Subscribe to Updates
Get the latest creative news from FooBar about art, design and business.
- ಬೆಳೆ ನಷ್ಟ ತಪ್ಪಿಸಲು ಫಸಲ್ ಬಿಮಾ ತಪ್ಪದೇ ನೋಂದಾಯಿಸಿ: ರೈತರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ
- ತುಮಕೂರು: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
- ಹಡಪದ ಅಪ್ಪಣ್ಣರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪ: ತಹಶೀಲ್ದಾರ್ ಮೋಹನಕುಮಾರಿ
- ಸಂತಪೂರ ಗ್ರಾಮ ಪಂಚಾಯತಿಯಲ್ಲಿ ‘ನನ್ನ ಸ್ವತ್ತು ನನ್ನ ಹಕ್ಕು’ ಅಭಿಯಾನಕ್ಕೆ ಚಾಲನೆ
- ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಸಂಕಲ್ಪ: ಕೊರಟಗೆರೆಯಲ್ಲಿ ಪೊಲೀಸ್ ಇಲಾಖೆಯಿಂದ ಬೃಹತ್ ಜಾಗೃತಿ ಅಭಿಯಾನ
- ಕುಣಿಗಲ್: ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಜಮಾ–ಖರ್ಚು ವಿವರ ಘೋಷಣೆ
- ಬೀದರ್ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಭಾಲ್ಕಿ ವಕೀಲರ ಸಂಘ ಆಗ್ರಹ
- ಬಡವರಿಗೆ ಮಾಡುವ ಸಹಾಯ ದೇವರಿಗೆ ಸಾಲ ಕೊಟ್ಟಂತೆ: ಇಮ್ಯಾನುವೆಲ್ ದರ್ಬಾರೆ
Author: admin
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇನ್ನೂ ಇಷ್ಟು ದಿನ ದರ್ಶನ್ ಜೈಲಿನಲ್ಲಿ ಯಾರ ಬಳಿಯೂ ಮಾತನಾಡದೇ ಮೌನವಾಗಿದ್ದರು. ಇದೀಗ ಅವರಿಗೆ ಜೈಲಿನಲ್ಲಿ ಹೊಸ ಸ್ನೇಹಿತರೊಬ್ಬರು ಸಿಕ್ಕಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದರೆ ಆ ಸ್ನೇಹಿತ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ. ಕೊಲೆ ಪ್ರಕರಣದಲ್ಲಿ ಜೈಲುಪಾಲಾದ ಬಳಿಕ ನಟ ದರ್ಶನ್ ಅಲ್ಲಿನ ಯಾರೊಬ್ಬರ ಬಳಿಯೂ ಮಾತನಾಡದೇ ಸುಮ್ಮನೇ ಕುಳಿತುಕೊಳ್ಳುತ್ತಿದ್ದರಂತೆ. ಆದರೆ ಇದೀಗ ಆಶ್ಚವೆಂಬಂತೆ ಅವರಿಗೆ ಹೊಸ ಸ್ನೇಹಿತನ ಪರಿಚಯವಾಗುತ್ತಿದ್ದಂತೆ ಅವರು ಬದಲಾಗಿದ್ದಾರಂತೆ ಎಂಬ ಮಾಹಿತಿ ತಿಳಿದುಬಂದಿದೆ. ಆ ಸ್ನೇಹಿತ ಬೇರೆ ಯಾರು ಅಲ್ಲ. ಅದು ಕಥೆ & ಕಾದಂಬರಿಯ ಪುಸ್ತಕಗಳೇ ಆಗಿವೆಯಂತೆ. ನಟ ದರ್ಶನ್ ಜೈಲಿನಲ್ಲಿ ಹೆಚ್ಚು ಸಮಯವನ್ನು ಬುಕ್‌ಗಳ ಜೊತೆ ಕಳೆಯುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಪ್ರತಿ ದಿನ ದರ್ಶನ್ ಅವರು ಗ್ರಂಥಾಲಯದಿಂದ ಬೇರೆ, ಬೇರೆ ಬುಕ್ ಪಡೆಯುತ್ತಿದ್ದಾರಂತೆ. ಕನ್ನಡದ ಹಳೆ ಕಥೆ ಮತ್ತು ಕಾದಂಬರಿಗಳ ಕಡೆ ಕಣ್ಣಾಡಿಸುತ್ತಿದ್ದಾರಂತೆ. ಈ ಪುಸ್ತಕ…
ತಿಪಟೂರು: ಜನಪದ ಹೆಜ್ಜೆಸಂಸ್ಥೆ ಹಾಗೂ ಸತ್ಯ ಗಣಪತಿ ಸೇವಾ ಟ್ರಸ್ಟ್ ಮತ್ತು ಇತರೆ ಹಲವು ಸಂಘ ಸಂಸ್ಥೆಗಳು ಸಾರ್ವಜನಿಕರ ಸಹಕಾರದೊಂದಿಗೆ ಎರಡನೇ ಬಾರಿ ಜುಲೈ 13ರ ಶನಿವಾರ ಹಾಗೂ 14ರ ಭಾನುವಾರ ಶ್ರೀ ಸತ್ಯ ಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಹಲಸಿನ ಹಬ್ಬ ಆಚರಣೆ ಮಾಡಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ಸಿರಿಗಂಧ ಗುರು ತಿಳಿಸಿದರು . ಬೆಳಿಗ್ಗೆ 9 ಯಿಂದ ರಾತ್ರಿ 9ವರೆಗೆ ಎರಡು ದಿನಗಳ ಕಾಲ ಹಲಸಿನ ಹಬ್ಬದ ಪ್ರಯುಕ್ತ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಹಲಸಿನ ಅಡುಗೆ ಸ್ಪರ್ಧೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಇತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಕಲ್ಪತರು ನಾಡಿನಲ್ಲಿ ತೆಂಗಿನ ಪರ್ಯಾಯ ಬೆಳೆಯಾಗಿ ಹಲಸಿನ ಬೆಳೆ ಬೆಳೆಯುತ್ತಿದ್ದು, ಒಂದು ಮಾರುಕಟ್ಟೆಯ ಸೃಷ್ಟಿಯಾಗಿದೆ ಎಂದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೆರಗೋಡಿರಂಗಾಪುರ ಸುಕ್ಷೇತ್ರದ ಶ್ರೀ ಗುರು ಪರದೇಶಿ ಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಲಿದ್ದು, ಶಾಸಕ ಕೆ.ಷಡಕ್ಷರಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪ ವಿಭಾಗ ಅಧಿಕಾರಿ…
ಪಾವಗಡ: ತಾಲೂಕಿನ ಹಲವು ವರ್ಷಗಳ ಕನಸು ತುಂಗಾ ಭದ್ರಾ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಪಂಚಾಯಿತಿ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಪರಿಶೀಲನೆ ನಡೆಸಿದರು. ಬೆಳ್ಳಿಬಟ್ಟಲು ಮತ್ತು ಕಾರನಾಗನಹಟ್ಟಿ ಮಧ್ಯದಲ್ಲಿ ನಿರ್ಮಾಣವಾಗಿರುವ ಸುಮಾರು 13 ಲಕ್ಷ ಲೀಟರ್ ಸಾಮರ್ಥ್ಯದ ತುಂಗಭದ್ರಾ ಕುಡಿಯುವ ನೀರಿನ ಟ್ಯಾಂಕ್ ಬಳಿಗೆ ತೆರಳಿದ ಪ್ರಿಯಾಂಕ್ ಖರ್ಗೆ ಕಾಮಗಾರಿ ಪರಿಶೀಲನೆ ನಡೆಸಿದರು. ತುಂಗಾ ಭದ್ರೆಯಿಂದ ನೀರು ಸರಬರಾಜು ಮಾಡಲು ಪೈಪ್ ಲೈನ್ ಮಾಡಿರುವುದನ್ನು ನಕ್ಷೆಯ ಮೂಲಕ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು, ಶಾಸಕರಾದ ಹೆಚ್.ವಿ.ವೆಂಕಟೇಶ್ ಹಾಜರಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಸರಗೂರು: ತಾಲ್ಲೂಕಿನ ಹೆಗ್ಗನೂರು ಗ್ರಾಪಂ ವ್ಯಾಪ್ತಿಯ ದೇವಲಾಪುರ ಗ್ರಾಮದಲ್ಲಿ ಮಂಗಳವಾರ ದಂದು ರಾತ್ರಿ ದಾಳಿ ನಡೆಸಿರುವ ಕಾಡಾನೆಗಳು ರೈತರ ಬಾಳೆ ತೋಟವನ್ನು ತುಳಿದು ನಾಶ ಮಾಡಿವೆ. ದೇವಲಾಪುರ ಗ್ರಾಮದ ರವಿಶ್ ಅವರ ಎರಡು ಎಕರೆ ಬಾಳೆ ತೋಟಗಳಲ್ಲಿ ನಾಲ್ಕು ಕಾಡಾನೆಗಳು ಸಂಚರಿಸಿ ಬಾಳೆಗಿಡಗಳನ್ನು ತಿಂದು ನಾಶ ಮಾಡಿವೆ. ತೋಟಗಳಲ್ಲಿಯೇ ಲದ್ದಿ ಹಾಕಿ ಹೋಗಿವೆ. ಕಳೆದ ಕೆಲವು ದಿನಗಳ ಹಿಂದೆಯೂ ಈಭಾಗದಲ್ಲಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಮತ್ತೆ ಕಾಡಾನೆ ದಾಳಿ ಗ್ರಾಮದಲ್ಲಿ ಮುಂದುವರೆದಿದ್ದು ಗ್ರಾಮಸ್ಥರು ಬೆಳೆ ಕಳೆದುಕೊಂಡು ಅನುಭವಿಸುವಂತಾಗಿದೆ . ಇನ್ನು 15 ದಿನದಲ್ಲಿ ಕಟಾವಿಗೆ ಬಂದಿದ್ದ 1,500 ಬಾಳೆ ಗಿಡಗಳನ್ನು ಕಾಡಾನೆಗಳು ನಾಶ ಮಾಡಿವೆ. ಘಟನೆಯಿಂದ ಸುಮಾರು ₹5 ಲಕ್ಷದಷ್ಟು ನಷ್ಟವಾಗಿದೆ ಎಂದು ರೈತ ರವಿಶ್ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಐದಾರು ಆನೆಗಳ ಹಿಂಡಿದ್ದು ಎರಡು ಆನೆ ಮಾತ್ರ ತೋಟಕ್ಕೆ ನುಗ್ಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದರು ಗ್ರಾಮೀಣ ಭಾಗದ ದೇವಲಾಪುರ…
ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬ. ಪ್ರತಿಬಾರಿಯೂ ಅಭಿಮಾನಿಗಳು ಹಬ್ಬದಂತೆ ಶಿವಣ್ಣನ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಶಿವರಾಜ್ ಕುಮಾರ್ ಹುಟ್ಟುವೆಂದರೆ ಅಭಿಮಾನಿಗಳಿಗೆ ಹಬ್ಬ. ಬಹುತೇಕ ಪ್ರತಿವರ್ಷವೂ ಅಭಿಮಾನಿಗಳು ಶಿವರಾಜ್ ಕುಮಾರ್ ನಿವಾಸದ ಮುಂದೆ ನೆರೆದು ಅವರೊಟ್ಟಿಗೆ ಕೇಕ್ ಕತ್ತರಿಸಿ, ಹಾರ ಹಾಕಿ, ಘೋಷಣೆಗಳನ್ನು ಕೂಗಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಣೆ ಮಾಡುತ್ತಾರೆ. ಈ ಬಾರಿಯೂ ಸಹ ಅದೇ ಯೋಜನೆಯಲ್ಲಿ ಅಭಿಮಾನಿಗಳಿದ್ದರು. ಆದರೆ ಈ ಬಾರಿ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಶಿವರಾಜ್ ಕುಮಾರ್ ನಿರ್ಣಯವೊಂದನ್ನು ಮಾಡಿದ್ದು, ತಾವು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಟ್ಟಿಗೆ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ. ಅದಕ್ಕಾಗಿ ಕ್ಷಮೆಯನ್ನೂ ಸಹ ಕೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಶಿವರಾಜ್ ಕುಮಾರ್, ‘ಅಭಿಮಾನಿ ದೇವರುಗಳಿಗೆ, ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡೋ ಹಸ್ತಲಾಘವ, ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರೋದಕ್ಕೆ ಆಗುವುದಿಲ್ಲ, ಆದರೆ ವರ್ಷವಿಡೀ…
ತುಮಕೂರಿನ ದೊಡ್ಡನಾರವಂಗಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಡುವ 23 ಗ್ರಾಮದ ಜನರು ಕುಡಿಯುವ ನೀರಿಗಾಗಿ ಆಶ್ರಯಿಸಿರುವ ದೊಡ್ಡನಾರವಂಗಲ ಕೆರೆ ನೀರು ಕಲುಷಿತಗೊಂಡಿದ್ದರ ಬಗ್ಗೆ ‘ಎಕ್ಸ್’ ಬಳಕೆದಾರರೊಬ್ಬರು ನೀಡಿದ ದೂರಿನನ್ವಯ ಮುಖ್ಯಮಂತ್ರಿಗಳ ಕಚೇರಿಯ ಸಾರ್ವಜನಿಕ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಶೀಲಿಸುವಂತೆ ಸೂಚನೆ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ದೊಡ್ಡನಾರವಂಗಲ ಕೆರೆಯ ಜಾಕ್ ವೆಲ್ ಬಳಿ ಅಳವಡಿಸಿರುವ ಪಂಪು ಮೋಟಾರ್ ನ ಬಳಿ ತುಂಬಿಕೊಂಡಿದ್ದ ಕಸ — ಕಡ್ಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದಾರೆ. ಎಲ್ಲಾ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ದರ್ಶನ್ ಅವರು ಕೊಲೆ ಆರೋಪದಲ್ಲಿ ಆರೆಸ್ಟ್ ಆಗಿದ್ದು ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿತು. ಈ ಘಟನೆ ಬಗ್ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಆದರೆ ಆರಂಭದಲ್ಲಿ ಈ ಕುರಿತು ಮಾತನಾಡಲು ಕೆಲವರು ಹಿಂದೇಟು ಹಾಕಿದ್ದರು. ನಟ ಡಾಲಿ ಧನಂಜಯ್ ಕೂಡ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಲು ಸಿದ್ಧರಿರಲಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅವರನ್ನು ಟ್ರೋಲ್ ಮಾಡಿದ್ದರು. ಈಗ ಡಾಲಿ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ ಬಗ್ಗೆ ಮೌನ ಮುರಿದಿದ್ದಾರೆ. ಇಷ್ಟು ದಿನ ತಾವು ಯಾಕೆ ಮಾತನಾಡಲಿಲ್ಲ ಎಂಬುದನ್ನು ಅವರು ವಿವರಿಸಿದ್ದಾರೆ. ‘ನಮಗೆ ತುಂಬ ಹತ್ತಿರದಲ್ಲಿ ಇದ್ದವರು ಈ ಕೇಸ್ನಲ್ಲಿ ಇದ್ದಾರೆ ಎಂದಾಗ ತುಂಬ ಬೇಸರ ಆಗುತ್ತದೆ. ಹಾಗೆಯೇ, ಅಲ್ಲೊಂದು ಜೀವ ಹೋಗಿದೆ ಅಂದಾಗ ಕಾನೂನಿ ಪ್ರಕಾರ ಆಗಬೇಕಾದ್ದು ಖಂಡಿತವಾಗಿ ಆಗುತ್ತದೆ. ಘಟನೆಯನ್ನು ನಾವು ಯಾರೂ ನೋಡಿಲ್ಲ. ಎಲ್ಲವೂ ಕೇಳಿರುವ ಮಾಹಿತಿ ಅಷ್ಟೇ. ತಪ್ಪು ಮಾಡಿದವರಿಗೆ ಖಂಡಿತಾ ಶಿಕ್ಷೆ ಆಗಲಿ’ ಎಂದು ನಟ ಡಾಲಿ ಧನಂಜಯ ಅವರು ಹೇಳಿದ್ದಾರೆ. ‘ನಮ್ಮ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು.…
ಇಂದು(ಗುರುವಾರ) ಬೆಳ್ಳಂ ಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಶಾಕ್ ಕೊಟ್ಟಿದ್ದಾರೆ. ಹೌದು, ರಾಜ್ಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. 9 ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. 11 ಪ್ರಕರಣಗಳಲ್ಲಿ 9 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ ಲೋಕಾಯುಕ್ತ ಅಧಿಕಾರಿಗಳು. 100 ಅಧಿಕಾರಿಗಳ ತಂಡ ರಾಜ್ಯದ 56 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಕಲಬುರಗಿ, ಧಾರವಾಡ, ಚಿತ್ರದುರ್ಗ, ಬೆಳಗಾವಿ, ಮಂಡ್ಯ, ದಾವಣಗೆರೆ, ಕೋಲಾರ, ಮೈಸೂರು, ಹಾಸನ ಹಾಗೂ ಚಿತ್ರದುರ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಸಂಪದಾನೆ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಇಇ ಶಿವರಾಜು. ಎಸ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಡ್ಯ ಹಾಗೂ ಮೈಸೂರಿನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ನಾಗಮಂಗಲದ ಇಜ್ಜಲಘಟ್ಟದಲ್ಲಿ ಮೂರು ಹಾಗೂ ಮೈಸೂರಿನಲ್ಲಿ ಎರಡು ಕಡೆ ದಾಳಿ ಮಾಡಲಾಗಿದೆ. ಇಜ್ಜಲಘಟ್ಟದಲ್ಲಿ ಫಾರ್ಮ್ ಹೌಸ್, ತಂದೆ ಮನೆ, ಕ್ರಷರ್ ಮೇಲೆ ದಾಳಿ ಮಾಡಲಾಗಿದೆ. ಮೈಸೂರಿನಲ್ಲಿ ಶಿವರಾಜು ಹಾಗೂ ಅಳಿಯನ ಮನೆ…
ಎಲ್ಲರಿಗೂ ಟರ್ಮ್ ಡೆಪಾಸಿಟ್ ಬಗ್ಗೆ ತಿಳಿದಿರುತ್ತದೆ. ಆದರೆ ನಿಮಗೆ ಗ್ರೀನ್ ಟರ್ಮ್ ಡೆಪಾಸಿಟ್ ಅಥವಾ ಗ್ರೀನ್ ಎಫ್ ಡಿ ಬಗ್ಗೆ ಗೊತ್ತಿದೆಯೇ? ಹಾಗೆಂದರೆ ಏನು? ರೆಗ್ಯುಲರ್ ಎಫ್ ಡಿ ಗೂ ಇದಕ್ಕೂ ಏನು ವ್ಯತ್ಯಾಸ? ಗ್ರೀನ್ ಮತ್ತು ನಾರ್ಮಲ್ ಎಫ್ ಡಿ ಗೂ ಬಡ್ಡಿ ದರದಲ್ಲಿ ವ್ಯತ್ಯಾಸ ಇದೆಯೇ? ಇದನ್ನು ಸಹ ನಾವು ತಿಳಿದುಕೊಳ್ಳಬೇಕು. ಗ್ರೀನ್ ಎಫ್ ಡಿಯನ್ನು ಪರಿಸರ ಸ್ನೇಹಿ ಫಿಕ್ಸೆಡ್ ಡೆಪಾಸಿಟ್ ಎಂದೂ ಕರೆಯಲಾಗುತ್ತದೆ. ಇದರಿಂದ ಸಂಗ್ರಹವಾದ ಹಣವನ್ನು ಪರಿಸರಕ್ಕೆ ಅನುಕೂಲಕರವಾದ ಪ್ರಾಜೆ ಕ್ಟ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಉದಾಹರಣೆಗೆ ಸೋಲಾರ್ ಪವರ್, ವಿಂಡ್ ಫಾರ್ಮ್, ತ್ಯಾಜ್ಯ ನಿರ್ವಹಣೆ ಮತ್ತು ಇಂಧನ ರಕ್ಷಾ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಒಂದು ಸಾಮಾನ್ಯ ಬ್ಯಾಂಕ್ ಎಫ್‌ಡಿ ರೀತಿಯಲ್ಲೇ, ಗ್ರಾಹಕರು ಗ್ರೀನ್ ಫಿಕ್ಸೆಡ್ ಡೆಪಾಸಿಟ್ ನಲ್ಲೂ ಕೂಡ ಫಿಕ್ಸೆಡ್ ಟೈಮಿಗೆ ಹೂಡಿಕೆ ಮಾಡಬಹುದು. ಆದರೆ ಇದರಲ್ಲಿರುವ ವ್ಯತ್ಯಾಸ ಏನೆಂದರೆ ಫಂಡ್ ಅಲೊಕೇಶನ್. ಗ್ರೀನ್ ಎಫ್ ಡಿ ಯಲ್ಲಿ ಸಂಗ್ರಹವಾದ ಹಣವನ್ನು ಎಕೋ…
ವಿಶ್ವ ಜನಸಂಖ್ಯಾ ದಿನವನ್ನು ಪ್ರತಿವರ್ಷ ಜುಲೈ 11 ರಂದು ಆಚರಿಸಲಾಗುತ್ತದೆ. 1989ರಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಪ್ರಾರಂಭಿಸಲು ವಿಶ್ವಬ್ಯಾಂಕಿನ ಉದ್ಘೋಷವನ್ನು ಅನುಸರಿಸಿ, ಜನಸಂಖ್ಯೆ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ವಿಶೇಷವಾಗಿ ನಿಶ್ಚಯಿಸಲಾಗಿದೆ. ಜಾಗತಿಕ ಸಮಸ್ಯೆಗಳು: ಜನಸಂಖ್ಯೆಯ ಹೆಚ್ಚಳವು ಪ್ರಮುಖ ಜಾಗತಿಕ ಸಮಸ್ಯೆಗಳತ್ತ ದಾರಿತೋರುತ್ತದೆ. ಸಂಪತ್ತಿನ ಸಮಾನ ಹಂಚಿಕೆ, ಶೇಖರಣಾ ಸಾಮರ್ಥ್ಯದ ಕೊರತೆ, ಪರಿಸರ ಹಾನಿ, ವಸತಿ ಸಮಸ್ಯೆ, ಆರೋಗ್ಯ ಸೇವೆಗಳ ಅಭಾವ, ಆಹಾರ ಅಸುರಕ್ಷತೆ ಇತ್ಯಾದಿ ಸಮಸ್ಯೆಗಳು ಜನಸಂಖ್ಯೆಯ ಅತಿರೇಕದಿಂದ ಉಂಟಾಗುತ್ತವೆ. ಪರಿಸರ ಹಾನಿ: ಅಧಿಕ ಜನಸಂಖ್ಯೆಯ ಪರಿಣಾಮವಾಗಿ ನೈಸರ್ಗಿಕ ಸಂಪತ್ತಿನ ಶೋಷಣೆ ಹೆಚ್ಚು ಆಗುತ್ತದೆ. ಇದರಿಂದ ವನಕ್ಷಯ, ಭೂಮಳಿನ ಸಮಸ್ಯೆ, ಜಲ ವಾಯು ಮಾಲಿನ್ಯವು ಉಂಟಾಗುತ್ತದೆ. ಆರ್ಥಿಕ ಸಮಸ್ಯೆಗಳು: ಜನಸಂಖ್ಯೆ ಹೆಚ್ಚಳವು ಬಡತನ, ನಿರುದ್ಯೋಗ, ಮೂಲಸೌಲಭ್ಯಗಳ ಕೊರತೆ ಮುಂತಾದ ಸಮಸ್ಯೆಗಳನ್ನು ತೀವ್ರಗೊಳಿಸುತ್ತದೆ. ಪರಿಣಾಮವಾಗಿ ಜನರಿಗೆ ಜೀವನಮಟ್ಟ ಸುಧಾರಣೆಯಾಗುವುದು ಕಷ್ಟವಾಗುತ್ತದೆ. ಆಹಾರ ಮತ್ತು ನೀರು ಕೊರತೆ: ಜಗತ್ತಿನ ಕೆಲವು ಭಾಗಗಳಲ್ಲಿ ಜನಸಂಖ್ಯೆಯ ಹೆಚ್ಚಳದಿಂದ ಆಹಾರ ಮತ್ತು ನೀರು…