Subscribe to Updates
Get the latest creative news from FooBar about art, design and business.
- ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ
- ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್
- ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆ
- ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಚುರುಕು: 105 ಅಡಿಗೆ ತಲುಪಿದ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ
- ಬಿಜೆಪಿಯವರು ಬರ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ನೀಡಲಿ: ಸಚಿವ ಸಂತೋಷ್ ಲಾಡ್
- ನನ್ನ ಮತದಾನ ನನ್ನ ಹಕ್ಕು: ಎಸ್ಐಆರ್ ಜಾಗೃತಿ
- 10 ಸಾವಿರ ಕೋಟಿ ಅನುದಾನ ಬಿಡುಗಡೆಗೆ ಆಗ್ರಹ: ಕರ್ನಾಟಕದ 28 ಜಿಲ್ಲೆಗಳು ಮಳೆಯಿಲ್ಲದೇ ಬರಪೀಡಿತ | ತುಮಕೂರಿನಲ್ಲಿ ಬಿಜೆಪಿ ಬರ ಅಧ್ಯಯನ
- ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ “ಓ ಮೈ ಡಾಗ್” ಆಗಸ್ಟ್ 7ರಂದು ಅದ್ದೂರಿ ರಿಲೀಸ್
Author: admin
ಬೆಂಗಳೂರು: ಹಲವು ವಿವಾದಕ್ಕೀಡಾಗಿದ್ದ ಮಾಜಿ ಐಎಎಸ್ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಅವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ದಿಲೀಪ್ ಖೇಡ್ಕರ್ ಅವರು ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಶೇವಗಾಂವ್ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ಅಂಬೇಡ್ಕರ್ ಅವರ ವಿಬಿಎ ಪಕ್ಷದಿಂದ ಅಹ್ಮದ್ ನಗರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ 13 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಗಮನ ಸೆಳೆದಿದ್ದರು. ದಿಲೀಪ್ ವಿಧಾನಸಭೆ ಚುನಾವಣೆಗೆ ಸಲ್ಲಿಸಿರುವ ಅಫಿಡಿವಿಟ್ ಕೂಡ ಚರ್ಚೆಗೆ ಗ್ರಾಸವಾಗಿದೆ. ದಿಲೀಪ್ ಅವರು ತಮ್ಮ ಪತ್ನಿ ಮನೋರಮಾ ಖೇಡ್ಕರ್ ಅವರಿಗೆ ವಿಚ್ಚೇದನ ನೀಡಿದ್ದಾರೆ ಎಂದು ಅಫಿಡಿವಿಟ್‌ನಲ್ಲಿ ತಿಳಿಸಿದ್ದಾರೆ. ದಿಲೀಪ್ — ಮನೋರಮಾ ಖೇಡ್ಕರ್ ಪುತ್ರಿಯಾಗಿರುವ ಪೂಜಾ ಖೇಡ್ಕರ್ ಅವರು ಒಬಿಸಿ ಹಾಗೂ ಅಂಗವಿಕಲ ಕೋಟಾ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿ ಬಂದ ಹಿನ್ನೆಲೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ಅವರನ್ನು ಕೆಲಸದಿಂದ…
ತಿರುವನಂತಪುರಂ: ಬುಡಕಟ್ಟು ಯುವತಿ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ 75 ವರ್ಷ ವಯಸ್ಸಿನ ವೃದ್ಧನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. 23 ವರ್ಷದ ಸಂತ್ರಸ್ತ ಯುವತಿ ಒಡಿಶಾ ಮೂಲದವಳಾಗಿದ್ದಾಳೆ, ಆರೋಪಿ ವೃದ್ಧ ಕೇರಳ ಮೂಲದವನು ಎಂದು ತಿಳಿದು ಬಂದಿದೆ. ಯುವತಿ ಗಜಪತಿ ಜಿಲ್ಲೆಯವರಾಗಿದ್ದು, ಮನೆ ಕೆಲಸ ಮಾಡುತ್ತಿದ್ದಳು. ಈಕೆಯ ಮೇಲೆ ಜ್ಯೂಸ್ ಎರಚಿ ವೃದ್ಧ ಕೆ.ಶಿವಪ್ರಸಾದ್ ಎಂಬಾತ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ಆರೋಪಿ ವೃದ್ಧ ತಲೆಮರೆಸಿಕೊಂಡಿದ್ದಾನೆ. ಅಲ್ಲದೇ ಎರ್ನಾಕುಲಂ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ. ಇನ್ನು ಆರೋಪಿ ಕೆ.ಶಿವಪ್ರಸಾದ್ ಕೇರಳ ರಾಜ್ಯ ಕೃಷಿ ನಿಗಮ, ತೋಟಗಾರಿಕಾ ಉತ್ಪನ್ನಗಳ ಅಭಿವೃದ್ಧಿ ನಿಗಮ, ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮಗಳಲ್ಲಿಯೂ ಸೇವೆ ಸಲ್ಲಿರುವ ಮಾಹಿತಿಯಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ಮೈದಾಳದ ಕೆರೆಯಲ್ಲಿ ಸೆಲ್ಪಿ ತೆಗೆಯಲು ಹೋಗಿ ಕಾಲು ಜಾರಿಬಿದ್ದ ಘಟನೆಗೆ ಸಂಬಂಧಿಸಿದಂತೆ ತುಮಕೂರು ಎಸ್.ಪಿ. ಅಶೋಕ್ ಕೆ.ವಿ. ಪ್ರತಿಕ್ರಿಯೆ ನೀಡಿದ್ದಾರೆ. ಬಿಟೆಕ್ ಓದುತ್ತಿರುವ ಹಂಸ ಎಂಬ ಹುಡುಗಿ, ಸ್ನೇಹಿತರ ಜೊತೆ ಕೆರೆಯ ಬಳಿ ಹೋಗಿದ್ದಾಳೆ. ಈ ವೇಳೆ ಕಾಲು ಜಾರಿ ಬಿದ್ದು, ಕಲ್ಲಿನ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ, ಹಾಗೂ ಅಧಿಕಾರಿಗಳು ತೆರಳಿದ್ದಾರೆ. ಮರಳುತುಂಬಿದ ಗೋಣಿ ಹಾಕಿ ನೀರು ನಿಲ್ಲಿಸಿ, ಕಾರ್ಯಾಚರಣೆ ನಡೆಸಿದ್ದು, ಇಂದು ಬೆಳಗ್ಗೆ ಹುಡುಗಿ ಜೀವಂತ ಸಿಕ್ಕಿದ್ದಾರೆ ಎಂದು ತಿಳಿಸಿದ್ದಾರೆ. ಯುವತಿಯನ್ನು ರಕ್ಷಿಸಿದ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಈಗ ಆಸ್ಪತ್ರೆಯಲ್ಲಿರುವ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ ಅವರು, ಈ ಘಟನೆಯ ನಂತರ ಇಂತಹ ಘಟನೆ ಮರುಕಳಿಸದಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜನರು ಇಂತಹ ಸ್ಥಳಕ್ಕೆ ಹೋಗಬಾರದು. ನಮ್ಮ ಇಡೀ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಲೇಕ್ಸ್ ಗಳು ಇವೆ. ಇಷ್ಟು ಲೇಕ್ಸ್ ಗೆ ನಾವು ತೆರಳಿ ಸೆಕ್ಯುರಿಟಿ ಕೊಡುವುದು…
ತುಮಕೂರು: ಕೆರೆ ಕೋಡಿ ನೀರು ಹರಿಯುವ ಜಾಗದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವತಿಯೊಬ್ಬಳನ್ನು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ತುಮಕೂರು ತಾಲೂಕಿನ ಮೈದಾಳ ಕೆರೆಯಲ್ಲಿ ಈ ಘಟನೆ ನಡೆದಿದೆ. ಹಂಸ (19) ಅಪಾಯದಿಂದ ಪಾರಾದ ಯುವತಿಯಾಗಿದ್ದಾಳೆ. ಅಗ್ನಿಶಾಮಕ ದಳದ ಸಿಬ್ಬಂದಿ ಬರೋಬ್ಬರಿ 12 ಗಂಟೆಗಳ ಕಾರ್ಯಾಚರಣೆ ನಡೆಸಿ ಯುವತಿಯ ಪ್ರಾಣ ಉಳಿಸಿದ್ದಾರೆ. ಘಟನೆಯ ವಿವರ: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ ಸೋಮನಾಥ್ ಅವರ ಪುತ್ರಿ ಹಂಸ, ನಿನ್ನೆ ರಜೆ ಹಿನ್ನೆಲೆ ಸ್ನೇಹಿತರ ಜೊತೆ ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದಳು. ಈ ವೇಳೆ ಅಲ್ಲೆ ಸಮೀಪದಲ್ಲಿರುವ ಮೈದಾಳ ಕೆರೆ ತುಂಬಿ ಕೋಡಿ ಬಿದ್ದಿತ್ತು. ಅದನ್ನ ನೋಡಲು ತೆರಳಿದ್ದ ಯುವತಿ, ಕೆರೆ ಕೋಡಿ ನೀರು ಹರಿಯುವ ಸ್ಥಳದಲ್ಲಿ ನಿಂತು ಸೆಲ್ಪಿ ಪೋಟೋ ತೆಗೆದುಕೊಳ್ಳಲು ಮುಂದಾಗಿದ್ದು, ಈ ವೇಳೆ ಕಾಲು ಜಾರಿ ಬಿದ್ದಿದ್ದು, ಕೋಡಿಹರಿಯುತ್ತಿರುವ ನೀರಿನಲ್ಲಿ ಕೊಚ್ಚಿ ಹೋಗಿದ್ದಳು. ವಿಷಯ ತಿಳಿದು ಸ್ಥಳಕ್ಕೆ…
ಸರಗೂರು: ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಸದಸ್ಯತ್ವ ಅಭಿಯಾನವು ಭಾನುವಾರ ದೇವಲಾಪುರ ಹುಲ್ಲೇಮಾಳ, ತೆಲಗುಮಸಹಳ್ಳಿ, ಸಿದ್ದಾಪುರ, ತೆರಣಿಮುಂಟಿ ಗ್ರಾಮಗಳಿಗೆ ನಡೆಯಿತು. ಸಂಘದ ಅಧ್ಯಕ್ಷ ನಟರಾಜು ಸಮ್ಮುಖದಲ್ಲಿ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಸದಸ್ಯತ್ವ ಅಭಿಯಾನ ನಡೆಸಲಾಯ್ತು. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಹೆಚ್ಚಿನ ಕೆಲಸ ಮಾಡುವ ನಿಟ್ಟಿನಲ್ಲಿ ಈ ಸದಸ್ಯತ್ವ ಅಭಿಯಾನ ನಡೆಸಲಾಯ್ತು. ಇದೇ ವೇಳೆ ಪ್ರಧಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ 100 ರಿಂದ 200 ಜನರು ಸದಸ್ಯತ್ವ ಪಡೆದುಕೊಂಡು ನಮ್ಮ ಜನಾಂಗವನ್ನು ರಾಷ್ಟ್ರ ಮಟ್ಟಕ್ಕೆ ತೋರಿಸಬೇಕು. ನಮ್ಮ ಜನಾಂಗದ ಯುವ ಪೀಳಿಗೆ ಮುಂದಿನ ಭವಿಷ್ಯಗಳಿಗೆ ಮಾದರಿವಾಗುವ ನಿಟ್ಟಿನಲ್ಲಿ, ಎಲ್ಲಾ ಗ್ರಾಮದ ಮುಖಂಡರು ಮತ್ತು ಯುವಕರು ನಮ್ಮ ಜೊತೆ ಕೈಜೋಡಿಸಲು ಮುಂದೆ ಬನ್ನಿ ಎಂದು ಕರೆ ನೀಡಿದರು. ನಾವುಗಳು ತಾಲ್ಲೂಕು ಮಟ್ಟದಿಂದ 1,000 ಸಾವಿರಕ್ಕಿಂತ ಹೆಚ್ಚು ಸದಸ್ಯತ್ವ ಮಾಡಿ ಜಿಲ್ಲಾ ಮತ್ತು ರಾಜ್ಯಕ್ಕೆ ಕಳಿಸಿ, ನಂತರ ರಾಷ್ಟ್ರಿಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ ಮಾಹಿತಿಯನ್ನು…
ತುಮಕೂರು: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇಂದು ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಸಿದರು. ತಿಪಟೂರಿನ ಕಲ್ಪತರು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ರೈತರು ಹಾಗೂ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಚಿವ ವಿ.ಸೋಮಣ್ಣ ಮುಂದೆ ಪ್ರಸ್ತಾಪಿಸಿದರು. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ದೂರನ್ನು ಸಚಿವರ ಬಳಿ ಹೇಳಿಕೊಂಡರು. ಸ್ಥಳದಲ್ಲಿ ಇದ್ದ ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಸಚಿವ ಸೋಮಣ್ಣ ತರಾಟೆಗೆ ತೆಗೆದುಕೊಂಡರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಮೇಘಲಪಾಳ್ಯ ಗ್ರಾಮದಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಮೇಘಲಪಾಳ್ಯ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಯುವಕರು ಡಿಜೆ ಸದ್ದಿಗೆ ಕುಡಿದು ಕುಪ್ಪಳಿಸಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಸಮಾಜದಲ್ಲಿನ ಬಲ್ಲಿದರ ಸಹವಾಸದಿಂದ ಬರವಣಿಗೆ –ಬೆಳವಣಿಗೆ ಸುಲಭವಾಗಿದ್ದು, ಹಂಪನ ಅಧ್ಯಯನದಲ್ಲಿ ಅವರ ಗಂಭೀರತೆ ಹೊಂದಿದ್ದರು. ಕಮಲ –ಹಂಪನಾ ದಂಪತಿಗಳು ಪುಸ್ತಕ ಪ್ರಿಯರಾಗಿದ್ದರು. ಸಂಶೋಧನೆಗೆ ತಳಹದಿ ಅಗತ್ಯ ಹಾಗೂ ಯಾವುದೇ ವಿಷಯಕ್ಕೆ ವಿಮರ್ಶೆ ಅಗತ್ಯ ಎಂದು ಹಿರಿಯ ಸಾಹಿತಿ ಸಂಶೋಧಕ ಡಾ.ಎಸ್.ಪಿ.ಪದ್ಮಪ್ರಸಾದ್ ಜೈನ್ ತಿಳಿಸಿದರು . ಅವರಿಂದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಡಾ.ಹಂಪನ ಬದುಕು– ಬರಹ ಕುರಿತು ಗೋಷ್ಠಿ -2 ರ ಬಾಳಿನ ಬಗ್ಗೆ ಉಪನ್ಯಾಸ ನೀಡಿದರು . ಇವರ ನೀತಿಯಿಂದ ಸ್ಥಳೀಯರಿಂದ ವಿದೇಶಿ ಸಂಶೋಧಕರವರೆಗೂ ತುಲನೆಯಿಂದ ಹಲವಾರು ಸಂಶೋಧಕರು ಕಣ್ಣು ತೆರೆದಿದ್ದಾರೆ, ಹಂಪನಾ ಸಾಹಿತ್ಯ ಪರಿಷತ್ ಸಾರಥ್ಯ ವಹಿಸಿ ಹಲವಾರು ಪುಸ್ತಕ ಬರೆದಿದ್ದಾರೆ, ಇವರು ಪುಸ್ತಕಗಳು ಪಠ್ಯಪುಸ್ತಕಗಳಾಗಿವೆ, ಓಲೆ ಗರಿ ಅಂತ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿದ್ದಾರೆ .ಕನ್ನಡ ಸೇವಕನಾಗಿ ದುಡಿದಿದ್ದಾರೆ, ಜೀವನದ ಯಾವುದೇ ಕಾರ್ಯಕ್ಕೆ ಕಾಲವೇ ವಿಮರ್ಶಕ ಎಂದು ನಂಬಿದ್ದರು ಎಂದರು. ಡಾ.ಹಂಪನಾ ಅವರ ಕನ್ನಡ ಮತ್ತು ಇಂಗ್ಲಿಷ್ ಕೃತಿಗಳ ಕುರಿತು ವಿಚಾರ ಮಂಡಿಸಿದ ಸಾಹಿತಿ ಡಾ.ಸಂಕಂ…
ತುಮಕೂರು: ಸಮಾಜದಲ್ಲಿ ಸಮಾನತೆ ಸಭ್ಯತೆ ಶಿಸ್ತು ಬದ್ಧ ಜೀವನವೇ ಕಮಲ ಹಂಪನ ಬದುಕಾಗಿತ್ತು ಎಂದು ಅವರು ಸಾಹಿತಿ ಎಚ್.ಎನ್ . ರಾಜ್ಯಶ್ರೀ ತಿಳಿಸಿದರು. ತುಮಕೂರಿನ ಕನ್ನಡ ಸಾಹಿತ್ಯ ಭವನದ ವತಿಯಿಂದ ನಾಡೋಜ ಕಮಲ ಹಂಪನ ಬದುಕು ಬರಹ ಗೋಷ್ಠಿ, –2 ರಲ್ಲಿ ಕಮಲ ಬಾಳಿನ ಬಗ್ಗೆ ಮಾತನಾಡಿದರು. ಕಮಲ ಹಾಗೂ ಹಂಪ ನಾಗರಾಜಯ್ಯ ಸರ್ಕಾರದಿಂದ ಸ್ವಂತಕ್ಕೆ ಯಾವುದೇ ಸಹಾಯ ಪಡೆದಿಲ್ಲ ಅವರು ಎಲ್ಲೂ ಹೊರಗಡೆ ಆಹಾರ ಸೇವಿಸಿದವರಲ್ಲ, ಶಿಸ್ತು ಬದ್ಧ ಜೀವ ಜೀವನದ ಮುಖಿನ ಸಭ್ಯ ಜೀವಮಾನ ನಡೆಸಿದರು ಅವರ ಭಾವನೆಗಳು ವಿಶಿಷ್ಟವಾದವು ಎಂದರು. ಇಳಿಯ ವಯಸ್ಸಿನಲ್ಲಿ ಅವರು ಜೀವನದ ಪಾಠ ಕಲಿಸಿದರು, ಎಲ್ಲಾ ಚಟುವಟಿಕೆಗಳಲ್ಲಿ ತಂದೆಗೆ ನೆರವಾಗಿದ್ದರು, ಅವರು ಬದುಕು ನಮಗೆ ಪಾಠವಾಗಿತ್ತು ಎಂದ ಅವರು ವ್ಯಕ್ತಿಯಲ್ಲ ಶಕ್ತಿಯಾಗಿದ್ದರು ಎಂದರು. ಸಮಾಜದಲ್ಲಿ ಹೇಗೆ ಬದುಕಬೇಕೆನ್ನುವುದನ್ನು ಸಮಾಜಕ್ಕೆ ವಿಶ್ವ ಮಾನವರಾಗಿ ತೋರಿಸಿ ಕೊಟ್ಟರು ವಿಶ್ವಮಾನವರಾಗುವಂತೆ ಸಲಹೆ ನೀಡಿದರು. ಲೇಖಕಿ ಡಾ.ಎನ್ .ಆರ್.ಲಲಿತಾಂಬ ಕಮಲ ಹಂಪನ ರವರು ಸಂಶೋಧನೆ ಮತ್ತು ವೈಚಾರಿಕ ಕೃತಿಗಳ…
ಅಕ್ಟೋಬರ್ 28 ರ ದಿನ ಭವಿಷ್ಯ ಈ ರಾಶಿಗಿಂದು ಶಿವನ ಕೃಪೆಯಿಂದ ಮುಟ್ಟಿದ್ದೆಲ್ಲ ಬಂಗಾರವಾಗುವ ದಿನ. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490 ನವೆಂಬರ್ ತಿಂಗಳು ✨ ತುಲಾ ರಾಶಿ ✨ಯವರಿಗೆ ಉತ್ತಮವಾಗಿರುತ್ತದೆ. ಈ ತಿಂಗಳು ಉದ್ಯೋಗ ಸಂದರ್ಶನಗಳಲ್ಲಿ ಯಶಸ್ಸನ್ನು ಪಡೆಯಬಹುದು.…