮರು ಬಿಡುಗಡೆ ನವೆಂಬರ್ 22ಕ್ಕೆ ಮುಂದೂಡಲಾಗಿದೆ. 2012ರಲ್ಲಿ ನಾಗಣ್ಣ ನಿರ್ದೇಶನದಲ್ಲಿ ಮೂಡಿಬಂದಿದ್ದ ಐತಿಹಾಸಿಕ ಚಿತ್ರದಲ್ಲಿ ದರ್ಶನ್ ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ಮಿಂಚಿದ್ದರು. ಚಿತ್ರ ಹಲವೆಡೆ ಶತದಿನಗಳನ್ನು ಕಂಡಿತ್ತು. ಜಯಪ್ರದಾ,…
ಮುಂಬೈ: ನಗರದ ಬಾಂದ್ರಾ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ವೇಳೆ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತ ಸಂಭವಿಸಿರುವ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಿರುದ್ಧ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈಯಲ್ಲಿ ಪ್ರಯಾಣಿಕರನ್ನು ನಿರ್ಲಕ್ಷಿಸಲಾಗುತ್ತಿದೆ. ಆದರೆ ಇಂತಹ ಸಂದರ್ಭದಲ್ಲಿ ಸಂದರ್ಭದಲ್ಲಿ ಕೇಂದ್ರ ಸಚಿವರು ಬುಲೆಟ್ ರೈಲು ಯೋಜನೆಯನ್ನು ಜಾರಿಗೆ ತರಲು ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೂಕ್ತ ಸೌಲಭ್ಯಗಳನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಳಪೆ ಮೂಲಸೌಕರ್ಯದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಬುಲೆಟ್ ರೈಲು ಯೋಜನೆಯಲ್ಲಿ ನಿರತರಾಗಿರುವುದು ಎಷ್ಟು ಸರಿ’ ಎಂದು ರಾವುತ್ ಟೀಕಿಸಿದ್ದಾರೆ. ಭಾನುವಾರ ಬೆಳಿಗ್ಗೆ ಮುಂಬೈನ ಬಾಂದ್ರಾ ನಿಲ್ದಾಣದಲ್ಲಿ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ತೆರಳುವ ರೈಲು ಹತ್ತುವ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದು,…
ಬೀದರ್ : ಬೇಲೆಕೇರಿ ಅದಿರು ಲೂಟಿಯಾಗಿದ್ದು ಬಿಜೆಪಿ ಅವಧಿಯಲ್ಲಿ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ 23 ಅಧಿಕಾರಿಗಳನ್ನು ಬಿಜೆಪಿ ದೋಷಮುಕ್ತ ಮಾಡಿದೆ ಎಂದು ಕಾನೂನು ಸಚಿವ H.K.ಪಾಟೀಲ್ ಆರೋಪಿಸಿದ್ದಾರೆ. ಬೀದರ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಪ್ರಕರಣದಲ್ಲಿ ಪ್ರಹ್ಲಾದ್ ಜೋಶಿ, ಆರ್.ಅಶೋಕ್ ಸೇರಿದಂತೆ ಎಲ್ಲರೂ ಕ್ಷಮೆ ಕೇಳಬೇಕು. ಸೈಲ್ ಗೆ ಲೂಟಿ ಮಾಡಲು ಅನುಕೂಲ ಮಾಡಿದ 23 ಅಧಿಕಾರಿಗಳನ್ನು ದೋಷಮುಕ್ತ ಮಾಡಿದ್ದರು, ಪ್ರಕರಣದಲ್ಲಿ ಇದ್ದವರನ್ನು ನೀವು ಕೈಬಿಟ್ಟಿದ್ದೀರಿ. ಆದರೆ, ನಾಚಿಗೆ ಪಟ್ಟುಕೊಳ್ಳದೇ ಹೇಳಿಕೆ ನೀಡಲು ಬರುತ್ತೀರಲ್ಲವೆ? ಸಮಾಜಕ್ಕೆ ಮುಖ ತೋರಿಸಲು ನಿಮಗೆ ಮುಜುಗರ ಅನಿಸೋದಿಲ್ವಾ? ಸೈಲ್ ಗೆ ಸಹಕಾರ ನೀಡಿದ ಅಧಿಕಾರಿಗಳನ್ನು ದೋಷಮುಕ್ತ ಮಾಡಿದ್ದಕ್ಕೆ ನೀವು ಕ್ಷಮೆ ಕೇಳಬೇಕು ಎಂದರು. ಬೇಲೆಕೇರಿ ಅದಿರು ಪ್ರಕರಣದಲ್ಲಿ ಸತೀಶ್ ಸೈಲ್ ಗೆ ಜೈಲು ಶಿಕ್ಷೆ ಕುರಿತು ಮಾತನಾಡಿ, ಯಾರು ಉಪ್ಪು ತಿಂದಿದ್ದಾರೋ ಅವರು ನೀರು ಕುಡಿಯಲೇಬೇಕು. ಅವರಿಗೆ ಶಿಕ್ಷೆಯಾಗಬೇಕು ಅಂತಾ ನಾವೇ ತನಿಖೆ ಮಾಡಿಸಿದ್ದು. ಹೀಗಾಗಿ ಇಂದು ಕೋರ್ಟ್ ಸೈಲ್ ಗೆ ಶಿಕ್ಷೆ ನೀಡಿದ್ದು.…
ಹಾಸನ: ಹೆಚ್.ಡಿ.ಕುಮಾರಸ್ವಾಮಿ ತಮ್ಮ ಕುಟುಂಬಸ್ಥರೊಂದಿಗೆ ಹಾಸನಾಂಬೆ ದರ್ಶನ ಪಡೆದರು. ಛತ್ರಿ, ಚಾಮರ, ವಾದ್ಯಗೋಷ್ಠಿಯೊಂದಿಗೆ ಜಿಲ್ಲಾಡಳಿತ ಅವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡಿತು. ಚನ್ನಪಟ್ಟಣ ಚುನಾವಣೆ ಮಧ್ಯೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಅವರ ಪತ್ನಿ ಅನಿತಾ, ಸೊಸೆ ರೇವತಿ ಮತ್ತು ಮೊಮ್ಮಗನ ಜೊತೆ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದರು. ಕುಟುಂಬಸ್ಥರೆಲ್ಲಾ ಹಾಸನಾಂಬೆ ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಚಿಕ್ಕಮಕ್ಕಳಿಂದ ಹಾಸನಾಂಬೆ ಪವಾಡವನ್ನ ಗಮನಿಸಿದ್ದೇವೆ. ಒಂದೂದುವರೆ ತಿಂಗಳು ನಮ್ಮ ಚಿಕ್ಕವಯಸ್ಸಿನಲ್ಲಿ ಜಾತ್ರೆ ನಡೆಯುತ್ತಿತ್ತು. ಉತ್ತಮ ರೀತಿಯಲ್ಲಿ ರೈತ ಬಂಧುಗಳು ಬದುಕು ನಡೆಸುವಂತಾಗಲಿ. ಮಳೆ, ಬೆಳೆ ಎಲ್ಲವೂ ಚನ್ನಾಗಿ ಆಗಿ ನೆಮ್ಮದಿಯ ಬದುಕು ಅವರಿಗೆ ಸಿಗಲಿ. ನಮ್ಮ ಹಳೆಯ ಸಂಪ್ರದಾಯದಂತೆ ಬಂಧು ಬಾಂಧವರು ಉತ್ತಮ ಸಂಬಂಧ ಇಟ್ಟುಕೊಳ್ಳುವಂತಾಗಲಿ. ದೇವರ ಆಶೀರ್ವಾದದಿಂದ ನಮ್ಮ ಬೇಡಿಕೆಗಳು ಈಡೇರುತ್ತವೆ’ ಎಂದು ತಿಳಿದರು. ದೇವರಲ್ಲಿ ಒಳ್ಳೆ ಕೆಲಸ ಮಾಡಲು ಶಕ್ತಿ ಕೊಡು ಎಂದು ಕೇಳಿದ್ದೇನೆ. ಈ ಬಾರಿ ನನ್ನ ಮಗ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಚುನಾವಣೆಗೆ ನಿಂತಿದ್ದಾನೆ.…