Author: admin

ಮುಂದಿನ ವರ್ಷ ನಾನು ಇರ್ತೇನೋ ಇಲ್ವೊ ಗೊತ್ತಿಲ್ಲ, ನನ್ನದೊಂದು ಮನವಿ ಆಲಿಸಿ ಎಂದು ಅಧಿವೇಶದಲ್ಲಿ ದೇವೇಗೌಡರು ಮಾತಾನ್ನಾಡಿದ್ದಾರೆ. ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದರು. ನಾನು ಸಾಕಷ್ಟು ನೀರಿನ ವ್ಯಾಜ್ಯ ಬಗೆಹರಿಸಿದ್ದೇನೆ. ಮುಂದಿನ ಬಜೆಟ್ ವೇಳೆಗೆ ಇರ್ತೇನೋ ಇಲ್ವೊ ಗೊತ್ತಿಲ್ಲ. ಹಾಗಾಗಿ ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರು ನಗರದಲ್ಲಿ ಕುಡಿಯುವ ನೀರು ಸಮಸ್ಯೆ ಇದೆ. ನಾನು ಯಾರನ್ನು ಟೀಕಿಸಲು ಹೋಗುವುದಿಲ್ಲ. ಹಣಕಾಸು ಸಚಿವರು ಕರ್ನಾಟಕದಿಂದ ಆಯ್ಕೆ ಆಗಿದ್ದಾರೆ. ಜನರು ಕುಡಿಯುವ ನೀರಿಲ್ಲದೇ ಸಂಕಷ್ಟದಲ್ಲಿದ್ದಾರೆ ಎಂದಿದ್ದಾರೆ. ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಲಾಗಿತ್ತು. ಈಗ ಮಳೆಯಿಂದ ಎಲ್ಲವೂ ಸುಗಮವಾಗಿದೆ. ಒಂದು ಮಳೆ ಬರದಿದ್ದರೆ ಪರಿಸ್ಥಿತಿ ಏನು ಹೇಳಿ ಎಂದು ಪ್ರಶ್ನಿಸಿದ್ದಾರೆ. ಹಳೇ ಮೈಸೂರು ಭಾಗ, ಬೆಂಗಳೂರಿಗೆ ಇದೇ ಆಧಾರ. ಇದಕ್ಕಾಗಿ ಜನರು ಎನ್‌ಡಿಎಗೆ ಮತವನ್ನ ಹಾಕಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರ ಬಜೆಟ್ ಹೃದಯಪೂರ್ವಕವಾಗಿ ಬೆಂಬಲಿಸುತ್ತೇನೆ. 1991ರಲ್ಲಿ ಸಂಸತ್ಗೆ ಬಂದೆ, ಈಗ ನನಗೆ 92 ವರ್ಷ. ಮುಂದಿನ ಬಜೆಟ್ ಬಗ್ಗೆ…

Read More

ಮದ್ಯಪ್ರಿಯರಿಗೆ ಮತ್ತೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಕಳೆದ ತಿಂಗಳಷ್ಟೇ ಬಿಯರ್ ಬೆಲೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಬೆಲೆ ಏರಿಕೆ ಮಾಡಿದ್ದು, ಒಂದೂವರೆ ವರ್ಷದಲ್ಲಿ ಐದನೇ ಬಾರಿಗೆ ಬಿಯರ್ ದರ ಹೆಚ್ಚಳವಾಗಿದೆ. ಪ್ರತಿ ಬಾಟಲ್ ಗೆ 5 -20 ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ. ಕೆಲವು ಕಂಪನಿಗಳ ಬಿಯರ್ ದರ ಕಳೆದ ಗುರುವಾರದಿಂದ ಏರಿಕೆಯಾಗಿದೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ, ಬುಧವಾರ ಜಾರಿಯಾಗಲಿದೆ. ಎಲ್ಲಾ ಬ್ರಾಂಡ್ ಗಳ ಬಿಯರ್ ಬೆಲೆ ಪ್ರತಿ ಬಾಟಲಿಗೆ ಕನಿಷ್ಠ 5 ರಿಂದ 20 ರೂಪಾಯಿವರೆಗೆ ಹೆಚ್ಚಳವಾಗಲಿದೆ. ಸರ್ಕಾರ ಬಿಯರ್ ಮೇಲಿನ ತೆರಿಗೆಯನ್ನು ಕಳೆದ ಜುಲೈ 1 ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿದೆ. ಪ್ರತಿ ಬಾಟಲ್ ಬಿಯರ್ ಬೆಲೆ ಕನಿಷ್ಠ 10 ರೂಪಾಯಿ ಜಾಸ್ತಿಯಾಗಿತ್ತು. ನಂತರ ಬಿಯರ್ ಉತ್ಪಾದನಾ ಕಂಪನಿಗಳು ಕಚ್ಚಾ ಸಾಮಗ್ರಿ ದರ ಹೆಚ್ಚಳ ಕಾರಣ ನೀಡಿ ಪ್ರತಿ ಬಿಯರ್ ಬಾಟಲ್ ಮೇಲೆ ಕನಿಷ್ಠ 5 ರಿಂದ 20 ರೂಪಾಯಿ ಹೆಚ್ಚಳಕ್ಕೆ ತೀರ್ಮಾನಿಸಿವೆ.…

Read More

ತಿಪಟೂರು: ನಗರದ ಶ್ರೀಬಿಎಂಸಿ ರೆಸಿಡೆನ್ಸಿಯಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಮಾವೇಶ ನಡೆಯಿತು. ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಹರಿಸಮುದ್ರ ಗಂಗಾಧರ್, ಬಿಸ್ಲೆಹಳ್ಳಿ ಜಗದೀಶ್, ಗಂಗರಾಜು, ಪ್ರಸನ್ನ ಕುಮಾರ್, ರಾಮಮೋಹನ್, ಗುಲಾಬಿ, ಸುರೇಶ್, ಬಳ್ಳೇಕಟ್ಟೆ ಸುರೇಶ್, ಹಾಯ್ರಳ್ಳಿ ಶಂಕ್ರಪ್ಪ, ನಾಗರಾಜ್ ಹಾಲ್ಕುರ್ಕೆ, ಕ್ಯಾಪ್ಟನ್ ಲೋಕೇಶ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ನಾವು ಈ ಬಾರಿ ತುಮಕೂರು ಲೋಕಸಭಾ ಸಂಸತ್ ಸದಸ್ಯ ವಿ.ಸೋಮಣ್ಣನವರಿಗೆ ಅತ್ಯಧಿಕ ಮತಗಳಿಂದ ಜಯಗಳಿಸಿ ಕೊಟ್ಟಿದ್ದೇವೆ. ಸೋಮಣ್ಣನವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ತಿಪಟೂರಿನ ಬಗ್ಗೆ ಅವರಿಗೆ ಅಪಾರ ಗೌರವ ಮತ್ತು ಹೆಮ್ಮೆ ಇದೆ. ಕಾರಣ ಇಷ್ಟೇ ತಿಪಟೂರಿನ ಕಾರ್ಯಕರ್ತರು ಯಾವುದೇ ಪ್ರತಿ ಫಲ ಮತ್ತು ಯಾವುದೇ ಆಸೆಗಳಿಲ್ಲದೆ ನನ್ನನ್ನು ಅಧಿಕ ಮತಗಳಿಂದ ಗೆಲ್ಲಿಸಿದ್ದಾರೆ ಎಂದು ಸೋಮಣ್ಣ ಇಂದಿಗೂ ತಿಪಟೂರಿನ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದಾರೆ ಎಂದರು. ತಿಪಟೂರಿನ ಪ್ರಧಾನ ಭಾಜಪ ಕಾರ್ಯಕರ್ತರು ಇಂದಿನಿಂದಲೇ ನಾವು ಪ್ರತಿ ಮನೆಯಲ್ಲಿ ಏಕೆ…

Read More

ಬಿಟ್ರೋಟ್ ಸೇವನೆ ಈ ನಾಲ್ಕು ರೋಗಗಳನ್ನು ಬೇರಿನಿಂದಲೇ ನಿರ್ನಾಮ ಮಾಡಲು ಸಹಕಾರಿಯಾಗಿದೆ. ಬಿಟ್ರೋಟ್ ನಲ್ಲಿ ಫೈಬರ್,ನೈಸರ್ಗಿಕ ಸಕ್ಕರೆ,ಮೆಗ್ನೀಸಿಯಮ್, ಸೋಡಿಯಂ ಕೂಡಾ ಅಧಿಕವಾಗಿದೆ. ಪೊಟ್ಯಾಸಿಯಮ್ ಕೂಡಾ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಬೀಟ್ರೂಟ್ ಅನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರ ಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ. * ಬೆಳಗ್ಗೆ ದಿನವೂ ಬೀಟ್ರೋಟ್ ಜ್ಯೂಸ್ ಸೇವನೆ ಮಾಡುವುದರಿಂದ ಮೂತ್ರಕ್ಕೆ ಸಂಬಂಧಿಸಿದ ರೋಗಗಳ ನಿರ್ನಾಮ ಮಾಡಲು ಸಾಧ್ಯವಿದೆ. ಮೂತ್ರದ ಸೋಂಕು, ಮೂತ್ರ ಮಾಡಲು ಅಸಮರ್ಥತೆ, ಮೂತ್ರದಲ್ಲಿ ಸುಡುವಂತಹ ಸಂವೇದನೆಗಳಿಂದ ಮುಕ್ತಿ ನೀಡಲು ಬಿಟ್ರೋಟ್ ಸಹಕಾರಿಯಾಗಿದೆ. * ನಮ್ಮ ದೇಹದಲ್ಲಿ ನೀರಿನಾಂಶ ಕಡಿಮೆಯಾಗಬಾರದು. ಹಾಗೇನಾದ್ರೂ ನೀರಿನಾಂಶದ ಕೊರೆತೆಯಾದರೆ. ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ. ಬಿಟ್ರೋಟ್ ದೇಹದಲ್ಲಿ ನೀರಿನಾಂಶದ ಕೊರತೆಯಾಗದಂತೆ ಕಾಪಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಬಿಟ್ರೋಟ್ ಸೇವನೆಯಿಂದ ದೇಹದಲ್ಲಿ ನೀರಿನಾಂಶದ ಕೊರತೆ ಬಾರದಂತೆ ಕಾಪಾಡಿಕೊಳ್ಳಲು ಸಾಧ್ಯ * ಹೆಚ್ಚುತ್ತಿರುವ ತೂಕ, ಹೊಟ್ಟೆ ಮತ್ತು ಸೊಂಟದ ಕೊಬ್ಬಿನಿಂದ ತೊಂದರೆಗೊಳಗಾದವರು ಬಿಟ್ರೋಟ್ ಸೇವನೆ ಮಾಡಬಹುದು. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಬರ್ ಅಂಶ ಇರುವುದರಿಂದ…

Read More

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರು, ಮನೆ ಊಟಕ್ಕಾಗಿ ಕಾನೂನು ಸಮರ ಮುಂದುವರಿಸಿದ್ದಾರೆ. ಇತ್ತೀಚೆಗೆ ದರ್ಶನ್ ಅವರು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರ್ಜಿಯನ್ನು ವಜಾ ಗೊಳಿಸಿತ್ತು. ಇದೀಗ ಮ್ಯಾಜಿಸ್ಟ್ರೇಟ್ ಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ನಟ ದರ್ಶನ್ ಅವರಿಗೆ ಜೈಲಿನ ಊಟದಿಂದಾಗಿ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಅತಿಸಾರ ಭೇದಿಯಾಗುತ್ತಿದೆ ಎಂದು ದೂರಿದ್ದರು. ತನಗೆ ಮನೆಯ ಊಟಕ್ಕೆ ಅವಕಾಶ ನೀಡಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ದರ್ಶನ್ ಕೋರ್ಟ್ ಮುಂದಿಟ್ಟಿದ್ದಾರೆ. ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರಿಗೆ ಮನೆ ಊಟ ಸಿಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ವಂದೇ ಭಾರತ್ ರೈಲಿನಲ್ಲಿ ಸಸ್ಯಾಹಾರದ ಬದಲು ಮಾಂಸಾಹಾರದ ಆಹಾರ ನೀಡಿದ ಹಿನ್ನಲೆಯಲ್ಲಿ ವೃದ್ಧ ಪ್ರಯಾಣಿಕರೊಬ್ಬರು ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜುಲೈ 26ರಂದು ಈ ಘಟನೆ ನಡೆದಿದೆ. ಕಪಾಳಮೋಕ್ಷ ಮಾಡಿರುವ ವಿಡಿಯೋವನ್ನು ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಹ–ಪ್ರಯಾಣಿಕ ಕುನಾಲ್ ವರ್ಮಾ ಅವರು ತಮ್ಮ ‘ಎಕ್ಸ್’ ಪುಟದಲ್ಲಿ ಹಂಚಿಕೊಂಡಿದ್ದು, ಘಟನೆಯನ್ನು ವಿವರಿಸಿದ್ದಾರೆ. ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ದರೊಬ್ಬರು ಸಸ್ಯಾಹಾರವನ್ನು ಆರ್ಡರ್ ಮಾಡಿದ್ದರು. ಆದರೆ ತಪ್ಪಿ ಮಾಂಸಾಹಾರವನ್ನು ನೀಡಲಾಯಿತು. ಪ್ರಯಾಣಿಕ ಆಹಾರ ಪ್ಯಾಕೆಟ್ ಅನ್ನು ತೆರೆದು ಒಂದು ಭಾಗದಷ್ಟು ಆಹಾರವನ್ನು ಸೇವಿಸಿದ ನಂತರ ಮಾಂಸಹಾರವೆಂದು ತಿಳಿದಿದ್ದು ನಂತರ ಕೋಪಗೊಂಡ ಪ್ರಯಾಣಿಕ ರೈಲಿನಲ್ಲಿ ಗಲಾಟೆ ಮಾಡಿ ರೈಲಿನ ಕ್ಯಾಟರಿಂಗ್ ವಿಭಾಗಕ್ಕೆ ಕರೆ ಮಾಡಲು ಒತ್ತಾಯಿಸಿದ್ದಾರೆ. ನಂತರ, ಸ್ವಲ್ಪ ಸಮಯದಲ್ಲಿ ಪೋಲೀಸ್ ಸಿಬ್ಬಂದಿಯೊಂದಿಗೆ ಅಡುಗೆ ವಿಭಾಗದ ಸಿಬ್ಬಂದಿಗಳು ಮತ್ತು ಊಟ ಬಡಿಸಿದ ಸಿಬ್ಬಂದಿ ಬಂದರು. ಸಿಬ್ಬಂದಿಯನ್ನು ನೋಡಿದ ಕೂಡಲೇ ವೃದ್ಧ ಪ್ರಯಾಣಿಕ…

Read More

ಹಾಸನ: ಸತತ ಮಳೆಯಿಂದ ಹಾಸನದ ಶಿರಾಡಿ ಘಾಟಿಯಲ್ಲಿ ರಸ್ತೆಯ ಮೇಲೆ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದೆ. ಮಣ್ಣಿನಡಿ ಹಲವು ವಾಹನಗಳು ಸಿಲುಕಿಕೊಂಡಿದ್ದು.ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಭೂಕುಸಿತ ಸಂಭವಿಸಿದ ಹಿನ್ನಲೆಯಲ್ಲಿ ಘಾಟಿಯಲ್ಲಿ ವಾಹನ ಸಂಚಾರ ಸಂಪೂರ್ಣ ರದ್ದುಗೊಳಿಸಲಾಗಿದೆ. ಭೂಕುಸಿತದಲ್ಲಿ ಎರಡು ಕಾರುಗಳು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿವೆ ವಾಹನಗಳಲ್ಲಿ ಇದ್ದವರನ್ನು ರಕ್ಷಿಸಲಾಗಿದೆ. ಇನ್ನು ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಸಿಬ್ಬಂದಿಗಳು ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದು ಸ್ಥಳದಲ್ಲಿ ಮತ್ತಷ್ಟು ಮಣ್ಣು ಕುಸಿಯುವ ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ತಿಪಟೂರು: ಧರ್ಮಸ್ಥಳ ಸಂಘದ ವತಿಯಿಂದ ಗ್ರಾಮಾಂತರ ತಾಲೂಕಿನ ಬಜಗೂರು -B ಕಾರ್ಯಕ್ಷೇತ್ರದಲ್ಲಿ ಒಕ್ಕೂಟ ಸಭೆ ಹಮ್ಮಿಕೊಳ್ಳಲಾಗಿತ್ತು. ಯೋಜನಾಧಿಕಾರಿಗಳು ಸರ್ವ ಸದಸ್ಯರ ಪ್ರಬುದ್ಧತೆ ನಮ್ಮ ಬದ್ಧತೆ ಎಂಬ ವಿಷಯವಾಗಿ, ಸಂಘದ ಗುಣಮಟ್ಟ, PRK, ವಾರದ ಸಭೆ, ಜನಮಂಗಳ, ಕಾರ್ಯಕ್ರಮ, ಪ್ರಗತಿ ನಿಧಿ, ದಾಖಲಾತಿ ನಿರ್ವಹಣೆ, ಸದಸ್ಯರ ಸೇರ್ಪಡೆ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ಸುರೇಶ್ , ಒಕ್ಕೂಟ ಅಧ್ಯಕ್ಷರು ಮಂಜಣ್ಣ, ವಲಯ ಮೇಲ್ವಿಚಾರಕ ಮಧು, ವಿಚಕ್ಷಣೆ ಅಧಿಕಾರಿ ಶ್ರೀಕಾಂತ್, JVK ಸಮಾನ್ವಯಧಿಕಾರಿ ಭಾಗ್ಯಲಕ್ಷ್ಮೀ, ಸೇವಾಪ್ರತಿನಿಧಿ ಶ್ವೇತಾ ಉಪಸ್ಥಿತರಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ತುಮಕೂರು: ಮನೆಯ ಬೀಗ ಮುರಿದು 6 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿರೋ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ವಿದ್ಯಾನಗರದಲ್ಲಿ ನಡೆದಿದೆ. ರಂಗನಾಥ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು ಅವರು ವಕೀಲ ವೃತ್ತಿ ಮಾಡುತ್ತಿದ್ದಾರೆ. ರಂಗನಾಥ್ ಕುಟುಂಬ ಊರಿಗೆ ತೆರಳಿದ್ದ ವೇಳೆ ಕಳ್ಳತನ ನಡೆದಿದೆ. ರಂಗನಾಥ್ ಮನೆಗೆ ವಾಪಸ್ ಬಂದಾಗ ಕಳ್ಳತನ ಕೃತ್ಯ ಪತ್ತೆಯಾಗಿದೆ. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಬೆಳಗಾವಿ: ಇತ್ತೀಚೆಗಷ್ಟೇ ದೇಶಕ್ಕೆ ಗಂಡಾಂತರ ಕಾದಿದೆ ಎಂದು ಭವಿಷ್ಯ ನುಡಿದಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಇದೀಗ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಬೆಳಗಾವಿಯ ರಾಮತೀರ್ಥನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಸಹ ಇವೆ. ವಿಶೇಷವಾಗಿ ಕಪ್ಪು, ಬೆಳಕಿನಲ್ಲಿ ಕಪ್ಪು ಹೆಚ್ಚಾಗಿದೆ ಎಂದರು. ಒಗಟು ರೂಪದಲ್ಲಿ ಭವಿಷ್ಯ ನುಡಿದ ಶ್ರೀಗಳು, ರಾಷ್ಟ್ರ ರಾಜಕಾರಣದ ಬಗ್ಗೆ, ಮಹಾಭಾರತದಲ್ಲಿ ಕೃಷ್ಣ ಇದ್ದ ಎಂದು ಭೀಮ ಗೆದ್ದ. ದುರ್ಯೋಧನ ಸೋತ. ರಾಷ್ಟ್ರ ರಾಜಕಾರಣದಲ್ಲಿ ಕೃಷ್ಣ ಇಲ್ಲ. ದುರ್ಯೋಧನ ಗೆಲ್ಲುತ್ತಾನೆ. ಭೀಮ ಸೋಲುತ್ತಾನೆ. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮಹಾಭಾರತದಲ್ಲಿ ಅಭಿಮನ್ಯುವನ್ನು ಮೋಸದಿಂದ ಕತ್ತರಿಸುತ್ತಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಸದ್ಯಕ್ಕೆ ತೊಂದರೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರು ಮತವನ್ನು ದಾನ ಮಾಡುತ್ತಿಲ್ಲ. ಮಾರಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಈ ಹಿಂದೆ ತಾನು ರಾಜ್ಯದಲ್ಲಿ ಭೀಕರ ಮಳೆಯಾಗುತ್ತದೆ. ಗುಡ್ಡ ಕುಸಿತವಾಗುತ್ತದೆ. ಸಾವು, ನೋವು ಸಂಭವಿಸುತ್ತದೆ ಎಂದು ಹೇಳಿದ್ದೆ. ಅದು ಅಮವಾಸ್ಯೆಯವರೆಗೂ…

Read More