Author: admin

ತುಮಕೂರು : ಮೂಡ ಸೈಟ್ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಸೈಟ್ ಬೇಕು ಅಂತ ಅರ್ಜಿ ಹಾಕಿದ್ರಾ, ಯಾರಿಗಾದ್ರೂ ಪೋನ್ ಮಾಡವ್ರಾ. 15 ವರ್ಷದ ಹಿಂದಿನ ನಡಾವಳಿಕೆಗಳನ್ನ ಇಂದಿನ ರಾಜಕೀಯಕ್ಕಾಗಿ ದುರುಪಯೋಗ ಮಾಡಿಕೊಂಡು ಅವರಿಗೆ ಕೆಟ್ಟ ಹೆಸರು ಬರುವಂತೆ ಕೆಲಸ ಮಾಡ್ತಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ತುಮಕೂರಿನ ಎಂಪ್ರೆಸ್  ಕಾಲೇಜಿನಲ್ಲಿ ನಡೆದ ವಾಲ್ಮೀಕಿ ಜಯಂತೋತ್ಸವದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅನ್ನ ಭಾಗ್ಯ ಯೋಜನೆ ತಂದವರು. ಹಸಿವಿನಿಂದ ಯಾರು ಮಲಗಬಾರದು ಅಂತ ಮಾಡಿದ್ರು. ಸಿದ್ದರಾಮಯ್ಯ ಏನು ಕುರುಬರಿಗೆ ಮಾತ್ರ ಮಾಡಿದ್ರಾ, ಬದಲಾಗಿ   ಎಲ್ಲಾ ಜಾತಿಯ ಬಡವರು ನೆಮ್ಮದಿಯ ಜೀವನ ಮಾಡ್ಲಿ ಅಂತ ಅದನ್ನ ಮಾಡಿದ್ರು ಎಂದರು. ಇತ್ತೀಚೆಗೆ ಕೊರಟಗೆರೆಯಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಅವನ್ಯಾರೋ ಅಧಿಕಾರಿ ಮೂರ್ಖ ರಾತ್ರೊರಾತ್ರಿ ಅದನ್ನ ತೆಗೆದುಬಿಟ್ಟಿದ್ದಾನೆ. ಜನರಿಗೆ ಮನವೊಲಿಸಿ ಇನ್ನೊಂದು ಕಡೆ ಇಡಬಹುದಾಗಿತ್ತು ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…

Read More

ಪ್ರತಿ ವರ್ಷದ ಅಕ್ಟೋಬರ್ 21ರಂದು ನಡೆಯುವ “ಪೊಲೀಸ್ ಹುತಾತ್ಮರ ದಿನಾಚರಣೆ” (Police Martyrs’ Day) ಜನತೆ ಹಾಗೂ ಸರ್ಕಾರಕ್ಕೆ ಕೇವಲ ಆಚರಣೆಯ ದಿನವಲ್ಲ, ಇದು ದೇಶದ ಸಾಂವಿಧಾನಿಕ ಶಾಂತಿ, ಸುವ್ಯವಸ್ಥೆ, ಮತ್ತು ನಮ್ಮ ರಕ್ಷಣೆಯ ಹಿತಾಸಕ್ತಿಗೆ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ಧೈರ್ಯಶಾಲಿ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸುವ ಪವಿತ್ರ ದಿನ. ಈ ವಿಶೇಷ ದಿನವು ದೇಶದ ಭದ್ರತೆಯಲ್ಲಿ ತೊಡಗಿಕೊಂಡಿರುವ ಆ ನಾಯಕರ ಶೌರ್ಯವನ್ನು ಸಾರುವಂತಹದ್ದು. ಕಾರ್ಯಕ್ರಮದ ಮೂಲ: “ಪೊಲೀಸ್ ಹುತಾತ್ಮರ ದಿನಾಚರಣೆ”ಯು 1959ರಲ್ಲಿ ಲಡಾಕ್ ಪ್ರದೇಶದ ಹೋಟ್ಸ್‍ಪ್ರಿಂಗ್ಸ್‌ನಲ್ಲಿ ನಡೆದ ಯುದ್ಧದ ಸ್ಮಾರಕವಾಗಿದೆ. ಅಕ್ಟೋಬರ್ 21, 1959 ರಂದು, ಚೀನಾ ಸೈನಿಕರ ದಾಳಿಯ ಸಂದರ್ಭದಲ್ಲಿ 10 ಭಾರತೀಯ ಪೊಲೀಸ್ ಸಿಬ್ಬಂದಿಗಳು ತೀವ್ರ ಹೋರಾಟ ನಡೆಸಿ, ದೇಶದ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಕಾಪಾಡಲು ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿದರು. ಈ ಘಟನೆ ನಂತರ, 1960ರಲ್ಲಿ ಈ ದಿನವನ್ನು ರಾಷ್ಟ್ರೀಯ ಮಟ್ಟದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯಾಗಿ ಮಾನ್ಯತೆ ನೀಡಲಾಯಿತು. ಆಚರಣೆ ಮತ್ತು ಗೌರವ: ಹುತಾತ್ಮರಿಗೆ ಶ್ರದ್ಧಾಂಜಲಿ…

Read More

ಪುಣೆ: ಪುಣೆಯ ಮಂಡೈ ಮೆಟ್ರೋ  ನಿಲ್ದಾಣದಲ್ಲಿ ಭಾರೀ ಬೆಂಕಿ ಅವಘಡವೊಂದು ಸಂಭವಿಸಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಮಹಾತ್ಮ ಫುಲೆ ಮಂಡೈ ಪ್ರದೇಶದ ಮೆಟ್ರೋ ನಿಲ್ದಾಣದ ನೆಲ ಮಹಡಿಯಲ್ಲಿ ಭಾನುವಾರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತರುವ ಪ್ರಯತ್ನ ಆರಂಭಿಸಿದ್ದಾರೆ. ಸ್ಥಳೀಯ ಸಂಸದ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಮತ್ತು ಸಹಕಾರ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಬೆಂಕಿಯನ್ನು ನಂದಿಸಲಾಗಿದೆ ಮತ್ತು ಘಟನೆಯು ಮೆಟ್ರೋ ಸೇವೆಯ ಮೇಲೆ ಪರಿಣಾಮ ಬೀರಲಿಲ್ಲ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಆಂಧ್ರಪ್ರದೇಶ: 16 ವರ್ಷದ ಬಾಲಕಿಯ ಮನೆಗೆ ನುಗ್ಗಿದ ಮಾಜಿ ಗೆಳೆಯ ಆಕೆಯನ್ನು ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಕಡಪ ಜಿಲ್ಲೆಯ ಬದ್ವೇಲ್ ಹೊರವಲಯದಲ್ಲಿ ನಡೆದಿದೆ. ಕಡಪ ಜಿಲ್ಲೆಯ ಬದ್ವೇಲ್ ಹೊರವಲಯದಲ್ಲಿ ಜೆ ವಿಘ್ನೇಶ್ ಅಪ್ರಾಪ್ತ ಬಾಲಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ  ಹತ್ಯೆ ನಡೆಸಿರುವ ಆರೋಪಿಯಾಗಿದ್ದಾನೆ. ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಾಲಕಿಯನ್ನು ಕಡಪ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಬಾಲಕಿ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದಾಳೆ. ಪೊಲೀಸರ ಪ್ರಕಾರ, ವಿಘ್ನೇಶ್ ಮತ್ತು ಅಪ್ರಾಪ್ತ ಬಾಲಕಿ ಪರಸ್ಪರ ಸಂಬಂಧದಲ್ಲಿದ್ದರು, ಅಲ್ಲದೇ ಹಲವು ಬಾರಿ ಬಾಲಕಿ ಮೇಲೆ ಈತ ಅತ್ಯಾಚಾರ ಎಸಗಿದ್ದನು ಎನ್ನಲಾಗಿದೆ. ಆದರೆ ಆರೋಪಿ ಕೆಲವು ತಿಂಗಳ ಹಿಂದೆ ಅವಳೊಂದಿಗೆ ಬೇರ್ಪಟ್ಟು ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದನು. ಇದರಿಂದ ನೊಂದ ಬಾಲಕಿ ತನ್ನನ್ನು ಮದುವೆಯಾಗು ಎಂದು ಪದೇ ಪದೇ ಕೇಳಿಕೊಂಡಿದ್ದರಿಂದ ರೊಚ್ಚಿಗೆದ್ದು ಬಾಲಕಿಯನ್ನು ಬರ್ಬರವಾಗಿ ಹತ್ಯೆ ನಡೆಸಿದ್ದಾನೆ. ಸದ್ಯ ಆರೋಪಿಯ ವಿರುದ್ಧ…

Read More

ಅಕ್ಟೋಬರ್ 20ರ ಭಾನುವಾರದಂದು ಕರ್ಕ ರಾಶಿಯಲ್ಲಿ ಮಂಗಳನ ಸಂಕ್ರಮಣ ನಡೆಯಲಿದೆ. ಸುಮಾರು 16 ತಿಂಗಳ ನಂತರ, ಕರ್ವಾ ಚೌತ್ ದಿನದಂದು ಮಂಗಳವು ಕರ್ಕಾಟಕಕ್ಕೆ ಮರಳುತ್ತಿದೆ. ಜ್ಯೋತಿಷ್ಯದಲ್ಲಿ, ಕಟಕ ರಾಶಿಯನ್ನು ಮಂಗಳದ ಅತ್ಯಂತ ಕಡಿಮೆ ರಾಶಿ ಎಂದು ಕರೆಯಲಾಗುತ್ತದೆ. ಮಂಗಳನು ​​ಇಲ್ಲಿಗೆ ಆಗಮಿಸಿದಾಗ ಶನಿಯೊಂದಿಗೆ ಮಂಗಳನ ಷಡಾಷ್ಟಕ ಯೋಗವು ರೂಪುಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಂಗಳ ಗ್ರಹದ ಈ ಸಾಗಣೆಯನ್ನು ಅಶುಭವೆಂದು ಪರಿಗಣಿಸಲಾಗಿದೆ, ಇದು ವಿಶ್ವದ ಅನೇಕ ದೇಶಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಇದು ಅನೇಕ ರಾಶಿಗಳಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕರ್ಕಾಟಕ ರಾಶಿ ಸೇರಿದಂತೆ ಯಾವ ರಾಶಿಯವರಿಗೆ ಕ್ಷುದ್ರ ರಾಶಿಯಾದ ಕರ್ಕಾಟಕ ರಾಶಿಯಲ್ಲಿ ಮಂಗಳ ಗ್ರಹದ ಸಂಚಾರದಿಂದ ಪ್ರತಿಕೂಲ ಪರಿಣಾಮ ಪಡೆಯುವ  ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು   ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490  ನಿಮ್ಮ ಮನಸ್ಸಿನಲ್ಲಿ ಆಡಚಣೆ…

Read More

ತುಮಕೂರು:  ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಇಂದು ಗುಬ್ಬಿ ಪಟ್ಟಣದ ಪೋಲೀಸ್ ಠಾಣೆ ಹಿಂಭಾಗದ ಹಂದಿಜೋಗರ ವಸತಿ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಮಳೆ ನೀರಿನಲ್ಲಿ ಜೀವನ ನಡೆಸುತ್ತಿರುವ ಹಂದಿಜೋಗಿಗಳನ್ನು ಸರ್ಕಾರದಿಂದ ಗುರುತಿಸಲಾಗಿರುವ ಸಾತೇನಹಳ್ಳಿ ಪ್ರದೇಶಕ್ಕೆ ಸ್ಥಳಾಂತರವಾಗುವಂತೆ ಮನವೊಲಿಸಿದರು. ಮಳೆ ನೀರಿನಿಂದ ಆವೃತಗೊಂಡಿರುವ ಹಂದಿಜೋಗರ ಗುಡಿಸಲುಗಳಿಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಸುರಕ್ಷಿತ ಸ್ಥಳಕ್ಕೆ ತಕ್ಷಣ ಸ್ಥಳಾಂತರವಾಗಬೇಕು ಎಂದು ನಿವಾಸಿಗಳಿಗೆ ಮನವಿ ಮಾಡಿದರು. ಸತತ ಮಳೆಯಿಂದ ಹಂದಿಜೋಗಿಗಳು ಸಂಕಷ್ಟದಲ್ಲಿದ್ದು, ಪಟ್ಟಣದ ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ತಹಶೀಲ್ದಾರ್ ಬಿ. ಆರತಿ ಅವರು ಸಾತೇನಹಳ್ಳಿ ಪ್ರದೇಶದಲ್ಲಿ 35 ಹಂದಿಜೋಗಿ ಕುಟುಂಬಗಳಿಗೆ ಈಗಾಗಲೇ ಹಕ್ಕುಪತ್ರ ವಿತರಣೆಯಾಗಿದ್ದು, ಉಳಿದ ಕುಟುಂಬಗಳಿಗೆ ದಾಖಲೆಗಳ ಸಲ್ಲಿಕೆಯನ್ನು ಮುಗಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಲೋಕಾಯುಕ್ತರಿಗೆ ಮಾಹಿತಿ ನೀಡಿದರು. ನಂತರ ಸಾತೇನಹಳ್ಳಿಯ ಸ್ಥಳ ಪರಿಶೀಲನೆ ನಡೆಸಿದ ಉಪ ಲೋಕಾಯುಕ್ತರು, ಸ್ಥಳೀಯ ಆಡಳಿತವನ್ನು ಕುಡಿಯುವ ನೀರು,…

Read More

ಪೌಷ್ಟಿಕಾಂಶದ ಶಕ್ತಿ ಕೇಂದ್ರ ಅಂತಲೇ ಕರೆಯಲ್ಪಡುವ ಚಿಯಾ ಸೀಡ್ಸ್​​ ನ್ನು ದಿನನಿತ್ಯದ ಆಹಾರದಲ್ಲಿ ಬಳಸುವುದರಿಂದ ಆರೋಗ್ಯ ಸುಧಾರಿಸುವುದಲ್ಲದೇ  ರೋಗಗಳಿಂದ ನಿಮ್ಮ ದೇಹವನ್ನು ರಕ್ಷಿಸುತ್ತದೆ. ಮುಂಜಾನೆ ಚಿಯಾ ಸೀಡ್ಸ್ ಸೇವನೆ ಮಾಡುವುದರಿಂದ ನಿಮಗೆ ಅಗತ್ಯವಾದ ಶಕ್ತಿ, ಪೋಷಣೆ ಮತ್ತು ಚೈತನ್ಯ ಸಿಗುತ್ತದೆ. ಇದು ದಿನವಿಡೀ ದೇಹದ ಅಗತ್ಯಗಳನ್ನು ಪೂರೈಸುತ್ತದೆ. ಚಿಯಾ ಸೀಡ್ಸ್​​ಗಳು ಫೈಬರ್, ಒಮೆಗಾ –3 ಕೊಬ್ಬಿನಾಮ್ಲಗಳು, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಇತ್ಯಾದಿಗಳನ್ನು ಹೊಂದಿರುತ್ತವೆ. ಈ ಎಲ್ಲಾ ಪೋಷಕಾಂಶಗಳನ್ನು ಬೆಳಗ್ಗೆ ಪಡೆಯುವುದರಿಂದ ದೇಹದಲ್ಲಿ ಅವುಗಳ ಕೊರತೆ ಇರುವುದಿಲ್ಲ. ಚಿಯಾ ಬೀಜಗಳು ಹೆಚ್ಚಿನ ಫೈಬರ್​​ ಅನ್ನು ಹೊಂದಿರುತ್ತವೆ. ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಇದು ಮಲಬದ್ಧತೆ ಸಮಸ್ಯೆಗೂ ಪರಿಹಾರ ನೀಡುತ್ತದೆ. ಚಿಯಾ ಸೀಡ್ಸ್​​ ಗಳು ನಿಧಾನವಾಗಿ ಜೀರ್ಣವಾಗುತ್ತವೆ. ಇದರಿಂದಾಗಿ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಅನಗತ್ಯವಾಗಿ ಹಸಿವಿನ ಭಾವನೆಯನ್ನು ಹೊಂದುವುದಿಲ್ಲ. ಇದನ್ನು ನಿಮ್ಮ ಡಯಟ್​​ ಲಿಸ್ಟ್​ನಲ್ಲಿ ಸೇರಿಸಿಕೊಳ್ಳಬಹುದು. ಚಿಯಾ ಬೀಜಗಳಲ್ಲಿ ಒಮೆಗಾ–3 ಕೊಬ್ಬಿನಾಮ್ಲಗಳು ಇರುತ್ತವೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು…

Read More

ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಶ್ರೀ ಹಾಸನಾಂಬ ದೇವಿಯ ದರ್ಶನೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತವು ಕೈಗೊಂಡಿದೆ. ಈ ವರ್ಷ ಹಾಸನಾಂಬ ದೇವಿಯ ಬಾಗಿಲು 24–10–2024, ಗುರುವಾರ ಮಧ್ಯಾಹ್ನ 12.00 ಗಂಟೆಗೆ ತೆರೆಯಲಾಗುವುದು. ಭಕ್ತರು ವಿವಿಧ ದಿನಗಳಲ್ಲಿ ನಿಗದಿತ ಸಮಯದಂತೆ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ: 25–10–2024, ಶುಕ್ರವಾರ: ಬೆಳಗ್ಗೆ 4.00 ರಿಂದ ಸಂಜೆ 7.00 ತನಕ ದರ್ಶನ. ನೈವೇದ್ಯ ಸಮಯದಲ್ಲಿ (ಸಂಜೆ 7.00 ಗಂಟೆಗೆ) ದರ್ಶನ ಇರುವುದಿಲ್ಲ. 26—10–2024 ರಿಂದ 01–11–2024: ಪ್ರತಿದಿನ ಬೆಳಗ್ಗೆ 4.00 ರಿಂದ ಮಧ್ಯಾಹ್ನ 2.00 ಹಾಗೂ ಮಧ್ಯಾಹ್ನ 3.00 ರಿಂದ ಬೆಳಗಿನ ಜಾವ 3.00 ತನಕ ದರ್ಶನ. 02—11–2024 ಶನಿವಾರ: ಬೆಳಗ್ಗೆ 4.00 ರಿಂದ ಸಂಜೆ 5.00 ಮತ್ತು ರಾತ್ರಿ 11.00 ರಿಂದ ಬೆಳಗಿನ ಜಾವ 6.00. (ಸಂಜೆ 5.00 ರಿಂದ ರಾತ್ರಿ 11.00 ವರೆಗೆ ದರ್ಶನ ಇರುವುದಿಲ್ಲ) 03–11–2024 ಭಾನುವಾರ: ಈ ದಿನ ಭಕ್ತರಿಗೆ ದರ್ಶನ ಇರುವುದಿಲ್ಲ. ಮಧ್ಯಾಹ್ನ 12.00 ಗಂಟೆಗೆ…

Read More

ತುಮಕೂರು:  ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಕ್ಟೋಬರ್ 21 ರಿಂದ ನಿಗಧಿಪಡಿಸಿದ ದಿನಾಂಕದಂದು ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಪಿಂಚಣಿ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಈ ಅದಾಲತ್‌ ನಲ್ಲಿ ಪಿಂಚಣಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಕುಂದು–ಕೊರತೆಗಳನ್ನು ಆಲಿಸಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಅಕ್ಟೋಬರ್ 21ರಂದು ಜಿಲ್ಲೆಯ ತುಮಕೂರು ತಾಲ್ಲೂಕು ಬೆಳ್ಳಾವಿ, ತಿಪಟೂರು ತಾಲ್ಲೂಕು ಈಚನೂರು ಹಾಗೂ ಕೊರಟಗೆರೆ ತಾಲ್ಲೂಕು ತೋವಿನಕೆರೆ ಗ್ರಾಮ ಪಂಚಾಯತಿಯಲ್ಲಿ ಪಿಂಚಣಿ ಅದಾಲತ್ ನಡೆಯಲಿದ್ದು, ಪಿಂಚಣಿದಾರರು ಅದಾಲತ್‌ ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಸಲ್ಲಿಸಿ ಪರಿಹರಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ತುಮಕೂರು:   ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಭಾರತ್ ಫೈನ್ಯಾನ್ಸ್, ಮ್ಯಾಜಿಕ್ ಬಸ್ ಹಾಗೂ ಬಗಾಡಿಯಾ ಚೈತ್ರ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಸಲುವಾಗಿ ಅಕ್ಟೋಬರ್ 23ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ಸ್ವವಿವರಗಳೊಂದಿಗೆ ಹಾಜರಾಗಬಹುದಾಗಿದೆ. ಎಸ್.ಎಸ್.ಎಲ್.ಸಿ, ಐ.ಟಿ.ಐ (ಯಾವುದೇ ಟ್ರೇಡ್), ಯಾವುದೇ ಪದವಿ, ಬಿ.ಎಸ್ಸಿ ನರ್ಸಿಂಗ್ & ಜಿ.ಎನ್.ಎಂ ನರ್ಸಿಂಗ್ ಹಾಗೂ ಬಿ.ಇ.( Mechanical) ಪಾಸಾದ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0816–2278488, ಮೊ.ಸಂ. 9071021143, 9513136642ನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಕಿಶೋರ್ ಕುಮಾರ್ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More