Subscribe to Updates
Get the latest creative news from FooBar about art, design and business.
- 10 ಸಾವಿರ ಕೋಟಿ ಅನುದಾನ ಬಿಡುಗಡೆಗೆ ಆಗ್ರಹ: ಕರ್ನಾಟಕದ 28 ಜಿಲ್ಲೆಗಳು ಮಳೆಯಿಲ್ಲದೇ ಬರಪೀಡಿತ | ತುಮಕೂರಿನಲ್ಲಿ ಬಿಜೆಪಿ ಬರ ಅಧ್ಯಯನ
- ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ “ಓ ಮೈ ಡಾಗ್” ಆಗಸ್ಟ್ 7ರಂದು ಅದ್ದೂರಿ ರಿಲೀಸ್
- ಗೃಹಜ್ಯೋತಿ ಫಲಾನುಭವಿಗಳಿಗೆ ಎಚ್ಚರಿಕೆ: ಸಮೀಕ್ಷೆಯಲ್ಲಿ ಮಾಹಿತಿ ನೀಡದಿದ್ದರೆ ಉಚಿತ ವಿದ್ಯುತ್ ಭಾಗ್ಯ ಬಂದ್?
- ‘ಗಾಡ್ ಫಾದರ್ ಇಲ್ಲದ್ದಕ್ಕೆ ಸಚಿವ ಸ್ಥಾನ ತಪ್ಪಿದೆ’: ಕೆಎಸ್ ಆರ್ ಟಿಸಿ ಅಧ್ಯಕ್ಷ ಸ್ಥಾನಕ್ಕೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ರಾಜೀನಾಮೆ ಘೋಷಣೆ
- ಆ.28ಕ್ಕೆ ಎಸ್ಸಿ, ಎಸ್ಟಿ ನೌಕರರ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶ
- ತುಮಕೂರು: ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಹಿರಿಯ ಶಾಸಕರಿಗೆ ಕಡೆಗಣನೆ; ಕಾಂಗ್ರೆಸ್ ನಲ್ಲಿ ಬಂಡಾಯದ ಕಾವು
- ಕಾರವಾರ: ಅಂಚೆ ಇಲಾಖೆಯಿಂದ ಬುಕಿಂಗ್, ಪಿಕ್–ಅಪ್ ಮತ್ತು ಡೆಲಿವರಿ ಪಾಲುದಾರರಿಗಾಗಿ ಆನ್ ಲೈನ್ ಅರ್ಜಿ
- ಗ್ಯಾಸ್ ಸಿಲಿಂಡರ್ ಕಳ್ಳತನ ಜಾಲ ಭೇದಿಸಿ ಬೀದರ್ ಪೊಲೀಸರು: ₹9.75 ಲಕ್ಷ ಮೌಲ್ಯದ 55 ಗ್ಯಾಸ್ ಸಿಲಿಂಡರ್ ವಶ | ನಾಲ್ವರು ಆರೋಪಿಗಳ ಬಂಧನ
Author: admin
ಮಳೆ ನೀರು ಹರಿಯುವ ಮೋರಿಯಲ್ಲಿ 500 ರೂಪಾಯಿ ಮುಖಬೆಲೆಯ ಲಕ್ಷಕ್ಕೂ ಅಧಿಕ ಮೌಲ್ಯದ ನೋಟುಗಳು ತೇಲಿ ಬಂದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟಪಡಿ ಬಳಿಯ ಮೋರಿಯಲ್ಲಿ ನಡೆದಿದೆ. ಮೊದಲಿಗೆ ಇದು ನಕಲಿ ನೋಟು ಅಂತ ಜನ ಭಾವಿಸಿದ್ದರು. ಆದ್ರೆ ಸೂಕ್ಷ್ಮವಾಗಿ ಗಮನಿಸಿದಾಗ ನಿಜವಾದ ನೋಟು ಎನ್ನುವುದು ತಿಳಿದಿದೆ. ತಕ್ಷಣವೇ ಕೈಗೆ ಸಿಕ್ಕಷ್ಟು ಬಾಚಿಕೊಂಡು ಜನ ಸ್ಥಳದಿಂದ ಓಡಿದ್ದಾರೆ. ಇಷ್ಟೊಂದು ನೋಟುಗಳನ್ನು ನೀರಿಗೆ ಎಸೆದಿದ್ದು ಯಾರು? ಎನ್ನುವುದು ತಿಳಿದು ಬಂದಿಲ್ಲ. ಸುಮಾರು 2 ರಿಂದ 2.5 ಲಕ್ಷದಷ್ಟು ₹500ರ ನೋಟುಗಳು ಮೋರಿಯಲ್ಲಿ ಸಿಕ್ಕಿವೆಯಂತೆ! ಕೆಲವರಂತೂ ತಮಗೆ ಸಿಕ್ಕ ಹಣ ಎಷ್ಟು ಅನ್ನೋದನ್ನೂ ಹೇಳುತ್ತಿಲ್ಲ. ಒಂದು ವೇಳೆ ಪೊಲೀಸರು ಬಂದು ವಾಪಾಸ್ ಪಡೆಯಬಹುದು ಅನ್ನುವ ಭಯದಲ್ಲಿದ್ದಾರೆ. ಹಾಗಾಗಿಯೇ ಇಲ್ಲಿ ಅಚಾನಕ್ ಆಗಿ ಸಿಕ್ಕಿರೋ ಹಣ 2.5 ಲಕ್ಷಕ್ಕಿಂತಲೂ ಹೆಚ್ಚು ಎಂದೇ ಭಾವಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…
ಹೆಚ್.ಡಿ.ಕೋಟೆ :ಮಾದಾಪುರ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ನೂತನವಾಗಿ ನಿರ್ಮಿಸಲಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೋಮವಾರ ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸರಗೂರಿನಲ್ಲಿ ಸ್ಲಂ ಆಸ್ಪತ್ರೆಯನ್ನು, ತಾಯಿ ಮಕ್ಕಳ ಆಸ್ಪತ್ರೆ ಮತ್ತು ಹೆಚ್.ಡಿ.ಕೋಟೆ ಪಟ್ಟಣಕ್ಕೆ ಮಾತ್ರ ಸೀಮಿತವಾದ ಆಸ್ಪತ್ರೆಯನ್ನು ನಿರ್ಮಿಸಲು ರೂಪುರೇಷೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಅದೇ ರೀತಿ ಮಾದಾಪುರದಿಂದ ಕೆ.ಬೆಳತ್ತೂರು ಮಾರ್ಗದ ರಸ್ತೆಗೆ ಮುಂದಿನ 15 ದಿನದಲ್ಲಿ ಭೂಮಿ ಪೂಜೆ ನೆರವೇರಲಿದೆ. ಜೆಎಲ್‌ಆರ್ ವತಿಯಿಂದ ಮಾದಾಪುರ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಆಂಬುಲೆನ್ಸ್ ನೀಡಲಾಗುವುದು ಎಂದರು. ಮೈಸೂರು ಮಾನಂದವಾಡಿ ಸಂಪರ್ಕ ಕಲ್ಪಿಸಲು ರಸ್ತೆಗೆ ನಾಲ್ಕು ಪಥಗಳ ರಸ್ತೆಯನ್ನು ನಿರ್ಮಿಸಲು ಯೋಜನಾ ವರದಿ ತಯಾರಾಗುತ್ತಿದ್ದು, ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಲಾಗುವುದು’ ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಕುಮಾರಸ್ವಾಮಿ ಮಾತನಾಡಿ ‘ಕಳೆದ ಒಂದು ವರ್ಷದ ಅವಧಿಯಲ್ಲಿ ತಾಲ್ಲೂಕಿಗೆ ರೆಡಿಯೋಲಾಜಿಯ ಬೇಡಿಕೆ ಇತ್ತು, ಅದನ್ನು ಒದಗಿಸಲಾಗಿದೆ, ಕಳೆದ 10 ತಿಂಗಳ ಅವಧಿಯಲ್ಲಿ 1200 ಕ್ಕೂ ಹೆಚ್ಚಿನ ಹೆರಿಯನ್ನು ಯಾವುದೇ ತೊಂದರೆಯಾಗದಂತೆ ಮಾಡಿಸಲಾಗಿದೆ.…
ಶಿರಾ, ತಾವರೆಕೆರೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ. ಪ್ರಭು ಅವರು ಶಿರಾ ತಾಲೂಕಿನ ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರನಗೆರೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಮನೆ–ಮನೆಗೊಂದು ಶುದ್ಧ ಕುಡಿಯುವ ನೀರು ಒದಗಿಸುವ ಗಂಗೆ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪ್ರಭು ರವರು, ಗ್ರಾಮೀಣ ಕುಡಿಯುವ ನೀರಿನ ಸಹಾಯಕ ಅಭಿಯಂತರರಿಗೆ ಗುಣಮಟ್ಟದ ಕಾಮಗಾರಿಗಳನ್ನು ಅನುಷ್ಟಾನ ಮಾಡುವಂತೆ ಎಚ್ಚರಿಕೆ ನೀಡಿದರು. ಕಾಮಗಾರಿಗಳಲ್ಲಿ ಬಳಸಲಾಗುವ ಎಲ್ಲಾ ಸಾಮಗ್ರಿಗಳು ನಿಗದಿತ ಗುಣಮಟ್ಟಕ್ಕನುಸಾರವಾಗಿರಬೇಕೆಂದು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು. ಹರ್ ಘರ್ ಜಲ್ ಘೋಷಣೆಗೆ ಮುನ್ನ, ಪೈಪ್ಲೈನ್ ಹಾಗೂ ಗೇಟ್ ವಾಲ್ವ್‌ಗಳ ಮಾಹಿತಿ ಹಾಗೂ ವಿಲೇಜ್ ಕೀ ಮ್ಯಾಪ್ ನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸುವಂತೆ ಆದೇಶಿಸಿದರು. ಯೋಜನೆಯ ಅಂದಾಜುಪಟ್ಟಿಯಂತೆ ಎಲ್ಲ ಕೆಲಸಗಳನ್ನು ಶ್ರೇಷ್ಠ ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ ಅವರು, ಸ್ಟ್ಯಾಂಡ್ ಪೋಸ್ಟ್‌ಗಳ ನಿರ್ಮಾಣವನ್ನು ನಿಗಧಿತ ಅಳತೆಯಂತೆ ಮಾಡಲಾಗುವಂತೆ ಮತ್ತು ಯೋಜನೆ ಹೆಸರು ಉತ್ತಮ ಗುಣಮಟ್ಟದ…
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490 ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸೇನಾಪತಿ ಆಗಿರುವಂತಹ ಮಂಗಳ ಅಕ್ಟೋಬರ್ 22ರಂದು ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಮಂಗಳನ ರಾಶಿ ಪರಿವರ್ತನೆ ಎನ್ನುವುದು ನಾಲ್ಕು ರಾಶಿಯವರ ಜೀವನದಲ್ಲಿ ಅದೃಷ್ಟದ ಫಲಿತಾಂಶಗಳನ್ನ ಕಾಣುವ ಹಾಗೆ ಮಾಡಲಿದ್ದು,…
ಪಾವಗಡ: ತಾಲ್ಲೂಕು ಆಡಳಿತ ವತಿಯಿಂದ 2024–25 ನೇ ಸಾಲಿನ ನವೆಂಬರ್ 1 ರಂದು ನಡೆಯುವ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರಿಗೆ ಪಾವಗಡ ತಾಲ್ಲೂಕು ಕನ್ನಡ ರಾಜ್ಯೋತ್ಸವ ಗೌರವ ಸನ್ಮಾನ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. 10 ಕ್ಷೇತ್ರಗಳಾದ,ಸಾಹಿತ್ಯಕ್ಷೇತ್ರ ,ಜಾನಪದ ಕಲೆ, ಕ್ರೀಡಾಕ್ಷೇತ್ರ , ರಂಗಭೂಮಿ ಕಲಾವಿದರು, ಸಮಾಜಸೇವೆ, ಪೌರಾಕಾರ್ಮಿಕರು, ಪತ್ರಿಕಾ ಮಾಧ್ಯಮ, ಗಡಿನಾಡು ಕನ್ನಡ ಸೇವೆ, ಆರೋಗ್ಯ /ಪಾರಂಪರಿಕ ವೈದ್ಯರು, ಗ್ರಾಮೀಣ ಕಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪುರಸ್ಕಾರ ಮಾಡಲು ನಿರ್ಣಯಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸ್ವವಿವರಗಳೊಂದಿಗೆ ಅ.25 ರ ಸಂಜೆ 5ಗಂಟೆ ರೊಳಗಾಗಿ ತಹಶೀಲ್ದಾರ್ ರವರ ಕಚೇರಿ ಪಾವಗಡ ಇವರಿಗೆ ಸಲ್ಲಿಸಬೇಕು ಎಂದು ಪಾವಗಡ ತಹಶೀಲ್ದಾರ್ ವರದರಾಜ್ ತಿಳಿಸಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ಋತುಸ್ರಾವದ ಸಂದರ್ಭದಲ್ಲಿ ಆಗುವ ವಿಪರೀತ ನೋವುಗಳಿಗೆ ಮನೆಮದ್ದುಗಳ ಸಲಹೆಯನ್ನು ಅಶ್ವಿನಿ ಆಯುರ್ವೇದ ವೈದ್ಯಕೀಯ ಕಾಲೇಜಿನ ವೈದ್ಯರಾದ ಡಾ.ಮೇಘ ಹಂಚಿಕೊಂಡರು. ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಯೋಗದೊಂದಿಗೆ ಡಾ.ಎಚ್.ಎಮ್.ಗಂಗಾಧರಯ್ಯರವರ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು . ಹೆಣ್ಣು ಮಕ್ಕಳು ಪ್ರೌಢಾವಸ್ಥೆಯಲ್ಲಿದ್ದಾಗ ಆರೋಗ್ಯದಲ್ಲಿ ಕೆಲವು ಬದಲಾವಣೆಗಳಾಗುತ್ತವೆ ಹಾಗೆ ಆ ಬದಲಾವಣೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿಕೊಟ್ಟರು ಮತ್ತು 12ರಿಂದ 21ನೇ ವಯಸ್ಸಿನ ಹೆಣ್ಣು ಮಕ್ಕಳ ಯೋಗ ಕ್ಷೇಮದಲ್ಲಿ ಆಯುರ್ವೇದವು ಮಹತ್ವವನ್ನು ವಹಿಸುತ್ತದೆ ಎಂದು ಅಶ್ವಿನಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಬಲರೋಗ ವಿಭಾಗದ ಸಹಾಪ್ರಾಧ್ಯಪಕರಾದ ಮೀನಾಕ್ಷಿ ರವರು ನುಡಿದರು. ವ್ಯಾಸ ಯೂನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ನ್ಯಾಚುರೋಪತಿ ಮೆಡಿಸಿನ್ ವ್ಯಾಸಂಗ ಮಾಡುತ್ತಿರುವ ಕುಮಾರಿ ಋತುಂಭರಾ ಜೆ.ಎಂ. ರವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಹೆಣ್ಣು ಮಕ್ಕಳಿಗೆ ಯೋಗಾಸನದ ಮಹತ್ವ ಹಾಗೂ ಮನೆಮದ್ದುಗಳ ಮೂಲಕ ಋತುಸ್ರಾವದಿಂದ ಯಾವ ರೀತಿ ನೋವು ಕಡಿಮೆ ಮಾಡಬಹುದೆಂದು ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಹೇಮಲತಾರವರು ಕಾರ್ಯಕ್ರಮವನ್ನು…
ತುಮಕೂರು: ಬೆಂಗಳೂರಿನ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವತಿಯಿಂದ ಅಕ್ಟೋಬರ್ 22 ರಿಂದ 31ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಮೈಸೂರು ಸ್ಯಾಂಡಲ್ ಸಾಬೂನು ಮೇಳವನ್ನು ಆಯೋಜಿಸಲಾಗಿದೆ ಎಂದು ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಗಂಗಪ್ಪ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಸ್ಯಾಂಡಲ್ ಸಾಬೂನು ವಿಶ್ವ ವಿಖ್ಯಾತಿ ಪಡೆದಿದ್ದು, ನಮ್ಮ ಸಂಸ್ಥೆಯು ಕೇಂದ್ರ ಸರ್ಕಾರದಿಂದ ಭೌಗೋಳಿಕ ಸ್ವಾಮ್ಯ ಪ್ರಮಾಣ ಪತ್ರವನ್ನು ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು. ಬಹುರಾಷ್ಟ್ರೀಯ ಸಂಸ್ಥೆಗಳ ತೀವ್ರ ಪೈಪೋಟಿಯ ನಡುವೆಯೂ ನಮ್ಮ ಸಂಸ್ಥೆ ಹೆಚ್ಚಿನ ವಹಿವಾಟು ಹೊಂದಿದ್ದು, 2023–24 ಸಾಲಿನಲ್ಲಿ 1570 ಕೋಟಿ ರೂ. ವಹಿವಾಟು ನಡೆಸಿ ಅಂದಾಜು ನಿವ್ವಳ 362 ಕೋಟಿ ರೂ.ಗಳ ಲಾಭ ಗಳಿಸಿದೆ. ಪ್ರಸ್ತುತ ಆರ್ಥಿಕ ವರ್ಷ 2024–25ರಲ್ಲಿ ನಮ್ಮ ಉತ್ಪನ್ನಗಳ ಮಾರಾಟದಲ್ಲಿ ಎಲ್ಲಾ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸೆಪ್ಟೆಂಬರ್ 24ರವರೆಗಿನ ಮಾರಾಟದಲ್ಲಿ…
ತುಮಕೂರು: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಪಿ.ಯು.ಸಿ ಮತ್ತು ಸಮಾನಾಂತರ, ಸಾಮಾನ್ಯ ಪದವಿ ಮತ್ತು ಸಂಯೋಜಿತ ಉಭಯ ಪದವಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ(ಊಟ ಮತ್ತು ವಸತಿ ಸಹಾಯ ಯೋಜನೆ), ವಿದ್ಯಾರ್ಥಿವೇತನ ಹಾಗೂ ಶುಲ್ಕ ಮರುಪಾವತಿ ಸೌಲಭ್ಯ ನೀಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಜಾಲತಾಣ https://ssp.postmatric.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050770005, ದೂ.ವಾ.ಸಂ.1902 ಅಥವಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೋನಿಯಾ ವರ್ಣೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ಜಿಲ್ಲೆಯಲ್ಲಿ ಮುಂದಿನ 3 ದಿನಗಳು ಅಧಿಕ ಮಳೆಯಾಗುವ ಮುನ್ಸೂಚನೆ ಇದ್ದು, ಜಿಲ್ಲೆಯಾದ್ಯಂತ ಶೇಂಗಾ ಬೆಳೆಯು ಕಟಾವು ಕಾರ್ಯ ಪ್ರಗತಿಯಲ್ಲಿರುವುದರಿಂದ ರೈತರು ಕಟಾವಾದ ಬೆಳೆಯನ್ನು ಮಳೆಯಲ್ಲಿ ನೆನೆಯದಂತೆ ಟಾರ್ಪಲಿನ್ ಹೊದಿಕೆಯಿಂದ ಸಂರಕ್ಷಿಕೊಳ್ಳಬೇಕು. ತಗ್ಗು ಪ್ರದೇಶದ ಹೊಲಗಳಲ್ಲಿರುವ ಇತರೆ ಎಲ್ಲಾ ಬೆಳೆಗಳ ತಾಕುಗಳಲ್ಲಿ ಬಸಿಗಾಲುವೆಗಳನ್ನು ತೆಗೆದು ಹೊಲದಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕೆಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ರೈತರಿಗೆ ಸಲಹೆ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಸಂಭ್ರಮ–50ರ ಅಭಿಯಾನದ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ವಿಭಾಗವಾರು ಯುವಕವಿ ಗೋಷ್ಠಿಯನ್ನು ಆಯೋಜಿಸಲಾಗಿದ್ದು, ಆಸಕ್ತ 20 ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಿದೆ. ರಾಜ್ಯದ ಎಲ್ಲಾ ಭಾಗದ ಆಸಕ್ತ ಕವಿಗಳು ಕನಿಷ್ಠ 3 ಕವಿತೆಗಳನ್ನು ಅಕ್ಟೋಬರ್ 30ರೊಳಗಾಗಿ ಕಳುಹಿಸಿಕೊಡಬೇಕು. ಕವಿತೆಗಳನ್ನು ಸಲ್ಲಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಲತಾಣ http://karnatakasahithyaacademy.org ನಿಂದ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296