Subscribe to Updates
Get the latest creative news from FooBar about art, design and business.
- 10 ಸಾವಿರ ಕೋಟಿ ಅನುದಾನ ಬಿಡುಗಡೆಗೆ ಆಗ್ರಹ: ಕರ್ನಾಟಕದ 28 ಜಿಲ್ಲೆಗಳು ಮಳೆಯಿಲ್ಲದೇ ಬರಪೀಡಿತ | ತುಮಕೂರಿನಲ್ಲಿ ಬಿಜೆಪಿ ಬರ ಅಧ್ಯಯನ
- ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ “ಓ ಮೈ ಡಾಗ್” ಆಗಸ್ಟ್ 7ರಂದು ಅದ್ದೂರಿ ರಿಲೀಸ್
- ಗೃಹಜ್ಯೋತಿ ಫಲಾನುಭವಿಗಳಿಗೆ ಎಚ್ಚರಿಕೆ: ಸಮೀಕ್ಷೆಯಲ್ಲಿ ಮಾಹಿತಿ ನೀಡದಿದ್ದರೆ ಉಚಿತ ವಿದ್ಯುತ್ ಭಾಗ್ಯ ಬಂದ್?
- ‘ಗಾಡ್ ಫಾದರ್ ಇಲ್ಲದ್ದಕ್ಕೆ ಸಚಿವ ಸ್ಥಾನ ತಪ್ಪಿದೆ’: ಕೆಎಸ್ ಆರ್ ಟಿಸಿ ಅಧ್ಯಕ್ಷ ಸ್ಥಾನಕ್ಕೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ರಾಜೀನಾಮೆ ಘೋಷಣೆ
- ಆ.28ಕ್ಕೆ ಎಸ್ಸಿ, ಎಸ್ಟಿ ನೌಕರರ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶ
- ತುಮಕೂರು: ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಹಿರಿಯ ಶಾಸಕರಿಗೆ ಕಡೆಗಣನೆ; ಕಾಂಗ್ರೆಸ್ ನಲ್ಲಿ ಬಂಡಾಯದ ಕಾವು
- ಕಾರವಾರ: ಅಂಚೆ ಇಲಾಖೆಯಿಂದ ಬುಕಿಂಗ್, ಪಿಕ್–ಅಪ್ ಮತ್ತು ಡೆಲಿವರಿ ಪಾಲುದಾರರಿಗಾಗಿ ಆನ್ ಲೈನ್ ಅರ್ಜಿ
- ಗ್ಯಾಸ್ ಸಿಲಿಂಡರ್ ಕಳ್ಳತನ ಜಾಲ ಭೇದಿಸಿ ಬೀದರ್ ಪೊಲೀಸರು: ₹9.75 ಲಕ್ಷ ಮೌಲ್ಯದ 55 ಗ್ಯಾಸ್ ಸಿಲಿಂಡರ್ ವಶ | ನಾಲ್ವರು ಆರೋಪಿಗಳ ಬಂಧನ
Author: admin
ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ. ಕೊರಟಗೆರೆ : ಬೈರೇನಹಳ್ಳಿಯಿಂದ ಕೊರಟಗೆರೆ ಸಂಪರ್ಕದ 10 ಕಿ.ಮೀ. ಪಿಡ್ಲ್ಯೂಡಿ ಮುಖ್ಯರಸ್ತೆಯಲ್ಲಿ 100ಕ್ಕೂ ಅಧಿಕ ಗುಂಡಿಗಳು ಬಿದ್ದು ಪ್ರತಿನಿತ್ಯವು ಅಪಘಾತ ಆಗ್ತಿದ್ರು ಸಹ, ಪಿಡ್ಲ್ಯೂಡಿ ಇಲಾಖೆ ಮಾತ್ರ ಗ್ರಾಮೀಣ ಪ್ರದೇಶದ ಕಡೆಗಳಿಗೆ ತಿರುಗಿಯು ನೋಡದಿರುವ ಪರಿಣಾಮ ಸ್ಥಳೀಯರೇ ಮುಖ್ಯರಸ್ತೆಗಳಿಗೆ ಕಲ್ಲು–ಮಣ್ಣು ಸುರಿದು ತೇಪೆ ಹಚ್ಚಲು ಕೆಲಸ ಮಾಡಿದ್ದು, ಈ ಘಟನೆ ಪಿಡ್ಲ್ಯೂಡಿ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸಿದೆ. ಕೊರಟಗೆರೆಯಿಂದ ಬೈರೇನಹಳ್ಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಪಿಡ್ಲ್ಯೂಡಿ ಮುಖ್ಯರಸ್ತೆಯ ನಿರ್ವಹಣೆ ಮಾಡಬೇಕಾದ ಗುತ್ತಿಗೆದಾರನ ಜೊತೆ ಅಧಿಕಾರಿವರ್ಗವು ಸಹ ಕಾಣೆಯಾಗಿದ್ದಾರೆ. ಹೀಗಾಗಿ ಗ್ರಾಮೀಣ ರಸ್ತೆಗಳು ಗುಂಡಿಮಯ ಆಗಿವೆ. ಬಿ.ಡಿ.ಪುರದಿಂದ ಹೊಳವನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯೇ ಮಾಯವಾಗಿ ಗುಂಡಿಗಳೇ ಹೆಚ್ಚಾಗಿ ಅಪಘಾತದ ಸಂಖ್ಯೆ ಪ್ರತಿನಿತ್ಯ ಏರಿಕೆ ಆಗುತ್ತಲೇ ಇದೆ. ಕುರಿ–ಮೇಕೆ ಸಂತೆಗೂ ರಸ್ತೆಯೇ ವಿಘ್ನ: ಪಿಡ್ಲ್ಯೂಡಿ ಇಲಾಖೆಯ ಮುಖ್ಯರಸ್ತೆಗಳ ದುಸ್ಥಿತಿಯಿಂದ ಕರ್ನಾಟಕದ ಸುಪ್ರಸಿದ್ದ ಅಕ್ಕಿರಾಂಪುರ ಕುರಿ-ಮೇಕೆ ಸಂತೆಗೂ ವಿಘ್ನ ಎದುರಾಗಿದೆ. ರಸ್ತೆಗಳಲ್ಲಿ ಪ್ರತಿನಿತ್ಯವು ಅಪಘಾತ ದೃಶ್ಯಗಳನ್ನು ನೋಡಿ ಬೇರೆ…
ಪಾವಗಡ: ತಾಲೂಕಿನ ವೈ.ಎನ್.ಹೊಸಕೋಟೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಕೊಳಚೆ ನೀರಿನಲ್ಲೇ ನಡೆದುಕೊಂಡು ಹೋಗುವ ದುಸ್ಥಿತಿ ಎದುರಿಸುತ್ತಿದ್ದಾರೆ. ಈ ಶಾಲೆಯು ದೊಡ್ಡಹಳ್ಳಿ ರಸ್ತೆಯಲ್ಲಿದೆ. ಮುಖ್ಯರಸ್ತೆಯಿಂದ 100 ಮೀಟರ್ ದೂರದಲ್ಲಿರುವ ಈ ಶಾಲೆಗೆ ಮಳೆಗಾಲದಲ್ಲಿ ಪ್ರತಿ ವರ್ಷವೂ ವಿದ್ಯಾರ್ಥಿಗಳು ಕೊಳಚೆ ನೀರಿನಲ್ಲಿ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸುಮಾರು 160 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ ಮತ್ತು ಶಾಲೆಯಿಂದ ಮನೆಗೆ ಹೋಗಬೇಕಾದರೆ ಈ ಕೊಳಚೆ ನೀರನ್ನೇ ಮೆಟ್ಟಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಕೊಳಚೆ ನೀರಿನಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಸ್ಥಳೀಯ ಪಂಚಾಯತ್ ನ ಗಮನಕ್ಕೆ ತಂದರೂ ಪಂಚಾಯತ್ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಶಾಲಾ ಮಕ್ಕಳಿಗೆ ಓಡಾಡಲು ಸರಿಯಾದ ರಸ್ತೆ ನಿರ್ಮಿಸಿಕೊಡಬೇಕಿದೆ. ಗ್ರಾಮಸ್ಥರಿಗೆ ಸ್ವಚ್ಛತೆಯ ಪಾಠ ಹೇಳಿಕೊಡುವ ಪಂಚಾಯತ್ ಗಳು, ತಾವೇ ತಮ್ಮ ಜವಾಬ್ದಾರಿಯನ್ನು ಮರೆತು, ವಿದ್ಯಾರ್ಥಿಗಳು ಆರೋಗ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಕೇಳಿ ಬಂದಿದೆ. ವರದಿ: ನಂದೀಶ್…
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ನೀಡಿಗಲ್ ಹೋಬಳಿಯ ಕೆ.ಟಿ.ಹಳ್ಳಿ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನವನ್ನು ತೆರವುಗೊಳಿಸಲು ತಹಶೀಲ್ದಾರರು ನೋಟಿಸ್ ನೀಡಿದ್ದು ಗ್ರಾಮಸ್ಥರಿಗೆ ಧೈರ್ಯ ತುಂಬಿ ಸಹಕಾರ ನೀಡುವ ಬಗ್ಗೆ ಗ್ರಾಮಸ್ಥರೊಂದಿಗೆ ಸಭೆ ನಡೆಸಲಾಯಿತು. ನಂತರ ಪಾವಗಡ ತಾಲೂಕು ತಹಶೀಲ್ದಾರರ ಭೇಟಿ ಮಾಡಿ, ದೇವಸ್ಥಾನ ಮತ್ತು ಸುತ್ತಮುತ್ತ ಇರುವ ಮನೆಗಳನ್ನು ತೆರವುಗೊಳಿಸದಂತೆ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ನ ಪ್ರಾಂತ ಸಹ ಕಾರ್ಯದರ್ಶಿಗಳಾದ ಮಂಗಳೂರಿನ ಶರಣ್ ಪಂಪ್ ವೆಲ್ , ತುಮಕೂರು ಬಜರಂಗದಳ ವಿಭಾಗ ಸಂಯೋಜಕರು ಮಂಜು ಭಾರ್ಗವ್, ವಿಶ್ವ ಹಿಂದೂ ಪರಿಷದ್ ತುಮಕೂರು ವಿಭಾಗ ಮಂದಿರ ಅರ್ಚಕ ಪುರೋಹಿತ್ ಪ್ರಮುಖ್ ಶ್ರೀನಿವಾಸ್ ಜಿ ಕೆ ,ಕಾರ್ಯದರ್ಶಿಗಳಾದ ಸಂಜಯ್ ಮಧುಗಿರಿ ಜಿಲ್ಲಾ ಸಂಯೋಜಕ್ ಸುಮನ್, ಪಾವಗಡ ಪ್ರಖಂಡ ವಾಸು , ರವಿ ,ರಾಕೇಶ್ ,ಲಕ್ಷ್ಮಿ ನಾಯ್ಡು, ಕಾರ್ತಿಕ್ , ಧನು ಇದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ಬಿಗ್ ಬಾಸ್ ಮನೆಯಲ್ಲಿ ಪಾತ್ರೆ ತೊಳೆದಿದ್ದಕ್ಕೆ ಲಾಯರ್ ಜಗದೀಶ್ ಪತ್ನಿ, ಜಗದೀಶ್ ಅವರು ಮನೆಗೆ ಬರುತ್ತಿದ್ದಂತೆಯೇ ಅಡುಗೆ ಮನೆಗೆ ಕಳುಹಿಸಿ ಪಾತ್ರೆ ತೊಳೆಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪಾತ್ರೆ ತೊಳೆಯುತ್ತಾರೆ, ಇಲ್ಲಿಯೂ ತೊಳೆಯಲಿ ಬಿಡಿ ಅಂದಿದ್ದಾರೆ ಜಗದೀಶ್ ಪತ್ನಿ. ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡ ಮಟ್ಟದಲ್ಲಿ ಸದ್ದ ಮಾಡಿದ ಲಾಯರ್ ಜಗದೀಶ್. ಮೂರು ವಾರ ಕಳೆಯುವುದರ ಒಳಗೆ ಬಿಗ್ ಬಾಸ್ ನಿಂದ ಹೊರ ಬಿದ್ದಿದ್ದಾರೆ. ಆದ್ರೆ ಹೊರಗಡೆ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಜಗದೀಶ್ ಅವರು ಜಗಳಕ್ಕೆ ಮಾತ್ರ ನಿಲ್ಲುತ್ತಿರಲಿಲ್ಲ. ಅವರು ಅಗತ್ಯ ಬಂದಾಗ ಪಾತ್ರೆ ತೊಳೆಯುತ್ತಿದ್ದರು. ಹಗಲು ರಾತ್ರಿ ಎನ್ನದೆ ಸಿಕ್ಕ ಸಿಕ್ಕಾಗಲೆಲ್ಲ ಅಡುಗೆ ಮನೆಯ ವಾಶ್ ಬೇಸ್ನಲ್ಲಿ ನಿಲ್ಲುತ್ತಿದ್ದರು. ಇದನ್ನು ಗಮನಿಸಿರುವ ಅವರ ಪತ್ನಿ, ಜಗದೀಶ್ ಮನೆಗೆ ಬರುತ್ತಿದ್ದಂತೆಯೇ ಪಾತ್ರೆ ತೊಳೆಸಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಈ ಫನ್ ವಿಡಿಯೋವನ್ನು…
ತುಮಕೂರು: ಸರ್ಕಾರ ಜಾರಿಗೆ ತರುವ ವಿವಿಧ ಯೋಜನೆ ಮತ್ತು ಅನುದಾನಗಳಲ್ಲಿ ಕಡ್ಡಾಯವಾಗಿ ಎಲ್ಲಾ ಇಲಾಖೆಗಳು ವಿಶೇಷಚೇತನರಿಗಾಗಿ ಶೇ.5ರಷ್ಟು ಅನುದಾನವನ್ನು ಮೀಸಲಿಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಆಯುಕ್ತ ದಾಸ್ ಸೂರ್ಯವಂಶಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲೆಯ ವಿಕಲಚೇತನರ ಪುನರ್ವಸತಿ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರ್ಕಾರದ ಅನುದಾನದಲ್ಲಿ ಶೇ.5ರಷ್ಟು ವಿಶೇಷಚೇತನರಿಗಾಗಿ ಮೀಸಲಿಡಬೇಕೆಂದು ಸರ್ಕಾರದ ಆದೇಶವಿದ್ದರೂ ಸಹ ಕೆಲವು ಇಲಾಖೆಗಳಲ್ಲಿ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಜಿಲ್ಲೆಯಲ್ಲಿ 3,554 ವಿಶೇಷಚೇತನ ವಿದ್ಯಾರ್ಥಿಗಳು 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಲ್ಲಾ ಶಾಲೆಗಳಲ್ಲೂ ವಿಶೇಷಚೇತನ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಅಂಧ ಮತ್ತು ವಿಕಲಚೇತನ ಮಕ್ಕಳಿಗಾಗಿ ಎಲ್ಲಾ ಶಾಲೆಗಳಲ್ಲೂ ರ‍್ಯಾಂಪ್ ಹಾಗೂ ಅಡೆ–ತಡೆ ರಹಿತ ಶೌಚಾಲಯಗಳನ್ನು ನಿರ್ಮಿಸಬೇಕು. ವಿಶೇಷಚೇತನ ಮಕ್ಕಳ ತರಗತಿಗಳನ್ನು ಕೆಳಮಹಡಿಯ ಕೊಠಡಿಗಳಲ್ಲಿ ನಡೆಸಬೇಕು. ಜಿಲ್ಲೆಯಲ್ಲಿರುವ ಎಲ್ಲಾ ವಸತಿ ಶಾಲೆಗಳಲ್ಲಿ…
ಗಡ್ಡ ಬಿಡುವ ಗಂಡಸರ ವಿರುದ್ಧ ಯುವತಿಯರೆಲ್ಲ ಸೇರಿಕೊಂಡು ಪ್ರತಿಭಟನೆ ನಡೆಸಿರುವ ವಿಚಿತ್ರ ಘಟನೆಯೊಂದು ಮಧ್ಯ ಪ್ರದೇಶದ ಇಂದೂರ್ ನಲ್ಲಿ ನಡೆದಿದೆ. ಈ ಪ್ರತಿಭಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗರೀಬ್ ಹಠಾವೋ ಹೋರಾಟ ನೀವು ಕೇಳಿರಬಹುದು ಆದರೆ ಈ ಯುವತಿಯರು ಗಡ್ಡ ಹಟಾವೋ, ನೋ ಕ್ಲೀನ್ ಶೇವ್, ನೋ ಲವ್ ಎಂದು ಸ್ಲೋಗನ್ ಬಳಸಿ ಪ್ರತಿಭಟನೆ ನಡೆಸಿದ್ದಾರೆ. ಇವರ ಪ್ರತಿಭಟನೆಯನ್ನು ಕೆಲವರು ಹಾಸ್ಯವಾಗಿ ಪರಿಗಣಿಸಿದರೆ, ಇನ್ನು ಕೆಲವರು ಗಂಭೀರವಾಗಿ ಪರಿಗಣಿಸಿದ್ದಾರೆ. ಇಂದೋರ್ ಯುವತಿಯರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕ್ಲೀನ್ ಶೇವ್ ಮಾಡದ ಹುಡುಗರನ್ನು ಮದುವೆಯಾಗುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಗಂಡು ಮಕ್ಕಳಿಗೆ ಗಡ್ಡ ಬಿಡುವುದು ಎಂದರೆ ಫ್ಯಾಷನ್, ಮುಖಕ್ಕೆ ಒಂದು ಗಂಭೀರತೆ ಬರಬೇಕಾದರೆ ಗಡ್ಡ ಬರಬೇಕು ಎನ್ನುವುದು ಗಂಡಸರ ಅಭಿಪ್ರಾಯ. ಹಾಗೆನೇ ಇತ್ತೀಚೆಗೆ ಗಡ್ಡ ಬಿಡುವ ಫ್ಯಾಷನ್ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆದರೆ, ಇದೀಗ ಯುವತಿಯರು ಗಡ್ಡ ಬಿಡುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಹಾಗಿದ್ದಾರೆ ಅನ್ನೋ ಅಭಿಪ್ರಾಯಗಳನ್ನು ಘಟನೆಯ ಬೆನ್ನಲ್ಲೇ…
ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖಂಡ ಸಿದ್ದೀಕ್ ಅವರ ಹತ್ಯೆಯ ತನಿಖೆ ತೀವ್ರಗೊಳ್ಳುತ್ತಿದೆ. ಈ ನಡುವೆ ಲಾರೆನ್ಸ್ ಬಿಷ್ಣೋಯ್ ಹತ್ಯೆಗೆ ಕ್ಷತ್ರಿಯ ಕರ್ಣಿ ಸೇನಾ ಬಹುಮಾನವನ್ನು ಘೋಷಿಸಿದೆ. ಬಿಷ್ಣೋಯ್ ಯನ್ನು ಯಶಸ್ವಿಯಾಗಿ ಕೊಲ್ಲುವ ಯಾವುದೇ ಕಾನೂನು ಜಾರಿ ಅಧಿಕಾರಿಗೆ 1,11,11,111 ರೂ.ಗಳ ಬಹುಮಾನವನ್ನು ಕ್ಷತ್ರಿಯ ಕರ್ಣಿ ಸೇನೆಯ ನಾಯಕ ರಾಜ್ ಶೇಖಾವತ್ ವೀಡಿಯೊ ಮೂಲಕ ಘೋಷಿಸಿದ್ದಾರೆ. ಬಿಷ್ಣೋಯ್ ಅವರ ಎನ್ಕೌಂಟರ್ ನಡೆಸುವ ಯಾವುದೇ ಭದ್ರತಾ ಸಿಬ್ಬಂದಿಗೆ ಈ ಬಹುಮಾನವನ್ನು ನೀಡಲಾಗುವುದು ಎಂದು ಶೇಖಾವತ್ ಒತ್ತಿ ಹೇಳಿದ್ದಾರೆ. ಕರ್ಣಿ ಸೇನೆಯ ಮುಖ್ಯಸ್ಥ ಸುಖದೇವ್ ಸಿಂಗ್ ಗೋಗಮೇಡಿ ಅವರ ಸಾವಿನ ಹಿಂದಿನ ಕೊಲೆಗಾರ ಬಿಷ್ಣೋಯ್ ಎಂದು ಶೇಖಾವತ್ ಆರೋಪಿಸಿದರು. ಡಿಸೆಂಬರ್ 5, 2023 ರಂದು ಜೈಪುರದಲ್ಲಿ ಅಪರಿಚಿತ ದಾಳಿಕೋರರ ಗುಂಡಿನ ದಾಳಿಯಲ್ಲಿ ಗೋಗಮೇಡಿ ದುರಂತವಾಗಿ ಪ್ರಾಣ ಕಳೆದುಕೊಂಡರು. ಕೊಲೆಯಾದ ಕೆಲವೇ ಗಂಟೆಗಳ ನಂತರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಹೇಯ ಕೃತ್ಯದ ಜವಾಬ್ದಾರಿಯನ್ನು ತ್ವರಿತವಾಗಿ ವಹಿಸಿಕೊಂಡಿತು. ಬಿಷ್ಣೋಯ್ ಅವರ ಮೂಲ ಹೆಸರು ಬಲ್ಕರನ್…
ಚೆನ್ನೈ: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಲು ಪ್ರತಿಪಾದಿಸಿದ ನಂತರ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡ ಇಂತಹದ್ದೇ ಹೇಳಿಕೆಯನ್ನು ನೀಡಿದ್ದಾರೆ. ಚೆನ್ನೈನ ತಿರುವನ್ಮಿಯೂರಿನ ದರ್ಶನೀಶ್ವರ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಆಯೋಜಿಸಿದ್ದ 31 ಜೋಡಿ ವಿವಾಹಗಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಟಾಲಿನ್, ಹದಿನಾರು ಮಕ್ಕಳನ್ನು ಹೊಂದಿ ಅಷ್ಟೇ ಸಂಪದ್ಭರಿತವಾದ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು. ಈಗ ಅಂತಹ ಕಾಲ ಸನ್ನಿಹಿತವಾಗಿದೆ ಎಂದಿದ್ದಾರೆ. ಕೆಲವು ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ಲೋಕಸಭೆ ಕ್ಷೇತ್ರಗಳು ಹೆಚ್ಚಾಗಿವೆ. ಅವರೇ ನಮ್ಮನ್ನು ಆಳುತ್ತಿದ್ದಾರೆ. ಆದರೆ ನಾವು ಜನಸಂಖ್ಯೆ ನಿಯಂತ್ರಣ ಹೇರಿಕೊಂಡಿದ್ದರ ಪರಿಣಾಮ ತಮಿಳುನಾಡಿನಲ್ಲಿ ಕ್ಷೇತ್ರಗಳು ಕಡಿಮೆಯಾಗುತ್ತಿವೆ. ತಮಿಳು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಕಡಿಮೆ ಮಕ್ಕಳನ್ನು ಹೊಂದಲು ನಮ್ಮನ್ನು ಏಕೆ ನಿರ್ಬಂಧಿಸಬೇಕು? ಜನಸಂಖ್ಯೆ ಆಧಾರದ ಮೇಲೆ ಸಂಸತ್ ಸ್ಥಾನಗಳನ್ನು ನಿರ್ಧರಿಸುನಾವುದರಿಂದ 16 ಮಕ್ಕಳನ್ನು ಏಕೆ ಗುರಿಯಾಗಿಸಿಕೊಳ್ಳಬಾರದು? ಎಂದು ಪ್ರಶ್ನಿಸಿದ್ದಾರೆ. ಆಂಧ್ರ ಸರ್ಕಾರವು ವಯಸ್ಸಾದ ಜನಸಂಖ್ಯೆಯಿಂದಾಗಿ ಹೆಚ್ಚಿನ ಮಕ್ಕಳನ್ನು ಹೊಂದಿರುವ ಕುಟುಂಬಗಳನ್ನು ಪ್ರೋತ್ಸಾಹಿಸಲು ಯೋಜಿಸುತ್ತಿದೆ ಎಂದು…
ಮೈಸೂರು: ಚನ್ನಪಟ್ಟಣ ಉಪಚುನಾವಣೆ ಬೆನ್ನಲ್ಲೇ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ ಎನ್ನುವ ಗುಸುಗುಸು ಕೇಳಿ ಬರುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಿ.ಪಿ.ಯೋಗೀಶ್ವರ್ ಆಗಲಿ ಯಾರೇ ಆಗಲಿ ಕಾಂಗ್ರೆಸ್ಸಿನ ಸಿದ್ಧಾಂತ ಮತ್ತು ಸಂವಿಧಾನದ ಮೌಲ್ಯಗಳನ್ನು ಒಪ್ಪಿ ಬರುವ ಎಲ್ಲರಿಗೂ ಪಕ್ಷಕ್ಕೆ ಸ್ವಾಗತ ಎಂದು ಹೇಳಿದ್ದಾರೆ. ಇನ್ನು ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದರಾದ ಈ.ತುಕಾರಾಂ ಅವರ ಪತ್ನಿ ಅವರಿಗೆ ಟಿಕೆಟ್ ನೀಡಲಾಗುವುದು. ಚನ್ನಪಟ್ಟಣದಲ್ಲಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಆಗಿದೆ. ಡಿ.ಕೆ.ಸುರೇಶ್ ಅವರೂ ಕೂಡ ಪ್ರಭಲ ಅಭ್ಯರ್ಥಿ ಆಗಿದ್ದಾರೆ. ಒಂದೆರಡು ದಿನಗಳಲ್ಲಿ ಚನ್ನಪಟ್ಟಣ ಮತ್ತು ಶಿಗ್ಗಾಂವ್ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಸ್ಪಷ್ಟವಾಗಲಿದೆ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ಲಕ್ನೋ: ಮಹಿಳಾ ಕಾನ್ ಸ್ಟೇಬಲ್ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಆರೋಪಿಯ ಕೈ ಕಚ್ಚಿ ಮಹಿಳಾ ಕಾನ್ ಸ್ಟೇಬಲ್ ತಮ್ಮನ್ನು ರಕ್ಷಣೆ ಮಾಡಿಕೊಂಡಿದ್ದಾರೆ. ಅಯೋಧ್ಯೆಯ ಮೀಸಲು ಪೊಲೀಸ್ ಪಡೆಯಲ್ಲಿ ಹಿರಿಯ ಕಾನ್‌ಸ್ಟೆಬಲ್ ಆಗಿರುವ ಸಂತ್ರಸ್ತೆ, ‘ಕರ್ವಾ ಚೌತ್’ ಹಬ್ಬದ ಆಚರಣೆಗೆಂದು ಶನಿವಾರ ರಾತ್ರಿ ಕಾನ್ಪುರದ ಬಳಿ ಇರುವ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ದಾರಿಯಲ್ಲಿ ಪರಿಚಿತ ವ್ಯಕ್ತಿ ಧರ್ಮೇಂದ್ರ ಪಾಸ್ವಾನ್ ಸಿಕ್ಕಿದ್ದು, ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಬಿಡುವುದಾಗಿ ಹೇಳಿದ್ದಾನೆ. ಆದರೆ ಮನೆಗೆ ಕರೆದುಕೊಂಡು ಹೋಗದೇ ಕೆಟ್ಟ ಉದ್ದೇಶದಿಂದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಬಳಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಸಂತ್ರಸ್ತೆ ಸಹಾಯಕ್ಕಾಗಿ ಕೂಗಾಡಿದ್ದಾರೆ. ಆದರೆ ಯಾರೂ ಸಹಾಯಕ್ಕೆ ಧಾವಿಸಿಲ್ಲ. ಬಳಿಕ ಆತನ ಕೈಬೆರಳನ್ನು ಬಲವಾಗಿ ಕಚ್ಚಿ ಆಕೆ ಪಾರಾಗಿದ್ದಾರೆ. ನಂತರ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ನಮ್ಮತುಮಕೂರಿನ ಕ್ಷಣ…