Author: admin

ಚಿಕ್ಕೋಡಿ: ಸೊಲ್ಹಾಪುರದ ಪಂಢರಪುರಕ್ಕೆ ತೀರ್ಥಯಾತ್ರೆಗೆ ತೆರಳಿದ್ದ ಕುಟುಂಬದ ಜೊತೆಗೆ ಅವರ ಮೆಚ್ಚಿನ ನಾಯಿ ಕೂಡ ತೆರಳಿತ್ತು. ಆದ್ರೆ ತೀರ್ಥಯಾತ್ರೆ ಮುಗಿಸಿ ಬರುವ ವೇಳೆ, ನಾಯಿ ನಾಪತ್ತೆಯಾಗಿತ್ತು. ಎಷ್ಟು ಹುಡುಕಿದರೂ ಸಿಗದ ಕಾರಣ ಮನೆಯವರು ವಾಪಸ್ ಬಂದಿದ್ದರು. ಆದರೆ ಇದೀಗ ಅಚ್ಚರಿಯ ಘಟನೆಯೊಂದು ನಡೆದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರ್ಣಿಯ ಜ್ಞಾನದೇವ ಕುಂಬಾರ ಎಂಬವರಿಗೆ ಸೇರಿದ ‘ಮಹಾರಾಜ’ ಎಂಬ ನಾಯಿ ಮಹಾರಾಷ್ಟ್ರದ ಸೊಲ್ಹಾಪುರದ ಪಂಢರಪುರ ಕ್ಷೇತ್ರದಲ್ಲಿ ನಾಪತ್ತೆಯಾಗಿತ್ತು, ನಾಯಿಯನ್ನು ಹುಡುಕಿ ಸಿಗದಿದ್ದಾಗ ಕುಟುಂಬಸ್ಥರು ವಾಪಸ್ ಮನೆಗೆ ಬಂದಿದ್ದರು. ಕುಟುಂಬಸ್ಥರು ಮನೆಗೆ ಬಂದು ನಾಲ್ಕು ದಿನಗಳಾದಾಗ ನಾಯಿ ಮತ್ತೆ ಮನೆಯಲ್ಲೇ ಪ್ರತ್ಯಕ್ಷವಾಗಿ ಅಚ್ಚರಿ ಸೃಷ್ಟಿಸಿದೆ. ಮಹಾರಾಜ ನಾಯಿ 195 ಕಿ.ಮೀ. ದೂರದವರೆಗೆ ತನ್ನ ಮಾಲಿಕರನ್ನು ಹುಡುಕಿಕೊಂಡು ಬಂದು ಕೊನೆಗೂ ಮನೆ ಸೇರಿದೆ. ಸದ್ಯ ಸ್ವಾಮಿ ನಿಷ್ಠೆಗೆ ಹೆಸರಾಗಿರುವ ಮಹಾರಾಜನನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ. ಮಹಾರಾಜ ವಾಪಸ್ ಬಂದ ಖುಷಿಯಲ್ಲಿ ಅವನಿಗೆ ಹಾರ ಹಾಕಿ ಗುಲಾಲ್ ಹಚ್ಚಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ನಾಯಿಯ ನಿಯತ್ತಿಗೆ ಗ್ರಾಮಸ್ಥರು ಮೆಚ್ಚುಗೆ…

Read More

ಬೆಂಗಳೂರು: ಕಂಡವರ ಮಕ್ಕಳನ್ನು ಬೆಳೆಸಿದ ದೇವರಾಜ ಅರಸು ದೇವರಾದರು. ಆದರೆ, ಸಿದ್ದರಾಮಯ್ಯ, ಯಡಿಯೂರಪ್ಪ, ಖರ್ಗೆ, ಕುಮಾರಣ್ಣ ಸೇರಿ ಎಲ್ಲರಿಗೂ ತಮ್ಮ ಮಕ್ಕಳದ್ದೇ ಚಿಂತೆಯಾದರೆ ಕಂಡವರ ಮಕ್ಕಳನ್ನು ಬೆಳೆಸುವವರು ಯಾರು ಅಂತ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ, ಹೆಚ್.ಡಿ. ಕುಮಾರಸ್ವಾಮಿ ಸೇರಿ ಎಲ್ಲರಿಗೂ ತಮ್ಮ ಮಕ್ಕಳದ್ದೆ ಚಿಂತೆಯಾದರೆ, ಕಂಡವರ ಮಕ್ಕಳನ್ನು ಬೆಳೆಸುವವರು ಯಾರು ಕಂಡವರ ಮಕ್ಕಳನ್ನು ಬೆಳೆಸಿದ ದೇವರಾಜ ಅರಸು ದೇವರಾದರು ಎಂದು ಹೇಳಿದರು. ಸಿದ್ದರಾಮಯ್ಯ, ದೇವೇಗೌಡರು, ಮಹದೇವಪ್ಪ, ಯಡಿಯೂರಪ್ಪ ನೆಲದಿಂದ ಬೆಳೆದು ಬಂದು ನಾಯಕರಾಗಿದ್ದಾರೆ. ಮುಂದಿನ ಪೀಳಿಗೆಗೆ ಅವರು ಏನು ಕೊಟ್ಟರು ಎಂದು ಪ್ರಶ್ನಿಸಿದ್ದಾರೆ. ಕಂಡವರ ಮಕ್ಕಳನ್ನು ಬೆಳೆಸಿದ ದೇವರಾಜ್ ಅರಸ್ ದೇವರಾದರು. ಆದರೆ ಸಿದ್ದರಾಮಯ್ಯನವರು, ಯಡಿಯೂರಪ್ಪನವರು, ಖರ್ಗೆ ಕುಮಾರಣ್ಣ ಎಲ್ಲರಿಗೂ ತಮ್ಮ ಮಕ್ಕಳದ್ದೇ ಚಿಂತೆಯಾದರೆ ಕಂಡವರ ಮಕ್ಕಳನ್ನು ಬೆಳೆಸುವವರಾರು? ! pic.twitter.com/tb1liXDd3b — Prathap Simha (@mepratap) July 29, 2024 ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಪಾವಗಡ: ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ಸೋಮವಾರ ಜೆಡಿಎಸ್ ಮತ್ತು ಬಿಜೆಪಿ ತಾಲ್ಲೂಕು ಘಟಕ ವತಿಯಿಂದ ಚಿತ್ರದುರ್ಗ ಸಂಸದ ಗೋವಿಂದ್ ಕಾರಜೋಳ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಶೀಘ್ರದಲ್ಲಿಯೇ ನೀರಾವರಿ ಯೋಜನೆಗಳ ಕಾಮಗಾರಿ ವೇಗವಾಗಿ ಹೆಚ್ಚಿಸುವಂತೆ ಸಂಬಂಧಿಸಿದ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಕೂಲ ಮಾಡಿಕೊಡಲಾಗುವುದು ಎಂದರು. ಮಹಾದಾಯಿ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಗಳ ಸಮಗ್ರ ವರದಿ ನೀಡಲಾಗಿದೆ. ತಾಲ್ಲೂಕಿನಲ್ಲಿ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಲಾಗುವುದು. ತಿಂಗಳಿಗೊಮ್ಮೆ ತಾಲ್ಲೂಕಿಗೆ ಆಗಮಿಸಿ ಒಂದು ದಿನ ಪೂರ್ತಿ ಜನತೆಯಿಂದ ಅಹವಾಲು ಸ್ವೀಕರಿಸಲಾಗುವುದು ಎಂದು ತಿಳಿಸಿದರು. ಪಾವಗಡ ತಾಲ್ಲೂಕಿಗೆ ನೀರಾವರಿ ಅತ್ಯವಶ್ಯಕತೆ ವೆಂದು ರೈತರಿಗೆ ಅನುಕೂಲವಾಗುವ ರೀತಿ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಮಾತನಾಡಿ, ಹೆಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದು, ಈ ಭಾಗದಲ್ಲಿ ಕಾರ್ಖಾನೆಗಳ ಸ್ಥಾಪನೆಗೆ ಅನುಕೂಲವಾಗಲಿದೆ ಎಂದರು. ಬಿಜೆಪಿ ರಾಜ್ಯ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಮಾತನಾಡಿ, ಲೋಕಸಭಾ ಸದಸ್ಯ ಗೋವಿಂದ ಕಾರಜೋಳ…

Read More

ವಯನಾಡು: ದೇವರನಾಡು ಕೇರಳದಲ್ಲಿ ಪರ್ವತ ಕುಸಿದ ಪರಿಣಾಮ ಬರೋಬ್ಬರಿ 42 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಕಂಡ ಕಂಡಲ್ಲಿ ಮೃತದೇಹಗಳು ಪತ್ತೆಯಾಗುತ್ತಿವೆ. ವಯನಾಡಿನ ಮುಂಡಕ್ಕೈ ಮತ್ತು ಚೂರಲ್ಮಲಾ ಜನ ವಸತಿ ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಒಂದರ ಹಿಂದೊಂದರಂತೆ ಒಟ್ಟು ಮೂರು ಬಾರಿ ಗುಡ್ಡ ಕುಸಿದಿದೆ. ಇದರ ಪರಿಣಾಮ 200ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು, 150ಕ್ಕೂ ಹೆಚ್ಚು ಜನರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಸದ್ಯ ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಅಗ್ನಿಶಾಮಕ ದಳ, ಎನ್​ಡಿಆರ್​ಎಫ್​ ಮತ್ತು ಸ್ಥಳೀಯ ತಂಡಗಳು ಸೇರಿ ಸುಮಾರು 250 ಜನರು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶದಲ್ಲಿ ಮುಂಜಾನೆ ಭೂಕುಸಿತ ಸಂಭವಿಸಿದೆ. ಬೆಳಗ್ಗಿನ ಜಾವ 2–4 ಗಂಟೆಯ ನಡುವೆ ಭೂಕುಸಿತ ಸಂಭವಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಪಿಣರಾಯಿಗೆ ಕರೆ ಮಾಡಿದ್ದಾರೆ. ಘಟನೆ ಬಗ್ಗೆ ಆಲಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ಬೆಂಗಳೂರು: ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಹುದ್ದೆ ಲಭಿಸಿದ್ದು, ಅವರನ್ನು ಲೋಕಸಭಾ ಸಚೇತಕರಾಗಿ ಆಯ್ಕೆ ಮಾಡಿ ನೇಮಕಾತಿ ಆದೇಶವನ್ನು ಬಿಜೆಪಿ ಹೊರಡಿಸಿದೆ. ಬಿಜೆಪಿಯ ಪಾರ್ಲಿಮೆಂಟರಿ ಆಫೀಸ್ ಸೆಕ್ರೇಟರಿ ಡಾ. ಶಿವ್ ಶಕ್ತಿ ನಾಥ್ ಭಕ್ಷಿ ಅವರು ಲೋಕಸಭಾ ಸ್ಪೀಕರ್ ಅವರಿಗೆ ಪತ್ರದಲ್ಲಿ ಹೆಸರನ್ನು ಆಯ್ಕೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಲೋಕಸಭೆಯ ಮುಖ್ಯ ಸಚೇತಕರಾಗಿ ಡಾ.ಸಂಜಯ್ ಜೈಸ್ವಾಲ್ ಅವರನ್ನು ನೇಮಕ ಮಾಡಲಾಗಿದೆ. ಸಚೇತಕರಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ 16 ಮಂದಿಯನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ. ತನ್ನನ್ನು ಸಚೇತಕರನ್ನಾಗಿ ನೇಮಕ ಮಾಡಿರೋದಕ್ಕೆ ಕೋಟಾ ಶ್ರೀನಿವಾಸ್ ಪೂಜಾರಿ ಭಾರತೀಯ ಜನತಾ ಪಾರ್ಟಿಯ ಸಂಸದೀಯ ಮಂಡಳಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಪ್ರಧಾನಿನರೇಂದ್ರ ಮೋದಿಯವರಿಗೆ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾರವರಿಗೆ ಹಾಗೂ ಪಕ್ಷದ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…

Read More

ಬೆಂಗಳೂರು: 384 ಕೆಎಎಸ್ ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ಪೂರ್ವ ನಿಗದಿಯಂತೆ ಆಗಸ್ಟ್ 25 ರಂದೇ ನಡೆಯಲಿದೆ ಎಂದು ಲೋಕಸೇವಾ ಆಯೋಗ ತಿಳಿಸಿದೆ. ಈಗಾಗಲೇ ಪೂರ್ವಭಾವಿ ಪರೀಕ್ಷೆ ದಿನಾಂಕವನ್ನು ಎರಡು ಬಾರಿ ಮರು ನಿಗದಿ ಮಾಡಿರುವ ಕಾರಣ ಮತ್ತೆ ದಿನಾಂಕ ಬದಲಾವಣೆ ಮಾಡದೆ ನಿಗದಿಪಡಿಸಿರುವಂತೆ ಆಗಸ್ಟ್ 25ರಂದೇ ಪರೀಕ್ಷೆ ನಡೆಸಲಾಗುವುದು ತಿಳಿಸಲಾಗಿದೆ. ಆಗಸ್ಟ್ 25ರಂದು ಐಬಿಪಿಎಸ್ ಪರೀಕ್ಷೆ ನಡೆಯುತ್ತಿರುವ ದಿನವೇ ಕೆಎಎಸ್ ಪರೀಕ್ಷೆ ನಡೆಸುವುದರಿಂದ ಎರಡು ಹುದ್ದೆಗಳಿಗೆ ಅರ್ಜಿ ಹಾಕಿದ ಹಲವು ಅಭ್ಯರ್ಥಿಗಳು ಒಂದು ಪರೀಕ್ಷೆಯಿಂದ ವಂಚಿತರಾಗುವ ಕಾರಣ ಮುಂದೂಡುವಂತೆ ಮನವಿ ಮಾಡಲಾಗಿತ್ತು. ಯುಪಿಎಸ್‌ ಸಿ, ಎಸ್.ಎಸ್.ಸಿ., ಕೆಇಎ ಸೇರಿ ವಿವಿಧ ನೇಮಕಾತಿ ಪ್ರಾಧಿಕಾರಗಳ ಪರೀಕ್ಷಾ ದಿನಾಂಕಗಳನ್ನು ಪರಿಶೀಲಿಸಿ ಮಾಹಿತಿ ಪಡೆದು ಈ ಪರೀಕ್ಷೆಯ ದಿನಾಂಕ ನಿಗದಿಪಡಿಸಲಾಗಿದೆ. ಆಗಸ್ಟ್ 25ಕ್ಕೆ ಪೂರ್ವಭಾವಿ ಪರೀಕ್ಷೆ ದಿನಾಂಕ ನಿಗದಿಪಡಿಸಿ ಜೂನ್ 27ರಂದು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

ಕೊರಟಗೆರೆ: ಗಂಡನ ಮುಗಿಸಲು ಮಾಜಿ ಇನ್ಸ್ ಸ್ಟಾಗ್ರಾಂ ಲವರ್ ಮತ್ತು ತಮ್ಮನಿಗೆ ಪತ್ನಿ ಸುಫಾರಿ ನೀಡಿರುವ ಘಟನೆ ನಡೆದಿದ್ದು, ಮಾಜಿ ಲವರ್ ಜೊತೆಗೆ ಸೇರಲು ಅಡ್ಡಿಯಾಗಿದ್ದ ಗಂಡ ಪ್ರಕಾಶ್ ನನ್ನು ಪತ್ನಿ ಹರ್ಷಿತಾ ಬರ್ಬರವಾಗಿ ಹತ್ಯೆ ಮಾಡಿಸಿದ್ದಾಳೆ. ಕೊರಟಗೆರೆ ತಾಲೂಕು ತುಂಬಾಡಿ ಮತ್ತು ಸಿದ್ದರಬೆಟ್ಟ ಸಂಪರ್ಕದ ರಸ್ತೆಯಲ್ಲಿ ಈ ಘಟನೆ ನಡೆದಿದೆ.  ಗುಲ್ಬರ್ಗಾ ಜಿಲ್ಲೆಯ ಚಿಂಚುಳ್ಳಿ ಗ್ರಾಮದ ಪ್ರಕಾಶ(32) ಕೊಲೆಯಾದ ದುರ್ದೈವಿಯಾಗಿದ್ದಾನೆ. 3 ತಿಂಗಳ ಹಿಂದೆಯಷ್ಟೇ ಗಂಡ ಮತ್ತು ಮಗು ಬಿಟ್ಟು ಗುಂಡ ಎಂಬುವನ ಹಿಂದೆ ಹರ್ಷಿತಾ ಹೋಗಿದ್ದಳು. ಈ ವೇಳೆ ಪ್ರಕಾಶ್  ಪೊಲೀಸ್ ಠಾಣೆಗೆ ದೂರು ನೀಡಿ ಹರ್ಷಿತಾಳನ್ನು ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದ. ಕೊರಟಗೆರೆಯಿಂದ ಮಡದಿಯ ಜೊತೆ ಮಲ್ಲೇಕಾವುಗೆ ಪ್ರಕಾಶ್ ತೆರಳುತ್ತಿದ್ದ ವೇಳೆ ಪ್ರಕಾಶನ ಹೆಂಡತಿ ಹರ್ಷಿತಾ ತಮ್ಮ ಸೋಮ ಕರೆ ಮಾಡಿ, ಕುಡಿದು ಟೈಟ್ ಆಗಿದ್ದೀನಿ ಬಂದು ಕರೆದುಕೊಂಡು ಹೋಗು ಎಂದು ಹೇಳಿದ್ದು, ಹತ್ತಾರು ಬಾರಿ ಮತ್ತೆ ಮತ್ತೆ ಕರೆ ಮಾಡಿದ್ದ. ಹೀಗಾಗಿ  ಮಡದಿಯನ್ನ ಮನೆಗೆ ಬಿಟ್ಟು…

Read More

ನವದೆಹಲಿ: ದೆಹಲಿ ಕೋಚಿಂಗ್‌ ಸೆಂಟರ್‌ ದುರಂತ, ಅಗ್ನಿಪಥ್‌ ಯೋಜನೆ ಸೇರಿದಂತೆ ಹಲವು ವಿಚಾರಗಳನ್ನಿಟ್ಟುಕೊಂಡು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ಪ್ರಶ್ನೆಗಳಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಲೆ ಚಚ್ಚಿಕೊಂಡು ವಿಡಿಯೋ ವೈರಲ್ ಆಗಿದೆ. ರಾಹುಲ್ ಗಾಂಧಿ, ಹಲ್ವಾ ಕಾರ್ಯಕ್ರಮ ದ ಫೋಟೋ ಪ್ರದರ್ಶನ ಮಾಡಿದಾಗ ನಿರ್ಮಲಾ ಸೀತಾರಾಮನ್ ಅವರು ನಗುತ್ತಾ ಮುಖ ಮುಚ್ಚಿಕೊಂಡರು. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ ಅಲ್ಲದೇ ಹಲವು ಪರ ವಿರೋಧ ಟೀಕೆಗಳು ವ್ಯಕ್ತವಾಗಿವೆ. ಕೇಂದ್ರ ಬಜೆಟ್ ನ್ನು ಮಧ್ಯಮ ವರ್ಗ, ಹಿಂದುಳಿದ ವರ್ಗಗಳ ವಿರೋಧಿ ಬಜೆಟ್ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಟೀಕಾ ಪ್ರಹಾರ ನಡೆಸಿದರು. ರಾಹುಲ್ ಗಾಂಧಿ ಬಜೆಟ್ ಪೂರ್ವದಲ್ಲಿ ನಡೆಯುವ ಸಾಂಪ್ರದಾಯಿಕ ಹಲ್ವಾ ಸಮಾರಂಭದ ಪೋಸ್ಟರ್ ನ್ನು ಪ್ರದರ್ಶಿಸಿದ್ದು, ಬಜೆಟ್ ತಯಾರಿಕೆಯ ತಂಡದಲ್ಲಿದ್ದ 20 ಅಧಿಕಾರಿಗಳ ಪೈಕಿ ದಲಿತರು, ಒಬಿಸಿ, ಆದಿವಾಸಿಗಳು ಇಲ್ಲವೇ ಇಲ್ಲ. 20 ಅಧಿಕಾರಿಗಳ ಪೈಕಿ ಯಾರೊಬ್ಬರೂ…

Read More

ತುಮಕೂರು:  ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಜ್ವರದ ಲಕ್ಷಣ ಸೇರಿದಂತೆ ಡೆಂಗ್ಯೂ ರೋಗ ಲಕ್ಷಣಗಳು ಕಂಡು ಬಂದವರ ರಕ್ತ ಮಾದರಿ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಲೇರಿಯಾ ಅಧಿಕಾರಿ ಡಾ. ಚಂದ್ರಶೇಖರ್‌ಗೆ ಸೂಚನೆ ನೀಡಿದರು. ಜಿಲ್ಲಾ ಆಸ್ಪತ್ರೆ ಡೆಂಗ್ಯೂ ವಾರ್ಡಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ರಕ್ತ ಮಾದರಿ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವುದರಿಂದ ಡೆಂಗ್ಯೂ ದೃಢಪಟ್ಟ ಪ್ರಕರಣಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು  ಅನುಕೂಲವಾಗುತ್ತದೆ. ನಂತರ ರೋಗಿಗಳ ಆರೋಗ್ಯ ಪರಿಸ್ಥಿತಿ, ರಕ್ತದ ಒತ್ತಡದ ಮಾಹಿತಿಯನ್ನು ಪಡೆದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗಿ ದೃಢಪಟ್ಟವರಿಗೆ ಚಿಕಿತ್ಸೆ ನೀಡಲು ನಿರ್ದೇಶನ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಮಕ್ಕಳ ವಾರ್ಡಿಗೆ ಭೇಟಿ ನೀಡಿ ಅವರಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಪರಿಶೀಲಿಸಿದರು. ಮಕ್ಕಳಿಗೆ ಸೊಳ್ಳೆ ಕಚ್ಚದಂತೆ ಸೊಳ್ಳೆ ಪರದೆ ವ್ಯವಸ್ಥೆ ಮಾಡಬೇಕು ಎಂದರಲ್ಲದೆ, ಜಿಲ್ಲಾ ಆಸ್ಪತ್ರೆಗೆ ಎಷ್ಟು ಬಾರಿ ಭೇಟಿ ನೀಡಿ ಸೂಚನೆ ನೀಡಿದ್ದರೂ ಸ್ವಚ್ಛತೆ ಕಾಪಾಡುವಲ್ಲಿ ಇನ್ನೂ…

Read More

ಮಧುಗಿರಿ : ವ್ಯಕ್ತಿಯೋರ್ವ ತನ್ನ ಕಿರಿಯ ಪತ್ನಿ ಹಾಗೂ ಆಕೆಯ ಪುತ್ರನಿಗೆ ಗಂಭೀರವಾಗಿ ಹಲ್ಲೆ ನಡೆಸಿ, ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ರೂ. 1,00,000 ದಂಡ ಹಾಗೂ ಭಾ.ದಂ.ಸಂ ಕಲಂ:326 ಅಡಿಯಲ್ಲಿ 3 ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ಮಧುಗಿರಿಯ ಗೌರವಾನ್ವಿತ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಈ ಘಟನೆ ಕೊರಟಗೆರೆ ಟೌನ್ ವ್ಯಾಪ್ತಿಯ ಕಾಳಿದಾಸನಗರ ಶ್ರೀನಿವಾಸ ಪದವಿ ಪೂರ್ವ ಕಾಲೇಜು ಬಳಿ ನಡೆದಿತ್ತು. ಆರೋಪಿ ಚಾಂದ್ ಪಾಷ ಹೆಸರಿನಲ್ಲಿ ಕೊರಟಗೆರೆ ಟೌನ್ ಹನುಮಂತಪರ ಸರ್ವೆನಂ 52/2ರಲ್ಲಿ 01.01 ಗುಂಟೆ ನಿವೇಶನ ಇದ್ದು, ಸದರಿ ನಿವೇಶನವನ್ನು ಆರೋಪಿಯು ಮಾರಾಟ ಮಾಡಿ ಬಂದ ಹಣದಲ್ಲಿ ತನ್ನ ಹಿರಿಯ ಹೆಂಡತಿಯ ಮಗಳಾದ ರೇಷ್ಮಾ ರವರಿಗೆ ಒಡವೆಗಳನ್ನು ಮಾಡಿಸಿ ಕೊಡಲು ಮುಂದಾಗಿದ್ದು, ಇದಕ್ಕೆ ಕಿರಿಯ ಪತ್ನಿಯ ಮಗಳಾದ ಜಬೀನ್ ತಾಜ್ ಹಾಗೂ ಮಗ ಮಹಮ್ಮದ್ ಅಲಿ ಅಡ್ಡಿ ಪಡಿಸುತ್ತಿದ್ದಾರೆ ಎಂದು…

Read More