ಸರಗೂರು: ಕರ್ನಾಟಕ ರಾಜ್ಯ ಗ್ರಾ.ಪಂ. ಬಿಲ್ ಕಲೆಕ್ಟರ್ ನೌಕರರ ಸಂಘ ಮೈಸೂರು ಜಿಲ್ಲಾ ಸಮಿತಿ ಸಮಾಲೋಚನಾ ಸಭೆ ಹಾಗೂ ಜಿಲ್ಲಾ ಸಮಿತಿಯ ಪುನರ್ ರಚನೆ ಸಭೆಯಲ್ಲಿ ಭಾನುವಾರದಂದು ರಾಜ್ಯಾಧ್ಯಕ್ಷ ಶ್ರೀಲಿಂಗೇಶ್ ರಾಜ್ಯಪ್ರಧಾನ ಕಾರ್ಯದರ್ಶಿ ನಾರಾಯಣ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಇದೇ ವೇಳೆ ಆಯ್ಕೆಯಾದ ಅಧ್ಯಕ್ಷರು ಮತ್ತು ಸದಸ್ಯರಿಗೆ ಸನ್ಮಾನಿಸಲಾಯಿತು.
ಬಿಲ್ ಕಲೆಕ್ಟರ್ ನೌಕರರ ಜಿಲ್ಲಾ ಸಮಿತಿ ಆಯ್ಕೆ ಪಟ್ಟಿ:
ಜಿಲ್ಲಾಧ್ಯಕ್ಷರಾಗಿ ಅನಿಲ್ ಕುಮಾರ್. ಹೆಚ್.ಡಿ.ಕೋಟೆ, ಉಪಾಧ್ಯಕ್ಷರಾಗಿ ಶಂಕರ್ ನಂಜನಗೂಡು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್, ಮೈಸೂರು ತಾಲೂಕು ಖಜಾಂಚಿಯಾಗಿ ಗಣೇಶ್ ಮೈಸೂರು, ತಾಲೂಕು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಮಹೇಶ್ ಕುಮಾರ್ ಟಿ ನರಸೀಪುರ, ನಂಜನಗೂಡು ತಾಲ್ಲೂಕಿನ ನಿರ್ದೇಶಕರಾಗಿ ಚಂದ್ರು ಶೇಖರ್.
ತಾಲ್ಲೂಕು ಮಟ್ಟದ ನೌಕರರ ಪಟ್ಟಿ:
ಮೈಸೂರು ತಾಲೂಕು ನಿರ್ದೇಶಕರಾಗಿ ತಿಲಕ್ , ಹೆಚ್.ಡಿ.ಕೋಟೆ ಜಯಪ್ರಕಾಶ್, ಸರಗೂರು ತಾಲೂಕು ಮಹೇಶ್ ಬಿ.ಮಟಕರೆ ಎಸ್ಸಿ ಕಾಲೋನಿ, ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲೂಕಿನ ನಿರ್ದೇಶಕರಾಗಿ ಇಂದ್ರೇಶ್, ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಪ.ಜಾತಿ ಮತ್ತು ಪಂಗಡಗಳ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ್, ನಾರಾಯಣ್ ಹಾಗೂ ರಾಜ್ಯ ನಿರ್ದೇಶಕ ಬಸವರಾಜೇಗೌಡ ಹಾಗೂ ಮಹದೇವ ನಾಯಕ ಮತ್ತು ಮಾಜಿ. ಜಿಲ್ಲಾಧ್ಯಕ್ಷ ನಾಗೇಂದ್ರ ಹಾಗೂ ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ನೌಕರರ ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q