Subscribe to Updates
Get the latest creative news from FooBar about art, design and business.
- ಬೆಳೆ ನಷ್ಟ ತಪ್ಪಿಸಲು ಫಸಲ್ ಬಿಮಾ ತಪ್ಪದೇ ನೋಂದಾಯಿಸಿ: ರೈತರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ
- ತುಮಕೂರು: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
- ಹಡಪದ ಅಪ್ಪಣ್ಣರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪ: ತಹಶೀಲ್ದಾರ್ ಮೋಹನಕುಮಾರಿ
- ಸಂತಪೂರ ಗ್ರಾಮ ಪಂಚಾಯತಿಯಲ್ಲಿ ‘ನನ್ನ ಸ್ವತ್ತು ನನ್ನ ಹಕ್ಕು’ ಅಭಿಯಾನಕ್ಕೆ ಚಾಲನೆ
- ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಸಂಕಲ್ಪ: ಕೊರಟಗೆರೆಯಲ್ಲಿ ಪೊಲೀಸ್ ಇಲಾಖೆಯಿಂದ ಬೃಹತ್ ಜಾಗೃತಿ ಅಭಿಯಾನ
- ಕುಣಿಗಲ್: ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಜಮಾ–ಖರ್ಚು ವಿವರ ಘೋಷಣೆ
- ಬೀದರ್ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಭಾಲ್ಕಿ ವಕೀಲರ ಸಂಘ ಆಗ್ರಹ
- ಬಡವರಿಗೆ ಮಾಡುವ ಸಹಾಯ ದೇವರಿಗೆ ಸಾಲ ಕೊಟ್ಟಂತೆ: ಇಮ್ಯಾನುವೆಲ್ ದರ್ಬಾರೆ
Author: admin
ಆಷಾಢ ಮಾಸದ ಶುಕ್ರವಾರವನ್ನು ಆಷಾಢ ಶುಕ್ರವಾರವೆಂದು ಕರೆಯಲಾಗುತ್ತದೆ. ಈ ದಿನವನ್ನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಕೆಲವರು ಆಷಾಢ ಮಾಸದ ಇಡೀ ತಿಂಗಳು ಲಕ್ಷ್ಮಿಯನ್ನು ಪೂಜಿಸುತ್ತಾರೆ. ಇನ್ನು ಕೆಲವರು ಆಷಾಢದಲ್ಲಿ ಶುಕ್ರವಾರದಂದು ವಿಶೇಷ ಪೂಜೆ ಸಲ್ಲಿಸಲಾಗುವುದು. ಆಷಾಢ ಮಾಸದಲ್ಲಿ ಹಲವಾರು ಪ್ರಮುಖ ವ್ರತಗಳನ್ನು ಆಚರಿಸಲಾಗುವುದು. ಅದರಲ್ಲೊಂದು ಆಷಾಢ ಶುಕ್ರವಾರ. ಆಷಾಢ ಮಾಸದಲ್ಲಿ ದೇವಿ ಶಕ್ತಿಗಳನ್ನು ಆರಾಧಿಸಲಾಗುವುದು. ಈ ತಿಂಗಳಿನಲ್ಲಿ ದೇವಿಯ ಶಕ್ತಿ ಭೂಮಿಯ ಮೇಲೆ ಅಧಿಕವಿರುತ್ತದೆ, ಇದರಿಂದಾಗಿ ದೇವಿಯನ್ನು ಆರಾಧಿಸುವುದರಿಂದ ಅನೇಕ ಪ್ರಯೋಜನಗಳು ಸಿಗುವುದು. ಶಕ್ತಿಯ ಆರಾಧನೆ ಇರುವ ದೇವಸ್ಥಾನಗಳಲ್ಲಿ ಈ ಮಾಸ ವಿಶೇಷ. ಉದಾರಣೆಗೆ ಮೈಸೂರಿನ ಚಾಮುಂಡಿ ದೇವಾಲಯ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಾಲಯ ಮುಂತಾದ ಕಡೆಗಳೆಲ್ಲ ಶಕ್ತಿ ಆರಾಧನೆಗೆ ಹೆಸರುವಾಸಿ, ಇಲ್ಲಿ ಆಷಾಢ ಶುಕ್ರವಾರಗಳಂದು ವಿಶೇಷ ಪೂಜೆ ನೆರವೇರುತ್ತದೆ. ಅಂದು ಅಲ್ಲಿ ದರ್ಶನ ಪಡೆಯುವುದು ಕೂಡ ಪುಣ್ಯಕಾರ್ಯ. ಆಷಾಢ ಮಾಸದ ಮತ್ತೊಂದು ಮಹತ್ವ. ಈ ಅವಧಿಯಲ್ಲಿ ರಥ ಯಾತ್ರೆ, ಚಾರ್ತುಮಾಸ ಯಾತ್ರೆ, ಪಾಲ್ಕಿ ಯಾತ್ರೆ ಮುಂತಾದ ಪೂಜೆ…
ತಂತಿ ಬೇಲಿ ಬಳಿ ಮೂತ್ರ ವಿಸರ್ಜನೆ ಮಾಡುವಾಗ ವಿದ್ಯುತ್ ತಗುಲಿ ಯುವಕ ಸಾವನ್ನಪ್ಪಿದ ಘಟನೆ ಶಿವಮೊಗ್ಗ ರಿಪ್ಪನ್ ಪೇಟೆಯ ಗವಟೂರಿನ ಹಳೂರು ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್ ಎಸ್ (19) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಬೆಳಗಿನಜಾವ ಯುವಕನ ಮನೆ ಮುಂಭಾಗದಲ್ಲಿ ಘಟನೆ ನಡೆದಿದೆ. ಮನೆ ಮುಂಭಾಗದ IBX ತಂತಿ ಬೇಲಿ ಬಳಿಯಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಕರೆಂಟ್ ಶಾಕ್ ಹೊಡೆದಿದೆ. ಮನೆ ಮುಂಭಾಗದ ಬೇಲಿ ಮೇಲೆ ವಿದ್ಯುತ್ ವೈರ್ ತುಂಡಾಗಿ ಬಿದ್ದಿತ್ತು. ಏಕಾಏಕಿ ವಿದ್ಯುತ್ ಪ್ರವಹಿಸಿ ಬೇಲಿಯ ಮೇಲೆ ಬಿದ್ದ ಯುವಕನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ ಎನ್ನಲಾಗಿದೆ. ಕಾರ್ತಿಕ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಬಿಎ ವ್ಯಾಸಂಗ ಮಾಡುತಿದ್ದ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್…
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಡೆಂಗ್ಯೂ ಮುಂತಾದ ರೋಗಗಳ ಕುರಿತು ರಾಜ್ಯದ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸುತ್ತೋಲೆ ಹೊರಡಿಸಿದೆ. ರಾಜ್ಯದಲ್ಲಿ ಪ್ರಸ್ತುತ ಡೆಂಗ್ಯೂ, ಚಿಕನ್ ಗುನ್ಯ ಮುಂತಾದ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ರೋಗಗಳು ಹರಡದಂತೆ ನಿಯಂತ್ರಿಸಲು ಸಂಬಂಧಿಸಿದ ಇಲಾಖೆಗಳು ಮತ್ತು ಶಾಲೆಗಳು ಸೇರಿದಂತೆ ಸಮುದಾಯದ ಸಹಭಾಗಿತ್ವದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಈ ರೋಗಗಳ ಲಕ್ಷಣಗಳು ಕಂಡು ಬಂದಲ್ಲಿ ವಹಿಸಬೇಕಾದ ಅಗತ್ಯ ಕ್ರಮಗಳ ಕುರಿತು ವಿಸ್ತ್ರತವಾದ ಮಾರ್ಗಸೂಚಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ವತಿಯಿಂದ ಉಲ್ಲೇಖ ಮಾಡಿ ಸುತ್ತೋಲೆ ಹೊರಡಿಸಿದೆ. ಶಾಲಾ ಆವರಣದಲ್ಲಿ ಹಾಗೂ ಸುತ್ತಮುತ್ತಲಿನ ಜಾಗಗಳಲ್ಲಿ ಮತ್ತು ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ಶೇಖರಣೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸತಕ್ಕದ್ದು ಮತ್ತು ಇಂತಹ ಸನ್ನಿವೇಶಗಳ ಹತ್ತಿರ ಶಾಲಾ ವಿದ್ಯಾರ್ಥಿಗಳು ಸುತ್ತಾಡದಂತೆ ಅಗತ್ಯ ಮುನ್ನೆಚ್ಚರಿಕೆ…
ತುಮಕೂರು : ಅಂಗನವಾಡಿ ಕೇಂದ್ರದಲ್ಲಿ ಕುಕ್ಕರ್ ಸ್ಪೋಟಗೊಂಡು ಕೆಲಕಾಲ ಗಾಬರಿ ಹುಟ್ಟಿಸಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಬಳಿಯ ಸಿ.ಯಡವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೆಲ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂಗನವಾಡಿಯಲ್ಲಿ 14 ಮಕ್ಕಳು ಇದ್ದರು. ಸಿ ಯಡವನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂದು ಮಧ್ಯಾಹ್ನ ಮಕ್ಕಳಿಗೆ ಊಟ ತಯಾರಿಸುವಾಗ ಕುಕ್ಕರ್ ಸ್ಪೋಟಗೊಂಡಿದೆ. ಕೂಡಲೇ ಮಕ್ಕಳನ್ನ ಅಂಗನವಾಡಿ ಕೊಠಡಿಯಿಂದ ಹೊರಕರೆತಂದು ರಕ್ಷಣೆ ಮಾಡಲಾಗಿದೆ. ಅಂಗನವಾಡಿಗೆ ಪ್ರತ್ಯೇಕ ಅಡುಗೆ ಕೊಠಡಿ ನಿರ್ಮಿಸಿಕೊಂಡುವಂತೆ, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದ ಗ್ರಾಮಸ್ಥರು. ಈ ಬಗ್ಗೆ ತಲೆಗೆಡಿಸಿಕೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಬ್ಬಿ ತಾಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಪಾವಗಡ: ಪಾವಗಡ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಪಟ್ಟಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ರೈನ್ ಗೇಜ್ ಬಡಾವಣೆಯಲ್ಲಿ ವಾಸವಿದ್ದ ಗೌಸ್ ಮದ್ದೀನ್ (28) ಮತ್ತು ಪಿ.ರೊಪ್ಪ ಗ್ರಾಮದ ಕುಮಾರ್ (27) ಬಂಧಿತ ಆರೋಪಿಗಳು. ಪಾವಗಡ ಪೊಲೀಸ್ ಠಾಣೆಯ ಪೇದೆಗಳಾದ ಶ್ರೀಕಾಂತ್ ನಾಯಕ್ ಮತ್ತು ಸಂತೋಷ್ ಕುಮಾರ್ ಗುಪ್ತ ಮಾಹಿತಿ ಸಂಗ್ರಹಣೆ ವಿಚಾರವಾಗಿ ಪಟ್ಟಣದಲ್ಲಿ ಗಸ್ತು ನಿರ್ವಹಿಸುತ್ತಿದ್ದು, ಪಟ್ಟಣದ ಹುಲಿ ಬೆಟ್ಟ ತಾಂಡದ ಬಳಿ ಇರುವ ಬಾಲಾಜಿ ಲೇಔಟ್ ನ ಸಮೀಪದ ಮೋರಿಯ ಬಳಿ ಆಟೋ ಒಂದು ಅನುಮಾನಸ್ಪದ ರೀತಿಯಲ್ಲಿ ನಿಲ್ಲಿಸಿದ್ದು, ಪೊಲೀಸರನ್ನು ಕಂಡ ಕೂಡಲೇ ಆರೋಪಿಯೊಬ್ಬನು ಓಡಲು ಪ್ರಯತ್ನಿಸಿದ್ದು, ಪೊಲೀಸರು ಆತನನ್ನು ಹಿಡಿದು ಆಟೋ ಬಳಿ ಕರೆ ತಂದು ಆಟೋ ಪರಿಶೀಲಿಸಿದಾಗ ಆಟೋದ ಹಿಂಬದಿ ಸೀಟಿನಲ್ಲಿ ಗಾಟು ವಾಸನೆ ಬರುತ್ತಿದ್ದ ಚೀಲ ಪತ್ತೆಯಾಗಿತ್ತು. ಅದನ್ನು ಪರಿಶೀಲಿಸಿದಾಗ ಗಾಂಜಾ ಎಂದು ತಿಳಿದುಬಂದಿದ್ದು, ತೂಕ ಮಾಡಿದಾಗ 850 ಗ್ರಾಂ ಗಾಂಜಾ ಎಂದು ತಿಳಿದು ಬಂದಿದೆ. ಗಾಂಜಾ ಸಮೇತ ಪೊಲೀಸರು ಇಬ್ಬರು…
ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಎಂಬವರು ತಮ್ಮ ಖಾಸಗಿ ಔಡಿ ಸೆಡಾನ್ ಕಾರಿಗೆ ಸೈರನ್ ಹಾಗೂ ಸರ್ಕಾರಿ ಫಲಕ ಅಳವಡಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಆರೋಪದ ಬೆನ್ನಲ್ಲೇ ಪೂಜಾ ಅವರ ನೇಮಕಾತಿ ಕುರಿತು ವ್ಯಾಪಕ ಚರ್ಚೆಯಾಗುತ್ತಿದೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯ ಸಂದರ್ಭದಲ್ಲಿ ಇತರ ಹಿಂದುಳಿದ ವರ್ಗಗಳ ಪ್ರಮಾಣ ಪತ್ರವನ್ನು ಪೂಜಾ ಸಲ್ಲಿಸಿರುವುದು ನಕಲಿ ಎಂಬ ಆರೋಪವೂ ಇದೀಗ ಕೇಳಿಬಂದಿದೆ. ಪೂಜಾ ಖೇಡ್ಕರ್ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ 841ನೇ ರ‍್ಯಾಂಕ್ ಪಡೆದಿದ್ದರು. ಪ್ರೊಬೇಷನರಿ ಹುದ್ದೆಯ ಅವಧಿಯಲ್ಲಿ ಇವರ ವಿರುದ್ಧ ಅಧಿಕಾರ ದುರ್ಬಳಕೆಯ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಪುಣೆಯಿಂದ ವಾಶೀಂ ಜಿಲ್ಲೆಗೆ ಸರ್ಕಾರ ವರ್ಗಾವಣೆ ಮಾಡಿದೆ. ನೇಮಕಾತಿ ಸಂದರ್ಭದಲ್ಲಿ ವಿನಾಯತಿ ಪಡೆಯಲು ನಕಲಿ ಒಬಿಸಿ ಪ್ರಮಾಣಪತ್ರದ ಜತೆಗೆ, ದೃಷ್ಟಿ ದೋಷ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯ ಪ್ರಮಾಣಪತ್ರವನ್ನೂ ಇವರು ಸಲ್ಲಿಸಿದ್ದರು ಎನ್ನಲಾಗಿದೆ. ಇವುಗಳ ಪರಿಶೀಲನೆಗೆ ದೆಹಲಿಯಲ್ಲಿರುವ ಏಮ್ಸ್‌ಗೆ ಹಾಜರಾಗಿ ಪರೀಕ್ಷೆಗೆ…
ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಡಿಫರೆಂಟ್ ಶೈಲಿಯ ವಿಡಿಯೋ ಮಾಡುತ್ತಿದ್ದ ನಾನು ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ ವಿಕಾಸ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಖ್ಯಾತಿ ಪಡೆದಿರುವ ವಿಕಾಸ್, ವಿಕ್ಕಿಪೀಡಿಯಾ ಅಂತಾಲೇ ಫುಲ್ ಫೇಮಸ್ ಆಗಿದ್ದಾರೆ. ಕಾಮಿಡಿ ವಿಡಿಯೋಗಳು, ಹಾಡುಗಳು ಹಾಗೂ ಸಾಮಾಜಿಕ ಕಳಕಳಿ ಇರುವಂತಹ ವಿಡಿಯೋಗಳನ್ನು ಮಾಡುವ ಇವರು ನಾನು ನಂದಿನಿ ಬೆಂಗಳೂರಿಗೆ ಬಂದಿನಿ ಎನ್ನುವ ಹಾಡಿನ ಮೂಲಕ ಸಖತ್ ವೈರಲ್ ಆಗಿದ್ದರು. ಜೊತೆಗೆ ಕರಿಮಣಿ ಮಾಲೀಕ ರಾಹುಲ್ಲಾ ಎನ್ನುವ ಇವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನಿರೀಕ್ಷೆಗೂ ಮೀರಿ ಹಿಟ್ ಆಗಿತ್ತು. ಇದೀಗ ಅದೇ ರೀತಿ ಜನರನ್ನು ನಗಿಸಲು ಹೋಗಿ ವಿಕ್ಕಿಪೀಡಿಯಾ ವಿಕಾಸ್ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಆಗಿದೆ. ಅಮಿತ್ ಜೊತೆಗೆ ವಿಕಾಸ್ ಮಾಡಿದ್ದ ಹೊಸ ವಿಡಿಯೋವನ್ನು ಎರಡು ಮೂರು ದಿನಗಳ ಹಿಂದೆ ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಖುಷಿಗಾಗಿ ಡ್ರಗ್ಸ್ ಎನ್ನುವ ವಾಕ್ಯವೊಂದನ್ನು ಬಳಸಲಾಗಿತ್ತು. ಸದ್ಯ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿದ್ದು,…
ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಕಡಿಮೆಗೊಳಿಸಿ, ತ್ವರಿತ ಓಡಾಟಕ್ಕೆ ಸಹಕಾರಿಯಾಗಿರುವ ನಮ್ಮ ಮೆಟ್ರೋ, ಇನ್ನು ಮುಂದೆ ತುಮಕೂರುವರೆಗೂ ಓಡಲಿದೆ. ಇದಕ್ಕಾಗಿ ಡಿಪಿಆರ್ ಸಿದ್ಧವಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಕುರಿತು ಬುಧವಾರ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, ತುಮಕೂರಿನ ಅಭಿವೃದ್ಧಿಗಾಗಿ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದ ಅವರು, ಅಭಿವೃದ್ಧಿಗೆ ಹಿಂಜರಿಯುವುದಿಲ್ಲ ಎಂದಿದ್ದಾರೆ. ತುಮಕೂರಿಗೆ ಬೆಂಗಳೂರು ಮೆಟ್ರೋ ತರಲು ಚಿಂತನೆ ನಡೆಸಿದ್ದು, ಈಗಾಗಲೇ ಡಿಪಿಆರ್ ಕಾರ್ಯ ಮುಗಿದಿದೆ . 1944ರಲ್ಲಿ ಸ್ಥಾಪಿತವಾದ ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಕಟ್ಟಡ ದುಸ್ಥಿತಿಯ ಬಗ್ಗೆ ಕೆ.ಎನ್. ರಾಜಣ್ಣ ಚರ್ಚಿಸಿದ್ದ ಪರಿಣಾಮ ಈ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ತುಮಕೂರಿನ ಅಭಿವೃದ್ಧಿಗೆ ಎಂದೂ ಹಿಂಜರಿಯುವುದಿಲ್ಲ. ಬಹುದಿನಗಳ ಬೇಡಿಕೆಯ ಪೊಲೀಸ್ ಕಟ್ಟಡವನ್ನು ಇಲಾಖೆಯ ಉಳಿತದ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಉಸ್ತುವಾರಿ ಹಾಗೂ ಗೃಹ…
ದಾಖಲಾತಿಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆ, ತಿದ್ದುಪಡಿ, ಹೆಸರು ಸೇರ್ಪಡೆ ಹೀಗೆ ಹಲವು ಸರ್ಕಾರಿ ಕೆಲಸಗಳು ಆನ್ ಲೈನ್ ನಲ್ಲಿ ನಡೆಯುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಹಲವರು ಮೋಸದ ಜಾಲಕ್ಕೆ ಸಿಲುಕಿಸಿ ಹಣ ದೋಚುತ್ತಾರೆ. ಇಂತಹ ಮೋಸದ ಜಾಲಕ್ಕೆ ಸಿಕ್ಕಿ ಚಂಡೀಗಢ ಮೂಲದ ಮಹಿಳೆ ಬರೋಬ್ಬರಿ 80 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮುಂಬೈನ ಸೈಬರ್ ಕ್ರೈಂ ಅಧಿಕಾರಿಗಳ ರೀತಿಯಲ್ಲಿ ಮಹಿಳೆಗೆ ಅಪರಿಚಿತರು ಫೋನ್ ಮಾಡಿದ್ದಾರೆ. ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ನಿಂದ ಅಕ್ರಮ ಹಣ ವರ್ಗಾವಣೆ ನಡೆದಿವೆ ಎಂದು ಹೆದರಿಸಿದ್ದಾರೆ. ಈವರೆಗೂ 24 ಬಾರಿ ಕಪ್ಪು ಹಣದ ವರ್ಗಾವಣೆಯಾಗಿದ್ದು, ಶೀಘ್ರದಲ್ಲಿಯೇ ನಿಮ್ಮ ಬಂಧನವಾಗಲಿದೆ ಎಂದು ಪೊಲೀಸರಂತೆಯೇ ಮಾತನಾಡಿ ಬೆದರಿಸಿದ್ದಾರೆ ಎನ್ನಲಾಗಿದೆ. ನಿಮ್ಮ ಪೂರ್ಣ ಹೆಸರು ಹಾಗೂ ದಾಖಲಾತಿಗಳ ವಿವರಗಳು ಬೇಕಾಗಿದ್ದರಿಂದ ಕರೆ ಮಾಡಲಾಗಿದೆ. ಮಾಹಿತಿ ನೀಡಿದ್ರೆ ಯಾವುದೇ ರೀತಿಯಲ್ಲಿ ಬಂಧನ ಆಗಲ್ಲ ಎಂದು ಭರವಸೆ ನೀಡಿದ್ದಾರೆ. ನಂತರ ಸೈಬರ್ ಕಳ್ಳರು ಕೇಳಿದ ಮಾಹಿತಿಯನ್ನು ಮಹಿಳೆ ಹೇಳುತ್ತಾ ಹೋಗಿದ್ದಾರೆ. ಆ ಬಳಿಕ ವಿಚಾರಣೆ…
63 ಜನರನ್ನು ಸಾಗಿಸುತ್ತಿದ್ದ ಎರಡು ಬಸ್ ಗಳು ಭೂ ಕುಸಿತ ಉಂಟಾದ ಪರಿಣಾಮ, ಉಕ್ಕಿ ಹರಿಯುತ್ತಿದ್ದ ನದಿಗೆ ಬಿದ್ದು, ಬಸ್ ನಲ್ಲಿ ಇದ್ದವರೆಲ್ಲ ಕಣ್ಮರೆಯಾಗಿರುವ ಆಘಾತಕಾರಿ ಘಟನೆಯೊಂದು ನೇಪಾಳದಲ್ಲಿ ನಡೆದಿದೆ. ನೇಪಾಳದ ಮದನ್–ಆಶ್ರಿತ್ ಹೆದ್ದಾರಿಯಲ್ಲಿ ಇಂದು ಮುಂಜಾನೆ ಈ ಭಯಾನಕ ಘಟನೆ ನಡೆದಿದೆ. ಕಠ್ಮಂಡುವಿನಿಂದ ಹೊರಟಿದ್ದ ಏಂಜೆಲ್ ಬಸ್ ಮತ್ತು ಗಣಪತಿ ಡಿಲಕ್ಸ್ ಬಸ್ ನಲ್ಲಿ 63 ಮಂದಿ ಇದ್ದರು. ಭಾರೀ ಮಳೆಯ ಕಾರಣ ಇಂದು ಮುಂಜಾನೆ 3:30 ರ ಸುಮಾರಿಗೆ ಭೂಕುಸಿತ ಉಂಟಾಗಿದೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಎರಡೂ ಬಸ್ ಗಳಲ್ಲಿ ಬಸ್ ಚಾಲಕರು ಸೇರಿ 63 ಮಂದಿ ಪ್ರಯಾಣ ಮಾಡುತ್ತಿದ್ದು, ಮುಂಜಾನೆ 3:30 ರ ಸುಮಾರಿಗೆ ಭೂಕುಸಿತ ಉಂಟಾಗಿ ಈ ಭಾರೀ ಅವಘಡ ಸಂಭವಿಸಿದೆ. ಬಸ್ ಹುಡುಕುವ ಪ್ರಯತ್ನ ನಡೆಯುತ್ತಿದೆ, ರಕ್ಷಣಾ ಕಾರ್ಯ ಮುಂದುವರಿದಿದೆ. ಆದರೆ ನಿರಂತರ ಸುರಿಯುತ್ತಿರುವ ಮಳೆಯು ಅಡ್ಡಿಪಡಿಸುತ್ತಿದೆ ಎಂದು ಹೇಳಲಾಗಿದೆ. ಪ್ರಯಾಣಿಕರನ್ನು ಹುಡುಕಲು ಮತ್ತು ಕೂಡಲೇ ರಕ್ಷಿಸಲು ಗೃಹ ಆಡಳಿತ ಸೇರಿ ಸರಕಾರದ ಎಲ್ಲಾ…